STORYMIRROR

Harsha Shetty

Drama Classics Others

4  

Harsha Shetty

Drama Classics Others

ಕೃಷ್ಣ ಕುಟೀರ ಭಾಗ-5

ಕೃಷ್ಣ ಕುಟೀರ ಭಾಗ-5

4 mins
222

 ಭಾಗ_5 ದೇವರು ಇದ್ದಾನೋ ಇಲ್ಲವೋ 

ಡಾಕ್ಟರ್ ಡಿಸೋಜಾ ವಿಶ್ವನಾಥನು ಕಟ್ಟಿಸಿದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದಿನಂತೆ ತಿಂಗಳಿಗೊಮ್ಮೆ ವಿಶ್ವನಾಥನ regular ಚೆಕ್ ಅಪ್ ಮಾಡಲು

 ಬಂದು ಮನೆ ಹಿತ್ತಲಿನಲ್ಲಿ ಕೂಗಲು ಪ್ರಾರಂಭಿಸಿದ 

 ಡಾಕ್ಟರ್ : ವಿಶ್ವನಾಥ್ sir , ಜಗನ್ನಾಥ್ಅವ್ರೆ, ಯಾರಾದರೂ ಮನೆಯಲ್ಲಿ ಇದ್ದೀರಾ. 

 ವಿಶ್ವನಾಥರು ತನ್ನ ಕೊಠಡಿಯಿಂದ ಹೊರಗೆ ಬಂದು 

 ವಿಶ್ವನಾಥ : ಓ ಡಾಕ್ಟರ್ ಬನ್ನಿ ಬನ್ನಿ ಏನು ಹೊರಗಡೆ ನಿಂತಿದ್ದೀರಲ್ಲ ನಿಮಗೆ ಒಳಗಡೆ ಬರಲು ಪರ್ಮಿಷನ್ ಬೇಕೆ

 ಆವಾಗ ಅಲ್ಲಿಗೆ ಶೇಷ ಮತ್ತು ಜಗನ್ನಾಥ ಧಾವಿಸಿದರು.

 ಶೇಷ : ಹಲೋ ಅಂಕಲ್

 ಡಾಕ್ಟರ್ :hi my son ಮತ್ತೆ ಹೇಗೆ ನಡೆಯುತ್ತಿದ್ದೆ ನಿನ್ನ ವಕಾಲತು

 ಶೇಷ : ನಿಮ್ಮ ಆಶೀರ್ವಾದದಿಂದ ಚೆನ್ನಾಗಿ ನಡಿತಾ ಇದೆ ಅಂಕಲ್

 ಡಾಕ್ಟರ್ : ನನ್ನ ಆಶೀರ್ವಾದ ನಿನ್ನ ಮೇಲೆ ಯಾವಾಗಲೂ ಇರುತ್ತೆ, my son

ಜಗನ್ನಾಥ : ನಮಸ್ಕಾರ ಡಾಕ್ಟರ್ ಸಾಹೇಬರಿಗೆ ಏನು ಈ ಸರಿ ತಿಂಗಳು ಮುಗಿಯುವ ಮುಂಚೆನೆ ಬಂದುಬಿಟ್ಟಿದ್ದೀರಾ checkupga ಅಂತ

ಡಾಕ್ಟರ್:hmm ಸ್ವಲ್ಪ ಕೆಲಸದಿಂದ ಬಿಡು ಸಿಕ್ತು ಹಾಗೂ ಅತ್ತೆಯ ಕೈ ರುಚಿ ತಿನ್ಬೇಕ್ ಅಂತ ಮನಸಾಯ್ತು ಅದಕ್ಕೆ ಬಂದೆ 

