STORYMIRROR

nagavara murali

Tragedy Classics Others

2  

nagavara murali

Tragedy Classics Others

ಹಸಿವು

ಹಸಿವು

4 mins
92

ಲಾಕ್ ಡೌನ್ ಗೂ ಮೊದಲು ಅನೇಕ ಕುಟುಂಬಗಳು ಕೆಲಸ ಕ್ಕಾಗಿ ದೂರ ದೂರದಿಂದ ಬಂದಿತ್ತು ಬೆಂಗಳೂರು ನಗರದ ಒಂದು ದೊಡ್ಡ ಕಟ್ಟಡದ ನಿರ್ಮಾಣಕ್ಕಾಗಿ ತಾತ್ಕಾಲಿಕ ಶೆಡ್ ಗಳಲ್ಲಿ ಕೆಲವು ಕುಟುಂಬಗಳು ಇದ್ದವು. ಅದರಲ್ಲಿ ವೇಲು ಮೇಸ್ತ್ರಿ ಯ ಎರಡು ಕುಟುಂಬ. ಒಬ್ಬಳ ಹೆಸರು ಮಂಗಮ್ಮ ಇನ್ನೊಬ್ಬಳ ಹೆಸರು ಶಾಂತಿ.ಮಂಗಮ್ಮಳಿಗೆ ಐದು ವರ್ಷದ ಗಂಡು ಮಗು. ಹೆಸರು ಜೀವ. ತುಂಬಾ ತುಂಟ. ಮತ್ತು ಈಗ ಮತ್ತೊಂದರ ನಿರೀಕ್ಷೆಯಲ್ಲಿದ್ದಾಳೆ. ಶಾಂತಿಗೆ ಮಕ್ಕಳಿಲ್ಲ. ಇಬ್ಬ ರದೂ ಅಕ್ಕಪಕ್ಕದ ಗುಡಿಸಲುಗಳು. ವೇಲು ಮೇಸ್ತ್ರಿಯದು ಲಾರಿಗಳಲ್ಲಿ ಹೋಗಿ ಕಟ್ಟಡದ ಸಾಮಾನುಗಳನ್ನು ತರುವ ಕೆಲಸ.


ಹಾಗಾಗಿ ವಾರ ಅಥವಾ ಹದಿನೈದು ದಿನಕ್ಕೆ ಒಂದು ಸಲ ಬರ್ತಾನೆ .ಬಂದರೆ ಹೆಚ್ಚಾಗಿ ಶಾಂತಿ ಮನೆಯಲ್ಲೇ ಇರ್ತಾನೆ. ವಾರಕ್ಕೆ ಮೂರು ಸಲ ಬರುವ ಸಿಮೆಂಟ್ ಬ್ಲಾಕ್ ಗಳನ್ನ ಲಾರಿಯಿಂದ ಇಳಿಸಿದರೆ ಹೆಚ್ಚುಕೂಲಿ. ಅದಕ್ಕೆ ಇವರಿಬ್ಬರೂ ಆ ಲಾರಿಗಾಗಿ ಕಾದಿರುತ್ತಾರೆ. ಅದೇ ಇವರಿಬ್ಬರ ಜೀವನಕ್ಕೆ ಆಧಾರ. ವೇಲು ಹೆಸರಿಗೆ ಮಾತ್ರ ಹಣದ ಸಹಾಯ ಇಲ್ಲ. ಅವನ ಸಂಪಾದನೆ ಕುಡಿತಕ್ಕೆ ಬೀಡಿ ,ಇಸ್ಪೀಟ್ ಗೆ. ಹಾಗೂ ಉಳಿದರೆ ಊರಿಗೆ ಕಳಿಸ್ತಾನೆ.


