Vijaya Bharathi

Abstract Tragedy Others

4  

Vijaya Bharathi

Abstract Tragedy Others

ನಾಳೆ ಎಂದರೆ

ನಾಳೆ ಎಂದರೆ

1 min
422


ನಾನ್ ಸ್ಟಾಪ್ ನವೆಂಬರ್ ಆವೃತ್ತಿ 3 ಬಿಗಿನ್ನೆರ್


ದಿನ : 8 


ವಿಷಯ : ನಾಳೆ 

ನಾಳೆ ಎಂದರೆ 

ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿದ್ದ ಚಿಕ್ಕಪ್ಪನನ್ನು ನೋಡಿಕೊಂಡು ಬರಬೇಕೆಂದುಕೊಳ್ಳುತ್ತಲೇ ಇದ್ದ ರೇಖಳಿಗೆ ಗೃಹಕೃತ್ಯದಿಂದ ಸಮಯವೇ ಸಿಗುತ್ತಿರಲಿಲ್ಲ.

ಬೆಳಗ್ಗೆ ಐದು ಗಂಟೆಗೆ ಎದ್ದರೆ ಒಂದರನಂತರ ಒಂದು ಕೆಲಸಗಳನ್ನು ಮುಗಿಸುವ ಹೊತ್ತಿಗೆ ಮಧ್ಯಾಹ್ನ ಎರಡಾಗುತ್ತಿತ್ತು. ಅಷ್ಟರಲ್ಲಿ ಯಾರಾದರೂ ಮನೆಗೆ ಬರುವವರು,ಹೋಗುವವರು ಇರುತ್ತಿದ್ದರು. ಇದರ ನಡುವೆ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ. 

ವಾರದ ಕೊನೆಯಲ್ಲಿ ಹೋಗೋಣ ವೆಂದು ಅವಳ ಗಂಡನನ್ನು ಕೇಳಿದರೆ, 

"ನಾಳೆ ನಾನು ಆಫೀಸ್ ನಿಂದ ಬೇಗ ಬರುತ್ತೇನೆ. ಆಮೇಲೆ ಹೋಗೋಣ. ಇವತ್ತು ನನ್ನ ಸ್ನೇಹಿತನನ್ನು ನೋಡಲು ಹೋಗಬೇಕು".

ಹೀಗೆ ಕೊನೆ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಿಕ್ಕಪ್ಪನನ್ನು ನೋಡಿಕೊಂಡು ಬರುವ ಕೆಲಸ "ನಾಳೆ"ಗೆ ಮುಂದೋಡುತ್ತಲೇ ಹೋದಾಗ, ರೇಖಳಿಗೆ ತುಂಬಾ ಬೇಸರವಾಗತೊಡಗಿತು.

ಇದೆಂತಹ ಗೃಹ ಬಂಧನ? ನಮ್ಮವರು ತಮ್ಮವರು ಖಾಯಿಲೆಯಿಂದ ನರಳಾಡುತ್ತಿದ್ದರೂ ಹೋಗಿ ನೋಡಲಾಗುತ್ತಿಲ್ಲವಲ್ಲ್? 

ಇನ್ನು ಯಾರನ್ನೂ ಕೇಳುವುದು ಬೇಡ, ನಾಳೆ ನಾಬೊಬ್ಬಳೆ ಹೋಗಿ ಚಿಕ್ಕಪ್ಪನನ್ನು ನೋಡಿಕೊಂಡು ಬರುತ್ತೇನೆಂದು ಅವಳು ತೀರ್ಮಾನಿಸಿದಳು. ಮನೆಯಲ್ಲಿ ಎಲ್ಲರಮುಂದೆಯೂ ವಿಷಯ ತಿಳಿಸಿ, ನಾಳೆ ತಾನು ಯಾವುದೇ ಕಾರಣಕ್ಕೂ ನನ್ನ ಈ ಪ್ರೋಗ್ರಾಂ ಅನ್ನು ಬದಲಾಯಿಸಿಕೊಳ್ಳುವುದಿಲ್ಲವೆಂತಲೂ ತಿಳಿಸಿದಾಗ, ಅವಳ ಗಂಡ ಅವಳಿಗೆ ಕ್ಯಾಬ್ ಬುಕ್ ಮಾಡಿಕೊಡುವುದಾಗಿ ತಿಳಿಸಿದಾಗ,"ಥ್ಯಾಂಕ್ಸ್" ಅಂದು ಸುಮ್ಮನಾದಳು. 


