venu g

Comedy Drama Crime

3.7  

venu g

Comedy Drama Crime

ಸತ್ಯ ಡಿಟೆಕ್ಟಿವ್

ಸತ್ಯ ಡಿಟೆಕ್ಟಿವ್

29 mins
469


ನನ್ನ ಹೆಸರು ಸತ್ಯನಾನು ತುಂಬಾ ಒಳ್ಳೇ ಒಬ್ಬ ಕಾರ್ ಕಳ್ಳ!


ಕಾರ್ ಕದಿಯೋದ್ರಲ್ಲೂ ಒಳ್ಳೆಯವನು ಇರ್ತಾನಾ ಅನ್ನೋ ಕುತೂಹಲ ನಿಮಗೆ ಇರಬೇಕು .ಕಾರಣ ಇಷ್ಟೇ ನಾನು ಕದ್ದಿರುವ ಕಾರ್ ನ್ನು ಯಾರಿಗೂ ಮಾರೋದಿಲ್ಲ. ಅಂದಮೇಲೆ ಮತ್ತೆ ಕಾರ್ ಯಾಕ್ ಕದಿಬೇಕು ಅನ್ನೋ ಪ್ರಶ್ನೆ ನೀವು ನನ್ನ ಕೇಳಬೇಕು ಅನ್ನಿಸ್ತಿದೆ ಅಲ್ವಾ , ನಾನು ಕಾರ್ ಕದಿತೀನಿ ನಿಜ ಆದ್ರೆ ಮರಳಿ ಅವರಿಗೆ ವಾಪಸ್ ಮಾಡ್ತೀನಿ, ಯಾಕೆ ? ಮತ್ತೆ ಪ್ರಶ್ನೆ ಕೇಳ್ತಿರಾ ಲಾಭ ಏನು ? ನನ್ನ ಪ್ರಕಾರ ಕಾರ್ ತೊಗೊಳೋದು ತುಂಬಾ ಆಸೆಯಿಂದ ಖರೀದಿ ಮಾಡ್ತಾರೇ ,ಇನ್ನೂ ಕೆಲವರಿಗೆ ಅನಿವಾರ್ಯವಾಗಿರುತ್ತೆ. ಅದಕ್ಕಾಗಿ ಕಾರ್ ಅವರಿಗೆ ಮರಳಿ ಕೊಟ್ಟುಬಿಡ್ತೀನಿ . ಆದ್ರೆ ನಾನು ಸುಮ್ನೆ ಕೊಡೋದಿಲ್ಲ ಏನ್ ಮಾಡ್ತೀನಿ ಮುಂದೆ ಓದಿ .


ನಾನು ಕಾರ್ ಕದಿಯೋಕ್ಕೂ ಫಸ್ಟ್ ನನ್ನ ಅಸಿಸ್ಟೆಂಟ್ ಕಳಿಸಿ ಕದಿಯುವವರ ಪೂರ್ತಿ ಡೀಟೇಲ್ಸ್ ಪಡೀತೀನಿ. ನನ್ನ ಅಸಿಸ್ಟೆಂಟ್ ಅವರ ಪರಿಚಯ ಮಾಡಿಕೊಂಡು ತುಂಬಾ ಅತ್ಮೀಯಾನಾಗುತ್ತಾನೆ ಯಾವುದೇ ಕೆಲಸಕ್ಕೂ ಇವನನ್ನೇ ಕರಿಬೇಕು ಆ ರೀತಿ ಅವನ ಸ್ನೇಹ ಬೆಳೆಸಿಕೊಳ್ಳುತ್ತಾನೆ. ಅವರ ಮನೆಯಲಿ ಕಾರ್ ಕಳ್ಳತನವಾದರೆ ಇವನಿಗೆ ಕರೆ ಮಾಡಿ ಐಡಿಯಾ ಕೇಳಬೇಕು. ಆ ರೀತಿಯಲ್ಲಿ ಅವರ ಸ್ನೇಹ ಸಂಪಾದನೆ ಮಾಡಿಕೊಂಡಿರುತ್ತಾನೆ . ಕೂಡಲೇ ಕಾರ್ ಮಾಲೀಕ ಇವನಿಗೆ ಕರೆ ಮಾಡುತ್ತಾನೆ ಹೀಗೆ ಕಾರ್ ಕಳುವಾಗಿದೆ ಏನು ಮಾಡುವುದು ? ಆಗ ನನ್ನ ಅಸಿಸ್ಟೆಂಟ್ ಅವರನ್ನು ನನ್ನ ಬಳಿ ಕರೆದು ಕೊಂಡು ಬರುತ್ತಾನೆ. ಅವರು ಬರುವ ಹೊತ್ತಿಗೆ ನನ್ನ ಮನೆಯನ್ನು ಸ್ವಲ್ಪ ಆಫೀಸ್ ರೀತಿಯಲ್ಲಿ ಸಿಂಗರಿಸಿ ಧೂಳು ಹಿಡಿದ ಫೈಲ್ಸ್ಗಳ್ನ್ನು ಕೊಡವಿ ಒಂದು ಟೇಬಲ್ ಹಾಕಿ ಮನೆಯ ಮುಂದೆ ಇರುವ ಬೋರ್ಡ್ನಾ ಚೆನ್ನಾಗಿ ತೊಳೆದು ತಗಲೂ ಹಾಕಿರುತ್ತೇನೆ, ಬೋರ್ಡ್ ಮೇಲೆ ಸತ್ಯ 'ಡಿಟೆಕ್ಟಿವ್ ' ಎಂದು. ಸ್ಪೆಷಲಿಸ್ಟ್ ಇನ್ ಕಾರ್ ಹುಡಿಕಿಕೊಡುವೆ ಎಂದು ಬರೆದು ಕೊಂಡಿರುತ್ತೇನೆ, ಎಷ್ತ್ತೋ ಬಾರಿ ಪೊಲೀಸರು ಸಹ ನನ್ನ ಸಹಾಯ ಪಡೆದಿದ್ದಾರೆ. ನನ್ನ ಮೇಲೆ ಒಂದು ಕೇಸ್ ಕೂಡ ಇಲ್ಲ .ಹೀಗೆ ಹೇಗೋ ಜೀವನ ಸಾಗುತಿತ್ತು.


ಒಂದು ದಿನ ರಾತ್ರಿ ಸಮಯ ೧ ಗಂಟೆ ಒಂದು ಮನೆಯ ಕಾರನಾ ನಾವು ಕಳ್ತನ ಮಾಡಿಕೊಂಡು ಬರುತ್ತಿದ್ದೆವು ಆಗ ರಸ್ತೆಯಲ್ಲಿ ಬೆಳಕಿರಲಿಲ್ಲ ಬಟ್ಟ ಬಯಲು ಪ್ರದೇಶ ದೀಪದ ಕಂಬಗಳು ಸಹ ಇರಲಿಲ್ಲ. ನಮ್ಮ ಕಾರಿನ ಬೆಳಕೇ ನಮಗೆ ದಾರಿ ದೀಪ. ಅದೇನೋ ಗೊತ್ತಿಲ್ಲ ಕಾರ್ ಇದ್ದಕಿದ್ದಂತೆ ಕಾರ್ ನಿಂತು ಹೋಯಿತು. ನನ್ನ ಆಸಿಸ್ಟೆಂಟ್ ಶ್ಯಾಮ್ ಹೇಳಿದೆ ಕಾರ್ಗೆ ಏನಾಗಿದೆ ನೋಡೋ ಎಂದು. ಕೆಳಗೆ ಇಳಿದು ನೋಡಿದ ಅವನು ಸ್ವಲ್ಪ ಯಡ್ಡ ಕಾರಿನ ಬಗ್ಗೆ ಗೊತ್ತಿಲ್ಲ .ಶ್ಯಾಮ್ ಕಾರಿನ ಬ್ಯಾನೆಟ್ ತೆಗೆದು ನೋಡಿದ ಗುರು ಕಾರ್ಗೆ ಏನಾಗಿದೆ ಚೆನ್ನಾಗೆ ಇದೆ ಎಲ್ಲ ಪಾರ್ಟ್ಸ್ ಇರೋ ಕಡೆನೇ ಇದೆಪಾ ಎಂದು ನನ್ನ ಕಡೆ ಮುಖ ಮಾಡಿ ನೋಡಿ ಹೇಳಿದ , ನಾನು ಹೋಗಿ ಹೋಗಿ ನಿನಗೆ ಹೇಳಿದ್ದಾನಲ್ಲ ಎಂದು ಶಪಿಸುತ್ತಲೇ ಕೆಳಗಿಳಿದು ನೋಡಿದೆ ರೇಡಿಯೇಟರ್ ಬಿಸಿಯಾಗಿತ್ತು . ಕೂಡಲೇ ನಾನು ಅವನಿಗೆ ಕಾರಿನ ಡಿಕ್ಕಿ ತೆಗೆದು ಖಾಲಿ ಕ್ಯಾನ್ ಇರುತ್ತೆ ಹೋಗಿ ನೀರು ತೆಗೆದು ಕೊಂಡು ಬಾ ಎಂದು ಹೇಳಿದೆ ಅವನು ಹಾಗೆಯೆ ಕ್ಯಾನ್ ತೆಗೆದುಕೊಂಡು ಅಲ್ಲೇ ಸ್ವಲ್ಪ ದೂರದಲ್ಲೇ ನೀರಿನ ಶಬ್ದ ಕೇಳಿಸುತಿತ್ತು ಅವನ ಕೈಗೆ ಒಂದು ಟಾರ್ಚ್ ಕೊಟ್ಟು ಕಳಿಸಿದೆ .


ರಾತ್ರಿಯ ಸಮಯ ಬಾನಲ್ಲಿ ಚಂದ್ರ ತುಂಬಾ ಸುಂದರವಾಗಿ ಕಾಣಿಸುತಿದ್ದ ಹೊಳೆಯುವ ಹಾಗೆ ನಕ್ಷತ್ರಗಳು. ಶ್ಯಾಮ್ ಕ್ಯಾನ್ ಹಿಡಿದುಕೊಂಡು ಹಾಡುತ್ತ ಸಾಗುತಿದ್ದ ಅಕ್ಕ ಪಕ್ಕ ದಟ್ಟವಾಗಿ ಮರದ ಕೊಂಬೆಗಳು ನೆಲಕ್ಕೆ ಚಾಚಿದ್ದವು ತಣ್ಣನೆಯ ಗಾಳಿ ಮಿಂಚು ಹುಳುಗಳ ಶಬ್ದ , ಕಪ್ಪೆಗಳ ಕ್ರ್ರ ಕ್ರ್ರ ಎನ್ನುವ ಸದ್ದು ಟಾರ್ಚ್ ನನ್ನ ಅತ್ತ ಇತ್ತ ತಿರುಗಿಸಿಕೊಂಡು ನದಿಯ ಕಡೇ ಬರುತಿದ್ದ. ಆಗ ಅವನಿಗೆ ಬೆಳಕಿನಲ್ಲಿ ಒಂದು ಆಕಾರ ಕಣ್ಣಿಗೆ ಬಿತ್ತು. ಇವನ ಟಾರ್ಚ್ ಬೆಳಕಿಗೆ ಅದು ಒಂದು ಕಡೆ ಇಂದ ಮತ್ತೊಂದು ಕಡೆಗೆ ಜಿಗಿಯಿತು ಇವನು ಅದನ್ನು ನೋಡಿ ಕ್ಯಾನ್ ಬಿಸಾಡಿ ಓಡಿ ಬಂದ ಗುರು ಗುರೂ ..... ಎಂದು ಹೆದುಸೀರು ಬಿಡುತ್ತ. ನಾನು ಯಾಕೋ ಏನ್ ಅಯ್ತೂ ಚೆಳ್ ಕಡಿತ ನಿನಗೆ ಎಂದು ಕೇಳಿದೆ ಅವನು ಅದಲ್ಲ ಗುರು ಯಾವ್ದೋ ಪ್ರಾಣಿನೋ ಏನೋ ಗೊತ್ತಿಲ್ಲ ಕಣ್ಣು ಒಳ್ಳೆ ಟಾರ್ಚ್ತರಾ ಹೊಳೀತಿದೆ ನನ್ನ ನೋಡಿ ಹಾಗೆ ಜಿಗಿತು ಗುರು. ನಾನು ಎಲ್ಲೊ ಅದು ತೋರಿಸು ಎಂದು ಕೇಳಿದೆ ಅದಕ್ಕೆ ಅವನು ನಾನು ಬರೋದಿಲ್ಲ ಪ್ಪಾ ನನಗೆ ಇನ್ನು ಏನು ಆಗಿಲ್ಲ ತುಂಬಾ ಅಸೆ ಇದೆ ಜೀವನದಲ್ಲಿ ಎಂದು ಬಡಬಡಿಸುತ್ತಾ ಇದ್ದ ನಾನು ಸರಿ ನಾನೇ ಹೋಗ್ತೀನಿ ಕ್ಯಾನ್ ಎಲ್ಲಿ ಎಂದು ಕೇಳಿದೆ. ಅವನು ಕ್ಯಾನ್ ಆಹಾ ಅದನ್ನು ನೋಡಿದ ಅವಸರದಲ್ಲಿ ಅಲ್ಲೇ ಬಿಸಾಡಿರಬೇಕು ಎಂದು ಹೇಳಿ ಸೀದಾ ಕಾರ್ ಒಳಗೆ ಕೂತು ಬಿಟ್ಟ. ಸರಿ ಇಲ್ಲೇ ಇರು ನಾನು ಹೋಗಿ ನೀರು ತೊಗೊಂಡು ಬರ್ತೀನಿ ಎಂದು ಹೇಳಿ ಹೊರಟೇ. ಶ್ಯಾಮ್ ಗುರು ಬೇಡ, ಗುರು ಯಾವ್ದೋ ಕಾಡು ಮೃಗ ಆಗಿರ್ಬೇಕು ಹುಲಿನೊ, ಚಿರತೆನೋ ಆಗಿರ್ಬೇಕು ಎಂದು ಹೇಳಿದ.ಹೇ ಬೈಮುಚ್ಚೋ ಎಂದು ಹೇಳಿ ಟಾರ್ಚ್ ತೆಗೆದುಕೊಂಡು ಅಲ್ಲಿಂದ ಹೊರಟೆ.


ಕ್ಯಾನ್ ಒಂದು ಮೂಲೆಯಲ್ಲಿ ಬಿದ್ದಿರುವುದು ಕಂಡು ಬಂತು ಅದನ್ನು ತೆಗೆದು ಕೊಂಡು ದಾರಿಯಲ್ಲಿ ಸಾಗಿದೆ ಅವನು ಹೇಳಿದ ಹಾಗೆ ನಾನಗೂ ಒಂದು ರೀತಿಯಲ್ಲೇ ಅದೇ ಅನುಭವವಾಯಿತು ಒಂದು ಪ್ರಾಣಿ ಓಡಾಡುವುದು ಕಂಡು ಬಂತು ನಾನು ಟಾರ್ಚ್ ಬೆಳಕು ಜಾಸ್ತಿ ಮಾಡಿನೋಡಿದೆ ಅದು ಓಡಿ ಹೋಯಿತು ಅದ್ರ ಹಿಂದೆ ಹೋಗಿ ನೋಡಿದೆ ಟಾರ್ಚ್ ಬೆಳಕಿಗೆ ಮೈ ಮೇಲೆ ಎರಗಿ ಬಂತು ನಾನು ತಪ್ಪಿಸಿಕೊಂಡೆ ಮೇಲೆ ನೋಡುತ್ತೀನಿ ಅದು ಒಂದು ಬೆಕ್ಕು ಇಲಿಗಾಗಿ ಹೊಂಚು ಹಾಕಿಕೊಂಡು ಕಾಯುತಿದೆ ಎಂದು ಕಂಡು ಬಂತು . ನಾನು ನಕ್ಕು ಮುನ್ನಡೆದೆ ನದಿ ದೊರಕಿತು ಕ್ಯಾನ್ ನಲ್ಲಿ ನೀರು ಹಿಡಿದು ಕೊಂಡು ಕಾರ್ ಬಳಿ ಬಂದೆಶ್ಯಾಮ್ ಎಂದು ಕೂಗಿದೆ ಎಲ್ಲಿಯೂ ಕಾಣಲಿಲ್ಲ ಮತ್ತೆ ಕರೆದೆ ಕಾಣಿಸಲಿಲ್ಲ. ಎಲ್ಲಿ ಹಾಳಾಗಿ ಹೋದ ಎಂದು ಕೊಂಡು ನಾನು ರೇಡಿಯೇಟರ್ ನೀರು ಸುರಿದು ಬ್ಯಾನೆಟ್ ಮುಚ್ಚಿದೆ ಆಗ ನನ್ನ ಕಣ್ಣಿಗೆ ಒಬ್ಬ ವ್ಯಕ್ತಿ ಕಂಡು ಬಂದ ಅವನು ಮೈಯೆಲ್ಲಾ ಕೆಸರು ಒಂದು ಬಳ್ಳಿ ಗಿಡ ಅವನನ್ನು ಸುತ್ತಿಕೊಂಡಿತ್ತು . ನಾನು ಯಾರ್ ನೀನು ಎಂದು ಕೇಳಿದೆ ಅವನು ಬಾಯಿ ತೆರ್ದು ಗುರು ನಾನು ಶ್ಯಾಮು ಎಂದು ಹೇಳಿದಾ ಅವನ ಅವಸ್ಥೆ ನೋಡಿ ನನಗೆ ನಗು ಉಕ್ಕಿ ಬಂತು ಎಲ್ಲೋ ಹೋಗಿದ್ದೆ ಏನೋ ನಿನ್ ಕಥೆ ಆಹಾಅಯ್ಯೋ ನಾನು ನೇಚರ್ ಕಾಲ್ ಅಟೆಂಡ್ ಮಾಡೋಕ್ಕೆ ಹೋದೆ ಕತ್ತಲು ಸರಿಯಾಗಿ ಕಾಣಿಸಲಿಲ್ಲ ಕಾಲು ಜಾರಿ ಕೆಸರಲ್ಲಿ ಬಿದ್ದೆ ಮೇಲೆ ಬರೋಕ್ಕೆ ಆಗ್ಲಿಲ್ಲ ಹೇಗೋ ಸಾಹಸ ಮಾಡಿಬಂದೆ ಎಂದ .ನಾನು ಸರಿ ನಡಿ ನದಿ ದಂಡೆಯ ಬಳಿ ಹೋಗಿ ಸ್ನಾನ ಮಾಡುವಿಯಂತೆ. ಶ್ಯಾಮ್ ಗುರು ತಣ್ಣೀರು ಗುರು ಚಳಿಯಾಗುತ್ತೆ, ಇಲ್ಲ ಅಂದ್ರೆ ಇಲ್ಲೇ ಇರು ನಾನು ಹೋಗ್ತೀನಿ ಎಂದು ಹೇಳಿದೆ .ಅವನು ಶಪಿಸುತ್ತಲೇ ಸರಿ ಗುರು ನಡಿಸ್ನಾನ ಮುಗಿಸಿ ಕೊಂಡು ಕಾರನಾ ಬಳಿ ಬಂದೆವು ಅಲ್ಲೇ ಬಿದ್ದಿದ ಕ್ಯಾನ್ ತೆಗೆದು ಕಾರ್ ಡಿಕ್ಕಿಯಲ್ಲಿ ಇಡು ಎಂದು ಹೇಳಿ ನಾನು ಕಾರ್ನಲ್ಲಿ ಕುಳಿತೆ.


