ಮುಂಗಾರು
ಮುಂಗಾರು
ತಲೆಗೆಲೆಗಳು ನಿಧಾನವಾಗಿ ಗಾಳಿಗೆ ಅತ್ತ ಇತ್ತ ಸುತ್ತಲ ಆರಂಭಿಸಿತು. ಹೊಸ ಚಿಗುರಿನ ಎಲೆಗಳನ್ನು ತನ್ನ ಅಂತರಾಳದಲ್ಲಿ ಇಟ್ಟ ಮರಗಳ ಸಾಲು ಆಗಸವನ್ನೇ ನೋಡುತ್ತಿತ್ತು. ಆಕಾಶವು ನಿನ್ನಯಂತೆಯೇ ತಿಳಿ ನೀಲಿಯಾಗಿಯೇ ಇತ್ತು. ಏನಾಯ್ತು ಗೊತ್ತಿಲ್ಲ ಆಗಸದಲ್ಲಿ ಕಡು ಕಾರ್ಮೋಡ ಮೇಘಗಳು ಗುಂಪು ಗುಂಪಾಗಿ ಸಾಲುಗಟ್ಟಿತು. ಕಾರ್ಮೋಡದ ಕಡುಬಣ್ಣದಿಂದ ಎಲ್ಲೆಲ್ಲೂ ಕತ್ತಲು ಆವರಿಸಿತು . ದಿನಕರನ್ನು ಮೋಡಗಳ ಎಡೆಯಲ್ಲಿ ಮಾಯವಾಗಿಯೇ ಬಿಟ್ಟ.
ಆ ತನಕ ಶಾಂತವಾಗಿದ್ದ ಆಗಸ ಗುಡು ಗುಡುಗಿ ಮಳೆರಾಯನ ಆಗಮನ ಸಂದೇಶ ಸಾರುವ ದ್ವನಿ, ತಣ್ಣನೆ ಬೀಸುತ್ತಿದ್ದ ಇಂಪಾದ ತಂಗಾಳಿಯು ಅದಕ್ಕೆ ಶ್ರುತಿ ಆಗಿತ್ತು. ಕಾದು ಬಸವಳಿದು ಕಳೆ ಮಾಸಿದ ಇಳೆಗೆ ಹಸಿರ ಕಳೆ ತರಲು ,ಜೀವ ಹೊಳೆ ಹರಿಯಲು ,ಬೆಳೆ ವೃದ್ಧಿಸಲು, ಬಿಸಿಲಿಂದ ಬಸವಳಿದ ಜೀವ ಜಂತುಗಳ ಬೇನೆಯ ಶಮನಗೊಳಿಸಲು ಮೇಘಗಳ ಎಡೆಯಿಂದ ಮುತ್ತ ನೀರ ಹನಿಗಳು ಹನಿ ಹನಿಯಾಗಿ ಭುಮಿಯ ಮುತ್ತಿಟ್ಟು ತಬ್ಬಿಕೊಂಡು ಧರಣಿಯ ಸಂತೃಪ್ತಿಗೊಳಿಸಿತು. ಅದುವರೆಗೂ ಕಳೆ ಕುಗ್ಗಿದ್ದ ಮಣ್ಣು ಸುಗಂಧ ದ್ರವ್ಯದ ಗಮಗಮ ಪರಿಮಳದಲ್ಲಿ ಸೊಂಪಾಗಿ ಬೀಸುವ ತಂಗಾಳಿಯಲ್ಲಿ ಇಂಪಾಗಿ ಕೇಳುವ ಮಾರುತದಲ್ಲಿ ಬೆರೆತು ನಾಸವನ್ನು ಸೇರಿತು.
ಹಂಚಿನ ಸೂರಿನಿಂದ ಬರುವ ನೀರು ಮಣ್ಣಿನಿಂದಾಗಿ ಕಂದಾಗಿತ್ತು. ಅವನು ಕೈ ಮುಂದೆ ಚಾಚಿ ಆಡುವ ಹವ್ಯಾಸವು ಮೊದಲ ಮಳೆಯಿಂದಲೇ ಶುರುವಾಗಿ ಬಿಡುತ್ತಿತ್ತು . ಮಣಿ ಮಣಿ ಆಗಸದ ಚಪ್ಪರದಿಂದ ಬೀಳುವ ಮುತ್ತುಗಳು ಅಂಗೈಯ ನಾಟುವಾಗ ತಂಪಾಗುತ್ತಿತ್ತು ಮೈ ಪುಳಕಗೊಳ್ಳುತ್ತಿತ್ತು .ಗಾಳಿಯ ರಬಸಕ್ಕೆ ಮೈ ಸೋಕುವ ಸಿರಾಣಿಯ ಸ್ಪರ್ಶದ ಸೊಗಸ ವರ್ಣಿಸಲಾಗದು .
