Ashwini k

Drama Romance Inspirational

4.1  

Ashwini k

Drama Romance Inspirational

ಮಿಡಿವ ಹೃದಯಗಳು

ಮಿಡಿವ ಹೃದಯಗಳು

5 mins
491


"ಚಿನ್ನಿ ಚಿನ್ನಿ... ಇನ್ನೂ ಎದ್ದೇಳಿಲ್ವಾ, ಎಷ್ಟು ಹೊತ್ತು ಅಂತ ಮಲಗ್ತೀಯ ಕಾಲೇಜ್ ಗೆ ಹೋಗ್ಲಿಕ್ಕಿಲ್ವಾ!" ಎಂದು ರತ್ನಮ್ಮ ಬೊಬ್ಬಿಡುತಿದ್ದಳು. 


ರತ್ನಮ್ಮಳಿಗೆ ಇಬ್ಬರು ಮಕ್ಕಳು. ಅನಿಕಾ ಹಾಗು ಅಮೋಘ. ಅನಿಕಾ ಕಲಿಯುವುದರಲ್ಲಿ ಹುಷಾರು. ತಾಯಿ ರತ್ನಮ್ಮ ಳಿಗೆ ಮಗಳು ಅನಿಕಾ ಎಂದರೆ ಪ್ರಾಣ. ಅವಳನ್ನು ಪುಟ್ಟ ಮಗುವಿನಂತೆ ಮುದ್ದು ಮಾಡುವಳು ರತ್ನಮ್ಮ. 


ಅಂದು ಬೆಳಗ್ಗೆ ಅನಿಕಾ ಅಮ್ಮ ಕರೆಯುವ ಮುಂಚೆನೇ ಎದ್ದಿದ್ದಳು. ಕಾಲೇಜ್ ಗೆ ಹೋಗುವ ತವಕದಲ್ಲಿದ್ದಳು ."ಏನು ಇಷ್ಟು ಬೇಗನೆ ಹೊರಟಿದ್ದೀಯ , ಮುಖದಲ್ಲಿ ನಗುವಿನ ಸಾಗರವೇ ಎದ್ದು ನಿಂತಿದೆ! ಏನು ಸಮಾಚಾರ ? "ಎಂದು ತಾಯಿ ರತ್ನಮ್ಮ ಕುತೂಹಲದಿಂದ ವಿಚಾರಿಸಿದಳು."ಇವತ್ತು ಫ್ರೆಷೆರ್ಸ್ ಪಾರ್ಟಿ ಇದೆ ಕಾಲೇಜ್ ನಲ್ಲಿ. ಹಾಗೆ ನನಗೆ ತುಂಬಾ ಖುಷಿ " ಎಂದುಕೊಂಡು ಕಾಲೇಜ್ ಗೆ ಹೊರಟಳು.ಫ್ರೆಷೆರ್ಸ್ ಡೇ ಅಂದ್ರೆ ಸೀನಿಯರ್ಸ್ ಜೂನಿಯರ್ಸ್ನನ್ನು ವೆಲ್ಕಮ್ ಮಾಡುವ ದಿನ.ಅದೂ ಅಲ್ಲದೆ ಜೂನಿಯರ್ಸ್ ಗೆ ಟಾಸ್ಕ್ ಗಳನ್ನೂ ನೀಡಲಾಗುವುದು .ಹುಡುಗರಿಗೆ ಸೀರೆ ಉಡಿಸುವುದು, ಕ್ಯಾಟ್ ವಾಕ್ ಮಾಡಿಸುವುದು, ಡಾನ್ಸ್ ಮಾಡಿಸುವುದು ಹೀಗೆ ಹಲವು ಟಾಸ್ಕ್ ಗಳನ್ನು ನೀಡುವರು. ಒಂಥರಾ ಬ್ಲಾಕ್ಮೇಲ್ ಎಂದೂ ಹೇಳಬಹುದು.ಆದರೆ ಅದರಲ್ಲಿರುವ ಖುಷಿಯೇ ಬೇರೆಯಾಗಿತ್ತು.


