Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಎಲ್ಲಿಯ ನಿವೃತ್ತಿ?

ಎಲ್ಲಿಯ ನಿವೃತ್ತಿ?

2 mins
11


ಮೂವತ್ತು ವರ್ಷಗಳ ಕಾಲ ಮನೆಯ ಒಳಗೂ ಹೊರಗೂ ದುಡಿದು ಸಾಕಾಗಿ, ಕಡೆಗೆ ಸ್ವ ಇಚ್ಛೆಯಿಂದ ವೃತ್ತಿಯಿಂದ ನಿವೃತ್ತಿಯನ್ನು ಹೊಂದಿ, ನೆಮ್ಮದಿ ಯಾಗಿ ತನ್ನ ಮನೆಯಲ್ಲಿ ವಿಶ್ರಾಂತ ಜೀವನವನ್ನು ನಡೆಸಬೇಕೆಂದು ಆಸೆಪಟ್ಟ ವತ್ಸಲಾಳಿಗೆ, ಮನೆಯಲ್ಲಿ ಇರಲು ಪ್ರಾರಂಭಿಸಿದ ಮೇಲೆ, ಆಫೀಸ್ ಗೆ ಹೋಗಿ ಬರುತ್ತಿದ್ದುದೇ ಚೆನ್ನಾಗಿತ್ತು ಎಂದು ಕೊಳ್ಳುವಂತೆ ಆಯಿತು. ಬೆಳಿಗ್ಗೆ ಎದ್ದ ತಕ್ಷಣ, ಕಾಫಿ ತಿಂಡಿ,ಡಬ್ಬಿಗೆ ಒಂದನ್ನು ಮಾಡಿಕೊಂಡು, ಒಂದು ಗಂಟೆಯೊಳಗೆ ಮುಗಿಸುತ್ತಿದ್ದ ಅಡುಗೆ ಮನೆಯ ಕೆಲಸ, ನಿವೃತ್ತಿಯ ನಂತರ , ಎಷ್ಟು ಹೊತ್ತಾದರೂ ಮುಗಿಯುತ್ತಿರಲಿಲ್ಲ.

ಬೆಳಿಗ್ಗೆ ಒಬ್ಬೊಬ್ಬರಾಗಿ ಕಾಫಿ ತಿಂಡಿ ಅಂತ ಬಂದರೆ, ಅವಳು ಒಲೆಯ ಮುಂದಿನಿಂದ ಹೊರಗೆ ಬರುವುದೇ ಕಷ್ಟವಾಗುತ್ತಿತ್ತು. ಆಗೆಲ್ಲಾ ಮಾಡಿಟ್ಟಿದ್ಧ ತಿಂಡಿಯನ್ನು ಸದ್ದಿಲ್ಲದೇ ತಿಂದು ಹೋಗುತ್ತಿದ್ದ ಮನೆಯವರು, ಈಗ ಎಲ್ಲವೂ ಬಿಸಿ ಬಿಸಿಯಾಗಿ, ವಿಧವಿಧವಾಗಿ ಬೇಕೆಂದು ಬಯಸುತ್ತಿದ್ದರು. ಹೀಗಾಗಿ ಆಗೆಲ್ಲಾ ಅರ್ಧ ಗಂಟೆಯಲ್ಲಿ ಮುಗಿಯುತ್ತಿದ್ದ ಕೆಲಸ, ಈಗ ನಾಲ್ಕು ಗಂಟೆಗಳ ಕಾಲವಾದರೂ ಮುಗಿಯುವಂತೆ ಇರಲಿಲ್ಲ. ಬೆಳಿಗ್ಗೆ ಮನೆ ಬಿಟ್ಟು ಹೊರಡುವವರಿ ಗೆ ತಿಂಡಿ, ಡಬ್ಬಿಗೆ ಒಂದು ಬಗೆ ಯಾಗುತ್ತಿದ್ದರೆ, ನಂತರ ಮನೆಯಲ್ಲಿರುವವರಿಗೆ ಬಿಸಿ ಬಿಸಿಯಾದ ಅಡುಗೆ ಮತ್ತೊಂದು ಬಗೆ ಆಗಬೇಕು.

