ಬದುಕುಕಟ್ಟಿ ಕೊಂಡವರು
ಬದುಕುಕಟ್ಟಿ ಕೊಂಡವರು
ಶಿವಣ್ಯ ಎಂಬ ಪುಟ್ಟ ಗ್ರಾಮ. ಅಲ್ಲಿ ರಾಕೇಶ ರಾಣಿ ಎಂಬ ಮಕ್ಕಳು ವಾಸಿಸುತಿದ್ದರು. ಚಿಕ್ಕಂದಿನಿಂದಲೇ ತಂದೆ ತಾಯಿ ಇಬ್ಬರೂ ಆಕ್ಸಿಡೆಂಟ್ ಅಲ್ಲಿ ಪರಲೋಕವನ್ನು ಸೇರಿದ ಮಕ್ಕಳಿಗೆ ತಮ್ಮವರು ಎಂದು ಹೇಳಲು ಯಾರೂ ಇಲ್ಲ. ಅದೊಂದು ದೊಡ್ಡ ದುರಂತವೇ ಆಗಿತ್ತು. ರಾಕೇಶ ಹಾಗೂ ರಾಣಿ ತನ್ನ ಹೆತ್ತವರ ಜೊತೆ ಸಣ್ಣ ಪ್ರವಾಸಕ್ಕೆಂದು ಹೊರಡುವ ದಿನ. ಇಬ್ಬರೂ ಖುಷಿಯಿಂದಿದ್ದರು. ಆದರೆ ಅದು ಅವರ ಹೆತ್ತವರೆನ್ನೇ ಕಳೆದುಕೊಳ್ಳುವ ದಿನವೆಂದು ಯಾರರಿಯರು. ದಾರಿ ಮದ್ಯೇನೆ ಕಾರು ಆಕ್ಸಿಡೆಂಟ್ ಅಲ್ಲಿ ಅವರು ಮೃತಪಟ್ಟರು ಭಾಗ್ಯದಲ್ಲಿ ಪುಟ್ಟ ಮಕ್ಕಳು ಕಾರಿನಿಂದ ಹೊರದಬ್ಬಿದ ಕಾರಣ ಅವರ ಜೀವ ಉಳಿಯಿತು. ಆ ದುರ್ಘಟನೆಯ ಬಳಿಕ ತನ್ನ ಮುದ್ದು ತಂಗಿಯನ್ನು ನೋಡುವ ಜವಾಬ್ದಾರಿ ರಾಕೇಶನಿಗೆ ಸೇರಿತು. ರಾಕೇಶನಿಗೆ 20ವರುಷ ಪ್ರಾಯ ರಾಣಿಗೆ 10ವರುಷ. ಕಲ್ಲು ಮುಳ್ಳು ತಾಗದಂತೆ ತಂಗಿಯನ್ನು ನೋಡಿಕೊಳ್ಳುವನು. ತನ್ನ ತಂದೆ ತಾಯಿ ತೀರಿಕೊಂಡಾಗ ರಾಕೇಶನಿಗೆ 10ವರ್ಷ ಅವತ್ತು ಅವರು ಹೇಳಿದ ಮಾತು ಆತನನ್ನು ಇಲ್ಲಿ ವರೆಗೂ ಕೊಂಡೊಯ್ದಿತು. ಆತ ಏನೇ ಆದರೂ ತನ್ನ ತಂಗಿಯನ್ನು ಬಿಡೆನು, ಅವಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವೆನೆಂದು ಒಪ್ಪಿಗೆ ನೀಡಿದ್ದ. ಅವತ್ತು ಆತ ಪಟ್ಟ ಕಷ್ಟ ಈಗಲೂ ಕಣ್ಣೆದುರು ಕಾಣಿಸುತ್ತಿದೆ. ಅಂದು ಶಿವಣ್ಯಪುರದಲ್ಲಿ ಪುಟ್ಟ ಹೋಟೆಲೊಂದರಲ್ಲಿ ಕೆಲಸಕ್ಕೆ ನಿಂತನು. ತನ್ನ ತಂಗಿಯೂ ಜೊತೆಗಿದ್ದಳು. ಅಲ್ಲಿ ಹೋಟೆಲಿಗೆ ಭೇಟಿ ನೀಡಿದ ಜನರೆಲ್ಲರ ಪಾತ್ರೆ ತೊಳೆಯುವುದು, ಟೇಬಲ್ ಒರೆಸುವುದು ಇವೆಲ್ಲಾ ಕೆಲಸವನ್ನು ಮಾಡಬೇಕಿತ್ತು ಆ 10ರ ಬಾಲಕ. ಹಾಗಿದ್ದರೂ ತನ್ನ ತಂಗಿಯಲ್ಲಿ ಯಾವುದೇ ಕೆಲಸ ಮಾಡಿಸಲು ಬಿಡುತ್ತಿರಲಿಲ್ಲ. ರಾತ್ರಿ ಅಲ್ಲೇ ನೆಲದಲ್ಲಿ ಮಲಗುತ್ತಿದ್ದರು ಇಬ್ಬರೂ. ಹೋಟೆಲ್ ಮಾಲಿಕನು ಒಂದಲ್ಲ ಒಂದು ವಿಷಯಕ್ಕೆ ರಾಕೇಶನಿಗೆ ಜೋರು ಮಾಡಿತ್ತಿದ್ದನು. ಒಮ್ಮೆ ಪಾತ್ರೆ ತೊಳೆದದ್ದು ಸರಿಯಾಗಿಲ್ಲ ಎಂದು ತುಳಿದದ್ದೂ ಉಂಟು. ಆದರೂ ರಾಕೇಶನು ತನ್ನ ತಂಗಿಯನ್ನು ನೋಡಿ ಅದೇ ತರಹ ತಂದೆ ತಾಯಿಗೆ ನೀಡಿದ ಒಪ್ಪಿಗೆಯನ್ನು ನೆನೆದು ಸುಮ್ಮನಾಗಿ ಬಿಟ್ಟ. ರಾತ್ರಿ ಸರಿಯಾಗಿ ಮಲಗಲು ಕೂಡ ಬಿಡುತ್ತಿರಲಿಲ್ಲ ಆ ನೀಚ. ಇದ್ದ ಪಾತ್ರೆಗಳನ್ನೆಲ್ಲಾ ತಂದು ರಾಶಿಗೂಡಿಸುತ್ತಿದ್ದ. ಒಮ್ಮೆ ತೊಳೆದದ್ದು ಸಾಕಾಗದೆ ಪುನಃ ತೊಳಿಸುತ್ತಿದ್ದ."ದನಿ ಇದು ಒಮ್ಮೆ ಶುಚಿಗೊಳಿಸಿಟ್ಟ ಪಾತ್ರೆ "ಎಂದಾಗ "ನಿಮಗಿಬ್ಬರಿಗೂ ತಿನ್ನಲು ಕುಡಿಯಲು ನನ್ನ ಹಣದಿಂದ ಆಗಬೇಕು ಅದಲ್ಲದೆ ನನ್ನನ್ನೇ ಪ್ರಶ್ನಿಸಲು ಬರುತ್ತೀಯ "ಎಂದು ದುರುಗಿಟ್ಟಿಸುತಿದ್ದ. ಪೊಲೀಸ್ ರು ತನಿಖೆಗೆ ಬಂದಾಗ ಮಾಲಿಕನು ರಾಕೇಶ ಹಾಗೂ ರಾಣಿಯನ್ನು ಅಡಗಿಸುತ್ತಿದ್ದ. ಚಿಮಿಣಿಯನ್ನೂ ಕೂಡ ರಾಕೇಶನಲ್ಲಿ ಶುಚಿಗೊಳಿಸುತ್ತಿದ್ದ.
ರಾಕೇಶ ಎಷ್ಟೇ ಕಷ್ಟ ಪಟ್ಟರೂ ಅಲ್ಲಿಂದ ಲಭಿಸಿದ ಹಣವನ್ನು ಕೂಡಿಟ್ಟು ಒಂದು ಪುಟ್ಟ ಮನೆ ಕಟ್ಟಿದನು. ಅಂದು ಅವರಿಬ್ಬರ ಮನೆಯೊಕ್ಕಲು. ಹಿಂದೆ ನಡೆದಂತಹ ಘಟನೆಗಳನ್ನು ನೆನೆದುಕೊಳ್ಳುತ್ತಾ ಒಮ್ಮೆಲೆ ಸ್ಥಬ್ಧ ನಾಗಿದ್ದನು. "ಅಣ್ಣಾ ಅಣ್ಣಾ...