ಅನಿಕಾ ಳಿಗೆ ಆಕಾಶ್ ಎಂಬ ಸೀನಿಯರ್ ಗೆ ಪ್ರೊಪೋಸ್ ಮಾಡುವ ಟಾಸ್ಕ್ ಹೇಳಿದ್ರು. ಅವಳು "ಅಯ್ಯೋ ನಾನು ಪ್ರೊಪೋಸ್ ಮಾಡೋದಾ! ನಂಗಾಗಲ್ಲ "ಎಂದು ಮೋರೆ ಸಪ್ಪೆ ಮಾಡಿದಳು. ಆದರೂ ಅವರೆಲ್ಲ ಅವಳನ್ನು ಪ್ರೊಪೋಸ್ ಮಾಡದೆ ಬಿಡಲಿಲ್ಲ. ಅಂತೂ ಅನಿಕಾ ಪ್ರೊಪೋಸ್ ಮಾಡಲು ತಯಾರಾದಳು. 


ಕೈಯಲ್ಲಿ ಪ್ರೇಮದ ಸಂಕೇತವಾದ ಗುಲಾಬಿ, ಮುಖದಲ್ಲಿ ಸ್ವಲ್ಪ ನಾಚಿಕೆ ಇನ್ನೊಂದು ಕಡೆ ಮುಂದೆ ಏನಾಗಬಹುದು ಎಂಬ ಭಯ. ಅವಳು ನಿಧಾನವಾಗಿ ನಡೆಯುತ್ತಾ ಆಕಾಶ್ ನ ಹತ್ತಿರ ಬಂದಳು. ಮಂಡಿ ಊರಿ ಕೈಯಲ್ಲಿದ್ದ ಗುಲಾಭಿಯನ್ನು ಎತ್ತಿ ಮೆಲ್ಲನೆ ಆಕಾಶ್ ನನ್ನು ನೋಡಿದಳು.. 


ಆಕಾಶ್ ಅನಿಕಾ ಳನ್ನು ನೋಡಿ ಮೈ ಮರೆತು ಹೋಗಿದ್ದ. ತಾವರೆ ಹೂವಿನ ಎಸಲಂತಿರುವ ಆ ಕಣ್ಗಳು. ಸಂಪಿಗೆ ಗಿಂತ ಸುಂದರ ನಾಸಿಕ. ಮಾತನಾಡುವಾಗ ನರ್ತನವಾಡುತ್ತಿರುವ ಹೃದಯಾಕಾರದ ತುಟಿಗಳು. ಭುಜದ ಮೇಲೆ ಹರಿದಾಡಿದಂತಿಹ ಕೂದಲು.ಒಂದು ಜೋಡಿ ಕಾಮಾನಿನ ಹುಬ್ಬುಗಳು ಗುಡಿಸುವ ರೆಪ್ಪೆಗೂದಲುಗಳನ್ನು ನೋಡುತ್ತಿದ್ದವು.

ತಕ್ಷಣ ಎಲ್ಲರೂ ಬೊಬ್ಬಿಟ್ಟರು, ಚಪ್ಪಾಳೆ ಹೊಡೆದರು, ವಿಶೇಲ್ ಹಾಕಿದರು. ಆಕಾಶ್ ತನ್ನ ಕನಸಿನ ಲೋಕದಿಂದ ಹೊರ ಬಂದು ಎಲ್ಲರ ಕಡೆ ಒಮ್ಮೆ ಕಣ್ಣು ಹಾಯಿಸಿದ."ಯಬ್ಬಾ ಎಷ್ಟು ಮುದ್ದಾದ ಹೆಣ್ಣು!. ಹಾಗೇನೇ ನೋಡಿಕೊಳ್ಳುತ್ತಾ ಇರಬೇಕೇನಿಸುತ್ತಿದೆ. ಆ ಕಣ್ಣುಗಳು ನನ್ನನೇ ಕರೆಯುವಂತಿದೆ. ಸಪ್ತ ಸುಂದರಿಗಳು ಒಟ್ಟುಗೂಡಿ ಬಂದಿದ್ದಾರೆಯೇ?" ಎಂದು ತನ್ನಲ್ಲೇ ಹೇಳಿಕೊಂಡನು.

ದಿನಗಳು ಕಳೆದವು ಆಕಾಶ್ ಮತ್ತು ಅನಿಕಾ ತುಂಬಾ ಕ್ಲೋಸ್ ಫ್ರೆಂಡ್ಸ್ ಆದರು. ಆ ಕಾಲೇಜಲ್ಲಿ ಅವರಿಬ್ಬರ ಜೋಡಿಯನ್ನು ಅರಿಯದವರು ಯಾರೂ ಸಹ ಇರಲಿಲ್ಲ.