ಎರಡು ತಿಂಗಳಿಂದ ಗರ್ಭಿಣಿ ಮಂಗಮ್ಮನಿಗೆ ಕೆಲಸ ಮಾಡಲು ಆಗುತ್ತಿಲ್ಲ. ಕೈಲಿ ಕಾಸೂ ಇಲ್ಲ. ಶಾಂತಿಯನ್ನ ಕೇಳಿದರೆ ವೇಲೂನೇ ಕೇಳು ನನ್ನನ್ನು ಏಕೆ ಕೇಳ್ತಾ ಇದೀಯೆ ಅಂತ ಜಗಳಕ್ಕೆ ಬರ್ತಾಳೆ. ಇವಳಿಗೆ ಇನ್ನೊಂದು ಮಗು ಆಗೊ ವಿಷಯ ತಿಳಿದಾ ಗಿನಿಂ ದ ಶಾಂತಿಗೆ ಇವಳನ್ನ ಕಂಡರೆ ಆಗಲ್ಲ.


ಒಂದು ದಿನ ಶಾಂತಿ ಹೊರಗೆ ಹೋಗಿದ್ದಾಗ ಜೀವ ಮೆಲ್ಲನೆ ಶಾಂತಿ ಮನೆಗೆ ಹೋಗಿ ಅವಳು ಮಾಡಿ ಇಟ್ಟಿದ್ದ ಅನ್ನ ಸಾರು ತಿಂದು ಬಿಟ್ಟ. ಇವನು ಬಿಟ್ಟರೆ ಇನ್ಯಾರೂ ಬರಲ್ಲ ಅಂತ ಅವ ಳಿಗೆ ಚೆನ್ನಾಗಿ ಗೊತ್ತು. ಒಂದು ಕೋಲು ತಂದು ಮುಖ ಮೂತಿ ನೋಡದೆ ಹೊಡೆದು ಬಿಟ್ಲು. ಮಂಗಮ್ಮನಿಗೆ ಇದು ತಿಳಿದು ಕಳ್ಳತನ ಮಾಡ್ತೀಯ ಅಂತ ಇವಳೂ ಹೊಡೆಯಕ್ಕೆ ಹೋದಾಗ ಮಗೂಗೆ ಊಟಾ ಹಾಕಬೇಕಂತ ಗೊತ್ತಾಗಲ್ಲ ಹೊಡೆಯಕ್ಕೆ ಮಾತ್ರ ಗೊತ್ತು ಅಂತ ಅವಳ ಕೈಯಿಂದ ಕೋಲು ಕಿತ್ತುಕೊಂ ಡು ಮೋರಿಯಲ್ಲಿ ಬಿಸಾಡಿದಳು.ಜೀವ ಅಳ್ತಾ ನಿಂತಿದ್ದ. ಮಂಗಮ್ಮ ಕೈ ಹಿಡಿದು ಎಳೆದುಕೊಂಡು ಮುದ್ದಾಡಿ ಏಕೆ ಹೀಗೆ ಕಳ್ಳತನ ಮಾಡಿದ್ದು ಅಂತ ಗೊತ್ತು. ಹಸಿವು ನಿನಗೆ ಹಾಗೆ ಮಾಡಿಸಿದೆ.ನನಗೆ ಅರ್ಥ ಆಗತ್ತೆ.ಅವಳಿಗೆ ನನ್ನ ಮೇಲೆ ಕೋಪ.ಅದಕ್ಕೆ ನಿನ್ನ ಮೇಲೆ ಹೀಗೆ ತೀರಿಸ್ಕೋತಾಳೆ ಅಂತ ಬಿಕ್ಕಿ ಬಿಕ್ಕಿಅತ್ತಳು. ಬೇಡಮ್ಮ ನೀನು ಅಳಬೇಡ ಅಂತ ಅಮ್ಮನ ಕಣ್ಣು ಒರೆಸಿ ಟುರ್ ಅಂತ ಶಬ್ದ ಮಾಡ್ತಾ ಹಳೆಯ ಸೈಕಲ್ ಟೈರ್ ನ ಕಡ್ಡಿ ಯಲ್ಲಿ ಉರುಳಿ ಸುತ್ತಾ ಹೊರಗೆ ಓಡಿ ಹೋದ.


