ಮೈಸೂರು ದಸರಾ
ಮೈಸೂರು ದಸರಾ
ಮೈಸೂರು ದಸರಾ
ಅಂದು ಶಾಲೆಯಿಂದ ಬಂದ ಸುಜಿತ್, ತನ್ನ ಬ್ಯಾಗ್ ಅನ್ನು ಸೋಫ಼ಾದ ಮೇಲೆ ಎಸೆದು ಖುಷಿಯಿಂದ ಕುಣಿದಾಡುತ್ತಾ,
"ಮಮ್ಮಿ, ನಮಗೆ ನಾಳೆಯಿಂದ ಹತ್ತು ದಿನಗಳ ದಸರಾ ರಜ. ನೊ ಹೋಮ್ ವರ್ಕ್, ನೊ ಅಸೈನ್ ಮೆಂಟ್, ನಮ್ಮ ಟಿಚರ್ ಹೇಳಿದರು, ಈ ದಸರಾ ಹತ್ತು ದಿನಗಳ ಹಬ್ಬ, ಇದನ್ನು ಮೈಸೂರಿನಲ್ಲಿ ತುಂಬಾ ಗ್ರಾಂಡ್ ಆಗಿ ಆಚರಿಸುತ್ತಾರಂತೆ. ಅಲ್ಲಿ ದಸರಾ ಪ್ರೊಸೆಷನ್ ತುಂಬಾ ಚೆನ್ನಾಗಿರುತ್ತದಂತೆ, ಈ ಸಲ ನಾವೂ ಮೈಸೂರಿಗೆ ಹೋಗಿ ದಸರಾ ಮೆರವಣಿಗೆಯನ್ನು ನೋಡಿಕೊಂಡು, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಬೃಂದಾವನ್ ಗಾರ್ಡನ್ ಎಲ್ಲವನ್ನೂ ನೋಡಿಕೊಂಡು ಬರೋಣ .ಪ್ಲೀಸ್ ನೀನು ಡ್ಯಾಡಿಗೆ ಹೇಳಿ ನನ್ನನ್ನು ಮೈಸೂರಿಗೆ ಕರೆದುಕೊಂಡು ಹೋಗಮ್ಮ, ಅಲ್ಲಿ ಹೇಗಿದ್ದರೂ ನಮ್ಮ ಮಾಲಿನಿ ಚಿಕ್ಕಮ್ಮನ ಮನೆ ಇದೆಯಲ್ಲವಾ? "
ಒಂದೇ ಉಸಿರಿಗೆ ಹೇಳಿ, ಅವಳ ಕುತ್ತಿಗೆಗೆ ಜೋತು ಬಿದ್ದಾಗ, ಶಾಲಿನಿ ಗೆ ಮಗನ ಈ ಉತ್ಸಾಹವನ್ನು ಕಂಡು ಅವಳಿಗೂ ಮೈಸೂರಿಗೆ ದಸರಾ ನೋಡಲು ಹೋಗಬೇಕೆನಿಸಿತು. ಆದರೆ ಗಂಡನನ್ನು ಕೇಳದೇ, ಈ ಮಗುವಿಗೆ ಸುಳ್ಳು ಭರವಸೆಯನ್ನು ಕೊಡುವುದಕ್ಕೆ ಅಗುವುದಿಲ್ಲವೆಂದು ಅವಳಿಗೆ ಗೊತ್ತಿತ್ತು. ಅವಳು ಮಗನನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾ,
" ಸುಜಿತ್, ನಿನ್ನ ಟಿಚರ್ ಹೇಳಿರುವುದೆಲ್ಲಾ ನಿಜ. ಮೈಸೂರಿನಲ್ಲಿ ಯದುವಂಶದ ರಾಜರ ಅರಮನೆ ಇದೆ, ಅಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆಶ್ವಯುಜ ಶುದ್ಧ ಪಾಡ್ಯದಿಂದ ಆರಂಭವಾಗುವ ಈ ದಸರಾ ಹಬ್ಬ ವಿಜಯದಶಮಿಯಂದು ಬನ್ನಿ ಮರಕ್ಕೆ ಪೂಜೆ ಮುಗಿಸುವವರೆಗೂ ಹತ್ತು ದಿನಗಳ ಕಾಲ ನೆರವೇರುತ್ತದೆ. ಈ ದಸರಾ ಅನ್ನುವುದು ಒಂದು ನಾಡಹಬ್ಬವೂ ಆಗಿದೆ. ಹಿಂದೂಗಳಿಗೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ,ಹಾಗೂ ದೇಶಿಕವಾಗಿ ಇದು ಅತ್ಯಂತ ಪ್ರಮುಖವಾದ ಹಬ್ಬ. ಮನೆಮನೆಯಲ್ಲೂ ಗೊಂಬೆಗಳನ್ನು ಕೂರಿಸಿ, ಪ್ರತಿನಿತ್ಯ ಅವುಗಳಿಗೆ ಆರತಿ ಬೆಳಗಿ, ಮನೆಗೆ ಬಂದ ಚಿಕ್ಕ ಮಕ್ಕಳಿಗೆ ದಿನಕ್ಕೊಂದುಸಿಹಿ ತಿಂಡಿಗಳನ್ನು ಹಂಚುವ ಪದ್ಧತಿ ಇದೆ. "
