Vijaya Bharathi

Abstract Tragedy Action

2  

Vijaya Bharathi

Abstract Tragedy Action

ನೂಪುರ್

ನೂಪುರ್

2 mins
123


"ನೂಪುರ್" ಚಿತ್ರ ದ ಹೊರಾಂಗಣ ಚಿತ್ರೀಕರಣ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ಏರ್ಪಾಡಗಿತ್ತು. ನಿರ್ದೇಶಕ ಬಾಬು ಒಂದು ಕಡೆ ಕುಳಿತು ಡೈಲಾಗ್ ಸ್ಕ್ರಿಪ್ಟ್ ಚೆಕ್ ಮಾಡುತ್ತಿದ್ದರು. ಅವನ ಚಿತ್ರಕ್ಕೆ ಒಬ್ಬ ಕಥಾನಾಯಕಿಯನ್ನು ಹುಡುಕುತ್ತಿದ್ದ. ಆ ಚಿತ್ರದ ಕಥಾನಾಯಕಿಯದು ದುರಂತ ಪಾತ್ರ. ಮುಂದಿನ ತಿಂಗಳು ಚಿತ್ರದ ಕ್ಲೈಮಾಕ್ಸ್ ನ ಶೂಟಿಂಗ್ ನಡೆಯಬೇಕಾಗಿತ್ತು. ಹೀಗಾಗಿ ನಿರ್ದೇಶಕ ಬಾಬು ತನ್ನ ಕಲ್ಪನೆಯ ದುರಂತ ನಾಯಕಿಯ ಪಾತ್ರವನ್ನು ಸಹ ನಿರ್ದೇಶಕನ ಜೊತೆ ಚರ್ಚಿಸುತ್ತಿದ್ದ.ಚಿತ್ರದಲ್ಲಿ ನಾಯಕನ ಎಂಟ್ರಿ ಇಂದು ಪ್ರಾರಂಭವಾಗಬೇಕು. ಆದರೆ ಇನ್ನೂ ನಾಯಕ ನಟ ನವರಂಗ್ ಬಂದಿರದೇ, ನಿರ್ದೇಶಕನ ಒತ್ತಡ ಹೆಚ್ಚಾಗಿತ್ತು. ಒಂದು ಮರದ ನೆರಳಿನಲ್ಲಿ ಕುಳಿತು ಅವನು ತನ್ನ ಸಹನಿರ್ದೇಶಕ ಕಿಶನ್ ಜೊತೆ ತನ್ನ ಕಲ್ಪನೆಯ ನಾಯಕಿಯ ಬಗ್ಗೆ ವಿವರಣೆ ನೀಡುತ್ತಾ ಹೋದ.