ಮಂಗಮ್ಮನಿಗೆ ಬೆಳಗ್ಗೆ ಯಿಂದ ಏನೋ ಒಂದು ತರ ಹೊಟ್ಟೆ ನೋವು .ಒಂದೊಂದು ಸಲ ಮಗು ಆಗಬಹುದೇ ಅದಕ್ಕೆ ಇಷ್ಟು ನೋವು ಇರಬಹುದೇ ಅಂದು ಕೊಂಡು ಇರಲಾರದು ನನ್ನ ಲೆಕ್ಕದಲ್ಲಿ ಇನ್ನೂ ಎಂಟು ತಿಂಗಳು. ಹೊಟ್ಟೆಗೆ ಏನೂ ತಿಂದೇ ಇಲ್ಲ. ಅದಕ್ಕೆ ಇರಬೇಕು ಅಂತ ಸಮಾಧಾನ ಮಾಡ್ಕೊಂ ಡ್ಳು. . ಏನೋ ಹೇಳಿಕೊಳ್ಳಕ್ಕೆ ಆಗದೆ

ಹೊಟ್ಟೆಯಲ್ಲಿ ಸಂಕಟ. ನೀರಾದರೂ ಕುಡಿಯೋಣ ಅಂತ ನೋಡಿದರೆ. ಯಾವ ಪಾತ್ರೆಯಲ್ಲೂ ಕುಡಿಯೋ ನೀರಿಲ್ಲ. ಸ್ವಲ್ಪ ದೂರ ಹೋದರೆ ಸೆಕ್ಯೂರಿಟಿ ಗಾರ್ಡ್ ಒಂದು ಬಿಂದಿಗೆ ನೀರು ಬಿಡ್ತಾನೆ.ಬೇರೆ ದಾರಿ ಇಲ್ಲದೇ ನಡೆದೇ ಹತ್ತು ಹೆಜ್ಜೆ ಹೋದಾಗ ಯಾರೋ ಇವಳನ್ನು ನೋಡಿ ನಾನು ತಂದು ಕೊಡ್ತೀನಿ ನಿನಗೆ ಆಗಲ್ಲ ಕೊಡು ಅಂತ ಬಿಂದಿಗೆ ತೊಗೊಂಡು ಹೋದರು ಎಷ್ಟು ಹೊತ್ತು ಆದರೂ ಬಂದಿಲ್ಲ. ಹಾಗೇ ಅಲ್ಲೇ ಮರದ ನೆರಳಲ್ಲಿ ಕೂತು ಕೊಂಡ್ಲು .ದೂರದಲ್ಲಿ ಜೀವ ಓಡಿ ಬರ್ತಾ ಇರೋದನ್ನ ನೋಡಿ ಇನ್ನೇನು ತರಳೆ ಕೆಲಸ ಮಾಡಿದ್ದಾನೋ ಅಂದುಕೊಳ್ಳೋ ಹೊತ್ತಿಗೆ ಅಮ್ಮ ಗಂಜಿ ಮಾಡ್ಕೊಂಡು ಕುಡೀಬೇಕಂತೆ ಅಕ್ಕಿ ಕೊಟ್ಟಿದಾಳೆ ಶಾಂತಿ ಅಕ್ಕ ಅಂದ. ಬೇಡ ಅನ್ನೋ ಹಾಗಿಲ್ಲ ‌.ತೊಗೋಳಕ್ಕೂ ಮನಸಾಗ್ತೀಲ್ಲ. ಆದರೆ ಹಸಿವು ತೊಗೋ ಅಂತ ಹೇಳ್ತಾ ಇದೆ. ಹೊಟ್ಟೆಯಲ್ಲಿ ಇರೋ ಇನ್ನೊಂದು ಜೀವಕ್ಕೆ ಸೋಲಲೇ ಬೇಕಾಯ್ತು.


