Gireesh pm Giree

Abstract Children Stories Drama

4  

Gireesh pm Giree

Abstract Children Stories Drama

ಕ್ರಿಸ್ಮಸ್

ಕ್ರಿಸ್ಮಸ್

2 mins
399


 ಅಂಬರವೇರಿ ಬರುವನು ಬೆಳ್ಳಿಚುಕ್ಕಿಯಂತೆ ನಗುಮುಖದ ಒಡೆಯ ಸಾಂತಾ ತಾತ. ಇವನ ದುಮ್ಮನೆಯ ಹೊಟ್ಟೆ ನೋಡುವುದೇ ಚೆಂದ ಕಣ್ಣಿಗೆ ಅಂದ. ಹರಿಣಗಳ ಕಾಲಿಗೆ, ಕೊರಳಿಗೆ ಕಟ್ಟಿದ ಗೆಜ್ಜೆಯಿಂದ ಜೈಕಾರದ ಸದ್ದು ಜಲ್ ಜಲ್ ಅಂತ ಕೇಳಿ ಬರುತ್ತಿತ್ತು. ಸಾಂತಾ ತಾತನು ಏನು ಉಡುಗೊರೆಯನ್ನು ಮನೆ ಮುಂದೆ ಇಟ್ಟನು.ಹಾಗೇ ಎದ್ದು ಕಾತುರದಿಂದ ಹೊರಗೆ ನಡೆದಾಗ ಬಿಟ್ಟ ಕಣ್ಣಿನಿಂದ ಬಾಗಿಲು ತೆರೆದು ಹೊರಗೆ ನೋಡುವಾಗ ನಾನು ಇಷ್ಟು ಹೊತ್ತು ಕಂಡದ್ದು ಕನಸು ಎಂದು ತಿಳಿಯಿತು. ಹಾಗೇ ಆಗಸವನ್ನು ಆಸೆಯ ಭಾವ ತುಂಬಿ ನೋಡಿದೆ ತಾತ ಈಗ ಬರುವನೋ ಮತ್ತೆ ಬರುವನೋ ಎನ್ನುವ ಅಭಿಲಾಷೆಯಿಂದ. ಯಾರೂ ಆ ಇರುಳಲ್ಲಿ ಬರದ ಕಂಡು ಬೇಸರದಿಂದ ಒಳಗೆ ನಡೆದೆ ಭರವಸೆಯ ನಾಳಿನ ದಿನಗಳಿಗಾಗಿ ನಿದ್ದೆದೆ ಜಾರಿದೆ.   

   ಬಾಗಿಲ ಮುಂದೆ ಮರುದಿನ ಏನಾದರೂ ಇರಬಹುದೇ?! ಎನ್ನುವ ಆಕಾಂಶೆ ನನ್ನನ್ನು ನಿದ್ದೆಯಿಂದ ಬಹುಬೇಗನೆ ಎಚ್ಚರಿಸಿತು. ಅದು ಹಾಸಿಗೆ ಬಿಡುವಂತೆ ಮಾಡಿದ್ದು ಸತ್ಯ. ಹೊರ ನಡೆದು ನೋಡುವಾಗ ಬಾಗಿಲ ಮುಂದೆ ಏನು ಕೂಡ ಇರಲಿಲ್ಲ. ಆಸೆಯ ಕಣ್ಣುಗಳಿಗೆ ಪ್ರತಿ ವರ್ಷವೂ ನಿರಾಸೆಯೇ ಆಗುತ್ತಿತ್ತು. 

    ಬಾಲ್ಯದ ದಿನಗಳಲ್ಲಿ ಕಳೆಯೋ ದಿನಗಳು ಹಾಗೆ ತಾನೇ.ಇಲ್ಲಿ ಜರಡಿ ಹಿಡಿದಷ್ಟು ನೆನಪುಗಳು ಮತ್ತೊಮ್ಮೆ ಮಗದೊಮ್ಮೆ ನನ್ನತ್ತ ಸುಳಿಯುತ್ತದೆ.ಅದರಲ್ಲಿ ಡಿಸೆಂಬರ್ ರಜಾ ದಿನದ ಮೋಜು ಕೂಡ ಒಂದು ಹೆಗ್ಗುರುತೇ!.

