Vijaya Bharathi

Abstract Drama Others

2  

Vijaya Bharathi

Abstract Drama Others

ಮೃಗತೃಷ್ಣಾ

ಮೃಗತೃಷ್ಣಾ

2 mins
114


ರಾಘು ಸಾಫ್ಟ್ ವೇರ್ ಇಂಜಿನಿಯರ್. ಖ್ಯಾತ ಕಂಪನಿ ಯೊಂದರಲ್ಲಿ ಲಕ್ಷ ಸಂಬಳ ಎಣಿಸುತ್ತಿರುವ ಯುವಕ.ಹಲವಾರು ಹುಡುಗಿ ಯರ ಪೂರ್ವಾಪರಗಳನ್ನು ವಿಚಾರಿಸಿ ದ ನಂತರ ಅವನಂತೆಯೇ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಉದ್ಯೋಗಸ್ದೆ ರಾಗಿಣಿ ಯನ್ನು ಮದುವೆಯಾಗಿ ಸಂಸಾರ ಪ್ರಾರಂಭಿಸಿದ.ಒಂದೆರಡು ತಿಂಗಳುಗಳು ಹೊಸ ಜೀವನ ಸುಂದರ ವಾಗಿ ಸಾಗಿತ್ತು.ನಂತರ ಗಂಡ ಹೆಂಡತಿ ಯ ನಡುವೆ ಸಣ್ಣ ಸಣ್ಣ ವಿಷಯಗಳಿಗೂ ಮನಸ್ತಾಪ ಗಳು ಹೆಡೆಯಾಡತೊಡಗಿತು.


ತಂದೆತಾಯಿಗಳಿಗೆ‌ ಒಬ್ಬನೇ ಮಗನಾಗಿರುವ ರಾಘು ತನ್ನ ಪೋಷಕರು ಮಾತಿಗೆ ಬಹಳ ಬೆಲೆ ಕೊಡುತ್ತಿದ್ದ ಮತ್ತು ಅವರ ಹಾಕಿದ ಗೆರೆ ದಾಟುತ್ತಿರಲಿಲ್ಲ.ಅವರ ಬಗ್ಗೆ ಬಹಳ ಪೊಸೆಸಿವ್ ಆಗಿದ್ದ.ಅಷ್ಟೇ ಅಲ್ಲದೆ ತನ್ನ ಹೆಂಡತಿಯೂ ತನ್ನ ಪೋಷಕರ ಮಾತುಗಳನ್ನು ಮೀರುವಂತಿರಲಿಲ್ಲ.ಎಲ್ಲಿಗೆ ಹೊರಟರೂ ಅವನ ಪೋಷಕರು ಜೊತೆಗಿರಬೇಕು. ಬಹುಶಹ ಮಧುಚಂದ್ರ ದ ಒಂದು ವಾರಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ವೇಳೆಯಲ್ಲೂ ಅವನ ತಂದೆ ತಾಯಿ ಅವನೊಂದಿಗೆ ಎಲ್ಲಾ ಕಡೆಗೂ ಹೊರಡುತ್ತಿಧ್ದರು. ಹೆಂಡತಿಯೊಂದಿಗೆ ಹೇಗೆ ಬಿಗಿಯಾಗಿ ಇರಬೇಕೆಂಬುದ ನ್ನೂ ಸಹ ಅವನ ತಲೆಗೆ ತುಂಬುತ್ತಿದ್ದರು.


ಇದು ಕಾರಣ ರಾಘುವಿಗೆ ಹೆಂಡತಿ ಯೊಡನೆ ಸಲುಗೆ ಬೆಳೆದು ಸರಸವಾಗಿರಲು ಆಗಲೇ ಇಲ್ಲ.ಯಾ ವಾಗಲೂ ಇವನು ದುಮುಗುಟ್ಟುತ್ತಿದ್ದ.ಅವಳು ಇವನಿಂದ ದೂರ ಸರಿಯುತ್ತಾ ಹೋದಳು.ಇಬ್ಬರ ನಡುವೆ ಒಂದು ರೀತಿ ಮುಸುಕಿನೊಳಗಿನ ಗುದ್ದು .


