STORYMIRROR

Vijaya Bharathi.A.S.

Abstract Inspirational Others

4.5  

Vijaya Bharathi.A.S.

Abstract Inspirational Others

ಮಹಾಪರ್ವ

ಮಹಾಪರ್ವ

3 mins
274

ಆಗಸ್ಟ್ ಹದಿನೈದು ಭಾರತದ ಇತಿಹಾಸದಲ್ಲಿ ಅತ್ಯಂತ ಮುಖ್ಯವಾದ ದಿನ. ಪ್ರತಿಯೊಬ್ಬ ಭಾರತೀಯನೂ ಈ ಸ್ವಾತಂತ್ರೋತ್ಸವವನ್ನು ಆಚರಿಸಬೇಕಾಗಿರುವ ಒಂದು ಮಹಾಪರ್ವ. ಅದರಲ್ಲೂ ಸರ್ಕಾರಿ ಕಚೇರಿಗಳು, ಶಾಲೆಗಳು, ಖಾಸಗಿ ಶಾಲೆಗಳು, ಸಂಘ ಸಂಸ್ಥೆಗಳು, ಹಾಗೂ ಊರಿನ ಹಲವು ಪ್ರಮುಖ ಬಡಾವಣೆಗಳಲ್ಲಿಯೂ ಈ ಸ್ವಾತಂತ್ರೋತ್ಸವದ ಆಚರಣೆಗಳು ನಡೆಯುತ್ತವೆ. ಈ ರಾಷ್ಟ್ರೀಯ ಹಬ್ಬವನ್ನು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಆಚರಿಸಲೇ ಬೇಕೆಂಬುದರಲ್ಲಿ ಎರಡು ಮಾತಿಲ್ಲ. ಈ ಸ್ವಾತಂತ್ರೋತ್ಸವದ ಸಡಗರ ಸಂಭ್ರಮಗಳನ್ನು ವಿಶೇಷವಾಗಿ, ನಾವು ಶಾಲೆಗಳಲ್ಲಿ ನೋಡಬಹುದು. 

ಸುರಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷದ ಸ್ವಾತಂತ್ರೋತ್ಸವದ ಸಂಭ್ರಮ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು.  

ಶಾಲೆಯ ಆವರಣವನ್ನು ಸ್ವಚ್ಚಗೊಳಿಸಿ, ತಳಿರು ತೋರಣಗಳಿಂದ ಹಾಗೂ ಬಣ್ಣಬಣ್ಣದ ಹೂಗಳಿಂದ ಅಲಂಕಾರ ಮಾಡಿ ಮದುಮಗಳ್ಂತೆ ಸಿಂಗರಿಸಿದ್ದರು. ಅಂದು ಶಾಲೆಯ ಮಕ್ಕಳೇ ಮುಂದೆ ನಿಂತು ಶಾಲೆಯ ಆವರಣವನ್ನು ಸ್ವಚ್ಚಗೊಳಿಸಿದ್ದು ಒಂದು ವಿಶೇಷ. ಆ ಶಾಲೆಯ ಅಂಗಳದಲ್ಲಿ ಹೂವಿನಲ್ಲಿ ಭಾರತದ ಭೂಪಟವನ್ನಿಟ್ಟು, ಅದರ ಮೇಲೆ ಧ್ವಜಸ್ಥಂಭವನ್ನು ನೆಟ್ಟಿ ಭಾರತದ ಭೂಪಟವನ್ನು ಕಟ್ಟಿದ್ದರು.ಇಡೀ ಶಾಲೆಯ ವಾತಾವರಣ ಸಡಗರ ಸಂಭ್ರಮಗಳಿಂದ ತುಂಬಿ ಹೋಗಿತ್ತು. 

ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ ಆ ಶಾಲೆಯ ಮುಖ್ಯೋಪಾಧ್ಯಾಯರು, ಧ್ವಜವನ್ನು ಹಾರಿಸಿ, ಸಲ್ಯೂಟ್ ತೆಗೆದುಕೊಂಡು, ಪಥ ಸಂಚಲನ ಮಾಡಿದರು. ನಂತರ ಎಲ್ಲರೂ ರಾಷ್ಟ್ರ ಗೀತೆಯನ್ನು ಸಾಮೂಹಿಕವಾಗಿ ಹಾಡುವ ಮೂಲಕ ಧ್ವಜಕ್ಕೆ ವಂದನೆಯನ್ನು ಸಲ್ಲಿಸಿದರು. ಸ್ಕೌಟ್ ಮತ್ತು ಗೈಡ್ ಮಕ್ಕಳಿಂದ ವಿವಿಧ ಕವಾಯತ್ತುಗಳು ನಡೆದವು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ಗಾಯನವೂ ನಡೆಯಿತು.ಕೆಲವು ವಿದ್ಯಾರ್ಥಿಗಳಿಂದ ಸ್ವಾತಂತ್ರೋತ್ಸವದ ಬಗ್ಗೆ ಪುಟ್ಟ ಪುಟ್ಟ ಭಾಷಣಗಳು ನಡೆದವು. 