ಮರುದಿನ ಹತ್ತು ಗಂಟೆಗೆ ಮನೆಗೆಲಸಗಳನ್ನೆಲ್ಲಾ ಬೇಗ ಬೇಗ ಮುಗಿಸಿ ಹೊರಡಲು ಸಿದ್ಧವಾಗುತ್ತಿದ್ಡಾಗ,ಅವಳ ಮೊಬೈಲ್ ರಿಂಗ್ ಆಯಿತು. 

"ನಾಣಿ ಚಿಕ್ಕಪ್ಪ ಹೋಗಿಬಿಟ್ಟರು.ಆಸ್ಪತ್ರೆಯಿಂದ ಬಾಡಿ ಬರಲು ಇನ್ನೊಂದು ಗಂಟೆ ಆಗುತ್ತದೆ.ಸೀದಾ ಚಿಕ್ಕಪ್ಪನ ಮನೆಗೇ ಬಂದುಬಿಡು" ಅವಳ ಅಮ್ಮ ಫೋನ್ ಮಾಡಿ ಚಿಕ್ಕಪ್ಪ ಹೋಗಿಬಿಟ್ಟ ವಿಷಯ ತಿಳಿಸಿದಾಗ, ಸರಸರನೆ ಚಿಕ್ಕಪ್ಪನ ಮನೆಯ ಕಡೆ ಹೊರಟಳು. 

ಕ್ಯಾಬ್ ನಲ್ಲಿ ಹೋಗುತ್ತಿದ್ದಾಗ ಅವಳ ಮನಸ್ಸಿನಲ್ಲಿ"ನಾಳೆ ಎಂದರೆ ಹಾಳು, ನಾಳೆ ಮಾಡಬೇಕಾದ ಕೆಲಸವನ್ನು ಇಂದೇ ಮಾಡಬೇಕು,ಇಂದು ಮಾಡುವ ಕೆಲಸವನ್ನು ಈ ಕ್ಷಣವೇ ಮುಗಿಸಬೇಕು. ಚಿಕ್ಕಪ್ಪನನ್ನು ನಾಳೆ ಹೋಗಿ ನೋಡೋಣವೆಂದು ನಾಳೆಗೆ ಮುಂದೂಡಿದ್ದರಿಂದ, ಈಗ ಅವರ ಹೆಣವನ್ನು ನೋಡುವಂತಾಯಿತಲ್ಲ, ಛೆ,ಎಂತಹ ಕೆಲಸವಾಯಿತು? ಯಾವುದೇ ಕೆಲಸವನ್ನು ನಾಳೆ ಎಂದು ಮುಂದೂಡಬಾರದು ,ನಾಳೆ ಎನ್ನುವುದು ಎಲ್ಲರ ಪಾಲಿಗೂ ಇರುತ್ತದೆಯೋ ಇಲ್ಲವೋ?ನಿಶ್ಚಿತವಿರುವುದಿಲ್ಲ. ಹೀಗಾಗಿ ನಮಗೇನಾದರೂ ಕೆಲಸ ಮಾಡಾಬೇಕೆನಿಸಿದರೆ ಅದನ್ನು ನಾಳೆಗೆ ತಳ್ಳಿಸಬಾರದು " ಕೊರೆಯುತ್ತಾಇತ್ತು.



Rate this content
Log in

Similar kannada story from Abstract