Hema Amin _Sachi Sachi

Others

2  

Hema Amin _Sachi Sachi

Others

ಪ್ರಶ್ನೆ

ಪ್ರಶ್ನೆ

1 min
100


ಅಂದು ಮನೆ ಬಿಟ್ಟು ಹೋಗುವಾಗ ಮನಿಷಾ ಸುಮಕ್ಕಳ ಮುಖ ನೋಡಿದಳು. ಕಣ್ಣ ಬಟ್ಟಲಲ್ಲಿ ತುಂಬಿದ ನೀರು ಇನ್ನೇನು ಹೊರ ಚಿಮ್ಮಿತು ಎನ್ನುವಷ್ಟರಲ್ಲಿ ಸ್ತಿಲಾಚೆ ಕಾಲಿಟ್ಟು ಹಿಂದೆಯೂ ನೋಡದೆ ಹೊರಟು ಹೋಗಿದ್ದಳು.

ಕಳೆದ ಒಂದು ವರುಷದಿಂದ ಪನ್ವೇಲಿನ ಲೇಡಿಸ್ ಹಾಸ್ಟೆಲ್ ಒಂದರಲ್ಲಿ ತಿಂಗಳಿಗೆ ಎಂಟು ಸಾವಿರ ಕಟ್ಟಿದರೂ ವಾರಕ್ಕೆ ಎರಡೇ ಬಾರಿ ನಾನ್ ವೆಜ್ ಊಟ. ಸುಮಕ್ಕಳ ಮನೆಯಲ್ಲಿರುವಾಗ ಮಂಗಳವಾರ, ಶುಕ್ರವಾರ ಉಪವಾಸವೆಂದು ಶಾಖಹಾರಿ ಊಟ. ಬಿಟ್ಟರೆ ಮಿಕ್ಕಿದ್ದ ದಿನಗಳಲ್ಲಿ ಬಗೆ ಬಗೆಯ ನಾನ್ವೆಜ್ ಊಟ.


ಸ್ನಾನಕ್ಕೆ ಬಿಸಿ ನೀರು, ಲೇಟ್ ನೈಟ್ ಮೂವಿಸ್, ದಿನಾ ಕಡಕ್ ಇಸ್ತ್ರಿ, ಹಾಕಿ ಆಫೀಸಿಗೆ ಹೋಗುವಾಗ ತಿಂಡಿ, ಟಿಫನ್, ಜೊತೆಗೆ ರಾಶಿ ರಾಶಿ ಪ್ರೀತಿಯ ನೆನಪುಗಳು ಈಗ ಈ ಕೊರೋನಾ, ಲಾಕ್ಡೌನಲ್ಲಿ ಸರಿ ಕಟ್ಟಾದ ಊಟ ತಿಂಡಿ ಇಲ್ಲದೆ ಟೈಮ್ ಟೈಮಿಗೆ ಇಲೆಕ್ಟ್ರಿಸಿಟಿ ಕಡಿತದಲ್ಲಿ ನಿಂತು ಹೋದ ಅಫೀಸಿನ ಕೆಲಸಗಳು ಮನಿಷಾಳನ್ನು ಪ್ರಶ್ನಿಸಿದ ಪ್ರಶ್ನೆಗೆ ಉತ್ತರಕೊಡಲಾರದೇ ಶೂನ್ಯಲಾದಳು.


ಇಷ್ಟಕ್ಕೂ ಮನೆ ಬಿಡಬೇಕಾದ ಪ್ರಸಂಗ ಏನೆಂದು ಕೇಳಿದರೆ, " ಈ ಮನೆಯಲ್ಲಿ ಇರಬೇಕಾದರೆ ಸಮಯಕ್ಕೆ ಸರಿಯಾಗಿ ಮನೆಗೆ ಬರಲೇಬೇಕು "

ನಿಜವಾಗಿಯೂ ಈ ವಿಷಯ ಅರಗಿಸಿ ಕೊಳ್ಳದಷ್ಟು ಕಹಿಯಾಗಿತ್ತೇ.... ಮನಿಷಾಳ ಮೌನ ಅರ್ಥವಾಗದಷ್ಟು ಸಂಕಿರ್ಣವಾಗಿಯೂ ಇರಲಿಲ್ಲ.


Rate this content
Log in