Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ನನ್ನವನು

ನನ್ನವನು

1 min
9


ಹೊಸದಾಗಿ ಮದುವೆಯಾಗಿದ್ದ ಆ ಮನೆ ಮಗನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅವನು ಯಾರ ಕಡೆ
ಮಾತನಾಡಿದರೂ ಕಷ್ಟ ವೆಂಬಂತೆ ಆಗಿ, ಅವನಿಗೆ ತಲೆ ಕೆಟ್ಟ ಹಾಗೆ ಆಗಿತ್ತು. ಅವನು ತನ್ನ ತಂದೆ ತಾಯಿಗೆ ಒಬ್ಬನೇ ಮಗನಾಗಿರುವುದರಿಂದ, ಅವರಿಬ್ಬರೂ ಮಗ ಹೆಂಡತಿ ಯ ಮಾತು ಕೇಳಿ ಎಲ್ಲಿ ನಮ್ಮ ಕೈ ಬಿಡುತ್ತಾನೋ ಎಂಬ ಅತಿರೇಕದಿಂದ ಅವರಿಬ್ಬರೂ ಹೊಸದಾಗಿ ಮದುವೆಯಾದ ಮಗನನ್ನು ಹೆಂಡತಿಯ ಜೊತೆ ಏಕಾಂತ ವಾಗಿ ಕಾಲ ಕಳೆಯುವುದಕ್ಕೇ ಅವಕಾಶ ಮಾಡಿ ಕೊಡುತ್ತಿರಲಿಲ್ಲ. ಮಾತೆತ್ತಿದರೆ 'ಅವನು ನಮ್ಮ ಮಗ ನಾವು ಅವನನ್ನು ಕಷ್ಟ ಪಟ್ಟು ಬೆಳೆಸಿದ್ದೇವೆ ಅವನು ನಾವು ಹೇಳಿದಂತೆಯೇ ನಡೆಯಬೇಕು 'ಎಂಬ ಹಠಕ್ಕೆ ಬಿದ್ದ ತಂದೆ ತಾಯಿ, ಮತ್ತೊಂದು ಕಡೆ, 'ನಾನು ಇವನ ಹೆಂಡತಿ, ಇವನು ನನ್ನವನು, ಇವನನ್ನೇ ನಂಬಿಕೊಂಡು ಇಲ್ಲಿಗೆ ಬಂದಿದ್ದೇನೆ. ಇವನು. ನಾನು ಹೇಳಿದಂತೆ ಕೇಳಬೇಕು 'ಎನ್ನುವ ಹೆಂಡತಿ.
ಅತ್ತ ದರಿ ಇತ್ತ ಪುಲಿ. ಮಗನ ಜೀವನ ನರಕವಾಗಿ ಹೋಯಿತು. ಕಡೆಗೆ ವಿದೇಶಕ್ಕೆ ಆದರೂ ಹೊರಟು ಬಿಡಬೇಕು ಎಂದು ಪ್ರಯತ್ನ ಮಾಡಿದ. ಆದರೆ ಆ ವಿಷಯ ಅಪ್ಪ ಅಮ್ಮನಿಗೆ ಗೊತ್ತಾಗಿ, ಇಬ್ಬರೂ ಕಣ್ಣೀರಿಡುತ್ತಾ, 'ಅಯ್ಯೋ ನೀನಿರುವುದು ನಮಗೆ ಒಬ್ಬನೇ ಮಗ, ನಮಗೇನಾದರೂ ಆದರೆ ಇಲ್ಲಿ ಯಾರಿದ್ದಾರೆ? ನೀನು ನಮ್ಮಿಂದ ದೂರ ಹೋಗಬೇಡ'ಅಂತ ಹೇಳಿ ಹೇಳಿ ಮಗನನ್ನು ಎಮೋಷನಲ್ ಬ್ಲಾಕ್ ಮೇಲ್ ಮಾಡಿ ಅವನನ್ನು ತಡೆದು ಬಿಡುತ್ತಿದ್ದರು. ಇದರಿಂದ ಹೆಂಡತಿಯ ಸಿಟ್ಟು ತಾರಕಕ್ಕೇರಿ, ಮನೆಯಲ್ಲಿ ನಿತ್ಯ ಘರ್ಷಣೆ ಶುರುವಾಗುತ್ತಿತ್ತು. ಪಾಪ ಆ ಬಡಪಾಯಿ ಮಗ ಇವರಿಬ್ಬರ ಅತಿಯಾದ ಪೊಸೆಸಿವ್ ನೆಸ್ ನಿಂದ ಯಾರನ್ನೂ ಬಿಡಲಾರದೆ ಏಗುತ್ತಿದ್ದಾನೆ. ಮತ್ತೊಂದು ಕಡೆ ಗಂಡನನ್ನು ಬಿಟ್ಟು ಕೊಡಲಾರದೇ ಹೆಂಡತಿ ಒದ್ದಾಡುತ್ತಿದ್ದಾಳೆ. ಇದರ ನಡುವೆ ಅವನ ತಂದೆ ತಾಯಿ, ಮಗನಿಗೆ  ಎಮೋಷನಲ್ ಬ್ಲಾಕ್ ಮೇಲೆ ಮಾಡಿಕೊಂಡು , ಆರಾಮವಾಗಿ ಇದ್ದಾರೆ.

ಅವರಿಗೆ ತಮ್ಮ ಮಗ ಸೊಸೆಯ ಸುಖಕ್ಕಿಂತ ತಮ್ಮ ಸ್ವಾರ್ಥಕ್ಕೆ ಬೆಲೆ ಕೊಡುತ್ತಿರುವುದು ತನ್ನ ಗಂಡನಿಗೆ ಏಕೆ ಅರ್ಥವಾಗುತ್ತಿಲ್ಲ ಎಂದು ಹೆಂಡತಿ ಕೊರಗುತ್ತಾ, ಗಂಡನನ್ನು ಬಿಟ್ಟು ದೂರ ಹೋಗುವುದಕ್ಕೂ ಆಗದೆ, ತನ್ನ ಕರ್ಮ ಅಂತ ತನ್ನನ್ನು ತಾನು ಹಳಿದುಕೊಳ್ಳುತ್ತಾ ಜೀವನ ಸವೆಸುತ್ತಿದ್ದಾಳೆ. ಇದೆಂತಹ ನೀನು ನನ್ನವನು  ಎನ್ನುವ ಪೊಸೆಸಿವ್ ನೆಸ್.?

ವಿಜಯಭಾರತೀ.ಎ.ಎಸ್.



Rate this content
Log in

Similar kannada story from Abstract