ನೀರು ಹೊತ್ತು ಕೊಂಡು ಮನೇಗೆ ಬರೋವಾಗ ಯಾರೋ ಇಬ್ಬರು ಊಟ ಮಾಡ್ತಾ ಇರೋದನ್ನ ನೋಡಿ, ಗಂಜಿ ಮಾಡ್ಕೋಬೇಕು ಎರಡು ಬೆಂಕಿ ಕಡ್ಡಿ ಕೊಡಿ ಅಂದರೆ ಅವರು ಹೊಸ ಪೊಟ್ಟಣ ನೀನೇ ಇಟ್ಕೋ ಅಂತ ಕೊಟ್ಟು ಗಂಜಿಗೆ ಏನಿದೆ ಅಂತ ಕೇಳಿ ತೊಗೋ ಅಂತ ಉಪ್ಪಿನ ಕಾಯಿ ಪ್ಯಾಕೆಟ್ ನೂ ಕೊಟ್ಟರು. ಮೂರು ಕಲ್ಲು ಇಟ್ಟು ಅಲ್ಲೇ ಕೂಡಿಟ್ಟಿದ್ದ ಮರದ ತುಂಡುಗಳನ್ನ ಇಟ್ಟು ಉರಿಸೋದಕ್ಕೆ ಪ್ರಯತ್ನ ಮಾಡ್ತಾ ಇದಾಳೆ ಬಗ್ಗಿ ಊದಬೇಕು .ಹೊಟ್ಟೆ ದಪ್ಪ ಇರೋದ್ರಿಂದ ಆಗ್ತಿಲ್ಲ. ವೇಲೂಗೆ ಹಿಡಿ ಶಾಪ ಹಾಕಿದ್ಲು. ಅಷ್ಟು ಹೊತ್ತಿಗೆ ಜೀವ ಯಾವುದೋ ಗಲೀಜು ಪೇಪರ್ ತಂದು ಅದರಲ್ಲಿ ಹಾಕಿದ ತಕ್ಷಣ ಧಗ್ ಅಂತ ಉರಿಯಕ್ಕೆ ಶುರು ಆಯಿತು. ಪಾತ್ರೆ ಇಟ್ಟು ನೀರು ಹಾಕಿ ಅಕ್ಕಿ ಉಪ್ಪು ಹಾಕಿ. ಕುದೀತಾ ರೋವಾಗ್ಲೇ ಒಂದು ಉಪ್ಪಿನ ಕಾಯಿ ಚಪ್ಪರಿಸಿ ತಿಂದಳು .ಖಾಲಿ ಹೊಟ್ಟೆಯಲ್ಲಿ ತಿಂದ ತಪ್ಪಿಗೋ ಏನೋ ಹೊಟ್ಟೆಯಲ್ಲಿ ಉರಿ .ನೀರು ಕುಡಿದು ,ಜೀವ ಅಲ್ಲಿ ಅನ್ನ ತಿಂದಿದಾನೆ .ಅವನಿಗೆ ಕೊಡೋದು ಬೇಡ .ನಾನೇ ಎಲ್ಲಾ ಕುಡಿಯೋದು ಅಂತ ಮನಸಲ್ಲೇ ಅಂದು ಕೊಂಡು ಇನ್ನೋಂದು ಪಾತ್ರೆ ಲೋಟ ಬೇಕು ಮೇಲೆ ಏಳಕ್ಕೂ ಕಷ್ಟ ಆಗ್ತಿದೆ .ಜೀವಾ ಜೀವಾ ಅಂತ ಗಟ್ಟಿಯಾಗಿ ಕರೆದರೂ ಅವನು ಬರ್ಲಿಲ್ಲ. ತಾನೇ ಎದ್ದು ಒಳಗೆ ಹೋಗಿ ತಟ್ಟೆ ಲೋಟ ತಂದು ಇಲ್ಲಿ ನೋಡಿದ್ರೆ ಪಾತ್ರೆಯಲ್ಲಿ ಇದ್ದ ಗಂಜಿ ಪೂರ್ತಿಯಾಗಿ ನೆಲದ ಮೇಲೆ ಚೆಲ್ಲಿ ಹೋಗಿದೆ. ಅವನ ಟೈರ್ ಚಕ್ರ ಪಾತ್ರೆ ಪಕ್ಕದಲ್ಲಿ ಬಿದ್ದಿರೋದು ನೋಡಿ ಅವನದೇ ಕೆಲಸ ಅಂತ ತಿಳಿಯಿತು. ಒಂದು ಮಾತೂ ಬಾಯಿಂದ ಹೊರಡಲಿಲ್ಲ. ದೊಪ್ ಆಂತ ಅಲ್ಲೇ ಬಿದ್ದು ಬಿಟ್ಲು.ಹೆದರಿ ಅವಿತು ಕೊಂಡಿದ್ದ ಜೀವಾ ಅಮ್ಮ ಅಂತ ಓಡಿಬಂದ.ಅಮ್ಮ ಅಮ್ಮ ನಂದೇ ತಪ್ಪು ನನ್ನ ಗಾಡಿ ಜೋರಾಗಿ ಬಂದು ಬಿಡ್ತು .ಹಿಡಿದು ಕೊಳ್ಳಕ್ಕೆ ಆಗಲಿಲ್ಲ.ಗಂಜಿ ಪಾತ್ರೆಗೆ ಹೋಗಿ ಬಿದ್ದು ಬಿಡ್ತು ಅಂತ ಅಳ್ತಾ ಇದಾನೆ.


