kaveri p u

Horror Others Children

4  

kaveri p u

Horror Others Children

ಜಾಗ

ಜಾಗ

1 min
518


ಜಾಗ 


ಶಮಾ, ಸುಮಾ ಶಾಲೆಯಿಂದ ಪ್ರವಾಸಕ್ಕೆoದು ತೆರಳಿದ್ದರು. ಅವಘಡವಾಗಿ ಸುಮಾ ಕಣ್ಮರೆಯಾಗಿದ್ದಳು. ಅವಳ ಹೆತ್ತವರು ಶಾಲೆಯ ನಿರ್ಲಕ್ಷಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು.

ಎಲ್ಲೆಡೆಯು ಸುಮಾಳಿಗಾಗಿ ಹುಡುಕಾಡಿದ್ದಾಯ್ತು. ಅವಳ ಸುಳಿವೇ ಇಲ್ಲ. ಅವಳನ್ನು ಹುಡುಕದ ಜಾಗವಿರಲಿಲ್ಲ. ವಾರದ ಬಳಿಕವೂ ಅವಳ ಪತ್ತೆ ಫಲ ನೀಡಲಿಲ್ಲ. ಮಗಳನ್ನು ಜೀವಂತವಾಗಿ ನೋಡುವ ಆಸೆಯನ್ನು ಬಿಟ್ಟು ಅವಳ ಹೆತ್ತವರು ಕೊರಗುತ್ತಿದ್ದರು. ಹೀಗೆ ಹತ್ತು ದಿನಗಳ ಬಳಿಕ ಓಮ್ಮಿoದೊಮ್ಮೆಲೆ ಸುಮಾಳ ಪ್ರತ್ಯಕ್ಷವಾಯಿತು. ಅವಳ ವರ್ತನೆ ಬಹಳ ಬದಲಾಗಿತ್ತು. ಮಗಳು ಬಂದಿದ್ದೆ ಪುಣ್ಯವೆಂದು ಹೆತ್ತವರು ಅವಳ ಬದಲಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಎರಡು ಮೂರು ದಿನ ಮಗಳನ್ನು ಶಾಲೆಗೂ ಕಲಿಸದೇ, ಸುಮಾಳ ತಾಯಿ ಮಗಳ ಆರೈಕೆ ಮಾಡಿದಳು. ಕೊನೆಗೂ ಒಂದು ದಿನ ಶಾಲೆಗೆ ತಯಾರಾದ ಸುಮಾ ಅಮ್ಮನೊಡನೆ ಶಾಲೆಗೆಂದು ಹೊರಟು ತಲುಪಿದ ಸ್ಥಳವೇ ಬೇರೆಯಾಗಿತ್ತು! ಅದೊಂದು ಕಟ್ಟಡ ಪಾಳು ಬಿದ್ದ ಜಾಗ. ಸುತ್ತ ಮುತ್ತ ಒಂದು ಹುಳುವಿನ ಸದ್ದೂ ಇರಲಿಲ್ಲ. ನೀರವ ಮೌನವೇ ಜೋರಿತ್ತು. ಸುಮಾಳ ತಾಯಿ ಭಯಗೊಂಡಿದ್ದರೆ, ಸುಮಾ ನಗುತ್ತಿದ್ದಳು. ಅಲ್ಲೊಬ್ಬ ಮಂತ್ರವಾದಿ ಸುಮಾಳೇಡೆ ನೋಡುತ್ತ ಭಲೇ ಎನ್ನುತ್ತಿದ್ದ. ಆಗ ಸುಮಾಳ ತಾಯಿಗೆ ತಿಳಿಯಿತು. ಸುಮಾ ಕಣ್ಮರೆಯಾಗಿದ್ದಾಗ ಈ ಜಾಗದಲ್ಲೇ ಇದ್ದಳು, ಈ ಮಂತ್ರವಾದಿ ತನ್ನ ಮಗಳನ್ನು ವಶೀಕರಣ ಮಾಡಿರುವನೆಂದು! ತನ್ನ ಬಳಿಯಿದ್ದ ಶಿವನ ರುದ್ರಾಕ್ಷಿ ಮಾಲೆಯ ಒಂದು ಮಣಿಯನ್ನು ಮಂತ್ರವಾದಿಯ ಮೇಲೆ ಚೆಲ್ಲುತ್ತಲೇ ಅವನು ಅದರಿಂದ ಸುಟ್ಟವನಂತೆ ಓಡತೊಡಗಿದ. ಇನ್ನೊಂದು ಮಣಿಯನ್ನು ಮಗಳ ಮೇಲೆ ಇಡುತ್ತಲೇ ಮಗಳು ಪ್ರಜ್ಞೆ ತಪ್ಪಿದಳು. ಮಗಳನ್ನು ಮನೆಗೆ ಕರೆದುಕೊಂಡು ಬಂದು ಗಂಡನಿಗೆ ನಡೆದ ಕಥೆಯನ್ನೆಲ್ಲ ಹೇಳಿದಳು ಸುಮಾಳ ತಾಯಿ. ಮನೆಯವರೆಲ್ಲ ಸುಮಾಳ ಪ್ರಜ್ಞೆ ಬರುವಿಕೆಗೆ ಕಾದರು.


ಸಂಜೆಗೆ ಸುಮಾ ಸರಿಯಾಗಿದ್ದಳು. ತಾನು ಬೀಚಿನಲ್ಲಿ ಆಡುತ್ತಿರುವಾಗ ತನ್ನನ್ನು ಯಾರೋ ಕರೆದಂತಾಗಿ ತಾನು ಅವರನ್ನು ಹಿಂಬಾಲಿಸಿ ಆ ಜಾಗಕ್ಕೆ ಹೋದದ್ದಾಗಿ ಸುಮಾ ಒಪ್ಪಿಕೊಂಡಳು. ಯಾರೇ ಅಪರಿಚಿತರು ಕರೆದರೂ ಹೋಗದಂತೆ ಸುಮಾಳ ಹೆತ್ತವರು ಸುಮಾಳಿಗೆ ಬುದ್ಧಿ ಹೇಳಿದರು.


Rate this content
Log in

Similar kannada story from Horror