ಅವನು ಡಿಕ್ಕಿ ತೆಗೆದು ನೋಡಿದ ಅವನಿಗೆ ಒಂದು ಅಚ್ಚರಿ ಕಾದಿತ್ತು ಗುರು ಗುರೂ ಎಂದು ಕಿರುಚಿಕೊಂಡ .ನಾನು ಮತ್ತೆ ಏನೋ ನಿನ್ನ ಗೋಳು ಎಂದು ಹೋಗಿ ನೋಡಿದೆ ನಾನು ಕೂಡ ದಂಗಾದೆ . ಯಾರೋ ಇದು ನಮ್ಮ ಕಾರ್ನಲ್ಲಿ ಮಲಗಿದ್ದಾಳೆ ಎಂದು ಕೇಳಿದೆ. ಅವನು ಸಹ ಗೊತ್ತಿಲ್ಲ ಗುರು ಎಂದ. ನಾವು ಏನು ಮಾಡುವುದು ಯಾರು ಈಕೆ ಎಂದು ಪ್ರಶ್ನೆ ಮೂಡಿತು. ಅವಳ ಮೂಗಿನ ಮೇಲೆ ತನ್ನ ಕೈಬೆರಳು ಇಟ್ಟು ನೋಡುತ್ತಾನೆ ಉಸಿರಾಡು ತಿರುತ್ತಾಳೆ ನಾನು ಸ್ವಲ್ಪ ನಿರಾಳನಾದೆ , ಮತ್ತೆ ಅವಳನ್ನು ನೀರು ಚಿಮುಕಿಸಿ ಎಚ್ಚರಿಸಲು ಪ್ರಯತ್ನಿಸಿದೆ, ಅವಳು ಎಚ್ಚರಗೊಂಡಳು ಯಾರ್ ನೀವು ಎಂದೆಲ್ಲ ಡೈಲಾಗ್ ಹೇಳಲು ಶುರು ಮಾಡಿದಳು .ನಾನು ಕೇಳಿದೆ ಹಲೋ ಮೇಡಂ ಯಾರ್ ನೀವು ಯಾಕೆ ನನ್ನ ಕಾರ್ ಡಿಕ್ಕಿಯಲ್ಲಿ ಬಂದು ಕುಳಿತಿದ್ದೀರಿ ಎಂದು ನಾನು ಕೇಳಿದೇ ನಾನು ಕೇಳಿದ ಧಾಟಿಗೆ ಅವಳು ಅಳಲು ಶುರು ಮಾಡಿದಳು ಶ್ಯಾಮ್ ಮೋವ್ ಯಾಕೆ ಅಳ್ತಿಯಾ ಹೇಳು ಯಾವ ಊರು ನಿಂದು ಹೇಳು ನಾವು ಕರ್ಕೊಂಡು ಹೋಗಿ ಬಿಡ್ತಿವಿ ಎಂದ. ಹೌದು ಇವನು ನಿಮ್ಮ ಅಣ್ಣ ಕರ್ಕೊಂಡು ಹೋಗಿ ಬಿಟ್ಟು ಬರ್ತಾನೆ ಹೇಳು ಎಂದು ನಾನು ರೇಗಿದೆ. ಶ್ಯಾಮ್ ಗುರು ಸುಮ್ನೆ ಇರು ಯಾರಾದ್ರೂ ನೋಡಿ ನಮ್ಮ ಬಗ್ಗೆ ತಪ್ಪು ತಿಳ್ಕೊಂಡಾರು ಸರಿ ಸರಿ ಅದೇನು ಕೇಳ್ಬೇಕೋ ಕೇಳು ಕೆಳಗಿಳಿಸಿ ಕಳಿಸು ನಾವು ಹೋಗೋಣ ಎಂದು ಹೇಳಿ ನಾನು ಕಾರಿನ ಒಳಗೆ ಕುಳಿತೆ .ಶ್ಯಾಮ್ ಸರಿ ಎಂದು ಹೇಳಿ ಅವಳನ್ನು ಡಿಕ್ಕಿ ನಿಂದ ಕೆಳಗೆ ಇಳಿಸಿದ ಏನು ಕೇಳಿದರು ಆಕೆ ಏನು ಹೇಳಲಿಲ್ಲ ನಾನು ಸರಿ ಅವ್ಳನ್ನು ಕೆಳಗೆ ಇಳಿಸಿದ ಎಂದು ಕೇಳಿದೆ. ಶ್ಯಾಮ್ ಉಹು ಎಂದ ಸರಿ ಬಾ ನಾವು ಹೋಗೋಣ ಎಂದ ಸರಿ ಎಂದು ಹೇಳಿ ಶ್ಯಾಮ್ ಕಾರಿನಲ್ಲಿ ಬಂದು ಕುಳಿತ ಇಬ್ಬರು ಅಲ್ಲಿಂದ ಸ್ವಲ್ಪ ದೂರ ಹೊರಟೆವು.


ಶ್ಯಾಮ್ ಹಿಂದೆ ತಿರುಗಿ ನೋಡಿದ ಆ ಹುಡುಗಿ ಕಾಣಿಸಲಿಲ್ಲ , ಗುರು ಹುಡುಗಿ ಇಲ್ಲ ಎಂದು ಹೇಳಿದ ಹೋಗ್ಲಿ ಬಿಡು ಎಂದು ಹೇಳಿ ಮುಂದೆ ಸಾಗಿದೆ. ಅಹ್ ಹುಡುಗಿ ನದಿಯ ಬಳಿ ಇರುವುದು ಕಂಡು ಬಂತು ಶ್ಯಾಮ್ ಗುರು ಅಹ್ ಹುಡುಗಿ ನದಿಯ ಹತ್ರ ಇದಾಳೆ ನೋಡು, ಸಾಯೋಕ್ಕೆ ಇರ್ಬೇಕು ಬಿಡೋ ಎಂದು ಮುಂದೆ ಸಾಗಿದೆ. ಶ್ಯಾಮ್ ಗುರು ಪಾಪ ಹೆಣ್ಣು ಹುಡುಗಿ ಗುರು ಇನ್ನು ಚಿಕ್ಕ ವಯಸ್ಸು ಎಂದು ಹೇಳಿದ ಅವನ ಮಾತು ನನ್ನ ತಲೆ ಕೆಡಿಸಿತು ಕೊನೆಗೆ ಕಾರ್ ನಿಲ್ಲಿಸಿದೆ ಅವಳು ನದಿಗೆ ಹಾರಿ ಬಿಟ್ಟಳು.ನಾನು ಕೂಡಲೇ ಓಡಿ ನೀರಿಗೆ ಧುಮುಕಿದೆ ನದಿಯ ರಭಸ ಜೋರಾಗಿ ಇದ್ದರಿಂದ ಅವಳು ಕಾಣಿಸಲಿಲ್ಲ ನಾನು ವಾಪಾಸ್ ದಡಕ್ಕೆ ಬಂದೆ ನಾನು ಸಪ್ಪೆ ಮುಖ ಹಾಕಿ ಶ್ಯಾಮ್ ಮುಖ ನೋಡಿ ಸಿಗಲಿಲ್ಲ ಎಂದು ಹೇಳಿದೆ. ಆದ್ರೆ ಕಾರ್ ಸ್ಟಾರ್ಟ್ ಮಾಡುವಾಗ ಯಾರೋ ಕೆಮ್ಮಿದ ಶಬ್ದ ಕೇಳಿಸಿತು ನಾನು ಕಾರ್ ನಿಂದ ಇಳಿದು ನೋಡಿದೆ ಯಾರು ಕಾಣಿಸಲಿಲ್ಲ ಮತ್ತೆ ಒಳಗೆ ಕುಳಿತೆ ಮತ್ತೆ ಅದೇ ಶಬ್ದ ಕೇಳಿಸಿತು ಮತ್ತೆ ದಡದ ಬಳಿ ಬಂದು ನೋಡಿದೆ ಅದೇ ಹುಡುಗಿ ನೀರಿಗೆ ಹಾರಿದ ಹುಡುಗಿ ಕಾಣಿಸಿಕೊಂಡಳು.ಶ್ಯಾಮ್ ಕರೆದು ನೋಡೋ ಅಹ್ ಹುಡುಗಿ ಸತಿಲ್ಲ ಬದುಕಿದ್ದಾಳೆ ಅವನು ನೋಡಿ ಅವಳ ಬಳಿ ಹೋಗಿ ಯಾಕ್ರೀ ಸಾಯೋಕ್ಕೆ ಹೋದ್ರಿ ನೀವು ಎಂದು ಕೇಳಿದಅಯ್ಯೋ ನಾನು ಸಾಯೋಕ್ಕೆ ಹೋಗಿಲ್ಲ ಬಿಕ್ಕಳಿಕೆ ಬಂತು ಅದಕ್ಕೆ ನೀರು ಕುಡಿಯೋಕ್ಕೆ ಹೋದೆ ಅಷ್ಟೇ ಮತ್ತೆ ಬಟ್ಟೆ ಯಾಕೆ ಒದ್ದೆಯಾಗಿದೆ ? ನೀರು ಕುಡಿತಿದ್ದೆ ನಾನು ನಿಂತಿದ್ದ ಕಲ್ಲು ತುಂಬಾ ಪಾಚಿ ಇತ್ತು ಕಾಲ್ ಜಾರಿ ಬಿದ್ದೆ ಎಂದು ಹೇಳಿದಳು. ಈ ಮಾತನ್ನು ಕೇಳಿದ ನಾನು ತಲೆ ಮೇಲೆ ಕೈ ಹೊತ್ತು ಕೂತೆ.ಶ್ಯಾಮ್ ಮತ್ತೆ ನೀವು ಎಲ್ಲಿಗೆ ಹೋಗ್ಬೇಕು ಹೇಳಿ ನಾವು ಹೋಗೋ ದಾರಿಯಲ್ಲಿ ಬಿಟ್ಟು ಹೋಗ್ತಿವಿ ಎಂದು ಕೇಳಿದ.ನಾನು ಪೊಲೀಸ್ ಸ್ಟೇಷನ್ ಹೋಗ್ಬೇಕು ? ಶ್ಯಾಮ್ ನನ್ನ ಮುಖ ನೋಡಿದ ? ನಾನು ಸಾಯಿಸೊ ರೀತಿ ಮುಖ ಮಾಡಿಕೊಂಡೆ. ಅವನು ಭಯದಿಂದ ಯಾಕ್ರೀ ಪೊಲೀಸ್ ಸ್ಟೇಷನ್ ಹೋಗ್ಬೇಕು ಎಂದು ಕೇಳಿದ

.ನಾನು ಒಂದು ಕಂಪ್ಲೇಂಟ್ ಕೊಡಬೇಕು. ಶ್ಯಾಮ್ ಕೇಳಿದ ಏನ್ ಕಂಪ್ಲೇಂಟ್ ಕೊಡ್ತೀರಾಅವಳು ನಿಮಗೆ ಯಾಕ್ರೀ ಏನೋ ಕೊಡ್ತೀನಿ. ಶ್ಯಾಮ್ ಸರಿ ಏನಾದ್ರು ಕೊಡಿ ನಂಗೆಯೇನು ಎಂದು ಹೇಳಿ ಅವಳನ್ನು ಕರೆದು ಕೊಂಡು ಪೊಲೀಸ್ ಸ್ಟೇಷನ್ ಬಳಿ ಕರೆದು ಕೊಂಡು ಹೋದ್ವಿ ದೂರದಲ್ಲೇ ಬಿಟ್ಟು ನಾವು ಸರಿ ನಾವು ಹೋಗ್ತಿವಿ ಅದೇನು ಕಂಪ್ಲೇಂಟ್ ಕೊಡಬೇಕೋ ಕೊಡಿ ಎಂದು ಹೇಳಿ ಕಾರ್ ಸ್ಟಾರ್ಟ್ ಮಾಡಿದೆವು. ಆಗ ಅವಳು ನಾನು ಒಳಗೆ ಹೋಗಿ ಬರ್ತೀನಿ ಸ್ವಲ್ಪ ಹೊತ್ತು ಇಲ್ಲೇ ಕಾಯಿತಿರಾ ಎಂದು ಕೇಳಿದಳು. ನಾವು ಆಗೋದಿಲ್ಲ ಎಂದು ಹೇಳಿದೆವು. ಅವಳು ಹೌದ ಮಾಡ್ತೀನಿ ನಿಮ್ಮ ಮೇಲೆ ಕಂಪ್ಲೇಂಟ್ ಕೊಡ್ತೀನಿ ಎಂದು ಧಮ್ಕಿ ಹಾಕಿದಳು. ಹಲೋ ಏನೋ ಉಪ್ಕಾರ ಆಗ್ಲಿ ಅಂತ ಮಾಡಿದ್ರೆ ನಮಗೆ ಪೂಜೆನಾ ಹೋಗ್ರಿ ಹೋಗ್ರಿ ಅದೇನು ಕಂಪ್ಲೇಂಟ್ ಕೊಡ್ತಿರೋ ಕೊಡ್ರಿ ಎಂದು ಹೇಳಿದೆ.

ಅದಕ್ಕೆ ಶ್ಯಾಮ್ ಅಣ್ಣ ಬೇಡ ಸುಮ್ನಿರೋ ಮೊದಲೇ ಪೊಲೀಸ್ರವರು ಹೆಣ್ಣು ಮಕ್ಕ್ಳು ಕಣ್ಣೀರು ಇಟ್ಟ್ರೆ ನಮ್ಮನ್ನ ರುಬಿಬಿಡ್ತಾರೆ ಹಾಗೆ ಕಾರನ್ನು ಇವತ್ತೇ ಕದ್ದಿರೋದು ಏನಾದ್ರು ಗೊತ್ತಾದ್ರೆ ನಮ್ಮ ಕಥೆ ಅಷ್ಟೇ ಎಂದು ಎಚ್ಚರಿಸಿದ ನಾನು ಯೋಚ್ನೆ ಮಾಡಿ. ಆಮೇಲೆ ನಯವಾಗಿ ಸುಮ್ನೆ ಯಾಕೆ ಜಗಳ ಹೋಗಿಬನ್ನಿ ನಾವು ಇರುತ್ತಿವೆ ಎಂದು ಹೇಳಿದೆ. ಅವಳು ಒಳಗೆ ಹೋಗಿ ೧೫ ನಿಮಿಷ ಬಿಟ್ಟು ಒಬ್ಬ ಕಾನ್ಸ್ಟೆಬಲ್ ಜೊತೆ ಬರುತ್ತಿರುವುದನ್ನು ನೋಡಿ ಏನ್ ಗ್ರಹಚಾರ ಕಾದಿದಿಯೋ ನಮಗೆ ಎಂದು ಅವನ ಮುಖ ನೋಡಿ ಹೇಳಿದೆ.ಹತ್ತಿರ ಬಂದ್ರು ಕಾನ್ಸ್ಟೆಬಲ್ ಸರ್ ಈ ಮೇಡಂನಾ ನಾವು ಸ್ಟೇಷನ್ ಒಳಗೆ ಇಡೋಹಾಗಿಲ್ಲ ನಿಮ್ಮ ಮನೆಗೆ ಕರೆದು ಕೊಂಡು ಹೋಗಿ ಎಂದು ಹೇಳಿದ. ಅವನು ಹೇಳಿದ ಮಾತು ಕೇಳಿ ಚಕ್ಕರ್ ಹೊಡೆದ ಹಾಗೆ ಆಯಿತು ಅಗಾ ನಮಗೆ ಪರಿಚಯ ಇದ್ದ ಕಾನ್ಸ್ಟೆಬಲ್ ಬಂದ ಅವನ ಹೆಸರು ರಾಮಯ್ಯ ನಮ್ಮನ್ನು ನೋಡಿ ಏನು ಇಷ್ಟು ಹೊತ್ತಿನಲ್ಲಿ ಅದು ಸ್ಸ್ಟೇಷನ್ ಮುಂದೆ ಕೇಳಿದ ನಾನು ನಡೆದ ಘಟನೆ ಹೇಳಬೇಕು ಅಷ್ಟು ಹೊತ್ತಿಗೆ ಅವಳು ಇವರು ನನ್ನ ಗಂಡ ಮನೆಯಲ್ಲಿ ಜಗಳವಾಗಿದೆ ಅದಕ್ಕೆ ನನ್ನನು ಪೊಲೀಸ್ ಸ್ಟೇಷನ್ ಬಳಿ ಕರೆದು ಕೊಂಡು ಬಂದಿದ್ದಾರೆ ನೋಡಿ ಅಣ್ಣ ಅಂದು ಬಿಟ್ಟಳು ಅವನು ಹೆಣ್ಣು ಮಕ್ಕಳು ಆದ್ರೆ ಕರುಣೆ ಸ್ವಲ್ಪ ಜಾಸ್ತಿ , ನನ್ನ ಮುಖ ನೋಡಿ ಏನ್ ಸರ್ ನೀವು ಮದುವೆ ಆಗಿರೋದು ಒಂದು ಮಾತು ಹೇಳಿಲ್ಲ ಎಂದು ಕೇಳಿದ. ಕಾನ್ಸ್ಟೆಬಲ್ ಕೇಳಿದ ಅವಳು ಅದಕ್ಕೆ ನನ್ನ ತಮ್ಮ ಎಂದು ಅವನ ಬಾಯಿಯನ್ನು ಸಹ ಮುಚ್ಚಿಸಿ ಬಿಟ್ಟಳು. ಇಬ್ಬರ ಏನು ಮಾತಾಡೋ ಬೇಕು ತಿಳಿಯಲಿಲ್ಲ ಅವಳ ಮಾತಿಗೆ ನಮ್ಮ ಬಾಯಿ ಕಟ್ಟಿಹೋಗಿತ್ತು. ಇಬ್ಬರು ಪೊಲೀಸ್ ಕಾನ್ಸ್ಟೆಬಲ್ ಸರ್ ಇಬ್ಬರು ಅಡ್ಜಸ್ಟ್ ಮಾಡ್ಕೊಂಡು ಹೋಗಿ ಸರ್ ಎಂದು ಅವಳನ್ನು ಕಾರಿನ ಒಳಗೆ ಕುಳಿಸಿ ಈಗ ಮನೆಗೆ ಹೋಗಿ ಸರ್ ಎಂದು ಹೇಳಿದರು.


ನಾನು ತಲೆಯಾಡಿಸಿ ಕಾರ್ ಸ್ಟಾರ್ಟ್ ಮಾಡಿ ಹೊರಟೆ.ದಾರಿಯಲ್ಲಿ ಹೋಗುತ್ತಿರುವಾಗ ಶ್ಯಾಮು ಏನ್ ನಡಿತಿದೇ ಎಂದು ಅವವನ್ನು ಕೇಳಿದೆ ,ಗುರು ನಂಗು ಅರ್ಥ ಆಗ್ತಿಲ್ಲ ಗುರು ಸುಮ್ನೆ ಇರಲಾರದೆ ಶನಿಮಹಾತ್ಮನ ಹೆಗಲ ಮೇಲೆ ಕೂರಿಸಿಕೊಂಡಿದೀವಿ.ಮನೆ ತಲುಪಿದರು ಎಲ್ಲರು ಕೆಳಗೆ ಇಳಿದರು ಮನೆಯ ಬಾಗಿಲು ತೆರೆದು ಒಳಗೆ ಹೋಗಿ ಲೈಟ್ ಹಾಕಿದ. ಅವಳ ಬಟ್ಟೆ ಒದ್ದೆಯಾಗಿತ್ತು. ಅವಳು ನಂಗೆ ಒಂದು ಡ್ರೆಸ್ ಕೊಡ್ತೀರಾ ಈ ಬಟ್ಟೆಯಲ್ಲೇ ಮಲಗಿದ್ರೆ ಶೀತ ಆಗುತ್ತೆ ಎಂದು ಹೇಳಿದಳು. ನಾನು ಅವನ ಮುಖ ನೋಡಿದೇ ಅವನಿಗೆ ಅರ್ಥವಾಯಿತು. ಒಳಗೆ ಇದ್ದ ಯಾವುದೊ ಟಿ ಶರ್ಟ್ ಕೊಟ್ಟು ಬಂದ. ಅವಳು ರೀ ಇದು ಬೇಡ ಅಲ್ಲಿ ರೆಡ್ ಕಾಣಿಸ್ತೀದಿಯಲ್ಲ ಅದು ಕೊಡಿ ಎಂದಳು. ಅವನು ನನ್ನ ಮುಖ ನೋಡಿ ಗುರು ಎಂದು ರಾಗ ತೆಗೆದ ನಾನು ಮರು ಮಾತಾಡದೆ ಅವನ ಕೈಗೆ ಕೊಟ್ಟೆ. ಆಮೇಲೆ ಅವಳು ಬಂದು ನಂಗೆ ಹೊಟ್ಟೆ ಹಸಿವು ಆಗ್ತಿದೆ ಎಂದು ಕೇಳಿದಳು ಸಮಯ ಆಗಲೇ ೩ ಗಂಟೆಯಾಗಿತ್ತು. ಶ್ಯಾಮ್ ನೋಡಿ ಫ್ರೀಜ್ ಇದೆ ಅದ್ರಲ್ಲಿ ಹಣ್ಣು , ಹಾಲು, ಮೊಸರು , ಬೆಣ್ಣೆ ,ಬ್ರೆಡ್ ಏನ್ ಬೇಕೋ ತಿಂದು ಲೈಟ್ ಆಫ್ ಮಾಡಿ ಮಲ್ಕೊಳ್ಳಿ ಎಂದ. ಅವಳು ಸರಿ ಆದ್ರೆ ನಂಗೆ ಬೆಡ್ ಮೇಲೆ ಮಲಗಿದ್ರೆ ನಿದ್ರೆ ಬರೋದು ಎಂದು ರಾಗ ತೆಗೆದಳು ಶ್ಯಾಮ್ ರೀ ಇಲ್ಲಿ ಬೆಡ್ ಇಲ್ಲ ಅಣ್ಣ ರೂಮ್ನಲ್ಲಿ ಮಾತ್ರ ಬೆಡ್ ಇರೋದು ಅದಕ್ಕೆ ಸರಿ ಅಲ್ಲೇ ಮಲಗ್ತೀನಿ ಎಂದಳು ಶ್ಯಾಮ್ ಒಂದು ಕ್ಷಣ ಗರ ಬಡಿದವನಂತೆ ನಿಂತುಕೊಂಡ.