" ನೂಪುರ್ ಚಿತ್ರದ ನಾಯಕಿ, ಅತ್ಯಂತ ಸಾಧಾರಣ ರೂಪದವಳಾಗಿದ್ದು, ಕೇವಲ ಮನೆಗೆಲಸಕ್ಕೆ ಮಾತ್ರ ಲಾಯಕ್ ಆಗಿರಬೇಕು. ತನ್ನ ಗಂಡನ ಅಸಮಾಧಾನ ಅಸಹನೆಗೆ ಗುರಿಯಾಗುತ್ತಾ, ಮೂರು ಹೊತ್ತು ಅಳು ಮುಂಜಿಯಾಗಿರಬೇಕು. ,ತಲೆ ತುಂಬಾ ಎಣ್ಣೆ ಬಳಿದುಕೊಂಡು, ಮಧ್ಯಕ್ಕೆ ಬೈತಲೆ ತೆಗೆದು ಹಳೆಕಾಲದ ಹೆರಳು ಹಾಕಿಕೊಂಡು ಕೈತುಂಬಾ ಹಸಿರು ಗಾಜಿನ ಬಳೆ ತೊಟ್ಟುಕೊಂಡು, ಹಣೆಗೆ ಕಾಸಿನ ಕುಂಕುಮ ಇಟ್ಟು ,ಅಪ್ಪಟ ಐವತ್ತರ ದಶಕದ ಗೃಹಿಣಿಯಂತಿರಬೇಕು. ತನ್ನ ಪತಿಯನ್ನು ದೇವರೆಂದು ಭಾವಿಸುತ್ತಾ, ಹೆಜ್ಜೆ ಹೆಜ್ಜೆಗೂ ಹೆದರುತ್ತಾ ಅವನು ಮಾಡುವ ಯಾವ ಕೆಲಸಕ್ಕೂ ಅಡ್ಡ ಬರದೆ ಅಪ್ಪಟ ದಾಸಿಯಂತಿರಬೇಕು. ತುಂಬಾ ಶೋಕಿಲಾಲ ನಾದ ಪತಿ, ಬೇರೊಂದು ಹೆಂಗಸನ್ನು ಅವಳಿಗೆ ಸವತಿಯಾಗಿ ತಂದು, ಅವಳೆದುರೇ ಚಕ್ಕಂದವಾಡುತ್ತಾ ಕಾಲ ಕಳೆದರೂ ಅವನನ್ನು ಎದುರುಹಾಕಿಕೊಳ್ಳ ಲಾಗದೇ, ತನ್ನ ಕಣ್ಣಿನಲ್ಲೇ ನೋವನ್ನು ತಿರಸ್ಕಾರಗಳನ್ನು ತೋರಿಸುತ್ತಾ ಹೋಗಬೇಕು. ಗಂಡನ ಎಲ್ಲಾ ದುಶ್ಚಟಗಳನ್ನೂ ಚಕಾರವೆತ್ತದೆ ಸಹಿಸಿಕೊಂಡು ಹೋಗುವ ಅವಳಿಗೆ, ಕಡೆಗೆ ಒಂದು ದಿನ ತನ್ನ ಮಾನಕ್ಕೇ ಧಕ್ಕೆ ಬರುವ ಸಂದರ್ಭ ಬಂದಾಗ,ತುಂಬಾ ಹತಾಶಳಾಗಿ ಬೇರೆ ಯಾವ ದಾರಿಯೂ ಕಾಣದೆ , ಆತ್ಮಹತ್ಯೆ ಮಾಡಿಕೊಳ್ಳಲು, ಈ ಬೆಟ್ಟದ ತುತ್ತ ತುದಿಗೆ ಏರಿ ಹೋಗಿ,ಒಂದರಕ್ಷಣ ನಿಂತು ಅಲ್ಲಿಂದ ಧುಮಕಬೇಕು. "


ಚಿತ್ರ ನಿರ್ದೇಶಕ ತನ್ನ ಸಹ ನಿರ್ದೇಶಕನೊಂದಿಗೆ ತನ್ನ ಕಲ್ಪನೆಯ ದುರಂತ ನಾಯಕಿ ಯ ಚಿತ್ರಗಳನ್ನು ವಿವರಿಸಿ, ಆದಷ್ಟು ಬೇಗ ಈಗ ಬೇಡಿಕೆಯಲ್ಲಿರುವ ನಟಿ ಯರನ್ನು ಸಂಪರ್ಕಿಸುವಂತೆ ಹೇಳಿದ. ಅಂತೂ ಇಂತೂ ನಿರ್ದೇಶಕನ ಕಲ್ಪನೆಯ ದುರಂತ ನಾಯಕಿಯ ಆನ್ವೇಷಣೆ ಮಾಡುವಷ್ಟರಲ್ಲಿ, ಸಹನಿರ್ದೇಶಕ ಸುಸ್ತಾಗಿ ಹೋಗಿದ್ದ. ನೂಪುರ್ ಚಿತ್ರದ ಚಿತ್ರೀಕರಣ ಮುಂದುವರೆಯಿತು. ಆ ಚಿತ್ರದ ದುರಂತ ನಾಯಕಿಯಾಗಿ ನೂಪುರ್ ಹೆಸರಿನ ನಟಿಯೇ ಸಿಕ್ಕಿದ್ದಳು. ಸಾಧಾರಣ ರೂಪಿನ ನೂಪುರ್ ನೋಡಲು ತುಂಬಾ ಆಕರ್ಷಕವಾಗಿದ್ದಳು. ಅವಳ ಸ್ಕ್ರೀನ್ ಟೆಸ್ಟಿಂಗ್ ಮುಗಿದು ನಿರ್ದೇಶಕನ ಕೈಯಲ್ಲಿ ಒ.ಕೆ.ನೂ ಆಯಿತು. ನೂಪುರ್ ನಎಂಟ್ರಿ ಚಿತ್ರದ ಅರ್ಧದಿಂದ ಶುರುವಾಯಿತು. ಅವಳು ತುಂಬಾ ಬೇಡಿಕೆಯ ನಟಿಯಾಗಿದ್ದರಿಂದ ಅವಳು ಕೇಳಿದಷ್ಟು ಸಂಭಾವನೆ ಲಕ್ಷಲಕ್ಷದಲ್ಲಿ ಕೊಡಲು ಒಪ್ಪಿಗೆಯೂ ಆಯಿತು.


