Ashwini k

Romance

3.5  

Ashwini k

Romance

ಅವಳು

ಅವಳು

2 mins
797


ಜನದಟ್ಟಣೆಯಿಂದ ಕೂಡಿದ ಜಾಗ. ಎಲ್ಲರೂ ಅವರವರ ಕಾರ್ಯಗಳಲ್ಲಿ ಮುಳುಗಿರುವರು. ಯುವತಿಯರು ಶಾಪಿಂಗ್ ಅಂತ ಇದ್ದ ಬಟ್ಟೆಗಳನ್ನೆಲ್ಲಾ ಎಳೆದು ಹಾಕಿ ಯಾವ ಡ್ರೆಸ್ಸ್ ತನಗೆ ಸೂಟ್ ಆಗುತ್ತೆ ಎಂಬ ತವಕದಲ್ಲಿ. ಇನ್ನು ಯುವಕರು ಫುಟ್ಬಾತ್ ಗಳಲ್ಲಿ ಸಿಗರೇಟ್ ಸೇದುತ್ತಾ, ಫ್ರೆಂಡ್ಸ್ ಜೊತೆ ತಮಾಷೆ ಮಾತುಗಳನ್ನಾಡುತ್ತಾ ಟೈಮ್ ಪಾಸ್ ಮಾಡುವ ಕೆಲಸದಲ್ಲಿ. ಪುಟ್ಟ ಮಕ್ಕಳು ಬೇರೆ ಹೆತ್ತವರೊಡನೆ ಜಗಳವನ್ನಾಡುತ್ತಾ ಅದು ಇದು ಎಂದು ಇದ್ದ ಆಟಿಕೆಗಳನ್ನೆಲ್ಲಾ ಎಳೆದು ಹಾಕಿ ಎಲ್ಲವನ್ನೂ ಖರೀಧಿಸುವ ಆತುರದಲ್ಲಿ.


ಇವೆಲ್ಲದರ ಮಧ್ಯೆ ಅವಳು ಅವನನ್ನು ಭೇಟಿಯಾದಳು. ಅವಳ ಕಣ್ಣುಗಳು ಅವನನ್ನೇ ನೋಡುತ್ತಿದ್ದವು. ಕಣ್ ರೆಪ್ಪೆಗಳು ಮುಚ್ಚುವುದನ್ನೇ ಮರೆತಿದ್ದವು. ವಾತಾವರಣವಿಡೀ ಸ್ಥಬ್ಧವಾದ ಹಾಗೆ. ತನ್ನ ಎದೆಬಡಿತ ತನಗೆ ಕೇಳುತ್ತಿದೆ.

ಅವನು ತನ್ನ ಕಣ್ಣುಗಳ ಆಳದಿಂದ ಅವನ ಧ್ವನಿಯ ಸೌಮ್ಯ ಅಭಿವ್ಯಕ್ತಿಗಳಿಗೆ ಸುಂದರವಾಗಿದ್ದನು. ಚುರುಕಾದ ನೈಸರ್ಗಿಕ ಹುಬ್ಬುಗಳು, ಹೌದ ಅಲ್ಲವೋ ಎಂಬಂತೆ ಚಿತ್ರಬಿಡಿಸಿದಂತಿರುವ ತೆಳ್ಳಗಿನ ಗಡ್ಡ. ಬೂಧು ಕೂದಲು , ಪ್ರಾಮಾಣಿಕ ನಗು, ಆಕರ್ಷಹಿಸುವ ಕೆನ್ನೆಗುಳಿಗಳು ಮತ್ತು ಸಮುದ್ರ ನೀಲಿ ಕಣ್ಣುಗಳು. ಇವೆಲ್ಲವೂ ಅವಳನ್ನು ಅವನ ಕಡೆ ಆಕರ್ಷಸಿದವು.

