Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra
Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra

venu g

Thriller


4.4  

venu g

Thriller


ಹ್ಯಾಕರ್ ವಿಥ್ ಜೇಮ್ಸ್

ಹ್ಯಾಕರ್ ವಿಥ್ ಜೇಮ್ಸ್

25 mins 420 25 mins 420

ಬೆಂಗಳೂರು ಸಿಲಿಕಾನ್ ಸಿಟಿ,ಗಾರ್ಡನ್ ಸಿಟಿ,ಸಾಫ್ಟ್ವೇರ್ ಜಗತ್ತು ಎಂದೆಲ್ಲಾ ಹೆಸರು ಕರೆಸಿಕೊಳ್ಳುತ್ತೆ.

ಬಣ್ಣ ಬಣ್ಣದ ಬಟ್ಟೆಗಳು,ವೈವಿಧ್ಯಮಯ ತಿಂಡಿ ತಿನಿಸುಗಳು,ಇಂಪೊರ್ತೆಡ್ ಕಾರ್ಗಳೂ ಎಲ್ಲಾ ನೋಡಬಹುದು.

ಇಲ್ಲಿ ಸಾಹುಕಾರನು ಜೀವನ ಮಾಡ್ತಾನೆ,ಬಡವನು ಜೀವನ ಮಾಡ್ತಾನೆ.ಎಲ್ಲರಿಗೂ ಇಲ್ಲಿ ಜಾಗ ಮಾಡಕೊಟ್ಟಿದೆ ಈ ನಮ್ಮ ಬೆಂಗಳೂರು.ಇಲ್ಲಿ ತಲೆ ಓಡಿಸೊನಿನೂ ಬದುಕ್ಕ್ತಾನೆ,ತಲೆ ಹೊಡೆಯೊನೂ ರಾಜರೊಶ್ವಾಗಿ ಜೀವನ ಮಾಡ್ತಾನೆ.

ಪ್ರಸ್ತುತ ದಿನದಲ್ಲಿ ನಾವು ಡಿಜಿಟಲ್ ಕಾರಣದಲ್ಲಿ ಹೆಚ್ಚು ಹೆಚ್ಚು ಒಲವು ತೋರಿಸುತಿದ್ದೆವೆ. ಯಾವಾಗ ಅಪನಗದೀಕರಣ ಆಯ್ತೊ ಜನ ಜೊಬಲ್ಲಿ ದುಡ್ಡು ಇಡೊ ಬದಲು ಬ್ಯಾಂಕ್ ನಲ್ಲಿ ದುಡ್ಡು ಇಡೊಕ್ಕೆ ಶುರು ಮಾಡಿದ್ದಾರೆ. ಆದ್ರೆ ಇವೆಲ್ಲ ಎಷ್ಟು ಸೆಕ್ಯೂರ್ ಆಗಿದೆ ಅನ್ನೋದೇ ಒಂದು ದೊಡ್ಡ ತಲೆ ನೋವೂ ಆಗಿರೊದು. ಪ್ರತಿದಿನವೂ ಒಂದೆಲ್ಲಾ ಒಂದು ರೀತಿಯಲ್ಲಿ ಮೊಬೈಲ್ ಮೂಲಕ ಹಣಕಳೆದುಕೊಂಡ ವ್ಯಕ್ತಿಗಳ ಹವಾಲು ಜನ ನೀಡುತಿದ್ದಾರೆ. ನಮ್ಮ ಸೈಬರ್ ಸೆಕ್ಯೂರಿಟಿ ಟೀಮ್ ಕೂಡ ಎಷ್ಟೆ ಕೆಲಸ ಮಾಡಿದರು. ಅದ್ರೆ ಅವರಿಗೆಲ್ಲ ಅವರ ಹಣ ವಾಪಸ್ ಆಗಿದೀಯಾ ಅನ್ನೋದೇ ಒಂದು ಪ್ರಶ್ನಾರ್ಥಕ?

ಏನು ನೀವೂ ಕಥೆ ಬಗ್ಗೆ ಹೇಳ್ತಿಲ್ಲ ಬರಿ ಪೀಠಿಕೆನೇ ಜಾಸ್ತಿ ಆಯ್ತೂ ಅಂತೀರಾ ನಿಜ ನಾನು ಹೇಳಬೇಕು ಅನ್ನೊ ಕಥೆ ಕೂಡ ಈ ಮೇಲಿನ ವಿಷಯಕ್ಕೆ ಸಂಬಂಧ ಪಟ್ಟಿದೆ.

ಕಥೆ ಆರಂಭ ಆಗುತ್ತೇ ಓದಿ.....

ಬೆಳಗಿನ ಜಾವ ಬೆಂಗಳೂರು ನಿಶಬ್ಬವಾಗಿರುತ್ತೆ ಅಮೇಲೆ ಒಂದು 7ಗಂಟೆ ನಂತರ ನೋಡಿ ಎಲ್ಲಾ ವಾಹನಗಳು ರಸ್ತೆಯಲ್ಲಿ ಹಾವು ಎಣಿ ಆಟ ಆಡಲು ಶುರು ಮಾಡುತ್ತೇ.

ಕಾರ್ ನಾ ಅರ್ನ ಕೀ....ಕೀ.....ಕೀ..... ಬೈಕ್ ಸವಾರರು ರೋಡ್ ಜಾಮ್ ಆಗಿದೃ ಪಾದಚಾರಿಗಳ ಜಾಗವನ್ನು ಆಕ್ರಮಿಸಿಕೊಂಡು ಮುಂದೆ ಮುಂದೆ ಹಾಗೆ ಸಾಗುತ್ತ ಹೇಗೊ ಏನೋ ಸಿಗ್ನಲ್ ಬಳಿ ಬಂದು ತಲುಪಿ ಬಿಡುತ್ತಾರೆ. ಇನ್ನು ಕೆಲವರು ಗುರು....ಗುರು ಸ್ವಲ್ಪ ಜಾಗ ಬೀಡೂ ಗುರು ನಾನು ಲೆಫ್ಟ್ ಹೊಗಬೇಕು ಎಂದು ಹಾಗೆ ತಿರುಗಿಸಿ ಕೊಳ್ಳುತ್ತಾರೆ.

ಮತ್ತೆ ಮಾಜಾ ನೋಡಿ ಸಿಗ್ನಲ್ ಬಿಟ್ಟ ಮೇಲೆ ಕಾರ್ ಸ್ಟಾರ್ಟ್ ಆಗಿಲ್ಲ ಬೈಕ್ ಸ್ಟಾರ್ಟ್ ಆಗಿಲ್ಲ ಹಿಂದೆ ಇರುವ ವಾಹನ ಸವಾರರು ಕೈಲ್ಲಿಂದ ಸಹಸ್ರಾ ನಾಮನೇ. ಹೀಗೆ ಜನ ಫಾಸ್ಟ್ ಫುಡ್ ತಿನ್ನ್ಕೊಂಡು ಲೇಟ್ ನೈಟ್ ಪಾರ್ಟಿ ಮಾಡ್ಕೊಂಡು ಎಲ್ಲಿ ಕುಡಿರ್ತಾರೊ ಅಲ್ಲೆ ಬಿದ್ದು ಬೆಳಗ್ಗೆ ಎದ್ದು ಕಣ್ಣ ಕಣ್ಣ ಬಾಯಿ ಬೀತ್ತ್ಕೊಂಡು ನೊಡ್ತಿರ್ತಾರೇ.

ಇದರ ನಡುವೆ ನಮ್ಮ ಹುಡುಗ ಅಂದ್ರೆ ಕಥಾ ನಾಯಕ ಬೆಂಗಳೂರನಲ್ಲಿ ಜೀವನ ಮಾಡೋಣ ಅಂಥ ನಿರ್ಧಾರ ಮಾಡ್ಕೊಂಡು ಜೊಬಿನಲ್ಲಿ ಪುಡಿಗಾಸು ಇತ್ತ್ಕೊಂಡು ಬೆಂಗಳೂರ ಬಸ್ ಹತ್ಕೊಂಡು ಬರ್ತಾನೆ .

ಬೆಳಗ್ಗೆ 7 ಗಂಟೆ ಮೆಜೆಸ್ಟಿಕ್ ಬಸ್ ಸ್ಟಾಪ್ ಕೆಳಗಿಳಿದು ಮೂಖ ಮೂತಿ ತೊಳುಕೊಂಡು ಅಲ್ಲೇ ಇದ್ದ ಪುಟ್ ಪಾತ್ ಅಂಗಡಿಯಲ್ಲಿ ರೈಸ್ ಬಾತ್ ತಿನ್ನ್ಕೊಂಡು ಅಲ್ಲೇ ಬೆಂಗಳೂರು ಅಣ್ಣಾಮಾಗೆ ಕೈ ಮುಗಿದು ಕಾಪಾಡು ಎಂದು ರೋಡ್ ರೋಡ್ ಅಲಿತಾ ಕೆಲಸ ಇದೀಯಾ ಕೆಲಸ ಇದೀಯಾ ಅಂಥ ಕೇಳ್ತ ಇರಬೇಕಾದ್ರೆ.

ಒಬ್ಬ ಆಸಾಮಿ ಬಂದು ಏನೋ ಯಾರೊ ನೀನು ಯಾವ್ದೊ ಊರು ಎಂದು ಪ್ರಶ್ನೆ ಮಾಡಿದ.

ಹುಡುಗ ಅಣ್ಣ ನಂಗೇ ಹಿಂದೆ ಮುಂದೆ ಯಾರು ಇಲ್ಲ ನಾನು ಒಬ್ಬ ಅನಾಥ ಯಾರೊ ಹೇಳಿದ್ರೂ ಬೆಂಗಳೂರಗೆ ಹೋಗು ಅಲ್ಲಿ ಜೀವನ ಮಾಡ ಬಹುದು ಅಂಥ ಅದಕ್ಕೆ ಬಂದೇ ಕಣಾಣ್ಣ.

ಆಸಾಮಿ ಹೌದಾ ಸರಿ ಬಾ ನನ್ ಜೊತೆ ನಿಂಗೆ ಕೆಲಸ ಕೊಡ್ತೀನಿ ಎಂದು ಕರೆದು ಕೊಂಡು ಹೋದ.

ಕುತ್ಕೊ ಇಲ್ಲಿ ನೋಡು ಇದು ಅವೆನ್ಯೂ ರೋಡೂ,ಚಿಕ್ಕ ಪೇಟೆ, ಇಲ್ಲಿ ಸುಮಾರು ಜನ ಊರು ಬಿಟ್ಟು ಇಲ್ಲಿ ಬಂದು ದೊಡ್ಡ ದೊಡ್ಡ ಮನುಷ್ಯರು ಆಗೊರೆ ನೀನು ಅವರತಾರ ಆಗಬೇಕು ಅಂದ್ರೆ ಇಲ್ಲಿ ನೀನು ದೊಡ್ಡ ದೊಡ್ಡ ಮನುಷ್ಯ ಪಾರ್ಸ್ ಹೆಗ್ಗೃಸ ಬೇಕು.

ಹುಡುಗ ಥೂ ನಿನ್ನ ಮನೆಯ ಕಾಯ ನಾನು ಬದುಕೋಕ್ಕೆ ಬಂದಿರೋದು ಜೈಲಿಗೆ ಹೋಗೋಕ್ಕೆ ಅಲ್ಲ ಗೊಥಾಯಿತ.

ಆಸಾಮಿ ಲೋ ಇಲ್ಲಿ ನಿಂತರ ಎಲ್ಲರೂ ಅಂದ್ಕೊಂಡು ಜೀವನ ಮಾಡೋ ಆಗಿದ್ರೆ ಮನೆ ಮಠ ಇಲ್ಲದೆ ಯಾಕೋ ಇದ್ರು,ಬಾ ಇಲ್ಲಿ ನೋಡು ಈ ಬೆಂಗಳೂರು ಅಣ್ಣಮ್ಮ ದೇವಿ ಇವಳ ಮುಂದೆ ಈ ಭಿಕ್ಷುಕರು ಯಾಕೋ ಕುತ್ಕೊತಿದ್ದೃ, ಬಾ ನೋಡು ಅ ಹುಡುಗ ಯಾಕೋ ಶೂ ಪಾಲಿಸ್ ಮಾಡ್ತಿದ್ದ.

ಹುಡುಗ ನೋಡು ....ನೀನು ಕಣ್ಣು ಬಿಟ್ಟು ನೋಡು ಅವ್ರು ಹೊಡೆದು ಬದ್ಕುತಿಲ್ಲ ಬೇಡಿ ಬದುಕು ಮಾಡ್ತಿದ್ದಾರೆ.

ನೀನು ಹೇಳೋ ರೀತಿ ಮಾಡಿದ್ರೆ ಅಷ್ಟೆ......

ಎಂದು ಅವನ ಮಾತಿಗೆ ತಿರುಗೆಟು ನೀಡಿ ನಡೆದು ಬೇರೆಡೆ ಹೋದ.

ಮತ್ತೆ ಹಿಂದಿರುಗಿ ನೋಡಿದ ಆಸಾಮಿ ಹೋಗು ಹೋಗು ಮಗನೇ ಒಂದಲ್ಲ ಒಂದು ದಿನ ಬರ್ತೀಯಾ ನೀನು ಎಂದು ಹೇಳಿ ಬೇರೆಯವರ ಜೊಬಿಗೆ ಕತರಿ ಹಾಕಲು ಹೊಂಚು ಹಾಕುತಿದ್ದ.

ನಮ್ಮ ಹುಡುಗ(ಕಥಾ ನಾಯಕ ) ಎಲ್ಲಾ ಕಡೆ ಕೆಲಸ ಕೇಳಿ ಕೇಳಿ ದಣಿದು ಸುಸ್ತಾಗಿ ನೀರು ನೀರು ಎಂದು ಹಂಬಲಿಸುತ್ತಿರುವಾಗ ಅಲ್ಲೇ ಪಕ್ಕದಲೆ ಇದ್ದ ಬೋರ್ ವೆಲ್ ನಲ್ಲಿ ನಲ್ಲಿಯನ್ನು ತಿರುಗಿಸಿ ನೀರು ಕುಡಿಯುತಿದ್ದ ಸಮಯಕ್ಕೆ ಸಣ್ಣ ಮಗುವು ಜೀಯಾ... ಜೀಯಾ... ಎಂದು ಹೇಳ ತೊಡಗಿತು ನನಗೆ ಅದರ ಭಾಷೆ ಅರ್ಥವಾಗದಿದ್ದರು ಅದು ಏನನ್ನು ಬಯಸುತಿದೆ ಎಂದು ಅರ್ಥೈಸಿಕೊಂಡು ಅ ಮಗುವಿಗು ನೀರು ಕೋಟ್ಟೇ.

ಹಾಗೆ ಮುಂದೆ ನಡೆಯುತ್ತಿರುವಾಗ ಒಬ್ಬ ಶ್ರಮಿಕ ಸರಕನ್ನು ತಳ್ಳುವ ಗಾಡಿಯಲ್ಲಿ ಹಾಕಿಕೊಂಡು ತನ್ನ ರಥವನ್ನು ತನ್ನೆಲಾ ಶಕ್ತಿ ಉಪಯೋಗಿಸಿಕೊಂಡು ಮಾಲೀಕನಿಗೆ ತಲುಪಿಸುತಿದ್ದ ಅ ಮಾಲೀಕ ಅವನ ಕೈಗೆ ಪುಡಿಗಸ ಹಾಕಿ ಹೋದ ಅ ಶ್ರಮಿಕ ಕೇಳಿದ ಏನ್ ಸಾಮಿ ಅಷ್ಟು ದೂರ ತಗೊಂಡು ಬಂದಿದ್ದೀನಿ ಬರೀ 10 ರೂಪಾಯಿ ಕೊಡ್ತಿರಾ? ಮಾಲೀಕ ಯೋ ನಿನ್ ಮಾಡೋ ಕೆಲಸಕ್ಕೆ 1000ರೂಪಾಯಿ ಕೊಡಬೇಕಾ ಕೊಟ್ಟಶ್ತು ತಗೊಂಡು ಹೋಗ್ತಿರು ಅಷ್ಟೆ ಎಂದು ಬೈದು ಓಡಿಸಿದ. ಕಷ್ಟ ಪಟ್ಟು ದುಡಿಯುವ್ವನಿಗೆ ಕೇವಲ 10ರೂಪಾಯಿ ಅದೇ ಸಮಯಕ್ಕೆ ಯಾರೊ ಒಬ್ಬ ವ್ಯಕ್ತಿ ಅದೇ ಅಂಗಡಿಗೆ ಬಂದ ಒಯೇ ಅಣ್ಣಾಮ್ಮ ಕುರ್ಸ್ತಿನಿ ದುಡ್ಡ ಹಾಕೊ ಎನ್ನ್ದೊಡನೆ 1000 ಸಾವಿರ ರೂಪಾಯಿ ಹಾಕಿ ಬಿಟ್ಟ ನಂಗೇ ನೋಡಿ ಅಚ್ಚರಿಯಾಯಿತು. ಕಷ್ಟ ಪಟ್ಟ ಅ ಮುದುಕನಿಗೆ 10 ರೂಪಾಯಿ ಚಂದ ವಸೂಲಿ ಮಾಡುವವನಿಗೆ 1000 ರೂಪಾಯಿಯ ವಿಚಿತ್ರ. ಹೀಗೆ ನೋಡುತ್ತ ಮುಂದೆ ನಡೆದ ಮತ್ತೊಂದು ಘಟನೆ ನಡೆಯಿತು ಆಗೋ ಅಲ್ಲಿ ಗಾಡಿ ಓಡಿಸುವವನ ಬಳಿ ಪೊಲೀಸರ ದರ್ಪ ಜೊತೆಗೆ ಫೈನ್ ಹಾಕ್ತೀನಿ ಎಂದು ಎದರಿಸಿ ಲಂಚದ ವಾಸುಲಿ ಬೇರೆ. ಹೀಗೆ ಎಲ್ಲಾ ವನ್ನು ನೋಡುತ್ತ ಇರಳು ಕಳೆಯಿತು ರಾತ್ರಿಯ ರಂಗೇ ಬೇರೆಯಾಗಿತ್ತು.ಸುತ್ತಲು ಬಣ್ಣ ಬಣ್ಣದ ಚಿತ್ತಾರಗಳು ಮ್ಯೂಸಿಕ್ ಶಬ್ದಗಳು ಬಾರ್ನಲ್ಲಿ ಗಲಾಟೆ,ರೋಡ್ನಲ್ಲಿ ಬಿಸಿ ಊಟ ಮತ್ತೊಂದೆಡೆ ಲಲನೆಯಾರು ಗಿರಾಕಿಗೆ ಗಾಳ ಹಾಕುತಿದ್ದಾರೆ. ಇದೆಲ್ಲಾ ನೋಡಿದ ಹುಡುಗನಿಗೆ ಎಲ್ಲಾವು ಅಯೋ ಮಾಯವಾಗಿತ್ತು. ಬಂದದ್ದು ತಪ್ಪ ಇಲ್ಲ ಇಲ್ಲಿ ಬದುಕ ಬೇಕಾದರೆ ಈಗೆ ಇರಬೇಕಾ ಎನ್ನುವ ಆಲೋಚನೆಗಳು ನನ್ನ ಹೆಗಲೇರಿದವು ಹೀಗೆ ಚಿಂತಿಸುತ್ತ  ಹುಡುಗ ಸುತ್ತಿ ಸುತ್ತಿ ಕಾಲು ಪಾದಗಳು ಪದ ಹಾಡಿದವೂ ನಿದ್ರಾ ದೇವಿ ಕಣ್ಣಿಗೆ ಆವರಿಸಿದಳು. ಅಲ್ಲೇ ಪಕ್ಕದಲಿದ್ದ ಬಸ್ ಸ್ಟಾಪ್ನಲ್ಲೇ ಮಲಗಿದ.

