Gireesh pm Giree

Abstract Action Children

2.3  

Gireesh pm Giree

Abstract Action Children

ಮೀನು ನಾನು

ಮೀನು ನಾನು

1 min
516


ಅಟ್ಟದ ಒಂದು ಮೂಲೆಯಲ್ಲಿದ್ದ ಕೋಲನ್ನು ಎತ್ತಿಕೊಂಡು ಹಿತ್ತಲು ಒಮ್ಮೆ ಸುತ್ತಲೂ ನೋಡಿದೆ . ಆ ಮೂಲೆಯಲ್ಲಿ ಇರಬಹುದೆಂದು ಗುಂಡಿ ತೆಗೆದೆ ನೋಡುವಾಗ ಅಲ್ಲಿ ಎರೆಹುಳ ಇದ್ದದ್ದು ಕಂಡುಬಂತು. ಚಿಕ್ಕ ಡಬ್ಬದಲ್ಲಿ ಹಾಕಿ ನಾನು ನನ್ನ ಗೆಳೆಯ ನದಿಯ ಕಡೆ ಸರಸರನೆ ಹೆಜ್ಜೆ ಹಾಕಿದೆವು. ಬೇರೆ ಹುಳವನ್ನು ಗಾಳಕ್ಕೆ ಸಿಕ್ಕಿಸಿ ಮೀನು ಹಿಡಿಯಲು ಆರಂಭಿಸಿ ಬಿಟ್ಟಿದ್ದೆವು. ಎಷ್ಟು ಹೊತ್ತು ಕಳೆದರೂ ಮೀನಿನ ಸುಳಿವೇ ಇಲ್ಲ. ಹಸಿವು ಬೇರೆ ಹೊಟ್ಟೆಯಲ್ಲಿ ತಳಮಳವನ್ನು ಸೃಷ್ಟಿಸುತ್ತಿತ್ತು. ಗೆಳೆಯನ ಮುಖದಲ್ಲಿ ಆಕಸ್ಮಿಕ ನಗು ಕಂಡು ಬೆರಗಾದೆ. ಆತನ ಭಾವವು ಆ ಸಮಯದಲ್ಲಿ ದೊಡ್ಡ ತಿಮಿಂಗಳ ಹಿಡಿದಂತಿತ್ತು."ನೋಡು ಗಿರಿ ನಾನು ಇಂದು ಬಂದದಕ್ಕೂ ಸಾರ್ಥಕವಾಯಿತು. ಈಗ ಸಿಕ್ಕಿದ ಮೀನು ತುಂಬಾ ಭಾರವಾಗಿದೆ ಮನೆಗೆ ಹೋಗಿ ಅಮ್ಮನಲ್ಲಿ ಇದರ ಸಾರು ಉಳಿದರೆ ತವೆಯಲ್ಲಿ ಕಾಯಿಸಲು ಹೇಳುತ್ತೇನೆಂದು ಟ್ಟಂಗಿಸ್ ದಾರವನ್ನು ತನ್ನತ್ತ ಎಳೆದದ್ದೇ ತಡ ಸಮನೆ ಅವನ ಮುಖಾರವಿಂದವು ಕರೆಂಟ್ ಹೋದ ಬಲ್ಬಂತೆ , ಉರಿದು ಸದ್ದು ಮಾಡದ ಪಟಾಕಿಯಂತೆ ಸಪ್ಪೆಯಾಯಿತು. ಏನು ಇದಕ್ಕೆ ಕಾರಣವೆಂದು ಚಕಿತವಾಗಿ ಅವನ ಗಾಳದತ್ತ ನೋಡಿದೆ. ನೋಡುವಾಗ ಅವನ ತಾಳಕ್ಕೆ ಸಿಕ್ಕಿರುವುದು ಮೀನು ಆಗಿರಲಿಲ್ಲ ಬದಲಾಗಿ ಬಟ್ಟೆಯ ತುಂಡಾಗಿತ್ತು. ಅವನ ಮುಖವನ್ನು ನೋಡಿ ನಾನು ಜೋರಾಗಿ ನಕ್ಕೆ. ಹೋಗಿ ಮೀನು ಸಾರು ಮಾಡೆಂದು ವ್ಯಂಗ ಮಾಡಿದೆ. ಅದಕ್ಕೆ ಅವರ ತಲೆಗೆ ಕೆಡಿಸದೆ ನೋಡು ನಾನು ನಾಳೆ ಖಂಡಿತ ಮೀನು ಹಿಡಿದೇ ಹಿಡಿಯುತ್ತೇನೆಂದು ಅಲ್ಲಿಂದ ಮೆಲ್ಲನೆ ಜಾರಿದ. ಇಂದು ಕೂಡ ಚಿತ್ತಾರಿ ನದಿಯ ಕಿನಾರೆಯತ್ತ ಸಾಗುವಾಗ ನೆನಪುಗಳ ಸ್ಪರ್ಶ ಮಾನವನ್ನು ನಗುವಿನಲ್ಲಿ ಕಡಲಲ್ಲಿ ತೇಲಾಡುವಂತೆ ಮಾಡುತ್ತದೆ.



Rate this content
Log in

Similar kannada story from Abstract