ಒಟ್ಟಾರೆ ಆ ಮನೆಯಲ್ಲಿ ರಘು ಮತ್ತು ರಾಗಿಣಿ ಗೆ ಪ್ರೈವೆಸಿ ಎಂಬುದೇ ಇರಲಿಲ್ಲ.ಮದುವೆಯಾದ ದಿನದಿಂದ ಲೂ ಒಂದೇ ಒಂದು ದಿನ‌ ಅವರಿಬ್ಬರೂ ಏಕಾಂತ ವಾಗಿರುವ ಅವಕಾಶ ವೇ ಇರಲಿಲ್ಲ. ರಾಘುವಿನ ತಂದೆ ತಾಯಿಗೆ ತಮ್ಮ ಮಗ ತಮ್ಮಿಂದ ದೂರವಾದರೆ?ಎಂಬ ಯೋಚನೆ.


ಇದೇ ಯೋಚನೆಯಲ್ಲಿ ಮಗನನ್ನು ಆದಷ್ಟು ತಮ್ಮ ಬಳಿ ಇರುವಂತೆಯೇ ಎಚ್ಚರಿಕೆ ವಹಿಸುತ್ತಿದ್ದರು. ಅವನು ಬೆಂಗಳೂರಿನಂತಹ ಮಹಾನಗರದಲ್ಲಿ ದೂರದ ಆಫೀಸಿನಿಂದ ಮನೆಗೆ ಬರುವುದೇ ಹತ್ತು ಗಂಟೆ ಯಾಗಿರುತ್ತಿತ್ತು.ಮನೆಗೆ ಬಂದು ತಕ್ಷಣ ಅವನ ಅಮ್ಮ ಮಗನಿಗೆ ಊಟ ಬಡಿಸಿ,ನಂತರ ಮಾತುಕತೆಗಳನ್ನು ಮುಗಿಸುವ ವೇಳೆಗೆ ಹನ್ನೊಂದು ಹೊಡೆಯುತ್ತಿತ್ತು.ನಂತರ ರಾಘು ಸ್ವಲ್ಪ ಸಮಯ ಟೆ.ವಿ ನೋಡಿಕೊಂಡು ರೂಂಗೆ ಹೋಗುವ ವೇಳೆಗೆ ಹನ್ನೆರಡು ಆಗಿ ಹೋಗಿರುತ್ತಿತ್ತು.ಈ ವೇಳೆಗೆ ರಾಗಿಣಿ ಗೆ ನಿದ್ರೆ ಹತ್ತಿರುತ್ತಿತ್ತು.ಗಂಡ ಪಕ್ಕಕ್ಕೆ ಬಂದು ಮೈ ಮುಟ್ಟಲು ಬಂದರೆ ಸಿಟ್ಟಿನಿಂದ ದೂರಸರಿಯುತ್ತಿದ್ದಳು.


ಈ ಮನೆಯಲ್ಲಿ ಎಳೆ ವಯಸ್ಸಿನ ಮಗ ಸೊಸೆಯ ಏಕಾಂತ ದ ಬಗ್ಗೆ,ಅವರ ಸುಖ ದಾಂಪತ್ಯ ಜೀವನ ದ ಬಗ್ಗೆ ರಾಸಘುವಿನ ತಂದೆ ತಾಯಿ ಯರು ಎಂದೂ ಯೋಚಿಸುತ್ತಿರಲಿಲ್ಲ.ಅವರು ತಮ್ಮ ಮಗ ತಮ್ಮ ಕೈಯಿಂದ ಸೊಸೆಯ ಕೈಗೆ ಜಾರಬಾರದೆಂದು ಅವರಿಬ್ಬರನ್ನೂ ಏಕಾಂತವಾಗಿರಲು ಅವಕಾಶ ಕೊಡದೆ ಎಚ್ಚರಿಕೆ ವಹಿಸುತ್ತಿದ್ದರು.ರಾಘು ಸಹ ತನ್ನ ತಂದೆ ತಾಯಿ ಯ ಕುರುಡು ವ್ಯಾಮೋಹ ಸ್ವಾರ್ಥ ದ ಬಗ್ಗೆ ಅವನೆಂದೂ ಯೋಚಿಸುತ್ತಲೇ ಇರಲಿಲ್ಲ.ತನ್ನನ್ನೇ ನಂಬಿಕೊಂಡು ಬಂದಿರುವ ಪರರ ಮನೆಯ ಹೆಣ್ಣು ಮಗಳು ರಾಗಿಣಿ ಯ ಆಸೆ ಆಕಾಂಕ್ಷೆ ಬಯಕೆಗಳ ಬಗ್ಗೆ ಎಂದೂ ಯೋಚಿಸುತ್ತಿರಲಿಲ್ಲ.ಅವಳು ತಮ್ಮ ಮನೆಯ ಸೊಸೆ ಈ ಮನೆಗೆ ಹೊಂದಿಕೊಂಡು ಬಾಳ ಬೇಕಾಗಿರುವುದು ಅವಳ ಕರ್ತವ್ಯ ವೆಂಬಂತೆ ಧೋರಣೆ ತೋರುತ್ತಿದ್ದ.


