STORYMIRROR

Ashwini k

Horror Tragedy Crime

2  

Ashwini k

Horror Tragedy Crime

ನಿಗೂಢತೆಯ ಆ ರಾತ್ರಿ...

ನಿಗೂಢತೆಯ ಆ ರಾತ್ರಿ...

3 mins
819

ಅದೊಂದು ದೂರ ಪ್ರಯಾಣವಾಗಿತ್ತು. ಕವನ ವಿಂಡೋ ಸೀಟ್ ಹತ್ರ ಕುಳಿತುಕೊಂಡಿದ್ದಳು. ಇಂಪಾದ ಗಾಳಿ ಜೊತೆ ಸುಂದರ ದೃಶ್ಯಗಳು. ಹಾಗೆ ಸ್ವಲ್ಪ ದೂರ ಸರಿದಾಗ ಅಜ್ಜಿಯೊಬ್ಬರು ಅವಳ ಪಕ್ಕದ ಸೀಟ್ ನಲ್ಲಿ ಕುಳಿತುಕೊಂಡರು. ವಯಸ್ಸಾದವಾರದ ಕಾರಣ ಎಲ್ಲರಲ್ಲೂ ಮಾತನಾಡಿಸುವ ಹಂಬಲ. ಆದ್ದರಿಂದಲೇ ಅಜ್ಜಿ ಕವನಳಲ್ಲಿ ಮಾತನಾಡಿಸಬೇಕಾಗಿ ಚಡಪಡಿಸುತ್ತಿದ್ದರು.

ತಕ್ಷಣ ಡ್ರೈವರ್ ಬ್ರೇಕ್ ಹಾಕಿದ. ಒಮ್ಮೆಲೆ ಆ ಬಸ್ ನಲ್ಲಿದ್ದವರೆಲ್ಲ ಮುಂದೆ ಬಾಗಿ ಅದೇ ರಭಸದಲ್ಲಿ ಹಿಂದೆ ಸೀಟ್ ಗೆ ಒರಗಿದರು."ಅಜ್ಜಿ ಏನೂ ಆಗಿಲ್ಲ ತಾನೇ?" ಎಂದು ಕವನ ಗಾಬರಿಯಿಂದ ಕೇಳಿದಳು. ಅಜ್ಜಿ ಪಿಸುನಗುತಾ "ಇಲ್ಲಮ್ಮ ಏನು ಆಗಿಲ್ಲ " ಎಂದರು. ಹಾಗೆ ಅವರಿಬ್ಬರೂ ಪರಸ್ಪರ ಪರಿಚಿತರಾದರು.

ಕವನ ಮೆಡಿಸಿನ್ ಸ್ಟೂಡೆಂಟ್. ರಜೆಯಲ್ಲಿ ಅಜ್ಜಿ ಮನೆಗೆ ಹೋಗಬೇಕೆಂಬ ಆಸೆಯಿಂದ ರಾಜಾಪುರಕೆಕ್ಕೆ ಪಯಣ. ಆದರೆ ಅಜ್ಜಿಯಲ್ಲಿ ಎಲ್ಲಿ ಹೋಗಬೇಕೆಂದು ಕೇಳಿದಾಗ ಅವರು ಸ್ಪಷ್ಟವಾಗಿ ಉತ್ತರಿಸದೆ "ಇಲ್ಲೇ ಹತ್ತಿರ " ಎಂದು ಸುಮ್ಮನಾದರು.ಹಾಗೆ ಕತ್ತಲಾಯಿತು ಇಬ್ಬರೂ ನಿದ್ದೆಗೆ ಜಾರಿದರು.