ಅವಾಗ ವಿಭಾ, ಕಾಫಿಯನ್ನು ಹಿಡ್ಕೊಂಡು ಬಂದಳು 

 ವಿಭ : ತಗೊಳ್ಳಿ ಡಾಕ್ಟರ್ ಕಾಪಿನಾ 

ಡಾಕ್ಟರ್ ಕಾಫಿಯನ್ನು ತಕೊಂಡು ಸವಿಯುತ್ತಾ 

ಕಾಪಿ- ಗಿಪಿಯಲ್ಲಿ ಸುಧಾರಿಸಲು ನೋಡಿದರೆ ಆಗಲ್ಲಮ್ಮ ನಾನಂತು ಊಟ ಮಾಡ್ಕೊಂಡೆ ಹೋಗುವುದು 

ಜಗನ್ನಾಥ : ಅಯ್ಯೋ ಡಾಕ್ಟ್ರೇ ಇದು ನಿಮ್ಮದೇ ಮನೆ ಯಾವಾಗ ಬೇಕಾದ್ರೆ ಬನ್ನಿ ಊಟ ಅಲ್ಲ ಇವತ್ತು ಸಂಜೆ ಇಲ್ಲೇ ಇದ್ದುಬಿಡಿ ರಾತ್ರಿಗೆ ನಾಟಿ ಕೋಳಿ ಮತ್ತು ಒಂದು ಫುಲ್ ತರ್ತೀನಿ ನಿಮ್ಮದೇ ಬ್ರಾಂಡು ನಾವು ನೀವು ಅಪ್ಪ ಮಜಾ ಮಾಡೋಣ 

ಶೇಷ : ಡಾಕ್ಟರನ್ನು ಬಿಡಲ್ಲ ಅಂತ ಹೇಳ್ತೀರಾ ನೀವ್ ಅಪ್ಪ ಮಗ ಕಾಯ್ತಾ ಇರ್ತಾರೆ ಯಾವಾಗ ಗುಂಡು ಹಾಕಲು chance ಸಿಗುತ್ತದೆ ಅಂತ 

 ವಿಶ್ವನಾಥ:ಲೇ ಶೇಷ ನಾನು ಯಾವುದಕ್ಕೂ ಇಲ್ಲ ಏನಿದ್ದರೂ ಅಪ್ಪನಿಗೆ ಹೇಳು. 

ಡಾಕ್ಟರ್ ನಗುತ್ತಾ : ಇಲ್ಲೆಲ್ಲ ಸಂಜೆ ವರಗೆ ನನಗಿರ್ಲಿಕಾಗಲ್ಲ ತುಂಬ patientgala appointment ಇದೆ


ಡಾಕ್ಟರ್ : ವಿಶ್ವನಾಥ್ ಅವರೇ ತಮ್ಮ ಎಡಕೈ ಮುಂದೆ ಮಾಡಿ ಎಂದು ಹೇಳಿ ತನ್ನ Bp machine BP check ಮಾಡಿದರು ಹಾಗೂ ಹಾಗೂ ಸುಗರ್ ಟೆಸ್ಟ್ ಮಾಡಿ


ಡಾಕ್ಟರ್ : ಬಿಪಿ ಮತ್ತು ಶುಗರ್ ಎರಡು ನಾರ್ಮಲ್ ಇದೆ


 ಟೈಮ್ ಟೈಮ್ ಗೆ ಮಾತ್ರೆ ತಕೊಳ್ತಿದ್ದೀರಿ ತಾನೆ


 ವಿಶ್ವನಾಥ: ಹೌದು ಡಾಕ್ಟರ್ ಇನ್ನು 20 ವರ್ಷ ಬದುಕಬೇಕು ಅಂತ ನನಗ ಆಸೆ ಮರಿ ಮೊಮ್ಮಕ್ಕಳು ಬೆಳೆಯುವುದನ್ನು ನೋಡಬೇಕು

 ಡಾಕ್ಟರ್ : ನೋಡ್ತಿರ ಬಿಡಿ ನಿಮ್ಮಂತ ಒಳ್ಳೆಯವರು ನೂರು ವರ್ಷ ಬದುಕಬೇಕು 


ಡಾಕ್ಟರ್ : ಜಗನ್ನಾಥ್ ಅವರ ನಿಮ್ಮದೊಂದು ಟೆಸ್ಟ್ ಮಾಡಿ ಬಿಡು ಅಲ್ಲ


 ಜಗನ್ನಾಥ: ಏನಿದು ಅಪ್ಪನ ಟೆಸ್ಟ್ ಮಾಡಿ ಡಾಕ್ಟ್ರೆ ನಮಗೇನು ಬೇಕಾಗಿಲ್ಲ


 ಶೇಷ : ಅಪ್ಪ ಟೆಸ್ಟ್ ಮಾಡ್ಕೋ ಇಂಥ ವಿಷಯದಲ್ಲೆಲ್ಲ ನಿರ್ಲಕ್ಷ ಮಾಡಬಾರದು


 ಜಗನ್ನಾಥ : ಹೇ ಬೇಡ ಕಣೋ ನಾನು ಒಳ್ಳೆ ಗುಂಡು ಕಲ್ಲು ತರ ಇದ್ದೀನಿ ನನಗೆ ಇನ್ನು ನೂರು ವರ್ಷ ಆದ್ರು ಏನು ಆಗಕ್ಕಿಲ್ಲ


