STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಪುಸ್ತಕ ಮಳಿಗೆ

ಪುಸ್ತಕ ಮಳಿಗೆ

2 mins
154


ಈ ವರ್ಷದ ವಸ್ತು ಪ್ರದರ್ಶನದಲ್ಲಿ ಎಂದಿನಂತೆ ಪುಸ್ತಕದ ಮಳಿಗೆಯೂ ಇದ್ದು, ಆ ಮಳಿಗೆಯಲ್ಲಿ ಹೊಸ ಹೊಸ ಬರಹಗಾರರ ಪುಸ್ತಕಗಳೂ ಸೇರಿದಂತೆ ಹೆಸರಾಂತ ಲೇಖಕರ ಪುಸ್ತಕಗಳೂ ಇದ್ದವು. ಈ ಬಾರಿಯ ಪುಸ್ತಕ ಮಳಿಗೆಯಲ್ಲಿ ವಿನೂತನ ರೀತಿಯ ಜಾಹೀರಾತುಗಳನ್ನು ಹಾಕಿ, ಜನರನ್ನು ಪುಸ್ತಕ ಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುವಂತಿತ್ತು. ಕುತೂಹಲಕಾರಿ ಜಾಹೀರಾತುಗಳನ್ನು ನೋಡಿದ ಕೆಲವು ಪುಸ್ತಕ ಪ್ರೇಮಿಗಳು , ಮಳಿಗೆಯ ಒಳಗೆ ಜನರು ಹೊಕ್ಕಿ ಬರುತ್ತಿದ್ದರು.

ಆದರೂ ಹೆಚ್ಚು ಮಂದಿ, ತಿಂಡಿ ಮಳಿಗೆ,ಬಟ್ಟೆ ಮಳಿಗೆ ಮತ್ತು ಚಾಟ್ಸ್ ತಿಂಡಿಗಳ ಮಳಿಗೆಗೆ ಬಂದು ಹೋಗುತ್ತಿದ್ದರು.ಕೆಲವರಂತೂ ಪುಸ್ತಕದ ಮಳಿಗೆಯ ಕಡೆ ಕಣ್ಣು ತಿರುಗಿಸುತ್ತಲೂ ಇರಲಿಲ್ಲ.


ಒಂದು ವಾರದ ವಸ್ತು ಪ್ರದರ್ಶನದಲ್ಲಿ ಸೋನೆ ಮಳೆಯಂತೆ ಆಗಾಗ ಬಿಟ್ಟು ಬಿಟ್ಟು ಜನರು ಬಂದು ಹೋಗುತ್ತಿದ್ದರು. ಎಲ್ಲರೂ ಅವರಿಗೆ ಆಸಕ್ತಿ ಇರುವ ಪುಸ್ತಕಗಳನ್ನು ಒಂದೊಂದಾಗಿ ತೆಗೆದು ನೋಡಿ, ಒಂದೆರಡು ಹಾಳೆಗಳನ್ನು ಮಗುಚಿ ಹಾಕುತ್ತಾ ,ನಂತರ ಅವುಗಳನ್ನು ಅವುಗಳ ಜಾಗದಲ್ಲಿಟ್ಟು, ಯಾವುದನ್ನೂ ಖರೀದಿಸುವ ತಂಟೆಗೆ ಹೋಗದೇ ಹಾಗೇ ಹೊರಟು ಹೋಗುತ್ತಿದ್ದರು. 

