Hema Amin _Sachi Sachi

Drama

1  

Hema Amin _Sachi Sachi

Drama

ಹಾವೂ ಸತ್ತಿಲ್ಲ , ಕೋಲು ಮುರಿದಿಲ್ಲ .

ಹಾವೂ ಸತ್ತಿಲ್ಲ , ಕೋಲು ಮುರಿದಿಲ್ಲ .

1 min
110


ಬೆಳಗಿನ ಕಾಫಿಯ ಕೊನೆಯ ಗುಟುಕು ಇನ್ನೂ ನನ್ನ ಗಂಟಲಿಂದ ಕೆಳಗಿಳಿದಿರಲಿಲ್ಲ . ಎದುರು ಮನೆಯ ಮಂಜುಶ್ರಿ ಬಂದು, “ ಭಾವುಜಿ ಎದ್ದಿದ್ದಾರ ? ಎಂದು ಕೇಳಿದಳು. “ ಇನ್ನೂ ವರ್ಕ್ ಫ್ರಮ್ ಹೋಂ ಅಲ್ವಾ ? ಲಾಗಿನ್ ಮಾಡಿ ಹಾಗೇ ಮಲಗಿದ್ದಾರೆ ಕಣೆ . ಏನು ವಿಷಯ ಎಂದೇ , ಏನಿಲ್ಲ ನಿಮ್ಮ ಬೈಕ್ ಸ್ವಲ್ಪ ಅತ್ತ ಸರಿಸಿದರೆ ಭಾರ್ಗವಿಯ ಸೈಕಲನ್ನು ತಂದು ಇಲ್ಲಿ ಇಡ್ತೇವೆ . ಯಾಕೋ , ನೀನು ಹಿಂಬದಿಯಲ್ಲಿ ಗೋಡೆಗೆ ಆನಿಸಿಡ್ತಿದ್ದಿಯಲ್ವಾ ?


ಹ್ಮೂ ಕಣೇ .. ಮಧ್ಯಾಹ್ನ ಕುಸುಮ ಕಾಕಿ ಮದ್ದು ತಿಂದು ಮಲಗುವ ಹೊತ್ತು . . ಆಗಲೇ ಸಿಲ್ವಿಯಾ ತನ್ನ ಮಗುವನ್ನು ಸೈಕಲಿನ ಮೇಲೆ ಕೂರಿಸಿ ಗಂಟೆ ಬಾರಿಸುತ್ತಾ ಊಟ ಮಾಡಿಸುತ್ತಿದಳು . ನಿನ್ನೆ ಹೊರಗೆ ಜೋರು ಮಳೆ ಕಾಂಪೌಂಡಿನ ಒಳಗೆ ಇವರಿಬ್ಬರ ಜಗಳ . ನಿಮಿತ್ತ ಈ ಸೈಕಲು . ಎಂದು ತುಂಟ ನಗು ಬೀರಿ ಕಣ್ಣರಳಿಸಿದಳು .



Rate this content
Log in

Similar kannada story from Drama