Vijaya Bharathi

Romance Classics Others

4  

Vijaya Bharathi

Romance Classics Others

ಮಳೆಯ ನೆನಪುಗಳು

ಮಳೆಯ ನೆನಪುಗಳು

2 mins
219


ಇಂದೇಕೋ ಅವನ ಮನಸ್ಸು ತುಂಬಾ ಚಂಚಲವಾಗಿತ್ತು. ಸೀದಾ ಪಾರ್ಕ್ ಹತ್ತಿರ ದ ಕಾಫಿ ಅಂಗಡಿಗೆ ಹೊರಟ.

ಎರಡು ಹೆಜ್ಜೆ ಇಡುತ್ತಿದ್ದಂತೆಯೇ ಪಟಪಟನೆ ಮಳೆ ಹನಿಗಳು ಬೀಳುತ್ತಿದ್ದಂತೆ, ಬಿರಬಿರನೆ ಹೆಜ್ಜೆ ಹಾಕಿ,ಕಾಫಿ ಅಂಗಡಿ ತಲುಪಿದ.ಅದೊಂದು ಸಣ್ಣದಾಗಿರುವ ಪೆಟ್ಟಿಗೆ ಅಂಗಡಿ . ಅದರ ಮುಂದೆ ಒಂದು ಸಣ್ಣ ಬೆಂಚ್ ಇರುತ್ತಿತ್ತು . ಆ ಬೆಂಚ್ ಮೇಲೆ ಕುಳಿತು ಕಾಫಿಗೆ ಆರ್ಡರ್ ಮಾಡಿ , ಮಳೆಯನ್ನೇ ನೋಡುತ್ತಾ ಕುಳಿತ . ಹನಿಗಳ ಸಂಧಿಯಲ್ಲಿ ಅವಳ ಮುಖ ತೇಲಿಬಂದ ಹಾಗಾಗಿ, ಹಳೆ ನೆನಪಿನಾಳಕ್ಕೆ ಇಳಿದ.


"ಈಗ ಹತ್ತು ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಒಂದು ದಿನ ನನ್ನ ಕ್ಲಾಸ್ ಮೇಟ್ ಅಮೂಲ್ಯ,ತನ್ನ ನೋಟ್ಸಗಳನ್ನು ಹಿಡಿದುಕೊಂಡು ಬರುತ್ತಿದ್ದಾಗ, ಇದ್ದಕ್ಕಿದ್ದಂತೆ , ಮಳೆ ಹನಿಗಳು ಬೀಳಲು ಆರಂಭಿಸಿದ್ದು, ಪುಸ್ತಕ ಗಳನ್ನು ಎದೆಗೆ ಅವುಚಿಕೊಂಡು ಓಡೋಡಿ  ಇದೇ ಕಾಫಿ ಅಂಗಡಿಗೆ ಬಂದಿದ್ದು, ಪುಸ್ತಕ ಗಳು ಒದ್ದೆಯಾಗಿ ನೆನೆದು ಹೋಗುವುದನ್ನು ನೋಡಿದ ನಾನು ಅವಳಿಂದ ಪುಸ್ತಕಗಳನ್ನು ತೆಗೆದುಕೊಂಡು, ನನ್ನ ಕರವಸ್ತ್ರವನ್ನು ಅವಳಿಗೆ ನೀಡಿ, ಒದ್ದೆಯಾಗಿದ್ದ ಅವಳ ತಲೆ, ಕೈಗಳನ್ನು ಒರೆಸಿಕೊಳ್ಳುವಂತೆ ಹೇಳಿದಾಗ,ಮೊದಲು ಬೇಡಬೇಡವೆಂದರೂ ನಂತರ ನನ್ನ ಕರ್ಚೀಫ್ ನಿಂದ ಒದ್ದೆ ಮುಖ ಮತ್ತು ಕೈಗಳನ್ನು ಒರೆಸಿಕೊಂಡು ನನಗೇ ಕರವಸ್ತ್ರ ವಾಪಸ್ ನೀಡಿದ್ದು, ಮಳೆ ನಿಂತ ನಂತರ ಇಬ್ಬರೂ ಆಟೋ ಹಿಡಿದು, ಅವಳನ್ನು ಅವಳ ಮನೆಯ ಮುಂದೆ ಇಳಿಸಿದ್ದು.ಈ ಘಟನೆಯ ನಂತರ ನಮ್ಮಿಬ್ಬರ ನಡುವೆ ಸ್ನೇಹ ಬೆಳೆದು, ಮುಂದೆ ಪ್ರೀತಿಗೆ ತಿರುಗಿದ್ದು, ಇಬ್ಬರೂ ಒಂದೇ ಬ್ಯಾಂಕ್ ನಲ್ಲಿ ಕೆಲಸಕ್ಕೆ ಸೇರಿದ ನಂತರ , ನಮ್ಮಿಬ್ಬರ ನಡುವೆ ಪ್ರೀತಿ ಗಾಢವಾಗಿ, ವಿಷಯ ಮನೆಯವರೆಗೂ ತಲುಪಿದಾಗ, ನಮ್ಮಿಬ್ಬರ ಜಾತಿ ಗಳು ಅಡ್ಡ ಬಂದು , ನಾವಿಬ್ಬರೂ ಭಗ್ನ ಪ್ರೇಮಿಗಳಾಗಿ , ಇಬ್ಬರೂ ಹಿರಿಯರನ್ನು ಎದುರು ಹಾಕಿಕೊಳ್ಳಲಾಗದೆ, ಹಿರಿಯರ ಆಯ್ಕೆಯಂತೇ ನಮ್ಮನಮ್ಮ ಜೀವನ ಸಂಗಾತಿಗಳೊಂದಿಗೆ ಬದುಕಲು ಪ್ರಾರಂಭಿಸಿದ್ದು, ಎಲ್ಲವೂ ನಡೆದು ಹೋಯಿತು. ಅಮೂಲ್ಯ ಮದುವೆಯಾದ ನಂತರ ದೆಹಲಿಗೆ ಹೊರಟು ಹೋದ ನಂತರ , ಅವಳನ್ನು ನಾನು ನೋಡಲೇ ಆಗಲಿಲ್ಲ. ಅವಳು ಈಗ ಹೇಗಿದ್ದಾಳೋ? ಎಲ್ಲಿದ್ದಾಳೋ? ಮದುವೆಯ ನಂತರ ಅವಳು ಕೆಲಸಕ್ಕೆ ರಾಜೀನಾಮೆ ನೀಡಿದ್ದು ಮಾತ್ರ ತಿಳಿಯಿತು. ಏಕೋ ಏನೋ ನಮ್ಮಿಬ್ಬರಿಗೂ ಮನೆಯವರನ್ನು ಎದುರಿಸಿ ನಿಲ್ಲುವ ಶಕ್ತಿ ಇರಲಿಲ್ಲ, ಹೀಗಾಗಿ ನಮ್ಮದು ವಿಫಲ ಪ್ರೇಮವಾಗಿ ಹೋಯಿತು. ಈ ಕಾಫಿ ಅಂಗಡಿ ಈ ಸಂಜೆ ಮಳೆ , ಅವಳನ್ನು ನಾನು ಮರೆಯಲು ಸಾಧ್ಯವೇ?"


