STORYMIRROR

Mouna M

Tragedy

3  

Mouna M

Tragedy

appa, I love you pa....!!

appa, I love you pa....!!

1 min
181

ಅಪ್ಪ ಐ ಲವ್ ಯು ಪಾ........................

ಅಪ್ಪ ಐ ಲವ್ ಯು ಪಾ........................


ಹಾಡನ್ನು ಕೇಳಿದ ಕೂಡಲೇ ನೀ ನೆನಪಾದೆ ಅಪ್ಪ ....

ನಿನ್ನ ನೆನಪು ಮಾಡೋಕೆ ಈ ಹಾಡು ಸಾಕು ಪಾ.....


ಅಂಗಂತ ನಿನ್ನ ನೆನಪು ದಿನಾ ಬರ್ದೇ ಇರೋದಿಲ್ಲ ಅಪ್ಪ ..

ಬ್ಯುಸಿ ದಿನಚರಿಲಿ ಸ್ವಲ್ಪ ಕಡಿಮೆ ಆಗಿರ್ಬೋದು ಪಾ .....


ಆದ್ರೆ ನನ್ ಜೀವನದ ಪ್ರತಿ ಕ್ಷಣದಲ್ಲೂ ನಾನು ನಿನ್ನೆ ಕಾಣ್ತೀನಿ ಅಪ್ಪ 

ಇದ್ದಾಗ ಥ್ಯಾಂಕ್ಸ್ ಹೇಳ್ಲಿಲ್ಲ ನೀ ಸಾಯೋಕೆ ಮುಂಚೆ ಹಲೋ ಕೂಡ ಹೇಳಿಲ್ಲ ಪಾ .. 


ನಾನ್ ಹೇಳಿದ್ನೆಲ್ಲಕೊಡಿಸಿ, ಲೈಫ್ ಪಾಠ ಇಷ್ಟೇ ಕಣ್ಣವ್ವ ಎಂದು ಜೀವನದ ಅಂದನೇ ತೋರಿಸಿ 

ಲೈಫ್ ಅಂದ್ರೆ ಬರೇ ಕೊಡೋದು ಅಂತ ಸೈಲೆಂಟಾಗಿ ಹೇಳಿ , ಹೊಟ್ಟೆ ತುಂಬಾ ತಿನ್ನಿಸಿ, ಬಟ್ಟೆ ಕೊಡಿಸಿ....


ನೀ ಕೊಡಿಸಿದ್ ಖುಷಿಲಿ ಆದ್ಯಾವ್ದು ನನ್ನ ಕಿವೀಲಿ ಹೋಗ್ಲಿಲ್ಲ ಅಪ್ಪ ....

ಈಗ ಬೇಡ ಅಂದ್ರೂ, ಕಿವೀಲಿ ಅದೇ ಹಾಡು ಗುನುಗುನಿಸ್ತೀನಿ ಅಪ್ಪ ......


ನಿನ್ನವ್ವರೇ ಬೆನ್ನಿಗ್ ಚೂರಿ ಹಾಕಿದ್ರೂ, ಅದು ಕಂಡು ಕಾಣದೆ ಕುರುಡ ನಾಗಿ ಇದ್ದ್ ನೀನು 

ನೀ ಕಟ್ಟಿದ ಗೂಡನ್ನೇ ಬಿಟ್ಟು, ನಿನ್ನ ಮರಿಗಳ್ಳನ್ನು ಹೊತ್ತ ಸತಿಯ ಕೂಡಿ ಜೀವ ನದಿಯಲಿ ಈಸಿ ಜಯಿಸಿದ ಮೀನು ... 


ನೀ ಎಂದೂ ಯಾರ್ನೂ ಏನೂ ಕೇಳ್ಲಿಲ್ಲ, ಬರೀ ಕೊಡ್ತಾ ಹೋದೆ, ....

ಕೊಡ್ತಾ ಕೊಡ್ತಾ ಕೊನೆಗೆ ನಿನ್ನ ಜೀವವನ್ನೇ ಕೊಟ್ಟು ಬಾರದೂರಿಗೆ ಹೋದೆ ....


ನೀ ಮುಗಿಸಿದರೂ ನಿನ್ನ ಪಯಣ, ಬಿಡ್ಲಲೊಲ್ಲದು ನನ್ನ 

ನಿನ್ನ ನೆನಪಿನ ದೋಣಿಯಲೇ ಸಾಗಿದೆ ನನ್ನ ಪಯಣ......



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Tragedy