Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಗುಲಾಬಿಯ ಕಥೆ

ಗುಲಾಬಿಯ ಕಥೆ

1 min
12


ಅಂದು ಸಂಜೆ ಆಫೀಸಿನಿಂದ ಬಂದ ಇಪ್ಪತ್ತು ವರ್ಷದ ತಮ್ಮ ಮಗಳು,ನೀತು, ತನ್ನ ಕೈಯಲ್ಲಿ ಗುಲಾಬಿ ಹೂ ಹಿಡಿದು ಬಂದಾಗ, ಅವಳ ಮುಖವೂ ಗುಲಾಬಿ ಬಣ್ಣವಾಗಿದ್ದನ್ನು ದೂರದಿಂದಲೇ ಅವಳ ಅಪ್ಪ ಪವನ್ ಗಮನಿಸುತ್ತಿದ್ದರು. ಅವರು ಮಗಳನ್ನು ಕರೆದು ಏನು ವಿಶೇಷ ವೆಂದು ಕೇಳಿದಾಗ, ನೀತು ತನ್ನ ಅಪ್ಪನ ಮುಂದೆ ನಿಂತು,

"ಪಪ್ಪಾ ನೀವು ಮಮ್ಮಿ ಯನ್ನು ಪ್ರೀತಿಸಿ ಮದುವೆಯಾಗಿದ್ದು ಅಲ್ವಾ? ನಿಮ್ಮ ಕಾಲದಲ್ಲೂ ಪ್ರೀತಿ ಯನ್ನು ಹೇಳಿಕೊಳ್ಳಲು ರೆಡ್ ರೋಸ್ ಕೊಡುತ್ತಾ ಇದ್ದರೋ? ಪಿಂಕ್ ರೋಸ್ ಕೊಡುತ್ತಾ ಇದ್ದಿರೋ?"

ಅಂತ ಕೇಳಿದಾಗ, ಪವನ್ ಅವರು ಮಗಳನ್ನೇ ದಿಟ್ಟಿಸಿ ನೋಡುತ್ತಾ

"ನೀತು,ಈ ಪ್ರಶ್ನೆ ಈಗ ನನ್ನನ್ನು ಏಕೆ ಕೇಳುತ್ತಿದ್ದೀಯ?"

ಅಂತ ಆಶ್ಚರ್ಯದಿಂದ ಕೇಳಿದರು.

ಆಗ ಮಗಳು

"ಪಪ್ಪಾ, ನಿಮ್ಮಂತೆಯೇ ನಾನೂ ಒಬ್ಬರನ್ನು ಪ್ರೀತಿಸಿದ್ದೇನೆ. ಇಂದು ಪ್ರೇಮಿಗಳ ದಿನದಂದು

ನನ್ನ ಪ್ರೀತಿಯ ಪ್ರೀತಂ ಈ ಪಿಂಕ್ ಗುಲಾಬಿಯನ್ನು ಕೊಟ್ಟಿದ್ದಾನೆ. ಈಗ ನಮ್ಮಿಬ್ಬರ ಪ್ರೀತಿಗೆ ನಿಮ್ಮ ಒಪ್ಪಿಗೆಯ ಮೊಹರು ಬೇಕು "

ಅಂತ ನೇರವಾಗಿ ಕೇಳಿದಾಗ, ಪವನ್ ಅವರು ಮಗಳ ನೇರ ನುಡಿಗೆ ಮೆಚ್ಚುಗೆ ಸೂಚಿಸಿ, ಪ್ರೀತಂ ಬಗ್ಗೆ ವಿವರಗಳನ್ನು ಸಂಗ್ರಹಿಸಿದರು. ಒಮ್ಮೆ ಅವನನ್ನು

ತಮ್ಮ ಮನೆಗೆ ಕರೆದುಕೊಂಡು ಬರುವಂತೆ ತಿಳಿಸಿದರು. ಕಡೆಗೆ ಮಗಳ ಕೈ ಹಿಡಿದುಕೊಂಡು

"ಮಗಳೇ ಈ ಪ್ರೀತಿಗೂ ಗುಲಾಬಿಗೂ ಅವಿನಾಭಾವ ಸಂಬಂಧ. ಈ ಸಂಬಂಧ ನನ್ನ ಕಾಲದಿಂದ ನಿನ್ನ ಕಾಲದವರೆಗೂ ಒಂದೇ ರೀತಿಯಲ್ಲಿ ಇರುವಂತಹದ್ದು. ಆದರೆ ನಮ್ಮ ಕಾಲದಲ್ಲಿ ಪ್ರೀತಿಯ ಬಗ್ಗೆ ತಂದೆ ತಾಯಿಯ ಹತ್ತಿರ ಹೇಳಿ ಕೊಳ್ಳುವ ವೇಳೆಗೆ ಎಷ್ಟೋ ಸಲ ಪ್ರೀತಿಸಿದವರನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಪ್ರೀತಿಸಿದವರು ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ. ಒಟ್ಟಿನಲ್ಲಿ ಈ ಗುಲಾಬಿಯ ಕಥೆ

ಎಂದಿಗೂ ಒಂದೇ ರೀತಿ ಇರುವಂತಹುದು.

ನಿನ್ನ ಮನಸ್ಸಿಗೆ ಪ್ರೀತಂ ಇಷ್ಟವಾಗಿರುವುದರಿಂದಲೇ ನೀನು ಅವನಿಂದ ಈ ಗುಲಾಬಿ ತೆಗೆದು ಕೊಳ್ಳುವುದು ಸಾಧ್ಯವಾದದ್ದು. ಆದರೆ ಈ ಸುಂದರ ಗುಲಾಬಿಯ ಸಂದಿಯಲ್ಲಿ ಚುಚ್ಚುವ ಮುಳ್ಳಿನ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಆದಷ್ಟು ಬೇಗ ನಿನ್ನ ಆ ಪ್ರೀತಂ ನನ್ನು ನನ್ನ ಹತ್ತಿರ ಕರೆದುಕೊಂಡು ಬಾ."

"ಥ್ಯಾಂಕ್ಸ್ ಪಪ್ಪಾ " ಅಂತ ಹೇಳಿ, ನೀತು ತನ್ನ ಅಪ್ಪನನ್ನು ಪ್ರೀತಿಯಿಂದ ಅಪ್ಪಿಕೊಂಡಳು.


Rate this content
Log in

Similar kannada story from Abstract