Hema Amin _Sachi Sachi

Drama

2  

Hema Amin _Sachi Sachi

Drama

ತಾಳ್ಮೆಯ ಆಯುಧ

ತಾಳ್ಮೆಯ ಆಯುಧ

1 min
100



 ಸುಹನಾ ಆ ಮನೆಗೆ ಸೊಸೆಯಾಗಿ ಬಂದು ಇಪ್ಪತ್ತು ವರುಷಗಳಾಗಿತ್ತು . ಅತ್ತೆ ಮತ್ತೆ ಸೊಸೆಯರ ಅನ್ಯೋನ್ಯತೆ ಕಂಡು ಗೆಳತಿಯಾಗಿದ್ದ ನನಗೂ ಎಲ್ಲೋ ಅಸೂಯೆ ಕಂಡಿದ್ದು ಸುಳ್ಳಲ್ಲ . ಅದೇ ಹಠಾತ್ತನೆ ಮನೋವ್ಯಾಧಿಯಿಂದ ಬಳಲುತ್ತಿರುವಾಗ ಅತ್ತೆ ಥೇಟ್ ಮಗಳಾದಳು. ತನ್ನ ಇಬ್ಬರು ಮಕ್ಕಳೊಂದಿಗೆ ಅತ್ತೆಯನ್ನು ಮಗಳಂತೆ ಪ್ರೀತಿಯಿಂದ ಪೋಷಿಸಿದಳು ಸುಹನಾ .


ದಿನವಿಡಿಯ ಶ್ರಮದಲ್ಲಿ ತಾಳ್ಮೆಯ ಆಯುಧವನ್ನು ಬಳಸಿದ್ದ ಸಂಸಾರದ ನೊಗವನ್ನು ಸಮಾಂತರ ರೇಷೆಯಲ್ಲಿ ಎಳೆಯುತ್ತಿದ್ದ ಸಹನ ಮೊನ್ನೆ ನನ್ನೆದುರು ಕಣ್ಣೀರು ಸುರಿಸಿದಾಗ ನನ್ನ ಎದೆ ದಸಕ್ಕೆ0ದಿತು .


ಅತ್ತೆಗೆ ಕೊಟ್ಟ ಬಿಸಿ ಸೂಪಿನಿಂದ ಅವಳ ನಾಲಗೆ ಸುಟ್ಟು ಹೋಯ್ತು . ಆದರೂ ಹೇಳಲಾರದಂತಹ ಅಸಹಾಯಕತೆ ಅವಳದ್ದು . ಆಗ ಅಲ್ಲಿಯೇ ಇದ್ದ ಯಾರಿಗೂ ಏನೂ ಗೊತ್ತಾಗಲಿಲ್ಲ . ಮರುದಿನ ತಿನ್ನಲು ನಿರಾಕರಿಸಿದಾಗ ವಿಷಯ ತಿಳಿಯಿತು ಸಿಟ್ಟಿನ ಭರದಲ್ಲಿ ಶಂಕರ್ ಮೂರ್ತಿ ಸೊಸೆಗೆ , ಏಕಾಗ್ರತೆಯಿಂದ ಕೆಲಸ ಮಾಡಿಲಿಕ್ಕಿಲ್ಲಾಂದ್ರೆ ಮನೆಯಿಂದ ತೊಲಗು ಎಂದರು.


Rate this content
Log in

Similar kannada story from Drama