STORYMIRROR

JAISHREE HALLUR

Abstract Drama Action

4  

JAISHREE HALLUR

Abstract Drama Action

***ಹುಟ್ಟಿದಾರಭ್ಯ***

***ಹುಟ್ಟಿದಾರಭ್ಯ***

1 min
307

 

ಹುಟ್ಟುವ ಮೊದಲು ಕಣ್ಣುಗಳು ಮುಚ್ಚಿರುತ್ತವೆ.


 ಯಾಕೆಂದರೆ, ಸುತ್ತಲೂ ಕತ್ತಲು ಮತ್ತು ಬೆತ್ತಲು.


ಭುವಿಯಿಂದ ಹೊರಡುವಾಗಲೂ ಕಣ್ಣುಗಳು ಮುಚ್ಚಿರುತ್ತವೆ. 


ಯಾಕೆಂದರೆ , ಆಗಲೂ ಗೋರಿಗಿಳಿಸಿದಾಗ, ಸುತ್ತಲೂ ಕತ್ತಲು ಮತ್ತು ಬೆತ್ತಲು.


ನಡುವೆ ಕಳೆವ ಈ ಮೂರು ದಿನಗಳ ಗಳಿಗೆಯಲ್ಲೂ ಯಾಕೆ ಕಣ್ಣುಗಳ ಮುಚ್ಚಬೇಕೆ?

 ಜ್ಞಾನವೆಂಬ ಒಳಗಣ್ಣ ತೆರೆದು ನೋಡು.


 ಮನುಜ ಸಂತತಿ ಸಂತೆಯಲಿ ಸತ್ತಂತಿದೆ.

 

ಜಾತಿಮತಗಳ ನಡುವೆ ವಿವಷವಾಗಿದೆ.

 

ಅನರ್ಹತೆಗಳನು ಗುರುತಿಸಲಾರದಷ್ಟು ಹೀನಮನಸ್ಥಿತಿ ತಲುಪಿದೆ. 


ಅಂಧಕಾರದ ಬೇಲಿಯೊಳಗೆ ಸಿಲುಕಿ ಒದ್ದಾಡಬೇಕೆ?  


ಒಂದು ಕ್ಷಣ ಸಾಕು. ಎಲ್ಲವನೂ ದಿಕ್ಕರಿಸಿ ಹೊರಬರಲು. 


ಹೇಳು , ನಿನಗೆ ಸಾಧ್ಯವೇ ಇದನ್ನು ನೇರವೇರಿಸಲು? 

ಇಲ್ಲವೆಂದಾದರೆ ಹೋಗಿಬಿಡು.

 

ನಿನಗೆ ಆ ಆರು ಮೂರರ ಗೋರಿಯೇ ಸಾಕು...ಬದುಕಿದ್ದೇನುಪಯೋಗ?...😣



Rate this content
Log in

Similar kannada story from Abstract