ಕಾಡಿದ ಕಷ್ಟ
ಕಾಡಿದ ಕಷ್ಟ
ಬಹಳ ಜನಕ್ಕೆ ಗೊತ್ತಿಲ್ಲದ ಒಂದು ವಿಷಯ. ಕೊಡುಗೈ ದಾನಿ , ಕೇಳಿದವರಿಗೆ ಇಲ್ಲಾ ಅನ್ನದ , ಕೊಟ್ಟಿದ್ದು ಮತ್ತೊಬ್ಬರ ಹತ್ತಿರ ಹೇಳಿಕೊಳ್ಳದ , ಏನು ಕೊಟ್ಟರೂ ಅದರ ಕೆಳಗೆ ತಮ್ಮ ಹೆಸರಾಗಲಿ ವಿಳಾಸ ವಾಗಲಿ ಬರೆಸದ , ಒಬ್ಬ ಪ್ರಖ್ಯಾತ ದಕ್ಷಿಣ ಭಾರತದ ಮನ ಮನೆಗೂ ತಮ್ಮ ಸುಶ್ರಾವ್ಯ ಸಂಗೀತದ ಅಲೆ ಹರಿಸಿ ನಾಲ್ಕು ಸಿನಿಮಾಗಳಲ್ಲೂ ನಟಿಸಿ ಅಪಾರ ಹಣ ಹೆಸರು ಗಳಿಸಿ ಸಂಗೀತ ಶಾರದೆಯಂತೆ ಶಾರೀರ ಶರೀರ ಗಳೆರಡರಿಂದಲೂ ಅಪಾರ ಜನರನನ್ನ ಆಕರ್ಷಿಸಿದ ಭಾರತರತ್ನ ದಂತಹ ಅತ್ಯುತ್ತಮ ಬಿರುದು ಪಡೆದು.
ದೇಶ ವಿದೇಶಗಳನ್ನ ಹಲವಾರು ಬಾರಿ ಸುತ್ತಿ ಭಾರತದ ರಾಯಭಾರಿಯಾಗಿ ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಅವರಿಗೂ ಆ ಕಾಲದಲ್ಲಿ ಬಹಳ ಆಪ್ತರಾಗಿದ್ದು ಸಂಗೀತ ಶಿಖರದ ಉತ್ತುಂಗಕ್ಕೆ ಏರಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ್ದವರ ಕಷ್ಟ ಕಾಲದ ಬಗ್ಗೆ ಹೆಚ್ಚು ಜನಕ್ಕೆ ತಿಳಿದಿರಲಾರದು.ಆಗಿನ ಮದರಾಸಿನಲ್ಲಿ ನೆಲೆಸಿದ್ದಾಗ ಯಾವುದೋ ಕಾರಣಕ್ಕೆ ತಮ್ಮ ಆಸ್ತಿ ಹಣ ಎಲ್ಲ ಕೈ ಬಿಟ್ಟು ಹೋಗಿ ಕೆಲ ಕಾಲ ಮನೆಯಿಂದ ಹೊರ ಬರಲಿಲ್ಲ . ಕಚೇರಿಗಳನ್ನ ಒಪ್ಪಿಕೊಳ್ಳುವ ಮನಸ್ಸು ಸಹಾ ಇರಲಿಲ್ಲ . ಈ ವಿಷಯ ಹೇಗೋ ಕಂಚಿ ಕಾಮಕೋಟಿ ಪೀಠದ ಅಂದಿನ ಸ್ವಾಮಿಗಳಿಗೆ ಮುಟ್ಟಿತು.ಅದೇ ಸಮಯಕ್ಕೆ ಪುಟ್ಟಪುರ್ತಿ ಸಾಯಿಬಾಬಾ ರವರಿಗೂ ವಿಷಯ ತಿಳಿಯಿತು.ಆದರೆ ಇವರಿಬ್ಬರಿಗೂ ಈ ಸಂಗೀತ ಶಾರದೆಯ ಗುಣ ಚೆನ್ನಾಗಿ ತಿಳಿದಿತ್ತು. ಯ