ಮುಂಜಾನೆ ಏಳು ಗಂಟೆ.ಸೂರ್ಯ ರಶ್ಮಿಗಳು ಕವನಳ ಕಣ್ಣನ್ನು ಮುತ್ತಿಡುತ್ತಿದ್ದವು.ಕವನ ಮೆಲ್ಲನೆ ತನ್ನ ಕೋಮಲ ಕಣ್ಣುಗಳನ್ನು ತೆರೆದಳು. ನಿಧಾನವಾಗಿ ಪಕ್ಕದ ಸೀಟ್ ಗೆ ಕಣ್ಣು ಹಾಯಿಸಿದಾಗ ಅಜ್ಜಿ ಅಲ್ಲಿಲ್ಲ. "ಅರೆ ಅಜ್ಜಿ ಎಲ್ಲಿ ಹೋದರು? ನೆನ್ನೆ ರಾತ್ರಿ ತಾನೆ ಒಟ್ಟಿಗೆ ಮಾತಾಡಿ ಮಲಗಿದ್ದೆವು! "ಎಂದು ಕವನ ತನ್ನಲ್ಲೇ ಹೇಳಿಕೊಂಡಳು. ಆದರೂ ಏನೋ ಅನುಮಾನದಲ್ಲಿ ಅವಳು ತನ್ನ ಹಿಂದಿನ ಸೀಟಲ್ಲಿ ಕುಳಿತುಕೊಂಡಿದ್ದ ಹೆಂಗಸಲ್ಲಿ ವಿಚಾರಿಸಿದಳು."ಯಾರು, ನಿಮ್ಮ ಪಕ್ಕದಲ್ಲಿ ಹಾಗೆ ಯಾರೂ ಕುಳಿತುಕೊಂಡಿರಲಿಲ್ಲ ಅಲ್ವಾ, ನಾನು ನಿನ್ನೆಯಿಂದನೇ ನಿಮ್ಮನ್ನು ವೀಕ್ಷಿಸುತ್ತಿದ್ದೆ. ನೀವು ನಿಮ್ಮಷ್ಟಕ್ಕೇನೆ ಮಾತನಾಡುತ್ತಿದ್ರಲ್ಲ. ನಾನೇನೋ ಈಗದ ನ್ಯೂ ಜನ್ ಅಲ್ವಾ ಅದೇನೋ ಕಿವಿಗೆ ಸಿಲುಕಿಸಿ ಶೋಕಿ ಮಾಡುತ್ತಿರಬಹುದು ಎಂದು ಸುಮ್ಮನಾದೆ ". ಎಂದು ಆ ಹೆಂಗಸು ಉತ್ತರಿಸಿದರು. ಕವನಳಿಗೆ ಇದೆಲ್ಲಾ ಕೇಳಿದಾಗ ಆಶ್ಚರ್ಯವಾಯಿತು.ತನ್ನಲ್ಲಿ ತನಗೆಯೇ  ಅನುಮಾನ ಶುರುವಾಯಿತು. ಹಾಗಾದರೆ ತಾನು ನಿನ್ನೆ ಇಡೀ ದಿನ ಆ ಅಜ್ಜಿಯಲ್ಲಿ ಮಾತನಾಡಿದ್ದೆಲ್ಲಾ ಸುಳ್ಳಾ!"ಎಂದು ಕವನ ತನ್ನಲ್ಲೇ ಪ್ರಶ್ನಿಸಿದಳು.ಅವಳಿಗೆ ತನ್ನ ಪಕ್ಕದ ಸೀಟ್ ನೋಡುವಾಗ ಆ ಅಜ್ಜಿ ಕುಳಿತುಕೊಂಡು ಮುಗುಳ್ನಗೆಯುವಂತೆ ಭಾಸವಾಗುತ್ತಿತ್ತು. ಅಂತೂ ಕವನ ತನ್ನ ಅಜ್ಜಿ ಮನೆಗೆ ಬಂದು ಸೇರಿದಳು.

ಕವನಳ ಅಜ್ಜಿ ಮುತ್ತವ್ವ.ತನ್ನ ಮೊಮ್ಮಗಳು ಬರುವುದೆಂದು ಎಲ್ಲಿಲ್ಲದ ಆನಂದ. ಹಾಗೇನೇ ಮೊಮ್ಮಗಳಿಗೆ ಇಷ್ಟವಾದ ಎಲ್ಲಾ ತಿಂಡಿತಿನಸುಗಳನ್ನು ಮಾಡಿಟ್ಟಿದ್ದರು.ಕವನ ಎಲ್ಲವನ್ನೂ ಖುಷಿಯಿಂದ ಸೇವಿಸಿದಳು.