ವಿಶ್ವನಾಥ : ಟೆಸ್ಟ್ ಮಾಡ್ಕೋ ಜಗ್ಗ ಕಳೆದ ಮೂರು ತಿಂಗಳ ಮುಂಚೆ ಹೀಗೆ ಟೆಸ್ಟ್ ಮಾಡಿದಾಗ ನಿಂಗೆ ಬಿಪಿ ಮತ್ತು ಡಯಾಬಿಟಿಸ್ ಎರಡು ಇತ್ತು ಆಮೇಲೆ ನೀನು ಟೆಸ್ಟ್ ಮಾಡಿಕೊಳ್ಲಿಲ್ಲ ಡಾಕ್ಟರ್ ತಿಂಗಳಿಗೊಮ್ಮೆ ಬಂದ್ರು


 ವಿಭಾ : ಟೆಸ್ಟ್ ಮಾಡ್ಕೊಳ್ಳಿ ಸುಮ್ನೆ ಯಾಕೆ ರಿರ್ಸ್ಕ್ ಟೆಸ್ಟ್ ಮಾಡ್ಕೊಂಡ್ರೆ ಸಮಾಧಾನ ಇರುತ್ತ 


ಮನೆಯವರೆಗೆ ಒತ್ತಾಯಕ್ಕೆ ಮಾಡಿದು ಜಗನ್ನಾಥನ್ನು ಟೆಸ್ಟ್ ಮಾಡಲು ಒಪ್ಪಿಕೊಂಡನು 


ಡಾಕ್ಟರ್ : ಜಗನ್ನಾಥ್ ನ ಬಿಪಿ ಮತ್ತು ಡಯಾಬಿಟಿಸ್ check ಮಾಡಿ ತನ್ನ ತಲೆಯನ್ನು ಕೆರೆಯುತ್ತಾ ಜಗನ್ನಾಥವರೇ ಲಾಸ್ಟ್ ಟೈಮ್ ನೋಡಿದಾಗ ನಿಮ್ಮ ಬಿಪಿ ಮತ್ತು ಡಯಾಬಿಟಿಸ್ ಜಸ್ಟ್ ಬಾರ್ಡರ್ ಲೈನಲ್ಲಿ ಇತ್ತು ಆದರೆ ಈಗ ತುಂಬಾ ಜಾಸ್ತಿಯಾಗಿದೆ bp 160 ಕಿಂತ ಮೇಲಿದೆ ಅದು 180 ಬಂದರೆ ಅದು stroke level ಹಾಗೂ sugar 400 ಗಿಂತ ಮೇಲಿದೆ kidney ಮತ್ತು heart ತುಂಬಾ ಪೆಟ್ಟು ನಾನು ಕೆಲವು ಮಾತ್ರೆ ಬರೆದುಕೊಡುತ್ತೇನೆ ತಪ್ಪದೇ ಅದನ್ನು ತಗೊಳ್ಳೇಬೇಕು ನೀವು, ಹಾಗೂ ಮೂರು ತಿಂಗಳಿಗೊಮ್ಮೆ blood test ಹಾಗೂ ತಿಂಗಳಿಗೊಮ್ಮೆ ನಿಮ್ಮಪ್ಪನಂತೆ ರೆಗುಲರ್ ಟೆಸ್ಟ್ ಮಾಡಲೇಬೇಕು

