Turn the Page, Turn the Life | A Writer’s Battle for Survival | Help Her Win
Turn the Page, Turn the Life | A Writer’s Battle for Survival | Help Her Win

murali nath

Abstract Inspirational Others

3  

murali nath

Abstract Inspirational Others

ಹೊರಬಿದ್ದ ಭೂತ

ಹೊರಬಿದ್ದ ಭೂತ

1 min
30ನದಿ ತೀರದಲ್ಲಿ ಒಮ್ಮೆ ಒಬ್ಬರಾಜ ತಮ್ಮ ಮಂತ್ರಿ ಯೊಂದಿಗೆ ವಿಹಾರದಲ್ಲಿದ್ದಾಗ , ಅರ್ಧ ಹೂತು ಹೋಗಿದ್ದ ಸುಂದರವಾದ ಒಂದು ಬಾಟಲ್ ಇವರ ಕಾಲಿಗೆ ತಾಗಿ ಕುತೂಹಲದಿಂದ ನೋಡಿ ಕೈಗೆ ತೆಗೆದುಕೊಂಡ . ಇದನ್ನು ಗಮನಿಸಿದ ಮಂತ್ರಿ ತಡೆದು , ಬೇಡ ಸ್ವಾಮಿ ಅದನ್ನ ನೀವು ಮುಟ್ಟ ಬೇಡಿ, ನದಿಗೆ ಬಿಸಾಡಿ ಅಂದರೂ ಕೇಳದೆ ಮುಚ್ಚಳ ತೆಗೆದು ಬಿಟ್ಟ. ತಕ್ಷಣ ಅದರಿಂದ ಒಂದು ದೊಡ್ಡ ಭೂತ ಹೊರಬಂದು ನಮಸ್ಕಾರ ಮಾಡಿ ಧನ್ಯವಾದ , ನೀವಾದರೂ ನನ್ನನ್ನು ಬಿಡುಗಡೆ ಮಾಡಿದಿರಿ . ಇನ್ನೂ ಎಷ್ಟು ವರ್ಷಗಳು ಹೀಗೆ ಇದರಲ್ಲಿ ಇರಬೇಕೋ ಅಂತ ಹೆದರಿದ್ದೆ. ಬಂದವರೆಲ್ಲಾ ನೋಡಿ ಹೆದರಿ ನದಿಗೆ ಮತ್ತೆ ಬಿಸಾ ಡುತ್ತಿದ್ದರು. ನಿಮಗೆ ಏನು ಸಹಾಯ ಬೇಕಾದ್ರೂ ನನಗೆ ಹೇಳಿ . ನೀವು ಹೇಳಿದ್ದು ಮಾಡುವೆ ನನಗೆ ಆಗದೆ ಇರೋ ಕೆಲಸವೇ ಈ ಭೂಮಿಯಲ್ಲಿ ಇಲ್ಲ. ಇನ್ನು ಮುಂದೆ ನಿಮಗೆ ಹಣದ ಚಿಂತೆ ಇರಲ್ಲ.ಅಂದರೆ ನಿಮ್ಮ ಸರ್ಕಾರದಲ್ಲಿ ಹಣದ ಹೊಳೆ ಹರಿಯುತ್ತೆ ಅಂತ ಹೇಳಿ ನೀವು ನೆನೆದಾಗ ಬರುವೆ ಎಂದು ಹೇಳಿ ಅದೃಷ್ಯವಾಯ್ತು. ರಾಮರಾಜ್ಯ ದಂತೆ ಇದ್ದ ದೇಶದಲ್ಲಿ ಜನ ಹಣಕ್ಕಾಗಿ ಕೊಲೆ ಸುಲಿಗೆ ಮಾಡಲು ಮುಂದಾದರು ಆಡಳಿತ ಮಾಡುವ ಪ್ರಭುಗಳೇ ಲಂಚವಿಲ್ಲದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಜನರ ನೆಮ್ಮದಿ ಹಾಳಾಯ್ತು. ರಾಜವಂಶದ ಆಡಳಿತ ಮುಗಿದು ನಮ್ಮ ದೇಶ ಸ್ವತಂತ್ರವಾದರೂ ಇಂದಿಗೂ ಲಂಚ ಅನ್ನೋ ಭೂತವನ್ನು ಯಾರೂ ಮತ್ತೆ ಒಳಗೆ ಹಾಕಲಾಗದೆ ಹೊರಬಿಟ್ಟಿರುವುದಂತೂ ಸತ್ಯ. ಅದರ ಫಲವನ್ನು ನಾವು ನೀವು ಇಂದು ಅನುಭವಿಸುತ್ತಿದ್ದೇವೆ ಎನ್ನುವುದು ಮಾತ್ರ ಒಪ್ಪಲೇ ಬೇಕಾದ ಸತ್ಯವಲ್ಲವೇ.

   


Rate this content
Log in

More kannada story from murali nath

Similar kannada story from Abstract