ಆ ದಿನ ರಾತ್ರಿ ಕೂಡಾ ಕವನಳಿಗೆ ಬಸ್ಸಲ್ಲಿ ಕಂಡ ಆ ಅಜ್ಜಿ ಮುಗುಳ್ನಗೆಯುತ್ತಾ ಎದುರು ನಿಂತಂತೆ ಕಾಣುತ್ತಿತ್ತು. ಹೇಗಾದರೂ ಮುಂಜಾನೆಯಾಯಿತು ಕವನ ತನಗೆ ಅನುಭವವಾದ ಆ ಘಟನೆಗಳೆಲ್ಲವನ್ನು ಅಜ್ಜಿಯಲ್ಲಿ ಹಂಚಿದಳು. "ಹಾಗಾದರೆ ಆ ಅಜ್ಜಿಯ ಹಿಂದೆ ಏನೋ ದುರೂಹತೆಗಳಿವೆ , ಅವರು ನಿನ್ನಲ್ಲಿ ಏನೋ ಹೇಳಬೇಕಾಗಿ ಹಂಬಲಿಸುತ್ತಿರಬಹುದು " ಎಂದು ಮುತ್ತವ್ವ ನ ಅಭಿಪ್ರಾಯ.ಆ ದಿನ ಮುತ್ತವ್ವ ಹಾಗು ಕವನ ಅಲ್ಲೇ ಹತ್ತಿರದ ಮನೆಯಾದ ಕಾರ್ಯಸ್ತನ ಮನೆಗೆ ಭೇಟಿ ನೀಡಿದರು. ಅಲ್ಲಿ ಕಂಡ ದೃಶ್ಯ ಕವನಳನ್ನು ಗಾಬರಿಮೂಡಿಸಿತು. ಅವಳು ಕಂಡ ಆ ಅಜ್ಜಿಯ ಫೋಟೋ ಕಾರ್ಯಸ್ತನ ಮನೆಯಲ್ಲಿ ತೂಗಿಸಿದ್ದರು. ಮುತ್ತವ್ವ ಹಾಗು ಕವನ ಆ ಅಜ್ಜಿಯ ಕುರಿತು ವಿಚಾರಿಸಿದಾಗ ಅವರು ತೀರಿಹೋಗಿ ಒಂದು ವರ್ಷವಾಯಿತು ಎಂದು ತಿಳಿಯಿತು.ಅವರು ಆ ಕಾರ್ಯಾಸ್ತನ ಅಜ್ಜಿಯಾಗಿದ್ದರು. ಹೇಗೆ ತೀರಿಕೊಂಡರು ಎಂದು ಯಾರಿಗೂ ತಿಳಿಯದು. "ಅಂದು ಅಜ್ಜಿ ನಮ್ಮ ಮನೆಗೆ ಬರಬೇಕಾಗಿ ಬಸ್ ಹತ್ತಿದ್ದರು. ಮರುದಿನ ಬೆಳಿಗ್ಗೆ ಅದೇನೋ ಆಕ್ಸಿಡೆಂಟಲ್ಲಿ ತೀರಿಹೋದರು ಎಂಬ ಸುದ್ದಿ ಪತ್ರಿಕೆಯಲ್ಲಿ ಬಂದ ಮೇಲೆನೇ ನನಗೆ ತಿಳಿಯಿತು". ಎನ್ನುತ್ತಾ ಕಾರ್ಯಾಸ್ತ ಕಣ್ಣೀರಿಟ್ಟನು . ಇದನ್ನು ಕೇಳಿದ ಕವನಳಿಗೆ ದುಃಖವಾಯಿತು. ಆದರೂ ಆ ಅಜ್ಜಿ ಆತ್ಮ ಯಾಕೆ ತನ್ನ ಹಿಂದೆ ಬರುತ್ತಿದೆ ಎಂಬ ಅನುಮಾನ ಕವನಳಿಗೆ.

ರಾತ್ರಿ 12 ಗಂಟೆಯಾಗಿತ್ತು . ಕವನಾಳಿಗೆ ನಿದ್ದೆ ಬರುತ್ತಾನೇ ಇಲ್ಲ.ಕಿಟಕಿಯಲ್ಲಿ ಹೊರಗಡೆ ನೋಡಿದರೆ ಎಲ್ಲೆಲ್ಲೂ ಅಂಧಾಕಾರ . ಅವಳು ತನ್ನ ರೂಮಲ್ಲಿ ಟೇಬಲ್ ಹತ್ತಿರ ಕುಳಿತು ಪುಸ್ತಕ ಓದತೊಡಗಿದಳು.