ಅಂದು ರಾತ್ರಿ ಅವರಿಬ್ಬರು ಫೋನಲ್ಲಿ ತುಂಬಾ ಮಾತನಾಡುತ್ತಿದ್ದರು. ಇಬ್ಬರಲ್ಲೂ ಪ್ರತ್ಯೇಕ ಖುಷಿ ಎದ್ದು ನಿಂತಿತ್ತು.ಫೋನ್ ಕಟ್ ಮಾಡಲು ಮನಸ್ಸು ಬರುತ್ತಿರಲಿಲ್ಲ. ಬೆಳಗ್ಗಿನ ವರೆಗೂ ಮಾತನಾಡುವ ಹಂಬಲವಾಗಿತ್ತು. ಯಾಕೆಂದರೆ ಮರುದಿನ ಪ್ರೇಮಿಗಳ ದಿನ. ಆದುದರಿಂದಲೇ ಆಕಾಶ್ ಪಾರ್ಟಿ ಅರೇಂಜ್ ಮಾಡಿದ್ದ. ಒಮ್ಮೆ ಬೆಳಗ್ಗಾದರೆ ಸಾಕು ಎಂದು ಅವರಿಬ್ಬರ ಮನದಲ್ಲಿ.

ಆಕಾಶ್ ಅನಿಕಾ ಎಷ್ಟೇ ಕ್ಲೋಸ್ ಆಗಿದ್ದರು ಪ್ರೀತಿ ಮಾಡುತ್ತಿರುವುದನ್ನು ಪರಸ್ಪರ ಹೇಳಿಕೊಂಡಿರಲಿಲ್ಲ. ಆದರೂ ಅವರಿಬ್ಬರಲ್ಲಿ ಪ್ರೀತಿ ಇತ್ತು. ಹೇಳಲು ಮುಜುಗರ ಮಾಡುತ್ತಿದ್ದರು. "ಲವ್ ಇಸ್ ಬ್ಲೈಂಡ್ " ಅಂತಾರೆ ಅದೇ ತರಹ.

ಅಂತೂ ಬೆಳಗ್ಗಾಯ್ತು. ಅನಿಕಾ 6 ಗಂಟೆಗೆ ಕನ್ನಡಿ ಮುಂದೆ ನಿಂತಿದ್ದಳು. ಇನ್ನೂ ರೆಡಿಯಾಗಿ ಆಗಿಲ್ಲ. ಯಾವ ಡ್ರೆಸ್ ಹಾಕ್ಲಿ ಎಂಬ ಆತುರ. ಅದರಲ್ಲೂ ಆಕಾಶ್ ರೆಡ್ ಕಲರ್ ಡ್ರೆಸ್ ಹಾಕಲು ಹೇಳಿದ್ದ. ಕೊನೆಗೆ ರೆಡ್ ಕಲರ್ ಕುರ್ತ ಹಾಕಿ ಹೊರಟಳು.ಅನಿಕಾ ಅವಳದ್ದೇ ಅದ ಲೋಕದಲ್ಲಿದ್ದಳು.

ಟೌನ್ ಕ್ಯೂಬಲ್ಲಿ ಆಗಿತ್ತು ಅವರ ಪಾರ್ಟಿ.ಆದರೆ ಅಲ್ಲಿ ಆಕಾಶ್ ಇರಲಿಲ್ಲ. ಯಾರೋ ಒಬ್ಬರು ಬಂದು " ಹಲೋ! ಮೇಡಂ ಅನಿಕಾ ನೀವಲ್ಲವೇ, ಆಕಾಶ್ ಎಂಬವರು ಈ ಕೀ ನಿಮ್ಮಲ್ಲಿ ಕೊಡಲು ಹೇಳಿದರು " ಎಂದು ಕೀ ಅನಿಕಾ ಳಿಗೆ ನೀಡಿ ಹೊರಟು ಹೋದರು. ಅವಳಿಗೆ ತುಂಬಾ ಭಯವಾಯ್ತು. " ಆಕಾಶ್ ಯಾಕೆ ಇನ್ನೂ ಬರಲಿಲ್ಲ?. ಇದ್ಯಾಕೆ ಬೇರೆ ಯಾರಲ್ಲೋ ಕೀ ಕೊಟ್ಟು ಹೋದದ್ದು!" ಎಂದು ಯೋಚಿಸಿದಳು. ಆದದ್ದು ಆಗಲಿ ಎಂದು ಅವಳು ಡೋರ್ ಅನ್ಲೋಕ್ ಮಾಡಿದಳು. ಅದು ಇಡೀ ಕತ್ತಲೆ ಕೋಣೆಯಾಗಿತ್ತು. ಅವಳಿಗೆ ತುಂಬಾ ಭಯವಾಯಿತು."ಇಲ್ಲಿ ಯಾರೂ ಇಲ್ಲವೇ... ಆಕಾಶ್.. "ಎಂದು ಕರೆದಳು.