ನಾನು ಆಗಲೇ ಮಲಗಿ ಕೊಂಡಿದ್ದೆ ಇವರ ಮಾತು ಒಂದು ನನ್ನ ಕಿವಿಗೆ ಬೀಳಲಿಲ್ಲ ಆ ದಿನ ಗಾಢವಾದ ನಿದ್ರೆ ಆವರಿಸಿತ್ತು. ಬೆಳಗ್ಗೆಯಾಯಿತು ನಾನು ಶ್ಯಾಮ್ ಕಾಫಿ ಕಣೋ ಏನು ಹೇಳಿದೆ ಅವನು ಸಹ ಅಣ್ಣ ಬಂದೆ ಎಂದು ಹೇಳಿದ. ನಾನು ರೂಮ್ ಬಾಗಿಲು ತೆರದೆ ಬಿಸಿ ಬಿಸಿ ಕಾಫಿಯ ಪರಿಮಳ ನನ್ನ ಮೂಗಿಗೆ ಬಡಿಯಿತು. ನಾನು ಕಾಫಿ ಹಿಡಿದು ಹೊರಬಂದೆ ಶ್ಯಾಮ್ ಮತ್ತೊಂದು ಕಾಫಿಯನ್ನು ಹಿಡಿದು ಅವಳಿಗಾಗಿ ಮನೆಯ ಸುತ್ತ ಹುಡುಕಿದ ಕಾಣಿಸಲಿಲ್ಲ. ವಾಪಸ್ ಅಡುಗೆ ಮನೆಗೆ ತೆರಳಬೇಕು ಆಗ ರೂಮ್ ನಿಂದ ಶಬ್ದ ಕೇಳಿಬಂತು ಒಳಗೆ ಹೋಗಿ ನೋಡುತ್ತಾನೆ ಬೆಡ್ ಮೇಲೆ ಮಲಗಿರಿವುದನ್ನು ನೋಡಿ ಬೆಡ್ ಶಿಟ್ ಸರಿಸಿ ನೋಡಿದ ಹಾಗೆ ಕಣ್ಣು ಬಾಯಿ ಬಿಟ್ಟು ನಿಂತ ಅವನ ಕೈನಲಿದ್ದ ಕಾಫಿ ಗ್ಲಾಸ್ ಕೆಳಗೆ ಬಿತ್ತು. ನಾನು ಓಡಿಬಂದು ನೋಡಿದೆ ಏನಾಯಿತು ಎಂದು ಆ ದೃಶ್ಯವನ್ನು ನೋಡಿ ಆಘಾತವಾಯಿತು ನೆನ್ನೆ ಬಂದಿದ್ದ ಅಹ್ ಹುಡುಗಿ ನನ್ನ ಬೆಡ್ ಮೇಲೆ ಮಲಗಿದ್ದಳು

.ಶ್ಯಾಮ್ ನನ್ನ ನೋಡಿ ಗುರು ಎಂದು ಕಣ್ಣು ಧಿಟ್ಟಿಸಿ ನೋಡಿದ. ನಾನು ನನಗೆ ಏನಾಯಿತು ಗೊತ್ತಿಲ್ಲ ಕಣೋ ನಾನು ಸುಮ್ನೆ ಮಲಗಿದ್ದೆ ಇವಳು ಯಾವಾಗ ಬಂದು ಇಲ್ಲಿ ಮಲಗಿದಳು ಗೊತ್ತಿಲ್ಲ ಕಣೋ ಎಂದು ಹೇಳಿದೆ ಆದ್ರೆ ಅವನು ನನ್ನ ಹತ್ತಿರ ಬಂದು ನನ್ನ ಕೆನ್ನೆಯ ಮೇಲೆ ಇರುವ ಒಂದು ಬಿಂದಿಯನ್ನುತೆಗೆದು ತೋರಿಸಿದ ನನಗೆ ಇನ್ನು ಭಯ ಹೆಚ್ಚಾಯಿತು ನೋಡೋ ಶ್ಯಾಮ್ ನಾನು ಏನು ಮಾಡಿಲ್ಲ ಕಣೋ ನನ್ನ ನಂಬು ಎಂದು ಅವನನ್ನು ಕೇಳಿಕೊಂಡೆ ಅವನು ನಿನ್ನ ಮೇಲೆ ನಂಬಿಕೆ ಇದೆ ಆದ್ರೆ ಇವಳೇ ಏನೋ ಮಾಡಿರಬೇಕು ನಿನಗೆ ಎಂದಾ .ಅವಳನ್ನು ಎಬ್ಬಿಸಲಾಯಿತು ಅವಳ ಮೈ ಮೇಲೆ ಬಟ್ಟೆ ಅರ್ಧ ಬರ್ಧ ಬಟ್ಟೆ ಇತ್ತು ಅವಳು ನೋಡಿಕೊಂಡು ಭಯ ಪಟ್ಟಳು ಏನು ಮಾಡಿದ್ರಿ ನೀವು ನನಗೆ ಎಂದು ಪ್ರಶ್ನಿಸಿದಿದಳು . ನಾನು ಹೇಗೆ ಇಲ್ಲಿಗೆ ಬಂದೆ ಎಂದೆಲ್ಲಾ ತಲೆ ಕೆರೆದಕೊಂಡು ನೋಡಿದಳು.ನಾನು ಏನು ಮಾಡಿಲ್ಲ ನೀವು ಹೇಗೆ ಬಂದ್ರೋ ನನಗೆ ಗೊತ್ತಿಲ್ಲ. ನಾನು ಏನು ಮಾಡಿಲ್ಲ ಎಂದು ಬಡಬಡಿಸುತಿದ್ದೆ . ಆಗ ಅವಳು ಏನೂ ಮಾಡಿಲ್ಲವಾ ಎಂದು ಒಂದು ಕೊಂಕು ಮಾತಿನಿಂದ ಕೇಳಿದಳು ನೋಡಿ ನೀವು ಹೇಳೋ ರೀತಿ ನಾನು ಏನು ಮಾಡಿಲ್ಲ ನನ್ನ ತಾಯಿ ಮೇಲೆ ಪ್ರಮಾಣ ಮಾಡ್ತೀನಿ.ಆಗ ಅವಳು ಸತ್ತಿರೋನಾ ಮತ್ತೆ ಯಾಕೆ ಸಾಯಿಸ್ತೀರಾ ಅಹ್ ಸರಿ…. ಸರಿ…. ತುಂಬಾ ತಲೆ ಕೆಡಿಸ್ಕೊಬೇಡಿ ಪರವಾಗಿಲ್ಲ ಬಿಡಿ ಹೌದು ನಿಮಗೆ ಮದುವೇ ಆಗಿದೀಯಾ ಇಲ್ಲವಾ ? ನಾನು ಇಲ್ಲ ಎಂದೇ ಸರಿ ಬಿಡಿ ಮದುವೇ ಅಗೋಣಾ ಬನ್ನಿ ಎಂದು ಕರೆದಳು. ನಾನು ಅಯ್ಯೋ ನಾನು ಮದುವೇ ಆಗೋದಿಲ್ಲ ನಾನು ಬ್ರಹ್ಮಚಾರಿ ಅವಳು ಹೌದಾ ನೋಡೋಣ ನಾನು ಇಲ್ಲೇ ಇರ್ತೀನಿ ನಿಮ್ಮ ಬ್ರಹ್ಮಚಾರಿ ಪಾಲನೆ ಹೇಗೆ ನಡೆಯುತ್ತೆ ನೋಡ್ತೀನಿ ಎಂದು ಹೇಳಿದಳು.ನಾನು ಇಲ್ಲೇ ಇರ್ತೀರಾ ಅದು ಹೇಗೆ ಆಗುತ್ತೆ ಎಂದು ಸ್ವಲ್ಪ ಜೋರ್ ಮಾಡಿದೇ .


ಅದಕ್ಕೆ ಅವಳು ಹೌದಾ ನಾನು ಪೊಲೀಸ್ ಸ್ಟೇಷನ್ ನಲ್ಲಿ ಒಂದು ಕಂಪ್ಲೇಂಟ್ ಕೊಟ್ಟು ಬಂದಿದೀನಿ ನಾನು ಏನಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನೀವು ಇಬ್ಬರೇ ಕಾರಣ ಎಂದು ಬರೆದುಕೊಟ್ಟು ಬಂದಿದ್ದೇನೆ.ಶ್ಯಾಮ್ ಗುರು ಏನಿದು ಫೀಟಿಂಗ್ ಏನೂ ಮಾಡೋಕ್ಕೆ ಹೋಗಿ ಏನೋ ಆಗ್ತಿದೆ ಹೌದ ಸ್ವಲ್ಪ ಹೊರಗಡೆ ಬರ್ತೀಯ ನೀನು ಎಂದು ಅವನ್ನು ಹೊರಗೆ ಕರೆದು ಕೊಂಡು ಹೋಗಿ ನಾಲ್ಕು ಬಾರಿಸಿದೆ ನಮ್ಮ ಪಾಡಿಗೆ ಇದ್ದೆ ಹುಡುಗಿ ಪಾಪ ಅಂತಾ ಸಹಾಯ ಮಾಡು ಅಂತ ಹೇಳ್ದಲ್ಲಾ ಈಗಾ ಏನು ಮಾಡಬೇಕು ಹೇಳಿ ಸರ್ . ಶ್ಯಾಮ್ ಗುರು ನನಗೆ ಇತರಾ ಆಗುತ್ತೆ ಗೊತ್ತಿಲ್ಲ .ಹಾಳಾಗಿ ಹೋಗ್ಲಿ ಅಂತ ಸುಮ್ನೆ ಕರ್ಕೊಂಡು ಬಂದ್ರೆ ಇವಾಗ ಏನೋ ಮಾಡ್ತೀರಾ ಅಂತಾ ಬೇರೆ ಹೇಳ್ತಾರೆ ತೂ ನನ್ನ ಹಣೆ ಬರಹ ಯಾಕೋ ಚೇಂಜ್ ಆಗಿದೆ . ಶಪಿಸುತ್ತಲೇ ಸುಮನ್ನೇ ಕುಳಿತೆ . ಆಗ ಅವಳು ಹೊರ ಬಂದು ನೋಡಿ ನನಗೆ ಸ್ವಲ್ಪ ಬಟ್ಟೆಗಳು ಖರೀದಿಸಬೇಕು ಸ್ವಲ್ಪ ಹಣಕೋಡಿ ಎಂದು ಕೇಳಿದಳು.ನಾನು ಮರು ಮಾತಾಡದೆ ಒಳಗೆ ಬೈಕೊಂಡೆ ಕಿಸೆಯಲ್ಲಿದ್ದ ಒಂದಷ್ಟು ಹಣ ತೆಗೆದು ಶ್ಯಾಮ್ ಕೈಗೆ ಕೊಟ್ಟೆ. ಸರಿ ಎಲ್ಲ ಮುಗಿತು ನಾನು ಸ್ನಾನ ಮಾಡಿ ಕೊಂಡು ರೂಮ್ ಒಳಗೆ ಹೋದೆ ಬಟ್ಟೆ ಹಾಕಿಕೊಳ್ಳ ಬೇಕು ಧಿಡೀರ್ ಎಂದು ರೂಮಿಗೆ ನುಗಿದ್ದಳು ,ನಾನು ರೀ ಬಟ್ಟೆ ಹಾಕೋಳೋದೂ ಗೊತ್ತಿಲ್ವ ಯಾಕ್ರೀ ಬಂದ್ರಿ . ಅಯ್ಯೋ ನನ್ನ ರೂಮೀಗೆ ನಾನು ಬಂದ್ರೆ ನಿಮ್ಗೆ ಏನ್ ಕಷ್ಟ ಎಂದು ಮರು ಉತ್ತರ ನೀಡಿದಳು. ನಾನು ಹಲೋ ಇದು ನನ್ನ ರೂಮ್ ಎಂದು ಹೇಳಿದೆ . ರೀ ಇನ್ನು ಮೇಲೆ ಈ ರೂಮ್ ನನಗೂ ಸೇರುತ್ತೆ ಎಂದು ಮೂತಿ ತಿವಿದು ಹೋದಳು.


ಟಿಫನ್ ಮಾಡಬೇಕು ಶ್ಯಾಮ್ನಾ ಕರೆದೆ ಟಿಫನ್ ಕೊಡೊ ಎಂದು ಸುಮಾರು ಬಾರಿ ಕರೆದೆ ಬರಲಿಲ್ಲ ಸರಿ ಎಂದು ನಾನೇ ಅಡುಗೆ ಮನೆಗೆ ಹೋದೆ ಅಷ್ಟೊತಿಗೆ ಅವಳು ಹೋಗಿ ಟಿಫನ್ ಬಡಿಸಿ ನನ್ನ ಕೈಗೆ ಕೊಟ್ಟಳು ವಿಧಿ ಇಲ್ಲ ತಿನ್ನ ಬೇಕಿತ್ತು ಶ್ಯಾಮ್ ಎಲ್ಲೊ ಹೊರಗೆ ಹೋಗಿದ್ದ ನಂತರ ಬಂದು ಅಣ್ಣ ಏನೋ ನೀನೇ ಬಡಿಸ್ಕೊಂಡಾ ಹೌದು ಕಣೋ ಎಂದು ಅವಳ ಮುಖ ನೋಡಿ ಹೇಳಿದೆ. ಅವಳು ನಕ್ಕು ರೂಮಿಗೆ ಹೋದಳು .ನಾನು ಶ್ಯಾಮ್ ನಿನ್ನ ಪಾರ್ಟಿ ಏನೋ ಇಷ್ಟೊತ್ತು ಆದ್ರೂ ಕಾಲ್ ಮಾಡಿಲ್ಲ ನಿನಗೆ ಏನ್ ಸಮಾಚಾರ . ಅವನಿಗೆ ಕಾರ್ ಜಾಸ್ತಿದಿಯಾ ಏನ್ ಕಥೆ ಆಹ್ಹ್. ಶ್ಯಾಮ್ ಪಾರ್ಟಿ ತುಂಬಾ ಜೋರಾಗಿ ಇದಾನೆ ಒಂದು ಕೆಲ್ಸ ನಾವೇ ಅವನ ಮನೆಗೆ ಹೋಗಿಬರೋಣವೇ ಎಂದು ಹೇಳಿದ.


