Shridevi Patil

Romance Inspirational Others

4  

Shridevi Patil

Romance Inspirational Others

ನನ್ನ ನಿನ್ನ ನಡುವೆ. ಭಾಗ 3.

ನನ್ನ ನಿನ್ನ ನಡುವೆ. ಭಾಗ 3.

3 mins
497


ಗೌರವ್ ರಾಶಿ ಜೊತೆಗೆ ತುಂಬಾ ಹೊತ್ತು ಮಾತನಾಡಿ , ಸಮಾಧಾನ ಮಾಡಿ ಜೊತೆಗೆ ಬೈಯ್ದು ಬುದ್ದಿ ಹೇಳಿ ಮನೆಗೆ ಹೋದನು. ಆತ ಮನೆಗೆ ಹೋದ ನಂತರ ರಾಶಿಯ ಹತ್ತಿರ ರಾಶಿಯ ಅಪ್ಪ , ಅಣ್ಣ , ಹಾಗೂ ಅಮ್ಮ ಬಂದರು.


ಚಿಕ್ಕಂದಿನಿಂದಲೇ ಗೌರವ್ ನನ್ನು ನೋಡುತ್ತಿದ್ದೇವೆ , ಅದೆಷ್ಟು ಒಳ್ಳೆಯ ಸ್ವಭಾವದ ಹುಡುಗ , ಅದೆಂತಹ ತಿಳುವಳಿಕೆ , ನನ್ನ ಸ್ನೇಹಿತನ ಮಗ ಅಂತ ಹೇಳಿಕೊಳ್ಳಲು ತುಂಬಾ ಖುಷಿಯಾಗುತ್ತೆ. ಬಾಲ್ಯದಿಂದ ಇಲ್ಲಿಯವರೆಗೂ ರವಿ ಜೊತೆ ಆಗ್ಲಿ , ರಾಶಿ ಜೊತೆಯಾಗಲಿ ಒಮ್ಮೆಯೂ ಸಣ್ಣ ಜಗಳ ಕೂಡ ಮಾಡದ ಹುಡುಗ , ಈ ನನ್ನ ಮಕ್ಕಳೇ ಆಗಾಗ ಕಿತ್ತಾಡ್ತಾ ಇರ್ತಾರೆ , ಗೌರವ್ ನನ್ನು ನೋಡಿ ಎಲ್ಲ ಮಕ್ಕಳೂ ಕಲಿಬೇಕು ಅಂತ ನಾನು ಆಗಾಗ ಹೇಳ್ತಾನೆ ಇರ್ತಿದ್ದೆ . ನಿಜವಾಗಿಯೂ ಆತನನ್ನು ನೋಡಿ ಕಲಿಯುವುದು ಸಾಕಷ್ಟು ಇದೆ ಅಂತ ರಾಶಿಯ ಅಪ್ಪ ಹೇಳಿದರು.


ಆಗ ಅವಳ ಅಮ್ಮ ಕೂಡ ಹೌದು ರಿ , ಗೌರವ್ ನನ್ನು ನೋಡ್ತಿದ್ರೆ ತುಂಬಾ ಖುಷಿಯಾಗುತ್ತೇ , ಮಕ್ಕಳು ಅಂದ್ರೆ ಗೌರವ್ ತರ ಇರಬೇಕು ಅಂತ ಹೇಳಿದರು.


ಆ ಮಾತುಗಳನ್ನು ಕೇಳಿಸಿಕೊಂಡ ರಾಶಿ ಮನಸ್ಸಿನಲ್ಲಿಯೇ " ಹೌದು , ಅದಕ್ಕೆ ತಾನೇ ನಾನು ಇವತ್ತು ಆಸ್ಪತ್ರೆಯಲ್ಲಿ ಇದ್ದಿದ್ದು , ಎಲ್ಲಿ ಅವನನ್ನು ಕಳೆದುಕೊಂಡು ಬಿಡ್ತಿನೋ ಅನ್ನೋ ಭಯ ನನ್ನನ್ನು ವಿಷ ಕುಡಿಯೋ ಹಾಗೆ ಮಾಡಿ ಬಿಡ್ತು , ನನ್ನ ಆತ್ಮೀಯ ಗೆಳೆಯ ಆಗಿರುವ ಗೌರವ್ ನನ್ನ ಬಾಲ ಸಂಗಾತಿ ಆದ್ರೆ ಎಷ್ಟು ಚೆನ್ನಾಗಿರುತ್ತೆ , ಆದ್ರೆ ಗೌರವ್ ಮುಂದೆ ನನ್ನ ಎಲ್ಲ ಭಾವನೆಗಳನ್ನು ಹೇಳಿಕೊಳ್ಳಲು ಸಂಕೋಚ , ಮುಜುಗರ ಆಗ್ತಿದೆ. ಜೊತೆಗೆ ಧೈರ್ಯವೂ ಇಲ್ಲ , ಪ್ರೀತಿಯ ವಿಷಯ ಸ್ನೇಹದ ಕಟ್ಟೆಯನ್ನು ಒಡೆಯಬಾರದು ಎಂದು ಹೆದರಿ , ಇವತ್ತಿನ ಈ ಪರಿಸ್ಥಿತಿ ನನ್ನದಾಯಿತು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದಳು."


