Gireesh pm Giree

Abstract Drama Action

4  

Gireesh pm Giree

Abstract Drama Action

ಒಂದೇ ಯೋಚನೆ

ಒಂದೇ ಯೋಚನೆ

2 mins
417



ಮನಸ್ಸಿನ ಗೂಡಿನ ತುಂಬಾ ಆಲೋಚನೆಗಳ ಸರಮಾಲೆಯು ಉಗಿಬಂಡಿಯಂತೆ ಸಾಲುಗಟ್ಟಿ ನಿಂತಿದೆ . ಯೋಚನೆಯನ್ನು ಮತ್ತಷ್ಟು ಮಗದಷ್ಟು ಗರಿಗೆದರಿದಂತೆ ಏನೇನು ಹೊಸಹೊಸ ಭಾವನೆಗಳು ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ. ಆದರೆ ಅದನ್ನೆಲ್ಲಾ ಸ್ವಲ್ಪ ಬದಿಗಿಟ್ಟರು ಒಂದು ಯೋಚನೆ ಮಾತ್ರ ನನ್ನನ್ನು ಬೆನ್ನು ಬಿಡದ ಬೇತಾಳದಂತೆ ಹಿಂದೆನೇ ಅಲಿಯುತ್ತಿದೆ. ಅಷ್ಟಕ್ಕೂ ಆ ಯೋಚನೆ ಬೇರೆ ಏನು ಅಲ್ಲ ಆದರೂ ಹೋದರೂ ಮುಗಿಯದ ಪದವಿ ಎಕ್ಸಾಮ್ . ಅಯ್ಯೋ ದೇವರೇ ಪರೀಕ್ಷೆಗೆ ಪರೀಕ್ಷೆ. ನಾಳೆ ಪರೀಕ್ಷೆ ಇದ್ದರೂ ಓದುವ ಮನಸ್ಸು ಹಂಬಲ ಇರುವುದಂತೂ ತುಂಬಾ ವಿರಳ ಯಾಕೆಂದ್ರೆ ನಾಳೆ ಅಕಸ್ಮಾತ್ ಎಕ್ಸಾಮ್ ಇಲ್ಲದಿದ್ದರೆ . ಆ ರೀತಿ ಎಕ್ಸಾಮ್ ಇಲ್ಲವೆಂದು ಸೂಚನೆ ಎಷ್ಟು ಬಾರಿ ಬಂದದ್ದೂ ಇದೆ ತಲೆ ಮೇಲೆ ಕೈ ಹೋದದ್ದೂ ಇದೆ . ಈ ಹಾಳು ಕೋರೋನ ಯಾವಾಗ ಹೆಚ್ಚಾಗುತ್ತೋ ಯಾವಾಗ ಇಳಿಯುತ್ತೋ ಎಂಬುವುದೇ ಯಕ್ಷಪ್ರಶ್ನೆ ಆದರೆ ಕೋರೋನ ಇನ್ನಿಂಗ್ಸ್ ಗೆ ಅದರ ಅಂಕೆಗೆ ಹಾಳು ಸಂಖ್ಯೆಗೆ ಬುಡಮೇಲಾಗುದಂತು ನಮ್ಮ ಭವಿಷ್ಯ ಪಕ್ಕ. ಇನ್ನು ಈ ಜಮಕಡಿ ಬರುವುದಾದರೆ ಓದಿದ್ದೇ ಒಂದು ಬಂದದ್ದು ಇನ್ನೊಂದು ಅದು ಬೇರೆ ಕಥೆ. ನಿದ್ದೆ ಕಟ್ಟಿ ಓದುವ ಅಂದ್ರೆ ಎಲ್ಲಿ ಎಕ್ಸಾಮ್ನಲ್ಲಿ ನಿದ್ದೆ ಬರುತ್ತೆ ಎಂಬ ಭಯ ಜೊತೆಜೊತೆಗೆ 6:00 ಗಂಟೆಗೆ ಟ್ರೈನ್ ಗೆ ಹೋಗುವ ಚಿಂತೆ. ಈ ಚಿಂತೆ ಕಂತೆಗಳ ಸಂತೆ ಮಿದುಳ ತುಂಬಾ ಅತ್ತ-ಇತ್ತ ಸುತ್ತುತ್ತಲೇ ಇರುತ್ತದೆ. ತಂಗಿ ಹೋಗದೆ ವಿಧಿ ಇಲ್ಲ ನಮ್ಮ ಸಮಯಕ್ಕೆ ಸರಿಯಾಗಿಲ್ಲ. ಇನ್ನೇನು ಗತಿ ಎಂದು ರೈಲನ್ನು ಹತ್ತಿ ಹೋಗುವುದು. ರೈಲುಗಾಡಿಯಲ್ಲಿ ಸಹಪ್ರಯಾಣಿಕರು ತುಂಬಾ ಕಡಿಮೆ. ಪಯಣದ ಉದ್ದಕ್ಕೂ ಓದುವುದೇ ದಿನಚರಿ ಜೊತೆಗೆ ಸಂತಸ ಅಬ್ಬಾ ಎಕ್ಸಾಮ್ ಮುಗಿಯುತ್ತೆ ಎಂದು.