"ಅರೆ! ಯಾರಿವನು ಇಷ್ಟು ಸುಂದರವಾಗಿರುವನು. ಯಾರಲ್ಲೂ ತೋರದ ವಿಶೇಷತೆ ಅದ್ಯಾಕೆ ನನಗೆ ಇವನಲ್ಲಿ ಭಾಸವಾಗುವುದು?"ಎಂದು ತನ್ನಲ್ಲಿ ತಾನೇ ಪ್ರಶ್ನಿಸಿದಳು. ಆ ಕ್ಷಣದಲ್ಲಿ ಅವಳು ಪರಿಸರವನ್ನೇ ಮರೆತಿದ್ದಳು. ತಟ್ಟನೆ ಕೈಯೊಂದು ತನ್ನ ಹೆಗಲನ್ನು ಸ್ಪರ್ಶಸಿದಂತೆ ಭಾಸಾವಾಯಿತು. ಅದು ಅವಳ ಗೆಳತಿಯಾಗಿದ್ದಳು."ಅದ್ಯಾಕೆ ಇಲ್ಲಿ ಮಂಕಾಗಿ ನಿಂತುಕೊಂಡಿದ್ದಿ, ಪೇಟೆಗೆ ಬಂದರೆ ಏನಾದ್ರು ಪರ್ಚೆಸ್ ಮಾಡಿಕೊಂಡು ಹೋಗೋದು ತಾನೇ?" ಎಂದಳು. "ಏನಿಲ್ಲಾ ಅದೇನೋ ಆಲೋಚಿಸುತ್ತಿದ್ದೆ " ಎಂದು ಉತ್ತರಕೊಟ್ಟು ಅವನತ್ತ ಕಣ್ಣು ಹಾಯಿಸುವಷ್ಟು ಹೊತ್ತಿಗೆ ಆತ ಮಾಯವಾಗಿದ್ದನು.


ಆ ದಿನ ರಾತ್ರಿ ಪೂರ್ತಿ ಅವನದ್ದೇ ನೆನಪು. ನಿದ್ದೆಗೆ ಜಾರಲೆಂದು ಕಣ್ಣು ಮುಚ್ಚಿದರೆ ಕನಸಲ್ಲೂ ಅವನ ತೊಂದರೆ.ಮರುದಿನ ಅದೇ ಜಾಗಕ್ಕೆ ಹೋದಳು. ಸುತ್ತಲೂ ಅವಳ ಕಣ್ಣುಗಳು ಅವನನ್ನೇ ಹುಡುಕುತ್ತಿದ್ದವು. ಪರಿಚಿತರು ಬಂದು ಮಾತಾಡಿಸಿದರೂ ಸಹ ಅವಳ ಕಣ್ಣು ಮನಸುಗಳೆರಡೂ ಅವನಿಗಾಗಿ ಮಿಡುಕುತ್ತಿದ್ದವು. ತುಂಬಾ ಹೊತ್ತು ಕಳೆದಾಗ ಅವನಿನ್ನು ಬರಲ್ಲ ಎಂದು ಅರಿತು ಪುನಃ ಮನೆಗೆ ತೆರಳಿದಳು. ಆ ದಿನವಿಡೀ ಅವಳನ್ನು ಮೌನವಾವರಿಸಿತ್ತು. "ಯಾಕೆ ಅವನು ಬರಲಿಲ್ಲ!ಇನ್ನೊಮ್ಮೆ ಭೇಟಿಯಾದರೆ ಕರೆದು ಮಾತಾಡಿಸುತ್ತಿದ್ದೆ ". ಎಂದು ಅವಳಷ್ಟಕ್ಕೆ ಹೇಳಿಕೊಂಡಳು. ಮರುದಿನ ಮುಂಜಾನೆ ಬೇಗನೆ ಹೊರಡಿ ಅದೇ ಜಾಗಕ್ಕೆ ಬಂದಳು. ಸುತ್ತಲೂ ಅವಳ ಕಣ್ಣುಗಳು ಸಂಚರಿಸಿದವು. ಆದರೆ ಎಲ್ಲೂ ಇಲ್ಲ. ಯಾರನ್ನಾದರೂ ಕೇಳುವ ಎಂದರೆ ಅವನ್ಯಾರು, ಹೆಸರೇನು, ಎಲ್ಲಿಯವನು ಎಂದೇನೂ ಗೊತ್ತಿಲ್ಲ.

