Shridevi Patil

Romance Inspirational Others

4  

Shridevi Patil

Romance Inspirational Others

ಜೊತೆಜೊತೆಯಲಿ ಪ್ರೀತಿ ಜೊತೆಯಲಿ

ಜೊತೆಜೊತೆಯಲಿ ಪ್ರೀತಿ ಜೊತೆಯಲಿ

2 mins
382


ಹೌದು ನಾನು ಅಂದು ನೀನು ಹೇಳಿದ ಆ ಮಾತಿಗೆ ಒಪ್ಪಿಗೆ ಕೊಟ್ಟು ತುಂಬಾ ಒಳ್ಳೆಯ ಕೆಲಸ ಮಾಡಿದೆ ಅಂತ ಅನಿಸುತ್ತೆ , ಅಪ್ಪನ ವಿರೋಧ ಕಟ್ಟಿಕೊಂಡರೂ ಪರವಾಗಿಲ್ಲ ಶೇಖರ್, ನನ್ನ ಆಯ್ಕೆ ನಿಜವಾಗಿಯೂ ಸರಿಯಾಗಿತ್ತು. ಇಲ್ಲಿ ನನ್ನ ಆಯ್ಕೆ ಎಂದು ಹೇಳುವುದಕ್ಕಿಂತ ನಿನ್ನ ಆಯ್ಕೆಯ ದಾರಿ ಉತ್ತಮವಾಗಿತ್ತು ಅಂತ ಅನಿಸುತ್ತೆ. ಅದಕ್ಕಾಗಿಯೇ ನಾವಿಂದು ಇಷ್ಟೊಂದು ಖುಷಿಯಾಗಿ , ಜೊತೆ ಜೊತೆಯಲಿ ನಮ್ಮ ಈ ಪ್ರೀತಿ ಜೊತೆಯಲಿ ಆರಾಮಾಗಿ , ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ ಅಲ್ವಾ ಶೇಖರ್ ಎನ್ನುತ್ತಾ ಪ್ರೇಮಾ ತನ್ನ ಮಾತಿಗೆ ಪೂರ್ಣ ವಿರಾಮ ಇಟ್ಟು ಗಂಡನ ಪ್ರತಿಕ್ರಿಯೆಗಾಗಿ ಗಂಡನ ಮುಖವನ್ನೇ ನೋಡತೊಡಗಿದಳು.


ಶೇಖರ್ :- ಹೌದು ಪ್ರೇಮಾ , ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನಾನು ಫೋನು ಮಾಡಿದ್ದು , ಮೊದಲು ನಿನ್ನಪ್ಪ ಕಾಲ್ ರಿಸೀವ್ ಮಾಡಿದ್ದು , ನಾನು ಮಾತಾಡದೇ ಫೋನು ಕಟ್ ಮಾಡಿದ್ದು , ನಿನ್ನಪ್ಪನಿಗೆ ಸಂದೇಹ ಬಂದು ನಿನ್ನನ್ನು ನೂರೆಂಟು ಪ್ರಶ್ನೆ ಮಾಡಿದ್ದು, ಸ್ವಲ್ಪ ನಿನ್ನೊಂದಿಗೆ ಕಠೋರವಾಗಿ ನಡೆದುಕೊಂಡಿದ್ದು ಎಲ್ಲವೂ ನೆನಪಿದೆ.


ಪ್ರೇಮಾ:- ನಾನು ನಿಮ್ಮನ್ನು ಪ್ರೀತಿಸುವ ವಿಷಯವನ್ನು ಆ ಕಡೆಮನಿ ರಾಮಕೃಷ್ಣ, ನನ್ನ ಅಪ್ಪನಿಗೆ ಯಾವಾಗ ಪಿನ್ನು ಚುಚ್ಚಿದ್ದನೋ ಏನೋ ಗೊತ್ತಿಲ್ಲ , ಅಪ್ಪ ಮಾತ್ರ ನನ್ನನ್ನು ಸಂದೇಹದಿಂದ ನೋಡುವುದಂತೂ ಶುರುವಾಗಿತ್ತು. ಸ್ವಲ್ಪ ಮನೆಗೆ ಲೇಟಾಗಿ ಹೋದರೂ ಸಹ ನೂರೆಂಟು ಪ್ರಶ್ನೆಗಳಿಗೆ ಉತ್ತರ ಕೊಡಬೇಕಿತ್ತು , ಸ್ವಲ್ಪ ದಿನಗಳ ನಂತರ ಮನೆಯಲ್ಲಿ ಲ್ಯಾಂಡ್ ಫೋನ್ ಅಷ್ಟೇ ಇದ್ದಿದ್ದರಿಂದ ಅಪ್ಪ ಅದಕ್ಕೂ ಕೀಲಿ ಜಡಿದರು.


ಶೇಖರ್:- ಹೌದು ಮತ್ತೆ , ನಾನು ಫೋನು ಮಾಡುವ ವಿಷಯ ಅವರಿಗೆ ತಿಳಿದಿತ್ತು. ಅದಕ್ಕಾಗಿ ನಿನಗೆ ಕಾವಲಿನ ಬೇಲಿ ನಿರ್ಮಿತವಾಗಿತ್ತು. ಈ ಮಧ್ಯ ಆ ನಿಮ್ಮ ಸೋದರಮಾವ ಜೈರಾಜನ ಕಾಟ ಬೇರೆ ಹೆಚ್ಚಾಗಿತ್ತು.


ಪ್ರೇಮಾ:- ಹೌದು ಶೇಖರ್, ನಾನಂತೂ ನಿನ್ನ ಪ್ರೇಮದ ಕರೆಗಾಗಿ ಕಾಯುತ್ತಿದ್ದೆ. ಮನೆಯಲ್ಲಿ ನನ್ನ ನಿಮ್ಮ ಪ್ರೀತಿಗೆ ವಿರೋಧ ಉಂಟಾದಾಗ ತುಂಬಾ ನೊಂದಿದ್ದೆ. ಆದರೆ , ಅವತ್ತು ನೀವು ತೆಗೆದುಕೊಂಡ ಆ ನಿರ್ಧಾರವೇ ನಾವಿಂದು ಜೊತೆ ಜೊತೆಯಲಿ ಖುಷಿಯಾಗಿರಲು ಕಾರಣ. ನೀವು ಒಂದು ಹೆಜ್ಜೆ ಮುಂದಿಟ್ಟಿದ್ದಕ್ಕೆ ತಾನೇ , ನಾನು ಕೂಡ ನನ್ನ ಮನೆಯವರನ್ನು ಬಿಟ್ಟು ನಿಮ್ಮೊಂದಿಗೆ , ನಿಮ್ಮ ಮೇಲಿನ ಪ್ರೀತಿಗಾಗಿ, ನಂಬಿಕೆಯಿಂದ ಇಲ್ಲಿ ಬಂದೆ. ಆದರೆ ಅವತ್ತು ನಾನು ಮನೆಬಿಟ್ಟು ಬಂದರೂ ಪರವಾಗಿಲ್ಲ , ನಿಮ್ಮ ಪ್ರೀತಿ ಕಾಳಜಿಯಲ್ಲಿ ನಾನು ನಿಜವಾಗಿಯೂ ಖುಷಿಯಾಗಿದ್ದೇನೆ.


ನೀವು ಅರೆಕ್ಷಣವೂ ನನ್ನೊಂದಿಗೆ ಜಗಳವಾಡಿಲ್ಲ. ನನ್ನ ಆರೋಗ್ಯ ಕೆಟ್ಟಾಗ ನೀವು ಕೊಡುವ ಆ ಪ್ರೀತಿ ತುಂಬಿದ ಒಂದೊಂದು ತುತ್ತು ಸಹ ನನ್ನಲ್ಲಿ ಹೊಸ ಚೈತನ್ಯ ಕೊಡುತ್ತಿತ್ತು. ನೀವು, ನನಗಾಗಿಯೇ ಆ ದೇವರು ನೀಡಿದ ಅದ್ಭುತ ವರವೇ ಆಗಿದ್ದೀರಿ. ಇಂತಹ ಪ್ರೀತಿಯಲ್ಲಿ ಮಿಂದ ನಾನೇ ಪುಣ್ಯವಂತಳು. ನಿಮಗೆ ಪಲ್ಲವಿ ಅನುಪಲ್ಲವಿ ಎಂಬ ಎಂಬ ಮುದ್ದಾದ ಎರಡು ಹೆಣ್ಣು ಮಕ್ಕಳನ್ನು ಕೊಟ್ಟು, ನಿಮ್ಮೊಂದಿಗೆ ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ಆರಾಮಾಗಿದ್ದೇನೆಂದು ಎಲ್ಲರೆದುರು ಬಹು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.


ಹೀಗೆ ಶೇಖರ್ ಮತ್ತು ಪ್ರೇಮಾ ತಮ್ಮ ಪ್ರೇಮ ವಿವಾಹದ ಕುರಿತು ಜೊತೆ ಜೊತೆಯಲ್ಲಿಯೇ ಕುಳಿತು , ಜೊತೆಜೊತೆಯಾಗಿ ತಾವು ಸಾಗಿ ಬಂದ ಒಂದು ದಶಕದ ಪ್ರೀತಿಯ ಪಯಣದ ಕುರಿತು ಮಾತಾಡುತ್ತ ಖುಷಿ ಪಡುತ್ತಿದ್ದರು.


Rate this content
Log in

Similar kannada story from Romance