ರಾತ್ರಿವೇಳೆ ಪೊಲೀಸ್ ಪೇದೆಗಳು ಗಸ್ತು ಹೊಡಿಯುತ್ತಿರ್ವ ವೇಳೆಯಲ್ಲಿ ಇವನನ್ನು ಕಂಡ ಇಬ್ಬರು ಲಾಠಿ ಕೊಲಿನಿಂದ ಬಡಿದೆಬ್ಬಿಸಿ ಕೇಳಿದರು ಹೇಯ್ ಯಾರೋ ನೀನು? ಇಲ್ಲಿ ಯಾಕೆ ಮಲಗಿದ್ದ್ಯಾ ಹ್ಹ......?

ಹೋಗೋ ಹೋಗೋ ಇಲ್ಲಿ ಮಲಗೊಕ್ಕೆ ನಿನ್ ಮನೆನಾ ಹ್ಹ....

ಹುಡುಗ : ಮತ್ತೆ ಎಲ್ಲಿ ಮಲ್ಗೊದು ಅಣ್ಣ

ಪೋಲಿಸ್ ಪೇದೆ : ಹ್ಮ್.... ಇಲ್ಲೇ ಹತ್ರದಲ್ಲೇ ನನ್ ಮನೆಯಿದೆ ಹೋಗಿ ಮಲ್ಕೋಲ್ಲುವಂತೆ ನಡಿಯಪ್ಪ ಕಂದ ...

ಹುಡುಗ : ಸರಿ ಅಣ್ಣ...

ಪೊಲೀಸ್ ಪೇದೆಗೆ ಇವನ ಈ ಮಾತಿ ವರಸೆಯಿಂದ ಸಿಟ್ಟು ಬಂದು ನನ್ ಮಗನೇ ನನ್ ಮನೆ ಬೇಕಾ ನೀನು ಮಲ್ಗೊಕ್ಕೆ ಹೇಳೋ ನೀನು ಯಾರು ಇಲ್ಲಿಗೆ ಯಾಕ್ ಬಂದಿದ್ದ್ಯ ಎಂದೆಲ್ಲಾ ಪ್ರಶ್ನೆ ಮಾಡಿದ.

ಹುಡುಗ: ಅವನ ಮಾತಿಗೆ ಏನು ಹೇಳಬೇಕು ಎಂದು ಗೊತ್ತಾಗದೆ ಸುಮ್ಮನೆ ಕಣ್ಣು ಬಾಯಿ ಬಿಟ್ಟು ನೋಡುತಿದ್ದ.

ಪೊಲೀಸ್ ಪೇದೆ ನಡೀರಿ ಈ ನನ್ ಮಗನ್ನ ಎತ್ತಕೊಂಡು ಸ್ಟೇಷನಲ್ಲಿ ನಾಲ್ಕು ಬಾರ್ಸಿದ್ರೆ ಮಗಾ ಬಾಯಿ ಬಿಡ್ತಾನೇ.

ಎಂದು ಅವನ್ನು ಸೀದಾ ಪೊಲೀಸ್ ಸ್ಟೇಷನ್ ಕರೆದೊಯಿದು ಸಾಹೇಬೃ ಬೇರೆ ಇರಲಿಲ್ಲ ಲಾಕಪ್ ನಲ್ಲಿ ಹಾಕಿ ಕೂರಿಸಿದ್ದರು.

ರಾತ್ರಿಯಲ್ಲಾ ಅಲ್ಲೇ ಮಲಗಿದ್ದ.

ಬೆಳಗೆ 8ಗಂಟೆ ಸಾಹೇಬ್ರರು ಸ್ಟೇಷನ್ ಗೆ ಬಂದರು ಲಾಕಪ್ ನಲ್ಲಿದ್ದ ಹುಡುಗ ಯಾರು ಎಂದು ಪ್ರಶ್ನಿಸಿದ.

ಪೇದೆ ಇಬ್ಬರು ಸಾರ್ ರಾತ್ರಿ ರೌಂಡ್ಸ ಮಾಡೋ ಟೈಮ್ಗೆ ಬಸ್ ಸ್ಟಾಪ್ ನಲ್ಲಿ ಮಲಗಿದ್ದ ಕೇಳಿದ್ದವಿ ಏನು ಬಾಯಿ ಬಿಡಲಿಲ್ಲ ಅದಕ್ಕೆ ಕರೆದುಕೊಂಡು ಬಂದವೀ.

ಸಾಹೇಬ ;ಹ್ಹ......ಹ್ಮ್ ಕರೀರಿ ಅವನ್ನ

ಸಾಹೇಬ: ಹ್ಮ್... ಕಾಫಿ ಕುಡಿತೀಯಾ.....

ಹುಡುಗ : ಬೇಡ ಸಾರ್ ಹೊಟ್ಟೆ ಹಸಿವು ಏನಾದರು ತಿನ್ನೋಕ್ಕೆ ಕೊಡ್ತಿರಾ ? ಪುಗಸಟ್ಟೆ ಬೇಡ ತಿಂದ ಮೇಲೆ ಪೊಲೀಸ್ ಸ್ಟೇಷನ್ ಎಲ್ಲಾ ಕ್ಲೀನ್ ಮಾಡ್ತೀನಿ ಜಿಪ್ ತೊಳಿತಿನಿ.

ಸಾಹೇಬ : ಸರಿ ಸರಿ ಮೊದಲು ತಿಂಡಿ ತಿನ್ನು ಅಮೇಲೆ ಮಾಡುವಿಯಂತೆ ಎಂದು ರೀ ಹನುಮರಾಜು ತೋಗೊಳಿ ದುಡ್ಡು ಹೋಗಿ ಇಡ್ಲಿ ತಂಗೊಂಡು ಬನ್ರೀ ಎಂದು ಹೇಳಿ ಕಳುಹಿಸಿದ.

ಸ್ವಲ್ಪ ಸಮಯದ ನಂತರ ಇಡ್ಲಿ ಬಂತು ಹೊಟ್ಟೆ ತುಂಬಾ ತಿಂದು ನೀರು ಕುಡಿದು ಕುಳಿತ ಆಗ ಸಾಹೇಬ ನೋಡು ಈಗ ನೀನು ಸರಿಯಾಗಿ ಉತ್ತರ ನೀಡು ನೀನು ಯಾರು? ಇಲ್ಲಿ ಯಾಕೆ ಬಂದೇ ? ನಿಮ್ಮ ಊರು ಯಾವುದು ?

ಹುಡುಗ : ಸರ್ ನಂಗೇ ಯಾವುದು ಊರು ಇಲ್ಲ ನಾನೊಬ್ಬ ಅನಾಥ ಅಪ್ಪ ಅಮ್ಮ ಯಾರು ಇಲ್ಲ ಸ್ವಂತ ಊರು ಯಾವುದು ಇಲ್ಲ .

ಸಾಹೇಬ ; ಹೌದಾ ಮತ್ತೆ ಇಲ್ಲಿಗೆ ಯಾಕೆ ಬಂದೇ.

ಹುಡುಗ : ಸರ್ ಹೀಗೆ ಯಾರೊ ಒಬ್ಬರು ಬೆಂಗಳೂರು ಹೋಗಿ ಬದುಕು ಅಲ್ಲಿ ಕೆಲಸ ಸಿಗುತ್ತೆ ಕೈ ತುಂಬಾ ಸಂಬಳ ಸಿಗುತ್ತೆ ಅಂದ್ರು ಅದಕ್ಕೆ ಬಂದೇ ಸರ್.

ಸಾಹೇಬ : ಸರಿ ನೋಡು ನೀನು ಒಂದು ಕೆಲಸ ಮಾಡೂ ಸ್ವಲ್ಪ ದಿನ ಇಲ್ಲೇ ಇರು ಯಾವುದಾದರೂ ಕೆಲಸ ಸಿಕ್ಕಿದ ಮೇಲೆ ಹೇಳ್ತೀನಿ ಹೋಗು ಎಂದು ಹೇಳಿದ.

ಸ್ವಲ್ಪ ದಿನದ ನಂತರ ಹುಡುಗನಿಗೆ ಪೊಲೀಸ್ ಸಾಹೇಬ ಒಂದು ಸಿಮ್ ಕಾರ್ಡ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವಂತೆ ಹೇಳಿದ ಮೊದ ಮೊದಲು ಕೆಲಸದ ಬಗ್ಗೆ ಅರಿವಿಲ್ಲದ ಹುಡುಗನಿಗೆ ಕಾಲ ಕಳೆದಂತೆ ಎಲ್ಲವೂ ಕರತಲಮಲಕವಾಗುತ್ತದೆ ಹೀಗೆ ಎಲ್ಲಾವು ಚೆನ್ನಾಗಿ ನಡೆಯುತ್ತಿರುತ್ತದೆ. ಹುಡುಗ ಕಾಲ ಬದಲಾದಂತೆ ತನ್ನ ನಡೆ ನುಡಿಯೆಲ್ಲವು ಬದಲಾಯಿತು ಹುಡುಗ ಯುವಕನದ ಅದಾಗಲೇ ಅವನಿಗೆ 22 ವರ್ಷವಾಯಿತು. (ಪ್ರಿಯ ಓದುಗರೆ ನಾನು ಇಲ್ಲಿ ಕಥಾ ನಾಯಕನ ಹೆಸರು ಪ್ರಸ್ತುತ ಪಡಿಸಿಲ್ಲ ಕೊನೆ ಮಧ್ಯ ಭಾಗದಲ್ಲಿ ನಿಮಗೆ ಹೇಳುತ್ತೇನೆ ಅಲ್ಲಿಯವರೆಗೂ ನಾಯಕ ಎಂದೇ ಸಂಭೊದಿಸಿದ್ದೇನೆ)

ಒಂದು ದಿನ ಆಫಿಸ್ಗೆ ಸುಂದರವಾದ ಚೆಲುವೆಯೊಬ್ಬಳು ಕಾಲಿಡುತ್ತಾಳೆ ಯಾರ ಬಳಿ ಏನು ಪ್ರಶ್ನೆ ಕೇಳಬೇಕು ಎಂದು ತಿಳಿಯಾದೆ ಪರಿತಪ್ಪಿಸುವಾಗ. ಈ ನಾಯಕ ಅವಳ ಚೆಲುವಿಗೆ ಮನಸೋತು ಅವಳ ಬಳಿ ಹೋಗಿ ತನ್ನ ಪರಿಚಯ ಮಾಡಿಕೊಂಡು ನಿಮಗೆ ಏನು ಬೇಕು ಎಂದು ವಿಚಾರಿಸಿದ ಹೀಗೆ ಅವರಿಬ್ಬರ ಮಾತುಕತೆ ನಡೆಯಿತು.

ಹೀಗೆ ಅವಳ ಸಮಸ್ಯೆಯನ್ನು ಬಗೆ ಹರಿಸಿಕೊಟ್ಟ ಅವಳು ಹೋಗುವ ಸಂದರ್ಭದಲ್ಲಿ ತನ್ನ ನಂಬರ್ ನೀಡಿ ಹೋದಳು.

ಹೀಗೆ ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತು ಅವರ ಸುತ್ತಾಟ ಓಡಾಟ ಹೆಚ್ಛಾಯಿತು.

ನಾಯಕ ಅವಳ ಮೆಚ್ಚಿಸುವ ಸಲುವಾಗಿ ಅನೇಕ ದೊಡ್ಡ ದೊಡ್ಡ ಹೋಟೆಲ್ಗಳಲಿ ಊಟ ಉಪಚಾರ, ಅವಳಿಗೆ ಇಷ್ಟವಾಗುವ ಎಲ್ಲಾ ವಸ್ತುಗಳನ್ನು ಕೊಡಿಸಿದ,ಹೀಗೆ ಅವಳಿಗಾಗಿ ಏನು ಮಾಡಲು ಸಿದ್ದನಿದ್ದ.

ಈ ನಾಯಕ ತಾನು ಮಾಡುತಿದ್ದ ಕೆಲಸವನ್ನು ಬಿಟ್ಟು ಬೇರೆ ಕಂಪನಿಗೆ ಸೇರಿದ ಅದು ಕೂಡ ಸಿಮ್ ಕಾರ್ಡ್ ಕಂಪನಿಯಾಗಿತ್ತು.

ಹೀಗೆ ವರುಷಕ್ಕೆ ಒಂದು ಕೆಲಸ ಬಿಟ್ಟು ಬೇರೆ ಕೆಲಸ ಎಂದು ಬದಲಿಸುತ್ತಲೇ ಇದ್ದ ಇದೆ ಮದ್ಯದಲ್ಲಿ ಒಂದು ಡಿಟೇಟಿವ್ ಕಂಪನಿಯಲ್ಲು ಸಹ ಕೆಲಸ ಮಾಡಿ ಬಿಟಿದ್ದ.

ಇವನ ಗೆಳೆಯ ಒಬ್ಬ ವಾಸಿರ್ ಎಂದು ಆತ ಕೂಡ ಸಿಮ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತಿದ್ದ.

ಅವನಿಗೆ ಒಂದು ದಿನ ಈ ಯುವಕ ಸಿಕ್ಕಿ ಏನೋ ಮಗ ಅ ಹುಡುಗಿ ಹಿಂದೆ ಬಾರಿ ಸುತ್ತಿದೀಯಾ ಏನ್ ಸಮಾಚಾರ ಏನು ಡೀಪ್ ಲವ್ ಹಾ.....

ನಾಯಕ ಹೌದು ಕಣೋ ಅವಳಿಗೊಸ್ಕಾರ ಏನ್ ಬೇಕಾದರೂ ಮಾಡ್ತೀನಿ.

ವಾಸಿರ್ ಹೌದಾ....ಸರಿ ಸರಿ

ನಾಯಕ ಆದ್ರೆ ನಾನು ಈಗ ಮಾಡ್ತಿರೋ ಕೆಲಸದಲ್ಲಿ ಸಂಬಳ ಸಾಕಾಗತ್ತಿಲ್ಲ ಕಾಣೋ.

ವಾಸಿರ್ ; ಏನು ನಿಂಗೆ ಬಾರ್ತಿರೋ ಸಂಬಳ ಸಾಕಾಗ್ತಿಲ್ವಾ ಅದು ತಿಂಗಳಿಗೆ 25 ಸಾವಿರ .

ನಾಯಕ ; ಹೌದೋ....ಎಷ್ಟು ವರ್ಷ ಹೀಗೆ ದುಡಿತಿರಲೀ ನಂಗೂ ಸಾಕ್ ಸಾಕಾಗಿದೆ. ಏನಾದರು ಮಾಡಬೇಕೂ ಒಂದೆ ವರ್ಷದಲ್ಲಿ ಕೋಟ್ಯಾಧಿಪತಿ ಆಗಬೇಕು ಏನಾದರು ಐಡಿಯಾ ಇದ್ಯಾ ?

ವಾಸಿರ್ ನೀನು ಈಗ ಮೊದಲಿನಂತೆ ಇಲ್ಲ ಕಾಣೋ ತುಂಬಾ ಬದಲಾಗಿದ್ದೀಯಾ ನಿನ್ನ ಹಳೆ ಬಾಸ್ ಸಿಕ್ಕಿ ಹೇಳಿದ್ರು ಅವನ್ನು ಮತ್ತೆ ಕೆಲ್ಸಕ್ಕೆ ಸೆರಿಕೊಳ್ಳುತ್ತೇನೆ ಬರಲು ಹೇಳಿ ಅಂಥ ಈಗ ನಿನ್ನ ತಲೆಗೆ ಕೊಟ್ಯಾಧಿಪತಿ ನಶೇ ಏರಿದೆ ನೀನು ಹೇಳುವ ಹಾಗೇ ದೀಢಿರ್ ಎಂದು ಈ ಕೊಟ್ಯಾಧಿಶ್ವರ ಹಾಗೋ ಐಡಿಯಾ ನನ ಹತ್ರ ಇಲ್ಲ ಪಾ ......ನಾನು ಇನ್ನು ಅದರಲ್ಲಿ ಬಚ್ಛಾ .

ಅದೇ ಸಮಯಕ್ಕೆ ಒಬ್ಬ ಹುಡುಗ ಬಂದು ಇವರ ಬಳಿ ಅಣ್ಣ.....ಅಣ್ಣ...... ಒಂದು ನಿಮಿಷ ಫೋನ್ ಕೊಡ್ತಿರಾ ನಮ್ಮ ಅಪ್ಪಗೆ ಫೋನ್ ಮಾಡಬೇಕೂ ಪ್ಲೀಸ್ ನಾನು ತಪ್ಪಿಸಿಕೊಂಡು ಬಿಟ್ಟೇ .

ವಾಸಿರ್ ಅಯ್ಯೋ ಹೊಗಪ್ಪ ಬೇರೆ ಯಾರಾದ್ರು ಕೇಳು ನಾವು ಸ್ವಲ್ಪ ಬ್ಯುಸಿಯಾಗಿದ್ದಿನೀ.

