ಕೃಷ್ಣ ಕುಟೀರ ಭಾಗ-6
ಕೃಷ್ಣ ಕುಟೀರ ಭಾಗ-6
ನಿಂಗಮ್ಮ ಮತ್ತು ಅವಳ ಗಂಡ ಸುಕೇಶ ಕೃಷ್ಣ ಕುಟೀರ ಮನೆಯ ಹೊಸ್ತಲಿನಲ್ಲಿ ಬಂದು ನಿಂತರು , ಮನೆ ನಾಯಿ ಲಕ್ಕಿ ಅವರ ಎದುರುಗಡೆ ಬಂದು ನಿಂತಿತು ಹಾಗೂ ಜೋರಾಗಿ ಬೊಗಳಲು ಆರಂಭಿಸಿತು. ಅವಾಗ ಅಲ್ಲಿಗೆ ಧಾವಿಸಿದ ಜಗನ್ನಾಥ ಅಕ್ಕ ಯಾವಾಗ ಬಂದೆ ಎಷ್ಟು ಸಮಯವಾಯಿತು ನಿನ್ನನ್ನು ನೋಡದೆ ಒಳಗೆ ಬಾ ಆದರೆ ಲಕ್ಕಿ ಅವರನ್ನು ಮನೆಯ ಒಳಗಡೆ ಬರದ ಹಾಗೆ ತಡೆಯುತ್ತಿತ್ತು ಬಂದರೆ ನಿಮ್ಮಿಬ್ಬರನ್ನು ಹರಿದು ಹಾಕುತ್ತೇನೆ ಎಂಬಂತೆ ಅದರ ವರ್ತನೆ ಇತ್ತು ಅದನ್ನು ನೋಡಿದ ಜಗನ್ನಾಥ ಹೇ ಲಕ್ಕಿ ಸುಮ್ಮನಿರು ಹೋಗು ಒಳಗಡೆ ಹೋಗು ಎಂದು ಲಕ್ಕಿಯನ್ನು ಗದರಿಸಿದನು ಲಕ್ಕಿ ತನ್ನ ಬಾಲ ಮುದುಡಿಕೊಂಡು ಹೊರಟು ಹೋಯಿತು ನಿಂಗೆ ಮತ್ತು ಸುಕೇಶ ಮನೆಯ ಒಳಗಡೆ ಬರಬೇಕಂತ ಇದ್ದಾಗ
ನಿಲ್ಲಿ ಎಂದು ಗಟ್ಟಿಯಾದ ಧ್ವನಿಯಲ್ಲಿ ಯಾರೋ ಘರ್ಜಿಸಿದ ಹಾಗೆ ಆಯಿತು ಜಗನ್ನಾಥ ಮತ್ತೆ ನಿಂಗಿ ತಿರುಗಿ ನೋಡಿದಾಗ ಅಲ್ಲಿ ವಿಶ್ವನಾಥನು ನಿಂತಿದ್ದನು
ವಿಶ್ವನಾಥ : ಈ ಮನೆ ಒಳಗಡೆ ಕಾಲಿಟ್ಟರೆ ಇಬ್ಬರ ಕಾಲನ್ನು ಕತ್ತರಿಸಿ ಹಾಕ್ತೀನಿ ನಿಮ್ಮಮ್ಮ ನಮ್ಮನೆಯ ಕೆಲಸದವಳು ಅವಳು ತೀರಿಕೊಂಡ ಮೇಲೆ ತಬ್ಬಲಿಯಾದ ನಿನ್ನನ್ನು ಸ್ವಂತ ಮಗಳಂತೆ ಸಾಕಿದೆ ಹಾಗೂ ಒಳ್ಳೆ ಮನೆತನದಲ್ಲಿ ಮದುವೆಯು ಮಾಡಿಕೊಟ್ಟೆ ಆದರೆ ನೀನು ಮಾಡಿದೆನು ನಡು ಬೀದಿಯಲ್ಲಿ ನನ್ನ ಮಾನ ಮರ್ಯಾದೆಯನ್ನು ಹರಾಜಾಕಿದೆ
ನಿಂಗಮ್ಮ : ಅಪ್ಪ ನಾನು ತುಂಬಾ ಸೋತಿದ್ದೀನಪ್ಪ ನನ್ ಗಂಡ ಇದ್ದ ಬದ್ಧ ಆಸ್ತಿಯನೆಲ್ಲ ಕುಡಿತ ಹಾಗೂ ಜೋಜಾಲಿ ಕಳ್ಕೊಂಡ್ರು ಇದ್ದ ಮನೆಸ ಮಾರಿ, ನಾವ್ ಬೀದಿಗೆ ಬಂದಿದೆ ನೀವು ಈಗ ಆಸರೆ ಕೊಡಲಿಲ್ಲ ಅಂದ್ರೆ ನಾವು ಕೆರೆ ನೋ ಬಾವಿನು ನೋಡ್ಕೊಳ್ಬೇಕಾಗ್ತದೆ.