ಹೊಸದಾಗಿ ಪುಸ್ತಕ ಮುದ್ರಣ ಮಾಡಿಸಿದ್ದ ಹಲವಾರು ಉದಯೋನ್ಮುಖ ಬರಹಗಾರರು, ಖರೀದಿಸುವವರಿಲ್ಲದೇ ಹಾಗೇ ಬಿದ್ದಿದ್ದ ತಮ್ಮ ಪುಸ್ತಕಗಳನ್ನು ತಂದು ಈ ವಸ್ತು ಪ್ರದರ್ಶನದಲ್ಲಿ ಇಟ್ಟಿದ್ದರು. ಈ ವಸ್ತುಪದರ್ಶನದಲ್ಲಿಯಾದರೂ, ತಮ್ಮ ಪುಸ್ತಕಳು ಹಲವರ ಆಸಕ್ತಿಯನ್ನು ಕೆರಳಿಸಿ, ಮಾರಾಟವಾಗಬಹುದೆಂಬ ನಿರೀಕ್ಷೆಯಿಂದ ಅಲ್ಲಲ್ಲೇ ನಿಂತಿದ್ದ ಉದಯೋನ್ಮುಖ ಬರಹಗಾರರ ಮುಖದಲ್ಲಿ ನಿರಾಸೆಯ ಭಾವ ಹಾದು ಹೋಗುತ್ತಿದ್ದವು. 

ಸಾವಿರಾರು ರೂಪಾಯಿಗಳ ಬಂಡವಾಳ ಹಾಕಿ, ಪುಸ್ತಕವನ್ನು ಪ್ರಿಂಟ್ ಮಾಡಿಸಿಕೊಂಡಿದ್ದ ಹೊಸ ಬರಹಗಾರರಿಗೆ ಯಾಕೋ ತುಂಬಾ ನಿರಾಸೆಯೇ ಆಗುತ್ತಿತ್ತು. 

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬರಹಗಾರರ ಗುಂಪುಗಳಲ್ಲಿ ಬರೆಯುತ್ತಿದ್ದ ಬರಹಗಾರರು, ತಮ್ಮದೇ ಪುಸ್ತಕವನ್ನು ಪ್ರಕಟಿಸುವ ಆಸೆಯಿಂದ ಸಾವಿರಾರು ರೂಪಾಯಿಗಳ ಬಂಡವಾಳ ಹಾಕಿ ಪುಸ್ತಕಗಳನ್ನು ಮಾಡಿಸಿದ್ದರು. ಇಂತಹ ದೊಡ್ಡ ಮಟ್ಟದ ಪುಸ್ತಕ ಪ್ರದರ್ಶನದ ಮಳಿಗೆಯಲ್ಲಿಯೂ ಕೇವಲ ಒಂದೆರಡು ಪುಸ್ತಕಗಳು ಮಾರಾಟವಾಗದೇ ಹೋದಾಗ, ಕೆಲವು ಬರಹಗಾರರು ಅಲ್ಲಿ ಬಂದಿದ್ದವರ ಗಮನ ಸೆಳೆಯಲು ಜನಗಳ ಮುಂದೆ ಬಂದು ತಮ್ಮ ತಮ್ಮ ಪುಸ್ತಕಗಳನ್ನು ಹಿಡಿದು, ತೋರಿಸುತ್ತಾ, 

"ಸರ್, ಮೇಡಂ, ದಯವಿಟ್ಟು ನನ್ನ ಈ ಪುಸ್ತಕವನ್ನು ಖರೀದಿಸಿ, ಓದಿ ನೋಡಿ , ಒಂದು ಪುಸ್ತಕಕ್ಕೆ ಮತ್ತೊಂದು ಪುಸ್ತಕ ಉಚಿತ, ನನ್ನ ಈ ಪುಸ್ತಕಗಳನ್ನು ಖರೀದಿಸಿ ನನ್ನನ್ನು ಪ್ರೋತ್ಸಾಹಿಸಿ" ಅಂತ ಕೇಳಿಕೊಳ್ಳುತ್ತಾ 