ಅ.... ಕಳೆದು ಹೋದ ಹುಡುಗ ಮತ್ತೆ ಅಣ್ಣ....ಅಣ್ಣ.... ಶರ್ಟ್ ಎಳೆದ ನಮ್ಮ ನಾಯಕನಿಗೆ ಅವನ ಅಳಲು ನೋಡಿ ತನ್ನ ಫೋನ್ ಕೊಟ್ಟು ನಿನ್ನ ತಂದೆಗೆ ಕರೆ ಮಾಡೂ ಎಂದು ಹೇಳಿದ. ಅ ಹುಡುಗ ಮಾಡ್ತೀನಿ ಎಂದು ಹೇಳಿ ಸ್ವಲ್ಪ...ಸ್ವಲ್ಪ.. ದೂರ ಸರಿದು ನೆಟ್ವರ್ಕ್ ಸಿಗುತಿಲ್ಲ ಎಂದು ಹೇಳುತ್ತಾ ಹಲೋ.. ಹಲೋ....ಹಲೋ... ಎನ್ನುತ್ತ ಅವರಿಂದ ಕೊಂಚ ದೂರ ಸರಿಯುತ್ತ ಒಂದೇ ನಿಮಿಷದಲ್ಲಿ ಓಡಿ ಹೋದ. ಇವರಿಬ್ಬರು ಅವನನ್ನು ಅಟ್ಟಿಸಿಕೊಂಡು ಹೋದರು ಆದ್ರೆ ಹುಡುಗ ಕೈಗೆ ಸಿಗಲಿಲ್ಲ ಅಸಾಮಿ ಪರಾರಿ.

ಇವರಿಬ್ಬರು ಓಡಿ ಓಡಿ ದಣಿದು ಸುಸ್ತಾದರು. ಅಯ್ಯೋ ನನ್ ಮಗ ಫೋನ್ ಮಾಡ್ತೀನಿ ಅಂಥಾ ಫೋನ್ ಜೊತೆಗೆ ಎಸ್ಕೆಪ್ ಆಗ್ಬಿಟ್ಟ. ಏನೋ ಮಾಡೋದೂ ಈಗ ಎಂದು ಈ ಹುಡುಗ ಕೇಳಿದ.

ವಾಸಿರ್ ; ಮಗ ನಡಿ ಪೊಲೀಸ್ ಸ್ಟೇಷನ್ಗೆ ಹೋಗೋಣಾ ಒಂದು ಕಂಪ್ಲೇಂಟ್ ಕೊಡೋಣ ಎಂದಾ. ಇಬ್ಬರು ಪೊಲೀಸ್ ಸ್ಟೇಷನ್ ಧಾವಿಸಿದರು.

ಪೊಲೀಸ್ ಪೇದೆ ; ಹ್ಮ್..... ಏನ್ ನಿಂದೂ ಸಮಾಚಾರ ಏನು ಕಿಂದ್ನಪ್ ,ಸ್ನಛಿಂಗ್ ಹ್ಹ..,ರಾಬರೀ ನಾ, ಲವ್ ಮ್ಯಾಟರಾ,ಬೈಕ್ ಮಿಸಿಂಗ್ ..ಹ್ ಬಾಡಿಗೆ ಕಟ್ಟಿಲ್ಲ ಅಂಥ ಓನರ್ ಟಾರ್ಚರ್ ಹ್ಹ.....

ವ್ವಾಸಿರ್: ಏನೋ ಇದು ಪೊಲೀಸ್ ಸ್ಟೇಷನ್ ಹಾ....ಇಲ್ಲ ಹೊಟೇಲ್ ಹ್ಹ... ಒಳ್ಳೆ ಹೊಟೇಲ್ ನಲ್ಲಿ ಸಪ್ಲೈಯರ್ ಕೆಳೋ ಹಾಗೇ ಇಡ್ಲಿ ವಡೆ ,ಪುರಿ ಸಾಗು ,ಚೌ ಚೌ ಬಾತ್,ಖಾರ ಬಾತ್ ,ಸೆಟ್ ದೋಸೆ ಅನ್ನೊ ರೀತಿಯಲ್ಲಿ ಕೆಲ್ತ್ವನೇ.

ನಾಯಕ ನೀನು ಬಾಯಿ ಮುಚ್ಚು.

ಪೊಲೀಸ್ ಪೇದೆ : ವಾರೇ ಗಣ್ಣಿನಿಂದ ಏನ್ರಿ ಪಿಸು ಪಿಸು ಅಂತಿದ್ದೀರಾ ಏನ್ ಹೇಳ್ತೀರೋ ಇಲ್ಲ ಎದ್ದು ಹೊಗ್ತಿರೋ.

ಸರ್ ಸರ್ ನಂದು ಫೋನ್ ಕಳೆದು ಹೋಗಿದೆ.

ಪೊಲೀಸ್ : ಯಾವ್ಗ ? ಎಲ್ಲಿ ? ಎಷ್ಟು ಗಂಟೆಗೆ ? ಕದಿದ್ದು ಹುಡುಗನಾ ...ಹುಡುಗಿನಾ....?

ನೀವೂ ಏನ್ ಮಾದ್ತಿದ್ರೀ ಎಂದು ದಭಾಯಿಸಿದ ?

ವಾಸಿರ್ ; ನೋಡೋ ನೋಡೋ ತಿರುಗ ಹಾಗೇ ಕೆಳಿತೀದ್ದಾನೆ.

ಇವನು ಪೊಲೀಸ್ ಕಾನ್ಸ್ ಸ್ಟೇಬಲ್ ಆಗೋ ಬದಲು ಹೊಟೇಲ್ ಸಪ್ಲೈರಯ್ ಆಗ ಬೇಕಿತ್ತು.

ನಾಯಕ : ಸರ್ ನಾನು ಇವನು ಯಾವ್ದೊ ವಿಚಾರದ ಬಗ್ಗೆ ಮಾತಡತಿದ್ದ್ವಿ ಆಗ ಒಬ್ಬ ಹುಡುಗ ಬಂದು ಅಣ್ಣ ನನ್ ತಂದೆಗೆ ಫೋನ್ ಮಾಡಿ ಕೊಡಿ ಮಿಸ್ ಆಗಿದ್ದಾರೆ ಎಂದ ಅದಕ್ಕೆ ನಾವು ಫೋನ್ ಮಾಡಿ ಕೋಟ್ಟೇ ಸಿಗ್ನಲ್ ಸಿಗ್ತಿಲ್ಲ ಅಂಥ ಸ್ವಲ್ಪ ದೂರ ದೂರ ಹೋದ ಅಮೇಲೆ ಸೀದಾ ಓಡಿ ಹೋದ ಸಿಗಲಿಲ್ಲ.

ಸರಿ ತೊಗೊಳಿ ಒಂದು ಕಂಪ್ಲೇಂಟ್ ಬರಿರೀ ನೋಡೋಣ ಸಿಕ್ಕಿದ್ರೆ ಫೋನ್ ಮಾಡ್ತೀವಿ.ಇಲ್ಲ ಅಂದ್ರೆ ಮರೆತು ಬೇರೆ ಫೋನ್ ತೊಗೊಳಿ.

ನಾಯಕ : ಸರ್ ಏನ್ ಸಾರ್ ಹಾಗ ಹೇಳ್ತೀರಾ ?

ಪೊಲೀಸ್ ಕಾನ್ಸಸ್ಟೇಬಲ್: ಏನ್ರಿ ಮಾಡೋದೂ ನಿಮ್ಮತರ ದಿನಕ್ಕೆ 10-20 ಕೇಸ್ ಬರ್ತಾವೆ ಅ ಬಡ್ಡಿ ಮಕ್ಕಳು ಅದು ಯಾವ್ ಮಾರವಾಡಿ ಅಂಗಡಿಯಲ್ಲಿ ಆಡ ಇಕ್ಕ್ತಾರೊ ಗೊತಿಲ್ಲ.

ವಾಸಿರ್ : ಸರ್ ಪ್ಲೀಸ್ ಹುಡುಕಿ ಅದರಲ್ಲಿ ಇವನ ಲವರ್ ನಂಬರ್ ಬೇರೆ ಇದೆ.

ಪೊಲೀಸ್ ಕಾನ್ಸಸ್ಟೇಬಲ್: ಅಯ್ಯೋ ತಲೆ ತಿನ್ನ ಬೇಡಿ ಒಂದು ಕೆಲಸ ಮಾಡಿ ಜೊಬ್ ನಲ್ಲಿ ಎಷ್ಟು ಇದೆ .

ವಾಸಿರ್ : ಯಾಕ್ ಸರ್

ಪೊಲೀಸ್ ಕಾನ್ಸ ಸ್ಟೇಬಲ್ ; ಹೊಟೇಲ್ ಹೋಗಿ ಕಾಫಿ ಕುಡಿಯೊಕ್ಕೆ

ವಾಸಿರ್: ಅಯ್ಯೋ ಅದಕ್ಕೆನೂ ಸರ್ ಇಲ್ಲೇ ನಮ್ಮ ಚಾಚಾ ದೂ ಟೀ ಅಂಗಡಿ ಇದೆ ನಮಗೆ ಫ್ರೀ ಕೊಡ್ತಾರೆ.

ಕಾನ್ಸ ಸ್ಟೇಬಲ್ : ಸರಿ ಹೊಗೊವಾಗ ಹೇಳಿಬಿಟ್ಟು ಹೋಗು ಈಗ ಸ್ವಲ್ಪ ಕೊಟ್ಟು ಹೋಗು

ವಾಸಿರ್: ಏನ್ ಕೋದ್ಬೆಕು .

ಕಾನ್ಸ ಸ್ಟೇಬಲ್ : ಹೇ ನಿನ್ನ ಹೆಸರು ಏನೋ ?

ವಾಸಿರ್ : ವಾಸಿರ್

ಕಾನ್ಸ ಸ್ಟೇಬಲ್ : ಮುಚ್ಚು ಕೊಂಡು ಇರ್ತಿಯಾ ನಾನು ಕೇಳಿತಿರೊದು. ಅವನ್ನ ನೀನು ಯಾಕೋ ನಂದು ಎಲ್ಲಿ ಅಂಥ ಬಾಯಿ ಹಾಕ್ತೀಯಾ.....

ನಾಯಕ : ಸರ್ ಎಷ್ಟು

ಕಾನ್ಸಸ್ಟೇಬಲ್ : ನಾನು ನಿಂಗೆ ಒಂದು ನಂಬರ್ ಕೊಡ್ತೀನಿ ಅ ನಮಬರ್ಗೆ ರಿಚಾರ್ಜ್ ಮಾಡೂ

ನಾಯಕ: ಎಷ್ಟು ಸರ್

ಕಾನ್ಸ ಸ್ಟೇಬಲ್ ; ಈಗ ಜಿಯೋ ದು ಹೊಸ ಪ್ಲಾನ್ ಏನೋ ಬಂದಿದಿಯಲ್ಲ ಯಾವುದು.....?

ವಾಸಿರ್ : ಸರ್ ಅದಾ 599

ಕಾನ್ಸಸ್ಟೇಬಲ್: ಕರೆಟ್ ನೋಡು ನೀನು ಅಷ್ಟು ಮಾತಾಡಿದ್ದನ್ಕಿಂತ ಇದು ಇಷ್ಟ ಆಯಿತೂ ರಿಚಾರ್ಜ್ ಮಾಡಿ ಹೋಗು ಆಯ್ತಾ.

ನಾಯಕ: ಸರ್ ಅಯ್ತು

ಕಾನ್ಸಸ್ಟೇಬಲ್ ; ಸರಿ ಹೋಗು ನಾನು ಕಾಲ್ ಮಾಡ್ತೀನಿ .

ಸ್ವಲ್ಪ ದಿನದ ನಂತರ ಅದೇ ಜಾಗ ಅದೇ ಹುಡುಗ ಕಣ್ಣಿಗೆ ಬಿದ್ದ ಯಾರೊದ್ದೊ ಬಳಿ ಅದೇ ನಾಟಕ ಆಡುತಿದ್ದನ್ನು ಈ ಹುಡುಗನನ್ನು ಕಂಡ ಅದ್ರೆ ಅವನ್ನು ಹಿಡಿಯುವ ಬದಲು ಅವನು ಎಲ್ಲಿಗೆ ಹೋಗ್ತಾನೆ ಎಂದು ಕಂಡು ಹಿಡಿಯಲು ತನ್ನ ಬೈಕ್ ಸ್ಟಾರ್ಟ್ ಮಾಡಿಕೊಂಡು ಅವನನ್ನೇ ಹಿಂಬಾಲಿಸಿದ.

ಸಂಧಿ ಪಂದಿಯಲ್ಲಿ ನುಗ್ಗಿದ ಒಂದು ಬಾರಿ ಅ ಜಾಗದಲ್ಲಿ ಹೋದ್ರೆ ಎಲ್ಲಿಗೆ ಹೋಗಿ ತಲುಪ್ಪುತೀವಿ ಎಂಬುದು ಗೊತಾಗುವುದಿಲ್ಲ. ಅ ಕಳ್ಳ ಹುಡುಗನನ್ನು ಹುಡುಕಲು ಬೈಕ್ ಬಿಟ್ಟು ಅವವನ್ನೇ ಕಾಲ್ನಡಿಗೆಯಲ್ಲೇ ಹಿಂಬಾಲಿಸಿದ .

ಸನ್ನದಾದ ಒಂದು ಕೋಣೆಯೊಳಗೆ ಹೋದ. ಸ್ವಲ್ಪ ಹೊತ್ತು ಅಲ್ಲೇ ಕಾದು ಕುಳಿತೆ. ಒಂದು ಗಂಟೆ ಬಳಿಕ ಒಬ್ಬ ವ್ಯಕ್ತಿ ಹೊರಬಂದ

ದೂರದಿಂದ ಅಸ್ಪಷ್ಟವಾಗಿತ್ತು. ಅವನು ಸಮೀಪಿಸುತಿದ್ದಲೇ ತಿಳಿಯಿತು ಅವನು ಬೇರೆಯಾರು ಅಲ್ಲ ಅದೇ ವ್ಯಕ್ತಿ ಕಾನ್ಸಸ್ಟೇಬಲ್ ನನ್ನ ಕಂಪ್ಲೇಂಟ್ ತೊಗೊಂಡಾ ಕಾನ್ಸಸ್ಟೇಬಲ್.

ರಿಚಾರ್ಜ್ ಮಾಡಿಸಿಕೊಂಡ ಕಾನ್ಸಸ್ಟೇಬಲ್.

ನಾನು ವಾಪಸ್ ಆದೇ. ಮನೆಯಲ್ಲಿ ಒಬ್ಬನೇ ಕುಳಿತು ಯೋಚಿಸಿದೆ ಏನಾದರು ದೊಡ್ಡದು ಮಾಡಬೇಕೂ ಅಂದ್ರೆ ಯಾರಾದ್ರು ಸಪೋರ್ಟ್ ಇರಲೇ ಬೇಕೂ ಇಲ್ಲ ಅಂದ್ರೆ ಲಾಕ್ ಆಗೋದು ಗ್ಯಾರಂಟಿ .ಅದೇ ಪೊಲೀಸ್ ಜೊತೆಗೆ ಮಾಡಿದ್ರೆ ಸೇಫ್ ಎಂದು ತನ್ನ ಒಂದು ಪ್ಲಾನ್ ಸಿದ್ದ ಮಾಡಿಕೊಂಡ.

15 ದಿನಗಳ ಕಾಲ ಕಂಪ್ಯೂಟರ್ ಸೆಂಟರ್ಗಳಿಗೆ ಹೋಗಿ ಬರುತಿದ್ದ ಅದ್ರೆ ಒಂದೇ ಸೆಂಟರ್ಗಳಿಗೆ ಹೋಗದೆ ಸುಮಾರು ಸೆಂಟರ್ಗಳಿಗೆ ಹೋಗಿ ಬರುತಿದ್ದ.

ವಾಸಿರ್ ಒಂದು ದಿನ ಏನೋ ಇತ್ತೀಚಿಗೆ ಬರೀ ಕಂಪ್ಯೂಟರ್ ಸೆಂಟರ್ಗೆ ಹೊಗಿದ್ದೀಯಾ ಏನ್ ನೋಡೋಕ್ಕೊ ಅದೇನಾ.....?

ನಾಯಕ : ಏನ್ ಆದೂ

ವಾಸಿರ್ : ಅದೇ ಕಾಣೋ ಬ್ಯಾಚುಲರ್ ಒಂಟಿಯಾಗಿದ್ರೆ ಏನ್ ಮಾಡ್ತಾರೆ ಹೇಳು .

ನಾಯಕ ; ಹೋಗಿ ಕೆಲಸ ನೋಡು ನಾನು ಒಂದು ಕೋರ್ಸ್ ಕಲಿಯೊಕ್ಕೆ ಹೋಗ್ತಿದ್ದೀನಿ.

ವಾಸಿರ್ ; ಹೌದಾ ಏನ್ ಹೇಳೋ ನಾನು ಸೆರ್ಕೊತಿನಿ

ನಾಯಕ : ಬೇಡ ನಿನಗೆ ಇನ್ನು ಟೈಮ್ ಬಂದಿಲ್ಲಾ ಬಂದಾಗ ನಾನೇ ಹೇಳ್ತೀನಿ.

ಹೀಗೆ ದಿನಗಳು ಉರುಳಿತು ಒಂದು ದಿನ ಹೀಗೆ ಕಳ್ಳತನ ಮಾಡಿ ಓಡಿ ಹೋದ ಅ ಹುಡುಗನನ್ನು ಹಿಂಬಾಲಿಸುವುದರ ವಿಡಿಯೋ ತೆಗೆಯುತ್ತ ಅದೇ ಅಡ್ಡಕ್ಕೆ ಹೋದ ಅದೇ ಪೊಲೀಸ್ ನೋಡಿ ಹೆಲೋ ಸಾರ್ ಎಂದು ಹೇಳಿದ.

ಅರೇ ನೀವೂ ಇಲ್ಲಿ ಏನ್ ಮಾಡ್ತಿದ್ದೀರಾ ಎಂದು ಕೇಳುವ ಹೊತ್ತಲ್ಲೆ ಅ ಹುಡುಗ ಕೂಡ ಹೊರಬಂದ ಇಬ್ಬರನ್ನು ಕಟ್ಟಿ ಹಾಕಿದ ಇವನು . ಮೂರು ಜನ ಒಟ್ಟಿಗೆ ಸೇರಿದರು ಕಾನ್ಸಸ್ಟೇಬಲ್,ಕಳ್ಳ ಹುಡುಗ ಮತ್ತು ನಮ್ಮ ನಾಯಕ ಮೂಖ ಮೂಖ ನೋಡಿಕೊಂಡರು ಪೊಲೀಸ್ ಕಾನ್ಸಸ್ಟೇಬಲ್ ಗೆ ಇರಿಸುಮುರಿಸು ಆಯಿತೂ ಏನು ಹೇಳಬೇಕೂ ಎಂದು ತೋಚಲಿಲ್ಲ ನಮ್ಮ ನಾಯಕನ ಕೈ ಗೊಂಬೆಯಾಗಿ ಹೋದ .