ಕಿಟಿಕಿಯ ಬಾಗಿಲುಗಳು ರಭಸದಿಂದ ಬಡಿದವು. ಕೆರ್ಟೈನ್ ಗಳು ಗಾಳಿಗೆ ಹಾರಾಡಿದವು. ಇವೆಲ್ಲಾ ಆತ್ಮದ ಆಗಮನವನ್ನು ಸೂಚಿಸುತ್ತಿವೆ ಎಂದು ಕವನ ಗಾಬರಿಗೊಂಡಳು . ದಿಢೀರನೆ ಯಾರೋ ಹಿಂದೆಯಿಂದ ಹೆಗಲು ಹಿಡಿದಂತೆ ಭಾಸವಾಯಿತು.ಯಾರೆಂದು ನೋಡಿದಾಗ ಅದೇ ಅಜ್ಜಿ. ಕವನಳು ಏನು ಮಾಡಬೇಕೆಂದು ತೋರದೆ ಸುಮ್ಮನಾದಳು.

"ಮಗು ನನ್ನ ಕುರಿತು ಈಗಾಗಲೇ ನೀನೇಲ್ಲವನ್ನೂ ತಿಳಿದಿದ್ದೀಯ. ಆದರೂ ನಿನ್ನನ್ನು ನಾನು ಹಿಂಬಾಲಿಸುತ್ತಿದ್ದೇನೆ.ಯಾಕೆಂದರೆ ಅಂದು ರಾತ್ರಿ ಅದ ಘಟನೆಯನ್ನು ಅರಿತವರಾರೂ ಇಲ್ಲ.ಅಂದು ನಾನು ಮೊಮ್ಮಗನನ್ನು ಭೇಟಿಯಾಗುವ ಖುಷಿಯಲ್ಲಿ ಬಸ್ ಹತ್ತಿದ್ದೆ.ಆದರೆ ಆ ರಾತ್ರಿ ಉಂಟಾದ ಘಟನೆಯಿಂದ ನನ್ನ ಮೊಮ್ಮಗನನ್ನು ಕಣ್ಣುತುಂಬಾ ನೋಡಲು ಸಾಧ್ಯವಾಗದೆ ಹೋಯಿತು ". ಎನ್ನುತ್ತಾ ಆ ಆತ್ಮ ಅಳುತ್ತಿತ್ತು. ಕವನಳಿಗೆ ಏನಾಗಿರಬಹುದೆಂದು ತಿಳಿಯಲಿಲ್ಲ."ನನ್ನ ಪಕ್ಕ ನಿನ್ನಷ್ಟೇ ಪ್ರಾಯದ ಹುಡುಗಿ ಕುಳಿತಿದ್ದಳು. ನನ್ನಲ್ಲಿ ಬಹಳ ಚೇಷ್ಟೆಯಿಂದ ಮಾತಾಡಿಸುತ್ತಿದ್ದಳು.ನಮ್ಮ ಹಿಂದಿನ ಸೀಟ್ ನಲ್ಲಿ ಕುಳಿತುಕೊಂಡ ಇಬ್ಬರು ಯುವಕರು ಆ ಹುಡುಗಿಯನ್ನು ಹೊಂಚು ಹಾಕುತ್ತಿದ್ದರು. ಆ ದಿನ ರಾತ್ರಿ ಬಸ್ ನಲ್ಲಿ ಎಲ್ಲರೂ ಘಾಡ ನಿದ್ರೆಯಲ್ಲಿರುವಾಗ ಆ ಯುವಕರು ಅಮಲು ಪದಾರ್ಥ ಸೇವಿಸಿ ಹುಡುಗಿಗೆ ಕಿರುಕುಳ ನೀಡಲೆತ್ನಿಸುತ್ತಿದ್ದರು. ತಟ್ಟನೆ ನನಗೆ ಎಚ್ಚರವಾಗಿ ಅವರನ್ನು ತಡೆಯಲೆತ್ನಿಸಿದೆ. ಹಾಗೆ ಅವರೊಂದಿಗಿನ ಹಿಡಿತ ಎಳೆತದಲ್ಲಿ ಅವರು ನನ್ನನು ಹಿಂದಕ್ಕೆ ನೂಕಿದಾಗ ನನ್ನ ತಲೆ ಸರಳಿಗೆ ತಾಗಿ ಮೂರ್ಛೆ ತಪ್ಪಿದೆ. ಆ ಹುಡುಗಿಗೆ ಎಚ್ಚರವಾಗಿರಲಿಲ್ಲ. ಡ್ರೈವರ್ ನದ್ದು ಬೇರೆಯೇ ಕೊಠಡಿಯಾದ ಕಾರಣ ಆತನಿಗೆ ಏನೂ ತಿಳಿಯಲೇ ಇಲ್ಲ.

