Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

murali nath

Classics Inspirational Others

3  

murali nath

Classics Inspirational Others

ನ್ಯಾಯ

ನ್ಯಾಯ

2 mins
11ಒಮ್ಮೆ ನ್ಯಾಯಾಲಯದಲ್ಲಿ ಐದು ವರ್ಷದ ಹಿಂದೆ ನಡೆದ ಒಬ್ಬ ಭಾರೀ ಶ್ರಿಮಂತನ ಕೊಲೆ ಕೇಸ್ ನ ಅಂತಿಮ ಘಟ್ಟದ ಕುತೂಹಲಕಾರಿ ತಿರುವು .ಅಲ್ಲಿ ಒಬ್ಬ ಖ್ಯಾತ ಹಾಸ್ಯ ನಟರೊಬ್ಬರ ಆಗಮನ ವಾಗಿದೆ. ಅವರು ಬಹಳ ಮುಖ್ಯ ಸಾಕ್ಷಿ ಎಂದು ಪರಿಗಣಿಸಲಾಗಿದೆ. ಕಾರಣ ಇವರೊಬ್ಬರೇ ಅಲ್ಲಿ ಕೊಲೆ ನಡೆದಾಗ ಕಣ್ಣಿಂದ ನೋಡಿದವರು. ಇವರಿಗೆ ನ್ಯಾಯಾಲಯಕ್ಕೆ ಇಂದು ಬರಬಾರದೆಂದು ಹೇಳಿ ಹಾಗೂ ಬಂದು ಸಾಕ್ಷಿ ಹೇಳಿದರೆ ಹೆಂಡತಿ ಮಗಳನ್ನು ಮುಗಿಸುವುದುದಾಗಿ ಬೆದರಿಕೆಯ ಕರೆಗಳು ಬಂದಿದ್ದರೂ , ನ್ಯಾಯದ ಪರ ಸಾಕ್ಷಿ ಹೇಳಲೇ ಬೇಕೆಂಬ ಧೃಡ ನಿಲುವು ಇವರದಾಗಿತ್ತು. ಕೊಲೆ ಮಾಡಿದ್ದವರ ಪರವಾಗಿ ವಾದ ಮಾಡುವ ಹೆಸರಾಂತ ಕ್ರಿಮಿನಲ್ ಲಾಯರ್ ಈಗಾಗಲೇ ಒಂದು ಕೋಟಿ ಹಣ ಪಡೆದು ಗೆಲ್ಲಿಸಿಕೊಡುವುದಾಗಿ ಮಾತು ಕೊಟ್ಟಿದ್ದಾರೆ.