ಯಾರೋ ಹಿಂದೆಯಿಂದ ಬಂದು ಕೋಣೆಯ ಲೈಟ್ ಆನ್ ಮಾಡಿದರು. ಅದು ಆಕಾಶ್ ಆಗಿದ್ದ.

ಗೋಡೆಗಳು ಪೂರ್ತಿ ಬಲೂನ್ ಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಟು ಮೈ ಸ್ವೀಟ್ ಹಾರ್ಟ್ ಎಂದು ಬರೆದಿತ್ತು. ರೆಡ್ ಕರ್ಟೈನ್ ಹಾಕಿದ ಟೇಬಲ್, ಅದರ ಮೇಲೆ ಗುಲಾಭಿ, ಜೊತೆಗೆ ಕೇಕ್ ಕೂಡಾ ಇಡಲಾಗಿತ್ತು. ಇದನ್ನೆಲ್ಲಾ ಕಂಡು ಅನಿಕಾ ಆಶ್ಚರ್ಯಗೊಂಡಳು. ಅವಳ ಮನಸ್ಸು ಸಂತೋಷದಿಂದ ಕುಣಿಯುತ್ತಿತ್ತು.


ಆಕಾಶ್ ಮೆಲ್ಲ ಮೆಲ್ಲ ಹೆಜ್ಜೆ ಇಡುತ್ತಾ ಬರುತ್ತಿರುವ ಅನಿಕಾ ಳನ್ನು ಪುಷ್ಪಗಳಿಂದ ಸ್ವಾಗತಿಸಿದನು. ಅವಳು ಅವನ ಸಮೀಪ ಬಂದಳು. ಇಬ್ಬರು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಿಂತರು. ಅವರ ಮನಸ್ಸಿನ ಮಾತುಗಳನ್ನೆಲ್ಲ ಕಣ್ಣುಗಳೇ ಸಂವಾಧಿಸುತ್ತಿದ್ದವು. ಆಕಾಶ್ ಟೇಬಲ್ ಮೇಲಿದ್ದ ಗುಲಾಭಿ ತೆಗೆದು ತನ್ನ ಮಂಡಿಯೂರಿ "ವಿಲ್ ಯು ಬಿ ಮೈ ಬೆಟ್ಟರ್ ಹಾಫ್ " ಎಂದು ಕೇಳಿದನು. ತಕ್ಷಣ ಅನಿಕಾ ಳಿಗೆ ಏನು ಹೇಳಬೇಕು ಎಂದು ಅರಿವಾಗಿಲ್ಲ. ಒಂಥರಾ ಖುಷಿಯಾಗುತ್ತಿತ್ತು. ಅವಳು ಆ ಗುಲಾಭಿಯನ್ನು ಸ್ವೀಕರಿಸಿ ಅದಕ್ಕೆ ಚುಂಬಿಸಿದಳು.

ಆಕಾಶ್ ಖುಷಿಯಿಂದ ಅನಿಕಾ ಳನ್ನು ಅಪ್ಪಿಕೊಂಡನು. ಅವರ ಈ ಸಮ್ಮಿಲನಕೆ  ಎದೆ ಬಡಿತಗಳೇ ನಾದವಾದವು . ಆಕಾಶ್ ಅನಿಕಾಳ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ಅವಳ ಹಣೆಗೆ ಮೊದಲ ಚುಂಬನವನ್ನಿತ್ತನು.ಹಾಗೆ ಸ್ವಲ್ಪ ಹೊತ್ತು ಅವರು ಅಲ್ಲೇ ಕಳೆದರು.