ಸರಿ ತಿಂಡಿ ತಿಂದು ಹೋಗೋಣಾ ಹೌದು ಏನೋ ತಿಂಡಿ ಇಷ್ಟು ಚೆನ್ನಾಗಿ ಮಾಡಿದೀಯ ಇನ್ನ ಮೇಲೆ ಹೀಗೆ ಮಾಡು ಸರೀನಾ ಎಂದು ಹೇಳಿದೆ. ಅದಕ್ಕೆ ಅವನು ಅಣ್ಣ ತಿಂಡಿ ನಾನು ಮಾಡಿಲ್ಲ , ನಾನು ಮತ್ತೆ ಯಾರು ಮಾಡಿದ್ದು ? ಅವನು ರೂಮ್ ಕಡೆ ಮುಖ ಮಾಡಿದ ನನಗೆ ಅರ್ಥವಾಯಿತು. ಹೇ ನನಗೆ ಊಟ ನೀನೇ ಮಾಡೋ ಬೇರೆಯಾರು ಮಾಡಿದ್ರು ತಿನ್ನೋದಿಲ್ಲಾ ಎಂದು ಜೊರಾಗಿ ಹೇಳಿದೆ ಅವಳ ಕಿವಿಗೆ ಬೀಳಲಿ ಎಂದು .ನಾವಿಬ್ಬರು ಸುಮಾರು ೧೨ ಗಂಟೆಯಾಗಿತ್ತು ಕಾರ್ ಮಾಲೀಕನ ಮನೆಯ ಹತ್ತಿರ ಹೋದೆವು ಜನ ದಟ್ಟಣೆ ಸೇರಿತ್ತು ಪೊಲೀಸ್ ಜಿಪ್ ಕೂಡ ಬಂದಿತ್ತು. ನಾವು ಸ್ವಲ್ಪ ಭಯಗೊಂಡೆವು ದಾರಿಯಲ್ಲಿ ಹೋಗುತ್ತಿರುವ ಒಬ್ಬ ವ್ಯಕ್ತಿಯನ್ನು ಕೇಳಿದೆವು ಏನಾಗಿದೆ ಅಲ್ಲಿ ಜನ ಯಾಕೆ ಅಹಾಗೆ ನಿಂತಿದ್ದಾರೆ ಎಂದು.ಅವನು ಗೊತ್ತಿಲ್ಲ ಸರ್ ಪೊಲೀಸ್ ಯಾರನ್ನು ಒಳಗೆ ಬಿಡ್ತಲ್ಲ ಎಂದು ಹೇಳಿ ಹೋದ ನಾವೂ ನಿದಾನವಾಗಿ ಅವನ ಬಳಿ ತಲುಪಿದೆವು ಜನಗಳ ಸರಿಸಿ ಒಳಗೆ ಹೋಗಿ ನೋಡಿದೆ ನನಗೂ ಮತ್ತು ಶ್ಯಾಮ್ಗೂ ಒಂದು ಆಘಾತ ಕಾದಿತ್ತು ಅದೇನೆಂದರೆ ಕಾರ್ ಮಾಲೀಕನ ಹತ್ಯೆಯಾಗಿತ್ತು.ನಾವು ಅದನ್ನು ನೋಡಿ ಭಯಗೊಂಡೆವು ಕತ್ತಿನ ಹತ್ತಿರ ಅವನ್ನು ಇರಿಯಾಲಾಗಿತ್ತು. ನಾವು ಅಲ್ಲಿಂದ ಮರು ಮಾತಾಡದೆ ಸುಮ್ಮ್ನೆ ಜಾಗ ಖಾಲಿ ಮಾಡಿದೆವು ಅಲ್ಲಿಂದ ಒಂದು ಎರಡು ಮೂರೂ ಕಿಲೋ ಮೀಟರ್ ದೂರ ಬಂದು ಗಾಡಿಯನ್ನು ನಿಲ್ಲಿಸಿ ಕೆಳಗೆ ಇಳಿದು ತಲೆಯ ಮೇಲೆ ಕೈ ಹೊತ್ತು ಕೂತೆವುಏನೋ ಮಾಡೋಕ್ಕೆ ಹೋಗಿ ಏನೋ ಮಾಡಿಕೊಂಡೆವು ಈಗ ಏನು ಮಾಡೋದು ಎಂದು ಶ್ಯಾಮ್ ಕೇಳಿದ. ನನಗೂ ದಾರಿ ತೋಚುತ್ತಿಲ್ಲ ಸೀದಾ ಮನೆ ಕಡೆ ಪಯಣ ಬೆಳೆಸಿದೆವು ನಮ್ಮ ಮುಖ ಮೊದಲಿನಂತೆ ಲವಲವಿಕೆಯಿಂದ ಇರಲಿಲ್ಲ. ಸ್ವಲ್ಪ ಬೆವರಿಂದಲೇ ಒಳಗೆ ಹೋಗಿ ನೀರು ಕುಡಿದು ಕಾರ್ ನಿಲ್ಲಿಸಿದ ಜಾಗಕ್ಕೆ ಹೋಗಿ ಕಾರ್ ನಲ್ಲಿ ಏನಿದೆ ಅವನಿಗೆ ಸಂಬಂಧಪಟ್ಟಿದ್ದು ಎಂದು ಎಲ್ಲವನ್ನು ಕೂಲಂಕುಷವಾಗಿ ಗಮನಿಸಿದೆವು ಏನು ದೊರೆಯಲಿಲ್ಲ. ಶ್ಯಾಮ್ ಆ ಕ್ಷಣ ಅಣ್ಣ ನಾವು ಊರು ಬಿಡೋಣ ಎಂದು ಕೇಳಿದ ನಾನು ಅದಕ್ಕೆ ಹಾಗೆ ಮಾಡಿದರೆ ತಪ್ಪು ನಮ್ಮ ಮೇಲೆ ಬರ್ತ್ತದೆ ಬೇಡಾ ಇಲ್ಲೇ ಇದ್ದು ಏನಾಗುತ್ತೋ ನೋಡೋಣ ಎಂದು ಹೇಳಿದೆ.ನಾನು ಕೇಳಿದೆ ಈ ಕಾರ್ನ್ ನಾ ಮಾಲೀಕ ಹೇಗೆ ? ಅವನ ನಡವಳಿಕೆ ? ಎಂದು ಶ್ಯಾಮನಾ ಕೇಳಿದೆ. ಅವನು ಅಣ್ಣ ಇವನು ಒಬ್ಬ ವಜ್ರದ ವ್ಯಾಪಾರಿ ನಡವಳಿಕೆ ಬಗ್ಗೆ ಗೊತ್ತಿಲ್ಲ ಆದ್ರೆ ಇವನು ಯಾವಾಗಲೂ ರಾಯಲ್ ಹೋಟೆಲ್ ನಲ್ಲಿ ಯಾವಾಗಲೂ ಹೋಗ್ತಾನೆ ಎನ್ನೋದು ಗೊತ್ತು ಅಷ್ಟೇ ಎಂದು ಹೇಳಿದ.ಅವನ ಮಾತನ್ನು ಕೇಳಿ ನಾನು ಮತ್ತೆ ಕಾರನ್ನು ಮತೊಮ್ಮೆ ಪರೀಕ್ಷಿಸಲು ಹೋದೆ ಸೀಟ್ ಡಿಕ್ಕಿ ಎಲ್ಲವನ್ನು ನೋಡಿದೆ ಏನು ದೊರೆಯಲಿಲ್ಲ ಆದ್ರೆ ಡ್ರೈವರ್ ಸೀಟ್ ನ ಹಿಂದೆ ಒಂದು ಟಿಕೆಟ್ ಸಿಕ್ಕತು ಅದ್ರಲ್ಲಿ ಹೋಟೆಲ್ ನಾ ಬುಕಿಂಗ್ ಮಾಡಿರೋ ಡೀಟೇಲ್ಸ್ ಇತ್ತು ರೂಮ್ ನಂಬರ್ 542 ನಮೂದಿಸಿತ್ತು ನಾನು ಆ ಟಿಕೆಟ್ ತೆಗೆದುಕೊಂಡು ನನ್ನ ಕಿಸಿಯಲ್ಲಿ ಇಟ್ಟುಕೊಂಡೆಅಷ್ಟೂ ಹೊತ್ತಿಗೆ ಯಾರೋ ಬಂದು ಬಾಗಿಲು ಬಡಿಯುತಿರುವ ಶಬ್ದ ಕೇಳಿಸಿತು . ನಾನು ಕಿಟಕಿಯನ್ನು ಸ್ವಲ್ಪ ತೆರೆದು ನೋಡಿದೆ ಪೊಲೀಸ್ ಕಾನ್ಸ್ಟೆಬಲ್ ಬಂದಿರುವುದು ತಿಳಿದು ಬಂತು . ನಾನು ಶ್ಯಾಮ್ ನೀನು ಇಲ್ಲೇ ಏರು ನಾನು ನೋಡಿಬರುತ್ತೇನೆ ಎಂದು ಹೇಳಿ. ಹಿಂಬದಿಯಿಂದ ಹೋಗಿ ಯಾರಿಗೂ ತಿಳಿಯದಂತೆ ಮುಖ್ಯ ರಸ್ತೆಯಿಂದ ಮನೆಯ ಗೇಟ್ ಬಳಿ ಬಂದು ಪೊಲೀಸ್ ಕಾನ್ಸ್ಟೆಬಲ್ ನನ್ನ ಕರೆದು ಏನ್ ಸಾರ್ ಏನ್ ಬೇಕು ಹೇಳಿ ಎಂದು ಕೇಳಿದೆ.ಕಾನ್ಸ್ಟೆಬಲ್ ನನ್ನ ಕುಶಲೋಪರಿ ವಿಚಾರಿಸಿ ಬಂದಿರುವ ಕೆಲಸವನ್ನು ಹೇಳಿದ ನಿಮ್ಮನ ನಮ್ಮ ಸಾಹೇಬರು ಕರ್ಕೊಂಡು ಬಾ ಎಂದು ಹೇಳಿದ್ದಾರೆ ಬರ್ತೀರಾ ಎಂದು ಕೇಳಿದ. ನಾನು ಯಾಕೆ ಏನ್ ಸಂಚಾರ ಎಂದು ಕೇಳಿದೆ. ಅವನು ಅಯ್ಯೋ ಅದೆಲ್ಲಾ ಗೊತ್ತಿಲ್ಲ ಸರ್ ನೀವೇ ಬರ್ತೀರಲ್ಲ ನೀವೇ ಕೇಳಿ ಎಂದಾ. ನಾನು ಸರಿ ಬರ್ತೀನಿ ನೀವು ನಡೀರಿ ಎಂದು ಹೇಳಿದೆ .ಬಟ್ಟೆ ಬದಲಾಯಿಸಿ ಶ್ಯಾಮ್ ಗೆ ಹೇಳಿದೆ ನಾನು ಪೊಲೀಸ್ ಸ್ಟೇಷನ್ ಹೋಗಿ ಬರ್ತೀನಿ ನೀನು ಎಲ್ಲೂ ಹೋಗ್ಬೇಡಾ ಮತ್ತೆ ಅವಳಿಗೂ ಏನು ಹೇಳಬೇಡ ಮಾಮೂಲಿಯಂತೆ ಇರು ಸರೀನಾ ಎಂದು ಹೇಳಿ ನಾನು ಅವರ ಗಾಡಿಯಲ್ಲೇ ಪೊಲೀಸ್ ಸ್ಟೇಷನ್ ತಲುಪಿದೆ.ಪೊಲೀಸ್ ಸ್ಟೇಷನ್ ಬಂತು ಕೆಳಗಿಳಿದೆ ಮೊದಮೊದಲು ಬಾರಿ ಖುಷಿಯಿಂದ ಹೋಗುತಿದ್ದೆ ಆದ್ರೆ ಇಂದು ಅದೇಕೋ ಮನದಲ್ಲಿ ಡವ ಡವ ಎಂದು ನನ್ನ ಹೃದಯ ಹೊಡೆದು ಕೊಳ್ಳುತಿತ್ತು.ಕಾನ್ಸ್ಟೆಬಲ್ ಬನ್ನಿ ಸರ್ ಬನ್ನಿ ಸರ್ ಎಂದು ಕರೆಯುತಿದ್ದಾ . ಅವನು ಕರೆಯುತ್ತಿರುವ ಶೈಲಿ ( ಬಲಿ ಕೊಡುವ ಮುನ್ನ ಕುರಿಯನ್ನು ಮುದ್ದು ಮಾಡುವ ಹಾಗೆ ಇತ್ತು ) ಒಳಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದೇ ಚೇರ್ನಲ್ಲಿ ಕುಳಿತುಕೊಳ್ಳುವಂತೆ ಹೇಳಿದ .ಸರ್ ಸಾಹೇಬ್ರು ರೌಂಡ್ಸ್ ಹೋಗಿದಾರೆ ಇನ್ನುಯೇನು ಬರುವ ಸಮಯ ಟೀ ಕುಡೀರಿ ಎಂದು ಹೇಳಿದ . ಬಿಸಿ ಬಿಸಿ ಟೀ ನನ್ನ ಗಂಟಲ ಒಳಗೆ ಸಲೀಸಾಗಿ ಇಳಿದು ಬಿಟ್ಟಿತು . ಆಗ ಜೀಪಿನ ಶಬ್ದ ಕೇಳಿಸಿತು ನನ್ನ ಎದೆ ಒಂದು ತಕ್ಶಣ ನಿಂತಾ ಹಾಗೆ ಆಯಿತು. ಒಳಗೆ ಹೆಜ್ಜೆ ಇಟ್ಟ ತನ್ನ ಟೋಪಿತೆಗೆದು ಚೇರ್ ಮೇಲೆ ಕುಳಿತ ನಾನು ನೆಲವನ್ನೇ ನೋಡುತಿದ್ದೆ.ಅವನು ಏನೂ ಮಗ ಎಂದು ಸಂಬೋಧಿಸಿದ ನಾನು ಯಾರಿದು ಎಲ್ಲೊ ಕೇಳಿದೀನಲ್ಲಾ ಎಂದು ಕತ್ತು ಎತ್ತಿ ನೋಡಿದೆ ಅವನು ಬೇರೆ ಯಾರು ಅಲ ನನ್ನ ಸ್ಕೂಲ್ನಾ ಸ್ನೇಹಿತ ದಿವಾನ್ ಎಂದು ಗೊತ್ತಾಯಿತು. ನನ್ನ ಎಲ್ಲ ಭಯ ಒಂದೇ ಕ್ಷಣದಲ್ಲಿ ನೀರಂತೆ ಹರಿದು ಹೋಯಿತು. ಖುಷಿ ಇಂದಲೇ ಮಾತಾಡುತ್ತ ನಾನು ಈ ಏರಿಯಾಗೆ ವರ್ಗವಣೆಗೆ ಮಾಡಿಸಿಕೊಂಡೆ ಎಂದು ತಿಳಿಸಿದ.ನಾನು ಮರಳಿ ಮನೆಗೆ ವಾಪಸ್ ಅದೇ ಶ್ಯಾಮ್ ಆಗಾ ಟೀ ಕುಡಿಯುತ್ತಿದ್ದ ಅವಳು ಬೇರೆ ಇದ್ದಳು ಏನು ಮಾತನಾಡದೆ ರೂಮ್ಗೆ ಹೋಗಿ ಬಟ್ಟೆ ಬದಲಿಸಿಕೊಂಡು ಬಂದೆ ಟೀ ಕೊಟ್ಟ ಕುಡಿದು ಶ್ಯಾಮ್ ಅಣ್ಣ ಊಟ ಏನ್ ಮಾಡೋದು ಎಂದು ಕೇಳಿದ ನಾನು ಏನೋ ಮಾಡೋ ಎಂದು ಹೇಳಿದೆ ಅಷ್ಟು ಬೇಗ ಅವಳು ಬಂದು ಬೆಂಡೆಕಾಯಿ ಹುಳಿ ಮಾಡಿ ಎಂದಳು. ಶ್ಯಾಮ್ ಅದೆಲ್ಲ ನನಗೆ ಬರಲ್ಲ ನಾನು ಮಾಡೋದನ್ನ ತಿನ್ನಿ ಎಂದೇ,ಅದಕ್ಕೆ ಅವಳು ರೀ ನಾನು ಏನು ನಾಯಿನಾ ನಾನೇ ಅಡುಗೆ ಮಾಡ್ತೀನಿ ನೀವೇ ತಿನ್ನಿ ಎಂದಳು ಅವನು ಕೂಡ ಏನಾದ್ರು ಮಾಡ್ಕೋ ಎಂದು ಹೇಳಿ ಶ್ಯಾಮ್ ಹೊರಗೆ ಹೋದ ನಾನು ಅಲ್ಲೇ ಕುಳಿತಿದ್ದೆ ಅವಳು ನನ್ನ ನೋಡಿ ಕಣ್ಣು ಹೊಡೆದಳು ನಾನು ಅಲ್ಲಿಂದ ಎದ್ದು ಹೋದೆ .ರಾತ್ರಿ ಊಟ ಮಾಡಿ ಮಲಗಿದೆವು ಅವಳನ್ನು ರೂಮ್ನಲ್ಲಿ ಮಲಗಿಸಿ ನಾನು ಹೊರಗಡೆ ಮಲಗಿದೆ. ಇರುಳು ಕಳೆದು ಸೂರ್ಯನು ನನ್ನ ಮನೆಯ ಬಾಗಿಲು ತಟ್ಟಿದ. ಎದ್ದು ನೋಡಿದೆ ಬಿಸಿ ಬಿಸಿ ಕೋಫಿ ನನ್ನ ಮನಸ್ಸನ್ನು ಉಲ್ಲಾಸಗೊಳಿಸಿತು. ಬಾಗಿಲು ತೆರೆದು ಹೊರಬಂದೆ ಬಾಗಿಲ ಬಳಿ ರಂಗೋಲಿಯ ಚಿತ್ತಾರ ಮೂಡಿತ್ತು ನಾನು ಇದೆಲ್ಲ ಕನಸು ಎಂದು ಕೊಂಡು ಒಳ ಬಂದೇ ದೇವರ ಮನೆಯಿಂದ ಸಾಂಬ್ರಾಣಿಯ ಹೋಗೆ ಮೂಗಿಗೆ ಬಡಿಯಿತು. ನಾನು ಏನಿವತ್ತು ಎಲ್ಲ ಹೊಸ ರೀತಿ ಇದೆಯಲ್ಲ ಶ್ಯಾಮ್ ಫುಲ್ ಚೇಂಜ್ ಆಗಿಬಿಟ್ಟನಾದೇವರ ಮೇಲೆ ಇಷ್ಟು ಭಕ್ತಿ ಬಂತಾ ಎಂದು ದೇವರ ಮನೆ ಕಡೆ ಹೋಗಿ ನೋಡಿದೆ ಆಗ ಹೋಗೆ ದಟ್ಟವಾಗಿತ್ತು ಕುಂಕುಮ ಹಾಗು ಹಸಿರು ಬಣ್ಣದ ಒಂದು ಬಟ್ಟೆ ಕಾಣಿಸಿತು ನಾನು ಏನೋ ಇದು ಎಂದು ಕೈ ಹಿಡಿದೇ ಅಯ್ಯೋ ಎಂದು ಶಬ್ದ ಕೇಳಿಸಿತು ನಾನು ಕೈಯಲ್ಲಿದ್ದ ಲೋಟ ಬಿಟ್ಟು ಕಾಯಿ ತುಂಬಾ ನುಣುಪಾಗಿತ್ತು ಹಿಡಿದು ಕೊಂಡೆ ಮುಖ ಹತ್ತಿರವಾಯಿತು ಆಗಲೇ ನೋಡಿದ್ದು ಅವಳು ಎಂದು ಅವಳ ಉಸಿರು ನನ್ನ ಕಣ್ಣಿಗೆ ಬಡಿತು ,ಅವಳ ಚುಂಬನ ನನ್ನ ಎದೆಗೆ ತಾಕೀತು ಒಂದು ನಿಮಿಷ ಅವಳ ಕಣ್ಣಿನಲ್ಲೇ ಕಣ್ಣಿಟ್ಟು ನೋಡಿದೆ. ಆಗ ಅಣ್ಣ ಎಂದು ಶ್ಯಾಮ್ ಕೂಗಿದ ನಾನು ಅವಳನ್ನು ಬಿಟ್ಟು ರೂಮಿಗೆ ಹೋದೆ ಅವನು ಬಂದು ಅಣ್ಣ ಏನಾಯಿತು ಎಂದು ಕೇಳಿದ ನಾನು ಏನಿಲ್ಲ ಎಂದು ಸುಮ್ಮನಾದೆ .ನಾನು ಸ್ನಾನ ಮಾಡಿ ಹೊರಗೆ ಬರುವ ಒಳಗೆ ಇಸ್ತ್ರಿಯಾಗಿ ಬಟ್ಟೆ ಸಿದ್ದವಾಗಿತ್ತು ನಾನು ಹೆಚ್ಚು ತಲೆಕೆಡಿಸಿಕೊಳ್ಳದೆ ಅದನ್ನೇ ಹಾಕಿ ಶ್ಯಾಮ್ ಟಿಫನ್ ಎಂದು ಕೇಳ್ದೆ ಅವನು ಏನು ಉತ್ತರ ಕೊಡಲಿಲ್ಲ ಹಾಲ್ ಬಂದು ನೋಡಿದೆ ಅವನು ಆಗಲೇ ಟಿಫನ್ ಮಾಡುತಿದ್ದ.ನಾನು ಟಿಫನ್ ಮುಗಿಸಿ ರಾಯಲ್ ಹೋಟೆಲ್ ಹೋಗಿ ನಿಂತುಕೊಂಡೆ. ರಿಸೀಪೆಕ್ಷನ್ ಬಳಿ ಸುಂದರ ಯುವತಿ ಚಂದವಾದ ನಗುವಿನೊಂದಿಗೆ ಬಂದ ಅತಿಥಿಗಳನ್ನು ಸ್ವಾಗತಿಸುತಿದ್ದಳು . ನಾನು ಅವಳ ಬಳಿ ಹೋಗಿ ರೂಮ್ ನಂಬರ್ 542 ಬಗ್ಗೆ ವಿಚಾರಿಸಿದೆ ಸರ್ ಅದು ಒಬ್ಬ ವಿವಿಐಪಿ ರೂಮ್ ಅದರ ಬಗ್ಗೆ ಏನು ತಿಳಿಸಲು ಸಾಧ್ಯವಿಲ್ಲ ಎಂದಳು ನಾನು ಅವಳನ್ನು ತುಂಬಾ ಕೇಳಿಕೊಂಡೆ ಅವಳು ಒಪ್ಪಲಿಲ್ಲ ಕೊನೆಗೆ ನನ್ನ ಜೇಬಿನಲ್ಲಿದ್ದ ಟಿಕೆಟ್ ಅನ್ನು ತೋರಿಸಿದೆ ಅವಳು ಯಾರಿಗೂ ತಿಳಿಯದೆ ಒಂದು ರೂಂ ಕೀ ಕೊಟ್ಟು ಒಂದು ಚೀಟಿಯನ್ನು ಕೊಟ್ಟಳು ನಾನು ಅವಳ ಮುಖವನ್ನೇ ಧಿಟ್ಟಿಸಿ ನೋಡಿ ಅವಳು ಕಣ್ಣ ಸನ್ನೆ ಮಾಡಿದಳು ನನ್ನ ಕೈ ಮೇಲೆ ಕೈ ಇಟ್ಟಳು ನಾನು ಏನೋ ಇರಬೇಕು ಎಂದು ಅದನ್ನು ತೆಗೆದು ಕೊಂಡು ವಾಶ್ ರೂಮ್ಗೆ ತೆರಳಿದೆ.ಅವಳು ಕೊಟ್ಟ ಚೀಟಿ ತೆರೆದ ಓದಿದೆ ಡ್ರಾಪ್ ಬಾಕ್ಸ್ ಅಂತಾ ಬರೆದಿತ್ತು. ಚೀಟಿ ಮಡೇಚಿ ಹೊರಬಂದು ಲಿಫ್ಟ್ ಒಳಗೇ ಹೋಗಿ 8ನೇ ಮಹಡಿ ತಲುಪಿದೇ. ರೂಮ್ ಹುಡುಕುತ್ತ 542 ಬಳಿ ಬಂದೇ ಆಗ ಕೀಯಿಂದ ಲಾಕ್ ಓಪನ್ ಆಯಿತು. ಮೆಲ್ಲನೆ ಒಳಗೆ ಹೋದೆ ನಂತರ ಬೂಟ್ಸ ಶಬ್ದ ಕೇಳಿಬಂತು ರೂಮ್ ಲಾಕ್ ಮಾಡಿದೆ ಆಗ ಅ ಚೀಟಿಯಲ್ಲಿ ಬರೆದಿದ್ದ ಹಾಗೇ ಡ್ರಾಪ್ ಬಾಕ್ಸ್ ಹುಡುಕಿದೆ. ನನಗೆ ಸರಿಯಾಗಿ ತಿಳಿಯಲಿಲ್ಲ ರೂಮ್ ಪೂರಾ ತಾಲಶ್ ಮಾಡಿದೆ ಆಗ ಒಂದು ಬಾಕ್ಸ್ ನಲ್ಲಿ ಕೆಂಪು ಬಣ್ಣದ ಚೀಲ ದೊರೆಯಿತು. ಅದನ್ನು ಕೈಗೆ ತೆಗೆದುಕೊಂಡೆ ಬಿಚ್ಚಿ ನೋಡಿದೆ ಒಂದು ಕ್ಷಣ ಮೈ ಜುಮ್ ಯೆಂದು ಕಂಪಿಸಿತು ಕಾರಣ ಅದು ಪಳ ಪಳ ಹೊಳೆಯುವ ವಜ್ರಗಳು ಸುಮಾರು 20 ಹರಳುಗಳಿದ್ದವು. ನಾನು ಅದನ್ನು ತೆಗೆದುಕೊಂಡು ನನ್ನ ಜೇಬಿಗೆ ಇಟ್ಟುಕೊಂಡೆ ಅ ಕೆಂಪು ಬಟ್ಟೆಯಲ್ಲಿ ಮತೊಂದು ಚೀಟಿ ಇತ್ತು ಅದನ್ನು ತೆಗೆದು ನೋಡಿದೆ ಕಾರ್ ಹಿಂಬದಿಯಾ ಸೀಟ್ ನಾ ಮಧ್ಯ ಭಾಗಯೆಂದು ಬರೆದಿತ್ತು ಅದನ್ನು ಓದಿ ನನ್ನ ಜೇಬಿನಲ್ಲಿ ಇಟ್ಟುಕೊಂಡು ನನ್ನ ಕಾಲಿನ ಗುರುತುಗಳನ್ನು ಅಳಿಸಿ ಡ್ರಾಪ್ ಬಾಕ್ಸ್ ಹಿಡಿಯನ್ನು ಸಹ ವರೆಸಿ ನನ್ನ ಕರ್ಛಿಫ್ ನಿಂದ ಬಾಗಿಲು ತೆರೆದು ಹೊರಬಂದು ನೋಡಿದೆ ಯಾರು ಇರಲಿಲ್ಲ ಸೀದಾ ಲಿಫ್ಟ್ ಕಡೆ ಹೋಗಿ ಗ್ರೌಂಡ್ ಫ್ಲೂರ್ ಬಟಾನ್ ಪ್ರೆಸ್ ಮಾಡಿ ನಿಂತೇ ಅ ಸಮಯ ಗ್ರೌಂಡ್ ಫ್ಲೂರ್ ನಲ್ಲಿ ಪೊಲೀಸ್ ಅಧಿಕಾರಿಗಳು ಇರುವುದನ್ನು ಕಂಡೆ ಕೂಡಲೇ ಗಾಬರಿಯಾಗಿ ಏನು ಮಾಡೋದು ತಿಳಿಯದೆ ಲಿಫ್ಟ್ ಬೇರೆ 8,7,6,5,4 ಹೀಗೆ ಇಳಿಯಾ ತೊಡಗಿತು. ಪೊಲೀಸ್ ಕೂಡ ಲಿಫ್ಟ್ ಕಡೆ ಬರತೊಡಗಿದರು. ಬಟಾನ್ ಒತಿದರೆ ಯಾವುದು ಕೆಲಸ ಮಾಡುತಿರಲಿಲ್ಲ. 3,2 ಎಂದು ನಂಬರ್ ತೋರಿಸುತಿತ್ತು ನಾನು ಕಣ್ಣು ಮುಚಿಕೊಂಡು ದೇವರ ಪ್ರಾರ್ಥನೆ ಮಾಡಿದೆ ಲಿಫ್ಟ್ ನಿಂತಿತು ಡೋರ್ ಓಪನ್ ಆಯ್ತು ವಾರೆ ಕಣ್ಣಿನಲ್ಲಿ ನೋಡಿದೆ ಯಾರೊ ವ್ಯಕ್ತಿ ನಿಂತಿದ್ದ.ಸರ್ ನೀವು ಗ್ರೌಂಡ್ ಹೊಗ್ತಿದಿರಾ ಎಂದಾ ನಾನು ಸರಿಯಾಗಿ ಕಣ್ಣು ಬಿಟ್ಟು ವಾಪಸ್ ಅವನನ್ನೇ ಕೇಳಿದೆ ಸರ್ ಇದು ಎಷ್ಟನೇ ಫ್ಲೊರ್ ಯೆಂದು ಕೇಳಿದೆ 1ನೇ ಫ್ಲೊರ್ ಯೆಂದು ಹೇಳಿದ ನಾನು ಕೂಡಲೇ ಹೊರಬಂದು ಅಲ್ಲಿ ಬರುತಿದ್ದ ಹೊಟೇಲ್ ನಾ ವೈಟರ್ ಕರೆದು ಕಿಚೆನ್ ಎಲ್ಲಿ ಯೆಂದು ಕೇಳಿ ಸೀದಾ ಅಲಿಂದ ನಾನು exit ಬೋರ್ಡ್ ನೋಡಿ ಹೊರ ಹೋಗಿ ಗಾಡಿಯಲ್ಲಿ ಮನೆಗೆ ತಲುಪಿದೆ. ಬಂದವನೇ ರೂಮಿಗೆ ಹೋಗಿ ಬಟ್ಟೆ ಬದಲಿಸಿಕೊಂಡು ಶ್ಯಾಮ್... ಶ್ಯಾಮ್ ಯೆಂದು ಕರೆದೆ ಅವನು ಮನೆಯಲ್ಲಿಲ್ಲ ಹೊರಗೆ ಹೋಗಿದ್ದಾನೆ ಎಂದು ಅವಳು ಹೇಳಿದಳು.ಏನ್ ಬೇಕು ಹೇಳಿ ಎಂದಳು ನಾನು ಏನಿಲ್ಲ ಎಂದು ಹೇಳಿದೆ ರಾತ್ರಿ ಯಾರಿಗೂ ತಿಳಿಯದ ಹಾಗೇ ಕಾರ್ ಹಿಂಬದಿಯ ಸೀಟ್ ಹರಿದು ನೋಡೋಣ ಯೆಂದು ಮನದಲ್ಲಿಯೇ ಲೆಕ್ಕ ಹಾಕಿಕೊಂಡೆ. ರಾತ್ರಿ ಊಟ ಮಗೀತು ನಾನು ಕಾಯುತಿದ್ದೆ ಇಬ್ಬರು ಮಲಗಲಿ ಯೆಂದು. 1 ಗಂಟೆಯಾಗಿತ್ತು ಮೆಲ್ಲನೆ ಛಿಲಕಾ ತೆಗೆದು ಕಾರ್ ಶೆಡ್ ಒಳಗೇ ಹೋದೆ ಲೈಟ್ ಹಾಕದೇ ಮೊಬೈಲ್ ನಲ್ಲಿಯೇ ಟಾರ್ಚ ಹಾಕಿ ಹಿಂಬದಿ ಸೀಟ್ ಕಡೆ ಬಂದು, ಎಲ್ಲ ಕಡೆ ಒತ್ತಿ ಒತ್ತಿ ನೋಡಿದೆ ಏನೊ ಇದ್ದ ಅನುಭವಾಯಿತು ಚಾಕೂವಿನಿಂದ ಅರಿದೆ ಒಂದು ಪ್ಲಾಸ್ಟಿಕ್ ಕವರ್ ಶಬ್ದ ಬಂತು ಮೆಲ್ಲನೆ ಹೊರತೆಗೆದ ಕವರ್ ಓಪನ್ ಮಾಡಿ ನೋಡಿದ ಕೆಲವೊಂದು ಕಾಗದ ಪತ್ರಗಳು ತೆರೆದು ನೋಡಿದೆ. ಎಲ್ಲವೂ ಇಸ್ಲಾಮಿಕ್ ಭಾಷೆಯಲ್ಲಿತ್ತು ನಾನು ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿ ಭಾಷಾಂತರ ಮಾಡಿಕೊಂಡು ಓದಿದ ಮೇಲೆ ತಿಳಿಯಿತು ಈತ ಒಬ್ಬ ವಜ್ರಗಳನ್ನು ಕಳ್ಳ ಸಾಗಾಣಿಕೆ ಮಾಡುತಿದ್ದಯೆಂದೂ .ಅಂಥೋನಿ ಡಿಸೊಜಾ ಇವನ ಒಡೆಯ. ಅವನು ಈಗಾ ದುಬೈನಲ್ಲಿ ಇದ್ದಾನೆಯೆಂದೂ ಅದರಲ್ಲಿ ಬರೆದಿತ್ತು. ಇದನ್ನು ಓದುತಿರುವಾಗ. ಯಾರೋ ಬಾಗಿಲು ಬಡಿದರು ನಾನು ಯಾರೆಂದು ಮೆಲ್ಲನೆ ಬಾಗಿಲಿನಲ್ಲಿ ಒಂದು ಸಣ್ಣ ರಂಧ್ರವಿತ್ತು ನೋಡಿದೆ ಸರಿಯಾಗಿ ಕಾಣಲಿಲ್ಲ. ನಾನು ಶ್ಯಾಮ್ ಇರಬಹುದುಯೆಂದೂ ಊಹಿಸಿ (ಯಾಕೆಂದರೆ ಶ್ಯಾಮ್ ಒಬ್ಬನಿಗೆ ಈ ಜಾಗ ತಿಳಿದಿರುವುದು)ಬಾಗಿಲು ತೆರೆದೆ. ಅದು ಅವನಲ್ಲ ಅವಳು. ಏನ್ ಬೇಕು ಯೆಂದೂ ಕೇಳಿದೆ ಅವಳು ನೀನೆ ಬೇಕು ಎಂದಳು. ನಾನು ಅಯ್ಯೋ ಹೊಗ್ ಮಾರಯತಿ ನೀನು ಯಾವ ಘಳಿಗೆ ಸೀಕ್ಕ್ದೊ ನನ್ ಟೈಮ್ ಸರಿಯಿಲ್ಲ ಎಂದು ಹೇಳಿದೆ ಅವಳು ಕೇಳದೆ ಒಳಗೇ ನುಗ್ಗಿದಳು. ಟೇಬಲ್ ಮೇಲೆ ಇಟ್ಟಿದಾ ಕಾಗದ ಪತ್ರಗಳಿಗೆ ಕೈ ಹಾಕಿದಳು ನಾನು ಕೂಡಲೇ ಕಿತ್ತುಕೊಂಡೆ ನೀನು ರೂಂಗೆ ಹೋಗು ಇಲ್ಲಿ ಬಂದು ತರಲೆ ಮಾಡಬೇಡಯೆಂದೂ ಗದರಿದೆ.ಅವಳು ಅದಕ್ಕೆ ಜಗ್ಗಲಿಲ್ಲ ಅದನ್ನು ಕಿತ್ತುಕೊಂಡು ನೋಡಿದಳು ಅವಳಿಗೆಯೆನೂ ಅರ್ಥವಾಗಿಲ್ಲ ಈ ಹಿಂದೆ ಹೇಳಿದಂತೆ ಅದು ಇಸ್ಲಾಮಿಕ್ ಭಾಷೆಯಲ್ಲಿತ್ತು.ವಾಪಸ್ ನನಗೆ ಕೊಟ್ಟು ಹೋದಳು. ಅವಳು ಯಾಕೆ ಇಲ್ಲಿಗೆ ಬಂದಳು ತಿಳಿಯಲಿಲ್ಲ . ನಾನು ಅವಳ ಚಿಂತೆ ಬಿಟ್ಟು ಈಗಾ ಈ ಅಂಥೋನಿಯನ್ನು ಹೇಗೆ ಪತ್ತೆ ಹಚ್ಚುವುದು ಯೋಚ್ನೆ ಮಾಡ್ತ ಅಲ್ಲೇ ಗೋಡೆಗೆ ಹೊರಗಿ ಮಲಗಿದೆ. ಬೆಳಗಾಯಿತು ಎದ್ದು ಮನೆಯ ಒಳಗೇ ಹೋದ ಕಾಫಿ ಕುಡಿದು ರೆಡೀಯಾಗೀ ಬಟ್ಟೆ ಹಾಕಿಕೊಂಡು ಸೀದಾ ಗಾಡಿ ತೆಗೆದುಕೊಂಡು ನನ್ನ ಸ್ನೇಹಿತ ಯಾಸಿರ್ ಆಫೀಸ್ ತಲುಪಿದೆ. ಅವನು ಒಬ್ಬ ಟೂರ್ ಅಂಡ್ ಟ್ರಾವೆಲ್ಸ್ ನಡೆಸುತ್ತಾನೆ. ಅವನ ಬಳಿ ಹೋಗಿ ದುಬೈ ಹೋಗಬೇಕು ಹೇಗೆ ಎಂದೇಲ್ಲ ವಿಚಾರಿಸುತ್ತಾ. ಅನಂತರ ಅಲ್ಲಿಂದಾ ಪೊಲೀಸ್ ಸ್ಟೇಷನ್ ತೆರಳಿ ತನಗೆ ತುಂಬಾ ಪರಿಚಯದ ವ್ಯಕ್ತಿಯಾದ ಶಿವ ಕೃಷ್ಣಾನ ಬಳಿ ಅಂಥೋನಿ ಡಿಸೊಜಾ ಬಗ್ಗೆ ಮಾಹಿತಿ ವಿಷಯವನ್ನು ತಿಳಿದು ಕೊಳ್ಳುತ್ತಾ. ಅಲ್ಲಿಂದಾ ತನ್ನ ಮಾತೊಬ್ಬ ಸ್ನೇಹಿತ ಅಮೀದ್ ಖಾನ್ ಗೆ ಪೋನ್ ಮಾಡಿ ನನಗೆ ಒಂದು ವಾರದ ಮಟ್ಟಿಗೆ ದುಬೈಗೆ ಬರುತ್ತಿದ್ದೇನೆಯೆಂದೂ ಹೇಳಿ ಉಳಿದು ಕೊಳ್ಳುವ ವ್ಯವಸ್ಥೆ ಮಾಡು ಎಂದು ತಿಳಿಸಿದ. ನಂತರ ಸೀದಾ ಮನೆಗೆ ಬಂದು ತನ್ನ ಬಟ್ಟೆ ಬರೆಗಳನ್ನು ಒಂದು ಬ್ಯಾಗಿಗೆ ಹಾಕಿ ಕೊಳ್ಳುತ್ತಾ. ಯಾರಿಗೂ ತಿಳಿಯಾದ ಹಾಗೇ ಒಂದು ಶೆಡ್ ಗೆ ಹೋಗಿ ಒಂದು ಸಣ್ಣ ನೀರಿನ ಟ್ಯಾಂಕ್ ಕೆಳಗೆ ಒಂದು ಗೂಡು ಇರುತ್ತದೆ ಅದ್ರ ಒಳಗೇ ಕೈ ಹಾಕಿ ಲ್ಯಾಪ್ಟಾಪ್ ಓಪನ್ ಮಾಡಿ ಇಂಡಿಯನ್ embassy ವೆಬ್ಸೈಟ್ ಹ್ಯಾಕ್ ಮಾಡಿ ತನೆಗೆ ಹೇಗೆ ಬೇಕೋ ಹಾಗೇ ಬರೆದುಕೊಂಡು ವೀಸಾ ಸಿದ್ದ ಪಡಿಸಿದೆ. ನಾನು ಚಿಕ್ಕ ವಯಸ್ಸಿನಲ್ಲಿ ಸಿಸ್ಟಮ್ ಹ್ಯಾಕ್ ಮಾಡುವುದನ್ನು ಕಲಿತಿದ್ದೆ . ಆದ್ರೆ ಈ ವಿಚಾರ ಯಾರಿಗೂ ತಿಳಿದಿರಲಿಲ್ಲ, ಶ್ಯಾಮಗೂ ಕೂಡ ಗೊತ್ತಿಲ್ಲ. ನನ್ನ ಕೆಲ್ಸ ಮುಗಿಸಿ ಕೂಡಲೇ ಲ್ಯಾಪ್ ಟಾಪ್ crash ಮಾಡಿ ಮೂಲೆಗೆ ಬಿಸಾಕಿಬಿಡುತ್ತಾನೆ. ಆಗ ಯಾಸಿರ್ ಕರೇ ಮಾಡಿ ನಾಳೆ ಬೆಳಗ್ಗೆ ದುಬೈ ಟಿಕೆಟ್ ಫ್ಲೈಟ್ ಬುಕ್ ಮಾಡು ಮತ್ತೆ ಟಿಕೆಟ್ ಅನ್ನು ನಿನ್ನ ಡ್ರೈವರ್ ಬಳಿ ಕೊಟ್ಟು ಕಳಿಸು ಅದರೆ ನಿನ್ನ ಗಾಡಿ ನನ್ನ ಮನೆ ಬರುವುದು ಬೇಡ ನನ್ನ ಮನೆಯಿಂದ 1ಕಿಲೋ ಮಿಟರ್ ದೂರದಲ್ಲಿ ಇರಲಿಯೆಂದೂ ಹೇಳಿ ಫೋನ್ ಕಟ್ ಮಾಡುತ್ತಾನೆ.ಸ್ವಲ್ಪ ಸಮಯದಲ್ಲಿ ಯಾಸಿರ್ ಮತ್ತೆ ಕರೆ ಮಾಡಿ ಒಂದು ಸ್ಪೆಷಲ್ ಟಿಕೆಟ್ ಬುಕ್ ಆಗಿದೆ ಆದ್ರೆ ನೀನು ಒಬ್ಬ ಆಫೀಸರ್ ಎಂದು ನಮೂದಿಸಲಾಗಿದೆ ಎಂದು ತಿಳಿಸಿದ. ಸರಿ ಸರಿ ತೊಂದ್ರಿಲ್ಲಾ ಬಿಡು ಎಂದು ಹೇಳಿದೆ. ಮತ್ತೆ ಸಿಮ್ ಬಿಸಾಡಿ ಬೇರೆ ಸಿಮ್ ಆಕ್ಟಿವ್ ಮಾಡುತ್ತಾ. ಶೆಡ್ ನಿಂದ ಹೊರಗೆ ಬಂದೆ . ಕೂಲ್ ಆಗಿ ಏನು ಮಾತಾಡದೆ ಸುಂಮ್ನಿದ್ದೆ. ಅದರೆ ಅವಳಿಗೆ ಇವನ ಮೇಲೆ ಯಾಕೋ ಅನುಮಾನವಾಗುತ್ತೆ. ಏನೋ ನಡಿತಿದೆ ತಿಳಿದುಕೊಳ್ಳಬೇಕುಯೆಂದೂ ಯಾರಿಗೂ ಗೊತಿಲ್ಲದೆ ಅದೆ ಶೆಡ್ ಗೆ ಹೋಗುತ್ತಾಳೆ. ಒಳಗೇ ಹೋಗಿ ಎಲ್ಲ ಕಡೆ ಪರಿಶಿಲಿಸುತ್ತಾಳೆ ಮೂಲೆಯಲ್ಲಿ ಬಿಸಾಡಿದ ಚೂರುಗಳು ಸಿಗುತ್ತವೇ ಅದರಲ್ಲಿ ಒಂದು ಮುಖ್ಯವಾದ ಪದಾರ್ಥ ಸಿಗುತ್ತೆ ಅದನ್ನು ತೆಗೆದುಕೊಂಡು ತನ್ನ ಬಟ್ಟೆಯಲ್ಲಿ ಮುಚ್ಛಿಟ್ಟುಕೊಂಡು ಹೊರ ನಡೆಯುತ್ತಾಳೆ. ನಾನು ಶ್ಯಾಮ್ ಗೆ ಕರೆದು ಒಂದು ಕೆಲಸದ ಮೇಲೆ ಹೊರಗೆ ಹೊಗ್ತಿದಿನಿ ನೀನು ಇಲ್ಲಿಯೇ ಇರು ಯಾರ ಬಳಿ ಜಾಸ್ತಿ ಮಾತನಾಡಲು ಹೋಗಬೇಡ ಮಾಮೂಲಿನಂತೆ ವರ್ತಿಸುಯೆಂದೂ ಹೇಳಿ ಅವನ ಕೈಗೆ ಒಂದಷ್ಟು ಹಣ ನೀಡಿ ಮನೆಗೆ ತೆರಳಿ ಊಟ ಮಾಡಿ ಮಲಗಿದೇ ಮುಂಜಾನೆ 5 ಗಂಟೆಗೆ ಫ್ಲೈಟ್ ಇದೇ ಎಂದು ಸಂದೇಶ ಬಂತು. ಮಲಗಿದವನು ನಿದ್ದೆಯೇ ಬರಲಿಲ್ಲ ಕೂಡಲೇ ನಾನು ಅ ಕಾರ್ ಇಲ್ಲೆ ಇದ್ದರೆ ತೊಂದರೆ ಅಗಬುಹುದು ಎಂದು ನಾನು ಕಾರ್ ತೆಗೆದು ಒಂದು ಗುಜರಿ ಕಾರುಗಳ ಮಾಲಿಕನಿಗೆ ಕೊಟ್ಟು ಈ ಕಾರ್ ನಿನ್ನ ಬಳಿ ಇರಲಿ ಅದಾಗಲೇ ನಾನು ನಂಬರ್ ಪ್ಲೇಟ್ ತೆಗೆದು ಒಂದು ನಕಲಿ ಪ್ಲೇಟ್ ಹಾಕಿದ್ದೇ. ಅವನಿಗೆ ಹೊರಡುವ ಹಾಗೇ ಈ ಕಾರ್ ಹೊರಗೆ ಬರದೆ ಇರಲಿ ಎಂದು ಹೇಳಿದೆ ಅದರಂತೆ ಅವನು ತನ್ನ ಗೌಪ್ಯವಾದ ಸ್ತಳದಲ್ಲಿ ಇರಿಸಿದ ಸಮಯ ಅದಾಗಲೇ 4.30 ಆಗಿತ್ತು. ಮನೆಗೆ ತೆರಳಿ ನಿಶ್ಬ್ದವಾಗಿ ರೆಡೀಯಾಗಿ ಶ್ಯಾಮ್ ಕಿವಿಯಲ್ಲಿ ಬಾಯ್ ಹೇಳಿದ ಇತ್ತ ಇವಳು ಎಲ್ಲವನ್ನು ಗಮನಿಸಿ ಸುಮ್ಮನಾದಳು. ಬ್ಯಾಗ್ ತೆಗೆದು ಹೊರದೆ ಕಾರಿನಲ್ಲಿ ಕುಳಿತು ಎರ್ಪೊರ್ಟ್ ತಲುಪಿ ಛೆಕೌಟ್ ಆಗಿ ಫ್ಲೈಟ್ ಏರಿದ ಬೆಳಗ್ಗೆ ಆಯಿತು. ಶ್ಯಾಮ್ ಎಂದಿನಂತೆ ದಿನಚರಿ ಶುರುಮಾಡಿದ. ಅವಳ ರೂಮಿಗೆ ಬಾಗಿಲು ತಟ್ಟಿದ ಕದ ತಗಿಲಿಲ್ಲ ಮಲಗಿರಬಹುದು ಎಂದು ತಾನೇ ಟಿಫನ್ ಮಾಡಿ ಮತ್ತೆ ಅವಳ ರೂಮಿಗೆ ಬಾಗಿಲು ಬಡಿದ ತೆರೆಯಲಿಲ್ಲ ಸ್ವಲ್ಪ ಜೊರಾಗಿ ಬಡಿದ ಬಾಗಿಲು ತೆರೆಯಿತ್ತು ಒಳಗೇ ಹೋದ ಯಾರು ಇರಲಿಲ್ಲ ಬಟ್ಟೆಯಲ್ಲ ಹಾಗೇ ಇತ್ತು ಹೊರಗೆ ಬಂದು ನೋಡಿದ ಅಲ್ಲಿಯೂ ಕುಅದ ಇರಲಿಲ್ಲ ಮತ್ತೆ ಎಲ್ಲಿ ಹೋಗಿರಬೇಕುಯೆಂದೂ ಯೋಚಿಸಿದ ತಿಳಿಯಲಿಲ್ಲ ಸ್ವಲ್ಪ ಹೊತಿನಲ್ಲಿ ಕಾನ್ಸ್ಟೇಬಲ್ ಬಂದು ಹೇಯ್ ನಿನ್ನ ಸಾಹೇಬ್ರೂ ಕರಿತಿದರೆ ಬಾ ಯೆಂದೂ ಕರೆದ ಯಾಕೆ ಎಂದು ಕೇಳಿದ ಹೇಯ್ ಬಾರೊಲೋ ಅಲ್ಲಿ ಬಂದು ಕೇಳು ಎಂದು ಧೀಮಾಕಿನಿಂದ ಉತ್ತರಿಸಿದ. ಶ್ಯಾಮ್ ನಯವಾಗಿ ಸರಿ ಬರ್ತಿನಿ ಎಂದು ಹೇಳಿ ಪೊಲೀಸ್ ಸ್ಟೇಷನ್ ತಲುಪಿದ.