"ಸರ್ ಕಾಫಿ " ಗಾಜಿನ ಲೋಟದಲ್ಲಿ ಕಾಫಿ ಹಿಡಿದು ನಿಂತಿದ್ದ ಅಂಗಡಿ ಓನರ್.


"ಹೋ.. ನಿಮ್ಮ ಅಂಗಡಿಯ ಕಾಫಿ ಅದೇ ಸ್ವಾದ ಅದೇ ಪರಿಮಳ"ಎನ್ನುತ್ತಾ ಕಾಫಿ ಲೋಟವನ್ನು ತುಟಿಯ ಹತ್ತಿರ ಹಿಡಿಯುತ್ತಾ, ಮಳೆ ಹನಿಗಳನ್ನು ನೋಡುತ್ತಾ ಮೆಲ್ಲನೆ ಹೀರುತ್ತಾ ಹೋದಂತೆ, ಆ ಕಾಫಿ ಅಂಗಡಿಯ ಮುಂದೆ ದೊಡ್ಡದಾದ ಇನೋವಾ ಕಾರ್ ನಿಂದ ಇಳಿಯುತ್ತಿದ್ದವರನ್ನು  ನೋಡಿ, ಅವನಿಗೆ ಆಶ್ಚರ್ಯವಾಯಿತು. ಇದುವರೆಗೂ ಅವನ ನೆನಪಿನ ದೋಣಿಯಲ್ಲಿ ಕುಳಿತಿದ್ದ ಅಮೂಲ್ಯ ಈಗ ಕಣ್ಣೆದುರಿಗೆ ಪ್ರತ್ಯಕ್ಷ! ಜೊತೆಗೆ ಅವಳ ಪಕ್ಕದಲ್ಲಿ ಅವಳ ಗಂಡನೂ ಬರುತ್ತಿದ್ದ . ಅವಳ ಮುಖದಲ್ಲಿ ಸಂತೃಪ್ತಿ ಇತ್ತು. ಹತ್ತಿರ ಬಂದಾಗ ,ಅವನು ಅವಳನ್ನು ನೋಡಿ ನಕ್ಕು

"ಹಲೋ ಅಮೂಲ್ಯ ಹೇಗಿದ್ದೀಯಾ?" ಎಂದಾಗ ಅವಳಿಗೂ ಆಶ್ಚರ್ಯ.


"ಹಾಯ್ ಆನಂದ್ ವಾಟ್ ಎ ಪ್ಲೆಸೆಂಟ್ ಸರ್ಪ್ರೈಸ್ . ಹೌ ಆರ್ ಯು?"

ಎನ್ನುತ್ತಾ ಕೈಕುಲುಕಿ , ತನ್ನ ಗಂಡನಿಗೆ ಅವನನ್ನೂ ,ಆ ಕಾಫಿ ಶಾಪಿಯನ್ನು ಪರಿಚಯ ಮಾಡಿಕೊಟ್ಟಳು.


ಅವರಿಬ್ಬರಿಗೂ ಕಾಫಿ ಆರ್ಡರ್ ಮಾಡಿದ ಆನಂದ್ .

ಬಿಸಿ ಬಿಸಿ ಕಾಫಿಯ ಹಬೆಯೊಂದಿಗೆ ಇಬ್ಬರ ಮನದಲ್ಲೂ ಹಳೆಯ ನೆನಪುಗಳು ಆವಿಯಾಗುತ್ತಾ ಹೋದವು.



Rate this content
Log in

Similar kannada story from Romance