Vadiraja Mysore Srinivasa

Romance Tragedy Classics

4.0  

Vadiraja Mysore Srinivasa

Romance Tragedy Classics

ಕೊನೆಯಾಸೆ

ಕೊನೆಯಾಸೆ

10 mins
272


ಕಾಂತರಾಜ್ ಬೋರ್ಡಿಂಗ್ ಪಾಸ್ ಕೈಯಲ್ಲಿ ಹಿಡಿದು, ಎಫ್ 7 ನಂಬರ್ ಹುಡುಕುತ್ತಾ ಬಂದವನಿಗೆ, ತಾನು ಬುಕ್ ಮಾಡಿದ್ದ ಕಿಟಕಿಯ ಸೀಟ್ನಲ್ಲಿ ಬೇರೆ ಯಾರೋ ಕುಳಿತಿದ್ದು ಕಂಡಿತು; ಆತ ಪುಸ್ತಕ ಓದುವುದರಲ್ಲಿ ಮಗ್ನನಾಗಿದ್ದ. ಕಾಂತರಾಜ್ ಗಂಟಲು ಸರಿಪಡಿಸಿಕೊಂಡು ಹೇಳಿದ, "ಸರ್? ವಿಂಡೋ ಸೀಟ್ ನನ್ನದು." ಪುಸ್ತಕ ಮಡಿಚಿ ಎದ್ದು ನಿಂತು ಹೇಳಿದ ಆತ, "ಐ ಆಮ್ ಸಾರೀ. ಒಂದು ನಿಮಿಷ" ಆತ ಎದ್ದು ಸೀಟ್ನಿಂದ ಹೊರಗೆ ಬಂದ.

ಕಾಂತರಾಜ್ ಕುಳಿತೊಡನೆ, ತಾನು ಕುಳಿತು ಹೇಳಿದ ಆತ; “ಇವತ್ತು ಈ ಪ್ಲೇನ್ ನಲ್ಲಿ ಸೀಟಿಗೊಸ್ಕರ ನಾನು ನನಗೆ ತಿಳಿದ ಎಲ್ಲಾ ಇನ್ಫ್ಲುಯೆನ್ಸ್ ಬಳಸಿಕೊಂಡಿದ್ದೇನೆ. ಹಾಗಾಗಿ, ಸೀಟ್ ನಲ್ಲಿ ಕೂಡುವಾಗ ಸರಿಯಾಗಿ ಗಮನಿಸಲಿಲ್ಲ. ಸಾರೀ ಅಗೈನ್. ನನ್ನ ಹೆಸರು, ಡಾಕ್ಟರ್ ಅಲೋಕ್. ಅಲೋಕ್ ಅಂತ ಕರೆದರೆ ಸಾಕು." ಕೈ ಕುಲುಕುತ್ತಾ ಹೇಳಿದ.

ಅವನ ಕೈ ಕುಲಕುತ್ತ ಹೇಳಿದ ಕಾಂತರಾಜ್. “ಪ್ಲೈನ್ ನಲ್ಲಿ ಓಡಾಡೋವಾಗ ಇವೆಲ್ಲಾ ಸಾಮಾನ್ಯ, ಡಾಕ್ಟರ್ ಅದಕ್ಕಾಗಿ ತಾವು ಸಾರೀ ಕೇಳುವ ಅಗತ್ಯವಿಲ್ಲಾ. ಬೈ ದಿ ವೆ, ನಾನು ಕಾಂತರಾಜ್. ಯಾವಾಗಲೂ ವಿಂಡೋ ಸೀಟ್ನಲ್ಲಿ ಕೂಡ ಬಯಸುತ್ತೇನೆ ಅಷ್ಟೇ.” 

ಅಲೋಕ್ ಕಡೆ ನೋಡಿದ, ಕಾಂತರಾಜ್ . ಸುಮಾರು 35 ವರ್ಷದ ಹ್ಯಾಂಡ್ಸಂ ಯುವಕ ಅಲೋಕ್. ಒಳ್ಳೆಯ ಮೈಕಟ್ಟು ಮತ್ತು ಡಾಕ್ಟರ್ ಗೆ ಬೇಕಾದ ಬಹಳ ಮುಖ್ಯವಾದ ಒಳ್ಳೆಯ ಸ್ಮೈಲ್. ತುಂಬಾ ಸ್ನೇಹಮಯಿಯಾಗಿ ಕಾಣಿಸಿದ ಅಲೋಕ್.

 ವಿಷಯ ಬದಲಿಸುವ ಸಲುವಾಗಿ ಹೇಳಿದ ಕಾಂತರಾಜ್. "ನೀವು ಇಂಡಿಯಾಗೆ ಹೋಗುತ್ತಿರುವುದು, ಬಿಸಿನೆಸ್ ಟ್ರಿಪ್ ಅಥವಾ ಪರ್ಸನಲ್ ವಿಸಿಟ್ಗಾಗಿಯೋ?"

ಅಲೋಕ್ ನಗುತ್ತಾ ಹೇಳಿದ. "ತುಂಬಾ ಪರ್ಸನಲ್ ಮತ್ತೆ ತುಂಬಾ ಸ್ಪೆಷಲ್ ಟ್ರಿಪ್ ಅಂತ ಹೇಳಬಹುದು. ಮತ್ತೆ ನೀವು?"

ಕಿಟಕಿಯಿಂದ ಹೊರ ನೋಡುತ್ತಾ ಹೇಳಿದ ಕಾಂತರಾಜ್. "ಸುಮಾರು 12 - 13 ವರ್ಷಗಳ ನಂತರ ನಾನು ಮತ್ತೆ ಇಂಡಿಯಾಗೆ ಹೋಗ್ತಾ ಇದ್ದೀನಿ. ಎಷ್ಟೋ ವರ್ಷಗಳನಿಂದ ನೋಡಿರದ ಕೆಲವು ಸ್ನೇಹಿತರನ್ನ ಭೇಟಿ ಮಾಡುವುದಿದೆ ಹಾಗೆ ಒಂದು ಸೆಮಿನಾರ್ ಕೂಡ ಅಟೆಂಡ್ ಮಾಡುವುದಿದೆ."

ಇಬ್ಬರೂ ಹಾಗೆ ಜನರಲ್ ವಿಷಯಗಳ ಬಗ್ಗೆ ಕೆಲ ಹೊತ್ತು ಮಾತಾಡಿದರು. ಕಾಂತರಾಜ್ಗೆ ಆತ ಓದುತ್ತಿದ್ದ ಬುಕ್ ಯಾವುದೆಂದು ನೋಡಲಾಗಲಿಲ್ಲ ಮ್ಯಾಗಜಿನ್ ಅಡ್ಡವಾಗಿತ್ತು. 

ಸ್ವಲ್ಪ ಹೊತ್ತಿನ ನಂತರ ಅಲೋಕ್ ಪುಸ್ತಕ ತೆಗೆದು ತಾನು ಓದುತ್ತಿದ್ದ ಪೇಜ್ ಹುಡ್ಕಿ, ಸಿಕ್ಕಿದ ನಂತರ ಮತ್ತೆ ಓದಲು ಶುರು ಮಾಡಿದ.

ಕಾಂತರಾಜಿಗೆ ಆ ಪುಸ್ತಕ ಯಾವುದೆಂದು ನೋಡಲು ಸಾಧ್ಯವಾಯಿತು. ಅದು ಪಿ. ಎಸ್. ಐ ಲವ್ ಯು ಎನ್ನುವ ಕಾದಂಬರಿ. ಪುಸ್ತಕವನ್ನು ನೋಡಿದಾಗ, ತನ್ನ ಬಳಿ ಅದೇ ಹೆಸರಿನ ಪುಸ್ತಕ ಇದ್ದದ್ದು ನೆನಪಾಯಿತು; ಸ್ವಲ್ಪ ಹಳೆಯದಾದ, ಕಿವಿ ಮಡಿಚಿದ್ದ ಪುಸ್ತಕ. 

ಅಲೋಕ್ ಕಡೆ ನೋಡುತ್ತಾ, ಸ್ವಲ್ಪ ಅನುಮಾನದಿಂದ ನುಡಿದ, "ಅಲೋಕ್? ನಿಮಗೆ ತೊದರೆಯಿಲ್ಲದಿದ್ದರೆ, ಆ ಪುಸ್ತಕ ಸ್ವಲ್ಪ ನೋಡಬಹುದಾ?"

ಓದುತ್ತಿದ್ದ ಪುಸ್ತಕದಿಂದ ಕಾಂತರಾಜ್ ಕಡೆ ನೋಡುತ್ತಾ ಏನು ಹೇಳಬೇಕೆಂದು ತಿಳಿಯದೆ, ತಡವರಿಸುತ್ತಾ ನುಡಿದ ಅಲೋಕ್. "ಸಾರೀ ಕಾಂತರಾಜ್. ಇದು ಸ್ವಲ್ಪ ರೂಡ್ ಅಂತ ಅನಿಸಬಹುದು ನಿಮಗೆ. ಆದರೆ, ಸಾಮಾನ್ಯವಾಗಿ ಈ ಪುಸ್ತಕವನ್ನು , ನಾನು ಯಾರಿಗೂ ಕೊಡುವುದಿಲ್ಲ.

ದಯವಿಟ್ಟು ತಪ್ಪು ತಿಳಿಯ ಬೇಡಿ. ಈ ಪುಸ್ತಕ ಬಹಳ ಆತ್ಮೀಯವಾದದ್ದು ನನಗೆ."

ಅಲೋಕನ ಕಣ್ಣಿನಲ್ಲಿ ಕಣ್ಣಿಟ್ಟು ನುಡಿದ ಕಾಂತರಾಜ್. "ಈ ಪುಸ್ತಕದಲ್ಲಿ, ಒಬ್ಬ ಹೆಂಗಸಿನ ಕೈಬರಹದ ನೋಟ್ಸ್ ಏನಾದರೋ ಇದೆಯಾ? ಯಾಕೆಂದರೆ, ಒಂದು ಕಾಲದಲ್ಲಿ, ಇದೆ ಹೆಸರಿನ, ನೋಡಲು ಕೂಡ ಹೀಗೆ ಇದ್ದ ಒಂದು ಪುಸ್ತಕ ನನ್ನಲ್ಲಿತ್ತು" ಉತ್ತರಕ್ಕಾಗಿ ಕಾಯುತ್ತಿದ್ದ ಕಾಂತರಾಜ್ನ ಎದೆ ಬಡಿತ ಹೆಚ್ಚಾಗುತಿತ್ತು.

ಅಲೋಕ್ ನಗುತ್ತಾ ಹೇಳಿದ. "ಖಂಡಿತ ಇದೆ. ಒಬ್ಬ ಸುಂದರವಾದ ಮತ್ತು ಬಹಳ ಸ್ಪೆಷಲ್ ವ್ಯಕ್ತಿ ಬರೆದಿರುವ ನೋಟ್ಸ್ ಇದೆ."

ಒಮ್ಮೆಗೆ, ಆತಂಕ ಹಾಗು ಸಮಾಧಾನದ ಎರಡೂ ಭಾವನೆಗಳ ಅನುಭವ ವಾಯಿತು ಏನೋ ಹೇಳಬೇಂದುಕೊಳ್ಳುವಷ್ಟರಲ್ಲಿ, ಅಲೋಕ್ ನುಡಿದ.

"ನೀವು ಪುಸ್ತಕ ನೋಡಬಹುದು. ಹಾನ್, ಆ ನೋಟ್ಸ್ಗಳ ಬಗ್ಗೆ ಎಚ್ಚರ ವಿರಲಿ, ಪ್ಲೀಸ್? ಬಹಳ ಅಮೂಲ್ಯವಾದದ್ದ್ದು. ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅಷ್ಟೇ ಅಲ್ಲ ನಾನು ಹೋದಲೆಲ್ಲಾ ಈ ಪುಸ್ತಕವನ್ನ ತೆಗೆದುಕೊಂಡು ಹೋಗುತ್ತೇನೆ."

ಕಾಂತರಾಜ್, ಪುಸ್ತಕವನ್ನು ಕೈಯಲ್ಲಿ ಹಿಡಿದು ನೋಡಿದ. ನಡುಗುವ ಕೈಇಂದ, ನಿಧಾನ ವಾಗಿ ಪುಟ ತಿರುಗಿಸಿ, 17ನೆ ಪುಟದತ್ತ ನೋಡಿದಾಗ, ಅವನ ಕಣ್ಣುಗಳನ್ನು ಅವನೇ ನಂಬಲಿಲ್ಲ. ಹಳದಿ ಬಣ್ಣದ, ಕೈಯಲ್ಲಿ ಬರೆದ ನೋಟ್; ಅದು ಅದಿತಿಯ ಬರವಣಿಗೆ ಎನ್ನುವುದರಲ್ಲಿ ಯಾವ ಸಂದೇಹವು ಇಲ್ಲ. ಖಾತ್ರಿ ಮಾಡಿಕೊಳ್ಳಬೇಕೆಂದು, 42ನೆ ಪುಟ ತಿರುಗಿಸಿ ನೋಡಿದ ಅಲ್ಲೇ ಇತ್ತು ಇನ್ನೊಂದು ನೋಟ್.

ಅವನ ಕಣ್ಣಿಂದ ಎರಡು ತೊಟ್ಟು ನೀರಿನ ಹನಿಗಳು ಬಿದ್ದವು. ತೋಯಲಾಡುತ್ತಿದ್ದ ಅವನ ಮನಸ್ಸು ಕೇಳಿತು; ಇದು ನಿಜವೇ? ಹೀಗೂ ಆಗಲಿಕ್ಕೆ ಸಾಧ್ಯವೇ? ಮೂರು ವರುಷಗಳ ನಂತರ? ನಿಜವಾಗಲೂ, ನನಗೆ, ಅದಿತಿ ಮತ್ತೆ ದೊರೆತಳೇ? ಇನ್ನೋ ಎರಡು ನೋಟ್ಸ್ಗಳು ಇದೆಯೆಂದು ಗೊತ್ತಿದ್ದ ಕಾಂತರಾಜ್, ನೋಡಲು ಹೋಗಲಿಲ್ಲ. ಅವನಿಗೆ ಗೊತ್ತಿತ್ತು; ಅವುಗಳು ಕೂಡ, ಅದೇ ಪೇಜಿನಲ್ಲಿರುತ್ತದೆ ಎಂದು.

ಅಲೋಕ್ ತಲೆ ಬಗ್ಗಿಸಿ ಕೆಳಗಿಟ್ಟಿದ್ದ ಬ್ಯಾಗಿನಿಂದ ಏನನ್ನೂ ಹೊರಗೆ ತೆಗೆಯುತ್ತಿದ್ದ. ಕಣ್ಣೊರೆಸಿಕೊಂಡು, ಪುಸ್ತಕವನ್ನು ನಿಧಾನ ವಾಗಿ ಮಡಿಚಿ, ಅಲೋಕ್ ಕಡೆ ನೋಡಿದ.

ತನ್ನನ್ನೇ ನೋಡುತಿದ್ದ ಕಾಂತರಾಜ್ ಕುರಿತು ಹೇಳಿದ ಅಲೋಕ್. "ರಾಜ್, ಒಹ್? ಸಾರೀ, ನಾನು ನಿಮ್ಮನ್ನು ಹಾಗೆ ಕರೆಯ ಬಹುದೇ? ಅಥವಾ, ನೀವು ಪೂರ್ತಿ ಕಾಂತರಾಜ್ ಅಂತಲೇ ಕರೆಯ ಬಯಸುತ್ತೀರಾ?” ಪುಸ್ತಕವನ್ನು ತಿರುಗಿ ಕೊಡುತ್ತ ಹೇಳಿದ ಕಾಂತರಾಜ್. "ರಾಜ್ ಅಂತ ಕರೆಯ ಬಹುದು. ನನ್ನ ಸ್ನೇಹಿತರಲ್ಲೆರೂ, ರಾಜ್ ಅಂತಲೇ ಕರೆಯುವುದು."

ಪುಸ್ತಕವನ್ನು ಜೋಪಾನವಾಗಿ ಮತ್ತೆ ಬ್ಯಾಗಿನೊಳಗೆ ಇಡುವಾಗ, ಪುಟತಿರುಗಿಸಿ, ನೋಟ್ಸ್ ಗಳೆಲ್ಲವೂ ಇದೆಯೆಂದು ಖಾತ್ರಿ ಮಾಡಿಕೊಂಡ ಅಲೋಕ್. ಅವನನ್ನೇ ನೋಡುತ್ತಾ ನುಡಿದ ಕಾಂತರಾಜ್. "ಎಲ್ಲ ನಾಲಕ್ಕು ನೋಟ್ಸ್ಗಳು ತುಂಬಾ ಇಂಟೆರೆಸ್ಟಿಂಗ್ ಆಗಿದೆ. ಎಲ್ಲವು ಭದ್ರವಾಗಿದೆ ತಾನೇ?" 

"ನಾಲಕ್ಕಲ್ಲ ರಾಜ್, ಐದು!" ಅಲೋಕ್ ಪುಸ್ತಕವನ್ನು ಬ್ಯಾಗಿನೊಳಗಿಡುತ್ತಾ ಹೇಳಿದ,.

ಹಣೆಯ ಮೇಲೆ ಚಿಂತೆಯ ಗೆರೆಗಳು ಮೂಡಿದವು. " ಐದಾ? ನಾಲಕ್ಕೆ ಅಲ್ಲವೇ?" ಅಲೋಕ್ನ ಕಣ್ಣನ್ನೇ ನೋಡುತ್ತಾ ಹೇಳಿದ ಕಾಂತರಾಜ್.

ಆತಂಕದಿಂದ ಕೂಡಿದ ಕಾಂತರಾಜ್ ಕಡೆ ನೋಡಿ, ನಗುತ್ತಾ ಹೇಳಿದ ಅಲೋಕ್. "ಐದನೆಯದು, ನಾನು ಬರೆದ್ದಿದು. ನೋಡಿರಬೇಕಲ್ಲವೇ ನೀವು? ಒಂದು ನೋಟಿನಲ್ಲಿ ಹಾಂಡ್ರೈಟಿಂಗ್ ನನ್ನದಿತ್ತು." ತಲೆಯ ಮೇಲಿನ ದೊಡ್ಡ ಹೊರೆ ಇಳಿದಂತೆ ನುಡಿದ ಕಾಂತರಾಜ್. "ಇಲ್ಲ ಅಲೋಕ್. ನಾನು ನೋಡಲಿಲ್ಲ.ಏನು ಬರೆದಿದ್ದೀರಿ ನೀವು?”

ಕಿಟಕಿಯಿಂದ ಹೊರ ನೋಡುತ್ತಾ ನುಡಿದ ಅಲೋಕ್ "ಅವಳು ಬರೆದಿರುವ ನೋಟ್ಸ್ ಥರ ಬರೆಯಲು ನನಗೆಲ್ಲಿ ಸಾಧ್ಯ? ಆ ನೋಟ್ಸ್ ನನಗೆ ನಾನೇ ಹಾಗೆ ಸುಮ್ಮನೆ ಬರೆದುಕೊಂಡಿರುವುದು."

ಎಲ್ಲಿಂದ ಶುರು ಮಾಡಲಿ? ಏನೆಂದು ಕೇಳಲಿ? ಇದೆಂತ ವಿಪರ್ಯಾಸದ ಸಂಧರ್ಭ? ಕೇವಲ ಸಿನಿಮಾದಲ್ಲಿ ಮಾತ್ರ ಆಗುವುದೆಂದು ಅಂದುಕೊಂಡಿದೆ……. ನಿಜ ಜೀವನದಲ್ಲೂ ಈ ರೀತಿ ಆಗುವುದು ಸಾಧ್ಯವೇ?

" ರಾಜ್ ಯಾವುದೂ ಲೋಕದಲ್ಲಿ ಕಳೆದು ಹೋಗಿದ್ದೀರಿ ನೀವು. ಯಾಕೆ, ಯಾವುದಾದರೋ ಹಳೆ ವಿಷಯಗಳು ನೆನಪಿಗೆ ಬಂತೆ?" ನಗುತ್ತಾ ಕೇಳಿದ ಅಲೋಕ್.

ಧೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ಹೇಳಿದ ಕಾಂತರಾಜ್ . "ಹೇಳಿ ಅಲೋಕ್, ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮದುವೆನಾ? ಮತ್ತೆ ಎಲ್ಲಿ ಭೇಟಿಮಾಡಿದಿರಿ ನಿಮ್ಮ ಹೆಂಡತಿಯನ್ನು? ಏಕೆಂದರೆ, ನೀವು ಅವರನ್ನು ತುಂಬಾನೇ ಪ್ರೀತಿಸ್ತೀರಿ ಅಂತ ಗೊತ್ತಾಗತ್ತೆ."

ಕಾಂತರಾಜ್ ಕಡೆ ನೋಡಿದ ಆದರೆ, ಅಲೋಕನ ಕಣ್ಣುಗಳು ಬೇರೆ ಏನನ್ನೋ ನೋಡುತ್ತಿರುವಂತೆನಿಸಿತು.

ಕೆಲವು ಕ್ಷಣ ಏನೋ ಯೋಚಿಸಿ, ತಲೆ ಅಲ್ಲಾಡಿಸುತ್ತ ಹೇಳಿದ ಅಲೋಕ್. “ನಾನು ನನ್ನ ಪ್ರೀತಿಯ ಹುಡುಗಿಯನ್ನು ಭೇಟಿಮಾಡಿದ್ದು ಸಾಂಕೇತಿಕವಾಗಿಯೂ ಹೌದು, ಹಾಗು ಅಕ್ಷರಸಹ ಕೂಡ, ಆಕ್ಸಿಡೆಂಟ್ ಮೂಲಕವೇ.

ಇದು ಮೂರು ವರುಷದ ಹಿಂದೆ ನಡೆದಿದ್ದು. ನಾನು ಎಂದಿನಂತೆ, ಹೋಸ್ಪಿಟಲ್ಗೆ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ. ನಾನು ಯಾವುದೇ ಕಾರಣಕ್ಕೂ ಡ್ರೈವ್ ಮಾಡುವಾಗ ಮೊಬೈಲ್ ಉಪಯೋಗಿಸುವುದಿಲ್ಲ, ಆದರೆ, ಪದೇ ಪದೇ ಬರುತ್ತಿದ್ದ ಮೆಸೇಜ್ ನೋಡಿದಾಗ, ಅದು ನನ್ನ ಒಬ್ಬ ರೋಗಿಯ ನಂಬರ್! ನಾನೇ ಹೇಳಿದ್ದೆ ಮಾಡಿ ಅಂತ. ಅವರಿಗೆ ಬೇರೆ ಮೆಡಿಸಿನ್ ಚೇಂಜ್ ಮಾಡಿ ಕೊಟ್ಟು, ಏನಾದರೋ ಸಮಸ್ಯೆ ಯಾದರೆ, ಫೋನ್ ಅಥವಾ ಮೆಸೇಜ್ ಮಾಡಿ ಅಂತ. ಹಾಗೆ, ಮೊಬೈಲ್ ಕಡೆ ಗಮನಕೊಟ್ಟಾಗ, ಎದುರಿಗೆ ರೋಡ್ ಕ್ರಾಸ್ ಮಾಡುತ್ತಿದ್ದ ಆ ಹುಡುಗಿಯನ್ನು ನೋಡದೆ, ಕಾರ್ ನಿಂದ ಡಿಕ್ಕಿ ಹೊಡೆದ ತತ್ಕ್ಷಣ ಬ್ರೇಕ್ ಹಾಕಿದೆ. ಆದರೂ ಅವಳಿಗೆ ಬಾನೆಟ್ ತಾಕಿ ಕೆಳೆಗೆ ಬಿದ್ದಳು.

ಅವಳಿಗೆ ಅಷ್ಟೇನು ಏಟಾಗಿರಲಿಲ್ಲ. ಆದರೆ ಬಾನೆಟ್ ತಲೆಗೆ ತಾಕಿದ್ದರಿಂದ ಹೋಸ್ಪಿಟಲ್ಗೆ ಜಬರ್ದಸ್ತಿ ಕರೆದೊಯ್ದೆ. ಅವಳು ಯಾರನ್ನೋ ಭೇಟಿ ಮಾಡ ಬೇಕು ಅಂತ ಕೇಳಿಕೊಳ್ಳುತ್ತಲೇ ಇದ್ದಳು. ಆದರೆ, ರಾಜ್, ನಾನೊಬ್ಬ ಡಾಕ್ಟರ್ ಹಾಗಾಗಿ, ಬಲವಂತವಾಗಿ ಕಾರಿನಲ್ಲಿ ಕೂಡಿಸ್ಕೊಂಡು ಹೋದೆ.

ಇಟ್ ವಾಸ್ ಇಂಡೀಡ್ ಲವ್ ಅಟ್ ಫಸ್ಟ್ ಸೈಟ್." ಕಣ್ಣು ಮಿಟಿಸುತ್ತ ನುಡಿದ ಅಲೋಕ್.

ಕಲ್ಲಿನ ಬೊಂಬೆಯಂತೆ ಕುಳಿತ ಕಾಂತರಾಜ್. ಒಹ್ ಮೈ ಗಾಡ್! ಎಂತ ಕೆಲಸ ಮಾಡಿದೆ ಅಲೋಕ್. ಅವಳಿಗಾಗಿ ನಾನು ಹುಡುಕದ ಜಾಗವೇ ಇಲ್ಲ, ಹಾಸ್ಪಿಟಲ್ ಒಂದನ್ನು ಬಿಟ್ಟು. ಅಯ್ಯೋ ದೇವರೇ! ಅವಳಿಗೆ ಆಕ್ಸಿಡೆಂಟ್ ಆಗಿರಬಹುದೆಂದು ನನಗೆ ತೋಚಲೇ ಇಲ್ಲವಲ್ಲಾ? ಪರಿತಪಿಸಿದ ಕಾಂತರಾಜ್.

ಅಲೋಕ್ ಕಾಂತರಾಜ್ ಕಡೆ ತಿರುಗಿ ನುಡಿದ; “ಯಾಕೆ ರಾಜ್, ಏನಾಯಿತು? ಯು ಲುಕ್ ಸಿಕ್! ಈಸ್ ಸಂಥಿಂಗ್ ರಾಂಗ್? ನಿಮಗೆ ಮೆಡಿಕಲ್ ಪ್ರಾಬ್ಲಮ್ ಏನಾದರೂ ಇದೆಯಾ?. ಪ್ಲೀಸ್ ಟೆಲ್ ಮೀ.”

ಅನಾವಶ್ಯಕವಾಗಿ ತನ್ನ ಮೇಲೆ ಅನುಮಾನ ಬರುವುದೆಂದು, ಸುಧಾರಿಸಿಕೊಂಡು ನುಡಿದ ಕಾಂತರಾಜ್ "ಇಲ್ಲ ಅಲೋಕ್.ಐ ಆಮ್ ಆಲ್ರೈಟ್. ನೋ ಪ್ರಾಬ್ಲಮ್. ನಿಮ್ಮ ಸ್ಟೋರಿ ನನ್ನನ್ನು ಮೂಕನನ್ನಾಗಿಸಿತು ಅಷ್ಟೇ. ಹೇಳಿ, ಮುಂದೇನಾಯಿತು? ಇದು ನಡೆದಿದ್ದು ಯಾವ ಊರಿನಲ್ಲಿ ಅಂತ ನೀವು ಹೇಳಲೇ ಇಲ್ಲ?"

“ಸಧ್ಯ. ನಿಮ್ಮ ಮುಖ ನೋಡಿ ಒಂದು ಕ್ಷಣ ಹೆದರಿಕೆಯಾಗಿತ್ತು. ಥಾಂಕ್ ಗಾಡ್ ಯು ಆರ್ ಫೈನ್. ಒಹ್? ಆಕ್ಸಿಡೆಂಟ್ ಆಗಿದ್ದು, ಲಂಡನ್ ನಲ್ಲಿಯೇ. ಪಾಪ ಆ ಹುಡುಗಿ ತಾನು ಹೋಗಬೇಕೆಂದು ತುಂಬಾ ಪರಿತಪಿಸುತಲಿದ್ದಳು. ಹಾಸ್ಪಿಟಲ್ ನಲ್ಲಿ, ಎಂ ಅರ ಐ ಸ್ಕ್ಯಾನಿಂಗ್ ಒಂದು ಮಾಡಲು ಹೇಳಿದೆ; ಬಾನೆಟ್ ಅವಳ ತಲೆಗೆ ಡೈರೆಕ್ಟ್ ಆಗಿ ತಾಕಿದ್ದರಿಂದ. ಆದರೆ ಅವಳು ಕಾಯ ಬೇಕಾಯಿತು, ಯಾಕೆಂದರೆ, ಅಲ್ಲಿ ಮುಂಚೆನೇ ಒಬ್ಬರು ಸ್ಕ್ಯಾನಿಂಗ್ ಮಾಡಿಸಿಕೂಳ್ಳುತ್ತಿದ್ದರು.

ನಾನು ಎಷ್ಟೋ ಕೇಳಿದೆ, ಯಾಕೆ ಹೀಗೆ ಆತಂಕ ಪಡುತ್ತಿದ್ದೀರಿ ಎಂದು, ಅವಳು ಮಾತ್ರ, ಯಾರನ್ನೋ ಭೇಟಿಮಾಡುವುದಿದೆ ಅಷ್ಟೇ ಎಂದಳು.”

ಕಾಂತರಾಜ್ ಕಣ್ಣು ಮುಚ್ಚಿ ಅಂದಿನ ಆ ಕ್ಷಣಗಳನ್ನು ನೆನೆಸಿಕೊಂಡ.

ರೆಡ್ಯಾಗಿ,ಮಿರರ್ ಮುಂದೆ ನಿಂತು, ಟೈ ಸರಿಪಡಿಸಿಕೊಂಡ. ಅವನು ಹಾಕಿಕೊಂಡಿದ್ದು, ಅವಳಿಗಿಷ್ಟವಾದ ಕಂದು ಬಣ್ಣದ ಶರ್ಟ್; ಕಾಂತರಾಜ್ ಬ್ಲೂ ಹಾಕಿಕೊಳ್ಳಬೇಕೆಂದಿದ್ದ ಆದರೆ ಅವಳು ಬ್ಲೂ ಬೇಡ ಎಂದಿದ್ದಳು. ಅವನು ಹಾಕಿಕೊಂಡಿದ್ದ ಸೂಟ್ ಕೊಡ ಮ್ಯಾಚ್ ಆಗುತ್ತಿತ್ತು. ಕನ್ನಡಿಯಲ್ಲಿ ನೋಡಿಕೊಂಡವನಿಗೆ, ಒಂದೇ ಒಂದು ಬಿಳಿ ಕೂದಲು ಕಾಣಿಸಿತು. ಕಷ್ಟ ಪಟ್ಟು ಅದನ್ನು ಕಿತ್ತು, ಮತ್ತೆಲ್ಲಾದರೂ ಇದೆಯಾ ಎಂದು ಹುಡುಕಿದ.

ಮತ್ತೊಮ್ಮೆ ತಲೆ ಬಾಚಿಕೊಂಡು ತನ್ನ ಬ್ಯಾಗ್ ಚೆಕ್ ಮಾಡಿಕೊಂಡು, ಕೋಟಿನ ಪಾಕೆಟ್ ನಲ್ಲಿದ್ದ ಡೈಮಂಡ್ ರಿಂಗ್ ಒಮ್ಮೆ ಮುಟ್ಟಿ ನೋಡಿಕೊಂಡು, ಮನೆಗೆ ಬೀಗ ಹಾಕಿ, ಮೊಬೈಲ್ ಪಕ್ಕದಲ್ಲಿಟ್ಟು ಕಾರನ್ನು ಭೇಟಿಮಾಡಬೇಕಿದ್ದ ಜಾಗದ ಕಡೆ ನಡೆಸಿದ

ಕಾರಿನಿಂದಲೇ ಅವಳಿಗೆ ಫೋನ್ ಮಾಡಿದ. ರಿಂಗ್ ಆಯಿತು ಆದರೆ ಅವಳು ಉತ್ತರಿಸಲಿಲ್ಲ. ಡಿಸ್ಕನೆಕ್ಟ್ ಮಾಡಿದ, ಅವಳು ಕೂಡ ರೆಡಿಯಾಗುತ್ತಿರಬಹುದೆಂದು. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮಾಡಿದ.

ತಕ್ಷಣ ತೊಗೊಂಡು ಹೇಳಿದಳು, "ಯಾಕೆ? ನಿನಗೆ ಒಂದ್ ಐದು ನಿಮಿಷ ಕಾಯಕ್ಕಾಗಲ್ವಾ? ಹುಡುಗಿಯರಿಗೆ ಸ್ವಲ್ಪ ಜಾಸ್ತಿ ಸಮಯ ಬೇಕು, ರೆಡಿ ಆಗಕ್ಕೆ. ನೀನು ಮೂರು ಸಾರಿ ಕನ್ನಡಿ ನೋಡ್ಕೊಳ್ಲಿಲ್ವ? ಹೋಗ್ಲಿ, ಸಿಕ್ತ ಇಲ್ವಾ?"

ಅವಳ ಧ್ವನಿ ಕೇಳುವುದೆಂದರೆ, ಅವನಿಗಿಷ್ಟ. "ಹೌದು, ಮೂರು ಸಾರಿ ಅಂತ ನಿನಗೆಹೇಗೆ ಗೊತ್ತಾಯಿತು? ಮತ್ತೆ ಇನ್ನೇನೋ ಕೇಳಿದೆಯಲ್ಲಾ ಏನು?"

"ನೀನು ಹುಡುಕ್ತಾ ಇದ್ಯೆಲ್ಲಾ ಅದು ಸಿಕ್ತಾ ಅಂತ ಕೇಳಿದೆ." ತುಂಟ ನಗೆ ನಗುತ್ತ ಕೇಳಿದಳು.

"ಏನು?" ಕೇಳಿದ ಕಾಂತರಾಜ್ ಏನು ಅರ್ಥ್ವಾಗದೆ.

"ಸ್ವಲ್ಪ ಡ್ರಾಮಾ ಮಾಡೋದು ಕಮ್ಮಿ ಮಾಡು ರಾಜ್. ನನಗೆ ನಿನ್ನ ಬಗ್ಗೆ ನಿನಗಿಂತ ಚೆನ್ನಾಗಿ ಗೊತ್ತು. ನಾನು ಕೇಳಿದ್ದು, ನೀನು ಹುಡುಕುತಿದ್ದ ಬಿಳಿ ಕೂದಲು ಸಿಗ್ತಾ ಇಲವಾ ಅಂತ?” 

ಜೋರಾಗಿ ನಗುತ್ತಾ ಹೇಳಿದ. "ಖಂಡಿತ ಅದಿತಿ. ನಿನಗೇ ನನ್ನ ಬಗ್ಗೆ ಹೆಚ್ಚು ಗೊತ್ತಿರಿರುವುದು. ಹಾನ್ ಒಂದೇ ಒಂದು ಸಿಕ್ಕಿತು. ಓಕೆ?"

"ಆಯಿತು, ಹುಷಾರಾಗಿ ಡ್ರೈವ್ ಮಾಡು. ಮೀಟ್ ಮೀ ಇನ್ ಕಾಫಿ ಶಾಪ್."

"ಎಲ್ಲಿ ಕಳೆದು ಹೋದ್ರಿ ಸಾರ್ ನೀವು? ಮಿಸ್ಟರ್ ರಾಜ್?" ಅಲೋಕ್ ನಗುತ್ತಾ ಕೇಳಿದ.

ಕಾಂತರಾಜ್ ತಾನು ಪ್ಲೇನ್ ನಲ್ಲಿ ಅಲೋಕ್ ಒಟ್ಟಿಗೆ ಕುಳಿತಿರುವುದು ಆಗ ಜ್ಞಾಪಕಕ್ಕೆ ಬಂದು, ಅಲೋಕ್ ಕಡೆ ನೋಡಿದ.

"ನೀವು ಏನನೂ ನೆನೆಸಿಕೊಂಡು, ಕಣ್ಣು ಮುಚ್ಚಿ ನಗುತ್ತಿದ್ದಿರಿ, ಗೊತ್ತಾ ನಿಮಗೆ? ಖಂಡಿತ ಯಾವುದೋ ಹುಡುಗಿಯ ನೆನಪಿನಿಂದ, ಅಲ್ಲವೇ ರಾಜ್?"

ಏನು ಹೇಳಬೇಕೆಂದು ತಿಳಿಯದೆ ಸ್ವಲ್ಪ ಹೊತ್ತು ಸುಮ್ಮನಿದ್ದವನು, ದೃಢ ಮನಸ್ಸು ಮಾಡಿ ಕೇಳಿದ.

“ಹೌದು ಅಲೋಕ್. ಖಂಡಿತ ನೆನಪು ಹುಡುಗಿಯದೇ. ನಾನು ಅವಳನ್ನು ಮೀಟ್ ಮಾಡಲೆಂದು ಹೋಗುತ್ತಿದ್ದೆ.." ಕಾಂತರಾಜ್ ಮಿಕ್ಕ ಮಾತುಗಳನ್ನು ತನ್ನಲ್ಲೇ ನುಂಗಿಕೊಂಡ.

" ನಾನು ಆಗಲೇ ಹೇಳಿದಂತೆ, ಆ ಹುಡುಗಿಯ ಸ್ಕ್ಯಾನಿಂಗ್ ಮಾಡಿಸಿದೆ. ರಿಪೋರ್ಟ್ ಬರುವುದಕ್ಕೆ ಸಮಯವಿದೆಂದು, ಮತ್ತೆ, ಅವಳು ಹೋಗಲು ಬಹಳ ಅವಸರ ಮಾಡುತ್ತಿದ್ದರಿಂದ, ನಾನು ಒಪ್ಪಿದೆ. ಆಗವಳು, ತನ್ನ ವ್ಯಾನಿಟಿ ಬ್ಯಾಗ್ ಎಲ್ಲೆಂದು ಕೇಳಿದಳು; ಆಗಲೇ ನನಗೆ ನೆನಪಿಗೆ ಬಂದಿದ್ದು. ಆಕ್ಸಿಡೆಂಟ್ ಆಗಿ ಅವಳು ಕೆಳಗೆ ಬಿದ್ದಾಗ, ಬ್ಯಾಗ್ ಕೂಡ ಬಿದ್ದಿತ್ತು. ಅವಳನ್ನು ಹೋಸ್ಪಿಟಲ್ಗೆ ಕರೆದುಕೊಂಡು ಹೋಗುವ ಅವಸರದಲ್ಲಿ, ಅದು ಮರೆತೇ ಹೋಯಿತು. ಪಾಪ ಅವಳ ಮೊಬೈಲ್ ಫೋನ್ ಕೂಡ, ಬ್ಯಾಗಿನಲ್ಲೇ ಇತ್ತಂತೆ. ತಕ್ಷಣ ಅವಳನ್ನು ಕೂಡಿಸಿಕೊಂಡು, ಆಕ್ಸಿಡೆಂಟ್ ಆದ ಜಾಗಕ್ಕೆ ಹೋಗಿ ನೋಡಿದರೆ, ಅಲ್ಲಿ ಬ್ಯಾಗ್ ಇರಲಿಲ್ಲ. ಅವಳು ಅಳುವುದಿಕ್ಕೆ ಶುರು ಮಾಡಿದಳು. ಅವಳ ಮೊಬೈಲ್ ಹಾಗು ಅದರಲ್ಲಿದ್ದ ಕಾಂಟ್ಯಾಕ್ಟ್ಸ್ ಎಲ್ಲವೂ ಕಳೆದು ಹೋಗಿತ್ತು.

ಅವಳನ್ನು ಸಮಾಧಾನ ಮಾಡುವುದಕ್ಕಿಂತ ಮುಂಚೆ ನನ್ನ ಫೋನ್ ರಿಂಗ್ ಆಯಿತು. ನೋಡಿದರೆ, ಹಾಸ್ಪಿಟಲ್ ನಿಂದ. ಸ್ಕ್ಯಾನಿಂಗ್ ಮಾಡಿದ ಡಾಕ್ಟರ್. ಅವರೇಕೆ ಮಾಡುತ್ತಿದ್ದಾರೆಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ ಗಾಬರಿ ಹುಟ್ಟಿಸಿತು. ಅವರು ಹೇಳಿದ್ದಿಷ್ಟೇ; ಹುಡುಗಿಯನ್ನು ಕರೆದುಕೊಂಡು, ತತ್ಕ್ಷಣ ಬನ್ನಿ ಎಂದು.

ನನಗೆ ಸ್ವಲ್ಪ ಡಿಸ್ಟರ್ಬ್ ಆಯಿತು. ಹುಡುಗಿಯನ್ನು ಕರೆದುಕೊಂಡು ಬರಲು ಹೇಳಿದ್ದಾದರೂ ಏಕೆ? ಅವಳು, ಅತ್ತು, ಅತ್ತು, ಕೆನ್ನೆಯೆಲ್ಲ ಕೆಂಪಾಗಿತ್ತು; ಜೊತೆಗೆ ನನ್ನ ಮೇಲಿನ ಕೋಪ ಬೇರೆ. ಆ ಸಮಯದಲ್ಲೂ ಕೂಡ, ನನಗೆ ನಗು ಬಂದಿತು. ತುಂಬಾ ಪ್ರೊಟೆಸ್ಟ್ ಮಾಡುತ್ತಿದ್ದ ಅವಳನ್ನು ಆಲ್ಮೋಸ್ಟ್, ಎಳೆದೇ ಕರೆದು ಕೊಂಡು ಹೋದೆ ಹಾಸ್ಪಿಟಲ್ ಕಡೆಗೆ.

ಅವಳನ್ನು ನನ್ನ ಕ್ಯಾಬಿನ್ ನಲ್ಲಿ ಕೂಡಿಸಿ, ಡ್ಯೂಟಿ ಡಾಕ್ಟರ್ ಅನ್ನು ನೋಡಲು ಹೋದೆ. ಅವರು ಹೇಳಿದ್ದನ್ನು ಕೇಳಿ ನನಗೆ ಎದೆ ಒಡೆದೇ ಹೋಯಿತು. ಸ್ಕ್ಯಾನಿಂಗ್ ರಿಪೋರ್ಟ್ ನನ್ನ ಮುಂದಿಟ್ಟಿದ್ದ ಅವರು, ಆ ಹುಡುಗಿಗೆ ಬ್ರೈನ್ ಟ್ಯೂಮೊರ್ ಇರುವುದನ್ನು ಖಚಿತ ಪಡಿಸಿದರು.”

ಅಲೋಕ್ ಮಾತು ನಿಲ್ಲಿಸಿದ; ಅವನ ಕಣ್ಣುಗಳಿದ ನೀರು ಹರಿದು ಬರುತ್ತಿತ್ತು. ಗದ್ಗದಕಂಠದಿಂದ ಹೇಳಿದ ಅಲೋಕ್. " ಕ್ಯಾನ್ಸೆರ್ ಅಡ್ವಾನ್ಸ್ ಸ್ಟೇಜ್ನಲ್ಲಿತ್ತು. ಕೇವಲ ಕೆಲವೇ ತಿಂಗಳುಗಳು ಮಾತ್ರ ಅವಳು ಬದುಕುವ ಸಾಧ್ಯತೆ ಇತ್ತು."

ಕಾಂತರಾಜ್ ತನಗರಿವಿಲ್ಲದಂತೆ, ಎದ್ದು ನಿಂತ. ಅಲೋಕ್ ಘಾಬರಿನಿಂದ ನುಡಿದ. "ಆಮ್ ಸಾರೀ ರಾಜ್. ನಿಮ್ಮನ್ನು ಅಪ್ಸೆಟ್ ಮಾಡುವ ಉದ್ದೇಶ್ಯ ಇರಲಿಲ್ಲ. ಆರ್ ಯು ಆಲ್ ರೈಟ್? 

ಕಾಂತರಾಜ್ ಅಲೋಕ್ ಕಡೆ ನೋಡುತ್ತಾ, ರೆಸ್ಟ್ ರೂಮ್ಗೆ ಹೋಗಿ ಬರುತ್ತೆಂದು ಹೇಳಿ ಹೋದ.

ಟಾಯ್ಲೆಟ್ ಬಾಗಿಲು ಹಾಕಿಕೊಂಡು, ಗಳ ಗಳನೆ ಅತ್ತ ಕಾಂತರಾಜ್. ಹೀಗೇಕೆ ಆಯಿತು? ಆದರೆ, ಅವಳಿಗೆ ಯಾವ ಸಿಂಪ್ಟಮ್ ಗಳು ಇರಲಿಲ್ಲವಲ್ಲ? ಟಾಯ್ಲೆಟ್ ಬಾಗಿಲು ಯಾರೋ ಬಡಿದಿದ್ದರಿಂದ, ಹೊರ ಬರ ಬೇಕಾಯಿತು

ಕಣ್ಣೊರೆಸಿಕೊಡು ಮುಖ ತೊಳೆದುಕೊಂಡು, ಕರ್ಚೀಪ್ ನಲ್ಲಿ ಮುಖ ವೊರೆಸಿಕೊಂಡು ಬಂದು ಕುಳಿತು ಅಲೋಕ್ ಕಡೆ ನೋಡುತ್ತಾ ನುಡಿದ. "ಆ ಹುಡುಗಿಗೆ ಈ ವಿಷ್ಯ ಗೊತ್ತಿರಲಿಲ್ಲವೇನು?"

ಅಲೋಕ್ ಕಣ್ಣೆರನ್ನು ಒರೆಸಿಕೊಂಡು ನುಡಿದ. "ರಾಜ್, ಕ್ಯಾನ್ಸರ್ ಎಂಥ ಕಾಯಿಲೆಯೆಂದರೆ, ಅಡ್ವಾನ್ಸ್ ಸ್ಟೇಜಿಗೆ ಬರೂ ವರೆಗೂ ಕೆಲವು ಸಲ ಗೊತ್ತಾಗುವುದಿಲ್ಲ. ಸಾಮಾನ್ಯವಾಗಿ ತಲೆನೋವು, ತಲೆ ತಿರುಗುವುದು, ಇವೆಲ್ಲವೂ ಕೆಲವರಲ್ಲಿ ಬಂದರೂ, ಕೆಲವರಲ್ಲಿ, ಅದೂ ಕೂಡ ಕಾಣುವುದಿಲ್ಲ."

ತನ್ನ ಮಾತನ್ನು ತೂಕ ಮಾಡಿ ಮಾತನಾಡಿದ ಕಾಂತರಾಜ್. "ಡಾಕ್ಟರ್ ಅಲೋಕ್, ನೀವು ಇದುವರೆಗೂ, ಆ ಹುಡುಗಿಯ ಹೆಸರೇ ಹೇಳಲಿಲ್ಲವಲ್ಲ?"

ಕಾಂತರಾಜ್ ಕಡೆ ನೋಡುತ್ತಾ ನುಡಿದ ಅಲೋಕ್. " ಆಮ್ ಸಾರೀ. ಮೊದಲೇ ನಿಮಗೆ ಹೇಳಬೇಕಿತ್ತು. ಆ ಹುಡುಗಿಯ ಹೆಸರು ……" ಕಾಂತರಾಜ್ ಉಸಿರು ಬಿಗಿಹಿಡಿದು ದೇವರನ್ನು ಕೇಳಿಕೊಂಡ. ಅದು ಅದಿತಿ ಯಾಗದಿರಲಿ……...

"ಅದಿತಿ. ಅವಳ ಹೆಸರು ಅದಿತಿ. ಅವಳು ಎಷ್ಟು ಮುದ್ದಾಗಿದ್ದಳೂ ಅವಳ ಹೆಸರು ಕೂಡ ಅಷ್ಟೇ ಮುದ್ದಾಗಿತ್ತು. ಮತ್ತೆ ತುಂಬಾ ಇಂಟಲಿಜೆಂಟ್."

ಎದ್ದು ನಿಂತು ಆತಂಕದ ಧ್ವನಿಯಲ್ಲಿ ಹೇಳಿದ ಕಾಂತರಾಜ್. "ಅಲೋಕ್? ನೀವು, ಇದ್ದಳು ಅಂತ ಬೂತಕಾಲದಲ್ಲಿ ಮಾತನಾಡುತ್ತಿದ್ದೀರಿ. ಅಂದರೆ ಅವಳು..?"

 ಅಲೋಕ್ ತನ್ನ ಭಾವನೆಗಳನ್ನು ಹಿಡಿತಕ್ಕೆ ತಂದು, ಕಾಂತರಾಜ್ ಕೈಯನ್ನು ಮೃದುವಾಗಿ ಹಿಸುಕುತ್ತ ನುಡಿದ. " ಆಮ್ ಸಾರೀ, ರಾಜ್. ಅನಾವಶ್ಯಕವಾಗಿ ನನ್ನ ಕಥೆಯಿಂದ ನಿಮ್ಮ ಪ್ರಯಾಣವನ್ನು ಸುಮ್ಮನೆ ಹಾಳು ಮಾಡುತ್ತಿದ್ದೇನೆ.."

"ಇಲ್ಲ. ಖಂಡಿತವಾಗಿಯೂ ಇಲ್ಲ ಅಲೋಕ್. ನೀವು ಉಪಕಾರವನ್ನೇ ಮಾಡುತ್ತಿದ್ದೀರಿ. ಹೇಳಿ ಏನಾಯಿತು."

“ನನಗೆ ಡಾಕ್ಟರ್ ಕಡೆಯಿಂದ ಸುದ್ದಿಯ ಖಾತ್ರಿ ಬಂದೊಡನೆ , ನನಗೆ ಬೇರೆ ದಾರಿ ಇಲ್ಲದೆ, ಅದಿತಿಗೆ ವಿಷಯ ಹೇಳಲೇಬೇಕಾಯಿತು. ಇನ್ನು ಒಂದು ದಿವಸ ಹೋಸ್ಪಿಟಲ್ನಲ್ಲಿ ಇರುವಂತೆ ಬಲವಂತ ಮಾಡಿದೆ. ಇನ್ನಷ್ಟು ಟೆಸ್ಟ್ ಮಾಡಬೇಕಿತ್ತು. ಅವಳ ಹಾಸಿಗೆಯ ಮೇಲೆ ಕುಳಿತು ನಾನು ಮಾತನಾಡಲು ಹೋದಾಗ, ದಯವಿಟ್ಟೂ ಒಂದು ದಿನ ಬಿಟ್ಟು ಬನ್ನಿ. ನನಗೆ ಸ್ವಲ್ಪ ಏಕಾಂತ ಬೇಕೆಂದು ಹೇಳಿದಳು. ಕೊನೆಗೆ, ಅವಳಿಷ್ಟದಂತೆ, ಅವಳಿಗೆ ಯೋಚನೆ ಮಾಡಲು ಒಂದು ದಿನ ಅವಕಾಶ ಕೊಟ್ಟು ಮತ್ತೆ ಅವಳನ್ನು ನೋಡಿ , ಡಿಸ್ಚಾರ್ಜ್ ಮಾಡಿಸಿ ಕೊಂಡು ಮನೆಗೆ ಕರೆದುಕೊಂಡು ಹೋಗುತ್ತೆಂದು ಹೇಳಿದೆ. 

ಅವಳು ಮನೆಗೆ ಹೋಗುವುದು ಬೇಡವೆಂದಳು. ಕಾಫಿ ಶಾಪ್ ನಲ್ಲಿ ಕುಳಿತು ಮಾತನಾಡುವಾಗ ಕೇಳಿದಳು, "ನಾನು ಇಂಡಿಯಾ ಗೆ ಹೋಗಬೇಕು.”

“ನಾನು ಆಶ್ಚರ್ಯ ದಿಂದ ಕೇಳಿದೆ ಇಂಡಿಯಾಗ?” ಆಗವಳು ಹೇಳಿದಳು, ನನಗೆ ಕೋಲ್ಕತ್ತಾ ದಲ್ಲಿ ನನ್ನ ಕೊನೆಯ ದಿನಗಳನ್ನು ಕಳೆಯ ಬೇಕು ಅಂತ. ಅವಳಿಗೆ ಅಲ್ಲಿ ಯಾರು ಬಂಧುಗಳಿರಲಿಲ್ಲ. ಆದರೆ, ಹುಟ್ಟಿ ಬೆಳೆದ ಊರಂತೆ." ಅಲೋಕ್ ಕಿಟಕಿಯಿಂದ ಹೊರ ನೋಡಿದ.

ಅಂದು ಅವನು ಮತ್ತು ಅದಿತಿ ಮೀಟ್ ಮಾಡಿದ ಸಂದರ್ಭ ಹಾಗು ಮಾತನಾಡಿದ ವಿಷಯಗಳೆಲ್ಲವೂ ನೆನಪಿಗೆ ಬಂತು.

ಅದಿತಿ, ಅವನು ಕೊಡಿಸಿದ್ದ ಮರೂನ್ ಬಣ್ಣದ ಸೀರೆಯುಟ್ಟು ಕುಳಿತಿದ್ದನ್ನು ಕಂಡು, ಅಲೋಕ್ಗೆ ಮಾತೇ ಹೊರಡಲಿಲ್ಲ; ಅಷ್ಟು ಸುಂದರವಾಗಿ ಕಾಣುತ್ತಿದ್ದಳು ಅವಳು. ಇಂತಹವಳನ್ನು ಆ ದೇವರು ಇಷ್ಟು ಬೇಗ ಕರೆದುಕುಳ್ಳುವುದಾದರೋ ಏಕೆ ಎಂದು ಮನಸ್ಸಿನಲ್ಲೆಯೇ ಮರುಗಿದ.

ಮಧುರವಾದ ಧ್ವನಿಯಲ್ಲಿ ಹೇಳಿದಳು. "ಅಲೋಕ್, ನೀವು ನನ್ನ ಕೋಲ್ಕತ್ತಾಗೆ ಕರೆದುಕೊಂಡು ಹೋಗುತ್ತೀರಾ? ನನಗೆ, ನನ್ನ ಕೊನೆಯ…….." ಮಾತು ಗಂಟಲಿನಲ್ಲೇ ನಿಂತುಹೋಯಿತು. ಕೆಲವು ಕ್ಷಣಗಳ ನಂತರ ಮುಂದುವರೆಸಿದಳು. "ಕೆಲವು ತಿಂಗಳುಗಳು ಅಲ್ಲಿರಬೇಕು. ಆದರೆ, ನೀವು ನಿಮ್ಮ ಕೆಲಸಬಿಟ್ಟು ಬರುವುದಾದರೋ ಹೇಗೆ?"

ಅಲೋಕ್ ಅವಳ ಕಣ್ಣುಗಳನ್ನೇ ನೋಡುತ್ತಾ ನುಡಿದ. "ಅದಿತಿ. ನಿನಗೋಸ್ಕರ ಏನು ಬೇಕಾದರೂ ಮಾಡಲು ಸಿದ್ದ. ನೀನು ನನ್ನ ಕೆಲಸದ ಬಗ್ಗೆ ಯೋಚಿಸ ಬೇಡ. ಕೆಲವು ತಿಂಗಳ ರಜಾ ತೆಗೆದುಕೊಳ್ಳುತ್ತೇನೆ."

ಅವನನ್ನೇ ನೋಡುತ್ತಾ ಹೇಳಿದಳು. "ಅಲೋಕ್. ಇನ್ನೂ ಒಂದು ವಿಷಯ. ನನ್ನದೊಂದು ಕೊನೆಯ ಆಸೆ ಇದೆ. ಅದು ಸ್ವಲ್ಪ ಕಾಂಪ್ಲಿಕೇಟೆಡ್. ಪೂರ್ತಿ ಮಾಡುತ್ತೀರಾ? ಪ್ಲೀಸ್?"

ಅಲೋಕ್ ಅವಳ ಕೈ ಹಿಡಿದು ನಿಧಾನವಾಗಿ ಅಮುಕುತ್ತಾ ಹೇಳಿದ, "ಹೇಳು ಅದಿತಿ. ಅದೇನೆಂದು. ಖಂಡಿತ ನಡೆಸಿಕೊಡುತ್ತೇನೆ."

ತನ್ನನ್ನೇ ನೋಡುತ್ತಿದ್ದ ಕಾಂತರಾಜ್ ಮುಖವನ್ನು ನೋಡಿ ಹೇಳಿದ, "ನಾವು ತಕ್ಷಣವೇ ಹೊರೆಟವು. ಅವಳ ಉಳಿದ ಬಾಳಿನ ಒಂದೊಂದು ಕ್ಷಣವೂ ಅತ್ಯಮೂಲ್ಯವಾದದ್ದು. ಅವಳು ಅದನ್ನು ಪೂರ್ತಿ ಯಾಗಿ ಸುಖದಾಯವಾಗಿ ಅನುಭವಿಸುವುದು ನನಗೆ ಮುಖ್ಯವಾಗಿತ್ತು."

ಕಾಂತರಾಜ್ ಮತ್ತೆ ಎದ್ದು ನಿಂತು ಏನು ಹೇಳದೆ, ರೆಸ್ಟ್ ರೂಮ್ ಕಡೆ ನಡೆದ. ಕಣ್ಣ್ಣಿನಿಂದ ಧುಮುಕುತ್ತಿದ್ದ ನೀರನನ್ನು ತಡೆ ಹಿಡಿಯದೇ ಜೋರಾಗಿ ಅತ್ತ. ಕ್ಯಾನ್ಸರ್ ಎಂದು ಗೊತ್ತಾದ ಕೂಡಲೇ, ನಾನು ಯಾವುದೇ ಕಾರಣಕ್ಕೂ ಅವಳನ್ನು ನೋಡಬಾರದೆಂದು ಕೋಲ್ಕತ್ತಾಗೆ ಹೊರಟಿದ್ದಾಳೆ. ಎಷ್ಟೋ ವರ್ಷಗಳ ಹಿಂದೆ ನಡೆದಿದ್ದ ಘಟನೆಯೊಂದು ನೆನಪಿಗೆ ಬಂತು.

ಅದಿತಿ ಕೇಳಿದಳು "ರಾಜ್, ನಿಜವಾದ ಪ್ರೀತಿ ಎಂದರೇನು?" ಅವಳ ಸುಂದರವಾದ ಕಣ್ಣುಗಳನ್ನು ನೋಡುತ್ತಾ ಹೇಳಿದ ಕಾಂತರಾಜ್. "ನೀನು ಡಿಯರ್. ಯು ಆರ್ ಟ್ರು ಲವ್"

ಅದು ವಸಂತ ಕಾಲ, ಎಲ್ಲಡೆ ಹೂವುಗಳು ಅರಳುತ್ತಿತ್ತು. ಅದಿತಿ ಹೊರಗೆ ಬೆಳಿದಿದ್ದ ಹೂವುಗಳನ್ನು ನೋಡುತ್ತಾ ಹೇಳಿದಳು. "ಇಲ್ಲ ರಾಜ್. ನಿಜವಾದ ಪ್ರೀತಿ ಅಂದರೆ, ಒಬ್ಬ ವ್ಯಕ್ತಿಗೆ ನೀವು ಕೊಡಬೇಕಾದ ಬಲಿದಾನ. ಟ್ರೂ ಲವ್ ಈಸ್ ಸ್ಯಾಕ್ರಿಫೈಸ್"

 ಅದಿತಿ ತನಗೆ ಹೇಳದೆ ಕೇಳದೆ ಕೋಲ್ಕತ್ತಾಗೆ ಹೋಗಿದ್ದೇಕೆಂದು ಅರ್ಥವಾಯಿತು. ಅವಳು ಅವನನ್ನು ಎಷ್ಟುಪ್ರೀತಿಸುದ್ದಳೆಂದರೆ, ಅವನಿಂದ ಅವಳಿಗೆ ದೂರ ಹೋಗಬೇಕಿತ್ತು.

ಕಾಂತರಾಜ್ ಮತ್ತೆ ಬಂದಾಗ, ಅಲೋಕ್ ಪುಸ್ತಕ ತೆಗೆದು, ಅವಳು ಬರೆದಿದ್ದ ನೋಟ್ಸ್ ಓದಿಕೊಂಡು, ನಗುತ್ತಲಿದ್ದ.

ಕಾಂತರಾಜ್ ಬಂದಿದ್ದನ್ನು ನೋಡಿ, ಪುಸ್ತಕವನ್ನು ಬದಿಗಿಟ್ಟು ನುಡಿದ. "ನೀವು ಕೋಲ್ಕತ್ತಾಗೆ ಹೋಗಿದ್ದೀರಾ ರಾಜ್? ನಾನು ಕಳೆದ ಮೂರು ವರ್ಷಗಳಿಂದ, ಪ್ರತಿ ವರುಷ ತಪ್ಪದೆ ಹೋಗುತ್ತಿದ್ದೇನೆ. ಅಲ್ಲೇ ನನ್ನ ಅದಿತಿ ಇರುವುದು, ಅವಳ ಆಸೆಯಂತೆ."

ಕಾಂತರಾಜ್ ಅಲೋಕ್ ಕೈಹಿಡಿಗೂ ಅಮುಕುತ್ತಾ ನುಡಿದ, "ಯು ಆರ್ ವೆರಿ ಲಕ್ಕಿ ಅಲೋಕ್, ಅದಿತಿಯ ಜೊತೆ ಸಮಯ ಕಳಿದ ನೀವೇ ಲಕ್ಕಿ."