 ಅವರು ನನ್ನನ್ನು ಏನಾಯಿತು ಎಂದು ಸಹ ನೋಡದೆ ಬಸ್ ನಿಂದ ಹೊರದಬ್ಬಿದರು. ಹಾಗೆ ತುಂಬಾ ಹೊತ್ತು ರೋಡಲ್ಲಿ ನಾನು  ಕೂಗಿದೆ. ಯಾರೂ ಕೇಳಿಸಲಿಲ್ಲ. ಎಲ್ಲರೂ ಆಕ್ಸಿಡೆಂಟ್ ಎಂದು ಗಾಡಿ ನಿಲ್ಲಿಸದೆ ತಪ್ಪಿಸಿಕೊಂಡು ಹೋಗುತ್ತಿದ್ದರು. ಹಾಗೆ ನೀರಿಗಾಗಿ ಹರಚುತ್ತಾ ಅಲ್ಲೇ ಪ್ರಾಣ ಕಳೆದುಕೊಂಡೆ".ಎನ್ನುತ್ತಾ ಆ ಆತ್ಮ ಬಿಕ್ಕಿ ಅಳತೊಡಗಿತು . ಇದನ್ನು ಕೇಳಿದ ಕವನಳಿಗೆ ಸಂಕಟವಾಯಿತು.

"ಅಂದು ನೀನು ಹತ್ತಿದ ಬಸ್ ನಲ್ಲೇ ಆ ನೀಚ ಯುವಕರಿದ್ದರು.ಅವರು ನಿನ್ನನ್ನು ಹೊಂಚು ಹಾಕಿದ್ದರು . ನನಗಾದ ನೀಚತನ ಇನ್ಯಾರಿಗೂ ಬರಕೂಡದು.ನಾನು ಆ ಮೃಗಗಳಿಂದ  ನಿನ್ನನ್ನು ಸಂರಕ್ಷಿಸಲಿಕ್ಕಾಗಿ ಹಿಂಬಾಲಿಸಿದೆ.ಅವರು ನಿನ್ನನ್ನು ಮುಟ್ಟದಂತೆ ತಡೆಗಟ್ಟಿದೆ. ನನ್ನ ಮೊಮ್ಮಗನನ್ನು ನೋಡಬೇಕೆಂಬ ಆಸೆಯನ್ನು ನಿನ್ನ ಮೂಲಕ ಈಡೇರಿಸಿದೆ ". ಎಂದಿತು ಆ ಆತ್ಮ. ಕವನಳ ಮನಸ್ಸು ದುಃಖ ಆವರಿಸಿತು. ಕಂಬನಿ ಹನಿ ಹನಿಯಾಗಿ ನೆಲಕ್ಕೆ ಹರಿದವು.

"ನಿಮ್ಮ ಮರಣಕ್ಕೆ ಕಾರಣವಾದ ಆ ಯುವಕರಲ್ಲಿ ಸೇಡು ತೀರಿಸಿಕೊಳ್ಬೇಕು ಅನಿಸುತಿಲ್ಲವೇ?"ಎಂದು ಕವನ ಕೇಳಿದಾಗ. "ಜನನ ಮರಣ ಆ ದೇವನಿಗೆ ಬಿಟ್ಟಿದ್ದು. ನನ್ನ ಆಯುಷ್ಯ ಅಷ್ಟೇ ಎಂದು ತೃಪ್ತಿ ಪಡುತ್ತೇನೆ. ಅವರಿಗೆ ತಕ್ಕ ಶಿಕ್ಷೆ ಆ ಭಗವಂತ ನೀಡುವನು. ಆದರೆ ಇನ್ನೇನಾದರೂ ನೀಚ ಪ್ರವೃತ್ತಿ ಉಂಟಾದರೆ ಅವರನ್ನು ನಾನೇ ಎದುರಿಸುವೆ".ಎನ್ನುತ್ತಾ ಆ ಆತ್ಮ ವಾತಾವರಣದಲ್ಲೆಲ್ಲೋ ಮಾಯಾವಾಯಿತು.


Rate this content
Log in

Similar kannada story from Horror