 ಜಗನ್ನಾಥ : ಬಿಡಿ ಡಾಕ್ಟ್ರೇ ನಾನು ಒಳ್ಳೆ ಗುಂಡು ಕಲ್ತಾ ಇದ್ದೀನಿ ನನಗೆ ತಲೆ ತಿರುಗುವುದಾಗಲಿ ಹೃದಯ ನೋವಾಗಲಿ ಏನು ಇಲ್ಲ almost 10 ವರ್ಷಗಳಿಂದ ಯಾವುದೇ ಸಣ್ಣ ಜ್ವರ ಕೂಡ ಬರಲಿಲ್ಲ ಬೆಳಗಿನ ಸಂಜೆವರೆಗೆ ತೋಟದಲ್ಲಿ ಕಡುಬಿಸಿಲಲ್ಲಿ ದುಡಿತೀನಿ ಹಾಗೂ ರಾತ್ರಿ ಚೆನ್ನಾಗಿ ನಿದ್ದೆ ಮಾಡ್ತೀನಿ ಹಾಗೂ ಈಗ ನನ್ ವಯಸ್ಸೆಷ್ಟು ಕೇವಲ 50 ವರ್ಷ ನನಗೇನು ಈ ಮಾತು ಗೀತೆ ಅವಶ್ಯಕತೆ ಇಲ್ಲ ಹಾಗೂ ನಾನು ಇಂಗ್ಲಿಷ್ ಮೆಡಿಸನ್ಗಳನ್ನು ನಂಬುವುದೇ ಇಲ್ಲ ನಮ್ಮನ್ನು ಕಾಯುವವನು ನಮ್ಮ ವಾಸುದೇವ ಅವನ ಅವನ ಕೈ ಎಲ್ಲಿವರೆಗಿನ ತಲೆ ಮೇಲೆ ಇರುತ್ತೋ ಯಾವ ರೋಗ ಹಾಗು ಯಾವ ದುಷ್ಟ ಶಕ್ತಿಯನ್ನು ನೀರು ಮಾಡಲಿಕ್ಕೆ ಆಗಲ್ಲಅದನ್ನು ಕೇಳಿ ಶೇಷನಿಗೆ ವಿಪರೀತ ಕೋಪ ಬರುತ್ತೆ .


 ಶೇಷ : ಅಪ್ಪ ನಿಂಗೆ ಡಾಕ್ಟರ್ ಹೇಳಿದ ಅರ್ಥವಾಗಲಿಲ್ವಾ ಸುಮ್ನೆ ಅವರು ಹೇಳಿದಾಗೆ ಮಾತ್ರೆಗಳನ್ನು ತಗೋ

ವಿಜ್ಞಾನ ನಂಬು ಯಾವ ದೇವರು ದೈವ ನಿನ್ನ ರಕ್ಷಣೆ ಮಾಡಲ್ಲ


 ಜಗನ್ನಾಥ : ಬೇಡ ಕಣೋ ನನಗೆ ಜ್ವರ ಬಂದ್ರು ಮಾತ್ರ ನುಂಗಿದಂದ್ರೆ ಆಗಲ್ಲ ಇದು ದಿನಾ ಅಮವಾಸೆ ತಗೊಳ್ಳಬೇಕಂದ್ರೆ ಅಯ್ಯೋ ಅಸಹ್ಯ ನಾನೇನಿದ್ದರೂ ನನ್ನ ಜೀವನದ ಭಾರವನ್ನು ಆ ವಾಸುದೇವನ ಮೇಲೆ ಹಾಕಿದ್ದೀನಿ ಅವ ನಿಶ್ಚಯಂತೆ ಆಗಲಿ ಅದನ್ನು ಕೇಳಿದ ಶೇಷನಿಗೆ ಕೋಪವೂ ಮುಗಿಲೇರಿತು


 ದೇವರ ಕೋಣೆಯಲ್ಲಿದ್ದ ವಾಸುದೇವನ ಮೂರ್ತಿಗೆ ಬೆರಳು ತೋರಿಸುತ್ತಾ ಈ ಕಲ್ಲು ನಿಮ್ಮನ್ನು ರಕ್ಷಿಸುತ್ತಾ 


 ಬ್ರಿಟಿಷರು ಬಂದು ಇಡೀ ದೇಶವನ್ನೇ ಕೊಳ್ಳೆ ಹೊಡೆದರು ನಮ್ಮ ಹೆಣ್ಣು ಮಕ್ಕಳ ಮಾನ ಪ್ರಾಣ ಎರಡನ್ನು ಕೆಡಿಸಿದರು ಆವಾಗ ಎಲ್ಲಿದ್ದ ನಿಮ್ಮ ವಾಸುದೇವ 

