Gireesh pm Giree

Abstract Children Stories Inspirational

3.4  

Gireesh pm Giree

Abstract Children Stories Inspirational

ಹೊಸ ಪರಿಚಯವ ನೀ ಹೇಳಿದೆ.

ಹೊಸ ಪರಿಚಯವ ನೀ ಹೇಳಿದೆ.

2 mins
199


ಹೊಸ ಪರಿಚಯವ ನೀ ಹೇಳಿದೆ.

ಕಳೆದೇ ಹೋಯಿತು ಕಳೆಯುತ ದಿನಗಳು. ಇನ್ನೇನು ಹೊಸ ಕ್ಯಾಲೆಂಡರ್ ವರ್ಷದ ಅಂಚಿನಲ್ಲಿ ನಾವಿದ್ದೇವೆ. ಕಳೆದು ಹೋದ ಘಟನೆಗಳಲ್ಲಿ ಸಿಹಿ-ಕಹಿ ನೆನಪಿನ ಸುತ್ತ ನಮ್ಮಯ ಮನಸ್ಸುಗಳು ಮೆಲುಕು ಹಾಕುತ್ತಿರಬಹುದು, ಓಡಾಡುತ್ತಿರಬಹುದು. ಸಂಭವಿಸಿದ ಘಟನೆಗಳು ಹೊಸದಾದ ಅಧ್ಯಾಯಕ್ಕೆ ಹಿನ್ನುಡಿಯನ್ನು ಮುನ್ನುಡಿಯನ್ನು ಬರೆದಿದೆ. ಈ ವರ್ಷದಲ್ಲಿ ಅದೆಷ್ಟು ನೆನಪುಗಳು ಹುಲಸಾಗಿ ಬೆಳೆದು ಸಲಾಗಿ ನಿಂತಿದ್ದೆ.

ಕಳೆದುಹೋಗುವ 2023 ರ ಒಮ್ಮೆ ನೆನೆಯುವ ಆಸೆ ನನ್ನಲ್ಲಿ ಮೂಡಿತು. ಈ ವರ್ಷದಲ್ಲಿ ನೆನಪಿನೊಳಗೆ ನೆನಪಿನ ಚಿತ್ತಾರದ ಸುಂದರ ರೇಖೆಯನ್ನು ಎಳೆದವರು ಕೆಲವೇ ಕೆಲವು ಮಂದಿ ಮಾತ್ರ. ಅಂಥಹಾ ಸುಂದರ ರೇಖೆಗಳನ್ನು ಎಳೆದು ರಂಗೇರಿಸುವ ರಂಗೋಲಿಯನ್ನು ಬರೆದು ,ಅದಕ್ಕೆ ಸ್ನೇಹ ,ಪ್ರೀತಿ, ಸಂತಸ, ಆಶ್ವಾಸನೆ ,ಧೈರ್ಯ ಎನ್ನುವ ಬಣ್ಣ ಬಣ್ಣದ ಪರಿಮಳ ಬೀರುವ ಕುಸುಮವನ್ನು ಅದಕ್ಕೆ ಹಾಕಿ ಅಂದಕಾಣುವಂತೆ ಮಾಡಿದ್ದು ನೀನು ಮಾತ್ರ ಗೆಳೆತಿ. ನೀನು ಈ ವರ್ಷ ಬಂದದ್ದು ತುಂಬಾನೇ ಹೊಸತು. ಅದುವರೆಗೂ ಒಬ್ಬಂಟಿಯಾಗಿರಲು ಬಯಸುತ್ತಿದ್ದ ಮನಸ್ಸು ನಿನ್ನ ಸ್ನೇಹ ಸಮ್ಮಿಲನಕ್ಕೆ ಬಂಧಿಯಾಯಿತು. ಯಾಕೆಂದರೆ ಅದುವರೆಗೂ ನಿನ್ನಂತಹ ಗೆಳತಿಯ ಪರಿಚಯ ನನಗಾಗಿರಲಿಲ್ಲ. 

ಕಾಲೇಜು ಎನ್ನುವ ಸುಂದರ ವಿದ್ಯಾಸೌಧದಲ್ಲಿ ಅಪರೂಪದಲ್ಲಿ ಅಪರೂಪವೆಂಬಂತೆ ಕಂಡ ಅಪರೂಪದ ಅಕ್ಕರೆಯ ಸಕ್ಕರೆಯ ಮನ ಉಳ್ಳವಳು.