ಯಾಕಿಲ್ಲಿ ಕೂತಿದೀಯ ಊರವರೆಲ್ಲರೂ ಬಂದಿದ್ದಾರೆ ಬಾ ಅಣ್ಣಾ ಗೃಹ ಪ್ರವೇಶ ನಡೆಸುವ "ಎಂದು ನುಡಿದಳು ರಾಣಿ. ಹಾಗೇನೇ ಇಬ್ಬರೂ ಜೊತೆಗೆ ನಡೆದು ಕೊಂಡು ಹೋದರು. ಅದೇರೀತಿ ಸಣ್ಣ ಮಟ್ಟದಲ್ಲಾದರೂ ತಮ್ಮ ಪುಟ್ಟ ಮನೆಯೊಕ್ಕಲು ನಡೆಯಿತು. ರಾಣಿಗೆ ತುಂಬಾ ಖುಷಿ. ಆದರೆ ರಾಕೆಶನಿಗೆ ಯಾವುದೇ ತೃಪ್ತಿ ಇಲ್ಲ ತನ್ನ ತಂಗಿಯನ್ನು ಒಳ್ಳೆಯ ರೀತಿಯಲ್ಲಿ ಕಲಿಸಿ ಉತ್ತಮ ಉದ್ಯೋಗ ಪಡೆಯಬೇಕೆಂಬುದು ಆತನ ಕನಸು. ತನ್ನ ಅಣ್ಣನ ಕನಸಿನಂತೆ ರಾಣಿ ಕಾಲೇಜುಅಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದಳು. ಅಣ್ಣನ ಇಷ್ಟದಂತೆ ಡಾಕ್ಟರ್ ಕೆಲಸಕ್ಕೆ ಸೇರಿದಳು. ಅಲ್ಲೂ ಅಷ್ಟೆ ಬಹಳ ಜಾಣೆಯಾಗಿದ್ದಳು ರಾಣಿ. ಲೆಕ್ಚರರ್ ಹೇಳಿದ ಎಲ್ಲಾ ಪ್ರಶ್ನೆಗಳಿಗೂ ಥಟ್ಟೆಂದು ಉತ್ತರ ನೀಡುತ್ತಿದ್ದಳು. ಇದನ್ನು ಕಂಡ ಉಳಿದವರಿಗೆ ಅಸೂಯೆ ಆಗುತ್ತಿತ್ತು. ರಾಣಿಯನ್ನು ಬಿಟ್ಟರೆ ಉಳಿದೆಲ್ಲರು ಡಾಕ್ಟರ್ ಕಲೆಕ್ಟರ್ ಗಳ ಮಕ್ಕಳು ನೋಟುಗಟ್ಟಲೆ ಹಣ ಬೀಸಿ ಜಾಯಿನ್ ಆದವರು. ಆದರೆ ರಾಣಿ ಮೆರಿಟ್ ಸೀಟ್ ಅಲ್ಲಿ ಬಂದವಳು. ಅವಳನ್ನು ಹೇಗಾದರೂ ಸೋಲಿಸ ಬೇಕೆಂಬುವುದು ಉಳಿದವರ ಗುರಿಯಾಗಿತ್ತು. ಹೇಗೆ ಎಂದು ಯೋಚಿಸುವಾಗ ಅದರಲ್ಲಿ ರೋಹಿತ್ ಎಂಬಾತ ಕಲೆಕ್ಟರ್ ಮಗ ಪ್ರೇಮ ನಾಟಕವಾಡಿ ಅವಳನ್ನು ನಮ್ಮ ವಶವಾಗಿಸುತ್ತೇನೆ ಎಂದ. ಆತನ ಮಾತಿಗೆ ಎಲ್ಲರೂ ಹೂ ಗೊಟ್ಟರು. ಒಂದು ದಿನ ರಾಣಿ ಫುಟ್ಪಾತ್ ಅಲ್ಲಿ ನಡೆದುಕೊಂಡು ಹೋಗುವಾಗ ಅವಳಲ್ಲಿ ರೋಹಿತ್ ಮಾತನಾಡಲೆಂದು ಪ್ರಯತ್ನಿಸಿದ. ಆದರೆ ಅದು ಯಶಸ್ವಿ ಆಗಿಲ್ಲ. ಹಾಗೇನೇ ಮರುದಿನ ರಾಣಿಯಲ್ಲಿ "ನೀನು ಬಹಳ ಸುಂದರವಾಗಿದ್ದಿ ಚನ್ನಾಗಿ ಕಲಿಯುತ್ತಿದ್ದಿ ಫ್ರೆಂಡ್ಸ್ ಅಗೋಣ". ಎಂಬ ಬೇಡಿಕೆಯನ್ನಿಟ್ಟ. ಆದರೆ ರಾಣಿಯು ಅದೇನೂ ಗಮನಿಸದೆ ಹೋದಳು ಹೀಗೇ ದಿನ ಕಳೆದಂತೆ ಅವರಿಬ್ಬರೂ ಫ್ರೆಂಡ್ಸ್ ಆದರು. ರಾತ್ರಿ ಇಡೀ ಫೋನ್ ಅಲ್ಲಿ ಆತನೊಂದಿಗೆ ಮಾತನಾಡಲು ಶುರು ಮಾಡಿದಳು. ಇದನ್ನು ಕಂಡ ರಾಕೇಶನು ಏನೋ ಫ್ರೆಂಡ್ಸ್ ಹತ್ರ ಮಾತಾಡ್ತಿದ್ದಾಳೆ ಎಂದು ಸುಮ್ಮಾನದ. ದಿನ ಕಳೆದಂತೆ ಆತನನ್ನು ಮಾತನಾಡಿಸಬೇಕೆಂಬ ಹಂಬಲ ಶುರುವಾಯಿತು. ದಿನ ಕಳೆದಂತೆ ರಾಣಿಯ ಮಾರ್ಕ್ಸ್ ನಲ್ಲಿ ಇಳಿತ ಉಂಟಾಗಲಾರಂಭಿಸಿತು. ಇದನ್ನು ಕಂಡ ಲೆಕ್ಚರರ್ಸ್ ರಾಕೇಶನಲ್ಲಿ ಹೇಳಿದರು. ಆತನಿಗೂ ಆಶ್ಚರ್ಯ ವೆನಿಸುತು. ಆದರೂ ತನ್ನ ತಂಗಿಯಲ್ಲಿ ಹೇಗೆ ಕೇಳಲಿ ಅವಳೇನೋ ನೊಂದು ಕೊಳ್ಳುವಳೋ ಎಂಬ ಭಯ. ದಿನ ಹೋದಂತೆ ತನ್ನ ಅಣ್ಣ ಸರಿಯಾಗಿ ಮಾತಾಡಿಸುತ್ತಿಲ್ಲ ಎಬುವುದು ಅವಳಿಗೆ ಮನದಟ್ಟಾಯಿತು. ಇದಕ್ಕೆಲ್ಲ ತನ್ನ ನೀಚ ವರ್ತನೆಯೇ ಕಾರಣ ಎಂದು ಅರಿತಳು. ಮರು ದಿನ ಮುಂಜಾನೆ ಹಿಂದಿನ ರಾಣಿ ಯಾಗಿಯೇ ಅವಳು ಮಾರ್ಪಟ್ಟಳು. ತನ್ನ ಫ್ರೆಂಡ್ ಎಂದು ಮೋಸ ಮಾಡಿದ ರೋಹಿತನ್ನು ಗಮನಿಸದೆ ಅವನ ಮಾತಿಗೆ ಕಿವಿಗೊಡದೆ ಹಿಂದಿಗಿಂತ ಚೆನ್ನಾಗಿ ಕಲಿತಳು.
ಹಾಗೇನೇ ತನ್ನ ಅಣ್ಣನ ಕನಸಿನಂತೆ ಒಂದೊಳ್ಳೆ ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಕೆಲಸ ಲಭಿಸಿತು . ಇದನ್ನು ಕಂಡ ರಾಕೇಶನಿಗೆ ಬಹಳ ಸಂತೋಷವಾಯಿತು. ಅವರಿಬ್ಬರೂ ಆ ಊರಿಗೇ ಮಾದರಿಯಾದರು.
ನೀತಿ :ಸಾಧಿಸಬೇಕೆಂಬ ಛಲವೊಂದಿದ್ದರೆ ಈ ಜಗತ್ತೇ ನಮ್ಮ ಜೊತೆಗಿರುವುದು.