ನಮ್ಮ ನಾಯಕ ಇವರಿಬ್ಬರಿಗೂ ಒಂದೆಡೆ ಸೇವರುವಂತೆ ಹೇಳಿದ ಅದೊಂದು ಪಾಳು ಬಿದ್ದಿದ್ದ ಜಾಗ ಯಾರನ್ನು ಯಾರು ಹೊಡೆದು ಹಾಕಿದರು ಕೇಳುವವರಿಲ್ಲ ಅಂತಹ ಜಾಗದಲ್ಲಿ 4ಜನ ಸೇರಿದರು ಕಾನ್ಸಸ್ಟೇಬಲ್,ಕಳ್ಳ ಹುಡುಗ ,ನಾಯಕ ಮತ್ತು ವಾಸಿರ್

ನಮ್ಮ ನಾಯಕ ನನ್ನದೊಂದು ಪ್ಲಾನ್ ಇದೆ ಅ ಪ್ಲಾನ್ ಪ್ರಕಾರ ಮಾಡಿದ್ರೆ ನಾವು ಈ ಚಿಲ್ಲರೆ ಜೀವನ ಬಿಟ್ಟು ಸಖತ್ ಹಾಗಿ ರಾಯಲ್ ಜೀವನ ಮಾಡ್ಬಹುದು.

ವಾಸಿರ್: ಹೇಗೆ ?

ಕಾನ್ಸ ಸ್ಟೇಬಲ್ : ಏನು ಕಳ್ಳತನ ಮಾಡ್ಬೇಕಾ ಬ್ಯಾಂಕ್ ಲೂಟೀನಾ ?

ನಾಯಕ : ಇಲ್ಲ ನೀವೂ ಯೊಚಿಸೋ ಹಾಗೇ ಇಲ್ಲ ಅದ್ರೆ ಈಗ ನಾನು ಹೇಳೋಕ್ಕೆ ಹೊಗ್ತಿರೋದು ಸ್ವಲ್ಪ ಡಿಫರೆಂಟ್ ಹೇಗೆ ಅಂದ್ರೆ ನಾವು ಫೋನ್ ಕಳೆದು ಹೋದ್ರೆ ಏನ್ ಮಾಡ್ತೀವಿ.

ವಾಸಿರ್ : ತುಂಬಾ ಎಕ್ಸ್ಪೆನ್ಸಿವ್ ಆಗಿದ್ರೆ ಕಂಪ್ಲೇಂಟ್ ಇಲ್ಲ ಅಂದ್ರೆ ಬೇರೆ ಫೋನ್,

ಕಾನ್ಸಸ್ಟೇಬಲ್ : ಈ ತರಹದ ಕೇಸ್ ನಲ್ಲಿ ಎಲ್ಲರ ಫೋನ್ ಸಿಗುತ್ತೆ ಅನ್ನೋದು ಅನುಮಾನ ಸಿಕ್ಕಿದೃ 100 ಒಂದು 20 ಜನ ಸಿಗಬಹುದು ಅಷ್ಟೆ.

ಕಳ್ಳ : ಸಿಕ್ಕದ ಫೋನ್ ಹತ್ತು ನಿಮಿಷದಲ್ಲೆ ಸ್ವಿಚ್ ಆಫ್ ಮಾಡಿ ಸಿಮ್ ಬಿಸಾಕಿ ಯಾವುದಾದು ಅಂಗಡಿ ಇಲ್ಲ ಸಂಡೆ ಬಾಜರ್ ನಲ್ಲಿ ಮಾರ್ತಿವಿ.

ನಾಯಕ : ನಿಮ್ಮ ಮಾತೆಲ್ಲಾ ಒಪ್ಪ್ತಿನಿ ಅದ್ರೆ ಅ ಹುಡುಗ ಹೇಳೋ ಹಾಗೇ 10 ನಿಮಿಷದಲ್ಲಿ ಫೋನ್ ಸಿಮ್ ಬಿಸಾಕಿತಿನಿ ಅಲ್ವಾ.

ಸೋ ಅದೇ ಹತ್ತು ನಿಮಿಷದಲ್ಲಿ ನಾವು ಅ ಫೋನ್ ಹ್ಯಾಕ್ ಮಾಡಿ ಅದರಲ್ಲಿ ಇರೋ ಡೀಟೇಲ್ಸ್ ಕಲೆಟ್ ಮಾಡಿ ಅವನ ಅಕೌಂಟ್ ನಿಂದ ಹಣ ನಮ್ಮ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡ ಬಿಡಣಾ.

ಕಾನ್ಸಸ್ಟೇಬಲ್ : ಇದು ಸಾಧ್ಯನಾ ?

ವಾಸಿರ್ : ಇದೇನೋ ನೀನು ಹೇಳ್ತಿರಿರೊದು.

ನಾಯಕ ; ಹೌದು ನಾವು ಬೇರೆಯವರ ತರ ಬದುಕೋ ಬದಲು ನಮ್ಗೊಸ್ಕರ ಬದಕನಾ .ಕಾನ್ಸ ಸ್ಟೇಬಲ್ ಸರ್ ನಿಮ್ಮಲಿ 5 ಜನ ಇದೀರಾ ಅಮ್ಮ ಅಪ್ಪ ಹೆಂಡತಿ ಮಗು ಅಪ್ಪ ಹಾರ್ಟ್ ಪೇಶೆಂಟ್,ಅಮ್ಮಗೆ ಅಸ್ತಮಾ ಇಬ್ಬರಿಗೂ ಸರಿಯಾಗಿ ನೋಡಿಕೊಳ್ಳಲಿಲ್ಲ ಅಂದ್ರೆ ಪ್ರಾಣಕ್ಕೆ ಅಪಾಯ, ಇನ್ನು ನಿಮ್ಮ ಮಗಳು ಈಗ ಎಸ್ ಎಸ್ ಎಲ್ ಸಿ ಮುಂದೆ ಚೆನಾಗೀ ಓದಿಸ ಬೇಕೂ ಅನ್ಕೋಂಡಿರಾ ಅದ್ರೆ ನಿಮಗೆ ಶುಗರ್ ಕಂಪ್ಲೇಂಟ್ ಇದೆ.ಮೈಲ್ದ್ ಆಗಿ ನಿಮಗೂ ಹಾರ್ಟ್ ಆಟಾಕ್ ಆಗಿದೆ ಯೋಚ್ನೆ ಮಾಡಿ.

ನೀನು ಛೊಟು ನಿನ್ನ ತಮ್ಮ ಇದೀರಾ ಅಪ್ಪ ಅಮ್ಮ ಯಾರು ಇಲ್ಲ ನಿನ್ನ ತಮ್ಮ ಹಾಸ್ಟಲ್ ನಲ್ಲಿ ಓದತಿದ್ದಾನೇ ಅವನ್ನ ಚೆನ್ನಾಗಿ ಓದಿಸಬೇಕೂ ಅನ್ಕೋಡಿದ್ದೀಯಾ ಅದ್ರೆ ನಿನ್ ಮಾಡ್ತಿರೋ ಕೆಲಸದಲ್ಲಿ ಬರೋದು ಪುಡಿಗಾಸು ಮುಂದೆ ಏನ್ ಮಾಡ್ತೀಯಾ.

ವಾಸಿರ್ : ಅಪ್ಪ ಇಲ್ಲ ಅಮ್ಮಿ ಇದಾರೇ ಜೊತೆಗೆ ಸಾಲ ತಂಗಿ ಶಾಧಿಯಿದೆ ಹುಡುಗ ಮನೆಯವರು 5ಲಕ್ಷ ಡೌರಿ ಕೆಲ್ತಿದ್ದಾರೇ.

ಇನ್ನು ನಾನು ಹಿಂದೆ ಮುಂದೆ ಯಾರು ಇಲ್ಲ ಸತೃ ಕೆಳೋರಿಲ್ಲ

ಲೈಫ್ ಹೀಗೆ ಇದೆ ಎಷ್ಟು ಕೆಲಸ ಮಾಡಿದ್ರು ಬೆನ್ನ ತಟ್ಟೋರು ಇಲ್ಲ ಎಲ್ಲಾ ಸ್ವಾರ್ಥಿಗಳು . ಸಾಕಾಗಿದೆ ಇನ್ನು ಈ ರೀತಿ ಬದುಕೋದು ಇವಗಾ ಎನಿದೃ ಡಿಸ್ಕವರಿ ಚಾನಲ್ ಬರೋ ಪ್ರಾಣಿ ಹಾಗೇ ನಮ್ ಲೈಫ್ ಬೇಟೆ ಆಡಿ ಜೀವನ ಮಾಡ್ಬೇಕು ಹೊಂಚು ಮಾಡಿ ಸಂಚು ಮಾಡಬೇಕೂ.

ಎಲ್ಲರೂ ಬೇರೆ ಜಾತಿ,ಬೇರೆ ಧರ್ಮ , ಬೇರೆ ಕೆಲಸ ಆದ್ರೆ ಮಾಡ್ತಿರೋದೂ ಒಂದೇ ಅದೇ ಹೊಟ್ಟೆಗಾಗಿ ಸೋ ಈ ಕೆಲಸದಿಂದ ಎಲ್ಲರಿಗೂ ನೆಮ್ಮದಿ ಅ ನೆಮ್ಮದಿ ಸಿಕ್ಕದ ಮೇಲೆ ಎಲ್ಲಾ ಸ್ಟಾಪ್ ಓಕೆ ನಾ.

ನಾಯಕ " TAKE YOUR OWN TIME BUT YOUR DECISION WILL BE CORRECT "

ಎಲ್ಲರೂ ಅಲ್ಲಿಂದ ನಿರ್ಗಮಿಸಿದರು ಅವರ ಕೆಲಸದಲ್ಲಿ ತೊಡಗಿಕೊಂಡರು ಸಮಯ ಸಾಗುತಿದೆ. ರಾತ್ರಿ ಮಲಗುವಾಗಲೂ ಕೂಡ ಅದೇ ಆಲೋಚನೆ ಒಂದಷ್ಟು ಘಟನೆಗಳು ಅವರನ್ನ ಅವರಿಸೀದೆ.

ಕಳ್ಳ ಹುಡುಗ ತನ್ನ ತಮ್ಮನ ಹಾಸ್ಟೆಲ್ ಬಳಿ ಹೋಗಿ ಮಾತನಾಡಿಸಿ ಕೊಂಡು ಬರುವಾಗ ಹೆಡ್ ಮಾಸ್ಟರ್ ಇವನ್ನು ಕರೆದು.

ಮಾಸ್ಟರ್ ; ನೋಡು ನಿನ್ನ ತಮ್ಮ ಚೆನ್ನಾಗಿ ಓದ್ದುತಿದ್ದಾನೇ ಅವನ ವಿಧ್ಯಾಭ್ಯಾಸ ಮುಂದುವರಿಬೇಕೂ ಅಂದ್ರೆ ಅವನಿಗೆ ಈಗ ಪುಸ್ತಕಗಳ ಅನಿವಾರ್ಯ ಇದೆ ನಮ್ಮ ಲೈಬ್ರರಿಯಲ್ಲಿ ಅ ಪುಸ್ತಕಗಳಿಲ್ಲ ಅದಕ್ಕೆ ಸುಮಾರು 10 ರಿಂದ 15 ಸಾವಿರ ರುಪಾಯಿಗಳ ಖರ್ಚು ತಗಲುತ್ತದೆ. ಈಗ ನೀನು ಕೊಡುತ್ತಿರುವ ಫೀಸ್ ಸಾಕಾಗುತಿಲ್ಲ ಅವನ ಬಟ್ಟೆ ಬರೇ ,ಎಕ್ಸಾಂ ಫೀಸ್,ಹಾಸ್ಟಲ್ ಚಾರ್ಜ್,ಊಟ ಎಲ್ಲಾ ನಿಭಾಯಿಸಲು ಸಾಧ್ಯವಾಗುತಿಲ್ಲ ಅದಕ್ಕೆ ನೀನು ಬೇರೆ ಸ್ಕೂಲ್ ಅಥವಾ ಕೊಡುವ ಹಣ ಹೇಚ್ಚಿಗೆ ನೀಡು ಬೇಕೂ ಎಂದು ಕೇಳುತಿದ್ದೇನೆ. ನಂಗೇ ಗೊತ್ತು ಈ ವಯಸ್ಸಲಿ ನೀನು ಮಾಡುತಿರುವುದು ಹೆಚ್ಚು ಆದ್ರೆ ನಂಗೇ ಬೇರೆ ಏನು ಉಪಾಯ ಹೊಳೆಯುತಿಲ್ಲ. ಇಷ್ಟು ಮಾತುಗಳನ್ನು ಕೇಳಿದ ಹುಡುಗ ಸರ್ ನೀವೂ ಹಣಕ್ಕೆ ಚಿಂತಿಸ ಬೇಡಿ ನಾನು ವ್ಯವಸ್ತೆ ಮಾಡುತ್ತೇನೆ ಅದ್ರೆ ಅವನನ್ನು ಈ ಸ್ಕೂಲ್ ನಿಂದ ಹೊರಗೆ ಹಾಕಬೇಡಿ ಎಂದು ಕೈ ಮುಗಿದು ಕೇಳಿ ಕೊಳ್ಳುವ.

ನಮ್ಮ ನಾಯಕ ತನ್ನ ಪ್ಲಾನ್ ನನ್ನು ಮತಷ್ಟೂ ತೀಕ್ಷ್ಣ ಮಾಡಿಕೊಂಡ ಸ್ವಲ್ಪ ಬೇರೆ ರೀತಿ ಆಲೋಚಿಸ ತೊಡಗಿದ ಸುಮಾರು ಹ್ಯಾಕರ್ ಜೊತೆಗೆ ಚಾಟ್ ಮಾಡಿದ ಮೇಲೆ ತನ್ನಗೆ ಸಹಾಯ ಮಾಡಲು ಕೇಳಿಕೊಂಡ.

ಹ್ಯಾಕರ್ : ನಿರಾಕರಿಸಿದಾ ತದ ನಂತರ 50ಲಕ್ಷ ನೀಡುವಂತೆ ಹೇಳಿದ .

ನಾಯಕನಿಗೆ : ಅಷ್ಟು ಹಣ ನನ ಬಳಿ ಇಲ್ಲ ಅ ರೀತಿ ನನಲ್ಲಿ ಇದ್ರೆ ನಾನು ಈ ಕೆಲಸಕ್ಕೆ ಕೈ ಹಾಕುತಿರಲಿಲ್ಲ.

ಹ್ಯಾಕರ್ : ಸರಿ ನಾನು ನಿನ್ನೊಡನೆ ಕೆಲಸ ಮಾಡುವೆ ಆದ್ರೆ ನೀನು ಈ ಕೆಲಸದಲ್ಲಿ ಕೇವಲ 60 ಷೇರ್ ನಿನ್ನದು ಉಳಿದ ಬಾಕಿ 40 ಪರ್ಸೆಂಟ್ ನನ್ನದು.

ನಾಯಕ : ಒಪ್ಪಿಕೊಂಡ.

ಆ ಸಮಯಕ್ಕೆ ಕಾನ್ಸ ಸ್ಟೇಬಲ್ ಮನೆಯಲ್ಲಿ ಒಂದು ಘಟನೆ ಸಂಭವಿಸಿತು ಅದು ಅಪ್ಪ ತುಂಬಾ ಸಿರಿಯಾಸ್ ಆಗಿದ್ದಾರೆ ಎಂದು ಹೆಂಡತಿ ಫೋನ್ ಮಾಡಿ ಹೇಳಿದಳು .

ಕಾನ್ಸ ಸ್ಟೇಬಲ್ ಎದ್ದೂ ಬಿದ್ದು ಅಸ್ಪತ್ರೆಗೆ ಧಾವಿಸಿದ ಡಾಕ್ಟರ್ ಹೊರಬಂದು ನೋಡಿ ನಿಮ್ಮ ತಂದೆಗೆ ತುಂಬಾ ಪ್ರಾಬ್ಲಮ್ ಆಗಿದೆ ಅವರಿಗೆ ಇಮಿಡಿಯಾಟ್ ಆಪರೇಶನ್ ಮಾಡಬೇಕೂ ಸುಮಾರು 15ಲಕ್ಷ ಆಗುತ್ತೇ

ನೀವೂ ಎಷ್ಟು ಬೇಗಾ ಅರೇಂಜ್ ಆಗುತ್ತೊ ಅಷ್ಟು ಒಳ್ಳೆದು.

ಕಾನ್ಸ ಸ್ಟೇಬಲ್ ಏನು ಮಾಡಬೇಕೂ ಎಂದು ಯೋಚಿಸಿದ ಯಾರು ಬಳಿ ಕೇಳಿದರು ಇಲ್ಲ ಎನ್ನುವ ಮಾತೇ ಹೊರೆತು ಇದೆ ಅಂಥ ಹೇಳಿದವರು ಯಾರು ಇಲ್ಲ.

ಇತ್ತ ವಾಸಿರ್ ತಾಯಿ ಅರೇ ಭಾಯೀ.. ಭಾಯೀ ..ಮಗಲ್ದು ಮದುವೆ ಇದೆ ಈಗ ಹಣ ಕೇಳಿದ್ರೆ ಹೇಗೆ ನಿಮ್ಮ ಸಾಲ ಬೇಗಾ ತಿರ್ಸ್ತಿನಿ ಸ್ವಲ್ಪ ಟೈಮ್ ಕೊಡಿ ಎಂದು ಕಾಲು ಹಿಡಿದು ಬೇಡಿದಳು.ಅವಳು ಕಾಲು ಹಿಡಿಯುವ ಘಟನೆ ರಸ್ತೆಯ ಜನ ಎಲ್ಲಾ ನೋಡುತಿದ್ದರು. ಕೆಲಸ ಮುಗಿಸಿ ಬರುತಿದ್ದ ವಾಸಿರ್ ಬೈಕನಿಂದ ಕೆಳಗಿಳಿದು ನೋಡಿದ ಮನೆ ಮುಂದೆ ನೂರಾರು ಜನರು ಮನೆಯ ಮುಂದೆ ಜಾಮಾಯಿಸಿರುವುದನ್ನು ನೋಡಿ ಗಾಬರಿಗೊಂಡು ನೋಡಿದ ತಾಯಿ ಸಾಲ ನಿಡಿದ ವ್ಯಕ್ತಿಯ ಕಾಲು ಹಿಡಿದುಕೊಂಡು ಇರುವುದು ನೋಡಿ ಅಮ್ಮಿ....ಅಮ್ಮಿ...ಎಂದು ಕಣ್ಣೀರು ಇಡುತ್ತ ಅವನಿಗೆ ಸಾಲ ಅದೆಷ್ಟು ಬೇಗಾ ತಿರ್ಸ್ತಿನಿ ಎಂದು ಹೇಳಿ ಎಲ್ಲವನ್ನು ತಿಳಿ ಮಾಡಿ ಕಳುಹಿಸಿದ.