ಊಟ ಮುಗಿಸಿ, ಅಡುಗೆ ಮನೆ ಕ್ಲೀನಿಂಗ್ ಮಾಡಿ , ಒಂದು ಗಳಿಗೆ ಹಾಗೆ ಹೀಗೆ ಸ್ವಲ್ಪ ವಿಶ್ರಾಂತಿ ‌ಪಡೆಯಬೇಕೆನ್ನುವಷ್ಟರಲ್ಲಿ, ಬೆಳಿಗ್ಗೆ ಬೇಗ ಮನೆ ಬಿಟ್ಟವರು ಊಟಕ್ಕೆ ಕೂರುತ್ತಿದ್ದರು.ಅವರಿಗೆ ಬಡಿಸಿ ಉಸ್ಸಪ್ಪಾ ಅನ್ನುವಾಗ, ಸ್ಕೂಲ್ ಮುಗಿಸಿ ಬಂದೇ ಬಿಡುವ ಮೊಮ್ಮಕ್ಕಳಿಗೆ ಸ್ನ್ಯಾಕ್ಸ್ ಟೈಮ್. (ನಿವೃತ್ತಿ ಯು ನಂತರ ತನ್ನ ಮಕ್ಕಳನ್ನು ಅಮ್ಮನ ಉಸಾಬರಿಗೆ ಬಿಡುತ್ತಿದ್ದ ಉದ್ಯೋಗಸ್ಥ ಮಗಳು) ಸರಿ ಅವರಿಗೆ ಏನಾದರೊಂದು ಮಾಡಿ ಕೊಡಬೇಕು, ನಂತರ ಕಾಫಿ,ಟೀಗಳ ಸಡಗರ. ಎಲ್ಲಾ ಮುಗಿಸುವ ಹೊತ್ತಿಗೆ ಸಾಯಂಕಾಲ ಆರು ಗಂಟೆ. ನಂತರ ರಾತ್ರಿಯ ಅಡುಗೆಗೆ ತಯಾರಿ. ರಾತ್ರಿ ಊಟವಾದ ನಂತರವೇ ಹತ್ತು ಗಂಟೆಗೆ ಸ್ವಲ್ಪ ವಿರಾಮ ವಾಗುತ್ತಿತ್ತು.ಇದು ದಿನಚರಿಯಾದರೆ, ಈಗ ವತ್ಸಲಾ ಮನೆಯಲ್ಲಿ ಇರುವುದರಿಂದ, ನೆಂಟರಿಷ್ಟರು ಧಾರಾಳವಾಗಿ ಬಂದು ಇರುತ್ತಿದ್ದರು. ಆಗ ಅವಳಿಗೆ ತುಂಬಾ ಹೆಕ್ಟಿಕ್ ಆಗುತ್ತಿತ್ತು.

ಎಷ್ಟೋ ಸಲ ಅವಳಿಗೆ, ತಾನು ಸ್ವಯಂ ನಿವೃತ್ತಿ ಪಡೆದದ್ದೇ ತಪ್ಪಾಯಿತೇನೋ ಎಂದು ಕೊಳ್ಳುವಂತೆ ಆಗುತ್ತಿತ್ತು.

ತನ್ನ ಮಗನಿಗೆ ಮದುವೆಯಾಗಿ ಸೊಸೆ ಬಂದ ನಂತರ, ತನ್ನ ಕೆಲಸದ ಭಾರ ಸ್ವಲ್ಪ ಹಗುರವಾಗ ಬಹುದೆಂದು ಕೊಂಡಿದ್ದ ವತ್ಸಲಾಳಿಗೆ ಸೊಸೆಗೆ ಬಿಡುವಿಲ್ಲದ ಆಫೀಸ್ ಕೆಲಸವಾಗಿದ್ದು ದ್ದರಿಂದ, ಅವಳಿಂದ ಏನು ನಿರೀಕ್ಷೆ ಮಾಡಲಾಗುತ್ತದೆ ಎನ್ನುವಂತಾಗಿತ್ತು.

"ಅಯ್ಯೋ ಹೆಂಗಸಿಗೆ ಎಲ್ಲಿಯ ನಿವೃತ್ತಿ? ಉದ್ಯೋಗದಿಂದ ನಿವೃತ್ತಿ ದೊರೆತರೂ ಮನೆ ಗೆಲಸದಿಂದ ಎಂದಿಗೂ ನಿವೃತ್ತಿ ದೊರೆಯದು , ಕೇವಲ ಕೆಲಸದ ಬದಲಾವಣೆಯೇ ಅವಳಿಗೆ ವಿಶ್ರಾಂತಿ ಏನೋಹುಟ್ಟಿದಾಗಿನಿಂದ ಸಾಯುವತನಕ

ನಿರಂತರ ಉಸಿರಾಡುವ ವೃತ್ತಿಗೆ ಎಲ್ಲಿದೆ ನಿವೃತ್ತಿ? ಹಗಲಿರುಳೂ ತನ್ನ ಮನೆ ಮಕ್ಕಳಿಗೆ ದುಡಿಯುವ ಮನೆಯೊಡತಿ ಗೆ ಎಲ್ಲಿದೆ ನಿವೃತ್ತಿ ?", ಎಂದುಕೊಳ್ಳುತ್ತಿದ್ದಳು.


Rate this content
Log in

Similar kannada story from Abstract