JAISHREE HALLUR

Classics Inspirational Thriller

4  

JAISHREE HALLUR

Classics Inspirational Thriller

ದೀಪಗಳ ಹಬ್ಬ ದೀಪಾವಳಿ

ದೀಪಗಳ ಹಬ್ಬ ದೀಪಾವಳಿ

2 mins
428


ಗೆಳೆಯ ಗೆಳತಿಯರೆ,


ಬನ್ನಿ! ದೀಪಗಳ ಹಬ್ಬದ ತಯಾರಿಯೊಂದಿಗೆ ಸಂತಸವನ್ನೂ ಅನುಭವಿಸೋಣ.


ನಿಮಗೆಲ್ಲ ಗೊತ್ತಿರುವ ಹಾಗೆ, ರಾಮಾಯಣದಲ್ಲಿ, ರಾಮ, ಲಕ್ಷ್ಮಣ, ಸೀತೆಯರು ವನವಾಸ ಮುಗಿಸಿ, ಅರಮನೆಗೆ ತೆರಳುವ ಸಂದರ್ಭವನ್ನು ಅಯ್ಯೋಧ್ಯೆಯ ಪ್ರಜೆಗಳು, ಊರ ಹಬ್ಬವನ್ನು ಆಚರಿಸಿದರು.

ಊರ ತುಂಬಾ ಭವ್ಯ ಅಲಂಕಾರಗಳಿಂದ ಕೂಡಿದ ತಳಿರುತೋರಣಗಳು, ಹೂಗಳ ಅನಾವರಣ, ರಂಗುರಂಗಿನ ರಂಗೋಲಿಗಳು, ಹಸು, ಕರು, ಎತ್ತುಗಳಿಗೂ ಬಣ್ಣಬಣ್ಣದ ಚಿತ್ತಾರ ಎಳೆದು, ಮನೆಮನೆಗಳಿಗೂ ಹೊಸಬಣ್ಣಾಲಂಕಾರಗಳಿಂದ ಕಂಗೊಳಿಸುವಾಗ, ಎಷ್ಟು ಸುಂದರವಾದ ದೃಶ್ಯ ಕಾಣುತ್ತದೆ ಅಲ್ಲವೆ?


ಅಂತಹ ವಾತಾವರಣ ಇತ್ತೀಚೆಗೆ ಅತಿ ವಿರಳವಾಗಿ ಹೋಗಿದೆ.

ಹೊಸಬಟ್ಟೆ ತೊಟ್ಟು, ಸಿಹಿಯಡಿಗೆ ಮಾಡಿ, ಬಂದುಬಳಗವನ್ನು ಆಮಂತ್ರಿಸಿ ಒಟ್ಟಾಗಿ ದೀಪಾವಳಿಯ ಹಬ್ಬವನ್ನು ಆಚರಿಸುವುದೇ ಒಂದು ವಿಶಿಷ್ಟ ದಿನ.


ಹಲವು ಬಗೆಯ ಪಟಾಕಿಗಳನ್ನು ಖರೀದಿಸಿ, ದೀಪಗಳನ್ನು ಬೆಳಗಿಸಿ, ಅವುಗಳ ಮಧ್ಯೈ ನಕ್ಕು ನಲಿದಾಡುವ ಮಕ್ಕಳ ಸಂಭ್ರಮವನ್ನು ನೋಡಲು ಎರಡು ಕಣ್ಣುಗಳು ಸಾಲದು.


ಅಂದಿನ ದಿನಗಳು ನಮಗೆ ಬಹಳವೇ ಮುದತರುತ್ತಿದ್ದವು.

ಹಿರಿಯರ ಆಚರಣೆಗೆ, ಗೌರವ ಮನ್ನಣೆಯಿತ್ತು. ಕಿರಿಯರೆಲ್ಲ, ತಂದೆ ತಾಯಿಯರ ಆಶೀರ್ವಾದ ಪಡೆದು, ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸುವ ಆ ಪರಂಪರೆ ಈಗಲೂ ಕೆಲ ಮನೆಗಳಲ್ಲಿ ಕಾಣಸಿಗಬಹುದು.


ಆದರೆ, ಬಹುತೇಕ ಮನೆಗಳಲ್ಲಿ ಇದು ಅತಿವಿರಳವಾಗಿದೆ.