"ಮಮ್ಮಿ, ನಾನು ಒಂದು ಬಾರಿ ಮೈಸೂರಿಗೆ ಮಾಲಿನಿ ಚಿಕ್ಕಮ್ಮನ ಮನೆಗೆ ಹೋಗಿದ್ದಾಗ, ಅಲ್ಲಿ ಬೊಂಬೆಗಳನ್ನು ಕೂರಿಸಿ, ಅಕ್ಕ ಪಕ್ಕದ ಮನೆಯ ಪುಟ್ಟ ಪುಟ್ಟ ಮಕ್ಕಳನ್ನು ಕರೆದು ಎಲ್ಲರಿಗೂ ಚಿನ್ನುವಿನ ಕೈಯ್ಯಲ್ಲಿ ದಿನಕ್ಕೊಂದು ತಿಂಡಿಗಳನ್ನು ಕೊಡಿಸುತ್ತಿದ್ದರು. ಬಹಳ ಮಜ ಇರುತ್ತಿತ್ತು ಅಮ್ಮ, ನಾವು ಈ ಬಾರಿ ಹೋಗಿ ಬರೋಣ "
"ಆಯಿತಪ್ಪ, ನಿಮ್ಮ ಅಪ್ಪ ಬಂದ ನಂತರ ನಾನು ಅವರನ್ನು ಕೇಳುತ್ತೇನೆ. ಆದರೆ ಎಷ್ಟು ದಿವಸಗಳು ಸಾಧ್ಯವಗುತ್ತದೋ ಅಷ್ಟು ದಿವಸ ಮಾತ್ರ ಹೋಗಿ ಬರೋಣ. ಇಲ್ಲಿ ಮನೆಯಲ್ಲಿ ನನಗೂ ದೇವಿ ಪೂಜೆ ಇರುತ್ತದೆ. "
ಅಂದು ಗಂಡ ಮನೆಗೆ ಬಂದು ಕೂಡಲೇ ಸುಜಿತ್ ನ ದಸರಾ ನೋಡುವ ಆಸೆಯನ್ನು ತಿಳಿಸಿದಳು ಶಾಲಿನಿ. ಅಷ್ಟು ದಿವಸಗಳು ಆಫೀಸ್ ನಲ್ಲಿ ರಜಾ ಸಿಗದೇ ಇರುವುದರಿಂದ, ತಾನು ಹೊರಡಲು ಸಾಧ್ಯವಾಗುವುದಿಲ್ಲ ಎಂದು ಗಂಡ ಹೇಳಿದಾಗ,, ಕಡೆಗೆ ಶಾಲಿನಿ ಮಗನನ್ನು ಕರೆದು ಕೊಂಡು ಮೈಸೂರಿನಲ್ಲಿ ಇರುವ ತನ್ನ ತಂಗಿ ಮಾಲಿನಿಯ ಮನೆಗೆ ದಸರಾ ನೋಡಲು ಹೊರಟೇ ಬಿಟ್ಟಳು.
ದಸರಾ ಹಬ್ಬದ ಮೊದಲನೇ ದಿನ ಆಶ್ವಯುಜ ಶುದ್ಧ ಪ್ರತಿಪತ್ ನಿಂದ ಅರಮನೆಯಲ್ಲಿ ದಸರಾ ವಿಶೇಷ ನವದುರ್ಪೂಗೆಯರ ಪೂಜೆ ಗಳು ಶುರುವಾಗಿ ವಿಜಯದಶಮಿ ಯಂದು ದೇವಿ ಚಾಮುಂಡೇಶ್ವರಿ ಯ ವೈಭವದ ಮೆರವಣಿಗೆಯಲ್ಲಿ ಮುಕ್ತಾಯ ಗೊಳ್ಳುವ ಹತ್ತು ದಿನಗಳ ಈ ನಾಡಹಬ್ಬವನ್ನು ಕಣ್ಣು ತುಂಬಿ ಕೊಳ್ಳಲು ದೇಶವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಬರುತ್ತಾರೆ ಎಂದು ಪುಸ್ತಕದಲ್ಲಿ ಓದಿದ್ದ ಸುಜಿತ್ ಈ ಬಾರಿ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡು, ಎಲ್ಲಾ ವಿಶೇಷ ಉತ್ಸವಗಳನ್ನು ನೋಡಿದನು.
