Hema Amin _Sachi Sachi

Others

2  

Hema Amin _Sachi Sachi

Others

ಆಸರೆ

ಆಸರೆ

1 min
123


ಯೋಗೀತಳ ಮೊದಲನೆಯ ವಿವಾಹ ವಿಚ್ಛೇದನೆ ಹೊಂದಿ ಬರೋಬ್ಬರಿ ಹದಿನೈದು ವರುಷಗಳಾದವು .ಎಲ್ಲಾ ಎಜೆನ್ಸೀಸಿಸ್ಗಳಲ್ಲಿ ಮನೋಹರ್ ರಾಯರು ಮಗಳ ಹೆಸರು ದಾಖಲಿಸಿ ಅವರು ತೋರಿಸಿದ ಯಾವುದೇ ವರ ತಮಗೆ ಒಪ್ಪಿಗೆಯಾಗದೆ ಕೈ ಮುಗಿದು ಕೊನೆಗೆ ಇನ್ನೂ ನೀವು ವರ ಹುಡುಕುವುದು ಬೇಡ ಎಂದು ಹೇಳಿದಾಗ ದಿನಾ ಮನೆಯಲ್ಲಿ ನಡೆಯುವ ಅತ್ತಿಗೆ ನಾದಿನಿಯ ಜಗಳದಿಂದ ಮಂಜುಳಳ ಶಾಂತಿ ಕದಡಿತ್ತು . ಏನೇ ಆದರೂ ಸೋಲುದಿಲ್ಲ. ಮದುವೆ ಈ ಜನ್ಮದಲ್ಲಿ ಆಗುದಿಲ್ಲ ಎನ್ನುತ್ತಿದ್ದ ಯೋಗೀತ ನಿಲೇಶ್ ತಾನಾಗಿಯೇ ಬಂದು ಕೇಳಿದಾಗ ಒಪ್ಪಿಕೊಂಡಿದ್ದಳು .    


ನಿಲೇಶನ ಪತ್ನಿ ಕಲಾವತಿ ವೃತ್ತಿಯಲ್ಲಿ ನರ್ಸ್ . ಕೋರೋನದ ಎರಡನೇ ಅಲೆಯ ಭೀಕರ ಪರಿಸ್ಥಿತಿಯಲ್ಲಿ ತನ್ನ  ಎರಡು ವರುಷದ ಮಗುವನ್ನು ಮನೆಯಲ್ಲಿ ಬಿಟ್ಟು ಆಸ್ಪತ್ರೆಯಲ್ಲಿ ದುಡಿದು ತನ್ನ ಪ್ರಾಣ ಕಳೆದುಕೊಂಡಿದ್ದಳು .


ಆಸರೆ ಮಗುವಿಗೆ ತನ್ನದಾ ಅಲ್ಲಾ, ನನಗೆ ಮಗುವಿನದ್ದಾ ? ಯೋಗೀತ ಮುಗುಳು ನಕ್ಕಳು  . 


Rate this content
Log in