 ಮೊನ್ನೆ ಕೊರೋನ ಬಂದು ಹರೆ ಹರೆಯ ವಯಸ್ಸಿನ ಎಷ್ಟು ಯುವಕರು ಯುವತಿಯರು ತೀರಿಕೊಂಡ್ಬಿಟ್ಟರು ಅದು ನ್ಯಾಯವೇ ಆವಾಗ ಎಲ್ಲಿದ್ದ ನಿಮ್ಮ ವಾಸುದೇವ

 ಅದೆಲ್ಲಾ ಬಿಡಿ ನಮ್ಮ ಮನೆಯ ಮಾತೆ ತಗೊಳ್ಳುವ ನಿಮ್ಮ ಅಮ್ಮ ವಾಸುದೇವನ ಮಹಾಭಕ್ತಿ ದಿನಕ್ಕೆ ಸಾವಿರ ಸರಿ ವಾಸುದೇವನ ನಾಮಸ್ಮರಣೆ ಮಾಡುವವರು ವಾರಕ್ಕೆ ಎರಡು ಮೂರು ಸರಿ ವಾಸುದೇವನ ಹೆಸರಿನಲ್ಲಿ ಉಪವಾಸ ಮಾಡುವಳು ಬೆಳಗೆದ್ದು ಸ್ನಾನ ಮಾಡಿ ದೇವರಿಗೆ ದೀಪವಿಡದೆ ಒಂದು ತುತ್ತು ನೀರು ಕೂಡ ಕುಡಿತಿರಲಿಲ್ಲ ಅಂತವರಿಗೆ ಏನಾಯ್ತು ಪ್ಯಾರಾಲಿಸ್ ಅಟ್ಯಾಕ್ ಬಂದು 5 ವರ್ಷ ಹಾಸಿಗೆಯಲ್ಲಿಯೇ ನರಳಿ ನರಳಿ ತೀರಿಕೊಂಡು ಆವಾಗ ಎಲ್ಲಿದ್ದ ನಿಮ್ಮ ವಾಸುದೇವ ಅದೇ ಅವರು ಮಾತ್ರೆಯನ್ನು ತಗೊಂಡಿದಿದ್ರೆ ತನ್ನ ಹೆಲ್ತ್ ಅನ್ನು ಮೈನ್ಟೈನ್ ಮಾಡಿದ್ರೆ ಹಾಗೆ ಆಗುವ ಚಾನ್ಸ್ ಕಡಿಮೆ ಇತ್ತು. ಸುಮ್ನೆ ಕಲ್ಲನ್ನು ನಂಬಿದರೆ ನಿಮಗೆ ಚೊಂಬೇ ಸರಿ

 

ಅದನ್ನು ಕೇಳಿದ ಜಗನ್ನಾಥನಿಗೆ ಕೋಪವು ನೆತ್ತಿಗೇರಿ


 ಜಗನ್ನಾಥ್ : ನೀನು ದೇವರನ್ನು ನಂಬಲ್ಲ ಅದಕ್ಕೆ ನಾನು ಏನು ತರ್ಕ ಕೊಡಲ್ಲ ಆದರೆ ಒಬ್ಬ ವಾಸದೇವರ ಭಕ್ತನತ್ರ ಅವನ ಪ್ರಭು ಬಗೆ ಕೀಳಾಗಿ ಮಾತಾಡಬೇಡ ನನಗೆ ಏನಾದರೂ ಹೇಳು ಪರ್ವಾಗಿಲ್ಲ ಆದರೆ ನನ್ನ ಪ್ರಭು ಬಗ್ಗೆ ಏನಾದರೂ ಹೇಳಿದರೆ ನಾನು ಸಹಿಸಲ್ಲ


 ಶೇಷ : ನಿಮ್ಮ ಪ್ರಭು ಒಂದು ಕಲ್ಲು ಅಥವಾ ಕಟುಕ ತನ್ನನ್ನು ನಂಬಿದವರನ್ನೇ punish ಮಾಡ ಹೃದಯ ಇಲ್ಲದ ಕಟುಕ ,if there is a god then he is inefficient


