STORYMIRROR

Gireesh pm Giree

Abstract Comedy Drama

3  

Gireesh pm Giree

Abstract Comedy Drama

ಜೀವನ

ಜೀವನ

1 min
263


ಹೊಸ ವರ್ಷ ಬರುತ್ತಿದೆ, ಈ ವರ್ಷ ಹಳೆಯದಾಗುತ್ತಿದೆ, ತೆರೆಮರೆಗೆ ಸರಿಯುತ್ತಿದೆ. ಆ ಸೆಕೆಂಡ್, ನಿಮಿಷ, ಗಂಟೆ, ದಿನ, ತಿಂಗಳುಗಳು ಕಳೆದುಹೋದದ್ದೇ ತಿಳಿಯಲಿಲ್ಲ. ನಿಜವೆಂದರೆ ಅವುಗಳು ಇನ್ನೆಂದೂ ಮರಳಿ ಬಾರವು… ಆದರೆ ಅವುಗಳು ಬಿಟ್ಟುಹೋದ ಸಿಹಿ-ಕಹಿ ನೆನಪುಗಳು ಯಾವತ್ತಿಗೂ ಶಾಶ್ವತ. ಇಂತಹ ಕ್ಷಣಗಳಲ್ಲಿ ಬೇಡವೆಂದರೂ ಕಾಡುವುದು 2022 ರಲ್ಲಿ ಮುಗಿದುಹೋದ ನನ್ನ ಡಿಗ್ರೀ ಜೀವನ! 


ಮೂರು ವರ್ಷದ ನನ್ನ ಡಿಗ್ರಿ ಪಯಣ ಅಂತೂ ದಡ ಸೇರಿತು. ಪದವಿ ಎನ್ನುವ ಕನಸಿನ ಪಟ್ಟವನ್ನು ಧರಿಸುವ ಖುಷಿ ಒಂದಡೆಯಾದರೆ, ಕಾಲೇಜಿಗೆ ʼಹಳೆ ವಿದ್ಯಾರ್ಥಿʼಗಳಾದೆವೆಂಬ ನೋವು ಮತ್ತೊಂದೆಡೆ. ತರಗತಿಯ ಕಿಟಕಿಯಿಂದ ಬರುವ ಮಧುರ ತಂಗಾಳಿಯ ಹಾಜರಿಗೆ ಆಕಳಿಸುವ ಬಾಯಿ. ಬೇಕೋ ಬೇಡವೋ ಎಂಬಂತೆ ತಿರುಗುವ ಫ್ಯಾನು, ಕರಿಹಲಗೆಯ ಮೂಲೆಯಲ್ಲಿ ತೇಲುವ ಶುಭನುಡಿ. ನನ್ನ ಭಾರ ಹೊರುವ ಬೆಂಚು. ಚಿತ್ರಲಿಪಿಯನ್ನು ನೆನಪಿಸುವಂತಹ ಡೆಸ್ಕ್ ನಲ್ಲಿ ಪರಿಪರಿಯ ಕಲೆ. ಸದಾ ಪ್ರೀತಿಯಿಂದ ವಿದ್ಯಾಧಾರೆಯೆರೆವ ಗುರುಗಳು. ಸಕ್ಕರೆ ಮನಸ್ಸಿನ ಅಕ್ಕರೆಯ ಗೆಳೆಯರು. ಕ್ಯಾರಿ ಡೋರ್ ನಲ್ಲಿ ನಿಂತು ಅತ್ತಿಂದಿದ್ದ ಹೋಗುವ ಬಣ್ಣದ ಚಿಟ್ಟೆಗಳು. ಅಬ್ಬಾ! ಎಂತಾ ರಸ ನಿಮಿಷ…


ಮೂರು ವರ್ಷ ಶಿಸ್ತಿನ ಪಾಠ ಬೋಧಿಸಿದ ಎನ್ ಸಿ ಸಿಯನ್ನು ಬಿಡಲು ಸಾಧ್ಯವೇ… ಅಲ್ಲಿ ಸಿಕ್ಕ ಅನುಭವ ನನ್ನನು ಒಬ್ಬ ಉತ್ತಮ ಮಾತುಗರನ್ನಾಗಿ , ನಾಯಕನನ್ನಾಗಿಮಾಡುವ ಜೊತೆಗೆ, ದೇಶದ ಮೇಲಿನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು. ಸೈನಿಕರ ಜೀವನ ತುಂಬಾನೇ ಹತ್ತಿರದಿಂದ ನೋಡುವ ಸೌಭಾಗ್ಯ ನನ್ನದಾಯಿತು. ಹಳೆ ವಿದ್ಯಾರ್ಥಿಗಳೆಂಬ ಪಟ್ಟದ ಜೊತೆ ಎಕ್ಸ್ ಎನ್ ಸಿ ಸಿ ಕೆಡೆಟ್ ಎಂಬ ಬಿರುದು ನನ್ನ ಪಾಲಿಗೆ ಈ ವರ್ಷ ಒದಗಿತು.


ಡಿಗ್ರಿ ಪಯಣ ಬರೀ ಪುಸ್ತಕಗಳ ಜೊತೆಗಿನ ಪ್ರಯಾಣವಾಗಿರಲಿಲ್ಲ. ಅದೆಷ್ಟು ಜೀವನ ಪಾಠಗಳನ್ನು ಹೇಳಿಕೊಟ್ಟಿದೆ ಇದು. ಲೇಖನ, ವರದಿಯೆಂದರೆ ಗೊತ್ತಿಲ್ಲದ ನನ್ನಂತಹ ಸೋಮಾರಿಯ ಕೈಯಲ್ಲಿ ಲೇಖನಿ ಹಿಡಿಸಿದ್ದು ಇದೇ ಕಾಲೇಜು. ಉತ್ತಮ ಓದುಗನನ್ನಾಗಿ, ನಾಯಕತ್ವ ಗುಣ ಚಿಗುರಿಸಿದ ವಿದ್ಯಾ ದೇಗುಲವಿದು. ಹಸಿದ ಹೊಟ್ಟೆಯ ತಣಿಸಿ ಓದಿಗೆ ಸದಾ ನೆರಳಾಗಿ ಬೆಳಕಾಗಿ ನಿಂತ ಇಲ್ಲಿನ ಅಧ್ಯಾಪಕ ವೃಂದದವರಿಗೆ ನಾನೆಂದೂ ಚಿರಋಣಿ. 


ಹೊಸತನ ಯಾರಿಗೆ ಬೇಡ… ಬರುವ ಹೊಸ ವರ್ಷ ಹೊಸ ಹರುಷವ ತರಲಿ. ನೋವು-ನಲಿವು, ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸೋಣ. ಸಿಹಿ ನೆನಪುಗಳೇ ಹೆಚ್ಚಿರುವಂತೆ ನೋಡಿಕೊಳ್ಳೋಣ…



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract