Mouna M

Abstract Inspirational Others

4.2  

Mouna M

Abstract Inspirational Others

ಹೆತ್ತವರು

ಹೆತ್ತವರು

2 mins
329


ಹೆತ್ತವರು ಅಂದ್ರೆ ಸುಮ್ಮ್ನೆನಾ! ಅದು ಅಮ್ಮ ಆಗಿರಬಹುದು ಅಥವಾ ಅಪ್ಪ ಆಗಿರಬಹುದು. ಅಮ್ಮ ಆದ್ರೆ ೯ ತಿಂಗಳು ಹೆತ್ತು, ಹೊತ್ತು, ಸಾಕಿ, ಸಲುಹಿ, ಮೊಮ್ಮಕ್ಕಳನ್ನು ಕೂಡ ತನ್ನ ಮಕ್ಕಳ ಹಾಗೆ ಜೋಪಾನ ಮಾಡಿ, ಒಂದು ದಿನ ಹಾಯಾಗಿ, ಬೈ ಹೇಳ್ದೆನೆ ಹೋಗ್ಬಿಡ್ತಾಳೆ. ಆದ್ರೆ ಅಪ್ಪ, ಕಣ್ಣಿಗೆ ಕಾಣಿಸದ ಪ್ರೀತಿ ತೋರಿಸ್ತಾ, ಹರಿದಿರೋ ಬನೀನ್ ಕೂಡ ಲೆಕ್ಕಿಸದೆ ಕತ್ತೆ ತರ ದುಡಿದು ದುಡಿದು, ಹೇಳ್ಕೊಳ್ಳೋಕಾಗದೆ ಒಳೊಗೊಳಗೆ ನೋವು ಅನುಭವಿಸ್ತಾ, ಬರೀ ಪ್ರೀತಿ ತೋರಿಸ್ತಾ ಬರ್ತೀನಿ ಅಂತ ಹೇಳಿ ಬಾರದೂರಿಗೆ ಹೋಗ್ಬಿಡ್ತಾನೆ. ತಮ್ಮ ಜೀವನೇ ಲೆಕ್ಕಿಸದೆ ಇಷ್ಟೊಂದು ಮಾಡಿದ ಇವರ್ನೆ ಕೆಲವು ಮಕ್ಕಳು ಬೀದಿ ಪಾಲು ಮಾಡ್ಬಿಡ್ತಾರೆ ಅಂದ್ರೆ ಲೆಕ್ಕ ಹಾಕಿ, ಅವರನ್ನ ಮದುವೆಯಾದ ಹೆಂಡ್ತೀನ ಹ್ಯಾಗೆ ನೋಡ್ಕೋಬೇಡ? 


ಇರಿ ಇರಿ, ನೀವಂದುಕೊಂಡ ಹಾಗೆ ಹೆಂಡ್ತೀನ ಕೂಡ ಬೀದಿ ಪಾಲು ಮಾಡಲ್ಲ ಈ ನನ್ನ ಮಕ್ಕಳು.  ಹೆಂಡ್ತಿನೇ ಸರ್ವಸ್ವ, ಅವಳಿಲ್ದೆ ಬದುಕೇ ಇಲ್ಲ ಅನ್ಕೊಂಡು ಅವಳನ್ನ ಸುಖದ ಸುಪ್ಪತ್ತಿಗೆಲಿ ತೇಲಾಡಿಸ್ಟೋ ಇರೋವಾಗ , ಹರಕಲು ಹಾಸಿಗೆ ಮೇಲೆ ಮಲಗಿರೋ ಅವರ ಅಪ್ಪ ಅಮ್ಮನ ಕಾಣಿಸ್ತಾರೆ ಇವರ ಕಣ್ಣಿಗೆ? ಲೇ ಹೆಂಡ್ರಿ ನಿಂಗಾದ್ರು ಗೊತ್ತಾಗ್ಬಾರ್ದೆನೆ? ಈ ನನ್ನ ಗಂಡ ಅನ್ನೋ ಪ್ರಾಣಿ ಬಂದಿರೋದೇ ನಿನ್ನ ಅತ್ತೆ ಮಾವನಿಂದ ಅಂತ. ನಿಮ್ಮ ಅಪ್ಪ ಅಮ್ಮಂಗೆ ನಿಮ್ಮ ಅಣ್ಣ ಹಿಂಗೇ ಮಾಡಿದ್ರೆ ನೀ ಸುಮ್ಮ್ನ ಇರ್ತ ಇದ್ಯಾ ಹೆಂಡಿತಿ ಅನ್ನಿಸ್ಕೊಂಡಿರೋ ಪ್ರಾಣಿ ? ಹಾಗೆ ನಿನ್ನ ಅತ್ತೆ ಮಾವ ಕೂಡ ಅಲ್ಲ್ವಾ ರಾಣಿ? ಲೇ ಗಂಡ ಅನ್ನೋ ಭೂಪ ಬೇಕಿತ್ತಾ ನಿಂಗೆ ಈ ಪಾಪ? ಮದುವೆಯಾಗೋ ತನಕೆ ಅಮ್ಮನ ಸೆರಗು ಬೇಕಿತ್ತು ನಿಂಗೆ, ಈಗ ಹೆಂಡ್ತಿ ಸೆರಗಲ್ಲದೆ ಬೇರೆ ಯಾರು ಕಣ್ಣಿಗೆ ಬೀಳಲ್ಲ ಅಲ್ಲ್ವಾ ನಿಂಗೆ? ನಿನ್ನ ಅಕ್ಕನೋ ತಂಗೀನೋ ಅವರ ಅತ್ತೆ ಮಾವಂಗೆ ಇಂಗೆ ಮಾಡಿದ್ರೆ ನಿಂಗೆ ಗೊತ್ತಾಗ್ತಾ ಇತ್ತು ನೀನು ಈ ರೀತಿ ಮಾಡಬಾರ್ದು ಅಂತ. ಅದುಕ್ಕೆ ಹೇಳೋದು, ಎಲ್ಲ ಒಳ್ಳೆಯವರೇ ಕೇಳಿಸ್ಕೊಳ್ಳಿ. ಒಂದು ಮನೇಲಿ, ಒಂದು ಗಂಡು ಒಂದು ಹೆಣ್ಣು ಇಬ್ಬರು ಇರಬೇಕು ಅಂತ. ಒಂದು ಹೆಣ್ಣು ಮಗು ಹೊರಗೆ ಹೋದ್ರೆ ಇನ್ನ ಒಂದು ಹೆಣ್ಣು ಮಗು ಮನೆಗೆ ಬರುತ್ತೆ. ಹಾಗೆ ನಿನ್ನ ಮಗ ಹ್ಯಾಗೋ ಹಾಗೆ ಅಳಿಯ ಕೂಡ ಅಲ್ವಾ?


ಹೆಂಡ್ತಿ, ತವರು ಮನೆನೇ ಬೇರೆ, ಗಂಡನ್ ಮನೆನೇ ಬೇರೆ ಅಲ್ವ ನಿಂಗೆ? ಯಾಕೆ ಈ ತಾರತಮ್ಯ?? 

ಲೋ ಗಂಡ ನಿಂಗೆ, ಅತ್ತೆ ಮಾವನ ಮನೇಲಿ ಒಂದು ದಿನಾನೂ ಇರೋಕಾಗಲ್ಲ ಅಲ್ಲ್ವಾ?

ಅಂಗಂದ ಮೇಲೆ ನಿನ್ನ ಹೆಂಡ್ತಿ ಜೀವನ ಪೂರ್ತಿ ನಿನ್ನ ಮನೇಲಿ ಎಂಗೆ ಇರ್ಬೇಕು ? ಯೋಚ್ನೆ ಮಾಡು.


ಎಲ್ಲಿವರೆಗೂ ಹೆಣ್ಣು ಹೆತ್ತ ಅಪ್ಪ ಅಮ್ಮ, ತನ್ನ ಸೊಸೆಗೆ ಅಪ್ಪ ಅಮ್ಮ ಆಗೋದಿಲ್ಲವೋ,

ಎಲ್ಲಿವರೆಗೂ ಹೆಣ್ಣು ಕೊಟ್ಟ ಅಪ್ಪ ಅಮ್ಮ ತನ್ನ ಅಳಿಯನಿಗ ಅಪ್ಪ ಅಮ್ಮ ಆಗೋದಿಲ್ಲವೋ ?,

ಎಲ್ಲಿವರೆಗೂ ಹೆಣ್ಣು ತಂದುಕೊಂಡ ಅತ್ತೆ ಮಾವ, ತನ್ನ ಸೊಸೆಗೆ ಅಪ್ಪ ಅಮ್ಮ ಆಗೋದಿಲ್ಲವೋ?

ಎಲ್ಲಿವರೆಗೂ ಹೆಣ್ಣು ಹೋದ ಮನೆ ತನ್ನ ಮನೆ ಅಂದುಕೊಳ್ಳೋಲ್ಲವೋ 

ಎಲ್ಲಿವರೆಗೂ ಹೆಣ್ಣು ತನ್ನ ಅತ್ತೆ ಮಾವನ ತನ್ನ ಅಪ್ಪ್ಪ ಅಮ್ಮ ಅಂದುಕೊಳ್ಳೋಲ್ಲವೋ 

ಎಲ್ಲಿವರೆಗೂ ಗಂಡು ತನ್ನೆ ಅತ್ತೆ ಮಾವ ಕೂಡ ತನ್ನ ಅಪ್ಪ್ಪ ಅಮ್ಮ ಅಂದುಕೊಳ್ಳೋಲ್ಲವೋ 

 ಎಲ್ಲಿವರೆಗೂ ಗಂಡ ಆದವನು ಹೆಂಡ್ತೀನ ಅರ್ಥ ಮಾಡ್ಕೊಳ್ಳಲ್ಲವೋ 

ಎಲ್ಲಿವರೆಗೂ ಹೆಂಡ್ತಿ ಆದವಳು ಗಂಡನ್ನ ಅರ್ಥ ಮಾಡ್ಕೊಳ್ಳಲ್ಲವೋ 

ಎಲ್ಲಿವರೆಗೂ ದೊಡ್ಡವರು ಚಿಕ್ಕವರನ್ನ ಚಿಕ್ಕವರು ದೊಡ್ಡವರನ್ನ ಅರ್ಥ ಮಾಡ್ಕೊಳ್ಳಲ್ಲವೋ 

ಎಲ್ಲಿವರೆಗೂ ಮಕ್ಕ್ಳು ಅಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೊಳ್ಳಲ್ಲವೋ 

ಎಲ್ಲಿವರೆಗೂ ನಾವೆಲ್ಲರೂ ನಮ್ಮ ಮನೆ ದೋಸೆನೇ ತೂತು ಅಂದುಕೊಳ್ಳಲ್ಲವೋ 

ಎಲ್ಲಿವರೆಗೂ ನಾವು ನಮ್ಮ ತಪ್ಪುಗಳನ್ನ ತಿದ್ದುಕೊಳ್ಳಲ್ಲವೋ'

ಎಲ್ಲಿವರೆಗೂ ನಾವು ಬೇರೆಯೆವರ ತಪ್ಪನ್ನ ಆಡಿ ತೋರಿಸ್ತೀವೋ 

ಎಲ್ಲಿವರೆಗೂ ನಾವು ನಮ್ಮ ಕೆಲಸ ಆಯಿತು ನಾವಾಯಿತು ಅಂತ ಅಂದುಕೊಳ್ಳೋದಿಲ್ಲವೋ 

ಎಲ್ಲಿವರೆಗೂ ನಾವು ಮನುಷ್ಯತ್ವನ ಮಾರದೆ ಉಳಿಸಿಕೊಳ್ಳೋದಿಲ್ಲವೋ 

ಅಲ್ಲಿವರೆಗೂ ಈ ಪ್ರಪಂಚದಲ್ಲಿ ಕೊರೊನ ಎಂಬ ಮಹಾಮಾರಿ, ಊರು ಕೇರಿನ ನೋಡದೆ 

ಮಕ್ಕಳು, ದೊಡ್ಡವರು ಎಂಬ ತಾರತಮ್ಯ ಇಲ್ಲದೆ ಎಲ್ಲರ ಪ್ರಾಣ ತಗೊಂಡೋಗೋದೇ ಸೈ .

ಅದುಕ್ಕೆ ಹೇಳ್ತೀನಿ, ಇನ್ನಾದ್ರೂ ಎಚ್ಚೆತ್ತುಕೊಂಡು ನಮ್ ಹುಷಾರಲ್ಲಿ ಇದ್ದು ಜೋಡಿಸೋಣ ಕೈ .

 ಆಗ್ ನೋಡಿ ನಮ್ಮಲ್ಲಿರೋ ದೇವ್ರು ಬಂದು ನಮ್ಮಿಂದ ಹೇಳಿಸ್ತಾನೆ ಕೊರೊನಗೆ ಬೈ ಬೈ .


ಹೆತ್ತವರನ್ನ ಯಾರು ಜೋಪಾನವಾಗಿ ನೋಡ್ಕೊಳ್ತಾರೋ ಅವರು ದೇವರಿಗೆ ಸಮಾನರಾಗ್ತಾರೆ.



Rate this content
Log in

Similar kannada story from Abstract