ಇನ್ಸ್ಪೆಕ್ಟರ್ ಏನೋ ನಿನ್ ಜೊತೆ ಇದ್ದನಲ್ಲ ಅವನು ಎಲ್ಲಿ ಎಂದು ಕೇಳಿದ, ಶ್ಯಾಮ್ ಯಾಕೆ ಸರ್ ಏನಾಯಿತು ಎಂದು ಕೇಳಿದ. ಮತ್ತೆ ಇನ್ಸ್ಪೆಕರ್ ಕೇಳಿದಕ್ಕೆ ಉತ್ರ ಕೊಡು ಅಂದ್ರೆ ನನ್ನನೇ ಪ್ರಶ್ನೆ ಮಾಡ್ತಿಯಾ ಎಂದು ಕಪಾಳಕ್ಕೆ ಒಂದು ಬಾರಿಸಿದ , ಶ್ಯಾಮ್ ಕೋಪಗೊಳ್ಳದೆ ಸರ್ ಏನ್ ವಿಚಾರ ಹೇಳಿ ಎಂದು ನಯವಾಗಿ ಕೇಳಿದ ನಿನ್ನ ದೋಸ್ತ್ ಎಲ್ಲಿ ಹೋದ ಹೇಳು ಎಂದ ಸರ್ ಅವರು ಯಾವ್ದೋ ಕೆಲ್ಸದ ಮೇಲೆ ಹೊರಗೆ ಹೋಗಿ ಬರ್ತೀನಿ ಅಂತ ಹೇಳಿದ್ರು ಅಷ್ಟೇ, ಆದ್ರೆ ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ ಎಂದು ಹೇಳಿದ ಕೋಲು ತೆಗೆದು ಕೊಂಡು ಬಾರಿಸಿದ ಹೇಳಿತೀಯಾ ಇಲ್ವವೋ ಎಂದು . ಆದ್ರೆ ಶ್ಯಾಮ್ ಸರ್ ನಿಜಾನೆ ಹೇಳ್ತಿದೀನಿ ಎಂದು ಹೇಳಿದ ಆದ್ರೆ ಇನ್ಸ್ಪೆಕ್ಟರ್ ಅವನ ಮಾತಿಗೆ ಒಪ್ಪಲಿಲ್ಲ. ಇದೆ ಸಮಯದಲ್ಲಿ ಸ್ಟೇಷನ್ಗೆ ಒಂದು ಮಹಿಳೆ ಬರುತ್ತಾಳೆ ಸೂಟ್ ಧರಿಸಿರುತ್ತಾಳೆ ಡಾರ್ಕ್ ನೀಲಿ ಬಣ್ಣದ್ದು, ನೀಟಾದ ಕ್ರಾಫ್ ಅವಳು ಒಂದು ಕಾರ್ಡ್ ತೋರಿಸುತ್ತಿದ್ದಂತೆ ಎಲ್ಲರೂ ಸೆಲ್ಯೂಟ್ ಹೊಡೆದರು ಇನ್ಸ್ಪೆಕ್ಟರ್ಗೆ ಅವಳು ಏನಾದ್ರು ಬಾಯಿ ಬಿಟ್ಟನಾ ಎಂದು ಕೇಳಿದಳು ಇನ್ಸ್ಪೆಕ್ಟರ್ ನೋ ಮೇಡಂ ಸರಿ ಅವನನ್ನು ನನ್ನ ಬಳಿ ಕಳುಹಿಸಿ ಎಂದು ಹೇಳಿದಳು. ಸರಿ ಎಂದು ಕರೆದು ಕೊಂಡು ಅವಳ ಮುಂದೆ ತಂದು ನಿಲ್ಲಿಸಿದರು.ಅವಳು ಶ್ಯಾಮ್ ಎಂದು ಕರೆದಾಗ ಅವನಿಗೆ ಈ ಶಬ್ದ ನಾನು ಈತ್ತಿಚೆಗೆ ಕೇಳಿದ್ದನೆ ಎಂದು ಕತ್ತು ಮೇಲೆ ಎತ್ತಿ ನೋಡುತ್ತಾನೆ ಸರಿಯಾಗಿ ಕಾಣಲಿಲ್ಲ ಕಣ್ಣನ್ನು ಉಜ್ಜಿ ನೋಡಿದ ಅವನಿಗೆ ಅಚ್ಚರಿಯಾಯಿತು ನೀನಾ ಎಂದು ಬಾಯಿಯ ಮೇಲೆ ಇಟ್ಟುಕೊಂಡ . ಹೌದು ನಾನೇ ನಿನ್ನ ಮನೆಯಲ್ಲಿ ಇದ್ದವಳು ರೂಪಾ ದೇವಿ ಸಿಸಿಬಿ ಆಫೀಸೇರ್ ಈಗ ಹೇಳು ಸತ್ಯ ಎಲ್ಲಿ ಹೋದ ಹೇಳು ಸುಮ್ಮ್ನೆ ಹೋದೆ ತಿನ್ನಬೇಡಾ ಎಂದು ಹೇಳಿದಳು ಶ್ಯಾಮ್ ನಿಮೆಗೆ ನಾನು ಹೇಳುತ್ತಿರುವುದು ಯಾಕೆ ಗೊತ್ತಾಗ್ತಿಲ್ಲ ನಾನು ಹೇಳ್ತಿರೋದು ನಿಜ.... ನಿಜ.... ನಿಜಾ ಎಂದು ಕೂಗುತ್ತಾನೆ.