 ಅದನ್ನು ಕೇಳಿ ಜಗನ್ನಾಥನಿಗೆ ವಿಪರಿತ ಕೋಪಗೊಂಡು ಶೇಷನ ಕೆನ್ನೆಗೆ ಬಾರಿಸುತ್ತಾನೆ


 ಜಗನ್ನಾಥ : ಇನ್ನೊಂದು ಮಾತಾಡಿದರೆ ಹಲ್ಲು ಉದರಿಸಿ ಬಿಡ್ತೀನಿ ಮಗ ಅಂತಾ ನೋಡಲ

 ವಿಶ್ವನಾಥ : ಏ ಜಗನ್ನಾಥ, ಶೇಷ ಸುಮ್ಮನಿರು


 ಶೇಷ : ವಿಶ್ವನಾಥರನ್ನು ಕುರಿತು ಸ್ವಲ್ಪ ನಿಮ್ಮ ಮಗನಿಗೆ ಬುದ್ಧಿ ಹೇಳಿ ಅಂತ ಹೇಳುತ್ತಾ ಅಲ್ಲಿಂದ ರಭಸದಿಂದ ಹೊರಟು ಹೋದನು


 ವಿಭಾ : ಯಾಕ್ರೀ ಯಾವತ್ತು ನೀವು ಶೇಷನ ಮೇಲೆ ಕೈ ಮಾಡದಿದ್ದವರು ಇವತ್ತು ಕೈ ಮಾಡಿಬಿಟ್ರಿ


 ಜಗನ್ನಾಥ : ದೇವರ ಕೋಣೆಯತ್ತು ತಿರುಗುತ್ತಾ ಕೈಮುಗಿದು ಹೇ ವಾಸುದೇವ ಪ್ರಭು ನಿನಗೆಲ್ಲ ತಿಳಿದಿದ್ದೆ ನನ್ನ ಮಗನು ಸ್ವಲ್ಪ ಮೂಡನ ಆದರೆ ಹೃದಯ ತುಂಬಾ ಒಳ್ಳೆಯದು ದಯವಿಟ್ಟು ಅವನನ್ನು ಮನ್ನಿಸಿ ಪ್ರಭು ಎಂದು ಕೈ ಮುಗಿದು ಬೇಡಿಕೊಂಡ


Doctor: ವಿಶ್ವನಾಥ್ ಅವರೇ ನಾನಿನ್ನು ಬರುತ್ತೇನೆ ಹಾಗೂ ಜಗನ್ನಾಥರನ್ನು ಕುರಿತು ಎಲ್ಲದಕ್ಕೂ ದೇವರ ಮೇಲೆ depend ಆಗಲೂ ಆಗಲ್ಲ ನಮಗಿರುವ option ಗಳನ್ನು ನಾವು ಟ್ರೈ ಮಾಡಬೇಕು

 ವಿಶ್ವನಾಥ : ಯಾಕ್ರೀ ಡಾಕ್ಟರ ಊಟ ಮಾಡ್ಕೊಂಡು ಹೋಗಿ ಈ ಅಪ್ಪ ಮಗಂದು ಇದ್ದಿದ್ದೆ 


ಡಾಕ್ಟರ್ : ಇಲ್ಲ ರಾಯರೇ ಈ ಸರಿ ಹೊರಡ್ತೀನಿ next time ನೋಡೋಣ ಎಂದು ಹೇಳಿ ಹೊರಟುಹೋದರೂ


 ವಿಶ್ವನಾಥ ಕೋಪಗೊಂಡು ಜಗನ್ನಾಥನಿಗೆ monthy checkup ನಾವೇ ಡಾಕ್ಟರ್ ಹತ್ರ ಹೋಗ್ಬೇಕು ಆದರೆ ಆ ಮನುಷ್ಯ ನನಗಿರುವ ಗೌರವದಿಂದ ಮನೆಯವರೆಗೆ ಬಂದು checkup ಮಾಡಿ ಹೋಗ್ತಾನೆ ಅದಕ್ಕಾದ್ರು ನಿಮ್ಮಪ್ಪ ಮಗನಿಗೆ ಮರ್ಯಾದೆ ಬೇಡ ಅನ್ಯಾಯವಾಗಿ ಅವನನ್ನು ಕಳುಹಿಸಿ ಬಿಟ್ಟರಲ್ಲ ಛೆ ಎಂದು ಹೇಳಿ ಅಲ್ಲಿಂದ ಸಿಟ್ಟಿಂದ ಹೊರಟು ಹೊರಟುಹೋದ 


ಕಥೆ ಮುಂದುವರೆವುದು


Rate this content
Log in

Similar kannada story from Drama