ಕಡೆಯದಾಗಿ ಸುರಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ನಿಖಿಲ್ ಕಶ್ಯಪ್ ಪ್ರಧಾನ ಭಾಷಣಕಾರರಾಗಿದ್ದರು. ಅವರು  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಅದರ್ ಹಿಂದೆ ನಡೆದ ಸುದೀರ್ಘವಾದ ಹೋರಾಟ ಹಾಗೂ ಆ ಹೋರಾಟದಲ್ಲಿ ಹುತಾತ್ಮರ ರಾದ ವೀರಯೋಧರ ಬಗ್ಗೆ ಭಾಷಣ ಮಾಡುವ ಕಾರ್ಯಕ್ರಮ ಇತ್ತು. ಅವರು ಆ ಶಾಲೆಯ ಏಳ್ಗೆಗಾಗಿ ಬಹಳ ಶ್ರಮಿಸಿದ್ದರು. ಅವರೊಬ್ಬ ಆದರ್ಶ ಶಿಕ್ಷಕರಾಗಿ ಆ ಶಾಲೆಯಲ್ಲಿ ಹೆಸರು ಮಾಡಿದ್ದರು. ಆ ಶಾಲೆಯಲ್ಲಿ ಅವರನ್ನು ಕಂಡರೆ  ಆ ಶಾಲೆಯಲ್ಲಿ ಎಲ್ಲರಿಗೂ ಭಯಮಿಶ್ರಿತ ಗೌರವ ಹಾಗೂ ಪ್ರೀತಿ ಇದ್ದವು. ಅವರು ಮಾತನಾಡುವುದಕ್ಕೆ ಎದ್ದು ನಿಂತಾಗ, ಜೋರಾದ ಕರತಾಡನ ಗಳು ಕಿವಿಗಡಚಿಕ್ಕಿದವು. 

ಅವರು ತಮ್ಮ ಧೀರ ಗಂಭೀರ ವಾಣಿಯಿಂದ ಮಾತನಾಡುವುದಕ್ಕೆ ಶುರು ಮಾಡಿದರು.


"ನನ್ನ ನೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಇಂದು ನಮಗೆಲ್ಲಾ ಸಂಭ್ರಮದ ರಾಷ್ಟ್ರೀಯ ಹಬ್ಬ,ಸುಮಾರು ಇನ್ನೂರು ವರ್ಷಗಳವರೆಗೂ ಬ್ರಿಟಿಷ್ ರ ದಾಸ್ಯದಲ್ಲಿದ್ದ ನಮ್ಮ ಭಾರತಮಾತೆ ತನ್ನ ಸರಪಳಿಯನ್ನು ಕಳಚಿಕೊಂಡು ಬಿಡುಗಡೆಯ ಬೇಡಿಯಿಂದ ಹೊರಗೆ ಬಂದ ದಿನ. ಅಂದರೆ ನಾವು ಭಾರತೀಯರು ಬ್ರಿಟಿಷ್ ದಾಸ್ಯದಿಂದ ಬಿಡುಗಡೆ ಹೊಂದಿ, ಸ್ವಾತಂತ್ರ ಪಡೆದ ಮಹಾದಿನ. ’ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು ’ ಎಂಬಂತೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ವೆಂಬುದು ಅತಿ ಮುಖ್ಯ. ಆದ್ದರಿಂದ ಈ ದಿನ ದಿನ ಭಾರತೀಯರಾದ ನಮಗೆಲ್ಲಾ ಮಹಾಪರ್ವ. ಅಂದು ನೂರಾರು ದೇಶಭಕ್ತರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ ದ ಬೆಲೆ ಇಂದು ನಮಗೆ ಗೊತ್ತಿಲ್ಲ. ನಾವು ಇಂದು ನೆಮ್ಮದಿಯಿಂದ ಸ್ವತಂತ್ರವಾಗಿ ಬದುಕುತ್ತಿರುವುದಕ್ಕೆ ಆ ಮಹನೀಯರ ತ್ಯಾಗ ಬಲಿದಾನಳೇ ಕಾರಣ. ಆ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಲೆಕ್ಕವಿಲ್ಲದಷ್ಟು ಜನರು ಬ್ರಿಟಿಷರ ಖೈದಿಗಳಾಗಿ ಪಡಬಾರದ ಕಷ್ಟ ಪಟ್ಟಿದ್ದಾರೆ. ವೀರ ಸವಾರ್ಕರ್, ಚಂದ್ರ ಶೆಖರ್ ಅಜಾದ್, ಭಗತ್ ಸಿಂಗ್, ಲಾಲಾ ಲಜಪತ್ ರಾಯ್, ಬಾಲ ಗಂಗಾಧರ್ ತಿಲಕ್,ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ ಮುಂತಾದ ಹೆಸರಾಂತ ವ್ಯಕ್ತಿಗಳಷ್ಟೇ ಅಲ್ಲದೇ, ಎಲೆ ಮರೆ ಕಾಯಿಯಂತೆ ಹೋರಾಟ ನಡೆಸಿದ ಅನೇಕ ಜನರಿದ್ದಾರೆ. ತಮ್ಮ ತನು ಮನ ಧನಗಳನ್ನು ದೇಶಕ್ಕಾಗಿ ತ್ಯಾಗ ಮಾಡಿದ ಅನೇಕ ದಾನಿಗಳಿದ್ದಾರೆ. ಬ್ರಿಟಿಷ್ ರ ವಿರುದ್ದದ ಹೋರಾಟಗಳಲ್ಲಿ ತಮ್ಮ ಪ್ರಾಣ ವನ್ನು ತ್ಯಾಗ ಮಾಡಿದ ಹುತಾತ್ಮರು ಆಗಿ ಹೋಗಿದ್ದಾರೆ, ಇವರೆಲ್ಲರ ಶ್ರಮ್ ಹಾಗೂ ಹೋರಾಟದ ಫಲವಾಗಿ, ನಮ್ಮ ದೇಶಕ್ಕೆ ೧೯೪೭ ಆಗಸ್ಟ್ ೧೪ ರ ಮಧ್ಯ ರಾತ್ರಿ ಸ್ವಾತಂತ್ರ್ಯ ಸಿಕ್ಕಿತು.

