ಗೊಂಬೆಯ ಮದುವೆ
ಗೊಂಬೆಯ ಮದುವೆ
ಅಂದು ರಾಜಿ ಬಿಕ್ಕಿ ಬಿಕ್ಕಿ ಅತ್ತರೂ ನನ್ನ ಮನಸ್ಸು ಕರಗಿರಲಿಲ್ಲ . ಕಳೆದ ಒಂದು ವರುಷದಿಂದ ನಮ್ಮ ಮನೆಯಲ್ಲಿ ಮನೆ ಮಂದಿ ತರಣೆ ಕೆಲಸ ಮಾಡುತ್ತಾ ಇದ್ದ ರಾಜಿ ಹತ್ತು ತಿಂಗಳಿನ ಟ್ವಿನ್ಕಲನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಾಗ ಮನೆ ಕೆಲಸ ಮಾಡಿ ಮಗುವಿನ ಹಾರೈಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಮಾಡಿಲ್ಲವೇ ?
ರಾವ್ ಅಂಕಲ್ ಮಗನ ಮದುವೆಯಂದು ಬಸ್ ಕೆಳಗೆ ಬಂದು ನಿಂತಿರುವುದಾಗಿ ತರಾತುರಿಯಿಂದ ಓಡಿ ಹೋಗಿದ್ದೆ ಬಂಗಾರದ ಡಬ್ಬಿಯಿಂದ ಕೇವಲ ನೆಕ್ಲೆಸ್ ಹಾಗೂ ನಾಲ್ಕು ಬಳೆಗಳನ್ನು ತೊಡುತ್ತಾ ಹೋದೆ. ಮಧ್ಯಾಹ್ನ ಬಂದು ನೋಡುತ್ತೇನೆ ಡಬ್ಬಿ ಖಾಲಿ !!
ಮಗು ಮಲಗಿತ್ತು ಅರವಿಂದ್ ಇನ್ನೂ ಆಫೀಸಿನಿಂದ ಬಂದಿರಲಿಲ್ಲ. ಹಾಗಾದರೆ ಬಂಗಾರ ಎಲ್ಲಿ ಹೋಯಿತು ರಾಜಿಯನ್ನು ಯಾವ ರೀತಿಯಿಂದ ಕೇಳಿದರೂ ಒಪ್ಪಲಿಲ್ಲ ಸಿಟ್ಟು ನೆತ್ತಿಗೇರಿ ಅವಳ ಮುಖ ನೋಡಲು ಮನಸ್ಸಿಲ್ಲದೆ ಮನೆಯಿಂದ ಹೊರಗೆ ಅಟ್ಟಿದೆ .
ಟ್ವಿನ್ಕಲಿಗೆ ಹಸಿವೆಯಾಗಿರಬೇಕೆಂದು ಅನ್ನ ಮಿಕ್ಸಿಗೆ ಹಾಕಿ ಉಣಿಸಲು ಅವಳ ಪಕ್ಕಕ್ಕೆ ಹೋದಾಗ ಕಂಡಿದ್ದೇನೆ . ಅವಳ ಗೊಂಬೆಗೆ ಡಬ್ಬಿಯಲ್ಲಿದ ಬಂಗಾರವನೆಲ್ಲಾ ತೊಡಿಸಿ, ಮಮ್ಮ ನನ್ನ ಗೊಂಬೆಯ ಮದುವೆಯೆಂದು ಖುಷಿಯಿಂದ ಕೇಕೇ ಹಾಕುತ್ತಿದ್ದಳು .