ಅಂದು ರಾತ್ರಿ ಆಕಾಶ್ ನನ್ನು ಅದೇನೋ ಚಿಂತೆ ಕಾಡುತ್ತಿತ್ತು. ತಾನು ಅನಿಕಾ ಳಿಗೆ ಪ್ರೊಪೋಸ್ ಮಾಡಿದ್ದು ಸರಿಯೇ ಎಂದು ತನ್ನಲ್ಲೇ ಪ್ರಶ್ನಿಸುತ್ತಿದ್ದನು. ಯಾಕೆಂದರೆ ಅನಿಕಾ ತುಂಬಾ ಬಡತನದಿಂದ ಬಂದವಳು.ಸಾಧಿಸಬೇಕಾದ್ದು ತುಂಬಾನೇ ಇದೆ. ಅವಳ ಅಮ್ಮನ ಕನಸನ್ನು ಈಡೇರಿಸಬೇಕಾದವಳು.ಅದರೆಡೆಯಲ್ಲಿ ತಾನು ಬಂದಕಾರಣ ಅವಳ ವಿಧ್ಯೆ ನಿಲ್ಲುವಂತಾಗುವುದೇ ಎಂಬ ಆತಂಕ.ತನ್ನಿಂದಾಗಿ ಅನಿಕಾಳ ವಿದ್ಯಾಭ್ಯಾಸ ನಿಲ್ಲುವಂತಾಗ ಬಾರದು. ಕಲಿಯುವುದರ ಮೇಲಿನ ಅವಳ ಶ್ರದ್ಧೆ ಕಡಿಮೆಯಾಗ ಬಾರದು ಎಂಬುವುದು ಆಕಾಶ್ ನ ಇಚ್ಛೆ. ಹಾಗಾಗಿ ಅವನು ಇನ್ನು ಅವಳಿಂದ ದೂರವಿರಬೇಕೆಂದು ನಿರ್ಧರಿಸಿದ.

ಮರುದಿನ ಕಾಲೇಜಲ್ಲಿ ಅನಿಕಾ ಳನ್ನು ಕಂಡರೂ ಕಾಣದಂತೆ ನಟಿಸಿದನು. ಅನಿಕಾ ಮಾತನಾಡಲು ಯತ್ನಿಸಿದಾಗ ದೂರ ಸರಿದನು. ಅನಿಕಾ ಳಿಗೆ ಆಕಾಶ್ ತನ್ನನ್ನು ಅವಾಯ್ಡ್ ಮಾಡುತ್ತಿದ್ದಾನೆ ಎಂದು ತಿಳಿಯಿತು. ಯಾಕೆ ಹೀಗೆ ಮಾಡುತ್ತಿದ್ದಾನೆ ಎಂದು ಅವಳಿಗೆ ಅರ್ಥವಾಗುತ್ತಿರಲಿಲ್ಲ. ಫೋನ್ ಮಾಡಳು ಪ್ರಯತ್ನಿಸಿದಳು. ಆಕಾಶ್ ಏನೋ ಮೆಸೇಜ್ ಮಾಡಿದ್ದನು. ಅವಳಿಗೆ ಅದೇನು ಮೆಸೇಜ್ ಎಂದು ನೋಡಲು ಆತುರವಾಯಿತು."ಇನ್ನು ನಮ್ಮ ಇಬ್ಬರ ಮಧ್ಯೆ ಪ್ರೀತಿ ಗೀತಿ ಏನೂ ಇಲ್ಲ. ನೀನು ನಿನ್ನ ದಾರಿ ಹುಡುಕು. ನನಗೆ ನೀನು ಜಸ್ಟ್ ಫ್ರೆಂಡ್ ಅಷ್ಟೇ.. ಬೈ " ಎಂದು ಬರೆದಿತ್ತು. ಅದನ್ನು ಕಂಡು ಅನಿಕಾ ಸ್ಥಬ್ಧಳಾಗಿ ನಿಂತಳು. ಅವಳ ಕಣ್ಣುಗಳಿಂದ ಕಣ್ಣೀರು ಮೆಲ್ಲನ್ನೇ ಸುರಿದವು. ಮನಸ್ಸಲ್ಲೇನೋ ಭಾರವಾದ ಹಾಗೆ ಭಾಸವಾಗುತ್ತಿತ್ತು. "ಎಲ್ಲಾ ಹುಡುಗರು ಒಂದೇ ರೀತಿಯೇ!... ಅವರ ಕೆಲಸ ಮುಗಿದ ಮೇಲೆ ನಮ್ಮನ್ನು ದೂರ ಮಾಡುವರು. ನಾನಿನ್ನು ಏನೂ ಮಾಡಲಿ, ಯಾರನ್ನು ಹೇಳಲಿ?". ಎನ್ನುತ್ತಾ ಅವಳು ದುಃಖಿಸಿದಳು. ಇದನ್ನೆಲ್ಲಾ ಆಕಾಶ್ ದೂರದಿಂದ ವೀಕ್ಷಿಸುತ್ತಿದ್ದನು. ಅವಳ ಆ ವೇದನೆ ಆಕಾಶ್ ಗೂ ಸಹ ವೇದನೆಎನಿಸಿತು . ಆದರೂ ತನ್ನ ಪ್ರೇಯಸ್ಸಿಯ ಭವಿಷ್ಯಕ್ಕೋಸ್ಕರ ಈ ನೋವು ಅನುಭವಿಸಲೇ ಬೇಕು ಎಂದು ಗಟ್ಟಿ ಮನಸ್ಸು ಮಾಡಿಕೊಂಡ..