ಪ್ರತಿದಿನವೂ ಅರಮನೆಯಲ್ಲಿ ಬೆಳಗುವ ಜಗಮಗ ವಿದ್ಯುದ್ದೀಪಗಳ ದೀಪಾಲಂಕಾರವನ್ನು ನೋಡಿ ಖುಷಿ ಪಟ್ಟನು. ಕಡೆಯ ದಿನ ವಿಜಯದಶಮಿಯ ಮೆರವಣಿಗೆ ಯನ್ನು ಹತ್ತಿರದಿಂದ ನೋಡಲು ಸುಜಿತ್ ನ ಚಿಕ್ಕಪ್ಪ ಪಾಸ್ ಪಡೆದುಕೊಂಡು, ಎಲ್ಲರನ್ನೂ ಬನ್ನಿ ಮಂಟಪಕ್ಕೆ ಕರೆದುಕೊಂಡು ಹೋದರು.
ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಯಾರಿಸಿದ ತಮ್ಮ ಜಿಲ್ಲೆಯ ವಿಶೇಷ ಸ್ಥಬ್ದ ಚಿತ್ರಗಳನ್ನು ಮೆರವಣಿಗೆಯ ಮುಂದೆ ಮುಂದೆ ನಿಲ್ಲಿಸಿರುತ್ತಾರೆ. ಅವುಗಳನ್ನು ನೋಡುವುದೇ ಒಂದು ರೀತಿಯಲ್ಲಿ ಖುಷಿ.
ಸುಜಿತ್ ತನ್ನ ಚಿಕ್ಕಮ್ಮನ ಮಗ ಸೂರಜ್ ಜೊತೆ
ಬನ್ನಿ ಮಂಟಪಕ್ಕೆ ಹೋಗಿ ಅಲ್ಲಿ ನಡೆಯುವ ಚಾರ್ಟ್ ಲೈಟ್ ಪಿರಿಯಡ್ ಅನ್ನು ನೋಡಿ ಖುಷಿ ಪಟ್ಟ.
ಇಡೀ ಭಾರತದಾದ್ಹಯಂತ ಆಚರಿಸುವ ಈ ದಸರಾ ಹಬ್ಬದ ಆಚರಣೆ ಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವವನ್ನು ತನ್ನ ಚಿಕ್ಕಪ್ಪನಿಂದ ಕೇಳಿ ತಿಳಿದುಕೊಂಡ ಸುಜಿತ್,ಈ ಹಬ್ಬ ಭಾರತೀಯರಿಗೆ ಅತ್ಯಂತ ಮಹತ್ವದ ಹಬ್ಬ ಎಂಬುದು ಅವನಿಗೆ ತಿಳಿಯಿತು.
ಅವನ ಚಿಕ್ಕಮ್ಮನ ಮನೆಯಲ್ಲಿ ಗೊಂಬೆಗಳನ್ನು ಕೂರಿಸಿದ್ದರು. ಅದನ್ನು ನೋಡಿ ಖುಷಿ ಪಟ್ಟ.
ಮಕ್ಕಳಿಗೆ ಪ್ರತಿದಿನ ಬೊಂಬೆ ಬಾಗಿನ ಎಂಬ
ಹೆಸರಿನಲ್ಲಿ ಕೊಡುವ ವಿಧವಿಧ ಖಾದ್ಯ ಗಳು ರುಚಿ ನೋಡಿದ.
ಒಟ್ಟಿನಲ್ಲಿ ಸುಜಿತ್ ದಸರಾ ಹಬ್ಬದ ಹತ್ತು ದಿನಗಳೂ ಸಹ ತಮ್ಮ ಚಿಕ್ಕಮ್ಮನ ಮನೆಯಲ್ಲಿದ್ದು, ಮೈಸೂರು ದಸರಾದ ವೈಭವವನ್ನು ನೋಡಿ ಕುಣಿದು ಕುಪ್ಪಳಿಸಿದ. ಮಗನ ಸಂತೋಷವನ್ನು ಕಂಡು ಶಾಲಿನಿಗೂ ಅಷ್ಟೇ ಸಂತೋಷವಾಯಿತು.
ಸಡಗರ ಸಂಭ್ರಮಗಳ ಅದ್ಧೂರಿಯಿಂದ ಆಚರಿಸುವ ಮೈಸೂರು ದಸರಾ ಮುಗಿಸಿ, ಅಮ್ಮ ಮತ್ತು ಮಗ ಇಬ್ಬರೂ ತಮ್ಮ ಬೆಂಗಳೂರಿನ ಮನೆಗೆ ಹಿಂದಿರುಗಿದರು.
ಮನೆಗೆ ಬಂದ ನಂತರ ಸುಜಿತ್ ಅವನ ಅಪ್ಪನಿಗೆ
ಮೈಸೂರು ದಸರಾದ ವೈಭವವನ್ನು ಹೇಳಿದ್ದೇ ಹೇಳಿದ್ದು.
ಮೈಸೂರು ದಸರಾ ಎಷ್ಟೊಂದು ಸುಂದರ
ಚೆಲ್ಲಿದೆ ನಗೆಯ ಪನ್ನೀರ ಎಲ್ಲೆಲ್ಲೂ ನಗೆಯ ಪನ್ನೀರ
ಹಾಡನ್ನು ಹಾಡಿ ದ್ದೇ ಹಾಡಿದ್ದು.
ವಿಜಯ ಭಾರತೀ.ಎ.ಎಸ್.