ರೂಪಾ ಅವನ ಮಾತನ್ನು ಒಪ್ಪುತ್ತಾಳೆ. ಅಲ್ಲಿಂದ ಹೊರಬಂದು ಅವನನ್ನು ಬಿಟ್ಟು ಕಳುಹಿಸಿ ಎಂದು ಆದೇಶಿಸುತ್ತಾಳೆ ಅನಂತರ ಅವನ ಮನೆಯಿಂದ ಕದ್ದು ತಂದ ಒಂದು ವಸ್ತುವನ್ನು ಐಟಿ ಟೆಕ್ನಿಕಲ್ ಡಿಪಾರ್ಮೆಂಟ್ ಕೊಟ್ಟಿರುತ್ತಾಳೆ . ಅದು ಅವನ ಲ್ಯಾಪ್ಟಾಪ್ ಹಾರ್ಡ್ ಡಿಸ್ಕ್ ಆಗಿರುತ್ತೆ ಅದರಲ್ಲಿರುವ ವಿಷಯ ಪತ್ತೆ ಮಾಡಿ ಅವನು ಎಲ್ಲಿಗೆ ಹೋಗಿದ್ದಾನೆ ಎಂದು ಕಂಡು ಹಿಡಿಯುತ್ತಾಳೆ. ಅವನು ಭಾರತೀಯ ಎಂಬಾಸ್ಸಿ ವೆಬ್ಸೈಟ್ ಹ್ಯಾಕ್ ಮಾಡಿದ್ದಾನೆ ಎಂಬ ಮಾಹಿತಿಯು ಸಹ ತಿಳಿಯುತ್ತಾಳೆ. ಅದರಲ್ಲಿ ಅವನು ದುಬೈ ಹಾರಿದ್ದಾನೆ ಎಂಬುದು ತಿಳಿದು ಕೂಡಲೇ ಅವಳು ಸಹ ನೆಕ್ಸ್ಟ್ ಫ್ಲೈಟ್ ದುಬೈಗೆ ಹೋಗುತ್ತಾಳೆ. ಅಲ್ಲಿ ಅವನಿಗಾಗಿ ಹುಡುಕಾಟ ಶುರುವಾಗುತ್ತದೆ. ಅಲ್ಲಿನ ಪೊಲೀಸರಿಗೆ ಅವನ ಭಾವಚಿತ್ರ ನೀಡಿ ಇವನ ಚಲನವಲನವನ್ನು ತಾನೇಗೆ ತಿಳಿಸುವಂತೆ ಸೂಚಿಸುತ್ತಲೇ ಯಾವುದೇ ಕಾರಣಕ್ಕೂ ಆತನನ್ನು ಬಂಧಿಸುವಂತಿಲ್ಲ ಎಂದು ಹೇಳಿರುತ್ತಾಳೆ.


ನಾನು ಶ್ಯಾಮ್ಗೆ ಒಂದು ಲೋಕಲ್ ಫೋನ್ ಬೂತ್ ನಿಂದ ಕರೆ ಮಾಡಿ ಏನಾದ್ರು ವಿಚಾರ ನಡೆದಿದೀಯಾ ಎಂದು ತಿಳಿದುಕೊಳ್ಳೋಣಾವೆಂದು ಕರೆ ಮಾಡಿದೇ .ಅವನು ನಡೆದ ಘಟನೆ ಬಗ್ಗೆ ವಿವರಿಸಿದ ನಾನು ಹೌದ ಎಂದು ಹೇಳಿದೆ. ಅದಕ್ಕೆ ಅವನು ಅಣ್ಣ ನಿನಗೆ ಭಯ ಆಗ್ತಿಲ್ವಾ ಎಂದು ಕೇಳಿದ. ನಾನು ಆಕ್ಷಣ ಕಣ್ಣು ಮುಚ್ಚಿದೇ ( ಹೇಗೆ ಅಂದರೆ ಆ ದಿನ ನನ್ನ ಶೆಡ್ ಗೆ ಬಂದು ಅವಳು ಆ ಕಾಗದ ಪತ್ರ ಗಳನ್ನೂ ಓದುವಾಗ ಅವಳ ಕಣ್ಣಿನಲಿ ಒಂದು ಲೆನ್ಸ್ ನೋಡಿದೆ ಅದು ಕೇವಲ ಪೊಲೀಸ್ ಅಧಿಕಾರಿಗಳು ಬಳಸುವ ವಸ್ತ್ತುಗಳಾಗಿತ್ತು. ಆ ದಿನ ನಾನು ಪೋಲಿಸ್ ಸ್ಟೇಷನಲ್ಲಿ ಅಂಥೋನಿ ಡಿಸೋಜಾ ಬಗ್ಗೆ ವಿಚಾರಿಸುವಾಗ ವಜ್ರದ ವ್ಯಾಪಾರಿ ಕೇಸ್ ಯಾರ ಕೈಗೆ ಹೋಗಿದೆ ಎನ್ನುವಾಗ ಅವನು ಹೇಳಿದ್ದು ಸಿಸಿಬಿಯವರು ತನಿಖೆ ಮಾಡುತಿದ್ದಾರೆ ಎಂದು ಹೇಳಿದ. ಅದರಲ್ಲಿ ಚೀಫ್ ಆಗಿ ರೂಪಾ ದೇವಿ ಎಂದು ಹೇಳಿ ಅವಳ ಫೋಟೋ ತೋರಿಸಿದ) ಆಗಲೇ ತಿಳಿಯಿತು.


ಸರಿ ನೀನು ತಲೆ ಕೆಡಿಸಿ ಕೊಳ್ಳಬೇಡ ನಾನು ಕೆಲಸ ಮುಗಿಸಿ ಬರ್ತೇನೆ ಎಂದು ಹೇಳಿ ಫೋನ್ ಇಡುತ್ತೇನೆ .ಫೋನ್ ಇಟ್ಟ ಕೆಲವೇ ಕ್ಷಣಗಳಲ್ಲಿ ಒಂದು ಕರೆ ಬಂತು ಸರ್ ನೀವು ಹೇಳಿದ ಮಹಿಳೆ ಫ್ಲೈಟ್ ನಿಂದ ಕೆಲ ಇಳಿದು ಟ್ಯಾಕ್ಸಿ ಬಳಿ ಬರುತ್ತಿದ್ದಾಳೆ ಎಂದು ತಿಳಿಸಿದ.

ನನ್ನ ಪ್ರಶ್ನೆಗೆಳಿಗೆ ಒಬ್ಬನೇ ಉತ್ತರಿಸುವ ವ್ಯಕ್ತಿ ಅದು ಅಂಥೋನಿ ಡಿಸೋಜಾ ಈತ ಯಾಕೆ ಆ ವಜ್ರದ ವ್ಯಾಪಾರಿಯನ್ನು ಕೊಲೆ ಮಾಡಿಸಿದ ಎಂದು ತಿಳಿಯುವುದು. ಈ ಕೇಸ್ ನಿಂದ ವಿಮುಕ್ತಿ ಪಡೆಯುವುದು ಕಾರಣ ಕೊಲೆಯಾದ ವ್ಯಕ್ತಿಯ ಕಾರ್ ನನ್ನ ಬಳಿ ಇರುವುದಕ್ಕೆ .

ದುಬೈ ನ ಪೊಲೀಸರು ನನ್ನ ಮೇಲೆ ಕಣ್ಣು ಇಟ್ಟಿದ್ದಾರೆ ಎಂದು ತಿಳಿಯಿತು. ಅವರ ಕಣ್ಣು ತಪ್ಪಿಸಲು ನಾನಾ ವೇಷದಲ್ಲಿ ಅಂಥೋನಿಯನ್ನು ಹುಡುಕುತ್ತಿದ್ದೆ .

ನಾನು ಅಂಥೋನಿಯನ್ನು ಹುಡುಕಲು ತುಂಬಾ ಕಷ್ಟಪಟ್ಟೆ ಆದರೆ ಅವನು ನನ್ನ ಕೈಗೆ ಸಿಗಲಿಲ್ಲ ಹೀಗೆ ದಿನ ನಿತ್ಯ ಅವನಿಗೋಸ್ಕರ ಅಲೆದಾಟ ನಡೆಸುತ್ತ ಇರುವಾಗ. ಆದ್ರೆ ಒಂದು ದಿನ ಅಚಾನಕ್ ಆಗಿ ಅವನ್ನು ನೋಡಿದೆ ಅವನನ್ನೆ ಫಾಲೋ ಮಾಡಿ ನೋಡಿದೆ ಪ್ರತಿ ಭಾನುವಾರ ಅವನು ಚರ್ಚ್ ಗೆ ಬರುತ್ತಾನೆ ಎಂದು ತಿಳಿಯಿತು .

ನನಗೆ ಒಬ್ಬ ವ್ಯಕ್ತಿಯಿಂದ ತಿಳಿಯಿತು ಅವನು ನಾಳೆ ಚರ್ಚ್ ಒಂದಕ್ಕೆ ಭೇಟಿ ನೀಡುತ್ತಾನೆ. ನಾಳೆ ಅವನಿಗೋಸ್ಕರ ಒಬ್ಬ ಭಿಕ್ಷುಕನ ವೇಷದಲ್ಲಿ ಅವನನ್ನು ನೋಡಲು ಆ ಚರ್ಚ್ ಬಳಿ ಬಂದು ಕೂತೆ ಮತ್ತೊಂದು ಮಾಹಿತಿಯ ಪ್ರಕಾರ ಆ ಚರ್ಚ್ ನಿರ್ಮಾತೃ ಅವನೇ ಎಂದು ತಿಳಿಯಿತು .


ಹೇಗೋ ಹೇಳಿದಂತೆ ಅವನು ಬಂದಾ ಅವನ ಸುತ್ತ ಮುತ್ತ 10 ಮಂದಿ ಬಾರ್ಡಿಗಾರ್ಡ್ಸ್ ಕಪ್ಪು ಕನ್ನಡಕ, ಕಪ್ಪು ವಸ್ತ್ರ, ಕಟ್ಟು ಮಸ್ತ್ ಆದ ದೇಹ ಅವನ ಹತ್ತಿರ ಬರುವುದಕ್ಕೂ ಅವ್ರು ಬಿಡುತ್ತಿಲ್ಲ. ನನ್ನ ಬಟ್ಟೆ ಗುಂಡಿಯಲ್ಲಿ ಅವನ ಫೋಟೋ ತೆಗೆದುಕೊಂಡೆ.


ಅವನು ಕಾರ್ ನಿಂದ ಮುಂದೆ ನಡೆದ ಅವನನ್ನೇ ಫಾಲೋ ಮಾಡಬೇಕು ಎನ್ನುವ ಅಷ್ಟರಲ್ಲಿ ಅವಳು ಬಂದು ಬಿಟ್ಟಳು. ನಾನು ಅವಳನ್ನು ಕಂಡು ಓ ಓಹೋ ನನ್ನ ಹೆಂಡತಿ ನನ್ನನ್ನು ಹುಡುಕೊಂಡು ಇಲ್ಲಿವರೆಗೂ ಬಂದಿರೋದು ನೋಡಿ ತುಂಬಾ ಖುಷಿ ಆಯಿತು. ಅವಳು ನಾನು ಯಾರು ಎಂದು ಗೊತ್ತಾ ? ನಿನಗೆ ಎಂದು ನನ್ನನು ಪ್ರಶ್ನಿಸಿದಳು. ಅದಕ್ಕೆ ನಾನು ನೀನು ಸಿಸಿಬಿ ಆಫೀಸರ್ ವಜ್ರ ವ್ಯಾಪಾರಿಯ ಕೇಸ್ ಇನ್ವೆಸ್ಟಿಗೇಷನ್ ಮಾಡ್ತಿರೋ ಚೀಫ್ ರೂಪಾದೇವಿ ಎಂದು ಹೇಳಿದ. ಅವಳಿಗೆ ಅವನ ಮಾತು ಕೇಳಿ ತುಂಬಾ ಶಾಕ್ ಆಯಿತು. ನಿನಗೆ ಹೇಗೆ ಗೊತ್ತು ?ಎಂದು ಕೇಳಿದಳು.

ರೂಪಾ ಸರಿ ನೀನು ಯಾಕೆ ಇಲ್ಲಿಗೆ ಬಂದಿದೀಯಾ ಹೇಳು ಎಂದು ಕೇಳಿದಳು. ನಾನು ಹೇಳೋದಿಲ್ಲ ಸ್ವಲ್ಪ ದಿನದಲ್ಲೇ ನಿನಗೆ ತಿಳಿಯುತ್ತದೆ ಎಂದು ಹೇಳಿ ಅಲ್ಲಿಂದ ಹೊರಟೆ ಹೋಗುವಾಗ ಅವಳಿಗೆ ಒಂದು ಮುತ್ತು ಕೊಟ್ಟು ಐ ಲವ್ ಚಾಲೆಂಜ್ ಎಂದು ಹೇಳಿ. ಕಾರ್ ನಲ್ಲಿ ಕುಳಿತು ಹೋದೆ ಅವಳು ಒಂದು ನಿಮಿಷ ಸ್ಥಬ್ದವಾಗಿ ಬಿಟ್ಟಳು .

ಮುಂದಿನ ಭಾನುವಾರ ಅವನು ಚರ್ಚ್ಗೆ ಬರುವುದಿಲ್ಲ ಒಂದು ಕೆಲ್ಸದ ಮೇಲೆ ೫ ಜನ ಜೊತೆ ಹೊರಗಡೆ ಹೋಗುತ್ತಿದ್ದಾನೆ ಎಂದು ತಿಳಿಯಿತು. ನಾನು ಅವನ ಕಾಣಬೇಕು ಹೇಗಾದ್ರು ಎಂದು ಒಂದು ತಂಡ ರಚನೆ ಮಾಡಿಕೊಂಡೆ ಅವನು ಹೋಗುವ ರಸ್ತೆಗಳನ್ನೂ ಗುರಿ ಮಾಡಿಕೊಂಡೆ ಎಲ್ಲಿ ಎಲ್ಲಿ ಟರ್ನ್ ಇದೆ ಯೂ ಟರ್ನ್ ಎಷ್ಟು ಬರುತ್ತದೆ ಎಂದು ಎಲ್ಲ ಮಾರ್ಕ್ ಮಾಡಿ, ಅಲ್ಲಿ ತನ್ನವರನ್ನು ನೇಮಿಸಿ ರಸ್ತೆ ಅಗೆಯುವ ಕೆಲಸ ಮಾಡಲು ಸೂಚಿಸಿದ , ಮತ್ತೆ ಕೆಲವರನ್ನು ಕಾರ್ ಆಕ್ಸಿಡೆಂಟ್ ಮಾಡಿಕೊಳ್ಳಿ ಎಂದಾ. ಉಳಿದಿರುವುದು ಒಂದು ರಸ್ತೆ ಮಾತ್ರ ಆ ದಾರಿಯಲ್ಲಿ ನಾನು ಅವನನ್ನು ಹಿಡಿಯುತ್ತೇನೆ.


ಭಾನುವಾರ ಬಂತು ಎಲ್ಲರು ಹೇಳಿದ ಹಾಗೆ ಸಿದ್ಧರಾಗಿದ್ದರು. ನನ್ನ ಕಡೆಯ ವ್ಯಕ್ತಿಯೊಬ್ಬ ಅವನು ಹೊರಡುವ ಮಾಹಿತಿಯನ್ನು ನೀಡಿದ . ಒಂದು ರಸ್ತೆ ಬಂದ್ ಆಯಿತು ,ಮತ್ತೊಂದು ಕಡೆ ಬಂದಾ ಅಲ್ಲಿ ಕಾರ್ ಆಕ್ಸಿಡೆಂಟ್ ಕೊನ್ಗೆ ನಾನು ಅಂದುಕೊಂಡ ಹಾಗೆ ಅದೇ ದಾರಿಯಲ್ಲಿಬರುತ್ತಾನೆ .