ಜನ ಸೇರಿ ದರು. ಹೇಗೋ ವಿಷಯ ಲಾರಿಯಿಂದ ಸಿಮೆಂಟ್ ಬ್ಲಾಕ್ ಗಳನ್ನು ಇಳಿಸ್ತಾ ಇದ್ದ ಶಾಂತಿಗೆ ತಿಳಿದು ಓಡಿ ಬಂದ್ಲು. ಪರಿಸ್ಥಿತಿ ಅರ್ಥ ವಾಯ್ತು.ಮಕ್ಕಳನ್ನ ಗಂಡಸರನ್ನ ದೂರ ಕಳಿಸಿ ನಾಲ್ಕೈದು ಹೆಂಗಸರ ಸಹಾಯ ತೊಗೊಂಡು ಸುತ್ತಲೂ ಸೀರೆಗಳನ್ನ ಕಟ್ಟಿ ತಾನೇ ಹೊರ ಬರಲು ಕಷ್ಟ ಪಡುತ್ತಿದ್ದ ಮಗುವನ್ನು ಹೊರಗೆ ಎಳೆದು. ಅಕ್ಕನ ಪ್ರಾಣ ಉಳಿಯಲಿ ಸಾಕು ಅಂತ ಅಲ್ಲಿದ್ದವರಿಗೆ ಹೇಳಿದಳು. ಹೌದೌದು .ಇವಳು ಇದ್ದರೆ ಹತ್ತು ಬೇಕಾದ್ರೂ ಹೆತ್ತಾಳು ಅಂದರು. 

ಅಷ್ಟು ಹೊತ್ತಿಗೆ ಯಾರೋ ಆಟೋ ತಂದರು.ಸುತ್ತಲೂ ಕಟ್ಟಿದ್ದ ಸೀರೇ ಬಿಚ್ಚಿ ನೋಡಿದರೆ ಮಗು ಬದುಕಿಲ್ಲ. ಹೋದರೆ ಹೋಗಲಿ ಮಂಗಮ್ಮ ನ್ನ ಆಟೋದಲ್ಲಿ ಹಾಕಿ ಅಂತ ಎತ್ತಕ್ಕೆ ನೊಡಿದರೆ ಅವಳೂ ಮಗುವಿನ ಜೊತೆ ಆಗಲೇ ಪ್ರಾಣ ಬಿಟ್ಟಿದಾಳೆ ಇವರಿಗೆ ಗೊತ್ತಾಗಿಲ್ಲ.