ನೂಪುರ್ ಚಿತ್ರದ ಚಿತ್ರೀಕರಣ ಮುಂದುವರೆದು, ಕೊನೆಯ ಹಂತಕ್ಕೂ ತಲುಪಿತು. ಮತ್ತೊಮ್ಮೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟದ ಮೇಲೆ ನಡೆಯಲು ಸೆಟ್ ಸಿದ್ದವಾಗಿತ್ತು . ಅಂದು ಕೊನೆಯ ಸೀನ್ ಚಿತ್ರೀಕರಣ. ನಾಯಕಿ ನೂಪುರ್ ಒಂದು ದೊಡ್ಡ ಬಂಡೆಯ ಮೇಲೆ ನಿಂತು ಮುಂದಕ್ಕೆ ಬೀಳುವಂತೆ ನಟನೆ ಮಾಡಬೇಕಿತ್ತು. ಅವಳ ರಕ್ಷಣೆಗೆ ಬೇರೆ ಕಡೆಯಿಂದ ಎಲ್ಲವೂ ಸಿದ್ದವಾಗಿತ್ತು. ಇನ್ನೇನು ನೂಪುರ್ ಕೊನೆಯ ಸೀನ್ ನಲ್ಲಿ ಕೆಳಗೆ ಧುಮುಕುವ ಚಿತ್ರೀಕರಣ ಮುಗಿಯುವ ಹೊತ್ತಿಗೆ ಸರಿಯಾಗಿ, ನಾಯಕಿ ನೂಪುರ್ ಗೆ ಇದ್ದಕ್ಕಿದ್ದಂತೆ ತಲೆ ಸುತ್ತಿದಂತಾಗಿ, ಕ್ಯಾಮರಾಮ್ಯನ್ ರೆಡಿ ಎನ್ನುವ ಮೊದಲೇ ಕಾಲುಜಾರಿ ಆ ಕಡೆ ಆಳವಾದ ಕಂದರಕ್ಕೆ ಉರುಳಿಬಿಟ್ಟಳು. ನೂರಾರು ಅಡಿ ಆಳವಿರುವ ಕಮರಿಯೊಳಗೆ ಉರುಳಿದ ನೂಪುರ್ ದೇಹವನ್ನು ಪತ್ತೆ ಮಾಡಲೂ ಆಗಲಿಲ್ಲ. ಸಿನಿಮಾದಲ್ಲಿ ದುರಂತ ನಾಯಕಿ ಯ ಪಾತ್ರ ಮಾಡಲು ಹೊರಟ ನೂಪುರ್ ,ತನ್ನ ನಿಜ ಜೀವನದಲ್ಲೂ ದುರಂತ ನಾಯಕಿ ಯಾದದ್ದು ದೊಡ್ಡ ದುರಂತವೇ ಸರಿ.


Rate this content
Log in

Similar kannada story from Abstract