STORYMIRROR

Mouna M

Comedy Classics Others

4  

Mouna M

Comedy Classics Others

ಕೊರೊನ, ಕೊರೊನ

ಕೊರೊನ, ಕೊರೊನ

1 min
287

ಪಕ್ಕದ ಮನೆಯಿಂದ ಒಂದೇ ಸಮನೆ ಕೊರೊನ, ಕೊರೊನ ಅಂತ ಯಾರೋ ಹೇಳ್ತಾ ಇರೋದು ಕೇಳಿಸ್ತಾ ಇತ್ತು. ನನ್ನ ಹೆಂಡ್ತೀನ ಕರೆದು ಕೇಳಿದ್ರೆ, ಅವಳಿಗೂ ಕೊರೊನ ಅಂತಾನೆ ಕೇಳಿಸ್ತು. ನಮ್ಮ ಹುಷಾರಲ್ಲಿ ನಾವಿರಬೇಕು ಅಂತ ಮನೇನೆಲ್ಲ ಪೂರ್ತಿ ಸ್ಯಾನಿಟೈಝೆರ್ ನಿಂದ ಒರೆಸಿ, ಏನೇ ಆದ್ರೂ ಪಕ್ಕದ ಮನೆ ಕಡೆ ಮುಖ ಹಾಕಿ ಮಲಗಬಾರ್ದು ಅಂದ್ಕೊಂಡು, ಮಾಸ್ಕ ಹಾಕ್ಕೊಂಡೆ ಓಡಾಡ್ತಿದ್ದ್ವಿ . ಆದ್ರೂ, ಈ ಕೊರೊನ ಅನ್ನೋ ಪದ ಮಾತ್ರ ಕೇಳಿಸ್ತಾನೆ ಇತ್ತು. ಒಂದಿನ ನೋಡೇ ಬಿಡೋಣ ಅಂತ ಸ್ವಲ್ಪ ಹಣ್ಣು, ಬ್ರೆಡ್ ತಗೊಂಡು ಪಕ್ಕದ್ಮನೆ ಬಾಗಿಲ್ನ ನನ್ನ ಹೆಂಡ್ತಿ ಹೇಳಿದಂಗೆ ಮೊಣಕೈನಿಂದ ಬಡಿದು, ಮಾಸ್ಕ ಸರಿಯಾಗಿ ಹಾಕೊಂಡು ಬಾಗಿಲು ತೆಗೆಯೋದನ್ನೇ ಕಾಯ್ತಾಯಿದ್ದೆ. ಒಂದು ಹೆಣ್ಮಗಳು ಬಾಗಿಲು ತೆಗೆದ್ರೆ, ಒಳಗಡೆ ಇಂದ ಆಂಟಿ ಒಬ್ಬರು ಮನೆ ಒಳಗೆ ಬರಲು ಹೇಳಿದ್ರು. ಕೊರೊನ ಭಯ ಬೇರೆ, ಹೆಂಡ್ತಿ ಬೇರೆ ಬಾಗಿಲ ಸಂದಿಯಿಂದ ಹೋಗ್ಬೇಡ ಅಂತ ಸನ್ನೆ ಮಾಡಿದ್ಲು.  

 

ಕೊರೊನ ಕೊರೊನ , ಒಂದು ಕ್ಷಣ ಎದೆ ಧಸಕ್ಕಂತು. ಶಬ್ದ ಬಂದ ಕಡೆ ಮುಖ ಮಾಡಿ ನೋಡಿದ್ರೆ, ಅಜ್ಜಿ ಒಬ್ಬರು, ಕೆಲಸದವಳಿಗೆ, ಕೊರೊನ ಕೊರೊನ ಎಂದು ಜೋರಾಗಿ, ಹೇಳಿದ್ದು ಕೇಳಿಸಿತೇ ವಿನಃ , ಅಚ್ಚಿ ತರಹ ಸೆ ಸಫಾಯಿ, ಕೇಳಿಸಲೇ ಇಲ್ಲ!! ಅಜ್ಜಿ ಕೊರೋನ ಅಂದ್ರೆ ಹಿಂದಿಯಲ್ಲಿ ಕರೋ ನ ಅಂತ ಸ್ಪಷ್ಟವಾಗಿ ಅರ್ಥ ಆಗುವಷ್ಟರಲ್ಲಿ ನಾನು ಅರ್ಧ ಆಗಿ ಹೋಗಿದ್ದೆ. 

 

ಕೊರೊನ ಬಿಡಿ, ಹಣ್ಣು ಬ್ರೆಡ್ ಕಂಡು ನಮ್ಮ ಪಕ್ಕದ ಮನೆಯವ್ರು ಫುಲ್ ಕುಶ್!! ಆದ್ರೆ ನಾವು ಫೂಲ್ ಆಗಿದ್ದು ಮರೆತೂ ಕೂಡ ಯಾರಿಗೂ ಹೇಳ್ಬೇಡಿ ಪ್ಲೀಸ್. . ಇಷ್ಟು ಮಾತ್ರ ಕೊರೊನ, ಅಲ್ಲಲ್ಲ ಕರೋ ನಾ!!!


Rate this content
Log in

Similar kannada story from Comedy