  ಅಂದು ಡಿಸೆಂಬರ್ ತಿಂಗಳು ಬಂತಂದರೆ ಸಾಕಿತ್ತು ಅದರ ಜೊತೆಯಲ್ಲೇ ಚಳಿಗಾಲವು ಶುರುವಾಗಿಬಿಡುತ್ತಿತ್ತು. ಹೀಗಿರುವ ನನ್ನಲ್ಲಿ ಕ್ರಿಸ್ಮಸ್ ಹಬ್ಬದ ಸುವಾಸನೆ ಜೋರಾಗಿಯೇ ನಾಸಕ್ಕೆ ಬರುತ್ತಿತ್ತು. ಈ ಹಬ್ಬ ಬರುತ್ತಿದೆ ಎನ್ನುವ ಸಂತಸ ಖುಷಿ ನನ್ನಲಿ ಮೂಡುವುದು ಯಾಕೆಂದರೆ?! ಅಂದು ಸಿಗುತ್ತಿದ್ದಂತಹ ಹತ್ತು ದಿನಗಳ ಶಾಲಾ ರಜೆ.

  ಕ್ರಿಸ್ಮಸ್ ಹಬ್ಬ ಸನಿಹ ವಿಹರಿಸುತ್ತಿದ್ದಂತೆಯೇ ನಾನು ಮತ್ತು ನನ್ನ ಗೆಳೆಯರು ರಜಾದಿನ ಸಿಕ್ಕ ದಿನದಿಂದ ಮನೆಯ ಮುಂಭಾಗದ ಹಿತ್ತಲನ್ನು ನೆಲವನ್ನು ಶುಚಿ ಮಾಡುತ್ತಿದ್ದೆವು.ಯಾಕೆಂದರೆ ಅಲ್ಲಿ ಸಣ್ಣ ರೀತಿಯ ದನದ ಹಟ್ಟಿಯ ಆಕೃತಿಯ ಒಂದು ಗುಡಿಸಲನ್ನು ಇದು ನಿರ್ಮಿಸುತ್ತಿದ್ದೆವು.ಬಿದಿರಿನ ಕಡ್ಡಿಯ ಕೊಯ್ದು ಅದನ್ನು ನಾಲ್ಕು ಸಮಾನ ಅಳತೆಗೆ ತುಂಡರಿಸಿ ಅದರ ಮೇಲೆ ಸ್ವಲ್ಪ ಪ್ರಮಾಣದ ಹಸಿ ಸೋಗೆಯನ್ನು ಮತ್ತು ಅಜ್ಜಿ ಅಟ್ಟದಲ್ಲಿ ಇರಿಸಿದ್ದ ಬೈಹುಲ್ಲನ್ನು ಕದ್ದು ಅದರ ಮೇಲೆ ಚಾವಡಿಯಂತೆ ಹಾಸುತ್ತಿದೆವು. ಯೇಸು ಕ್ರಿಸ್ತನಿಗೆ ಪ್ರಿಯವಾದ ಸ್ಥಳವೇ ಈ ದನದ ಹಟ್ಟಿ ಆಗಿತ್ತು ಅಲ್ಲವೇ? ಈ ಮಾತು ನಾನು ಗೆಳತಿಯ ಬಾಯಿಂದಲೇ ಕೇಳಿದ್ದೇನೆ. ಹಾಗೆಯೇ ಆ ಸಣ್ಣ ಗುಡಿಸಲಲ್ಲಿ ಮಿನುಗುವ ನಕ್ಷತ್ರವನ್ನು ಇಟ್ಟು ಕಟ್ಟುತ್ತಿದ್ದೆವು. ಚಿಕ್ಕ ಚಿಕ್ಕ ಮಿಣಿ ವಿಣಿಸುವ ಬೆಳಕುಗಳನ್ನು, ಗಡ್ಡ ತಾತ ಸಾಂತಾ ಕ್ಲಾಸ್ನ ಚಿಕ್ಕ ಮೂರ್ತಿಯನ್ನು ಇಡುತ್ತಿದ್ದೆವು. ಆ ಚಿಕ್ಕ ಗುಡಿಯಲ್ಲಿ ಹಾಡುವುದೇ ಒಂಥರಾ ಖುಷಿ ಕೊಡುತ್ತಿತ್ತು.ರಜೆ ಕೊನೆಯ ದಿನದಂದು ಅದನ್ನು ಸುಟ್ಟು ಹಾಕುತ್ತಿದ್ದೆವು . ಆ ಸಮಯದಲ್ಲಿ ಬೇಸರವು ಮೂಡುತ್ತಿತು.


Rate this content
Log in

Similar kannada story from Abstract