ಶಾಂತಿ ನಾನು ಪಾಪಿ ಅಕ್ಕ ನಿನಗೆ ಅಕ್ಕಿ ಕೊಡೋ ಬದಲು ಗಂಜಿ ಮಾಡಿ ಕೊಟ್ಟಿದ್ದರೆ ನೀನೂ ನಿನ್ನ ಮಗು ಇಬ್ಬರೂ ಉಳೀತಿದ್ರಿ .ಅಯ್ಯೋ ಅಂತ ಅವಳೊಬ್ಬಳೇ ತಲೆ ಚಚ್ಚಿ ಕೊಂಡು ಗಟ್ಟಿಯಾಗಿ ಅಳ್ತಾ ಇದಾಳೆ. ಎರಡು ಮೂರು ಗಂಟೆ ಆದ ಮೇಲೆ ಇನ್ನೊಂದು ಆಟೋದಲ್ಲಿ ಮಂಗಮ್ಮ ನ ಬಾಡಿಯನ್ನ ತೊಗೂಂಡು ಹೋದರು. ಶಾಂತಿ ಗೆ ತಕ್ಷಣ ಜೀವಾ ನೆನಪಾಗಿ ಎಲ್ಲಾ ಕಡೆ ಹಡುಕಿ ಎಲ್ಲರನ್ನೂ ಕೇಳಿದಳು. ಯಾರಿಗೂ ಅವನು ಎಲ್ಲಿ ಹೋದ ಅಂತ ಗೊತ್ತಿಲ್ಲ. ಒಬ್ಬರು ಹೇಳಿದರು ಬೇಡ ಅಂದರೂ ಆಟೋ ಹಿಂದೆ ಬಹಳ ದೂರ ಅಮ್ಮ ಅಮ್ಮ ಅಂತ ಓಡಿಬಂದ. 


ಆಮೇಲೆ ಎಲ್ಲಿ ಹೋದನೋ ಗೊತ್ತಿಲ್ಲ. ಇಷ್ಟೊಂದು ಜನ ಸೇರಿದ್ದು ನೋಡಿ ಸೈಕಲ್ ನಲ್ಲಿ ಬಂದವನು ಒಬ್ಬ ಏನು ಅಂತ ಕೇಳಿ ಅಲ್ಲೊಬ್ಬ ಹುಡುಗ ಸೆಕ್ಯೂರಿಟಿ ಹತ್ತಿರ ಅಳ್ತಾ ಕೂತಿದಾನೆ ಅವನೇನಾ ನೋಡಿ ಅಂದಾಗ ಶಾಂತಿ ಓಡಿಹೋಗಿ ನೋಡಿ ದರೆ ಅವನೇ .ಸಮಾಧಾನ ಮಾಡಿ ಕರೆದು ಕೊಂಡು ಬಂದು ನಾನೂ ನಿನ್ನ ಅಮ್ಮನೇ .ಆ ಅಮ್ಮ ಬರೋವರೆಗೂ ನಮ್ಮ ಮನೇಲೇ ಇರಬೇಕು. ಇನ್ನು ನೀನು ಕಳ್ಳತನ ಮಾಡೋ ಹಾಗೇ ಇಲ್ಲ ಏನು ಬೇಕಾದರೂ ನನ್ನ ಕೇಳದೆ ತಿನ್ನಬಹುದು ಅಂದರೆ ಇಲ್ಲ ನೀನು ಹೊಡೀತಿ ನನಗೆ ಗೊತ್ತು ಅಂದ.ಹತ್ತಿರಕ್ಕೆ ಎಳೆದು ಕೊಂಡು ಇಲ್ಲ ಇನ್ನು ಎಂದೂ ಹೊಡಿಯಲ್ಲ ಬಾ ಊಟ ಮಾಡು ಅಂತ ಒಳಗೆ ಕರೆದು ಕೊಂಡು ಹೋದಳು. ಅಮ್ಮನ ನೆನಪು ಕ್ರಮೇಣ ಕಡಿಮೆ ಆಗಿ ಶಾಂತಿ ಅಮ್ಮನ ಸ್ಥಾನ ಪಡೆದ ಳು.



Rate this content
Log in

Similar kannada story from Tragedy