ಅದೇ ಹೊತ್ತಿಗೆ ರವಿ ಅಪ್ಪನಿಗೆ , " ಅಪ್ಪಾ , ನಾವ್ಯಾಕೆ ವರ್ಮಾ ಅಂಕಲ್ ಹತ್ತಿರ ನಮ್ಮ ರಾಶಿ ಹಾಗೂ ಗೌರವ್ ಮದುವೆ ಬಗ್ಗೆ ಪ್ರಸ್ತಾಪ ಮಾಡಬಾರದು , ಹೇಗಿದ್ರೂ ಹುಡುಗ ಒಳ್ಳೆಯವನು , ಸಾಲದ್ದಕ್ಕೆ ಅವರ ಅಪ್ಪ ನಿಮ್ಮ ಖಾಸಾ ದೋಸ್ತ್ ಬೇರೆ , ಆಸ್ತಿಯೂ ಇದೆ , ಇನ್ನೇನು ಬೇಕು ಹೇಳಿ ನಮ್ಮ ರಾಶಿಗೆ ಆ ಗೌರವ ಗಿಂತ ಒಳ್ಳೆಯ ಹುಡುಗನನ್ನು ಹುದುಕುವುದಕ್ಕೆ ಆದೀತಾ" ಎಂದನು.


ಆಸ್ಪತ್ರೆಯಿಂದ ಮನೆಗೆ ಹೋದ ಮೇಲೆ ಇದರ ಬಗ್ಗೆ ಮಾತಾಡೋಣ , ಇಲ್ಲಿ ಈ ವಿಷಯ ಪ್ರಸ್ತಾಪ ಮಾಡುವುದು ಬೇಡ ಎಂದು ರಾಶಿಯ ಅಪ್ಪ ಸುಮ್ಮನಾದರು.


ರಾಶಿ ಹುಷಾರಾಗಿ ಮನೆಗೆ ಡಿಸ್ಚಾರ್ಜ್ ಆಗಿ ಬಂದಳು.


ಸ್ವಲ್ಪ ದಿನಗಳ ನಂತರ.....



ಗೌರವ್ ಅಪ್ಪ ವರ್ಮಾ ಅವರು ರಾಶಿ ಮನೆಗೆ ಬಂದಿದ್ದರು. ಎಲ್ಲರೂ ಊಟ ಮಾಡಿ ತಾಂಬೂಲ ಹಾಕ್ತಾ ಹೊರಗೆ ಕುಳಿತಿರುವಾಗ ಹಾಗೆ ಮದುವೆ ವಿಷಯ ಬಂದಿತು . ಆಗ ಗೌರವ್ ಅಪ್ಪ ಇನ್ನೇನು ರಾಶಿದು ಡಿಗ್ರಿ ಮುಗಿತಲ್ಲ , ವರಾನ್ವೇಷಣೆ ಶುರುನಾ ಅಂದ್ರು.


ಆಗ ಗೌರವ್ , ಅಯ್ಯೋ ಆ ಪಾಪಿ ಯಾರಪ್ಪ , ಇವಳನ್ನ ಕಟ್ಟಿಕೊಂಡವನ ದೇವರೇ ಕಾಪಾಡಬೇಕು ಎಂದು ಗೇಲಿ ಮಾಡಿದನು.


ರಾಶಿಯ ಅಪ್ಪ ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ನಾವ್ಯಾಕೆ ಊರು ಸುತ್ತಬೇಕು ಅಂದ್ರು.


ಗೌರವ್ ಅಪ್ಪ: ಹೌದಾ ಯಾರಪ್ಪ ಅದು , ನನಗೆ ಗೊತ್ತಿಲ್ದಂಗೆ ಹುಡುಗನ್ನ ಆರಿಸಿ ಬಿಟ್ಟೆಯಾ ?


