Gireesh pm Giree

Abstract Drama Action

3  

Gireesh pm Giree

Abstract Drama Action

ನಾನು ಕಂಡ ದೇವರು

ನಾನು ಕಂಡ ದೇವರು

2 mins
262



ಬದುಕಿನಲ್ಲಿ ಆಗುವ ಘಟನೆಗಳಿಗೆ ಕಾರಣಗಳು ಹಲವಾರು ಇರಬಹುದು ಅದು ಉಂಟು ಮಾಡುವ ಪರಿಣಾಮಗಳು ಬೇರೆ ಬೇರೆ ಆಗಿರುತ್ತದೆ. ಆದರೆ ಆ ಕಾರಣಕ್ಕೆ ಕಾರಣವನ್ನು ತಿಳಿದರೆ ನಿಜವಾದ ಬದುಕಿಗೆ ಅರ್ಥವು ತಿಳಿದಂತೆ.ಈ ಬಾಳೆಂಬ ಪಯಣದಲ್ಲಿ ನೋವಿನ ವ್ಯಥೆಯಿದೆ, ನಲಿವಿನ ಕಥೆ ಇದೆ, ಸಮಸ್ಯೆಗಳು ಶಾಶ್ವತ ಅದನ್ನು ಎದುರಿಸಲು ಒಂದು ದೃಢವಾದ ಮನಸ್ಸು ಬೇಕು . ಇದರ ಜೊತೆ ಖಿನ್ನತೆಯನ್ನು ಅನುಭವಿಸುವ ನನ್ನೊಳಗಿನ ಭಾವನೆಯ ಬವಣೆಯನ್ನು ಮೇಲೆತ್ತಲು ಯಾರಾದರೂ ಒಬ್ಬರು ಇರಲೇಬೇಕು.

ಜೀವನ ಎನ್ನುವ ನೌಕೆಯ ನಾವಿಕ ನಾನಾದರೂ ,ಅದನ್ನು ಯಶಸ್ವಿಯಾಗಿ ಸಾಗರದ ಮತ್ತೊಂದು ದಡ ಸೇರಿಸಲು ಮತ್ತೊಬ್ಬರ ಸಹಕಾರ ಬೇಕೇ ಬೇಕು ಉದಾಹಣೆಗೆ ಮನೆಯವರೇ ಆಗಿರಬಹುದು. ಆ ಸಹಕಾರವನ್ನು ಪ್ರತ್ಯಕ್ಷ ದೇವರೇ ಬಂದು ಮಾಡಬೇಕೆಂದು ನಾನಂತೂ ಬಯಸೆನು . ಆದರೆ ದೇವರ ರೂಪದಲ್ಲಿ ಬರುವ ವ್ಯಕ್ತಿಯ ವ್ಯಕ್ತಿತ್ವದ ಆಗಮವನ್ನು ನಾನು ಬಯಸುವೆನು. ಅಂತವರ ವ್ಯಕ್ತಿತ್ವಕ್ಕೆ ನಾನೆಂದೂ ಚಿರಋಣಿ.

      ನಿರಾಕಾರ, ನಿರ್ಗುಣವಂತ , ಭಕ್ತಿಗೆ ಓಲೆಯೋ ನಡೆದಾಡುವ ದೇವರ ಪ್ರತಿರೂಪ ನಮ್ಮ ಅಕ್ಕ ಪಕ್ಕದಲ್ಲಿ ಇದ್ದಾರೆ. ಎದುರಿಸುವ ಕಷ್ಟಕ್ಕೆ ಸ್ವಲ್ಪ ಹೆಗಲು ನೀಡಿದರೆ ಅದು ಹುಲ್ಲಿನಂತಹ ಸಹಾಯವಾದರೂ ಕೂಡ ಆ ಸಮಯಕ್ಕೆ ಆ ಸಮಯದಲ್ಲಿ ಅದು ಪುನರ್ಜನ್ಮವನ್ನು ನೀಡುವಂತದ್ದು.

   ಅದು ಡಿಗ್ರಿ ಸೆಮಿಸ್ಟರ್ ಪರೀಕ್ಷೆಯ ಸಮಯ ಎಲ್ಲವೂ ಅಂದುಕೊಂಡಂತೆಯೇ ರೈಲ್ವೆ ನಿಲ್ದಾಣ ದತ್ತ ಪಯಣವನ್ನು ಬೆಳೆಸಿದ್ದೆ. ಓದಲು ಬೇಕಾಗಿರುವ ಪುಸ್ತಕವನ್ನೆಲ್ಲಾ ಹಿಂದಿನ ದಿನವೇ ಜೋಡಿಸಿ ಬ್ಯಾಗಿನಲ್ಲಿ ಇಟ್ಟಿದ್ದೆ .ಆದರೆ ಕಾಲೇಜಿಗೆ ಪಯಣ ಆರಂಭಿಸಿದ್ದೇ ತಡ ಬಸ್ ಸ್ಟ್ಯಾಂಡಿಗೆ ಹೋಗುವ ದಾರಿಯ ಮದ್ಯೆ ಏನು ಮರೆತ ಭಾವನೆ ಗಾಢವಾಯಿತು. ಹಾಗೆಯೇ ಧಾವಂತದಲ್ಲಿ ಮನೆಗೆ ಹಿಂತಿರುಗಿದೆ ಏನಾಯ್ತು ?!.ಎನ್ನುವ ಅಮ್ಮನ ಪ್ರಶ್ನೆಗೆ ನನ್ನ ಕೈಯಲ್ಲಿದ್ದ ಹಾಲ್ ಟಿಕೆಟ್ ಉತ್ತರ ನೀಡಿತು .