ಎಲ್ಲರೂ ನಮ್ಮ ನಾಯಕನಿಗೆ ಕರೆ ಮಾಡಿ ನನಗೆ ಹಣ ಬೇಕೂ ನೀನು ಏನು ಹೇಳಿದರು ಮಾಡೋಕ್ಕೆ ರೆಡಿ ಎಂದು ಹೇಳಿದರು.

ಕಳ್ಳ ಹುಡುಗನಿಂದ ಈ ಕೆಲಸ ಶುರುಮಾಡಿದ. ಅವನ ಹೆಸರು

ಜೀವಾ.

ಜೀವಾ ; ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತ ಅವನ ಬಳಿ ಹೋಗಿ ಅಳುತ್ತಾ ತನ್ನ ಕಳ್ಳ ನಾಟಕವಾಡಿದ ಅವನ ಮೊಬೈಲ್ ನಿಂದ ಸೀದಾ ಹ್ಯಾಕರ್ ಸಿದ್ದ ಪಡಿಸದ ಒಂದು ವೆಬ್ ಪೇಜ್ ಓಪನ್ ಮಾಡಿದ 20 ಸೆಕೆಂಡ್ಗಳಲ್ಲಿ ಫೋನ್ ಹ್ಯಾಕ್ ಆಯಿತೂ. ವಾಪಸ್ ಮಾಡುವಂತೆ ಹೇಳಿದ

ಸರಿಯೆಂದು ಜೀವಾ ಫೋನ್ ಪುನ ಅವನಿಗೆ ನೀಡಿ ಹೋದ.

ಈ ಹಿಂದೆ ಅಂದುಕೊಂಡ 10 ನಿಮಿಷದ ಕೆಲಸ 30 ಸೆಂಕ್ದ್ ಗೆ ಇಳಿತು.

ಹ್ಯಾಕರ್ ಅವನ ಮೊಬೈಲ್ನಲ್ಲಿರುವ ಒಂದೋದೆ ಮಾಹಿತಿ ಕಲೆ ಹಾಕಿದ ಅವನ ಕಾಲ್ ಇತಿಹಾಸದಲ್ಲಿ 10 ಬಾರಿ ಒಂದೇ ಬ್ಯಾಂಕಿಗೆ ಕರೆ ಮಾಡಿದ ಅದು ನ್ಯಾಷನಲ್ ಬ್ಯಾಂಕ್ ಒಂದು ಆಗಿತ್ತು. ಹಾಗೇ ಅವನು ಓಪನ್ ಮಾಡಿದ ಕೆಲವೊಂದು ವೆಬ್ ಪೇಜ್ ಗಮನಿಸಿದ ಅದರಲ್ಲಿ ಒಂದು ಬಾರಿ ಬ್ಯಾಂಕ್ ವೆಬ್ ಪೇಜ್ ಭೇಟಿ ನೀಡಿದ. ತಲೆಗೆ ಸ್ವಲ್ಪ ಕೆಲಸ ಕೊಟ್ಟು ಅವನ ಅಕೌಂಟ್ ಹ್ಯಾಕ್ ಮಾಡಿ ಬಿಟ್ಟ ಅವನ ಅಕೌಂಟ್ ನಲ್ಲಿ 50 ಸಾವಿರ ಮೊತ್ತವನ್ನು ಮತೊಂದು ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿದ.

ಫೋನ್ ವಾಪಸ್ ಪಡೆದ ವ್ಯಕ್ತಿಗೆ ಸ್ವಲ್ಪ ಸಮಯದ ನಂತರ ಬ್ಯಾಂಕ್ ನಿಂದ ಒಂದು ಮೆಸೇಜ್ Rs50,000(××××××780) amount on 21-07-20 18:42:49 (Avlbl Bal Rs.74.94) AT MUMBAI MAIN OFFICE,MUMBAI.(24X7)

ಈ ರೀತಿ ಮೇಸೆಜ್ ಬಂತು ಅ ವ್ಯಕ್ತಿ ನೋಡಿ ಶಾಕ್ ಆದಾ ಇದೇನೀದೂ ಈ ರೀತಿ ಮೆಸೇಜ್ ಬಂತು ಎಂದು ಕೂಡಲೇ ಬ್ಯಾಂಕ್ ಫೋನ್ ಮಾಡಿ ವಿಚಾರಿಸಿದಾ ಹೌದು ಎಂದು ಉತ್ತರ ಬಂತು ನಿಮ್ಮ ಅಕೌಂಟ್ ನಿಂದ ಹಣ ವರ್ಗಾವಣೆಯಾಗಿದೆ ಎಂದು.

ಹೀಗೆ ಇವರು ಒಂದೇ ಜಾಗವನ್ನು ಬಿಟ್ಟು ಬೇರೆ ಜಾಗಗಳಲ್ಲಿ ಬೇರೆ ಊರುಗಳಲ್ಲಿ ಮಾಡಲು ಶುರು ಮಾಡಿದರು.

ಹೀಗಾಗಿ ಇವರ ಕೆಲಸ ಬಹಳ ಸರಾಗವಾಗಿ ನಡೆಯಿತಿತ್ತು .

ಅದಾಗಲೇ ಸುಮಾರು 3ತಿಂಗಳಲ್ಲಿ ಒಂದು ಕೋಟಿಯಷ್ಟೂ ಹಣ ಸಂಗ್ರಹಣೆಯಾಗಿತ್ತು.

ಪೊಲೀಸ್ ಕಾನ್ಸಸ್ಟೇಬಲ್ ತನ್ನ ತಂದೆಯ ಆಪರೇಷನ್ ಮಾಡಿಸಿದ,ವಾಸಿರ್ ತನ್ನ ತಂಗಿಯ ಮದುವೆ ಹಾಗು ಸಾಲ ತೀರಿಸಿದ. ಜೀವಾ ತನ್ನ ತಮ್ಮನ ಓದಿಗೆ ಸಾಕಾಗುವಷ್ಟೂ ಹಣ ಬ್ಯಾಂಕ್ ನಲ್ಲಿ ಇರಿಸಿದ್ದ.

ಈ ಕೆಲಸವನ್ನು ಇಲ್ಲಿಗೆ ನಿಲ್ಲಿಸಿದ್ದರು. ಮುಂದೆ ಇದನ್ನೆ ನಾವು ಮಾಡುತಿದ್ದರೆ ನಾವು ಸಿಕ್ಕಿ ಹಾಕಿ ಕೊಳ್ಳಬಹುದು ಎಲ್ಲರೂ ನಿಮ್ಮ ನಿಮ್ಮ ಎಚ್ಚರಿಕೆಯಲ್ಲಿ ಇರಿ ಸ್ವಲ್ಪವು ಅನುಮಾನ ಬರದ ಹಾಗೇ ನೀವೂ ನೋಡಿಕೊಳ್ಳಬೇಕೂ.

ಓದುಗರೆ ಕಥೆಯ ಒಂದು ಭಾಗ ಓದಿ ಮುಗಿಸಿರುವಿರಿ ಸ್ವಲ್ಪ ನಿಮ್ಮ ಬಾಯಿಗೆ ಕಣ್ಣಿಗೆ ಸ್ವಲ್ಪ ವಿಶ್ರಾಂತಿ ಕೊಡಿ ಈಗ ಬ್ರೇಕ್ ಟೈಮ್.

ಆದ್ರೆ ಇವರು ಏನೋ ಕೆಲಸ ನಿಲ್ಲಿಸಿ ಬಿಟ್ಟರು ಆದ್ರೆ ಇವರು ಮಾಡಿದ ಪಾಪ ಇವರನ್ನು ಬಿಡ ಬೆಕ್ಕಲ್ಲಾ ಅದು ಇವರನ್ನೆ ಆರಿಸಿ ಬಂತು.

ಇವರು ಮಾಡಿದ ಕಳ್ಳತನ್ದಲ್ಲಿ ಒಬ್ಬ ಬೃಹತ್ ವ್ಯಕ್ತಿಯ ಹಣ ಕೂಡ ಕಳೆದು ಕೊಂಡಿದ್ದ. ಅವನು ಬೇರೆಯಾರು ಅಲ್ಲ ಪೊಲೀಸ್ ಸಾಹೇಬ ಅಭಿ ಅವನ ಅಕೌಂಟ್ ನಿಂದ ಸುಮಾರು 10ಲಕ್ಷ ಖಾಲಸ್ ಆಗಿತ್ತು. ಎಲ್ಲಾ ಕಡೆಯೂ ತನಿಖೆ ನಡಿಸಿದ ಆದ್ರೆ ಒಮ್ಮೆ ತನ್ನ ಸ್ನೇಹಿತ ವೇಣು ಕರೆ ಮಾಡಿ ವಿಚಾರ ತಿಳಿಸಿದ. ವೇಣು ಒಂದು ಕೆಲಸ ಮಾಡೂ ನಾಳೆ ನನ್ನ ಆಫಿಸ್ಗೆ ಬಾ ನಾನು ನೋಡ್ತಿನಿ ಎಂದು ಭರವಸೆ ನೀಡಿದ.

ಅಭಿ ಅವನ ಮಾತಿನ್ದ ಕೊಂಚ ಸಮಾಧಾನವಾಯಿತು ಹೇಗೊ ನಾಳೆ ಬಾ ಎಂದು ಹೇಳಿದ್ದನಲ್ಲ ಎಂದು ನೆಮ್ಮದಿಯಿಂದ ಊಟ ಮುಗಿಸಿ ಮಲಗಿದ.

ಬೆಳಗ್ಗೆ 10 ಗಂಟೆ ಎಂದು ಠಣ್.... ಠಣ್....ಠಣ್ ಬೆಲ್ ಬಾರಿಸಿತು ಸೀದಾ ರೆಡಿಯಾಗಿ ವೇಣುವಿನ ಆಫೀಸ್ ಕಡೆ ಹೆಜ್ಜೆ ಹಾಕಿದ.

ವೇಣು ಇನ್ನು ಆಫೀಸಗೆ ಬಂದಿರಲಿಲ್ಲ ಅವನಿಗೋಸ್ಕಾರ ಗೆಸ್ಟ್ ರೂಮ್ನಲ್ಲಿ ಕುಳಿತ್ದ. ಎರಡೇ ನಿಮಿಷದಲ್ಲಿ ಕೆಲಸಗಾರನೊಬ್ಬ ಸರ್ ವೆರಿ ಗುಡ್ ಮಾರ್ನಿಂಗ್ ಎಂದು ಶುಭ ಕೋರಿ ಏನು ಕುಡಿಯುತ್ತಿರ ಎಂದು ವಿಚಾರಿಸಿದ.

ಅಭಿ : ಒಂದು ಲೋಟ ನೀರು ಕೊಡಿ ಅಂಡ್ ಒನ್ ಕಪ್ ಕಾಫಿ 2ಕ್ಯೂಬ್ ಶುಗರ್ ಎಂದು ಹೇಳಿದ.

ಮತ್ತೆರಡು ನಿಮಿಷದಲ್ಲಿ ಕಾಫಿ ಬಂತು ಹ್ಯಾರಿಸ್ ಪೇಪರ್ ನೋಡುತ್ತ ಕುಡಿಯುತಿದ್ದ.

ವೇಣು ಆಫೀಸ್ ಎಂಟ್ರಿಯಾದ ಸೆಕ್ರೆಟರಿ ಇವತ್ತಿನ ಕೇಸ್ಗಳ ಬಗ್ಗೆ ಮಾಹಿತಿ ನೀಡಿದಳು ಆಗ ಗಮನಿಸುತ್ತ ಹ್ಯಾರಿಸನನ್ನು ನೋಡಿ ಹೇ ಹ್ಯಾರಿಸ್ ಯಾವ್ಗ ಬಂದೇ .

ಅಭಿ : ಈಗ ಒಂದು 5ನಿಮಿಷವಾಯಿತು.

ವೇಣು : ಓಕೆ ಕಮ್ ಮೈ ರೂಮ್ ಎಂದು ಕರೆದುಕೊಂಡು ಹೋದ.

ಇಬ್ಬರು ಕುಳಿತು ಮಾತನಾಡುತಿದ್ದಾಗ ವೇಣು ತನ್ನ ಕೆಲಸಗಾರನಿಗೆ ಕಾಫಿ ಹೇಳಿದ ಆಗ ಹ್ಯಾರಿಸ್ ಹೇ ನಂಗೇ ಬೇಡ ನಂದು ಜಸ್ಟ್ ಈಗ ಇಲ್ಲೇ ಆಯಿತೂ ನೀನು ಕುಡಿ ಎಂದು ಹೇಳಿದ.

ವೇಣು ತನ್ನೊಬ್ಬನಿಗೆ ಹೇಳಿ ಫೋನ್ ಕಟ್ ಮಾಡಿದಾ.

ಹ್ಮ್.....ಮತ್ತೆ ಹ್ಯಾರಿಸ್ ... ಹೇಗಿದ್ದಾರೆ ಅಪ್ಪ ಅಮ್ಮ....ಎಂದು ಕುಶಲೋಪರಿ ವಿಚಾರಿಸಿದ .

ಅಭಿ : ಗುಡ್ ಎಲ್ಲಾ ಚೆನ್ನಾಗಿದ್ದಾರೆ. ಮತ್ತೆ ನಿಂದೂ

ವೇಣು : ನೈಸ್ ... ಕಾಫಿ ಬಂತು ವೇಣು ಥಾಂಕ್ ಯು

ಎಂದು ಕೆಲ್ಸಗಾರಿನಿಗೆ ಹೇಳಿದ.

ಅಭಿ ಬಾಯಿ ತೆರೆದು ನಿನ್ನ ಅಫ್ಫಿಸ್ ತುಂಬಾ ಚೆನ್ನಾಗಿದೆ ಹಾಗೇ ಇಲ್ಲಿನ ಟ್ರೀಟ್ ಮೆಂಟ್ ಕೂಡ ನಂಗೇ ತುಂಬಾ ಇಷ್ಟ ಆಯ್ಥಿತು ಕಣೋ.

ವೇಣು : ಥಾಂಕ್ ಯು ಹ್ಮ್..... ಅಭಿ ಈಗ ಹೇಳು ನಿನ್ನ ಕೇಸ್ ಬಗ್ಗೆ.

ಅಭಿ : ಏನು ಹೇಳಲಿ ವೇಣು ನಾನು ಆದಿನ ಡ್ಯೂಟಿ ರಜಾ ಹಾಕಿ ಅಪ್ಪ ಅಮ್ಮ ಜೊತೆ ದೇವಸ್ಥಾನಕ್ಕೆ ಹೋಗಿದೆ.ಮತ್ತೆ ವಾಪಸ್ ಮನೆಗೆ ಬಂದೇ ಆಗ ನನ್ನ ಮೊಬೈಲ್ಗೆ ಒಂದು ಮೆಸ್ಜ್ ಬಂತು ನಿಮ್ಮ ಅಕೌಂಟ್ ನಿಂದ 10ಲಕ್ಷ ಟ್ರಾನ್ಸ್ಫರ್ ಎಂದು ನಂಗೇ ಅದನ್ನು ನೋಡಿ ಶಾಕ್ ಆದೇ ಮತ್ತೆ ಅದನ್ನು ಖಾತರಿ ಪಡಿಸಿಕೊಳ್ಳಲು ಬ್ಯಾಂಕ್ಗೆ ಕಾಲ್ ಮಾಡಿದ್ರೆ ಅವ್ರು ಹೌದು ಟ್ರಾನ್ಸ್ಫರ್ ಆಗಿದೆ ಎಂದು ಹೇಳಿದ್ದಾರೆ. ಈಗ ಏನು ಮಾಡುವುದು ಅಂಥ ತಿಳಿತಿಲ್ಲ.

ವೇಣು : ಓಕೆ ನಿನ್ನ ಮೊಬೈಲ್ ನಲ್ಲಿ ಇತ್ತೀಚೆಗೆ ಏನಾದರು ಮೆಸೇಜ್ ಲಕ್ಕಿ ಕೂಪನ್ ,ಕ್ಯಾಶ್ ಬ್ಯಾಕ್ ಅಂಥ ಏನಾದರು ಮೆಸೇಜ್ ಬಂದು ನೀನು ಏನಾದರು ಅದರ ಮೇಲೆ ಕ್ಲಿಕ್ ಮಾಡಿದ್ದೀಯಾ. ನಿನ್ನ ಕಾರ್ಡ್ ಯಾರಿಗಾದ್ರೂ ನೀಡಿದ್ದಿಯಾ ಹೇಗೆ ?

ಅಭಿ : ಇಲ್ಲ...ಹಾಗೇ ನಾನು ಯಾರಿಗೂ ಕೊಟ್ಟಿಲ್ಲ.

ವೇಣು : ಮತ್ತೊಮ್ಮೆ ನೆನಪು ಮಾಡಿಕೋ

ಅಭಿ : ಹ್ಹ.... ಒಂದು ದಿನ ನನ್ನ ಫ್ರೆಂಡ್ಗೆ ಹೇಳಿದ್ದೇ ಬಟ್ ಆದ್ರೆ ಅವನು ಆ ರೀತಿ ಮನುಷ್ಯ ಅಲ್ಲ

ವೇಣು : ಯಾರದೂ ?

ಅಭಿ : ಕುಶಾಲ್ ಅಂಥ ನನ್ನ ಜೊತೆಗೆ ವರ್ಕ್ ಮಾಡ್ತಾನೆ ಈಗ ಅವನಿಗೆ ಮೈಸೂರಿಗೆ ಟ್ರಾನ್ಸ್ಫರ್ ಆಗಿದೆ.

ವೇಣು ; ನಿನಗೆ ಮೆಸ್ಜ್ ಯಾವಾಗ ಬಂತು ಅಂದೇ?