ನಾನು ಅವನು ಬರುವ ಹಾದಿಯನ್ನೇ ಕಾಯುತಿದ್ದೆ. ಅವನ ಕಾರು ಬರುವುದನ್ನು ಕಂಡು ಅವನ ಕಾರಿಗೆ ಅಡ್ಡವಾಗಿ ನಿಂತೇ ಆಕ್ಸಿಡೆಂಟ್ ಆಯಿತು ಕೂಡಲೇ ಕಾರು ನಿಲ್ಲಿಸಿದ ಅಂಥೋನಿ ನನ್ನತ್ತ ನೋಡಿದ ಅವನ ಸಹಚರನಿಗೆ ಹೇಳಿ. ನನ್ನನೂ ಅವನ ಕಾರಿನಲ್ಲಿ ಕುಳಿಸಿ ಅವನ ಸ್ಥಳಕ್ಕೆ ಕರೆದುಕೊಂಡು ಹೋದ. ಕಾರು ಅವನ ಅಡ್ಡಕ್ಕೆ ತಲುಪಿತು ನನ್ನ ಒಳಗೆ ಒಂದು ಬೆಡ್ ಮೇಲೆ ಮಲಗಿಸಿ ಕೂಡಲೇ ಡಾಕ್ಟರ್ ಕರೆಸಿ ಉಪಾಚರಿಸಿ ವಿಶ್ರಾಂತಿ ತೆಗೆದು ಕೊಳ್ಳಲ್ಲು ಹೇಳಿದರು. ಆ ದಿನ ಅಲ್ಲೇ ಕಾಲ ಕಳೆದೆ ಅಂಥೋನಿ ನನ್ನ ನೋಡಲು ಬಂದಾ ಕೇಳಿದ ನೀನು ಯಾರು ಎಂದು ನಾನು ಮೂಕನಾಗಿ ಸುಮ್ಮನಿದ್ದೆ ಅವನು ಮತ್ತೆ ಕೇಳಿದ ನಾನು ಎಚ್ಚೆತ್ತು ಆಹ್ಹ್ ನಾನು ಒಬ್ಬ ಅನಾಥ ನನಗೆ ಯಾರು ಇಲ್ಲ ಎಂದು ಹೇಳಿದೆ.


ಅವನು ನನ್ನ ನೋಡಿ ನನ್ನ ಜೊತೆ ಇರುತ್ತೀಯಾ ಎಂದು ಕೇಳಿದ. ನಾನು ಸರಿ ಎಂದು ಹೇಳಿ ಅವನು ಹೇಳಿದ ಕೆಲಸ ಮಾಡಿಕೊಂಡು ಇದ್ದೆ.

ಅಲ್ಲಿ ಕೆಲವು ಮೌಲಿಗಳು ಬಂದು ಹೋಗುವುದನ್ನು ನೋಡಿದೆ, ಧರ್ಮದ ಕುರಿತು ಅಲ್ಲಿರುವ ಹುಡುಗರಿಗೆ ಚೆನ್ನಾಗಿ ಬೋಧನೆ ಮಾಡುತ್ತ ಅವರ ಆಲೋಚನೆ ಗಳನ್ನೂ ಬದಲಿಸಿ ನಾವು ನಮ್ಮ ಧರ್ಮವನ್ನು ಕಾಪಾಡುವ ಸಲುವಾಗಿ ಈ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿ ಅವರನ್ನು ತಮ್ಮ ಕೈ ವಶ ಮಾಡಿಕೊಂಡರು. ಮತ್ತೆ ಕೆಲವರಿಗೆ ಬೇರೆ ಜಾತಿಯ ಹುಡುಗಿಯರನ್ನು ಪ್ರೇಮಿಸುವಂತೆ ಸಹ ಪುಸಲಾಯಿಸಿದರು .ಹೀಗೆ ಹಲವಾರು ರೀತಿಯ ತರಬೇತಿ ನೀಡಿ ತಮ್ಮ ಕಾರ್ಯ ಸಾಧನೆಗೆ ಇವರನ್ನು ಬಳಸಿ ಕೊಳ್ಳುತ್ತಿದ್ದರು.

ಹೀಗೆ ಕಾಲ ಕಳೆದಂತೆ ಒಂದು ದಿನ ಒಂದು ದಿನ ಹಲವು ಹಡಗುಗಳಿಂದ ಕೆಲವೊಂದು ಸರಕುಗಳು ಬಂದವು ಪೆಟ್ಟಿಗೆ ತೆರದು ನೋಡಿದೆ ಹಣ್ಣುಗಳು, ತರಕಾರಿ , ಆದರೆ ಇದನ್ನು ತೆಗೆಯುತಿದ್ದಂತೆ ಅದರಿಂದ ಅಚ್ಚಿರಿ ಮೂಡಿಸುವಂಥಹ ಸಾಮಾನುಗಳಿದ್ದವು ಅವು ಅತ್ಯಾಧುನಿಕ ಗನ್ , ಮದ್ದು ಗುಂಡು , ಡ್ರೋನ್ , ಹೀಗೆ ಹಲವಾರು ವಸ್ತುಗಳಿದ್ದವು ,ನಂಗೆ ಇದೆಲ್ಲ ಹೇಗೆ ಇವರಿಗೆ ದೊರೆಯುತ್ತದೆ ಎಂದಾಗ ತಿಳಿದು ಬಂತು ಇವರು ವಜ್ರಗಳನ್ನು ಕಳ್ಳ ಸಾಗಾಣಿಕೆ ಮಾಡಿ ಇವುಗಳನ್ನು ತರಿಸಿ ಕೊಳ್ಳುತ್ತಿದ್ದಾರೆ

ಅಂಥೊನಿ ಹಡಗುಗಳ ಮೂಲಕ ವಜ್ರಗಳನ್ನು ಸಾಗಿಸಿ ಅದರಲ್ಲಿ ಬರುವ ಹಣವನ್ನು ಭಯೋತ್ಪಾದಕರ ಗುಂಪುಗಳಿಗೆ ಹಂಚಿ ಅವರಿಂದ ತನಗೆ ಬೇಕಾದ ಕೆಲಸಗಳನ್ನು ಮಾಡಿಸಿ ಕೊಲುತಿದ್ದ ಎಂಬ ಮಾಹಿತಿಯು ಅದರೆ ಇವನ ಈ ಕೆಲಸವನ್ನು ಯಾರಿಗೂ ತಿಳಿಸದೆ ಎಲ್ಲರಿಗೂ ಸಭ್ಯನಂತೆ ವರ್ತಿಸುತಿದ್ದ.

ಅದರೆ ನಾನು ಅವನನು ನೋಡಿದಾಗ ಅವನ ಕೊರಳಿನಲ್ಲಿ ಮಸಿದಿಯಲ್ಲಿ ಕಟ್ಟುವ ತಾಯತ ಇತ್ತು ನನಗೆ ಇವನ ನಿಜವಾದ ಹೆಸರು ಅಂಥೊನಿ ನಾ ಎಂಬ ಅನುಮಾನ ಕಾಡಿತು ಅದಕ್ಕಾಗಿ ನಾನು ಅವನ ಪೂರ್ವಾಗ್ರಹ ತಿಳಿಯಲು ನನಗೆ ಪರಿಚಯವಿರುವ ಒಬ್ಬ ಮೌಲಿಯನ್ನು ಭೇಟಿ ಮಾಡಿ ಇವನ ಬಗ್ಗೆ ತಿಳಿದುಕೊಂದೆ ಆಗಲೆ ಸತ್ಯ ತಿಳಿಯಿತು ಇವನ ಹೆಸರು ಅಕ್ರಮ್ ಪಾಷ ಅಲಿ ಎಂದು ಇವನು ಮೋಸ್ಟ್ ವಾಂಟೇಡ್ ಭಯೋತ್ಪಾದನೆಯ ಪ್ರಚಾರಕ ಎಂದು ತಿಳಿದು ಬಂತು ಇವನಿಗಾಗಿ ಅನೇಕ ರಾಷ್ಟ್ರಗಳು ಹುಡುಕುತಿವೆ.ಅದರೆ ಯಾರ ಕೈಗೂ ಸಿಗದೆ ಬೇರೆ ಬೇರೆ ವೇಷದಲ್ಲಿ ಸಂಚಾರ ಮಾಡುತ್ತಾನೆ. ಎಂಬ ಮಾಹಿತಿಯನ್ನು ಸಹ ಕಲೆಯಾಕಿದೆ.

ಇವನನ್ನು ಬಂಧೀಸುವುದು ತುಂಬಾ ಸುಲುಭದ ಮಾತಲ್ಲ ಹೆಜ್ಜೆ ಹೆಜ್ಜೆಗೂ ಅವನಿಗೆ ಒಬ್ಬ ಅಂಗರಕ್ಷಕ ಇರುತ್ತಾರೇ . ಆದ್ರೆ ಇವನ ಎಲ್ಲಾ ಅವ್ಯವಹಾರಗಳಿಗೂ ಮಾಸ್ಟರ್ ಪ್ಲಾನ್ ಮಾಡುತ್ತಿದ್ದದ್ದು ಅವನ ಪಾರ್ಟ್ನರ್ ಕೂಡ ಆಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸಮೀರ್ ಖಾಯಂ .

ಈತ ಪ್ರತಿಯೊಂದು ಪ್ಲಾನ್ ಎಕ್ಸಿಕ್ಯೂಟ್ ಮಾಡುವಾಗ ಮುಂಚೂಣಿಯಾಗಿ ನಿಂತು ಯಾವ ಪ್ಲಾನ್ ಕೂಡ ಕೆಡದಂತೆ ಎಚ್ಚರವಹಿಸುತಿದ್ದ. ನನಗೆ ಇವರಿಬ್ಬರನ್ನು ಬೇರ್ಪಡಿಸುವುದು ಹೇಗೆ ಎಂಬ ಚಿಂತೆ ಕಾಡ ತೊಡಗಿತು. ಆ ಸಮಯಕ್ಕೆ ನನಗೆ ಒಂದು ವಿಚಾರ ತಿಳಿದು ಬಂತು ಅದು ಏನೆಂದರೆ ಸಮೀರ್ ಖಾಯಂಗೆ ಒಬ್ಬ ತಮ್ಮ ನಿರುತ್ತಾನೆ ಅವನ ಹೆಸರೇ ಝಾಫರ್ ಖಿಲ್ಜಿ ಎಂದು ಈತ ಬೇರೆ ಯಾರು ಅಲ್ಲ ನಾವೂ ಕಳ್ಳತನ ಮಾಡಿದ ಕಾರಿನ ಮಾಲೀಕ. ಈ ವಿಚಾರವನ್ನು ಇಟ್ಟುಕೊಂಡು ನಾನು ಒಂದು ಆಲೋಚನೆ ಮಾಡಿದೆ, ಅದೇ ಸಮಯಕ್ಕೆ ಝಾಫರ್ ಕೊಲೆ ಮಾಡಿಸಿದ ವಿಚಾರ ತಿಳಿಯಿತು.ಸಮೀರ್ ತಮ್ಮನ್ನು ಕೊಲೆ ಮಾಡಿಸಿದ್ದು ಬೇರೆ ಯಾರು ಅಲ್ಲ ಅವನೇ ಅಂಥೋನಿ ಅಲಿಯಾಸ್ ಅಕ್ರಮ್ ಪಾಷಾ ಮಹಮದ್. ಹೌದು ನಾನು ಅಂದು ಕೊಂಡಂತೆ ಅಂಥೋನಿ ಕ್ರಿಶ್ಚಿಯನ್ ಅಲ್ಲ ಆತ ಒಬ್ಬ ಮುಸಲ್ಮಾನ್ ವ್ಯಕ್ತಿ . ಆದ್ರೆ ಹೊರಗಡೆ ಸಮಾಜಕ್ಕೆ ಇವನು ಕ್ರಿಶ್ಚಿಯನ್ ರೀತಿಯಲ್ಲಿ ಯಾರಿಗೂ ಅನುಮಾನ ಬರದ ರೀತಿ ವರ್ತಿಸುತ್ತಾನೆ.


ಅಂಥೋನಿ (ಅಕ್ರಮ್ ಪಾಷ ) ಕೊಲೆ ಮಾಡಿಸಿದ ವಿಚಾರವನ್ನು ಗುಪ್ತವಾಗಿ ಇಟ್ಟಿದ್ದ ಆದ್ರೆ ಅಂಥೋನಿ ಸಹಚರರು ಮಾತಿನ ಜಟಾಪಟಿಯಲ್ಲಿ ಈ ವಿಚಾರ ಹೊರಗೆ ಬಿತ್ತು . ಈ ವಿಷಯ ಕೇಳಿಸಿತು ಆ ಕ್ಷಣ ನಾನು ಅವರ ಮಾತನ್ನು ರೆಕಾರ್ಡ್ ಮಾಡಿಕೊಂಡು ಆ ದಿನ ಎಲ್ಲರೂ ಪಾರ್ಟಿಯಲ್ಲಿದ್ದರು ನಾನು ಸಮೀರ್ ನನ್ನೂ ಇಶಾರಾ ಮಾಡಿ ಕರೆದೆ ಅವನು ಯಾರಿಗೂ ತಿಳಿಯದಂತೆ ನನ್ನ ಬಳಿ ಬಂದ ಟೇಪ್ ರೆಕಾರ್ಡೆ ಅನ್ನು ಅವನ ಕಿವಿಗೆ ಕೇಳಿಸಿದೆ ಅವನು ನಿಂತಲ್ಲಿಯೇ ಕುಸಿದು ಬಿದ್ದ . ನಾನು ಅವನ ತಲೆಯನ್ನು ಪೂರ್ತಿ ವಿಷಾದ ಬೀಜ ಬಿತ್ತಿ ನನ್ನ ಕೈ ವಶ ಮಾಡಿಕೊಂಡೆ.


ಇಬ್ಬಾಗ ಮಾಡುವಂತೆ ಅವನಿಗೆ ಸಲಹೆ ಕೊಟ್ಟೆ, ಆದರೇ ಸಮೀರ್ ಅವನ್ನು ಕೇಳುವೆ ಯಾಕೆ ಹೀಗೆ ಮಾಡಿದ ಎಂದು ಕೇಳುತ್ತೇನೆ . ಸರಿ ಎಂದು ನಾನು ನಿಮಿಬ್ಬರ ಮಾತು ಕತೆಗೆ ಏರ್ಪಡು ಮಾಡುತ್ತೇನೆಯೆಂದೂ ಅವನ ವಿಶ್ವಾಸಗಳಿಸಿದೆ.


ಅಂಥೋನಿ ಅತ್ರ ಬಂದು ಸಮೀರ್ ನಿಮ್ಮ ಬಳಿ ಕೊಲೆ ಮಾಡುವ ಸಂಚನ್ನು ರೂಪಿಸುತಿದ್ದಾನೆ ಎಂದು ಅವನಿಗೆ ತಿಳಿಸಿದೆ. ಆದ್ರೆ ಅವ್ನು ಮೊದಲು ಒಪ್ಪಲಿಲ್ಲ ನಾನು ಅವನಿಗೆ ನಂಬಿಕೆ ಬರಲು ಅವನಿಗೆ ಝಾಫರ್ ಕೊಲೆ ಬಗ್ಗೆ ಹೇಳಿದೆ ಅವನು ಎದ್ದು ನನ್ನ ಬಾಯಿ ಮುಚ್ಚಿಸಲು ಬಂದ ಅವ್ನ ಕಣ್ಣು ಹಾಗು ಅವನ ಚಹರೆ ಭಯದಲಿ ಮುಳುಗಿತು. ಅವನನ್ನು ನನ್ನ ಕೈ ವಶ ಮಾಡಿಕೊಳ್ಳಲ್ಲು ಹೋದೆ ಅಷ್ಟು ಹೊತ್ತಿಗೆ ಮಾಲ್ವಿಗಳು ಬಂದರು ನನ್ನ ಪ್ಲಾನ್ ಅಲ್ಲಿಗೆ ನಿಂತು ಹೋಯಿತು.

ಸಮೀರ್ ಗೆ ಪತ್ರ ಬರೆದಿರುವ ರೀತಿ ನಾನೇ ಒಂದು ಪತ್ರ ಬರೆದು ಕಳಿಸಿದೆ. ಅದರಲ್ಲಿ ನಾನು ನಿನ್ನ ಬಳಿ ಒಂದು ವಿಚಾರದ ಬಗ್ಗೆ ಮಾತನಾಡಬೇಕು ೨ರಡು ದಿನ ಬಿಟ್ಟು ನನಗೆ ನೀನು ಒಂದು ಸ್ಥಳದಲ್ಲಿ ಸಿಗು ನಿನ್ನ ಜೊತೆ ಯಾರು ಇರಕೂಡದು ಎಂದು ಇದು ತುಂಬಾ ಗುಪ್ತ ವಾದ ವಿಚಾರ ಎಂದು ಬರೆದು.ಇಬ್ಬರಿಗೂ ಕಳುಹಿಸಿದೆ.

ಸಮೀರ್ ನನ್ನ ಕರೆದು ಪತ್ರದ ಬಗ್ಗೆ ಹೇಳಿದ ನಾನು ಅವನಿಗೆ ಧೈರ್ಯ ತುಂಬಿ ನೀವು ಹೇದರ ಬೇಡಿ ಎಂದು ಹೇಳಿ ನಾನು ಅವರಿಗೆ ಗೊತ್ತಿಲ್ಲದೆ ಒಂದು ತಂಡ ರಚಿಸಿ ನಿಮ್ಮ ರಕ್ಷಣೆಗೆ ಇರುತ್ತೇನೆ ಎಂದು ಹೇಳಿದೆ .

iಹೀಗಿರುವಾಗ ನಾನು ರೂಪಾ ಮೇಲ್ ಗೆ ಒಂದು ಲಿಂಕ್ ಕಳುಹಿಸಿದೆ . ಅದ್ರಲ್ಲಿ ಒಂದು ಸಣ್ಣ ಅಪ್ರರೇಷನ್ ಅದರಲ್ಲಿ ಇಬ್ಬರು ಗುಂಪಿನ ಮೇಲೆ ಗುಂಡಿನ ದಾಳಿ ಮಾಡಬೇಕು ಆದರೆ ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿಕೊಂಡು ಯಾರು ಯಾರಿಗೂ ಗೊತ್ತಾಗದ ರೀತಿಯಲ್ಲಿ ಇರಬೇಕು ಮೊತ್ತೊಂದು ನಮ್ಮ ಗುಂಪಿನ ಬಟ್ಟೆಯನ್ನೆ ಧರಿಸಿಕೊಂಡು ಬರುವಂತೆ ಸಹ ತಿಳಿಸಿದೆ.(ಕಾರಣ ಇಷ್ಟೆ ಸಮೀರ್ಗೆ ಈ ದಾಳಿ ನಡೆಸಿದ್ದು ಅಕ್ರಮ್ ಎಂದು ತಿಳಿಯ ಬೇಕು) ಈ ದಾಳಿ ಸಮೀರ್ ಗುರಿ ಮಾಡಿ ಹೊಡೆಯಿರಿ ಎಂದು ತಿಳಿಸಿ ನಾನು ಅವನನ್ನು ಕಾಪಾಡುವಂತೆ ಮಾಡಿ ಅವನ ವಿಶ್ವಾಸಗಳಿಸಿ ಅಕ್ರಮ್ ನಾ ನ್ಯೂನ್ಯತೆಗಳು ತಿಳಿದು ಅವನನ್ನು ಮಟ್ಟ ಹಾಕುವ ಬಗೆಯನ್ನು ತಿಳಿಯ ಬೇಕಿತ್ತು.

ಈ ದಾಳಿಯ ನಂತರ ಎರಡು ಗುಂಪುಗಳು ಇಬ್ಬಾಗವಾಯಿತು. ಆದ್ರೆ ನಾನು ಮಾತ್ರ ಇವರಿಬ್ಬರಿಗೂ ಮಧ್ಯಸ್ಥಿಕೆ ಮಾಡುವ ಕೆಲಸವನ್ನು ಕೈಗೊಂಡೆ.