ಅದುವರೆಗೂ ಅದೆಷ್ಟು ಮನಸ್ಸನ್ನು ನಾನು ಕಂಡಿರುವೆ, ಆದರೆ ಅದು ಯಾವುದು ನನ್ನೊಳಗೆ ನನಗಾದರೂ ಕಾಡಲಿಲ್ಲ , ಗಾಢ ಪ್ರಭಾವ ಬೀರಲು ಕೂಡ ಇಲ್ಲ. ಆದರೆ ನಿನ್ನ ಆ ಮಾತು ಅಣ್ಣಾ ಎಂದು ಕರೆದ ಆ ಮೆಲು ಧ್ವನಿ ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ. ಆ ಭಾವುಕ ಕ್ಷಣಕ್ಕೆ ನಾನು ಅಣ್ಣನಾದೆ.ತಂಗಿಯ ಪ್ರೀತಿಯೇ ಸಿಗದ ನನಗೆ ಅದರ ಅನುಭವವನ್ನು ನೀ ನೀಡಿ ಸ್ನೇಹ ಬಂಧನಕ್ಕೆ ಬಣ್ಣವನ್ನು ಹಚ್ಚಿದೆ. ನಿನ್ನ ಜೊತೆ ಕಳೆಯುವ ಕ್ಷಣಗಳು, ಮಾಡುವ ಸಣ್ಣ ಪುಟ್ಟ ಜಗಳ, ಕೆಲವೊಮ್ಮೆ ನಿಂಗೆ ಮೂಡುವ ಸಿಟ್ಟು, ಅದನ್ನು ಹೋಗಲಾಡಿಸುವ ನನ್ನ ಕಸರತ್ತು ನಡೆಯುತ್ತಲೇ ಇರುತ್ತದೆ. ಆದರೆ ಅಕ್ಕರೆಯ ಭಾವನೆ ಸಿಟ್ಟನ್ನು ಹೆಚ್ಚು ದಿನದವರೆಗೆ ಕೊಂಡು ಹೋಗುದಿಲ್ಲ. ಹಾಗಿದ್ದರೂ ನಿನ್ನ ಜೊತೆ ಕಳೆದ ಕ್ಷಣಗಳು ಸವಿ ನೆನಪಾದರೆ, ಇನ್ನು ಕಳೆಯಲು ಬಾಕಿ ಇರುವ ಗಳಿಗೆ ಕಮ್ಮಿ ಎಂದು ತಿಳಿದಾಗ ಬೇಸರ ಮೂಡುತ್ತದೆ.

      ಮೂಡುವಂತಹ ಪ್ರೀತಿ ಬರೀ ಆಕರ್ಷಣೆ ಮಾತ್ರ ಆಗದು. ಬದಲಾಗಿ ಅದು ಸಹೋದರಿ ಎನ್ನುವ ಶುಭ್ರವಾದ ಸ್ನೇಹದ ಸಮ್ಮಿಲನವೂ ಆಗಿರಬಹುದು. ಒಬ್ಬರಲ್ಲಿ ಮಾತನಾಡಿದ ತಕ್ಷಣ ಅವರು ಪ್ರೇಯಸಿಗಳು ಎಂದು ಹೇಳುವುದು ತಪ್ಪು ಕಲ್ಪನೆ. ಯಾಕೆಂದರೆ ಪ್ರೇಯಸಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟು ಪ್ರೀತಿ ಮಾಡುವ ಸೋದರ ಮನಸ್ಸುಗಳು ಕೂಡ ನಮ್ಮ ಅಕ್ಕ ಪಕ್ಕದಲ್ಲಿಯೇ ಇರುತ್ತಾರೆ. ಅದನ್ನು ನೆನೆಯ ಬೇಕು ಮೊದಲು. ಯಾವನೇ ಒಬ್ಬನಿಗೆ ನೋವನ್ನು ಹಂಚಿಕೊಳ್ಳಲು ಒಂದು ಮನಸು ಬೇಕು. ಹಾಗೆಯೇ ತನ್ನೊಳಗಿನ ವೇದನೆಯನ್ನು ತಣಿಸುವ ಮನಸ್ಸು ನನಗೆ ಸಿಕ್ಕಿರುವುದು ನನ್ನ ಪುಣ್ಯ. ಧನ್ಯವಾದ ಗೆಳತಿ ನಮ್ಮಿಬ್ಬರ ನಡುವಿನ ಅಣ್ಣ ತಂಗಿಯ ಸ್ನೇಹ ಬಾಂಧವ್ಯ ಸದಾ ಹೀಗೆ ಇರಲಿ ಮುಂದುವರೆಯಲಿ.


Rate this content
Log in

Similar kannada story from Abstract