STORYMIRROR

Mouna M

Inspirational

3  

Mouna M

Inspirational

ಅಂತರ್ಧ್ವನಿ

ಅಂತರ್ಧ್ವನಿ

1 min
149

ಸಂಭ್ರಮದ ಸಮಯದಲ್ಲಿ ಕಣ್ಣೀರಾಕಬಾರದು ! 


ಯಾಕೆ ಅಂದ್ರೆ ಅದು ಬರಿ ಕ್ಷಣಿಕ!, 

ಹಾಗಂತ ಸಂಭ್ರಮದಲ್ಲಿ ಹಿಗ್ಗಲೂ ಬಾರ್ದು, ಯಾಕೇಳಿ, ಅದೂ ಕೂಡ ಕ್ಷಣಿಕ!!!


ಕೈಹಿಡಿದು ನಡೆಸಿದವರನ್ನು ಕಡೆಗಣಿಸಬಾರದು !


ಹೇಗೆ ಭೂಮಿ ತಾಯಿ ನಾವು ಎಷ್ಟೇ ತಪ್ಪು ಮಾಡಿದ್ರೂ ನಮ್ಮ ಹೊರೆನ ನಗನಗ್ತಾ ಹೊರ್ತಾಳೋ

ಹಾಗೆ ನಮ್ಮ ತಪ್ಪು ಒಪ್ಪಗಳ್ಳನ್ನ ಹೊಟ್ಟೆಗೆ ಹಾಕೊಂಡು ನಗೋವ್ರು ಒಬ್ಬರೇ, ಅವ್ರೆ ನಮ್ಮ ಹೆತ್ತವರು.


ಉತ್ತಮರ ಮನವ ನೋಯಿಸಬಾರದು !


ಗೊತ್ತಿದ್ದೋ ಗೊತ್ತಿಲ್ಲದೇನೋ ಉತ್ತಮರ ಮನಸನ್ನ ನೋಯಿಸಿದ್ರೆ,

ದೇವ್ರ್ ಮನಸ್ಸನ ನೋಯಿಸಿದ ಹಾಗೆ, 


ಉಳ್ಳವರೆಂಬ ಕಾರಣಕ್ಕೆ ಸ್ನೇಹ ಮಾಡಬಾರದು !


ಯಾಕೆ ಗೊತ್ತಾ, ಉಳ್ಳವರ ಸ್ನೇಹ ನೀರಿಲ್ಲದ ಮೀನಿನ ಹಾಗೆ .

ಗಾಳ ಹಾಕ್ತಾನೆ ಇರ್ರ್ಬೇಕು, ಜೀವ ಇರೋವರಗೆ


ಆತ್ಮೀಯರೆದುರು ಕೈ ಚಾಚಬಾರದು !


ಕೈ ಮುಗೀಬೇಕೆ ಹೊರತು ಕೈ ಚಾಚಬಾರದು, ಯಾಕಂದ್ರೆ 

ಒಮ್ಮೆ ಚಾಚಿದ್ರೆ , ಚಾಚ್ತಾನೇ ಇರ್ತೀವಿ ಅಂದ್ರೆ !....


ಶತೃವಿನ ಮುಂದೆ ತಲೆ ಬಾಗಬಾರದು !


ಮೇಲೆ ಹೇಳಿದ್ಗಾಗೇ ತಲೆ ಬಗ್ಗಿಸಿದ್ರೆ ತಲೆ ಎತ್ತೋಕಾಗಲ್ಲ 

ಅದ್ರ ಬದ್ಲು ಶತ್ರುನೇ ಮಿತ್ರ ಮಾಡ್ಕೊಳ್ಳೋಣ ಅಲ್ಲ .....


ಏನೇ ಕಷ್ಟ ಬಂದರೂ ತಾಳ್ಮೆ ಕಳೆದುಕೊಳ್ಳಬಾರದು !


ಕಷ್ಟದಲ್ಲೂ ತಾಳ್ಮೆಯಿಂದ ಇರೋದೇ ಜಾಣ್ಮೆ ...

ಇದರಲ್ಲಡಗಿದೆ ತಾಳ್ಮೆಯ ಹಿರಿಮೆ ......


ಪರಮಾತ್ಮನ ನಾಮ ಸ್ಮರಣೆ ಎಂದಿಗೂ ಮರೆಯಬಾರದು !!


ಅದುಕ್ಕೆ, ಹೇಳೋದು ದೊಡ್ಡವರು 

ಮೈಯೆಲ್ಲಾ ಕಿವಿಯಾಗಿಸಿ, ಬರಿ ದೇವರ ನಾಮ ಕೇಳ್ಬೇಕು 

ಮೈಯೆಲ್ಲಾ ಕಣ್ಣಾಗಿಸಿ, ಎಲರಲ್ಲೂ ದೇವ್ರನ್ ನೋಡ್ಬೇಕು!!


ಏಲ್ರಿಗೂ ಒಳ್ಳೆದಾಗಲಿ.--


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Inspirational