ರಾಘುವಿನ ಸರಿಸಮನಾಗಿ ಓದಿ ,ಅವನಷ್ಟೇ ಸಂಬಳ ತರುವ ರಾಗಿಣಿಗೆ ಅವಳದೇ ಸ್ವಾಭಿಮಾನ.ಅವಳು ಗಂಡನನ್ನು ಒಲಿಸಿಕೊಂಡು ತನ್ನತ್ತ ಸೆಳೆಯಲು ಪ್ರಯತ್ನ ಮಾಡುತ್ತಲೇ ಇದ್ದರೂ,ಆ ಮೂವರ ಒಗ್ಗಟ್ಟಿನಿಂದ ಏನೂ ಮಾಡಲಾಗದೆ ಅಸಹಾಯಕಳಾಗಿ ಸುಮ್ಮನೆ ಇದ್ದಾಳೆ. ಸಂಸಾರದಲ್ಲಿ ಸುಖವಿಲ್ಲ, ಆದರೆ ಅದರಿಂದ ಹೊರ ಬರಲು ಸಾಧ್ಯವಿಲ್ಲ.ಇಂತಹ ಪರಿಸ್ಥಿತಿ ಯಲ್ಲಿ ರಾಗಿಣಿ ಒಳಗೇ ಬೇಯುತ್ತಿದ್ದಾಳೆ.


ಹೀಗಾಗಿಯೇ ಮದುವೆಯಾದರೂ ಅವರಿಬ್ಬರೂ ದೂರವಿರುತ್ತಿದ್ದರು.ಇಬ್ಬರೂ ತಮ್ಮ ತಮ್ಮ ಇಗೋಯಿಸಂನಿಂದ ಸಂಸಾರ ಸುಖದಿಂದ ವಂಚಿತರಾಗಿ ನೀರಸವಾದ ಬದುಕನ್ನು ಸಾಗಿಸುತ್ತಿದ್ದಾರೆ.


"ಹತ್ತಿರ ವಿದ್ದು ದೂರ ನಿಲ್ಲುವವೆವು

ನಮ್ಮ ಅಹಂಮಿನ ಕೋಟೆಯಲಿ

ಎಷ್ಟು ಕಷ್ಟವೋ ಹೊಂದಿಕೆ ಎಂಬುದು

ನಾಲ್ಕು ದಿನದ ಈ ಬದುಕಿನಲಿ"


ಎಂಬ ಶ್ರೀ.ಜಿ.ಎಸ್.ಶಿವರುದ್ರಪ್ಪನವರ ಕವನದ ಸಾಲುಗಳು ಈ ಸಂಸಾರಕ್ಕೆ ಎಷ್ಟು ಚೆನ್ನಾಗಿ ಅನ್ವಯವಾಗುವುದು!

ಮನೆಯ ಹಿರಿಯರ ಅಹಂಮಿಕೆ, ಗಂಡ ಹೆಂಡತಿ ಯರ ನಡುವಿನ ಅಹಂಮಿಕೆಗಳಿಂದ ಹಾಗೂ ಪರಸ್ಪರ ಹೊಂದಾಣಿಕೆ ಗಳ ಕೊರತೆಗಳಿಂದ ರಾಘು ಹಾಗೂ ರಾಗಿಣಿ ಯಾರಿಗೆ ಮದುವೆಯಾಗಿಯೂ ಬ್ರಹ್ಮ ಚಾರಿಯಾಗಿರುವ ಪರಿಸ್ಥಿತಿ.ಈ ಅಪರಾಧದ ಹೊಣೆ ಯಾರದು? ಅವರಿಬ್ಬರ ಸುಖ ದಾಂಪತ್ಯವೊಂದು ಮರೀಚಿಕೆ ಯಾದಂತಾಯಿತು.



Rate this content
Log in

Similar kannada story from Abstract