ತಾನು ಅಳದೆ ತನ್ನನ್ನು ಮೋಸ ಮಾಡಿದವನ ಮುಂದೆ ಚೆನ್ನಾಗಿ ಬದುಕಿ ತೋರಿಸಬೇಕೆಂಬ ಹಠ ಅನಿಕಾ ಳಲ್ಲಿ ಮೂಡಿತು.

ದಿನಗಳು ಕಳೆದವು ಅನಿಕಾ ಆಕಾಶ್ ನನ್ನು ಸಂಪೂರ್ಣವಾಗಿ ಮರೆತಿದ್ದಳು. ಅವಳಿಗೆ ಅಲ್ಲೇ ಊರಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ಜಾಬ್ ಕೂಡಾ ಲಭಿಸಿತ್ತು.

ಆಕಾಶ್ 4 ವರ್ಷ ಹಿಂದೆಯೇ ತನ್ನ ವಿದ್ಯಾಭ್ಯಾಸ ಮುಗಿಸಿ ವಿದೇಶಕ್ಕೆ ತೆರಳಿದ್ದ. ಅಲ್ಲಿ ಅವನಿಗೆ ಒಳ್ಳೆಯ ಜಾಬ್ ಕೂಡಾ ಲಭಿಸಿತ್ತು. ಎಲ್ಲಿ ಹೋದರೂ ತನ್ನ ಪ್ರೇಯಸ್ಸಿಯ ನೆನಪುಗಳು ಶಾಶ್ವತವಾಗಿದ್ದವು.

ಆಕಾಶ್ ತನ್ನ ತಯ್ನಾಡಿಗೆ ತೆರಳುವ ತವಕದಲ್ಲಿದ್ದ. ಹಾಗೇನೇ ಅನಿಕಾ ಳನ್ನು ಭೇಟಿಯಾಗುವ ಆತಂಕದಲ್ಲಿದ್ದ. ಅಂತೂ ಆಕಾಶ್ ತನ್ನ ತಯ್ನಾಡಿಗೆ ತಲುಪಿದನು . ಅವನ ಹೃದಯ ಅನಿಕಾ ಳನ್ನು ಕಾಣಲು ಮಿಡುಕುತ್ತಿತ್ತು. ಬೇಗನೆ ಅನಿಕಾ ವಾಸಿಸುತ್ತಿದ್ದ ಸ್ಥಳಕ್ಕೆ ತೆರಳಿದ. ಅಲ್ಲಿ ಕಂಡ ದೃಶ್ಯ ಅವನನ್ನು ಆಶ್ಚರ್ಯಗೊಳಿಸಿತು. ಅಂದಿದ್ದ ಆ ಪುಟ್ಟ ಮನೆ ಈಗ ದೊಡ್ಡ 2 ಮಹಡಿಯ ಮನೆಯಾಗಿ ಮಾರ್ಪಟ್ಟಿತ್ತು. ಮನೆಯೆದುರು ಒಂದು ಕಾರ್ ಕೂಡಾ ಪಾರ್ಕ್ ಮಾಡಲಾಗಿತ್ತು.ಅವನಿಗೆ ಇದೆಲ್ಲಾ ಕಂಡಾಗ ತುಂಬಾ ಸಂತೋಷವಾಯಿತು. ಅಂದು ತಾನು ಅರಿಸಿದ ನಿರ್ಧಾರ ಸರಿಯಾಗೇ ಇದೆ ಎಂದು ಹೆಮ್ಮೆ ಪಟ್ಟ. ಆದರೆ ಆ ಹೊತ್ತಲ್ಲಿ ಅನಿಕಾ ಳನ್ನು ಕಾಣಲು ಏನೋ ಮುಜುಗರವಾಗುತ್ತಿತ್ತು. ಅವಳು ಖುಷಿಯಾಗಿರಲಿ ಎಂದು ಆಕಾಶ್ ಅಲ್ಲಿಂದ ತನ್ನ ಮನೆಗೆ ಹಿಂತಿರುಗಿದ.

ಆಕಾಶ್ ಹಿಂದೆ ನಡೆದ ಎಲ್ಲಾ ಘಟನೆಗಳನ್ನು ತನ್ನ ಡೈರಿಯಲ್ಲಿ ಬರೆದಿದ್ದ. ಅದರಲ್ಲಿರುವ ಒಂದೊಂದು ಪದವು ಸಹ ಅನಿಕಾ ಇಲ್ಲದೆ ಅವನ ಹೃದಯ ಪಟ್ಟ ನೋವಾಗಿತ್ತು.