ಅಭಿ : ಒಂದು ನಿಮಿಷ ನೋಡ್ತಿನಿ ಇರು ಹ್ಮ್.....ಹ್ಹ...ಸಿಕ್ಕ್ತು 26 ಮೇ 2019 ಟೈಮ್ 10:10:10

ವೇಣು : ಓಕೆ ಹ್ಮ್..... ಆದಿನ ನಿನಗೆ ಯಾವುದಾದರು ಕಾಲ್ ಬಂದಿತ್ತ ಕಸ್ಟಮರ್ ಕೇರ್ ಅಂತ ಹೆಲ್ಕೊಂಡು

ಅಭಿ: ಇಲ್ಲ ಆ ರೀತಿ ಕರೆ ಬಂದ್ರೆ ಗೊತಾಗುತ್ತೆ ಅಲ್ವಾ ture ಕಾಲ್ರ್ ನಿಂದ.

ವೇಣು ; ನೋಡು ಇಲ್ಲ ನಂಬರ್ ನಿಂಗೆ ture ಕಾಲ್ರ್ ನಲ್ಲಿ ಸಿಗೋದಿಲ್ಲ ಕೆಲವೊಂದು ಮಾತ್ರ ನಿನಗೆ ಸಿಗುತ್ತೆ?

ಅಭಿ : ಅದು ಹೇಗೆ

ವೇಣು : ಓಕೆ ಒಂದು ಉದಾಹರಣೆ ನಿಂಗೆ ತೊರ್ಸ್ತಿನಿ .ಇದು ನನ್ನ ಫೋನ್ ನಾನು ನಿನಗೆ ಕಾಲ್ ಮಾಡ್ತೀನಿ ಓಕೆ

ಅಭಿ : ಹ್ಮ್ ತೋರ್ಸ್ತಿದೆ ನಿನ್ನ ಹೆಸರು

ವೇಣು: ಓಕೆ ಯಾಕೆ ಅಂದ್ರೆ ನನ್ನ ನಂಬರ್ ನಿನ್ನ ಬಳಿ ಇದೆ ಅದಕ್ಕೆ ಈಗ ಗೂಗಲ್ ನಲ್ಲಿ ನನ್ನ ನಂಬರ್ ಟೈಪ್ ಮಾಡೂ ನಿನ್ನ ಮೊಬೈಲ್ ನಲ್ಲಿ .

ಅಭಿ : ಟೈಪ್ ಮಾಡಿದ ತಕ್ಷಣ ತೋರಿಸ್ತು.

ವೇಣು : ಸರಿ ಈಗ ನಾನು ಹೇಳೋ ನಂಬರ್ ಟೈಪ್ ಮಾಡೂ ನಿನ್ನ ture ಕಾಲರ್ ಮತ್ತು ಗೂಗಲ್ ನಲ್ಲಿ ಓಕೆ

ಅಭಿ : ಸರಿ 8760187651 ಮಾಡಿ ಸರ್ಚ್ ಮಾಡಿದ ಸಿಗಲಿಲ್ಲ ಮತ್ತೆ ಪ್ರಯತ್ನಿಸಿದ ಸಿಗಲಿಲ್ಲ ವಾಪಸ್ ಗೂಗಲ್ ನಲ್ಲಿ ಹುಡುಕಿದ ಸಿಗಲಿಲ್ಲ your searching number 876018751 it's not found ಎಂದು ಹೇಳ ತೊಡಗಿತು .

ವೇಣು ; ಯಾಕೆ ಸಿಗುತ್ತಿಲ್ವಾ ಕಾರಣ ಏನು ಗೊತ್ತಾ ಈ ನಂಬರ್ ಯಾವುದೆ ಸಾಮಾಜಿಕ ಜಾಲ ತಾಣಗಳಲ್ಲಿ ಆಡ್ ಮಾಡಿಲ್ಲ ಹಾಗೇ ಯಾವುದೆ ಇಮೇಲ್ ನಲ್ಲಿ ಕೂಡ ಅಪ್ಲೋಡ್ ಆಗಿಲ್ಲ ಸೋ ಅವೊಂದು ಕಾರಣಕ್ಕೆ ನಿನಗೆ ಸಿಗೋದಿಲ್ಲ.

ನಿನಗೆ ಇನ್ನು ಅನುಮಾನವಿದ್ರೆ ಮತ್ತೆ ಒಂದು ನಂಬರ್ ಹೇಳ್ತೀನಿ ಟೈಪ್ ಮಾಡೂ 7089615431

ಅಭಿ : ಈ ನಂಬರ್ ನನ್ನು ture ಕಾಲ್ಲೆರ್ ನಲ್ಲಿ ಹುಡುಕಿದ ಸಿಗಲಿಲ್ಲ ಹಾಗೇ ಗೂಗಲ್ ಸರ್ಚ್ ಮಾಡಿದ ಸಿಗಲಿಲ್ಲ ಆಗ ಅವನಿಗೆ ಇದರ ಮೇಲೆ ನಂಬಿಕೆ ಹುಟ್ಟಿತು.

ವೇಣು: ಈಗ ಹೇಳು ಈ ರೀತಿ ನಿನಗೆ ಯಾವೂದಾದರು ಕಾಲ್ ಬಂದಿತ್ತ

ಅಭಿ : ಇಲ್ಲ ಕಾಣೋ

ವೇಣು ; ಓಕೆ ನಿನ್ನ ಫೋನ್ ಕೊಡು ಎಂದು ಫೋನ್ ಪಡೆದ ತನ್ನ ಅಸಿಸ್ಟೆಂಟ್ ಗೆ ಹೇಳಿ ಈ ಮೊಬೈಲ್ ನಲ್ಲಿರುವ ಎಲ್ಲಾ ಡೇಟಾ ಫೋನ್ ಕಾಲ್ ಹಿಸ್ಟರಿ,ಮೆಸ್ಜ್, ವೆಬ್ ಪೇಜ್, ಎಲ್ಲಾ ನಂಗೇ ಈಗ ಬೇಕೂ ಎಂದು ಹೇಳಿದ .

10 ನಿಮಿಷದ ಬಳಿಕ ಅವನ ಅಸಿಸ್ಟೆಂಟ್ ಬಂದು ವೇಣುವಿನ ಕಿವಿಯಲ್ಲಿ ವಿಷಯ ತಿಳಿಸಿ ಮೊಬೈಲ್ ಫೋನ್ ಕೊಟ್ಟು ಹೋದ.

ವೇಣು; ಓಕೆ ಎಂದು ಹೇಳಿ ಕಳುಹಿಸಿದ.

ಅಭಿ: ಅವನು ಹೋದ ಬಳಿಕ ಏನಾಯಿತು ?

ವೇಣು : ನಿಜ ಹೇಳು ಅಭಿ ನೀನು ಯಾರಿಗಾದರೂ ಫೋನ್ ಕೊಟ್ಟಿದ್ದ .

ಅಭಿ : ಇಲ್ಲ ಗೊತಿಲ್ಲದವರಿಗೆ ನಾನು ಫೋನ್ ಕೊಟ್ಟಿಲ್ಲ ಕಣೋ ನಿನಗೆ ಎಷ್ಟು ಬಾರಿ ಹೇಳಬೇಕು.

ವೇಣು : ಹೌದಾ ..... ನೋಡು ಎಂದು ತನ್ನ ಲ್ಯಾಪ್ ಟಾಪ್  ಅವನ ಕಡೆ ತಿರುಗಿಸಿ ಒಂದು ವೆಬ್ ಪೇಜ್ ನಾ ಲಿಂಕ್ ತೊರಿಸಿದಾ.

ಇದು ಯಾರು ಮಾಡಿದ್ದು.

ಅಭಿ : ಇಲ್ಲ ಈ ರೀತಿಯ ವೆಬ್ ಪೇಜ್ ನಾನು ಓಪನ್ ಮಾಡಿಲ್ಲ ಇದು ಖಂಡಿತ.

ವೇಣು: ಇಲ್ಲ ಈ ನಂಬರ್ಗೆ ಫೋನ್ ಯಾಕೆ ಮಾಡಿದ್ದೆ ಅದು ಹೇಳು.

ಅಭಿ : ವೇಣು ಹೇಳುತ್ತಿರುವ ಮಾತೇ ಅರ್ಥವಾಗುತಿಲ್ಲ ಅವನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ.

ವೇಣು : ಅಭಿ ನೀನು ದೇವಾಸ್ಥಾನಕ್ಕೆ ಹೋದ ಮೇಲೆ ಮತ್ತು ಬಂದಾಗ ಏನಿಲ್ಲಾ ನಡಿತು ನೆನಪಿಸಿಕೊ ಎಂದು ಹೇಳಿದ.

ಅಭಿ : ಒಂದೊಂದಾಗಿ ನೆನಪಿಸಿ ಕೊಳ್ಳುತ ಹೋದ ಆಗ ಅವನಿಗೆ ಥಟ್ ಎಂದು ಅ ಹುಡುಗ ನೆನಪಾದ.

ವೇಣು : ಏನಾದ್ರೂ ನೆನಪಿಗೆ ಬಂತ ?

ಅಭಿ : ವೇಣು ನಾನು ದೇವಸ್ಥಾನದಿಂದ ಹೊರಬರುವಾಗ ಒಬ್ಬ ಹುಡುಗ ಸಿಕ್ಕಿದ ಅದೇನು ಕಳೆದು ಕೊಂಡವನಂತೆ ಅತ್ತ ಇತ್ತ ನೋಡುತ್ತ ಇದ್ದ ನಾನು ಅವನನ್ನು ಕರೆದು ವಿಚಾರಿಸಿದೆ.ಅವನು ಸರ್ ನಮ್ಮಪ್ಪ ಜೊತೆ ಬರ್ತಿದ್ದೆ ಅವ್ರು ಅದೇನೋ ತೊಗೊಬೇಕು ಎಂದು ಹೇಳಿ ಇಲ್ಲೇ ಬಿಟ್ಟು ಹೋದರು ಇಲ್ಲಿಯ ತನಕ ಬರಲೆ ಇಲ್ಲ ಅದಕ್ಕೆ ಭಯ ಆಗ್ತಿದೆ ಎಂದು ಹೇಳಿದ .

ಅಭಿ : ನಾನು ಮತ್ತೆ ಅವನ್ನು ಕೇಳಿದೆ ನಿನ್ನ ಜೊತೆ ಬೆರೆಯರೂ ಬಂದಿಲ್ವಾ ಎಂದು ಅವನು ಇಲ್ಲ ಎಂದು ಉತ್ತರಿಸಿದ. ನಾನು ಮತ್ತೆ ಅವನಿಗೆ ಕೇಳಿದೆ ನಿನ್ನ ತಂದೆ ನಂಬರ್ ಇದ್ರೆ ಫೋನ್ ಮಾಡ್ತೀನಿ ಮಾತಾಡು ಎಂದು ಹೇಳಿದೆ . ನಂಬರ್ ಹೇಳಿದ ಒತ್ತಿದೇ ರಿಂಗ್ ಅಯ್ಥಿತು ಅವನ ಕೈಗೆ ಕೋಟ್ಟೇ ಅವನು ಮಾತಾಡುತ್ತಾ ಇದ್ದ ಶಬ್ದ ಬರ್ತಿಲ್ಲ ಎಂದು ಸ್ವಲ್ಪ ದೂರ ಹೋದ 30 ಸೆಕೆಂಡ್ ನಂತರ ಅವನ ವಾಪಸ್ ಕೊಟ್ಟು ಹೊರಟು ಹೋದ.

ವೇಣು : ಅವನು ಮಾಡಿದ ನಂಬರ್ಗೆ ನೀನು ಮತ್ತೆ ಫೋನ್ ಮಾಡಿಲ್ವಾ?

ಅಭಿ : ಇಲ್ಲ ಅವನು ಓಡಿ ಹೋದ ಮೇಲೆ ನಾನು ಸುಮ್ಮನೆ ವಾಪಸ್ ಮನೆಗೆ ಬಂದೇ. ಈಗ ಏನಾಗಿದೆ ವೇಣು

ವೇಣು : ಅಭಿ ನಿನ್ನ ಫೋನ್ ಹ್ಯಾಕ್ ಆಗಿದೆ.ನಿನ್ನ ಮೊಬೈಲ್ ನಲ್ಲಿ clean sweep ಎನ್ನೋ ವೆಬ್ ಪೇಜ್ ಓಪನ್ ಆಗಿ ಡೌನ್ಲೋಡ್ ಆಗಿದೆ. ಸೋ ನಿನ್ನ ಫೋನ್ ಹ್ಯಾಕ್ ಆಗಿ ನಿನ್ನ ಎಲ್ಲಾ ವಿವರಗಳನ್ನು ಹ್ಯಾಕರ್ ಟ್ರೇಸ್ ಮಾಡಿ ನಿನ್ನ ಅಕೌಂಟ್ ನಿಂದ ಹಣವನ್ನು ವರ್ಗಾವಣೆಯಾಗಿದೆ. ಆದ್ರೆ ನಿನ್ನ ಹಣ ಈಗ ಹ್ಯಾಕರ್ ಸ್ವಿಸ್ ಬ್ಯಾಂಕ್ ಅಕೌಂಟ್ ಗೆ ಹೋಗಿದೆ.

ಹ್ಯಾರಿಸ್ : ಅದು ಹೇಗೆ ಸಾಧ್ಯ ?

ವೇಣು : ಎಲ್ಲಾ ಅಯಪ್ ಗಳಲ್ಲಿ ನೀನು ಡೌನ್ಲೋಡ್ ಆದ ಬಳಿಕ ಅ ಅಯಪ್ ಓಪನ್ ಮಾಡಿ ಅದು ನಿಮ್ಮ ಅನುಮತಿ ಕೇಳುತ್ತದೆ. ನಿಮ್ಮ ಫೋನ್ ಬುಕ್ ,ಫೊಟೋ ಹಾಗು ನೀವೂ ಇರುವ ಸ್ಥಳ ಇವೆಲ್ಲವನ್ನು ಸಂಗ್ರಹಿಸಿದ ಮೇಲೆ  ಬಳಿಕವಷ್ಟೇ ಅ ಆಯಪ್ ಕೆಲಸ ಮಾಡಲು ಶುರು ಮಾಡುತ್ತದೆ. ಅದ್ರೆ ನೀವೂ( ಅನುಮತಿ )ಅಲ್ಲೊವ್ ಒಪ್ಶನ್ ಕ್ಲಿಕ್ ಮಾಡದೇ ಹೋದ್ರೆ ನಿಮ್ಮ ಅ ಆಯಪ್ ಕೆಲ್ಸ ಮಾಡೊದಿಲ್ಲ.

ಅಭಿ : ಮುಂದೆ ಏನ ಮಾಡೋದು ಅ ಹುಡುಗನ್ನ ಹೇಗೆ ಹುಡುಕೊಂದು.

ಇಬ್ಬರು ಯೋಚ್ನೆ ಮಾಡುತ್ತ ವೇಣು ಸರಿ ಅ ದೇವಸ್ಥಾನದ ಹತ್ತಿರ ಹೋಗೋಣಾ ಅಲ್ಲಿ ಏನಾದರು ಸಿಗಬಹುದು ಎಂದು ಇಬ್ಬರು ತಡ ಮಾಡದೇ ಬೈಕ್ ನಲ್ಲಿ ಕುಳಿತು ಅ ದೇವಸ್ಥಾನದ ಬಳಿ ಹೋದ್ರು ಸುತ್ತಮುತ್ತ ಏನಿದೆ ಎಂದು ಎಲ್ಲಾ ಕಡೆ ಗಮನ ಹರಿಸಿದರು. ಅಭಿ ನೋಡಿದ ಹಾಗೇ ಸುತ್ತ ಮುತ್ತ ಮರದ ಬೊಂಬುಗಳನ್ನು ಬಿಚ್ಛುತಿದ್ದರು,ಮೇಲೆ ಹಾಕಿದ ಲೈಟ್ಸ್ ಕೂಡ ಬಿಚ್ಛುತಿದ್ದರು ಇದನ್ನು ಕಂಡ ವೇಣು ಕೂಡಲೆ ಅಭಿ ಅ ದಿನ ಅಂದ್ರೆ ನೀನು ಇಲ್ಲಿಗೆ ಬಂದಾಗ ಈ ರೀತಿಯ ಅರೇಂಜ್ ಮೆಂತ್ಸ್ ಇತ್ತ ಹ್ಹ... ಹೇಳು

ಅಭಿ : ಮತ್ತೆ ಚಿಂತಿಸುತ್ತ ತಾನು ಅ ಸಮಯಕ್ಕೆ ಎಲ್ಲಿ ನಿಂತಿದ್ದೆ ಎಂದು ಆಲೋಚಿಸುತ್ತ ಹೋದಾಗ ಅಲೋಬ್ಬ ಮರದ ಬೊಂಬಬಿನ ಹಗ್ಗ ಬಿಚ್ಛುವಾಗ ಕೈ ಜಾರಿ ಬೊಂಬು ಕೆಳಗೆ ಬಿಳುಯಿತ್ತು ಅದನ್ನು ಕಂಡ ವೇಣು ಕೂಡಲೆ ಅ ಬೊಂಬನ್ನು ಹಾಗೇ ಕೈ ನಲ್ಲಿ ಹಿಡಿದ.

ವೇಣು : ಏನ್ರಿ ಸ್ವಲ್ಪ ನೋಡ್ಕೊಂಡು ಕೆಲಸ ಮಾಡಿ ಎಂದು ಹೇಳಿದ ಮಾತು ಅಭಿಯಾ ಕಿವಿಯಲ್ಲಿ ಹಾಗೇ ಗುಯೀ...ಗುಡುತಿತ್ತು ಅಭಿ ಇದೆ ರೀತಿ ಒಂದು ಘಟನೆಯಾಗುವಾಗ ಯಾರೊಬ್ಬ ಅವನ್ನು ಈ ರೀತಿ ತಡೆದ ಸಂಗತಿಯನ್ನು ನೆನಪಿಸಿಕೊಂಡ ತದ ನಂತರ ಅಭಿ ಎಚ್ಚೆತ್ತು ಹೌದು ಅವತ್ತು ಕೂಡ ಇದೆ ರೀತಿ ನಡೆಯಿತು.

ವೇಣು : ಹಾಗಿದ್ರೆ ನೀನು ಎಲ್ಲಿ ನಿಂತಿದ್ದೆ ಎಂದು ಕೇಳಿದ.

ಅಭಿ : ಕರೆಟ್ ಆಗಿ ಅ ಅಂಗಡಿಯ ಎದುರಿಗೆ ಅಡ್ಡವಾಗಿ ನಿಂತಿದ್ದೆ .