ವಿಶ್ವನಾಥ : ಲ್ಲೇ ಮನೆಹಾಳಿ ಈ ಮುಂಡೆ ಮಗ ಯಾವಾಗಲೂ ನಿನ್ನ ಗಂಡ ಅದ ನಿಮಗಿಲ್ಲಿ ಬರಲಾದರೂ ಹೇಗೆ ಧೈರ್ಯ ಬಂತು ನಿಮ್ಮಂತವರಿ ಜಗತ್ತಲ್ಲಿ ಇರಬಾರದು ಕೆರೆ ಬಾವಿಯೋ ಏಕೆ ನಿನ್ನಂತ ಅವಳನ್ನ ನಾನೇ ಸಾಯಿಸಿ ಪುಣ್ಯ ಕಟ್ಕೊಳ್ತೀನಿ ಎಂದು ಹೇಳಿ ತನ್ನ ಪಕ್ಕದಲ್ಲಿ ಬಿದ್ದಿದ್ದ ಕತ್ತಿಯನ್ನು ಹಿಡ್ಕೊಂಡು ಅವರತ್ರ ಧಾವಿಸಿದ ಆಗ ಅವನನ್ನು ಜಗನ್ನಾಥನ್ನು ತಡೆದು
ಕತ್ತಿಯನ್ನು ಕಿತ್ಕೊಂಡು
ಜಗನ್ನಾಥ : ಕೃಷ್ಣ ಕುಟೀರ ಮನೆ ನಂಬಿ ಕೊಂಡು ಬಂದು ವೈರಿಯನ್ನು ಸಹ ಕೃಷ್ಣ ಕುಟೀರ ಮನೆಯವರು ಕೈ ಬಿಡಲಿಲ್ಲ ಅಂತದ್ರಲ್ಲಿ ಅಕ್ಕ ಈ ಮನೆ ಮಗಳು ಅಕ್ಕನ ಮನೆ ಒಳಗಡೆ ಸೇರಿಸಿಲ್ಲದ್ರೆ ಇಲ್ಲದಿದ್ದರೆ ನಾನು ಮನೆ ಬಿಟ್ಟು ಹೋಗ್ತೀನಿ
ವಿಶ್ವನಾಥ್ : ಜಗ್ಗ ವಿಷ ಸರ್ಪನಾದರೂ ನಂಬಬಹುದು ಇವರಿಬ್ಬರ ನಂಬಿಕೆ ಆಗಲ್ಲ ನೀನು ಇವರನ್ನು ಮನೆ ಒಳಗಡೆ ಸೇರಿಸಿದಕ್ಕೆ ಮುಂದೆ ಪಶ್ವತಾಪ ಪಡುತ್ತಿಯ
ಜಗನ್ನಾಥ : ಆದದ್ದಾಯಿತು ಅಪ್ಪ ಅಕ್ಕ ಎಷ್ಟು ವರ್ಷ ನಂತರ ಮನೆಗೆ ಬಂದಿದ್ದಾರೆ ವಿಜ್ರಂಭಣೆಯಿಂದ ಸ್ವಾಗತಿಸುವುದು ಬಿಟ್ಟು ಏನಪ್ಪಾ ಇದು. ವಿಭಾ ಆರ್ಥಿ ತಟ್ಟೆ ತಕೊಂಡು ಬಾ
ವಿಭಾ ಇಬ್ಬರಿಗ್ ಆರತಿ ಮಾಡಿ ಅವರನ್ನು ಮನೆ ಒಳಗಡೆ ಬರಮಾಡಿಸಿಕೊಂಡಳು
ಅವರು ಮನೆ ಒಳಗಡೆ ಕಾಲಿಟ್ಟ ಹಾಗೆ lಲಕ್ಕಿ ಮೇಲೆ ನೋಡ್ಕೊಂಡು wooooo. ಅಂತ ವಿಚಿತ್ರವಾಗಿ
ಕಿರಿಚಲು ಪ್ರಾರಂಭಿಸಿದ
ವಿಶ್ವನಾಥ :ಲಕ್ಕಿ ಹೀಗೆ ಕೂಗುತ್ತಿದ್ದನೆಂದರೆ ಈ ಅನಿಷ್ಠಗಳು ನಮ್ಮ ಮನೆಗೆ ಬಂದಿದ್ದರಿಂದ ನಮಗೆ ಏನಾದರೂ ದರಿದ್ರ ತಗಳದೆ ಇರುವುದಿಲ್ಲ ಎಂದು ಹೇಳಿ ಅಲ್ಲಿಂದ ರಭಸದಿಂದ ಹೊರಟು ಹೋದ
ವಿಭ ಇಬ್ಬರನ್ನು ಸ್ವಾಗತಿಸಿ ಕೃಷ್ಣ ಕುಟರ ಮನೆಯಲ್ಲಿರುವ ಒಂದು ದೊಡ್ಡ ಕೊಠಡಿಗೆ ವಿಶ್ರಾಂತಿ ತೆಗೆಯಲು ಕಳುಹಿಸಿದಳು ಆವಾಗ ನಿಂಗೆಯ ಗಂಡನಾದ ಸುಕೇಶ
ಸುಕೇಶ : ಅಂತೂ ಮನೆಯೊಳಗಡೆ ಒಂದು ಜಾಗ ಸಿಕ್ತು ಏ ನಿನ್ನ ಅಪ್ಪ ನಮ್ಮನ್ನು ಒದ್ದು ಹೊರಗಡೆ ಹಾಕುತ್ತಾರೆ ಅಂತ ಅಂದುಕೊಂಡಿದ್ದೆ ಆದರೆ ಪುಣ್ಯವಂತ ನಿನ್ನ ತಮ್ಮ ನಮಗೆ ಮನೆಯಲ್ಲಿ ನೆಲೆಸಲು ಬಿಟ್ಟ ಇನ್ನು ಊಟಕ್ಕೂ ಆಟಕ್ಕೂ ಏನ್ ತೊಂದರೆ ಇಲ್ಲ ಮನೆಯಲ್ಲಿ ಒಂದು ಸ್ಥಾನ ಸಿಕ್ತು
ನಿಂಗಮ್ಮ : ಹೇ ದಡ್ಡ ಮಂಡ್ಯದೆ ನಾನಿಲ್ಲಿ ಬಂದಿರುವುದು ಮನೆವೊಂದಕ್ಕೆ ಅಲ್ಲ ನನಗೆ ಈ ಆಸ್ತಿಯಲ್ಲಿ ಅರ್ಧ ಪಾಲು ಬೇಕು. ನನ್ನ ಪಾಲ್ ನಾನ್ ತಕೊಂಡೆ ತಗೋತೀನ
ಸುಕೇಶ : ಲ* ನಿಂಗಿ ನಿನಗೆ ಏನಾದರೂ ತಲೆ ಕೆಟ್ಟಿದ್ದೇನೆ ಸ್ವಂತ ಮಗನಿಗೆ ನಿಮ್ಮಪ್ಪ ಆಸ್ತಿ ಕೊಡುವುದು ಬಿಟ್ಟು ನೀನು ಕೆಲಸದವಳ ಮಗಳು ನಿನಗೆ ಅರ್ಧ ಭಾಗ ಕೊಡುತ್ತಾರೆ ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ
ನಿಂಗಿ : ಅಸಾಧ್ಯವನ್ನು ಸಾಧ್ಯ ಮಾಡುವುದು ಹೇಗೆ ಈ ನಿಂಗಮ್ಮ ಸರಿಯಾಗಿ ಗೊತ್ತು
ಸುಕೇಶ : ನಿನಗೆ ಆಸ್ತಿ ಮೇಲೆ ಅಷ್ಟೊಂದು ವ್ಯಮೋಹವಿದ್ದರೆ ಮೊದಲೇ ಮದುವೆಯಾದ ಗಂಡನ ಹತ್ತಿರ ಇರಬೇಕಿತ್ತಲ್ಲ ನನ್ ಹಿಂದೆ ಯಾಕ್ ಬಂದೆ ಅವಾಗ ಗಂಡನ ಮನೆ ಆಸ್ತಿ ಹಾಗೂ ನಿನ್ನ ಅಪ್ಪ ಅವರ ಪಾಲನೆ ಅಲ್ಪ ಸ್ವಲ್ಪ ಆಸ್ತಿ ಆದರೂ ಕೊಡುತ್ತಿದ್ದರು.
ನಿಂಗಿ : ಅವನೊಬ್ಬ ಆಪ್ರಯೋಜಕ ಯಾವಾಗ ನೋಡಿದರೂ ಮನೆ ಮರ್ಯಾದೆ ಅವರ ಮನೆಯ ಹೆಣ್ಣು ಮಕ್ಕಳು ಹೇಗಿರಬೇಕೆಂದು ದೊಡ್ಡ ಲೆಚ್ಚರನೇ ಕೊಡುವನು 24 ಗಂಟೆ ಅವನು ಅವನ ಮನೆಯವರ ಸೇವೆ ಮಾಡಿಕೊಂಡಿರಬೇಕು ಆಗದು ತಲೆ ಕೆಟ್ಟು ಹೋಗಿತ್ತು ಅವನ ನೆನಸಿದರೆ ಆತನನ್ನುಕುತ್ತಿಗೆ ಹಿಸುಕಿ ಸಾಯಿಸ್ಬೇಕಂತ ಮನಸ್ಸಾಗುತ್ತದೆ
ಅದೇ ಸಮಯಕ್ಕೆ ಸರಿಯಾಗಿ ನೀನು ಸಿಗ್ದೆ ಬಂಗಾರದ ಪಂಜರದಲ್ಲಿ ಇರುವುದಕ್ಕಿಂತ ನಿನ್ನಂತ ಬೀದಿನಾಯ ಹತ್ರ ಇರೋದೇ ಲೇಸು ಅಂತ ನಿನ್ನನ್ ಕಟ್ಟಿಕೊಂಡೆ ಆದರೆ ನೀನು ನನ್ನ ಮನೆಯವರು ಕೊಟ್ಟಿರುವ ಬಂಗಾರ ಅಲ್ಪಸ್ವಲ್ಪ ಆಸ್ತಿ ಎಲ್ಲವನ್ನು ಕುಡಿತ ಮತ್ತು ಜೂಜಾಲಿ ಕಳ್ಕೊಂಡೆ
ಸುಕೇಶ :hmm ನಾನೊಬ್ಬನೇ ಕಳಕೊಂಡದ ನಾವಿಬ್ಬರ ಅಂತ ಹೇಳು ನನ್ನೊಟ್ಟಿಗೆ ಸೇರಿ ನೀನು ಕುಡಿತಾ ಹಾಗೂ ಜೂಜು ಕಲ್ತಿದ್ದೆ ಅದಕ್ಕೆ ತಾನೇ ನಿನ್ ಗಂಡ ಮತ್ತೆ ಆ ಊರಿನವರು ನಮ್ಮ ನಾ ಊರಿನಿಂದ ಹೊರಗಡೆ ಹಾಕಿ
