ನಮ್ಮೂರ ಮಂದಾರ ಹೂವೆ
ನಮ್ಮೂರ ಮಂದಾರ ಹೂವೆ


ನಾನ್ ಸ್ಟಾಪ್ ನವೆಂಬರ್ - ಮಧ್ಯಂತರ
ಹವ್ಯಕ ಕನ್ನಡದ ಅಂದವನ್ನು ಈ ಚಿತ್ರದಲ್ಲಿ ಕಾಣಬಹುದು
ರಮೇಶ್, ಶಿವರಾಜ್ ಕುಮಾರ್, ಪ್ರೇಮಾ, ಸುಮನ್ ಅವರ ನಟನೆ ಎಂತವರನ್ನೂ ಸೆಳೆಯದೆ ಬಿಡದು. ಅಲ್ಲದೇ ಮ್ಯೂಸಿಕಲ್ ಹಿಟ್ ಆಗಿದ್ದ ಈ ಚಿತ್ರದ ಹಾಡುಗಳೆಲ್ಲವೂ ಈಗಲೂ ಎಷ್ಟೋ ಜನರ ಫೆವರೇಟ್ ಹಾಡುಗಳೆಂದರೆ ತಪ್ಪಲ್ಲ.
ಈ ಚಿತ್ರದಲ್ಲಿ ನಾಯಕರಿಬ್ಬರೂ, ಸುಮಾಳನ್ನು (ನಾಯಕಿ) ಪ್ರೀತಿಸುತ್ತಾರೆ. ಅಂತಿಮವಾಗಿ ಮನೋಜನಿಗೆ ಸುಮಾಳ ಪ್ರೀತಿ ದಕ್ಕುತ್ತದೆ. ಪ್ರವೀಣ, ಸುಮಾಳೊಂದಿಗೆ ಗೆಳೆಯನಾಗಿ ಉಳಿಯುತ್ತಾನೆ. ಈ ಚಿತ್ರವನ್ನು ನನ್ನ ದೃಷ್ಟಿಕೋನದಂತೆ ಬದಲಾಯಿಸಿದಾಗ,
ಮನೋಜ್ : ಸುಮಾ, ನಮ್ಮನೇಲಿ ನಮ್ಮಿಬ್ರ ಪ್ರೀತಿಗೆ ಓಕೆ ಅಂದಿದಾರೆ. ನೀ ಹುo ಅಂದ್ರೆ ಮದ್ವೆ ಆಗೋಣ.
ಸುಮಾ : ಅದಕ್ಕೇನ್ ಅವಸರ ಮನೋಜ್, ನಾನಿನ್ನೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಮದ್ವೆ nanna ಸಾಧನೆಗೆ ಅಡ್ಡಿ ಆಗ್ಬಾರ್ದು.
ಮನೋಜ್ :ಮದ್ವೆ ಅದ್ಮೇಲೂ ನೀನು ಸಂಗೀತ ಕಲಿಕೆ ಮುಂದುವರೆಸು.
ಸುಮಾ : ಬೇಡ ಮನೋಜ್. ನನ್ನ ಸಂಗೀತ ಕಲಿಕೆ ಮುಗಿದ್ಮೇಲೇನೇ ಮದುವೆ.
ಮನೋಜ್ : ಸರಿ ಬಿಡಮ್ಮ. ನೀನೀಗ ಮನೆಗೆ ಹೊರಡು, ನಾನು ನನ್ನ ಕುಚಿಕು ಪ್ರವೀಣನ ಮನೆಗೆ ಹೋಗ್ಬರ್ತೀನಿ.
ಸುಮಾ : ಅದೇನ್ ನೀವಿಬ್ರೂ ಯಾವಾಗ್ಲೂ ಅಷ್ಟೊಂದು ಅಂಟುಕೊಂಡೆ ಇರ್ತೀರಾ? ಪ್ರವೀಣ್ ಅಂದ್ರೆ ನಿಂಗ್ ಅಷ್ಟ್ ಅಚ್ಚುಮೆಚ್ಚ?
ಮನೋಜ್ : ಹೌದು ಸುಮಾ, ಪ್ರವೀಣ್ ಅಂದ್ರೆ ನಂಗ್ ತುಂಬಾ ಇಷ್ಟ. ನನ್ನ ಬೆಸ್ಟ್ ಫ್ರೆಂಡ್ ಅಂತ ಯಾರಾದ್ರೂ ಇದ್ರೆ ಅದು ಪ್ರವೀಣ್ ಮಾತ್ರ. ಅವ್ನ್ ಏನೇ ಕೇಳಿದ್ರೂ ನಾನು ಕೊಡ್ತೀನಿ.
ಸುಮಾ : ಸರಿ, ಏನಾದ್ರೂ ಮಾಡ್ಕೊಳಿ, ಬಾಯ್.
-----------------------------------
ಮನೋಜ್ : ಏನ್ ಮಾಡ್ತಿದೀಯಾ ಪ್ರವೀಣ್. ಏನೋ ಬರಿತಿದಿಯಾ? ಏನ್ ಲವ್ ಲೇಟ್ರಾ?