ಾರಿಂದಲೂ ಸಹಾಯ ಬೇಡುವುದಾಗಲಿ ಕೊಟ್ಟರೆ ತೆಗೆದುಕೊಳ್ಳುವುದಾಗಲಿ ಅಸಾಧ್ಯವೆಂದು ತಿಳಿದರೂ ಇಂತಹ ಕಷ್ಟ ಕಾಲದಲ್ಲಿ ಹೇಗಾದರೂ ಸಹಾಯ ಮಾಡಲೇ ಬೇಕೆಂಬ ನಿರ್ಧಾರಕ್ಕೆ ಬಂದು , ಕಂಚಿ ಸ್ವಾಮಿಗಳು ಆಗಿನ ತಿರುಪತಿ ದೇವಸ್ಥಾನದ ಮುಖ್ಯಸ್ಥರಾಗಿದ್ದ KSV ಪ್ರಸಾದ್ಅವರಿಗೆ ಟೆಲಿಗ್ರಾಂ ಕಳುಹಿಸಿದರು. ತಕ್ಷಣ special ಮೀಟಿಂಗ್ ಕರೆದು ವಿಷಯ ಪ್ರಸ್ತಾಪಿಸಿದರು. ಆದರೆ ಅಲ್ಲಿನ ಕಾನೂನಿನಂತೆ ಸಂಸ್ಥೆಗಳಿಗೆ ಹಣ ಸಹಾಯ ಮಾಡಬಹುದು ಆದರೆ ಒಬ್ಬ ವ್ಯಕ್ತಿಗೆ ಮಾಡಲು ಅವಕಾಶವಿಲ್ಲ ವೆಂದು ಕೈ ಚೆಲ್ಲಿದರು .
ಪ್ರಸಾದ್ ಅವರು ಸ್ವಾಮಿ ಶ್ರೀನಿವಾಸನ ಮುಂದೆ ನಿಂತು ಏನಾದರೂ ದಾರಿ ತೋರಿಸೆಂದು ಬೇಡಿಕೊಂಡು ಆಚೆ ಬರುವಾಗ ಇವರು ಎಂದೂ ಕೇಳಿಲ್ಲದ ಒಂದು ಹಾಡನ್ನ ಯಾರೋ ಹೊರಗಡೆ ಹಾಡುತ್ತಿದ್ದುದನ್ನ ಕಂಡು ವಿಚಾರಿಸಲು ಅದು ಪ್ರಖ್ಯಾತ ಅಣ್ಣಮಾಚಾರ್ಯ ರ ಕೀರ್ತನೆ ಎಂದಾಗ ತಕ್ಷಣ ಇವರಿಗೆ ಹೊಳೆದದ್ದು ಅದನ್ನ ಈ ಗಾಯಕಿಯಿಂದ ಹಾಡಿಸಿ ಹಣ ಸಹಾಯ ಮಾಡಬಹುದೆಂದು. ನಂತರ ಮನೆಗೆ ಹೋಗಿ ಒಪ್ಪಿಸಿ ಅನೇಕ ಸಿಡಿ ಕ್ಯಾಸೆಟ್ ಗಳನ್ನ ಹೊರ ತಂದರು. ಅದರ ಲಾಭದ ಅರ್ಧ ಪಾಲು ಗಾಯಕಿಗೆ ಅಂತ ಕರಾರು ಆಗಿದ್ದರಿಂದ ಅಪಾರ ಹಣ ಹೆಸರು ಮತ್ತೆ ಉತ್ತುಂಗಕ್ಕೆ .
ನಾನು ಇದುವರೆಗೂ ಹೇಳದೆ ಮುಚ್ಚಿಟ್ಟಿದ್ದ ಹೆಸರು Dr M S ಸುಬ್ಬುಲಕ್ಷ್ಮಿ ಅಲ್ಲದೆ ಇನ್ಯಾರು ಇರಲು ಸಾಧ್ಯ ಹೇಳಿ.