ದಿಢೀರಣೆ ಹಿಂದೆಯಿಂದ ಯಾರೋ ಅವಳ ತೋಳನ್ನು ಸ್ಪರ್ಶಸಿದರು."ಹೋ!ಯಾರೋ ಪರಿಚಿತರಿದ್ದಿರಬಹುದು". ಎಂದು ಸುಮ್ಮನಾದಳು.


"ಎಸ್ಕ್ಯೂಸ್ ಮೀ!" ಎಂಬ ಗಾಂಭೀರ್ಯ ಗಂಡಸು ಸ್ವರ. ಅವಳು ಯಾರೆಂದು ತವಕದಲ್ಲಿ ತಿರುಗಿ ನೋಡಿದಳು.... ಆ ಕ್ಷಣ ಸ್ಥಬ್ಧಳಾಗಿ ಬಿಟ್ಟಳು.  ಅದು ಬೇರೆ ಯಾರೂ ಆಗಿರಲಿಲ್ಲ. ಯಾರನ್ನು ಕಾಣಲೆಂದು ಅವಳು ಹಂಬಲಿಸಿದಲೋ ಅವನೇ ಕಣ್ಣೆದುರು ನಿಂತಿರುವನು. ಅವಳಿಗೆ ಏನು ಹೇಳಬೇಕೆಂದು ಭಾಸವಾಗಲಿಲ್ಲ. ಎದೆ ಬಡಿತ ಜೋರಾಯಿತು. ಮೊದಲ ದಿನ ಭೇಟಿಯಾದಾಗ ಉಂಟಾದ ಅದೇ ಅನುಭವ. ಕಣ್ಣುಗಳು ಹತ್ತಿರಕ್ಕೆ ಬಂದವು.ಅವಳು ಹೇಳಬೇಕೆಂದ ಮಾತುಗಳನ್ನು ಅವಳ ಕಣ್ಣೇ ಸಂವಾಧಿಸುತ್ತಿತ್ತು.ಎದೆ ಬಡಿತ ಅವರ ಆ ಭೇಟಿಗೆ ಮೃಧುವಾದ ಸ್ವರವನ್ನಿಟ್ಟಿತು. 


ಅವನು ಪುನಃ "ಹಲೋ!"ಎಂದು ಜೋರಾಗಿ ಕರೆದನು. ತಟ್ಟನೆ ಅವಳು ತನ್ನ ಕನಸಿನ ಲೋಕದಿಂದ ಎಚ್ಚೆತ್ತಳು.

ಆ ವೇಳೆಯಲ್ಲಿ ಅವಳಿಗೇನು ಹೇಳಬೇಕೆಂದೇ ಭಾಸವಾಗಲಿಲ್ಲ. ಆದಕಾರಣ ಅವನೇ ಶುರುಮಾಡಿದನು."ನಾನು ನಿಮ್ಮನ್ನು ಮೊನ್ನೆಯೇ ಗಮನಿಸಿದ್ದೆ ನೀವು ನನ್ನನ್ನೇ ನೋಡುತ್ತಾ ಮೈಮರೆತುಹೋಗಿದ್ರಿ. ನೆನ್ನೆ ಕೂಡಾ ನಿಮ್ಮ ಕಣ್ಣುಗಳು ನನಗಾಗಿಯೇ ಹಂಬಲಿಸುತ್ತಿತ್ತು. ಈಗ ನಿಮ್ಮ ಆ ಕೋಮಲ ಕಣ್ಣುಗಳು ಎಲ್ಲವನ್ನೂ ಹೇಳುತ್ತಿದೆ "..

ಹಾಗೆ ಅವರಿಬ್ಬರೂ ಒಬ್ಬರನ್ನೊಬ್ಬರು ಪರಿಚಯಿಸಿದರು. ಆ ಸುಂದರ ಯುವಕ ಇನ್ಯಾರೂ ಆಗಿರಲಿಲ್ಲ ಅವಳ ಬಾಲ್ಯ ಕಾಲ ಸ್ನೇಹಿತನೇ ಆಗಿದ್ದನು.....


Rate this content
Log in

Similar kannada story from Romance