ಪ್ರವೀಣ್ : ಹೌದು ಕಣೋ ಮನೋಜ್,
ನಿನ್ನಿಂದ ಮುಚ್ಚಿಡೋದು ಏನಿದೆ? ಚಿಕ್ಕಂದಿನಿಂದಲೂ ನಂಗೆ ಸುಮಾ ಅಂದ್ರೆ ಇಷ್ಟ. ನಾಡಿದ್ದು ಅವಳ ಹುಟ್ಟು ಹಬ್ಬ, ಅದಕ್ಕೆ ಅವಳನ್ನ ನನ್ನ ಪ್ರೇಮ ನಿವೇದನೆ ಮಾಡಿ ಕೇಳೋಣ ಅಂತಿದೀನಿ. ನೀನೇನ್ ಹೇಳ್ತೀಯಾ ಮನೋಜ್?
ಮನೋಜ್ :?? (ಮೌನ )
ಪ್ರವೀಣ್ : ಯಾಕೋ, ಸುಮ್ಮನಾದೆ. ಮಾತಾಡೋ ಮನೋಜ್.
ಮನೋಜ್ : ನಾನು ನಿಂಗೊಂದ್ ವಿಷಯ ಹೇಳ್ಬೇಕಿತ್ತು ಕಣೋ. ಅಂದಂಗೆ ನೀನು ಸುಮಾನ ಇಷ್ಟ ಪಟ್ಟಿದ್ದು ಒಳ್ಳೆದಾಯ್ತು, ಒಳ್ಳೆ ಹುಡುಗಿ ಅವಳು.
ಪ್ರವೀಣ್ : ಸರಿ ಈಗ ನೀ ಹೇಳು. ನೀನೂ ನನ್ನ ತರಾ ಯಾರ್ನಾದರೂ ಇಷ್ಟಾ ಪಟ್ಟೀದಿಯಾ?
ಮನೋಜ್ : ಹೌದು ಕಣೋ, ನಿನ್ನ ತಂಗಿ ಸುಧಾ ಅಂದ್ರೆ ನಂಗಿಷ್ಟ. ನೀವೆಲ್ಲ ಹು ಅನ್ನೋದಾದ್ರೆ ನಾನು ಅವಳನ್ನ ಮದ್ವೆ ಆಗ್ತೀನಿ.
ಪ್ರವೀಣ್ : ಎಲಾ ಕಳ್ಳ! ನನ್ನ ತಂಗಿನೇ ಇಷ್ಟಾ ಪಟ್ಟೀದಿಯಾ? ಸರಿ, ನಮ್ಮ ಸುಧಾ ನಮ್ಮ ಮಾತು ತೆಗೆದು ಹಾಕಲ್ಲ. ಈ ಮದ್ವೆ ಆಯ್ತು ಅಂತ ಇಟ್ಕೋ.
------------------
ಮನೋಜನ ಮದುವೆ ಪತ್ರಿಕೆ ನೋಡಿ ಸುಮಾ ನಿಂತಲ್ಲೇ ಕುಸಿಯುತ್ತಾಳೆ.
ನೇರವಾಗಿ ಮನೋಜನನ್ನೇ ಕೇಳಿದಾಗ ಪ್ರವೀಣ್ ಕೂಡ ನಿನ್ನನ್ನು ಇಷ್ಟಾ ಪಡ್ತಿದ್ದ, ಅದಕ್ಕಾಗಿ ನಾನು ಅವಳ ತಂಗಿನ ಮದ್ವೆ ಆಗೋ ನಿರ್ಧಾರ ಮಾಡಿದೆ. ಪ್ರವೀಣ್ ನಿನ್ನನ್ನ ನನಗಿಂತ ಚೆನ್ನಾಗಿ ನೋಡ್ಕೋತಾನೆ.
ಸುಮಾ : ನನ್ನನ್ನ ಏನ್ ಅನ್ಕೊಂಡ್ರಿ ನೀವು? ನೀವೇ ಸಿಗದಿದ್ದ ಮೇಲೆ ನನಗೆ ಪ್ರವೀಣ್ ಕೂಡ ಬೇಡ. ಇನ್ಮೇಲೆ ನನ್ನಣ್ಣ ನೀವಿಬ್ರೂ ಮಾತಾಡ್ಸೋ ಪ್ರಯತ್ನ ಮಾಡ್ಬೇಡಿ, ನಾನ್ ಇವತ್ತು ರಾತ್ರಿನೇ ಮನೆಯಿಂದ ಹೊರಡ್ತೀನಿ ಎಂದು ಹೇಳಿ, ತನ್ನ ಸಂಗೀತ ಅಭ್ಯಾಸಕ್ಕಾಗಿ ಮನೋಜ್, ಪ್ರವೀಣ್ ಇಬ್ಬರ ಪ್ರೀತಿ -ಸ್ನೇಹವನ್ನು ತೊರೆದು ಬಹು ದೂರ ಸಾಗಿದಳು, ಒಂಟಿಯಾಗಿ!
ತಡವಾಗಿ ವಿಷಯ ತಿಳಿದ ಪ್ರವೀಣ್, ಇಬ್ಬರು ಪ್ರೇಮಿಗಳ ಮದ್ಯೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಕೊರಗತೊಡಗಿದನು. ಅತ್ತ ಮನೋಜ್, ಸುಧಾಳನ್ನು ಮದುವೆಯಾಗಿ ಪ್ರವೀಣನಿಗೆ ಭಾವ ಆಗಿಬಿಟ್ಟ!