ಇಂದಿನ ಬದುಕಿನ ರೀತಿಗನುಗುಣವಾಗಿ, ಶೈಲಿ ಬದಲಾಗಿಹೋಗಿವೆ. ಸಮಯದ ಅಭಾವದಿಂದ, ಕೆಲಸದ ಒತ್ತಡದಿಂದಲೋ, ಜನ ಹಬ್ಬವನ್ನು ಆಚರಿಸುವುದನ್ನು ಕಡಿಮೆಮಾಡಿಕ್ಕೊಂಡಿದ್ದಾರೆ. ಅಂದಿನ ಉತ್ಸಾಹ, ಖುಷಿ ಈಗಿಲ್ಲ. ಮಕ್ಕಳಿಗಂತೂ ಯಾವುದರ ಬಗ್ಗೆಯೂ ಆಸಕ್ತಿಯ ಇಲ್ಲವಾಗಿದೆ. ಹಬ್ಬದ ವೈಶಿಷ್ಟ್ಯ ಅವರಿಗೆ ಗೊತ್ತೇ ಇಲ್ಲ. ಹೇಳಿದರೂ ಕೇಳುವ ವ್ಯವದಾನವಂತೂ ಇಲ್ಲವೇ ಇಲ್ಲ.


ನಮ್ಮ ಕಾಲಕ್ಕೆ ಇದನ್ನೆಲ್ಲ ನೋಡುವಂತಾಗಿದೆ. ಮುಂದೇನು ನೋಡುತ್ತೇವೆ ಕಾಣೆ.


ರಾಮ, ಲಕ್ಷ್ಮಣರು ಅಯ್ಯೋಧ್ಯೆಗೆ ಮರಳಿದಾಗ ಇಡೀ ನಾಡೇ ಸಂಭ್ರಮಿಸಿತ್ತು. ಮೂವರೂ ತಾಯಂದಿರು ಆರತಿಯೊಂದಿಗೆ ಬಾಗಿಲಲ್ಲಿ ಸ್ವಾಗಸಿಲು ಕಾದಿದ್ದರು.

ಭರತ ಶತೃಘ್ನರೂ ತಮ್ಮ ಪ್ರೀತಿಯ ಅಣ್ಣ ರಾಮನನ್ನು ಆಲಿಂಗಿಸಿ, ಓಲೈಸಲು ತುದಿಗಾಲಲ್ಲಿದ್ದರು.


ಇವರೆಲ್ಲರ ನಡುವೆ ದುಃಖದ ಮಡುವಿನಲ್ಲಿದ್ದವಳೆಂದರೆ ಊರ್ಮಿಳೆ ಮಾತ್ರ.

ಊರ್ಮಿಳೆ ಲಕ್ಷ್ಮಣ ಹೆಂಡತಿ.

ತನ್ನ ಪತಿ ಅಣ್ಣನ ಹಿಂದೆಯೇ ವನವಾಸಕ್ಕೆ ತೆರಳುವಾಗ,

ತಾನೂ ಹೋಗಲಣಿಯಾಗಿದ್ದಳು.

ಕಿರಿಯ ವಯಸ್ಸು, ಹೊಸದಾಗಿ ಮದುವೆಯಾಗಿ. ಗಂಡನನ್ನು ಬಿಟ್ಟಿರಲಾರದ ಮನಸ್ಸು.

ಆದರೆ, ಲಕ್ಷ್ಮಣನದೇ ಬೇರೆ ಇರಾದೆಯಿತ್ತು.


ತಾನು ಹೆಂಡತಿಯೊಡನೆ ಕಾಡಿಗೆ ನಡೆದರೆ, ಅಣ್ಣ ರಾಮನ, ಅತ್ತಿಗೆ ಸೀತೆಯರ ಆರೈಕೆಗೆಲ್ಲಿ ಅಡಚಣೆಯುಂಟಾಗುತ್ತದೋ ಎಂದರಿತು ತಾನೊಬ್ಬನೇ ಹೊರಡುವುದಾಗಿ ನಿರ್ಧರಿಸುತ್ತಾನೆ. ಮತ್ತು, ಮೂವರೂ ಅತ್ತೆಯಂದಿರನ್ನು ಕಾಪಾಡಿಕೊಳ್ಳುವುದು ಜವಾಬ್ಧಾರಿಯೂ ಊರ್ಮೀಳೆಯ ಮೇಲಿರುವಂತೆ ತಿಳಿಹೇಳಿ ಅವಳನ್ನು ಒಪ್ಪಿಸುತ್ತಾನೆ.

ಹೀಗಾಗಿ, ಅವಳು ಅಯೋಧ್ಯೈಯಲ್ಲಿಯೋ ಉಳಿದು, ಬರೀ ತಪಸ್ಸುಗಳಲ್ಲಿ ತನ್ನನ್ನು ತೊಡಿಸಿಕೊಂಡು, ಸನ್ನಾಸಿನಿಯಾಗುತ್ತಾಳೆ.

ಲಕ್ಷ್ಮಣ ಆಗಮನ ಅವಳಿಗೆ ಅಯೋಮಯವಾಗಿ ತೋರುತ್ತದೆ. ಹೇಗೆ ಎದುರುಗೊಳ್ಳಬೇಕೆಂಬ ಸಂದಿಗ್ಧ ಪರಿಸ್ಥಿತಿ ಅವಳದು.

ಅವಳು ಮನ ಬದಲಾಯಿಸುವ ಪ್ರಯತ್ನ ಮಾಡುವುದಿಲ್ಲ. ಅದೇ ಮನೋಭಾವ, ವೈರಾಗ್ಯ ಅವಳಲ್ಲಿ ಮನೆಮಾಡಿ, ನಿರ್ಲಿಪ್ತತೆ ಮೂಡುತ್ತದೆ.

ಹೀಗೇ ದೀಪಾವಳಿ ಹಬ್ಬದ ಸಡಗರದ ನಡುವೆ ಅವಳ ಮೌನವೂ ಕರಗಿಹೋಗುತ್ತದೆ.


ಜನರ ಆನಂದಮಯ ಸಮಾರಂಭದಲ್ಲಿ ಊರ್ಮೀಳೆಯ ನೋವು ಯಾರ ಗಮನಕ್ಕೂ ಬರುವುದಿಲ್ಲ.


ರಾಮನ ಪಟ್ಟಾಭಿಷೇಕವಾಗಿ, ಎಲ್ಲವೂ ಸುಸೂತ್ರವಾದ ನಂತರ ಲಕ್ಷ್ಮಣನ ಗಮನ ಊರ್ಮೀಳೆಯತ್ತ ಹರಿದಾಡುತ್ತದೆ. ಆಗ ಕಾಲ ಮಿಂಚಿತ್ತು. ಹೆಂಡತಿ ಕೈತಪ್ಪಿಹೋದ ಸಂಗತಿ ನೋವಿಗೀಡಾಗುತ್ತದೆ. ಹೆಣ್ಣಿನ ಮನಸ್ಸು ಒಮ್ಮೆ ಮುರಿದರೆ, ಅದನ್ನು ಸರಿಪಡಿಸುವುದು ಸುಲಭದ ಮಾತಲ್ಲ.


ಅಂತೂ, ವಿಷಯ ಎಲ್ಲೆಲ್ಲಿಗೋ ಹೋಯ್ತು ನೋಡಿ ಮಿತ್ರರೆ. 


ಬನ್ನಿ, ಮತ್ತೆ ಹಬ್ಬ ಆಚರಿಸೋಣ. ಎಂದಿನಂತೆ ಉತ್ಸಾಹಭರಿತರಾಗಿ, ಗೆಳೆಯಗೆಳತಿಯರೊಂದಿಗೆ ಸವಿ ಹಂಚಿಕೊಳ್ಳೋಣ.

ಈ ದೀಪಗಳ ಹಬ್ಬ ಎಲ್ಲರಿಗೂ ಸುಖ ಸಮೃದ್ಧಿಗಳನ್ನು ತರಲಿ. ದೇವರ ಅನುಗ್ರಹ ಸದಾ ನಿಮ್ಮೆಲ್ಲರ ಮೇಲಿರಲಿ ಎಂದು ಮನಪೂರ್ವಕವಾಗಿ ಹಾರೈಸುತ್ತೇನೆ.

ತಮ್ಮೆಲ್ಲರ ಹಾರೈಕೆ, ಅಭಿನಂದನೆ, ಶುಭಕಾಮನೆಗಳಿಗೆ ನನ್ನ ಅನಂತಾನಂತ ವಂದನೆಗಳು ಹಾಗೂ ಧನ್ಯವಾದಗಳು.

🎉



Rate this content
Log in

Similar kannada story from Classics