Vijaya Bharathi

Abstract Action Others

3  

Vijaya Bharathi

Abstract Action Others

ಗ್ರಂಥಾಲಯ

ಗ್ರಂಥಾಲಯ

1 min
371


ನಾನ್ ಸ್ಟಾಪ್ ನವೆಂಬರ್ ಆವೃತ್ತಿ 3


ದಿನ : 26


ವಿಷಯ: ಪುಸ್ತಕ 


ಸಂಜಯ್ ಅಂದು ತನ್ನ ಆಫೀಸ್ ಗೆ ತುರ್ತಾಗಿ ಓಡಿದ. ಅವನೊಬ್ಬ ಗ್ರಂಥಾಲಯ ನಿರ್ವಾಹಕ (ಲೈಬ್ರೆರಿಯನ್). ವಿಶ್ವವಿದ್ಯಾಲಯದ ಗ್ರಂಥಾಲಯದ ಮುಖ್ಯಸ್ಥನಾಗಿದ್ದ ಸಂಜಯ್ ಗೆ ತುಂಬಾ ಜವಾಬ್ದಾರಿಗಳಿದ್ದವು. ಇಂದೂ ಸಹ ಹೊಸತಾಗಿ ವಿಜ್ಞಾನದ ಪುಸ್ತಕಗಳು ಗ್ರಂಥಾಲಯಕ್ಕೆ ಸೇರುತ್ತಿದ್ದವು. ಸಾವಿರಾರು ಕಾಪಿಗಳು ಬರುತ್ತಿದ್ದು, ಅದನ್ನು ಅವನು ಚೆಕ್ ಮಾಡಿಕೊಳ್ಳಬೇಕಾಗಿತ್ತು. 


ಹತ್ತು ಗಂಟೆಗೆಲ್ಲ ಆಫೀಸ್ ಗೆ ಬಂದ ಸಂಜಯ್ ಅಟೆಂಡನ್ಸ್ ಹಾಕಿ, ತನ್ನ ಸೀಟಿನಲ್ಲಿ ಕುಳಿತ. ಅರ್ಧ ಗಂಟೆಯ ನಂತರ ಪುಸ್ತಕಗಳ ಹತ್ತು ಕಾರ್ಟೋನ್ ಬಾಕ್ಸ್ ಗಳು ಬಂದವು. ಎಲ್ಲವನ್ನೂ ಚೆಕ್ ಮಾಡಿ ಇನ್ವಾಯ್ಸ್ ಗಳಿಗೆ ಸಹಿ ಮಾಡಿ ಕಳುಹಿಸಿದ. ಎಲ್ಲವನ್ನೂ ಖಾಲಿ ಬುಕ್ ಶೆಲ್ಫ್ಗೆ ಸೇರಿಸಿದ. ಅಂದೆಲ್ಲ ಅವನಿಗೆ ತುಂಬಾ ಕೆಲಸ. ಇನ್ನು ಈ ಪುಸ್ತಕಗಳನ್ನು ಕೆಲವು ಬ್ರಾಂಚ್ಗಳಿಗೆ ಕಳುಹಿಸ ಬೇಕು. 

ಮಾರನೇ ದಿನ ಆಫೀಸ್ ಗೆ ಬಂದ ಸಂಜಯ್, ನಿನ್ನೆ ಬಂದ ಸಾವಿರ ಪ್ರತಿಗಳನ್ನು ಕೆಲವು ಬ್ರಾಂಚ್ ಗಳಿಗೆ ಕಳುಹಿಸಿದ. ಹೀಗೆ ಕಳುಹಿಸಿದ ನಂತರ, ಅವನಿಗೆ ಎರಡು ಪುಸ್ತಕಗಳು ಮಿಸ್ಸಿಂಗ್ ಆಗಿದ್ದವು. ನಿನ್ನೆ ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದ್ದ ಅವನಿಗೆ ಇಂದೇಕೆ ಎರಡು ಪ್ರತಿಗಳು ಕಡಿಮೆಯಾಗಿವೆ ಎನ್ನುವುದು ಪ್ರಶ್ನೆಯಾಯಿತು. 

ಹತ್ತು ಸಾವಿರಗಳ ಮೌಲ್ಯದ ಆ ಎರಡು ಪುಸ್ತಕಗಳು ಸಿಗದಿದ್ದರೆ ಸಂಜಯ್ ಆ ಮೊತ್ತವನ್ನು ಜಮಾ ಮಾಡಬೇಕಾಗಿತ್ತು.ಎಲ್ಲಾ ಕಡೆ ಹುಡುಕಾಡಿದರೂ ಕಾಣಿಸಲಿಲ್ಲ. ಕಡೆಗೆ ಕಳೆದ ದಿನ ಒಂದು ಕಡೆ ಕಸದಂತೆ ಎಸೆದಿದ್ದ ಪುಸ್ತಕಗಳ ಕಾರ್ಟೂನ್ ಬಾಕ್ಸ್ಗಳನ್ನು ಮತ್ತೆ ಮತ್ತೆ ಚೆಕ್ ಮಾಡಿದರೂ ಪ್ರಯೋಜನವಾಗಲಿಲ್ಲ. 

ಸಂಜಯ್ ತಲೆ ಮೇಲೆ ಕೈಹೊತ್ತನು. ಎರಡು ಮೂರು ದಿನಗಳು ವಿಷಯವನ್ನು ಯಾರಿಗೂ ತಿಳಿಸದೆ, ಎಲ್ಲಾ ಕಡೆಯೂ ಹುಡುಕಾಡಿದಾಗ, ಯವುದೋ ಬೀರುವಿನ ಹಿಂದೆ ಈ ಎರಡು ಪುಸ್ತಕಗಳು ಕೆಳಗೆ ಬಿದ್ದುಹೋಗಿದ್ದವು. 


ಕಳೆದು ಹೋಗಿದ್ದ ಆ ಎರಡು ಪುಸ್ತಕಗಳು ಸಿಕ್ಕಿದಾಗ, ಸಂಜಯ್ ಗೆ ಸಮಾಧಾನವಾಯಿತು.



Rate this content
Log in

Similar kannada story from Abstract