ವೇಣು : ಅವನು ಹೇಳಿದ ಹಾಗೇ ಅ ಅಂಗಡಿಯ ಬಳಿ ಹೋದ ಅಲ್ಲೊಂದು ವಸ್ತುಗಳ ಅಡ್ಡದಲ್ಲಿ ಚಿಕ್ಕದಾದ ಸಿಸಿಟಿವಿ ಇರುವುದನ್ನು ಕಂಡ ಅ ಸಿಸಿಟಿವಿ ನೇರವಾಗಿ ಮತ್ತೆ ಅಲ್ಲಿರುವ ಟಿವಿಯಲ್ಲಿ ಅಭಿ ಕಾಣುತಿರುವನೇ ಎಂದು ಖಾತರಿ ಪಡಿಸಿಕೊಂಡ. ತುಂಬಾ ಸ್ಪಷ್ಟವಾಗಿ ಅವನು ಕಾಣುತಿರುವುದು ಕಂಡು ಬರುತ್ತದೆ. ಕೈ ಬಿಸಿ ಅಭಿಯನ್ನು ಕರೆದ ಅವ್ನಿಗೆ ತಿಳಿಸಿದ ಈ ಸಿಸಿಟಿವಿಯಲ್ಲಿ ನಿನ್ನ ಭವಿಷ್ಯ ಅಡಗಿದೆ ಎಂದು.

ಕೂಡಲೆ ಅಂಗಡಿಯ ಮಾಲೀಕನಾ ಬಳಿ ನಮಗೆ ನಿಮ್ಮ ಸಿಸಿಟಿವಿ ಬೇಕೂ ಎಂದು ಕೇಳಿದ.

ಅಂಗಡಿಯವ ಸರ್ ಅದನ್ನು ಮಾರಾಟಕ್ಕೆ ಇಟ್ಟಿಲ್ಲಾ

ವೇಣು : ನಾನು ಖರೀದಿಗೆ ಕೇಳಿಲ್ಲ ಇಲ್ಲಿ ನಡೆದ ಜಾತ್ರೆಯಲ್ಲಿ ಒಂದು ಕಳ್ಳತನವಾಗಿದೆ ಅದರ ತನಿಖೆಯಲ್ಲಿ ಇದ್ದೀನಿ ಅದಕ್ಕೆ ಕೇಳಿದ್ದು.

ಅಂಗಡಿಯವ: ಸರಿ ನೆನ್ನು ಒಬ್ಬ ಇದೆ ರೀತಿ ಒಬ್ಬರು ಬಂದು ಕೆಳಿದ್ದೃ ಇಲ್ಲಿ ಕಳ್ಳತನ ಆಗಿದೆ ಅದಕ್ಕೆ ನಿಮ್ಮ ಸಿಸಿಟಿವಿ ಪೂಟೆಜ್ ಚೆಕ್ ಮಾಡ್ತೀನಿ ಕೊಡಿ ಅಂಥ.

ಅಭಿ : ಯಾರು ಗೊತ್ತಾ ?

ಅಂಗಡಿಯವ : ಗೊತಿಲ್ಲ ?

ವೇಣು : ಸ್ವಲ್ಪ ಕ್ಲೀನ್ ಆಗಿ ನೆನಪಿಸಿಕೊಳ್ಳಿ.

ಅಂಗಡಿಯವ : ಗೊತಿಲ್ಲ ಸರ್

ವೇಣು: ಅಂಗಡಿಯ ಒಳಗೆ ನೋಡಿದ ಎಲ್ಲಾ ಕಡೆಯಲ್ಲು ಇವನ ಕೈ ಮುಗಿತಿರುವ ಫೊಟೋ, ಥೇಟ್ ರಾಜಕಾರಣಿ ಸ್ಟೈಲ್ ನಲ್ಲಿ ತುಂಬಾ ಫೊಟೋಗಳನ್ನು ಗಮನಿಸಿ.

ನೀವೂ ರಾಜೇ ಗೌಡರು ಅಲ್ಲವಾ ಅದೇ ಮೊನ್ನೆ ಜಾತ್ರೆಯಲ್ಲಿ ನಿಮ್ಮ ಭಾಷಣ ಕೇಳದೆ ತುಂಬಾ ಚೆನ್ನಾಗಿತ್ತು ಏನ್ ಸ್ಟೈಲ್ ಈ ಸತಿ ಎಲೆಕ್ಷನ್ ನೀವೂ ಗೆಲ್ಲೊದು ಪಕ್ಕ ಬಿಡಿ ಎಂದಾ.

ಅಭಿ: ಮೆಲ್ಲಗೆ ಇವನು ನಿಂಗೆ ಗೊತ್ತಾ ?

ವೇಣು : ಯಾವ್ ನನ್ ಮಗನಿಗೆ ಗೊತ್ತು ಕುರಿ ಹಳ್ಳಕೆ ಬಿಳಬೇಕೂ ಅದಕ್ಕೆ ಬಿಳಸ್ತಿದಿನಿ ಅಷ್ಟೆ.

ಅಂಗಡಿಯವ : ಅವನು ಹೇಳಿದ ಮಾತು ಕೆಳಿ ಪುರಿ ಉದಿದಾದ ಹಾಗೇ ಊದಿದ 32ಹಲ್ಲುಗಳನ್ನು ಹೊರಗೆ ಚಾಚಿ ಹೆಣ್ಣು ನಾಚುವ ರೀತಿ ಮೂಖ ಮಾಡಿದ. ವೇಣು ಓ ಕುರಿ ಹಳ್ಳಕ್ಕೆ ಬಿಳುತಿದೆ ಎಂದು ತಿಳಿದು ಕೊಂಡ.

ಅಭಿ : ಗೌಡರೇ ನೋಡಿ ಈಗಲಾದೃ ನೆನಪಿಸಿಕೊಳ್ಳಿ ನೀವೂ ಸ್ವಲ್ಪ ಸಹಾಯ ಮಾಡಿದ್ರೆ ನಾಳೆ ನಿಮ್ಮ ಹೆಸರು ಅಂಗಡಿ ವರ್ಚಸು ಹೆಚ್ಚಾಗುತ್ತದೆ. ನೀವೂ ಮುಂದೆ ನಿಲ್ಲೊ ಎಲೆಕ್ಷನ್ ನಲ್ಲಿ 100% ನಮ್ಮ ವೋಟ್,ಈ ಊರು ವೋಟ್ ನಿಮಗೆ ಯೋಚ್ನೆ ಮಾಡಿ🤔🤔🤔🤔🤔🤔.

ರಾಜೇಗೌಡರು ತಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಟ್ಟರು ಥಟ್ ಎಂದು ಏನೋ ಒಳಿದ ಹಾಗೇ ಮೂಖ ಮಾಡಿ ತನ್ನ ಕೆಲಸಗಾರ ಹುಡುಗನನ್ನು ಕರೆದು ಹೇ ನೆನ್ನೆ ಒಬ್ಬರು ಬಂದು ಸಿಸಿಟಿವಿ ಪೂಟೆಜ್ ಕೇಳಿದ್ರಲ್ಲ ಅವರ ಹೆಸರು ಗೊತ್ತಾ ಹ್ಮ್....

ಗನೆಶ್ : ಅಯ್ಯೋ ಯಜಮಾನರೇ ನೆನ್ನೆ ಸಿಸಿಟಿವಿ ಫುಟೇಜ್ ನೋಡಿ ಅಷ್ಟೆ.

ಆ ಹುಡುಗನ ಅ ಮಾತು ನನ್ನ ತಲೆಗೂ ಒಳಿಯಲಿಲ್ಲ ನಾವು ತಡ ಮಾಡದೇ ನೆನ್ನೆ ಫುಟೇಜ್ ಚೆಕ್ ಮಾಡಿ ನೋಡಿದೆವು ಆದ್ರೆ ಅವನ ಮೂಖ ಚಹರೆ ಕಾಣಿಸಲಿಲ್ಲ ಮತ್ತೆ ಮತ್ತೆ ನಾವು ದೀರ್ಘವಾಗಿ ನೋಡಿ ಸಾಕಾಯಿತು . ಆಕಸ್ಮತ್ ಒಂದು ಬಾರಿ ಕಣ್ಣು ಆಡಿಸಿದಾಗ ಎದುರಿಗೆ ಒಂದು ದೊಡ್ಡದಾದ ಕನ್ನಡಿ ಇತ್ತು. ಕ್ಯಾಶಿಯರ್ ಬಳಿ ಕೂಡ ಸಿಸಿಟಿವಿ ಇತ್ತು ಅದರ ಫುಟೇಜ್ ನೋಡಿದಾಗ ಆದ್ರೆ ಇದು ಯಾರಿಗೂ ಕಾಣಿಸುವುದಿಲ್ಲ ತುಂಬಾ ಚಿಕ್ಕದಾಗಿ ಇತ್ತು ತುಂಬಾ ಗಮನಹರಿಸಿದಾಗ ಮಾತ್ರ ಇದು ಕಾಣುತ್ತದೆ.

ವೇಣು ಆ ಫುಟೇಜ್ ಚೆಕ್ ಮಾಡಿದ ಆಗ ಅದರಲ್ಲಿ ತುಂಬಾ ತೀಕ್ಷಣವಾಗಿ ಗಮಸಿಸುತಿದ್ದ ಅ ವ್ಯಕ್ತಿಯನ್ನು ಕಂಡು ಹಿಡಿಯ ಬಹುದು ಎಂದು ಬಹಳ ಕಾತರವಾಗಿದ್ದ.

ಕೊನೆಗೆ ಅ ವ್ಯಕ್ತಿಯ ಕೊಂಚ.... ಕೊಂಚ ....ಮೂಖ ಚಹರೆ ಕಾಣಿಸುತಿತ್ತು ಫ್ರೀಝ್ ಮಾಡಿ ಅವನ ಮೂಖ ಚಹರೆ ಮೇಲೆ ಝೂಮ್ ಮಾಡಿದ ಕೊನೆಗೆ ವೇಣು ಆತ ಯಾರು ಎಂದು ಸ್ವಲ್ಪ ನೆನಪಿಸಿಕೊಂಡ ಆದ್ರೆ ನೆನಪಿಗೆ ಬರಲಿಲ್ಲ ಆದ್ರೆ ಈ ವಿಚಾರವನ್ನು ಅಭಿ ಜೊತೆಗೆ ಹಂಚಿಕೊಳ್ಳಲಿಲ್ಲ.

ಮತ್ತೆ ವಾಪಸ್ ಆಗಿ ವೇಣು ಅಭಿಗೆ ನೀನು ಈಗ ಮನೆಗೆ ಹೋಗು ನಾನು ಇದರ ಕುರಿತಾಗಿ ನನ್ನ ಟೀಮ್ ಟ್ರ್ಯಾಕ್ ಮಾಡಲು ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ ಅಭಿ ಅವನ ಮಾತಿನಂತೆ ಮನೆ ಕಡೆ ಹೆಜ್ಜೆ ಹಾಕಿದ.

ವೇಣು ತನ್ನ ಆಫಿಸ್ಗೆ ಬಂದು ತನ್ನ ಟೀಮ್ ನಾ ಲೀನಾಳಿಗೆ ತನ್ನ ರೂಂಗೆ ಬರಲು ಹೇಳಿದನು.

ಹಾಯ್ ಲೀನಾ....

ಹಾಯ್ ಸರ್ .....

ಲೀನಾ ನಮ್ಮ ಜೊತೆ ಒಬ್ಬ ಹುಡುಗ ಕೆಲಸ ಮಾಡುತಿದ್ದ ಅವನು ಸಿಮ್ ನಂಬರ್ ಟ್ರ್ಯಾಕ್ ಮಾಡಿ ಲೊಕೇಶನ್ ಟ್ರೇಸ್ ಮಾಡುತಿದ್ದ ನಿನಗೆ ನೆನಪಿದ್ದ್ಯಾ....?

ಲೀನಾ : ಹ್ಮ್...... ಸರ್ ಒಂದು ನಿಮಿಷ ಎಂದು ತನ್ನ tab ನಲ್ಲಿ ಲೊಕೇಶನ್ ಡಿಟೆಟ್ಟರ್ ಟೀಮ್ ಎಂದು ಟೈಪ್ ಮಾಡಿ ಚೆಕ್ ಮಾಡಿದಳು. ಎ, ಬಿ,ಸಿ ಗ್ರೂಪ್ ಗಳ ಹುಡುಗರ ಹೆಸರುಗಳು ಹುಡುಕಿದಳು ಕೊನೆಯಲಿ ಸಿ ಗ್ರೂಪ್ ನಾ ಕೊನೆಯ ಹುಡುಗನೊಬ್ಬನ ಹೆಸರು ಹೇಳಿದಳು ಅವನ ಹೆಸರು ಚಾರ್ಲಿ (ನಮ್ಮ ನಾಯಕನ ಹೆಸರು )ಎಂದು.

ವೇಣು ನಿಲ್ಲು..... ನಿಲ್ಲು... ಅವನ ಫೊಟೋ ಇದೀಯಾ

ಲೀನಾ ಮತ್ತೆ ಚೆಕ್ ಮಾಡಿದಳು.

ಸೊರಿ ಸರ್ ಅವನ ಫೊಟೋ ಇಲ್ಲ. ಓಕೆ ನಾನು ಅವನ ಮೂಖದ ಫೊಟೋ ಕೊಡ್ತೀನಿ ಬಟ್ ಇದು ಒಂದು ಅಂಗಡಿಯ ಸಿಸಿಟಿವಿಯಲ್ಲಿ ಸಿಕ್ಕಿದ್ದು ನಮ್ ವಿಕಾಸ್ಗೆ ಹೇಳಿ ಇದನ್ನ ಸ್ಕೆಚ್ ಮಾಡೋಕ್ಕೆ ಹೇಳಿ let's see him what will happens .

ಲೀನಾ ಓಕೆ ಸರ್ ಎಂದು ಆ ಫೊಟೋ ತೆಗೆದುಕೊಂಡು ವಿಕಾಸಗೆ ನೀಡಿದಳು .

ವಿಕಾಸ್ ತನ್ನ ಎಲ್ಲಾ ಕೆಲಸ ಬಿಟ್ಟು ಒಂದು ಗಂಟೆಯ ಬಳಿಕ ವಾಪಸ್ ಆಗಿ ವೇಣುವಿನ ರೂಮ್ಗೆ ಬಂದು ಸರ್ ....ಎಂದು ಕರೆದ ಹ... ವಿಕಾಸ್ come in ......

sir your sketch is ready

ವೇಣು ; really ...

ವಿಕಾಸ : you can see

ವೇಣು: ಓಕೆ ಎಂದು ಸ್ಕೆಚ್ ನೋಡಿದ ...

👤........

ವಿಕಾಸ this is our sim decterter team c group boy James.....

ವೇಣು; ya....ya.... your right

ವೇಣು : Let's don't waste time find him call me leena.

ಲೀನಾ : ಸರ್ ....

ವೇಣು : ಜೇಮ್ಸ್ ಈಗ ಎಲ್ಲಿದ್ದಾನೆ ಹುಡುಕಿ ?

ಅಭಿ ಒಂದು ದಿನ ಸಂಜೆ ಕೆಲಸ ಮುಗಿಸಿ ಮನೆಗೆ ಬರುವಾಗ ಕಾರ್ನಲ್ಲಿ ಒಬ್ಬ ಹುಡುಗ ಒಬ್ಬಂಟಿಯಾಗಿ ನಿಂತಿದ್ದ. ಕಗ್ಗತಲು ಬೇರೆ ರಸ್ತೆಯಲ್ಲಿ ಯಾರು ಇಲರಲಿಲ್ಲ ಅಭಿ ಕುತೂಹಲದಿಂದ ಅವನನ್ನು ನೊಡಬೇಕು ವಿಚಾರಿಸ ಬೇಕು ಎಂದು ಅವನಿರುವ ಜಾಗಕ್ಕೆ ತೆರಳುತ್ತಾನೆ. ಹೀಗೆ ಸಮೀಪ ಬರುತ್ತಿರುವಾಗ ಅಭಿ

ಅ ಮೂಖ ತುಂಬಾ ಪರಿಚಯವಾದಂತೆ ಕಾಣುತಿತ್ತು. ತುಂಬಾ ಹತ್ತಿರ ಹೋದಮೇಲೆ ಯಾರು ನೀನು ಎನ್ನುವ ಹೊತ್ತಿಗೆ ಅ ಹುಡುಗ ತಲೆ ಎತ್ತಿ ನೋಡಿದ.

ಅಭಿ ಹೇ ನೀನು ಇಲ್ಲಿ ಎಂದು ಹೇಳುವ ಹೊತ್ತಿಗೆ ಅ ಹುಡುಗ ಓಡಿ ಹೋದ. ಅಭಿ ಕೂಡ ಕಾರ್ ಅಲ್ಲೇ ಬಿಟ್ಟು ಅವನ ಹಿಂದೆಯೇ ಓಡಿದ......ಓಡಿದಾ....... ಬಿಟ್ಟು ಬಿಡದೆ ಓಡಿದ ಕೊನೆಗೆ ಹುಡುಗ ತುಂಬಾ ದಣಿದ ಅಭಿ ಕೂಡ ಅವನನ್ನು ಹಿಡಿಯಲು ಯಶಸ್ವಿಯಾದ.

ಅಭಿ ಅ ಹುಡುಗನನ್ನು ಲಾಕ್ ಮಾಡಿ ತನ್ನ ಮನೆಗೆ ಕರೆದುಕೊಂಡು ಹೋದ ಊಟ ಮಾಡಿಸಿ ಮಲಗಲು ಹೇಳಿದ.

ಅಭಿ ಬೆಳಗ್ಗೆ ಅವನ್ನು ಯಾರಿಗೂ ತಿಳಿಯಾದ ಹಾಗೇ ಒಂದು ರಹಸ್ಯವಾದ ರೊಂಗೆ ಕರೆದುಕೊಂಡು ಹೋಗಿ ತನಿಖೆ ಆರಂಭ ಮಾಡಿದ. ನೀನು ಯಾರು ? ಅವತ್ತು ನನ್ನ ಮೊಬೈಲ್ ನಲ್ಲಿ ಏನ್ ಮಾಡದೇ ? ಹಣ ಎಲ್ಲಿ ? ಎಂದೆಲ್ಲಾ ಪ್ರಶ್ನೆ ಮಾಡಿದ.

ಹುಡುಗ ತುಂಬಾ ಹೆದರಿದ ಗಟ್ಟಿ ಮನಸು ಮಾಡಿ ವಿಷಯವನ್ನೆಲ್ಲಾ ಹೇಳಿಬಿಟ್ಟ.