ಅಲೋಕ್ ಏನು ಹೇಳದೆ ಸುಮ್ಮನೆ ನಕ್ಕ. ಕಾಂತರಾಜ್ ಮುಂದುವರೆಸಿದ, "ನಿಮ್ಮ ಮತ್ತೆ ಅದಿತಿಯ ಮದುವೆಯ ಬಗ್ಗೆ ನೀವು ಹೇಳಲೇ ಇಲ್ಲವಲ್ಲ ಅಲೋಕ್?"

ನಗುತ್ತಾ ಹೇಳಿದ ಅಲೋಕ್. "ನಾವು ಮದುವೇ ಆಗಲೇ ಇಲ್ಲ ರಾಜ್. ಅವಳು ಮದುವೇ ಬೇಡವೆಂದಳು. ಉಳಿದ ದಿನಗಳು ಕೇವಲ ನನ್ನ ಕಂಪ್ಯಾನಿಯನ್ ಆಗಿರು ಎಂದು ರಿಕ್ವೆಸ್ಟ್ ಮಾಡಿಕೊಂಡಳು. ನಾನು ಇಂಡಿಯಾ ನೋಡಿ ಸುಮಾರು ವರ್ಷಗಳೇ ಆಗಿದ್ದವು. ತುಂಬಾ ಚಿಕ್ಕ ವಯಸ್ಸಿನಲ್ಲೇ ತಂದೆ, ಇಂಗ್ಲೆಂಡ್ಗೆ ಶಿಫ್ಟ್ ಆಗಿದ್ದರು. ಅವರು ಕೂಡ ನನ್ನ ಹಾಗೆ ಡಾಕ್ಟರ್. ನಾನು ಹುಟ್ಟಿದ ದೇಶವನ್ನೇ ಸರಿಯಾಗಿ ನೋಡಿರಲಿಲ್ಲ ನಾನು. ಅದಿತಿಯ ಜೊತೆ ಪೂರ್ತಿ ಇಂಡಿಯಾ ಸುತ್ತಿದೆ. ನಿಜಕ್ಕೂ ಎಂತ ಅದ್ಭುತವಾದ ದೇಶ."

ಕಾಂತರಾಜ್ ತನ್ನ ಮಾತನ್ನು ತೂಕ ಮಾಡಿ ಯೋಚಿಸಿ ಹೇಳಿದ. " ಅಲೋಕ್ ಕೋಲ್ಕತ್ತಾ ದಲ್ಲಿ ಎಲ್ಲಿ ?"

ಅಲೋಕ್ ನಗುತ್ತಾ ಕಾಂತರಾಜ್ ಕಡೆ ನೋಡುತ್ತಾ ಹೇಳಿದ. "ಎಲ್ಲಕಡೆಯೂ. ಅವಳು ಭೂದಿಯನ್ನು ಇಡೀ ಕೋಲ್ಕತ್ತಾದ ಮೇಲೆ ಹಾಕುವುದಕ್ಕೆ ಹೇಳಿದ್ದಳು. ಅವಳ ಮಾತಿನಲ್ಲೇ ಹೇಳಬೇಕಾದರೆ, "ಅಲೋಕ್ ನೀನು ಪ್ರತಿಸಾರಿ ಕೋಲ್ಕತ್ತಾಗೆ ಬಂದಾಗ, ಗಾಳಿಯಲ್ಲಿ ನನ್ನ ಕಂಪು ನಿನಗೆ ಬರುತ್ತದೆ. ಮಳೆಗಾಲ ಬಂದಾಗ, ಮಳೆ ನೀರಿನ ಜೊತೆ ಧರೆಗಿಳಿದು, ಆ ಹೂವುಗಲ್ಲಿನ ಪರಿಮಳದಲ್ಲಿ ನಾನು ಸೇರುತ್ತೇನೆ."

ಕಾಂತರಾಜ್ ಕಣ್ಣಲ್ಲಿ ನೀರು ಬಂತು. ಒರೆಸಿಕೊಳ್ಳಿಯುವ ಪ್ರಯತ್ನವನ್ನು ಮಾಡಲಿಲ್ಲ. ಮುಂಬೈ ಏರ್ಪೋರ್ಟ್ ಬಂತೆಂದು, ಇಬ್ಬರೂ ಇಳಿಯುವುದಕೆ ಸಿದ್ಧತೆ ಮಾಡಿಕೊಂಡರು.

ಅಲೋಕ್, ಕೈ ಕುಲುಕುತ್ತಾ ಹೇಳಿದ, "ನಾನು ಇಲ್ಲಿಂದ ಕೋಲ್ಕತ್ತಾ ಫ್ಲೈಟ್ ಹಿಡಿಯುತ್ತೇನೆ. ಕೇವಲ ನನ್ನ ಬಗ್ಗೆ ಮಾತ್ರ ಮಾತನಾಡುತ್ತಾ, ನಿಮ್ಮ ಬಗ್ಗೆ ಏನು ತಿಳಿದುಕೊಳ್ಳಲೇ ಇಲ್ಲ. ನೀವು ಮುಂಬೈಯಲ್ಲೇ ಇರುತ್ತೀರೋ ಅಥವಾ ಬೇರೆ ಕಡೆ ಹೋಗುವ ಪ್ಲಾನ್ ಇದೆಯಾ?"

ಎಲ್ಲೋ ನೋಡುತ್ತಾ ಹೇಳಿದ ಕಾಂತರಾಜ್ " ಇಲ್ಲಿನ ಕೆಲಸ ಮುಗಿದ ಕೂಡಲೇ ನಾನು ಕೂಡ ಕೋಲ್ಕತ್ತಾಗೆ ಹೋಗುವನಿದ್ದೇನೆ. ಯಾರನ್ನೂ ಭೇಟಿಮಾಡುವುದಿದೆ. "

"ಒಹ್? ವಂಡರ್ಫುಲ್. ಹಾಗಿದ್ದರೆ, ನಾವಿಬ್ಬರೂ ಮತ್ತೆ ಭೇಟಿಯಾಗುವ ಚಾನ್ಸ್ ಇದೆ?" ನಗುತ್ತಾ ಹೇಳಿದ ಅಲೋಕ್. ಏನೂ ನೆನೆಸಿಕೊಂಡವಂತೆ ಮತ್ತೆ ಕೆಇಳಿದ. "ಕೋಲ್ಕತ್ತಾದಲ್ಲಿ ಎಲ್ಲಿ ಎಂದು ಕೇಳಬಹುದಾ?"

ಕಾಂತರಾಜ್ ಮೊದಲಬಾರಿಗೆ ನಗುತ್ತಾ ಹೇಳಿದ. " ರೊಬೀನ್ದ್ರ ಸರೋವರ್ ಹತ್ತಿರ. ಎಷ್ಟೋ ವರುಷಗಳ ನಂತರ ಹೋಗುತ್ತಿದ್ದೇನೆ."

ಕೆಳಗಿಳದ ನಂತರ ಇಬ್ಬರು ಬಹಳ ಹೊತ್ತು ಕೈ ಕುಲಿಕಿದರು. ನಗುತ್ತಾ ಹೇಳಿದ ಅಲೋಕ್ " ಟೇಕ್ ಕೇರ್ ಮೈ ಫ್ರೆಂಡ್."

ಕಾಂತರಾಜ್ ತನ್ನ ಲಗೇಜ್ ಹಿಡಿದು, ಟ್ಯಾಕ್ಸಿ ಸ್ಟಾಂಡ್ ಕಡೆ ಹೊರಟ. ಅಲೋಕ್ ಅಲ್ಲೇ ನಿಂತು ನೋಡುತ್ತಿದ್ದವನು, ಕೋಟ್ ಪಾಕೆಟ್ನಿಂದ ಪುಸ್ತಕವನ್ನು ಹೊರತೆಗೆದು ಕೈಯಲ್ಲಿ ಹಿಡಿದು ಅದನ್ನೇ ನೋಡುತ್ತಾ ಹೇಳಿದ.

"ಇಂಗ್ಲೆಂಡ್ ದೇಶದ ಮೂಲೆ ಮೊಲೆಗಳನ್ನು ಹುಡುಕಿದ ಮೇಲೆ ಕೊನೆಗೂ ಸಿಕ್ಕಿದ ಅದಿತಿ ನಿನ್ನ ರಾಜ್. ನೀನು ಹೇಳಿದ್ದಂತೆ, ಪುಸ್ತಕ ನಿಜವಾಗಿಯೂ ಬಹಳ ಸಹಾಯ ಮಾಡಿತು. ಬರುತ್ತಿದ್ದಾನೆ ಅದಿತಿ ನಿನ್ನ ರಾಜ್, ನಿನ್ನನ್ನು ಭೇಟಿ ಮಾಡಲು.


ಅದಿತಿ , ನಿನಗೆ ಪ್ರಾಮಿಸ್ ಮಾಡಿದಂತೆ, ನಿನ್ನ ಕೊನೆಯಾಸೆಯನ್ನು ಪೂರ್ತಿಗೊಳಿಸಿದ್ದೇನೆ. 


Rate this content
Log in

Similar kannada story from Romance