 ಆದರೆ ಈ ಒಂದು ಪರೀಕ್ಷೆ ಮಾತ್ರ ಮುಂದಕ್ಕೆ ಮುಂದಕ್ಕೆ ಹೋಗುತ್ತಿದೆ ಧಾರವಾಹಿಯ ಹಾಗೆ . ಯಾವುದೊ ದಿನಾಂಕದಂದು ಹಾಯಾಗಿ ನಿದ್ರಿಸುತ್ತಿದ್ದ ಪರೀಕ್ಷೆಯನ್ನು ಒಂದೇ ಸಮನೆ ಮುಂದಕ್ಕೆ ತಳ್ಳಿದರು. ಅದು ಮುಂದಕ್ಕೆ ಹೋಗುವ ಜೊತೆಗೆ ನಮ್ಮ ಕಲಿಕೆ ಕೂಡ ಹಿಂದಕ್ಕೆ ಹಿಂದಕ್ಕೆ ಹೋಯಿತು. ಈಗಿರುವ ವಾಸ್ತವ ಜಗತ್ತಿನ ವಿದ್ಯಾರ್ಥಿಗಳ ಪಾಡನ್ನು ಊಹಿಸುವುದು ಕೂಡ ಕಷ್ಟ .

   ಒಮ್ಮೆ ಪರೀಕ್ಷೆ ಮುಗಿದರೆ ಅದು ದಾಖಲೆ ಯಾಕೆಂದರೆ ಒಂದು ಸೆಮ್ಮ್ ನಾಲ್ಕು -ಐದು ತಿಂಗಳು ಇರುತ್ತದೆ ಎಂದರೆ ಅದು ಸುಮ್ಮನೆ ಅಂತೂ ಅಲ್ಲೇ ಅಲ್ಲ . ಅದು ಇತಿಹಾಸ ಆದರೆ ವಿದ್ಯಾರ್ಥಿಗಳ ಪಾಲಿಗೆ ಅದು ವನವಾಸ ಮುಗಿಯದ ಎಕ್ಸಾಮ್ ಸಹವಾಸ. ಅಯ್ಯೋ ದೇವರೇ ಬೇಗನೆ ಎಕ್ಸಾಮ್ಗೆ ಮುಕ್ತಿಕೊಡಿಸು. ಇನ್ನು ತಡೆದುಕೊಳ್ಳುವ ಶಕ್ತಿ ಇಲ್ಲ .ತಾಳಿ ತಾಳಿ ಸುಸ್ತಾಗಿ ಹೋಗಿದ್ದೆ . ನಮ್ಮ ಪಾಲಿಗೆ ಹೊಸದೊಂದು ಗಾದೆಮಾತು ಈ ಸಮಯದಲ್ಲಿ ನೆನಪಿಗೆ ಬರುತ್ತದೆ. ತಾಳಿದವ ಬಾಳಿಯಾನು ಮೊದಲಾದರೆ ತಾಳಿದ ಈ ಸೆಂ ಮುಗಿಸಾನು ಎಂಬುದು ನಮ್ಮ ಚಿತ್ರಣವನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತದೆ.




Rate this content
Log in

Similar kannada story from Abstract