STORYMIRROR

Shridevi Patil

Romance Inspirational Others

4  

Shridevi Patil

Romance Inspirational Others

ನನ್ನ ನಿನ್ನ ನಡುವೆ .ಭಾಗ 2.

ನನ್ನ ನಿನ್ನ ನಡುವೆ .ಭಾಗ 2.

2 mins
454

ರಾಶಿ ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿದ ಕೂಡಲೇ ಗೌರವ್ ಆಸ್ಪತ್ರೆಗೆ ದೌಡಾಯಿಸಿದ. ವಾರ್ಡ್ ಗೆ ಶಿಫ್ಟ್ ಆದ ರಾಶಿ ಸುಸ್ತಾದವಳಂತೆ ಕಾಣುತ್ತಿದ್ದಳು. ಗೌರವ್ ನನ್ನು ನೋಡುತ್ತಲೇ ಅಳಲು ಶುರು ಮಾಡಿದಳು. ಮೊದಲೇ ಚೈಲ್ದೂಡ್ ಫ್ರೆಂಡ್. ಆತನಿಂದಾಗಿಯೇ ಆಕೆ ಆಸ್ಪತ್ರೆ ಸೇರಿದ್ದಳು. ಆದರೆ ಆಕೆ ಆ ಆವಾಂತರ ಮಾಡಿಕೊಳ್ಳುವ ಅವಶ್ಯಕತೆ ಇರಲೇ ಇಲ್ಲ. ಆದರೆ ಆಕೆಗೆ ಗೌರವ್ ತನ್ನ ಸ್ವತ್ತು ಎನ್ನುವ ಅಭಿಪ್ರಾಯ ಆಳವಾಗಿ ಬೇರೂರಿಬಿಟ್ಟಿದೆ.


ಆಗ ಗೌರವ್ ಸಮಾಧಾನವಾಗಿ ರಾಶಿಯ ಜೊತೆ ಮಾತಾಡಿದನು. ಏನೇ ರಾಶಿ , ನೀನು ತುಂಬಾ ಸ್ಟ್ರಾಂಗ್ ಗರ್ಲ್ ಅಂತಾ ಅನ್ಕೊಂಡಿದ್ದೆ , ಆದ್ರೆ ನೀನೋಡಿದ್ರೆ ಎಷ್ಟೊಂದು ವೀಕು ಅಂತಾ ತೋರಸಿಬಿಟ್ಟೆ , ಈ ನಿರ್ಧಾರ ಮಾಡೋ ಮುಂಚೆ ನಿನಗೆ ನಾವೆಲ್ಲ ನೆನಪಿಗೆ ಬರಲಿಲ್ವಾ? ನಮ್ಮನ್ನ ಬಿಡು , ನೋಡು ನಿನ್ನ ಅಪ್ಪ ಅಮ್ಮನ್ನ , ಪಾಪ ಹೇಗೆ ಗಾಬರಿಯಾಗಿದ್ದಾರೆ , ಅದೆಷ್ಟು ಹೆದರಿ , ಸಂಕಟ ಪಡ್ತಿದ್ದಾರೆ ನೋಡಲ್ಲಿ. ಈ ಹೆಜ್ಜೆ ಇಡುವ ಮುನ್ನ ಸ್ವಲ್ಪನಾದ್ರು ಯೋಚನೆ ಮಾಡ್ಬೇಕು ಅಂತ ಅನ್ನಿಸಲೇ ಇಲ್ವಾ? ದಯವಿಟ್ಟು ತಪ್ಪು ತಿಳಿಬೇಡ ರಾಶಿ , ಈ ಟೈಮಲ್ಲಿ ನಾನು ಹೀಗೆ ಹೇಳಬಾರ್ದು , ಆದ್ರೂ ನನಗ್ಯಾಕೋ ಸರಿ ಅನಿಸಲಿಲ್ಲ ಅದಕ್ಕೆ ಹೇಳ್ತಿದೀನಿ. ಬೋಲ್ಡ್ ಹುಡುಗಿ ಹಾಗೆ ಇರ್ಬೇಕು , ಹೀಗಲ್ಲ ತಿಳೀತಾ ?


ರಾಶಿ: ಇಲ್ಲ ಗೌರವ್ , ಅದು ಏನಾಯ್ತು ಅಂದ್ರೆ ?