ಈಗ ನಟರನ್ನು ಕಟಕಟೆಗೆ ಕರೆಸಿದ್ದಾಯ್ತು. ಲಾಯರ್ ನ ಮೊದಲ ಪ್ರಶ್ನೆ . ನಿಮ್ಮ ಉದ್ಯೋಗ ? .ಅವರ ಉತ್ತರ ನಾನೊಬ್ಬ ನಟ. ಮರುಪ್ರಶ್ನೆ. ಅಂದರೆ ನೀವು ನಿಮ್ಮ ನಿರ್ದೇಶಕ ಹೇಳಿಕೊಟ್ಟ ಹಾಗೆ ನಟಿಸುತ್ತೀರಿ ನಿಮ್ಮ ಸ್ವಂತದ್ದು ಏನೂ ಇಲ್ಲ. ಅಂದಮೇಲೆ ಮೈ ಲಾರ್ಡ್ ಕಣ್ಣಿಂದ ನೋಡಿರುವುದಾಗಿ ಹೇಳುವ ಇವರ ನಟನೆಯನ್ನು ಈಗ ನೀವೂ ನೋಡಬಹುದು, ಎಂದು ಹೇಳಿ ಕುಳಿತುಬಿಟ್ಟರು ಲಾಯರ್. ಕೋರ್ಟ್ ಹಾಲಿನಲ್ಲಿ ಕಿಕ್ಕಿರಿದು ತುಂಬಿದ್ದ ಜನ ತಿಳಿದರು ಲಾಯರ್ ಗೆದ್ದ. ಕೇಸ್ ಮುಗೀತು , ನ್ಯಾಯ ಸತ್ತುಹೋಯಿತು ಅಂತ. ಈಗ ನಟ ಹೇಳಿದ , ಸ್ವಾಮಿ ಮೊದಲು ನನ್ನ ಬಗ್ಗೆ ಹೇಳಿ ಕೊಳ್ಳಬೇಕು . ದಯವಿಟ್ಟು ಅವಕಾಶ ಮಾಡಿಕೊಡಿ . ನನ್ನ ವೃತ್ತಿಯ ಬಗ್ಗೆ ನನಗೆ ಅಪಾರ ಗೌರವ ಇದೆ . ಮೊದಲಿಗೆ ನಾನು ಒಬ್ಬ ಲಾಯರ್ ಮಗ. ನಾನು ಮೊದಲು ಅವರ ಬಗ್ಗೆ ಹೇಳಬೇಕು. ಅವರ ವೃತ್ತಿ ಸುಳ್ಳನ್ನು ಸತ್ಯವೆಂದು ಮತ್ತು ಸತ್ಯವನ್ನು ಸುಳ್ಳೆಂದು ಸಾಬೀತು ಮಾಡುವುದು. ಅದು ಹಣದ ಪ್ರಭಾವ ಮೇಲೆ ಅವಲಂಬಿತವಾಗಿರುತ್ತದೆ. ಅದು ಅವರ ವೃತ್ತಿ .ಅದೇ ಅನ್ಯಾಯದ ಹಣದಲ್ಲಿ ನಾವೆಲ್ಲ ಬೆಳೆದ ಕಾರಣ. ನಾನು ಅವರ ವೃತ್ತಿಯನ್ನು ಬೇಡವೆಂದು ನಟನೆಗೆ ಬಂದವನು ಎಂದಾಗ, ನ್ಯಾಯಾಧೀಶರು ಸಹಾ ಹಿಂದೆ ವಕೀಲರಾಗಿದ್ದವರೇ ಆದ್ದರಿಂದ ಅವರಿಗೆ ಕಸಿವಿಸಿ ಆಯ್ತು. ಆದರೆ ಏನೂ ಮಾಡುವಂತಿಲ್ಲ. ನಟ ಮುಂದುವರೆಸಿ ಹೇಳಿದರು ನನ್ನ ನಟನೆ ಕ್ಯಾಮರಾ ಮುಂದೆ ಮಾತ್ರ. ನನ್ನ ಉದ್ದೇಶ ಮನರಂಜನೆ. ಆದರೆ ವಕೀಲರ ವೃತ್ತಿಸುಳ್ಳನ್ನ ಸತ್ಯವೆಂದು ಸಾಬೀತು ಮಾಡುವ ಹಿಂದೆ ನ್ಯಾಯದ ಜೊತೆಗೆ ಎಷ್ಟೋ ಮನ ಮತ್ತು ಮನೆಗಳು ಸಮಾಧಿಯಾಗುತ್ತೆ ಅಂದಾಗ, ಜಡ್ಜ್ ಆಯ್ತು ನೀವು ಈಗ ಹೇಳುವ ಸಾಕ್ಷಿ ಬಹಳ ಮುಖ್ಯ . ಯಾವ ಭಯವೂ ಇಲ್ಲದೆ ನೀವು ಕಂಡಿದ್ದು ಕಂಡ ಹಾಗೆ ಹೇಳಿ ಎಂದರು. ಕೇಸ್ ಆ ನಟ ಎಣಿಸಿದಂತೆ ಅವರ ಕಡೆಯೆ ಆಯ್ತು.ಎಲ್ಲರೂ ನ್ಯಾಯಕ್ಕೆ ಜಯ ವೆಂದರು.Rate this content
Log in

More kannada story from murali nath

Similar kannada story from Classics