ಇಳೆ ಸಂಜೆಯಲ್ಲಿ ಮುಸ್ಸಂಜೆಯ ಯವ್ವನವು ತುಂಬಿ ತುಳುಕಿ ಭೂಮಿಯನ್ನೇ ಸೋಗಿಸ
ುವಂತಿತ್ತು, ನಾಚಿಸುವಂತಿತ್ತು .ಮೊದಲ ಮಳೆಯನ್ನು ಸುಮ್ಮನೇ ನೋಡುತ್ತಾ ಕುಳಿತರೆ ಕಣ್ಣಿಗೆ ಇಂಪು ಹೊಟ್ಟೆಗೆ ಏನಾದರೂ ಬಿಸಿಬಿಸಿ ತಿಂದರೆ ಉತ್ತಮ ನೆನಪಿನ ಕಂಪು. ಬಿಸಿ ಬಿಸಿ ಚಹಾ ಚಪ್ಪರಿಸಿ ಕರಿದ ಖಾದ್ಯ ಪದಾರ್ಥವನ್ನು ಮೆಲುವಾಗ ಈ ಸಂತಸ ದುಪ್ಪಟ್ಟಾಗುತ್ತದೆ.
ಮಳೆ ಬಾಲ್ಯದ ನೆನಪನ್ನು ಎಲೆಗಳು ಚಿಗುರಿದಂತೆ ನನ್ನ ಮನದಲ್ಲಿ ಅಳಿದು ಉಳಿದ ನೆನಪುಗಳಿಗೆ ಮರು ಜೀವ ಕೊಟ್ಟು ನೆನಪನ್ನು ಮತ್ತೆ ಅರಳಿಸಿತು. ನೀರಲ್ಲಿ ಬಿಡುತ್ತಿದ್ದ ದೋಣಿ ಸಾಲಿನ ಮೋಜು ಆಟ ತುಂಟಾಟ ನೆನೆಪಿನ ಬುತ್ತಿಯಲ್ಲಿ ಹುಲುಸಾಗಿ ಬೆಳೆದು ನಿಂತಿದೆ.
ಬತ್ತು ಅರೆಜೀವದಿಂದ ನಿರಂತರ ಏಳು ಬೇಳಿನ ಹೋರಾಟ ಮಾಡುತ್ತಿದ್ದ ನದಿಯು ಮೈ ತುಂಬಿ ಹರಿಯುವುದ ನೋಡಲು ಕಣ್ಣಿಗೆ ಹಬ್ಬ.
ಒಮ್ಮೆ ಜೋರಾಗಿ ಮಳೆ ಸುರಿದು ಬಿಡ್ಲಿ ಶಾಲೆಗೆ ಕಲೆಕ್ಟರ್ ಸಾಹೇಬರು ರಜೆ ಕೊಡುತ್ತಾರೆ. ಬಾಲ್ಯದಲ್ಲಿ ಈ ಆಸೆ ಆಗಾಗ ಜನಿಸುತ್ತಿತ್ತು. ರಜೆ ಸಿಕ್ಕರೆ ಮಳೆಯೇ ಇರುತ್ತಿರಲ್ಲಿಲ್ಲ .
ಆದ್ರೆ ಈ ನೆನಪಿಗೆ ಇನ್ನೂ ಪುಷ್ಟಿ ನೀಡುವ ಘಟನೆ ನಡೆಯುತ್ತಿತ್ತು.ಒಡೆದ ಹಂಚಿಂದ ಬರುವ ನೀರಿನಿಂದ ನಿದ್ರೆಯೇ ಮಾಯವಾಗಿ ಬಿಡುತ್ತಿತ್ತು. ರಾತ್ರಿಯಲ್ಲಿ ನೀರು ಎಲ್ಲಿಂದ ಬರುತ್ತದೆಯೋ ಎಂಬುದನ್ನು ಕಂಡುಹಿಡಿಯಲು ಸುಸ್ತಾಗಿ ಬಿಡುತ್ತಿದ್ದೆ. ಇದರ ಮೂಲವನ್ನು ಹುಡುಕುವುದರ ಒಳಗೆ ರಾತ್ರಿಯೇ ಕಳೆದು ಹೋಗುತ್ತಿತ್ತು. ಇದಕ್ಕೆ ಕಾರಣ ಮಾವಿನ ಮರದ ಮಾವಿನ ಕಾಯಿ ತಿಳಿದಾಗ ಸಿಟ್ಟು ಬರುತ್ತಿತ್ತು .ಆದರೂ ಅದನ್ನು ಕಡೆಯುವಂತಿರಲಿಲ್ಲ .
ಹೀಗೆ ಒಂದಾದ ಮೇಲೆ ಒಂದರಂತೆ ನೆನಪುಗಳು ಸ್ಪರ್ಶಿಸಿದಕ್ಕೆ ಧನ್ಯವಾದ ಮಳೆಯೇ. ಇಳೆ ತಂಪೆರದಂತೆ ತನುವ ನೆನಪಿನ ಅಂಗಳವನ್ನು ಕೂಡ ತಂಪೆರೆದೆ .