ಗೌರವ್: ಸಾಕು ರಾಶಿ , ನೀ ಮಾತಾಡ್ಲೆಬೇಡಾ. ಆಗೋಯ್ತು ಈಗ . ಆಗಿದ್ದರ ಬಗ್ಗೆ ಮಾತಾಡಿ ಪ್ರಯೋಜನ ಇದೆಯಾ? ಅದಕ್ಕೆ ಸುಮ್ಮನಾಗ್ಬಿಡು.


ರಾಶಿ: ಪ್ಲೀಸ್ ಗೌರವ್ , ಪ್ಲೀಸ್ , ನಾನು ಮಾಡಿದ್ದು ತಪ್ಪೇ , ಆದ್ರೆ ಅದು ನೀನು ಅವತ್ತು ಸಾನ್ಯಾ ಹಿಂದಿಂದೆ ಹೋಗೋದು ನೋಡಿ ಜೊತೆಗೆ ನನ್ನನ್ನ ನಿ ಅವಾಯ್ಡ್ ಮಾಡ್ತಿದೀಯಾ ಅಂತಾ ತಪ್ಪು ತಿಳ್ಕೊಂಡು , ಎಲ್ಲಿ ನಿನ್ನ ಕಳ್ಕೊಂಡು ಬಿಡ್ತಿನೋ ಅಂತಾ ವಿಷ ಕುಡದಬಿಟ್ಟೆ.


ಗೌರವ್: ಅಲ್ಲಾ ಅದೆಷ್ಟು ಸಲೀಸಾಗಿ ಹೇಳ್ತಿಯಲ್ಲ ವಿಷ ಕುಡಿದೆ ಅಂತಾ , ಸಾಯೋ ಮುಂಚೆ ಯೋಚ್ನೆನೆ ಮಾಡಲ್ವಾ ? ಭಗವಂತ ಒಂದೇ ಜನುಮ ಕೊಡುವುದು , ಆಯುಷ್ಯ ತೀರಿದ ಮೇಲೆ ಸಾಯೋದು ಇದ್ದಿದ್ದೇ , ಆದರೆ ನಾವಾಗಿಯೇ ಸಾವು ತಂದುಕೊಳ್ಳುವುದು ಅಂದ್ರೆ ಎನ್ ತಮಾಷೆ ಅನ್ಕೊಂಡಿದಿಯಾ? ದೇವರು ಸಹ ನಮ್ಮ ಆಯುಷ್ಯ ಇರುವಾಗ ಸತ್ರೆ ನಮ್ಮನ್ನು ತಗೊಂಡು ಹೋಗಲ್ಲ , ಇಲ್ಲೇ ಅತಂತ್ರವಾಗಿ , ಅಂತರ ಪಿಶಾಚಿಯಾಗಿ ಅಲೆದಾಡಬೇಕಾಗುತ್ತೆ ನೋಡು.


ರಾಶಿ: ತಪ್ಪಾಯ್ತು , ಇನ್ನೊಮ್ಮೆ ಈ ತರ ಯಾವತ್ತೂ ಮಾಡ್ಕೊಳಲ್ಲ , ಪ್ರಾಮಿಸ್ .


ಸರಿ ಸರಿ ,ಈಗ ಸ್ವಲ್ಪ ಹೊತ್ತು ರೆಸ್ಟ್ ಮಾಡು , ಬಹಳ ಹೊತ್ತಾಯ್ತು , ಮಾತಾಡಿ ಆಯಾಸ ಮಾಡ್ಕೋಬೇಡ ಎಂದು ಹೇಳಿ ಗೌರವ್ ಅಲ್ಲಿಂದ ನಾಳೆ ಬರುವುದಾಗಿ ಮನೆಗೆ ಹೊರಟನು. ಆತ ಮನೆಗೆ ಹೋದ ಮೇಲೆ ರಾಶಿಯ ಅಪ್ಪ ಅಮ್ಮ ಹಾಗೂ ಅಣ್ಣ ರವಿ ರಾಶಿ ಹತ್ತಿರ ಬಂದು ಗೌರವ್ ಕುರಿತು ಮಾತಾಡಲು ಶುರು ಮಾಡಿದರು.


ಮುಂದಿನ ಭಾಗ ನಿರೀಕ್ಷಿಸಿ.


Rate this content
Log in

Similar kannada story from Romance