ಮನೆಗೆ ತೆರಳಿದ ಆಕಾಶ್ ನ ಡೈರಿ ಯನ್ನು ತಂಗಿ ಅನನ್ಯ ನೋಡಿದಳು.ಅದನ್ನು ಅವಳು ತೆಗೆದಿಟ್ಟು ಕೊಂಡಳು . ಆ ದಿನ ರಾತ್ರಿ ಪೂರ್ತಿ ಅವಳಿಗೆ ತನ್ನ ಅಣ್ಣನ ಡೈರಿ ಓದುವ ಕೆಲಸವಾಗಿತ್ತು. "ಅಣ್ಣ ಇಷ್ಟೂ ನೋವನ್ನು ಅನುಭವಿಸಿದ್ದಾನೆಯೇ. ತನ್ನ ಪ್ರೇಯಸ್ಸಿಯ ಭವಿಷ್ಯಕ್ಕೋಸ್ಕರ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿಕೊಂಡ. ಇಷ್ಟೆಲ್ಲ ನೋವನ್ನನುಭವಿಸಿ ಹೇಗೆ ಸಂತೋಷದಿಂದ ವರ್ತಿಸಲು ಸಾಧ್ಯ ಅವನಿಗೆ! " ಎನ್ನುತ್ತಾ ಅನನ್ಯ ದುಃಖ ಪಟ್ಟಳು.

ಮರುದಿನ ಮುಂಜಾನೆ ಅನನ್ಯ ಬೇಗನೆ ಅನಿಕಾ ಳ ಮನೆಗೆ ಹೊರಟಳು. ಅನಿಕಾ ಳನ್ನು ಭೇಟಿಯಾದಳು. "ನಾನು ಆಕಾಶ್ ನ ತಂಗಿ " ಎಂದು ಅನನ್ಯ ಪರಿಚಯಿಸಿದಳು. ಆದರೆ ಅನಿಕಾಳಿಗೆ ಆಕಾಶ್ ನ ನೆನಪೇ ಇರಲಿಲ್ಲ.ಅವಳು "ಯಾವ ಆಕಾಶ್?" ಎಂದು ಕೇಳಿದಳು. ಇದನ್ನು ಕೇಳಿದಾಗ ಅನನ್ಯಳಿಗೆ ತುಂಬಾ ಬೇಸರವಾಯಿತು. ಹೇಳಲು ಮಾತುಗಳೇ ಇರಲಿಲ್ಲ.ಅವಳು ಆ ಡೈರಿಯನ್ನು ಅನಿಕಾಳ ಕೈಯಲ್ಲಿಟ್ಟು "ನಿಮ್ಮ ಪ್ರಶ್ನೆಗೆ ಉತ್ತರ ಇದರಲ್ಲಿದೆ " ಎಂದು ಹೊರಟು ಹೋದಳು.

ಅನಿಕಾ ಆಶ್ಚರ್ಯಗೊಂಡು ಆ ಡೈರಿಯನ್ನು ಬಿಡಿಸಿ ನೋಡಿದಳು. ಮೊದಲ ಪುಟದಲ್ಲಿ "ಅನಿಕಾ ಯು ಆರ್ ಲಿವಿಂಗ್ ಇನ್ ಮೈ ಹಾರ್ಟ್ ' ಎಂದಿತ್ತು.ಅವಳು ಪುನಃ ಪುಟ ಬಿಡಿಸುತ್ತಾ ಹೋದಳು.