ಅಂಗಲಾಚುತ್ತಿರುವುದನ್ನು ನೋಡುವಾಗ, ಅಲ್ಲಿದ್ದ ಕೆಲವು ಹಿರಿಯ ಜೀವಿಗಳು 

"ಅಯ್ಯೋ ಈ ದಿನಗಳಲ್ಲಿ ಪುಸ್ತಕಗಳನ್ನು ಯಾರು ಕೊಳ್ಳುವವರೇ ಇಲ್ಲವಲ್ಲ, ನಮ್ಮ ಕಾಲದಲ್ಲಿ ತಮ್ಮ ಸಂಪಾದನೆಯ ನೂರನೇ ಒಂದು ಭಾಗವನ್ನು ವೃತ್ತ ಪತ್ರಿಕೆಗಳು, ಮಾಸ ಪತ್ರಿಕೆಗಳು, ಕಥೆ ಕಾದಂಬರಿಗಳನ್ನು ಕೊಳ್ಳುವುದಕ್ಕಾಗಿ ಮೀಸಲಾಗಿಡುತ್ತಿದ್ದೆವು, ಆದರೆ ಈಗ ಲಕ್ಷಾಂತರ ರೂಪಾಯಿಗಳ ರೊಕ್ಕ ಬಂದರೂ ಯಾರೊಬ್ಬರೂ ಪುಸ್ತಕವನ್ನು ಕೊಳ್ಳಲು ಮುಂದೆ ಬರುವುದಿಲ್ಲವಲ್ಲ, ಪಾಪ ಆ ಯುವ ಲೇಖಕರ ಪಾಡನ್ನು ನೋಡಲಾಗುತ್ತಿಲ್ಲ" ಅಂತ ಮಾತನಾಡಿಕೊಳ್ಳುತ್ತಾ, ಅಲ್ಲಿದ್ದ ಕೆಲವು ಹಿರಿಯರು, ಉದಯನ್ಮೋಖ ಬರಹಗಾರರ ಕೆಲವು ಪುಸ್ತಕಗಳನ್ನು ಖರೀದಿಸಿದರು. 

ನಂತರ ಅಲ್ಲಿದ್ದ ಒಬ್ಬ ಹಿರಿಯರು, ತಮ್ಮ ಸ್ನೇಹಿತರೊಡನೆ,  

"ತಂತ್ರ ಜ್ಞಾನದ ಪಾರಮ್ಯದಲ್ಲಿರುವ ಜನರಿಗೆ ಇಂದು ಪುಸ್ತಕ ಓದುವುದೇ ಬೇಡವೆನಿಸಿದೆ. ಅವರಿಗೇನಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಗತಿಕ ವಿಷಯಗಳು, ಅರಮನೆ ತೋರಿಸುವ ನಾನಾ ವಿಧಧ ಮಾಹಿತಿಗಳು, ಮನೋರಂಜನೆಯ ಕಾರ್ಯಕ್ರಮಗಳು  ಇದ್ದರೆ ಸಾಕು, ಅಂಗೈಯಲ್ಲೊಂದು ಮೊಬೈಲ್ ಒಂದಿದ್ದರೆ ಸಾಕು. ಬೆರಳಾಡಿಸುತ್ತಾ ಕುಳಿತಿರುತ್ತಾರೆ. ಇಲ್ಲಿರುವ ತಿಂಡಿ ಮಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿರುವ ಕಾಲು ಭಾಗವಾದರೂ ಒಮ್ಮೆ ಪುಸ್ತಕ ಮಳಿಗೆಗೆ ಹೋಗಿ ನೋಡಬಾರದೆ?"

ಎಂದು ಮಾತನಾಡುತ್ತಾ ಹೋಗುವುದನ್ನು ಗಮನಿಸುತ್ತಿದ್ದ ಯುವ ಬರಹಗಾರರು, 

ಆ ಹಿರಿಯರ ಮಾತುಗಳು ಅಕ್ಷರಶಃ ನಿಜವೆಂದು ಕೊಳ್ಳುತ್ತ, ಇನ್ನೆಂದೂ ಮುಂದೆ ತಾವು ಪುಸ್ತಕ ಪ್ರಕಟಣೆಯ ಮೇಲೆ ದುಡ್ಡು ಹಾಕಿ, ತಮ್ಮ ಹಣವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿದರು. 





ವಿಜಯಭಾರತೀ ಎ.ಎಸ್.


Rate this content
Log in

Similar kannada story from Abstract