ಮರೆತ ಹಾಲ್ ಟಿಕೆಟ್ ನಿಂದಾಗಿ ಒಂದಾದ ಮೇಲೆ ಒಂದರಂತೆ ರಾದಂತಗಳು ಉಂಟಾಯಿತು. 

   ಸಮಯಕ್ಕೆ ಸರಿಯಾಗಿ ಹೊರಡಿದ್ದ ಕಾರಣ ರೈಲ್ವೇ ನಿಲ್ದಾಣಕ್ಕೆ ಹೋಗುವ ಬಸ್ಸು ಅದಾಗಲೇ ಹೋಗಿತ್ತು. ಗೆಳೆಯನನ್ನು ಕರೆ ಮಾಡಿ ವಿಚಾರಿಸಿ ಟ್ರೈನ್ ಸರಿಯಾದ ಸಮಯಕ್ಕೆ ಇದೆಯೋ?! ಎಂಬುದಾಗಿ. ಅವನ ಉತ್ತರ ಕೇಳಿ ನನ್ನ ಹೃದಯ ಬಡಿತ ಜಾಸ್ತಿ ಆಯಿತು. ಇನ್ನೇನು ಗತಿ ಶಿವನೇ ..ಹಾಲ್ ಟಿಕೆಟ್ ಮರೆಯದಿದ್ದರೆ ಈ ಹಾಳಾದ ಘಟನೆ ಸಂಭವಿಸುತ್ತಿತ್ತಾ? ಎನ್ನುತ್ತಾ ರಿಕ್ಷಾ ಸ್ಟ್ಯಾಂಡ್ ನತ್ತ ನೋಡಿದೆ .ಮುಂಜಾನೆ ಜಾವ ಆದುದರಿಂದ ಯಾವ ರಿಕ್ಷಾ ಅಲ್ಲಿ ಇರಲಿಲ್ಲ. ನಿಮಿಷಗಳು ಕಳೆಯುತ್ತಿದ್ದಂತೆಯೇ ಹೃದಯ ಬಡಿತ ಹೆಚ್ಚಾಯಿತು . ಭಯದ ವಾತಾವರಣ ನನ್ನ ಸುತ್ತ ಕತ್ತಲ ಕಾರ್ಮೋಡದಂತೆ ಆವರಿಸಿತು. ಮುಂದೆ ಬರುವ ಬಸ್ ನಲ್ಲಿಯೇ ಸೀದಾ ಮಂಗಳೂರಿಗೆ ಪಯಣ ಬೆಳೆಸಿದರು ಅಲ್ಲಿ ತಲುಪುವುದರೊಳಗೆ ಪರೀಕ್ಷೆಯೇ ಮುಗಿದಿರುತ್ತದೆ . ಆ ಸಮಯದಲ್ಲಿ ಬೆವರುತ್ತಿದ್ದ ಹಣೆಯನ್ನು ಒರೆಸಿಯೇ ನನಗೆ ಸಾಕಾಗಿತ್ತು .ಇನ್ನೇನು ಮನೆ ಕಡೆ ಹೆಜ್ಜೆ ಹಾಕುವ ನಿರ್ಧಾರಕ್ಕೆ ಬಂದೆ .ಇನ್ನೇನು ಮುಂದೆ ಹೆಜ್ಜೆ ಹಾಕುವಾಗ ಬೈಕ್ನಲ್ಲಿ ಬರುತ್ತಿದ್ದ ಅಪರಿಚಿತ ನನ್ನ ಕಂಡು ನಿಲ್ಲಿಸಿದ. ಎಲ್ಲಿ ಕೇಳಿದ ಅವನ ಪ್ರಶ್ನೆಗೆ ಯಾರು ಏನು ಗೊತ್ತಿಲ್ಲದ ಅವನಲ್ಲಿ ಎಲ್ಲಾ ಪ್ರಸಂಗವನ್ನು ಹೇಳಿಕೊಂಡೆ. ಸಮಯಕ್ಕೆ ಸರಿಯಾಗಿ ಬಂದ ಯಾರೋ ಅರಿಯದ ಸ್ನೇಹಿತ ನನ್ನ ಪಾಲಿಗೆ ಕಂಡದ್ದು ಮಾತ್ರ ದೇವರ ರೂಪದಲ್ಲಿ. ಸಮಯಕ್ಕೆ ಸರಿಯಾಗಿ ಬಂದು ಆತನಿಂದ ನಿಗದಿತ ಸಮಯಕ್ಕೆ ಬಂದ ರೈಲನ್ನು ಏರಿದೆ. ಬರೆಯಬೇಕಾದ ಪರೀಕ್ಷೆಯನ್ನು ಬರೆದೆ .ಆ ಪರೀಕ್ಷೆ ಬರೆಯದೆ ಇದ್ದಿದ್ರೆ ನನ್ನ ಒಂದು ವಿಷಯ ಬಾಕಿಯಾಗಿಯೇ ಉಳಿದುಬಿಡುತ್ತಿತ್ತು .ಹಾಗೆಯೇ ತಿಂಗಳುಗಳ ಶ್ರಮವು ಪೋಲಾಗಿ ಬಿಡುತ್ತಿತ್ತು. ಧನ್ಯವಾದ ಗೆಳೆಯ.


Rate this content
Log in

Similar kannada story from Abstract