ಆ ಡೈರಿಯನ್ನು ಓದಿ ಮುಗಿಸಿದಾಗ ಅವಳ ಕಣ್ಣುಗಳು ಕಂಬನಿಯಿಂದ ತುಂಬಿದ್ದವು. ತನ್ನಲ್ಲಿ ತಾನೇ ಅಸಹ್ಯ ಪಟ್ಟಳು. ಆಕಾಶ್ ಇನ್ನೂ ತನ್ನನ್ನು ಮರೆತಿಲ್ಲ ಎಂದು ಅವಳಿಗೆ ಭಾಸವಾಯಿತು. ತಕ್ಷಣ ಅನಿಕಾ ಆಕಾಶ್ ನ ಮನೆಗೆ ತೆರಳಿದಳು. ಆದರೆ ಆಕಾಶ್ ಅಲ್ಲಿರಲಿಲ್ಲ. ಎಲ್ಲಿ ಹೋಗಿರಬಹುದು ಎಂದು ಮನೆಯವರಿಗೂ ಗೊತ್ತಿಲ್ಲ. ಅನಿಕಾ ಸ್ವಲ್ಪ ಹೊತ್ತು ಆಕಾಶ್ ಎಲ್ಲಿಗೆ ಹೋಗಿರುವ ಎಂದು ಚಿಂತಿಸಿದಳು . ಅಂದು ಪ್ರೇಮಿಗಳ ದಿನದಂದು ತನಗೆ ಪ್ರೊಪೋಸ್ ಮಾಡಿದ ಆ ಜಾಗ ಅವಳಿಗೆ ನೆನಪಿಗೆ ಬಂತು. ಅನಿಕಾ ಬೇಗನೆ ಅಲ್ಲಿಗೆ ತೆರಳಿದಳು. ಅವಳ ಊಹೆ ಸರಿಯೇ ಆಗಿತ್ತು. ಆಕಾಶ್ ಅಂದಿನ ಆ ರೂಮ್ ಹತ್ತಿರ ನಿಂತು ನೋಡುತ್ತಿದ್ದನು.

ಅನಿಕಾ ದೂರದಿಂದ "ಆಕಾಶ್..."ಎಂದು ಜೋರಾಗಿ ಕರೆದಳು. ಆಕಾಶ್ ನಿಗೆ ಅನಿಕಾ ಳನ್ನು ಕಂಡು ಆಶ್ಚರ್ಯವಾಯಿತು. ತಾನು ಕನಸು ಕಾಣುತ್ತಿರುವೆನೇ ಎಂದು ಗಾಬರಿಯಾದನು. "ಇನ್ನು ಯಾವತ್ತಿಗೂ ಸಿಗಲ್ಲ ಎಂಬ ನನ್ನ ಪ್ರೇಯಸ್ಸಿ ಕಣ್ಮುಂದೆ ನಿಂತಿದ್ದಾಳೆ!. ನಂಬಲು ಸಾಧ್ಯವಾಗುತ್ತಿಲ್ಲ"ಎಂದು ತನ್ನಲ್ಲೇ ಹೇಳಿಕೊಂಡನು.

ಅನಿಕಾ ಓಡಿಕೊಂಡು ಆಕಾಶ್ ನ ಪಕ್ಕ ಬಂದಳು.ಅವರು ಪರಸ್ಪರ ಕಣ್ಣು ಕಣ್ಣು ನೋಡಿದರು. ಇಬ್ಬರ ಕಣ್ಣಲ್ಲೂ ಆನಂದಾಶ್ರು ತುಂಬಿತ್ತು. ಹೃದಯ ಲಬ್ ಡಬ್ ಎಂದು ಜೋರಾಗಿ ಬಡಿಯಿತು. ಅವರಿಬ್ಬರೂ ಪರಸ್ಪರ ಬಿಗಿಯಾಗಿ ಅಪ್ಪಿಕೊಂಡರು.

"ನಿನ್ನ ಡೈರಿ ನಾನು ಓದಿದೆ ಆಕಾಶ್... ನಡೆದ ಘಟನೆಗಳೆಲ್ಲವೂ ನನಗೆ ತಿಳಿಯಿತು. ನನಗೋಸ್ಕರ ಇಷ್ಟೆಲ್ಲ ಕಷ್ಟ ಪಟ್ಟಿಯಾ? ಒಂದು ಮಾತು ನನ್ನಲ್ಲಿ ಹೇಳಬಹುದಿತ್ತಲ್ಲ...."ಎನ್ನುತ್ತಾ ಅನಿಕಾ ಕಣ್ಣೀರು ಸುರಿಸಿದಳು.ಆಕಾಶ್ ಅನಿಕಾ ಳ ಕಣ್ಣು ಒರೆಸುತ್ತಾ ಸಮಾಧಾನ ಪಡಿಸಿದ.

ಅದೇ ಜಾಗದಲ್ಲಿ ಆಕಾಶ್ ತನ್ನ ರಿಂಗ್ ನೀಡಿ ಪುನಃ ಪ್ರೊಪೋಸ್ ಮಾಡಿದನು. ಅನಿಕಾ ಸಂತೋಷದಿಂದ ಅವನನ್ನು ಅಪ್ಪಿಕೊಂಡು ನೆತ್ತಿಗೆ ಚುಂಬಿಸಿದಳು.



Rate this content
Log in

Similar kannada story from Drama