ಅಭಿ ಅವನ ಮಾತಿಗೆ ಮರು ಮಾತಾಡದೆ ಸುಮ್ಮನಾದ .ಆದ್ರೆ ಹಣ ಕಳೆದುಕೊಂಡ ಅದೆಷ್ಟು ಜನರ ಶಾಪ ನಿಮಗೆ ತಪ್ಪದೆ ಬಿಡುವುದಿಲ್ಲ.

ನಿಮ್ಮ ವಿಚಾರವನ್ನು ನಾನು ಎಲ್ಲಿಯೂ ಬಾಯಿ ಬಿಡುವುದಿಲ್ಲ ಆದ್ರೆ ನೀವೂ ಮತ್ತೊಮ್ಮೆ ಇದೆ ಕೆಲಸವನ್ನು ಮಾಡಬೇಕೂ ಅದು ಒಬ್ಬ ರಾಜಕಾರಣಿಯ ಹಣವನ್ನು ಲಾಪಟಾಯಿಸಿ ಅದೇ ಹಣವನ್ನು ನೀವೂ ಕದಿದ್ದ ಅದೆಷ್ಟೋ ಜನಕ್ಕೆ ವಾಪಸ್ ನೀಡಬೇಕು ಅರ್ಥ ಆಯಿತಾ.

ಹುಡುಗ ಸರಿ ಎಂದು ಹೇಳಿದ.ಆದ್ರೆ ಈ ವಿಚಾರವನ್ನು ಜೇಮ್ಸ್ ಹೇಗೆ ಹೇಳೋದು ಎಂದು ತಲೆ ಕೆಡಿಸಿ ಕೊಳ್ಳುವಾಗ .

ಜೇಮ್ಸ್ ಖುದ್ದು ಅಭಿಗೆ ಫೋನ್ ಮಾಡಿ ಸರ್ ನಾನು ಮಾಡಿದ್ದು ತಪಾಗಿದೆ ಆದ್ರೆ ನಾನು ಜೈಲಿಗೆ ಹೊಗೊದಿಲ್ಲ ಕಳೆದು ಕೊಂಡಿರುವ ಅಷ್ಟು ಜನರ ಹಣವನ್ನು ವಾಪಸ್ ಹಿಂದಿರುಗಿಸುತ್ತೇನೆ.

ವೇಣು : ಜೇಮ್ಸ್ ಇರುವ ಸ್ಥಳವನ್ನು ಪತ್ತೆ ಹಚ್ಚಿದ ಪಂಚತಾರಾ ಹೊಟೇಲ್ನಲ್ಲಿ ತಂಗಿದ್ದ.

ವೇಣು ಸೀದಾ ಅವನಿರುವ ಹೊಟೇಲ್ ನಲ್ಲಿ ಭೇಟಿಯಾದ ನೀನು ಮಾಡ್ತಿರೋದು ಸರಿಯಾಗಿದೆಯಾ.ನೀನು ಅನೇಕರ ದುಡ್ಡನ್ನ ಲಾಪಟಯಿಸಿದ ಕಳ್ಳ ನಿನ್ನ ಪ್ರೀತಿ ಬಲೆಗೆ ಬಿದ್ದಿರುವ ಅವಳು ಕೂಡ ಹುಚ್ಚಿ.

ಜೇಮ್ಸ್ : ಅವಳ ಯಾರು ?

ವೇಣು : ವಸುಂಧರ ನನ್ನ ತಂಗಿ

ಜೇಮ್ಸ್ : ಸೋ

ವೇಣು : ನೋಡು ಜೇಮ್ಸ್ ನೀನು ಈಗ ನನ್ನ ತಂಗಿಯನ್ನು ಮದುವೆ ಮಾಡಕೋ ಅಷ್ಟೆ ಇಲ್ಲ ಅಂದ್ರೆ ನೀನು ಜೈಲಿಗೆ ಸೆರ್ತಿಯಾ

ಜೇಮ್ಸ್ : ಇಲ್ಲ ಆಗೋದಿಲ್ಲಾ 

ವೇಣು : ತುಂಬಾ ಯೋಚ್ನೆ ಮಾಡಿ ಉತ್ತರ ಕೊಡು

ಜೇಮ್ಸ್ : ನಾನು ಅವಳನ್ನು ತುಂಬಾ ಇಷ್ಟ ಪಟ್ಟು ಪ್ರೀತಿ ಮಾಡದೆ ಅವಳೇ ಸರಿಯಾಗಿ ಉತ್ತರ ನೀಡದೇ ಈಗ ಮುರಿದು ಕೊಂಡು ಹೋಗಿದ್ದಾಳೆ.

ವೇಣು: ಜೇಮ್ಸ್ ನಂಗೇ ಎಲ್ಲಾ ಗೊತ್ತಿದೆ ತಪ್ಪು ಅವಳದೇ ಆದ್ರೆ ಅವಳ ಅಣ್ಣನಾಗಿ ನಾನು ನಿನ್ನ ಕೈ ಹಿಡಿದು ಬೇಡಿಕೊಳ್ಳುತಿದ್ದೆನೇ ಪ್ಲೀಸ್.

ಜೇಮ್ಸ್ : ಅವನ ಮಾತುಗಳ ಮೇಲೆ ನಂಬಿಕೆ ಬಂತು.ಸರಿ ನಾನು ಅವಳನ್ನು ಮದುವೆ ಆಗ್ತೀನಿ ಆದ್ರೆ ನನ್ನ ವಿಚಾರ ಯಾರಿಗೂ ತಿಳಿಬಾರದು ಹಾಗೇ ನಿನ್ನ ಫ್ರೆಂಡ್ ಅಭಿ ನನಗೆ ಒಂದು ಕೆಲಸ ನೀಡಿದ್ದಾನೆ.

ವೇಣು: ಅಭಿನಾ ಏನಾದು

ಜೇಮ್ಸ್ : ನಾನು ಕದ್ದಿರುವ ಅಷ್ಟು ಹಣವನ್ನು ಹಿಂದಿರುಗಿಸಿ ಬೀಡೂ ನಿನ್ನ ಮೇಲೆ ಯಾವ ಕೇಸ್ ಇರೊದಿಲ್ಲ ಎಂದು ಹೇಳಿದ್ದಾನೆ ಸೋ ಈ ಕೆಲಸ ಮುಗಿದ ಮೇಲೆ ನಾನು ಮದುವೆ ಆಗುವುದು ನೀನು ಕೂಡ ಇದಕ್ಕೆ ಸಹಕರಿಸು.

ವೇಣು : ತುಂಬಾ ಆಲೋಚಿಸಿ ...... ಸರಿ ಓಕೆ ಎಂದು ಕೈ ಮಿಲಾಯಿಸಿದ.

ಯಾರ ಹಣ ಲಪಟಾಯಿಸುವುದು ಎಂದು ಅಲೋಚಿಸಿದಾಗ ತುಂಬಾ ಹೆಸರು ಕೆಳಿ ಬಂದದ್ದು ಯಶವಂತ್ ಕರೇ ದೊಡ್ಡ ಬಿಸ್ನೆಸ್ ಮ್ಯಾನ್ 1000 ಕೋಟಿ ಆಸ್ತಿ ಇದೆ.

illigel ಹಣ ಬೇಕಾದಷ್ತಿದೆ ಸೋ ಅವನ ದುಡ್ಡಿಗೆ ಕೈ ಹಾಕಿದರೆ ಯಾವುದೆ ಪ್ರಾಬ್ಲಮ್ ಇಲ್ಲ ಬ್ಲಾಕ್ ಮನಿ ಇರೊದಿಂದ್ರಾ ಅವನು ಬಾಯಿ ಬಿಡೊದಿಲ್ಲ. ಮತೊಂದು ಪ್ಲಸ್ ಅಂದ್ರೆ ಈ ಸಾರಿ ಎಮ್ ಎಲ್ ಎ ಎಲೆಕ್ಷನ್ಗೆ ನಿಲ್ತಿದ್ದಾನೆ.ಸೋ ನಾವು ಸೇಫ್ ಆಗಿ ಆಟ ಆಡಬಹುದು.

ಎಲ್ಲರೂ ತುಂಬಾ ಚೆನ್ನಾಗಿ ಅವನ ಚಲನವಲನ ಎಲ್ಲಾ ಗಮನಿಸಿದರು. ಅವನ ಬೆಳಗಿನ ಕೆಲಸಗಳು ಸಂಜೆ ಎಷ್ಟು ಹೊತ್ತು ಮನೆಗೆ ತೆರಳುತ್ತಾನೇ.

ಎಲ್ಲಾ ಗಮನಿಸಿದ ಮೇಲೆ ಪಾರ್ಟಿ ಮೀಟಿಂಗ್ ಇದೆ ಎಂದು ತಿಳಿಯಿತು. ಅಭಿನೇ ಅಲ್ಲಿನ ಸೆಕ್ಯೂರಿಟಿ ಟೀಮ್ ನಾ ಲೀಡ್ ಮಾಡ್ತಾನೆ. ಜೇಮ್ಸ್ ಕೂಡ ಪಾರ್ಟಿಯಲ್ಲಿ ಸೆರ್ಕೊಳ್ಳುತ್ತಾನೆ ಕಾರ್ಯಕರ್ತನಾಗಿ ಅ ಹುಡುಗ ಜೀವಾ ಕೂಡ ಪಾರ್ಟಿಯಲ್ಲಿ ಸೇರಿ ತಮಾಟೆ ಸೌಂಡ್ಗೆ ಡಾನ್ಸ್ ಮಾಡುತ್ತ ಇರುತ್ತಾನೆ.ಹೀಗೆ ಎಲ್ಲಾ ನಡೆಯುವ ಸಮಯದಲ್ಲಿ ರಸ್ತೆಯಲ್ಲಿ ಮೆರವಣಿಗೆ ನಡೆಯುವ ಸಮಯದಲ್ಲಿ ಕಾನ್ಸಸ್ಟೇಬಲ್ ಯಶವಂತ್ ನಂತೆ ಬಟ್ಟೆ ಧರಿಸಿ ಅವನ ಮೂಖವಾಡ ಹಾಕಿಕೊಂಡಿರುತ್ತಾನೆ.

ಆದ್ರೆ ಕಾನ್ಸ್ಟೇಬಲ್ ಯಾರ ಕಣ್ಣಿಗೆ ಕಾಣಿಸಿ ಕೊಂಡಿರುವುದಿಲ್ಲ ಇದು ಅವರ ಎರಡನೇ ಪ್ಲಾನ್ ಆಗಿರುತ್ತೆ. ಪ್ಲಾನ್ ಒನ್ ಅವನ ಮೊಬೈಲ್ ಹ್ಯಾಕ್ ಮಾಡಿ ನೋಡೋಣ ಅದರಲ್ಲಿ ಏನು ವಿಷಯ ಸಿಗಲಿಲ್ಲ ಅಂದ್ರೆ ಅವನ ಕಿಡ್ನಯಾಪ ಮಾಡಿ ಬಿಡೋಣ ಸರಿನಾ.

ಅದೇ ರೀತಿ ಯಶವಂತ್ ಮೆರವಣಿಗೆಯಲ್ಲಿ ಭಾಗವಹಿಸಲು ಮನೆಯಲ್ಲಿ ರೆಡಿಯಾಗುತಿದ್ದ ಯಾಕೋ ಹೊಟ್ಟೆ ತೊಳೆಸುತಿದೆ ಎಂದು ವಾಷ ರೂಮಿಗೆ ಹೊದ ಅದೇ ಸಮಯಕ್ಕೆ ಜೇಮ್ಸ್ ಯಾರಿಗೂ ಕಾಣದ ಹಾಗೇ ಅವನ ರೂಮಿಗೆ ಹೋಗಿ ಸೇಮ್ ಟು ಸೇಮ್ ಮೊಬೈಲ್ ಎಕ್ಸ್ಚೇಂಜ್ ಮಾಡಿದ ಅದರಲ್ಲಿ ಮೊದಲಿನ ಹಾಗೇ ವೆಬ್ ಪೇಜ್ ಓಪನ್ ಮಾಡಿ ಹ್ಯಾಕರ್ಗೆ ಫೋನ್ ಮಾಡಿ ಲಿಂಕ್ ಮಾಡಿದ.

ಹ್ಯಾಕರ್ ಎಲ್ಲಾ ರೀತಿ ಮಾಹಿತಿ ಸಂಗ್ರಹಿಸಿ ಅಕೌಂಟ್ ಹ್ಯಾಕ್ ಮಾಡಲು ಯಾರ್ತ್ನಿಸಿದ ಆದ್ರೆ ಕೊನೆಗಳಿಗೆಯಲ್ಲಿ ಪಾಸ್ ವರ್ಡ್ requried ಎಂದು ಕೇಳುತಿದೆ. ಎಂದು ಹ್ಯಾಕರ್ ಹೇಳಿದ ಸೋ ಪಸ್ವೊರ್ಡ್ ತುಂಬಾ ಮುಖ್ಯ ಎಂದು ಟೀಮ್ ನಾ ಎಲ್ಲರಿಗೂ ಹೇಳಿದ ಇದು ತಿಳಿದ ಮೇಲೆ. ಸೋ ಅವರ ಎರಡನೇ ಪ್ಲಾನ್ ಪ್ರಕಾರ ಯಶವಂತ್ ಕರೇ ಕಿಡ್ನಯಾಪ್ ಮಾಡೋದು ಖಾತರಿಯಾಯಿತು. ಸೋ ರಾತ್ರಿ ರೋಡ್ ಶೋ ಇರೋ ಕಾರಣ ಅಲ್ಲೇ ಅವನನ್ನು ಕಿಡ್ನಯಾಪ್ ಮಾಡೋದು ಎಂದು ತಿಳಿಸಿದ.

ಆದೇ ರೀತಿ ಯಶವಂತ್ ಕರೇ ರೆಡಿಯಾಗಿ ಮೆರವಣಿಗೆಯಲ್ಲಿ ಪಾಲಗೊಂಡಿದ್ದ ಹೀಗೆ ಮೆರವಣಿಗೆ ಸಾಗುತಿತ್ತು ಪಟಾಕೀಗಳ ಸರಮಾಲೆ ಬೇರೆ ತಮಟೆ ಸೌಂಡ್ ಎಲ್ಲ ಅದೇ ಸಮಯದಲ್ಲಿ ಜೀವಾ ಯಾರಿಗೂ ತಿಳಿಯಾದ ಹಾಗೇ ಅಲಿದ್ದ ಟ್ರಾನ್ಸ್ಫಫಾರ್ಮ್ರ್ಗೆ ಕಲ್ಲು ಎಸೆದ ಸ್ವಲ್ಪ ಹೊತ್ತಿನಲ್ಲಿ ಲೈಟಸ್ ಎಲ್ಲಾ ಆಫ್ ಆಗಿವೊಯಿತು ಅದೇ ಸಮಯಕ್ಕೆ ಜನರು ಗಿಜಿ ಗಿಜಿ ಎನ್ನುತ್ತ ಪಿಸು ಗುಡುತಿದ್ದರು. ಯಶವಂತ್ ಗೆ ಮೂಗಿಗೆ ಮತ್ತು ಬರುವ ಬಟ್ಟೆಯನ್ನು ಮೂಸಿಸಿ ಹಾಗೇ ಸಾಗಿಸಿದೆವು ಅದೇ ಜಾಗಕ್ಕೆ ಕಾನ್ಸಸ್ಟೇಬಲ್ ನನ್ನು ನಿಲ್ಲಿಸಿದೆವು.

ಯಶವಂತ್ ನನ್ನು ಒಂದು ಪಾಳು ಬಿದ್ದ ಮನೆಗೆ ಕರೆದು ಕೊಂಡು ಹೋಗಿ ಅಲ್ಲಿ ಅವನಿಗೆ ಮಂಪರು ಪರೀಕ್ಷೆ ಮಾಡುತ್ತ ಅವನನ್ನು ಪಸ್ವೊರ್ಡ್ ಪಡೆದು ಅಕೌಂಟ್ ಓಪನ್ ಆಗುತ್ತಾ ಎಂದು ನೋಡಿದ.ಅಕೌಂಟ್ ಓಪನ್ ಆಗಿ ಹೋಯಿತು. ಈ ಹಿಂದೆ ಪಡೆದಿದ್ದ ಅಷ್ಟು ಜನರ ದೇಟಾಗಳಿಗೆ ಮತ್ತೆ ಹಣ ಜಾಮೆ ಮಾಡುವ ಕೆಲಸ ಶುರುವಾಯಿತು. ಆದ್ರೆ ಯಶವಂತ್ ನಿದ್ದೆ ಇಂದ ಎಚ್ಚರಗೊಂಡು ಕೈ ಕಾಲುಗಳನ್ನು ಒದರಿದ ಕಣ್ಣನ್ನು ಮೆಲ್ಲನೆ ಬಿಟ್ಟ ಇದನ್ನು ಗಮನಿಸಿದ ಜೇಮ್ಸ್ ಅವನ್ನು ಪುನಹ ಆದೇ ಮೆರವಣಿಗೆಯಲ್ಲಿ ಇರುವಂತೆ ಮಾಡಿ ಅಲಿಂದ ಎಸ್ಕೆಪ್ ಆಗಿ ಹೋದ ಯಶವಂತ್ ಸರಿಯಾಗಿ ಕಣ್ಣು ಬಿಟ್ಟ ಮೇಲೆ ಆತ ಮೆರವಣಿಗೆಯಲ್ಲೆ ಇದ್ದ . ಅವನ ಅಕೌಂಟ್ ನಿಂದ ಆದಗಲೆ ಎಲ್ಲರ ಅಕೌಂಟ್ಗೆ ಹಣ ತಲುಪಿತ್ತು. ಎಲ್ಲರೂ ಒಮ್ಮೆಲೇ ಖುಷಿಯ ನಗು ಬೀರಿ ನಮ್ಮ ಹಣ ನಮಗೆ ವಾಪಸ್ ಆಗಿದೆ ಎಂದು ನಿಟ್ಟಿಸಿರು ಬಿಟ್ಟರು.

ಜೇಮ್ಸ್ ತಾನು ಹೇಳಿದ ಹಾಗೇ ಮಾಡಿದ ಮೇಲೆ ವೇಣುವಿನ ತಂಗಿ ವಸುಂಧರಳನ್ನು ಮದುವೆಯಾದ.

ಆದ್ರೆ ಅವನು ಈ ಕೆಲ್ಸ ವನ್ನು ಬಿಟ್ಟಿದ್ದ ಎಂದು ಎಲ್ಲರೂ ಅಂದುಕೊಂಡಿದ್ದರು ಆದ್ರೆ...........


Rate this content
Log in

More kannada story from venu g

Similar kannada story from Thriller