ರಾಶಿ ಅಪ್ಪ: ನಿನ್ನನ್ನು ಹೊರತು ಪಡಿಸಿ ನಾನೆನು ಕೆಲಸ ಮಾಡಿದಿನಿ ಗೆಳೆಯಾ? ಹುಡುಗ ಬೇರೆ ಯಾರೂ ಅಲ್ಲ , ನೀನು ನಿನ್ನ ಮಗ ಒಪ್ಪಿದರೆ ನಾವಿಬ್ಬರೂ ಗೆಳೆಯರಿಂದ ಬೀಗರಾಗಿ ಬಡ್ತಿ ಹೊಂದಬಹುದು ಅನ್ನುವುದು ನನ್ನ ವಿಚಾರ.


ಆಗ ಗೌರವ್ ಒಮ್ಮೆಲೇ ಎದ್ದವನೇ , ಪ್ಲೀಸ್ ಅಂಕಲ್ ನಮ್ಮ ಸ್ನೇಹದ ಮದ್ಯ ಆ ಪ್ರೀತಿ , ಮದುವೆ ಯಾವಾದನ್ನೂ ತರಬೇಡಿ , ನಾನು ರಾಶಿನಾ ಒಂದು ದಿನವೂ ಆ ಭಾವನೆಯಲ್ಲಿ ನೋಡಿಲ್ಲ. ಅವಳು ನನ್ನ ಬೆಸ್ಟ್ ಫ್ರೆಂಡು , ನನ್ನ ಮುಖ ನೋಡಿಕೊಳ್ಳುವ ಕನ್ನಡಿ ಅವಳು ಅಂತ ಹೇಳಿದನು.


ಪಾಪ ರಾಶಿ ಮನಸ್ಸಿನಲ್ಲಿ ಆಸೆಗಳಿದ್ದರೂ ಸಹ ಏನನ್ನು ಹೇಳಿಕೊಳ್ಳದೆ , ಹೌದಪ್ಪಾ ನಮ್ಮಿಬ್ಬರ ಸ್ನೇಹದ ಮದ್ಯ ಮದುವೆಯ ಪರದೆ ಬೇಡ ಎಂದಳು.


ಆದ್ರೆ ಗೌರವ್ ಅಪ್ಪ ಸಮಾಧಾನವಾಗಿ ಯೋಚಿಸಿ , ರಾಶಿ ಅಪ್ಪನಿಗೆ , ನೋಡೋ ನಿನ್ನ ವಿಚಾರ ನಂಗೆ ಹಿಡಿಸಿತು , ಇಷ್ಟೊಂದು ಚೆನ್ನಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರುವ ಸ್ನೇಹಿತರನ್ನು ಮದುವೆ ಮಾಡಿದರೆ ಮುಂದೆ ಇವರ ಜೀವನ ಅದ್ಭುತವಾಗಿರುತ್ತೆ ಎಂದನು.



ರಾಶಿ ಗೌರವ್ ಇಬ್ಬರನ್ನು ಕೂರಿಸಿಕೊಂಡು ಬುದ್ಧಿ ಹೇಳಿ ಮದುವೆಗೆ ಒಪ್ಪಿಸಿದರು. ಆದರೆ ಮದುವೆ ಮಾತ್ರ ಓದು ಮುಗಿದು ಕೆಲಸ ಸಿಕ್ಕ ಮೇಲೆ ಅಂತ ಒಪ್ಪಂದ ಮಾಡಿಕೊಂಡರು.



ಎರಡು ವರ್ಷಗಳ ನಂತರ..


ರಾಶಿ ಮತ್ತು ಗೌರವ್ ಮದುವೆ ನಡೆದು ಈಗ ಇಬ್ಬರು ಒಂದು ಚೆಂದದ ,ಸುಂದರ ಜೀವನ ಮಾಡುತ್ತಿದ್ದಾರೆ.


ಸ್ನೇಹವೆ ಆಗಲಿ , ಪ್ರೀತಿಯೇ ಆಗಲಿ , ಅಲ್ಲಿ ಅರ್ಥ ಮಾಡಿಕೊಳ್ಳುವ ಮನಸ್ಸು ಮುಖ್ಯ , ಇಬ್ಬರ ನಡುವೆ ನಂಬಿಕೆ ,ಪ್ರೀತಿ ,ಹೊಂದಾಣಿಕೆ ಮುಖ್ಯ. ಅಂದಾಗ ಜೀವನದ ಬಂಡಿ ಸರಾಗವಾಗಿ ಓಡುತ್ತದೆ.

*************************************


Rate this content
Log in

Similar kannada story from Romance