ನಾವು ಅವರ ಬಲಿದಾನ ಹಾಗೂ ತ್ಯಾಗಗಳನ್ನು ಇಂದು ಸ್ಮರಿಸಿಕೊಳ್ಳಬೇಕು ಮತ್ತು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು,ಅವರಂತೆ ನಮ್ಮ ಜೀವನವನ್ನು ನಡೆಸಿದರೆ ಅದೇ ನಾವು ಭಾರತಮಾತೆಗೆ ಸಲ್ಲಿಸುವ ನಿಜವಾದ ಸೇವೆ. ಕೇವಲ ರಾಷ್ಟ್ರ ಧ್ವಜವನ್ನು ಏರಿಸಿ, ಚಪ್ಪಾಳೆ ಹೊಡೆದು,ಘೋಷಣೆಯ ಭಾಷಣಗಳನ್ನು ಮಾಡಿ ಬಿಟ್ಟರೆ ಅಷ್ಟೇ ಸಾಲದು. ಅದರ ಜೊತೆಗೆ ನಾವೆಲ್ಲರೂ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ ನೀವೆಲ್ಲರೂ ನಮ್ಮ ದೇಶದ ರಕ್ಷಣೆಗಾಗಿ ಎದೆಯುಬ್ಬಿಸಿ ಮುಂದೆ ನಿಲ್ಲಬೇಕು. 


ನಮ್ಮ ದೇಶದಂತೆ ರೆಪಬ್ಲಿಕ್ ಆಫ಼್ ಕಾಂಗೊ, ಸೌತ್ ಕೊರಿಯ ನಾರ್ತ್ ಕೊರಿಯ,ಬಹ್ರೈನ್ ಮುಂತಾದ ದೇಶಗಳು ಸಹ ಇಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಾರೆ. 

ಈಗ ನಾವೆಲ್ಲರೂ ಭಾರತಾಂಬೆಗೆ ಜೈಕಾರ ಹಾಕೋಣ.

ಬೋಲೋ ಭಾರತ್ ಮಾತಾಕಿ.......ಜೈ 

ವಂದೇ.......ಮಾತರಂ

ಜೈ ಹಿಂದ್ "


ಆ ಶಾಲೆಯ ಮುಖ್ಯೋಪಾಧ್ಯಾಯರ ಭಾಷಣವನ್ನು ಕೇಳಿ, ಎಲ್ಲರೂ ಜೋರಾಗಿ ಕರತಾಡನ ಮಾಡಿದರು. ನಂತರ ಆ ಊರಿನ ಹಿರಿಯ ಸ್ವಾತಂತ್ರ ಹೋರಾಟ ಗಾರರಾಗಿದ್ದ ಜಯರಾಂ ಭಟ್ ಮತ್ತು ವಸುಂಧರ ರಾಜ್ ಎಂಬ ಇಬ್ಬರಿಗೆ ಸನ್ಮಾನ ಸಮಾರಂಭ ಮಾಡಿದರು.  

 ನಂತರ ಎಲ್ಲರಿಗೂ ಕೇಸರಿ ಬಾತ್,ಖಾರ ಭಾತ್, ಸಿಹಿ ಲಾಡು ಮುಂತಾದ ತಿಂಡಿಗಳನ್ನು ಹಂಚಿದರು. ಅಂದು ಆ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಸಡಗರ ಸಂಭ್ರಮಗಳಿಂದ ಕುಣಿದಾಡುತ್ತಾ ತಮ್ಮ ತಮ್ಮ್ ಮನೆಗಳಿಗೆ ಹೊರಟರು. ಅವರೆಲ್ಲರೂ ತಮ್ಮ ಮನೆಯಲ್ಲಿ ಆಚರಿಸುವ ಇತರ ಹಬ್ಬಗಳಂತೆಯೇ ಇಲ್ಲಿಯೂ ಖುಷಿಯಿಂದ ಸಂಭ್ರಮಿಸಿದ್ದರು.


ವಿಜಯಭಾರತೀ ಎ.ಎಸ್.


Rate this content
Log in

Similar kannada story from Abstract