ಸಮೀರ್ ಗೆ ಕುಡಿತ ಚಟ ಜಾಸ್ತಿ ಹೀಗೆ ಒಂದು ದಿನ ನಾನು ಅವನ ದೇಹರೆಗೆ ಹೋಗಿ ಒಂದು ಯೋಜನೆ ಬಗ್ಗ ಮಾತನಾಡುವಾಗ ಅವನು ನನ್ನ ಕರೆದು ತನ್ನ ಬಗ್ಗೆ ಒಳ ರಹಸ್ಯದ ಬಗ್ಗೆ ಬಾಯಿ ಬಿಡಲೂ ಶುರು ಮಾಡಿದ ಅವನ ಮಾತುಗಳನ್ನು ಆಲಿಸಿ

ಎಲ್ಲವನ್ನು ರೆಕಾರ್ಡ್ ಮಾಡುತ್ತಿರುವುದನ್ನು ಒಬ್ಬ ನೋಡಿ ಬಿಟ್ಟ ನನಗೆ ಏನೂ ಮಾಡಬೇಕು ತಿಳಿಯಲಿಲ್ಲ ಕೂಡಲೇ ನಾನು ಓಡಿ ಅವನ ಹಿಡಿದು ಅವನ ಗಂಟಲನ್ನು ಕುಯ್ದು ಬಿಟ್ಟೇ . ಸಮೀರ್ ದೇಹರಯಿಂದ ಹೊರಬಂದು ನೋಡಿದ ನಾನಾ ಆಗಲೇ ಅವನ್ ಕತೆ ಮುಗಿಸಿದೇ ಸಮೀರ್ ಇದು ಏನು ನಿನ್ ಮಾಡಿದ್ದು ನನ್ನ ಅಂಗರಕ್ಷಕನನ್ನು ಯಾಕೆ ಕೊಲೆ ಮಾಡಿದೆ ಅವನು ಏನ್ ಮಾಡಿದ ಎಂದು ಕೇಳಿದ. ನಾನು ಅಗಲೇ ಅವನ ಜೇಬಿಗೆ ಆಡಿಯೋ ಟೇಪ್ ಬಚ್ಚಿಟ್ಟಿದ್ದೆ, ಅದನ್ನು ಹೊರ ತೆಗೆದು ತೋರಿಸಿದೆ ಅವನಿಗೆ ಅಚ್ಚರಿಯಾಯಿತು. ಅವನು ನನ್ನ ಸಂಪೂರ್ಣ ನಂಬಿಬಿಟ್ಟ ಈ ಒಂದು ಘಟನೇ ನನಗೆ ಒಂದು ರೀತಿ ಸಕಾರಾತ್ಮಕವಾಯಿತು .

ಸಮೀರ್ ಬಳಿ ಇದ್ದ ಅಮೂಲ್ಯವಾದ ಡೈರಿ ನನ್ನ ಕೈ ಸೇರಿತು ಅದರಲ್ಲಿ ಅವನ ಎಲ್ಲ ಕೆಲಸದ ಅವ್ಯವಹಾರದ ಮಾಹಿತಿಗಳು ಇವನಿಗೆ ಸಪೋರ್ಟ್ ಆಗಿ ನಿಂತಿರುವ ರಾಜಕೀಯ ಗುಂಪು ಎಲ್ಲವೂ ಅದರಲ್ಲಿ ಅಡಗಿತ್ತು.

ಅಂಥೋನಿ ನನ್ನ ಕರೆದು ಬಾಂಗ್ಲಾದೇಶದ ಹೊಸ ಯುವಕರನ್ನು ಕರೆತರಲಾಗಿದೇ ಅವರಿಗೆ ಸರಿಯಾದ ಮಾರ್ಗ ನೀಡಿ ಕೆಲಸ ತಿಳಿಸು ಎಂದು ಆದೇಶಿಸಿದ್ದ . ನಾನು ಅವರನ್ನು ಒಟ್ಟುಗೂಡಿಸಿ ಎಲ್ಲರ ಹೆಸರು ತಿಳಿದು ಕೊಂಡೆ ಎಲ್ಲ ಮಾಹಿತಿ ಪಡೆದ ನಂತರ ಮತ್ತೆ ಎರಡು ಕೋಡ್ ಬಳಿಸಿ ಬಿ ಡಿ( ಬಾಂಗ್ಲಾದೇಶ ) ನ್ಯೂ ರೂಪಾ ಲಿಂಕ್ ಹೋಯಿತು ಒಬ್ಬರ ಹೆಸರನ್ನ ಪತ್ತೆ ಹಚ್ಚಿದಳು ಇವರೆಲ್ಲ ಅಮಾಯಕ ಮಕ್ಕಳು ಸುಮಾರು ೧೫ ರಿಂದ ೨೦ ವಯಸ್ಸಿನ ಮಕ್ಕಳು.

ಹೀಗಿರುವ ಅದೊಂದು ದಿನ ಕೆಲವು ಮೌಲ್ವಿಗಳುಅಂಥೋನಿ (ಅಕ್ರಮ್) ಬಳಿ ಮಸಿದಿಯ ವಿಚಾರವಾಗಿ ಮಾತಾಡಿ ಅದರಲ್ಲಿ ಒಬ್ಬ ನೀವೇ ನಮಗೆ ದೇವರಂತೆಯೆಂದೂ ಅಕ್ರಮ್ ಕುರಿತು ಜೈ ಕಾರ ಕೂಗಿದ ನಾನು ಅದನ್ನೇ ಅಸ್ತ್ರವಾಗಿ ಇಟ್ಟುಕೊಂಡು ಸಮೀರ್ ಬಳಿ ಹೋಗಿ ಮೌಲ್ವಿಗಳು ಸಹ ನಮ್ಮನ್ನು ಕಡೆಗಣಿಸುತಿದ್ದಾರೆ. ಎಲ್ಲರೂ ಅವನ್ನೇ ದೇವರು ಎಂದು ಜೈ ಕಾರ ಹಾಕುತಿದ್ದಾರೆ ಇನ್ನು ಸ್ವಲ್ಪ ದಿನದಲ್ಲಿ ನಮ್ಮ ಗುಂಪನ್ನು ಸಹ ಅಳಿಸಿ ಹಾಕಿ ಅವನೊಬ್ಬನೇ ರಾಜನಾಗುತ್ತಾನೇ ಎಂದು ತಿಳಿಸಿದೆ. ಅವನು ಕೊಪಕೊಂಡು ಅಚಾನಕ್ ಆಗಿ ಅವನ ಅವನೊಡನೆ ಒಂದು ಬೈಠಕ್ ಮಾಡಲು ತಿಳಿಸಿದ .


ನಾನು ಅವನ ಆದೇಶದಂತೆ ಈ ಬೈಠಕ್ನಲ್ಲಿ ಕೊಲಾಹಲವನ್ನೆ ಎಬ್ಬಿಸುವಂತ ಕೆಲಸ ಮಾಡಿಸಿದೆ ಅದು ಬೈಠಕ್ ಕೂರುವ ದಿನವೇ ಇಬ್ಬರು ಗುಂಪಿನಿಂದ ಕೊಲೆ ಮಾಡಿಸಿ ಈ ಚರ್ಚೆಯಲ್ಲಿ ಎಲ್ಲರೂ ಕತ್ತಿ ಮಸೆಯುವಂತೆ ಮಾಡಿದೆ.ಆದರಲ್ಲಿ ನನಗೆ ನಾನ್ ಕತ್ತಿಯಲ್ಲಿ ಚುಚ್ಚು ಕೊಂಡೇ ರಕ್ತ ನೀರಿನಂತೆ ಹರಿಯಲು ಶುರುವಾಯಿತು ಸಮಿರ್ ನನ್ನ ಕಡೆ ತಿರುಗಿ ನೋಡಿ ತನ್ನಲ್ಲಿರುವ ಡಾಕ್ಟರ್ ತಿಳಿಸಿದ ಆತ ಇಲ್ಲ ಕೂಡಲೇ ಇವನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಬೇಕು ಇಲ್ಲವಾದರೆ ಪ್ರಾಣಕ್ಕೆ ಅಪಾಯ ಎಂದು ಹೇಳಿದ.


ನನ್ನ ಒಂದು ಆಸ್ಪತ್ರೆಗೆ ದಾಖಲು ಮಾಡಿದರು ಈ ವಿಷಯ ತಿಳಿದ ರೂಪ ಕೂಡ ಅಲ್ಲಿಗೆ ಒಂದು ನರ್ಸ್ ವೇಷದಲ್ಲಿ ಧಾವಿಸಿದಳು . ಅವಳ ಬರುವ ಹೊತ್ತಿಗೆ ನನಗೆ ನಿದ್ದೆ ಬರುವ ಇಂಜ್ಯೂಕ್ಷನ್ ಸಹ ನೀಡಲಾಗಿತ್ತು. ನನ್ನ ಕಣ್ಣು ಸಣ್ಣದಾಗಿ ನಿದ್ರೆಗೆ ಜಾರುವ ಸಮಯದಲ್ಲಿ ಅವಳು ಬಂದಳು .

ಬೆಳಗಿನ ಸೂರ್ಯ ನನ್ನ ಕಣ್ಣು ತೆರೆಸಿದ ನಾನು ಕಣ್ಣು ಬಿಟ್ಟು ನೋಡುತ್ತೇನೇ ಪಕ್ಕದಳ್ಳಿ ರೂಪಾ ನಿಂತಿರುವುದು ಕಂಡೆ , ಅವಳು ನನ್ನ ಕಿವಿಯ ಹತ್ತಿರ ಬಂದು ಹೇಗಿದೀಯಾ ಈಗ ಎಂದು ಅವಳ ಉಸಿರು ನನ್ನ ಕಿವಿಗೆ ತಾಕಿದ ಒಡನೆ ನನಗೆ ಒಂದು ರೀತಿ ಚೈತನ್ಯ ಬಂದಂತೆಯಾಯಿತು .

ಆಗ ನಾನು ನೀನು ಹತ್ತಿರ ಇರುವಾಗ ನಂಗೇನೂ ಎಂದು ಹೇಳಿದೆ. ಆಗ ಡಾಕ್ಟರ್ ಬಂದು ಹೌ ಆರ್ ಯು ಎಂದು ಕೇಳಿದ. ನಾನು ಯಾ ಐಮ್ ಫೈನ್ ಎಂದು ಹೇಳಿದೆ . ಅವನು ಓಕೆ ಎಂದು ಹೇಳಿ ರೂಪಾಗೆ ಸನ್ನೆ ಮಾಡಿ ತೆರಳಿದ.

ಆಗ ನಾನು ನನ್ನ ಜೇಬಿನಿಂದ ಒಂದು ಪುಟ್ಟ ಬಾಕ್ಸ್ ಅವಳ ಕೈ ಮೇಲೆ ಮಡಚಿದೆ ಇದು ನಿನಗಾಗಿ ಎಂದು ಹೇಳಿದೇ ಆ ಸಮಯಕ್ಕೆ ಸಮೀರ್ ಬರುವುದು ತಿಳಿಯಿತು ಅವಳು ಗಾಬರಿಯಲ್ಲಿ ಜೇಬಿನಲ್ಲಿ ತುರುಕಿಕೊಂಡಳು.

ಸಮೀರ್ ಈಗ ಹೇಗಿದ್ದೀರಿ ಎಂದು ಕೇಳಿದ ನಾನು ಪರವಾಗಿಲ್ಲ ಸ್ವಲ್ಪ ಆರಾಮಾಗಿದ್ದೇನೆ ಎಂದು ಹೇಳಿದೆ. ಹೀಗಿರುವಾಗ ಸಮೀರ್ ರೂಪಾಳನ್ನು ಧಿಟ್ಟಿಸಿ ನೋಡಿದ ನಾನು ಅವನ ಆ ನಡೆಯನ್ನು ಕಂಡೆ ನಾನು ಭಾಯ್ ಭಾಯ್ ಎಂದು ಕರೆದೆ . ಸಮೀರ್ ಯಾರಿವರು ಎಂದು ಕೇಳಿದ ನಾನು ನನ್ನ ನೋಡಿಕೊಳ್ಳಲು ಬಂದಿರುವ ನರ್ಸ್ ಎಂದು ಹೇಳಿದೆ .

ಹೌದಾ ಸರಿ ಹಾಗಿದ್ರೆ ಅವಳ ಬಳಿ ಹೋಗಿ ಇವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಅವನು ಹೊರಟ.

ನಾನು ರೂಪಾಳನ್ನು ಕೇಳಿದೆ ನೀನು ಸಮೀರ್ ನಾ ನೋಡಿದೀಯಾ ಎಂದು ಕೇಳಿದೆ. ಅವಳು ಹೌದು ತಿಹಾರ್ ಜೈಲಿನಲ್ಲಿ ಎಂದು ಹೇಳಿದಳು . ಸರಿ ಹಾಗಿದ್ರೆ ನೀನು ಇರುವುದು ಒಳಿತಲ್ಲ ಬೇಗನೆ ನೀನು ಇಲ್ಲಿಂದ ಜಾಗ ಖಾಲಿ ಮಾಡುವುದು ಒಳ್ಳೇದು ಎಂದು ಹೇಳಿದೆ.

ಆಗ ರೂಪಾ ನಾನು ಒಬ್ಬಳೇ ಹೋಗುವುದಿಲ್ಲ ನಿನ್ನನು ಕೂಡ ಕರೆದು ಕೊಂಡು ಹೋಗುತ್ತೇನೆ ಎಂದಳು.

ಆಗ ನಾನು ಬರುವುದಿಲ್ಲ ನನ್ನ ಅಷ್ಟು ಸಲೀಸಾಗಿ ನೀನು ಕರೆದು ಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹೇಳಿದೆ.

ನಾನು ಹೇಳಿದ ಮಾತು ಅವಳಿಗೆ ಒಂದು ರೀತಿ ಅಚ್ಚರಿ ಮೂಡಿಸಿತು. ಹೌದು ನಾನು ಮರಳಿ ಬರುವುದು ಕಷ್ಟ ನನ್ನ ಹಿಂದೆ ಆಗಲೇ ಗೂಢಚಾರಿ ಕೆಲಸ ನಡೆಯುತ್ತಿರುತ್ತದೆ . ಅದು ಕೂಡ ನನಗೆ ಗೊತ್ತಿದೆ . ಯಾಕೋ ಅವಳಿಗೆ ನನ್ನ ಮೇಲೆ ಕರುಣೆಯೂ , ಪ್ರೀತಿಯೋ ಗೊತ್ತಿಲ್ಲ, ಅವಳು ಮೌನಿಯಾದಳು ನಾನು ಅವಳ ಕಣ್ಣಲಿ ಕಣ್ಣಿಟು ನೋಡಿದೆ ಅವಳ ಭಾವನೆ ನನಗೆ ಅರ್ಥವಾಯಿತು. ಅದರಿಂದ ಹೊರಬಂದು ಅವಳಿಗೆ ಎಚ್ಚರಿಸಿ . ಸರಿ ಸರಿ ಅದರ ಬಗ್ಗೆ ಆಮೇಲೆ ಯೋಚಿಸೋಣ. ರೂಪಾ ಆ ಬಾಕ್ಸ್ ತೆರೆದು ನೋಡಿದಳು ಅದರಲಿ ಒಂದು ಬುಲೆಟ್ ಇತ್ತು ಇದನ್ನು ನೋಡಿ ಅವಳು ಇದು ಯಾಕೆ ಎಂದು ಕೇಳಿದಳು. ಈ ಬುಲೆಟ್ ತುಂಬಾ ಮುಖ್ಯಾ ಇದರಲ್ಲಿ ತುಂಬಾ ವಿಚಾರವಿದೇ ಕೂಡಲೇ ಇದನ್ನು ಇವರಿಗೆ ನೀಡು ಎಂದು ಹೇಳಿದೆ.

ಯಾರು ಅವ್ರು ಎಂದು ಕೇಳಿದಳು ? ನಾನು ಪೆನ್ ಕೇಳಿದೆ ಅವಳು ಕೊಟ್ಟಳು ನಾನು ಅವಳ ಕೈ ಮೇಲೆ ರಾ ಎಂದು ಬರೆದೆ ಅವಳಿಗೆ ಅರ್ಥವಾಯಿತು .

ರೂಪಾ ಅಲ್ಲಿಂದ ಸೀದಾ ಒಂದು ರೂಮಿಗೆ ಹೋಗಿ ಆ ಬುಲೆಟ್ ನನ್ನ ಸೂಕ್ಷ್ಮವಾಗಿ ಗಮನಿಸಿ ಹೊರತೆಗೆದು ನೋಡಿದಳು ಅದರಲ್ಲಿ ಒಂದು ಚೀಫ್ ನೋಡಿ ಅವಳ ಲ್ಯಾಪ್ಟಾಪ್ ಕನೆಕ್ಟ್ ಮಾಡಿದಳು ಸಮೀರ್ ಹಾಗು ಅಕ್ರಮ್ ಮುಂದಿನ ನಡೆಯ ಬಗ್ಗೆ ಎಲ್ಲ ಮಾಹಿತಿಗಳಿದ್ದವು ಅವರ ಟಾರ್ಗೆಟ್ ಪಾಯಿಂಟ್ ಆದ ಸ್ತಳಗಳಿದ್ದವು ಆಗ್ರಾ ತಾಜ್ ಮಹಲ್ , ಬೆಂಗಳೂರಿನ ರೆಸ್ ಕೋರ್ಸ್, ಅಂಬರ್ ಪ್ಯಾಲೇಸ್ ರಾಜಸ್ಥಾನ್ , ಎಲ್ಲೋರಾ ಗುಹೆ , ಹೀಗೆ ನಾನಾ ಕಡೆ ಗುರುತು ಮಾಡಿಕೊಂಡಿದ್ರು ಅದಕ್ಕಾಗಿ ಸ್ಲೀಪರ್ ಗಳನ್ನು ಸಹ ಸಿದ್ದ ಪಡಿಸಿದ್ದರು ಇದರ ಮಾಹಿತಿಯನ್ನು ರೂಪ ಕೂಡಲೇ" ರಾ "ಎಜೆನ್ಸಿ ಗೆ ರವಾನಿಸಿದಳು.ರಾ ಈ ವಿಚಾರದ ಕುರಿತು ತನ್ನ ಎಲ್ಲ ರಾ ಗುಪ್ತಚರ ಏಜೆಂಟರ್ ಆಕ್ಟಿವ್ ಮಾಡಿತು. "ಮಿಷೆನ್ ಸತ್ಯ " ಎಂಬ ಹೆಸರಿನ ಮೂಲಕ ಕಾರ್ಯಚರಣೆ ಶುರು ಮಾಡಿದರು.

ನಾನು ಆಸ್ಪತ್ರೆಯಿಂದ ಮತ್ತೆ ಮರಳಿ ಗುಂಪಿಗೆ ಸೇರಲು ಹೋದಾಗ ನನಗೆ ಒಂದು ಗಂಡಾತರವೇ ಕಾದಿತ್ತು ಅದೇನೆಂದರೆ ಸಮೀರ್ ಹಾಗು ಅಕ್ರಮ್ ಅದಾಗಲೇ ಜೊತೆಯಾಗಿದ್ದರು , ನಾನು ನರ್ಸ್ ( ರೂಪಾ ) ಜೊತೆ ಮಾತಾಡುವ ವಿಚಾರ ಅದಾಗಲೇ ಯಾರೋ ಅಕ್ರಮ್ ಪಾಷಗೆ ತಿಳಿಸಿದ್ದಾರೆ . ಈಗ ಇಬ್ಬರು ಒಂದಾಗಿ ನನ್ನ ಮುಗಿಸುವ ಪ್ಲಾನ್ ಸಿದ್ದ ಮಾಡಿಕೊಂಡಿದ್ದರು , ನಾನು ನನ್ನ ಕಥೆ ಮುಗಿಯಿತು ಎಂದು ಕೊಂಡೆ ಗೊತ್ತಿಲ್ಲ ನನ್ನ ಸಾಯಿಸುವ ಬಂದಳು ಬೇರೆಯದ್ದೇ ಮಸಲತ್ತು ಸಿದ್ದ ಮಾಡಿದ್ರು ಎನಿಸುತ್ತದೆ. ನನ್ನ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ಸಿದ ಕರೆದುಕೊಂಡು ಒಂದು ಜಾಗದಲ್ಲಿ ಕಾರಿನಿಂದ ತಬ್ಬಿಟ್ಟರು ನನ್ನ ಪಟ್ಟಿ ಬೆಚ್ಚಿದರು ನಾನು ಕತ್ತಲೆ ತುಂಬಿದ ನನ್ನ ಕಣ್ಣುಗಳಿಗೆ ಬೆಳಕು ಒಮ್ಮೆಲೇ ಬಡಿಯಿತು ಸ್ವಲ್ಪ ಸಮಯದ ನಂತರ ನೋಡುತ್ತೇನೆ ನಾನು ಇರೋದು ಬೇರೆಯಲ್ಲೂ ಅಲ್ಲ ದುಬೈ ಪೊಲೀಸ್ ಸ್ಟೇಷನ್ ನನ್ನ ಮೇಲೆ ಅದಾಗಲೇ ಸುದ್ದಿ ಟಿವಿಗಳಲ್ಲಿ ಹರಿದಾಡುತಿದ್ದವು ನಾನೊಬ್ಬ ಭಯೋತ್ಪಾದಕ ಎಂದು ಸುದ್ದಿಗಳು ಪ್ರಕಟವಾಗುತ್ತಿತ್ತು ಹಾಗೆಯೆ ದುಬೈ ಸಣ್ಣ ಹಳ್ಳಿಯಲ್ಲಿ ಬಾಂಬ್ ದಾಳಿ ಸಹ ನಡೆಸಲಾಗಿತ್ತು . ಇದೆಲ್ಲ ನನಗೆ ತೋರಿಸಿದರು ನಾನು ಏನು ಹೇಳಬೇಕು ಗೊತ್ತಾಗಲಿಲ್ಲ .

ಅಲ್ಲಿನ ಪೊಲೀಸ್ ನನ್ನ ಮೇಲೆ ಒಂದೇ ಸಮನೇ ಬಡಿಯಲು ಶುರು ಮಾಡಿದರು. ನಿಜಾ ಬಾಯಿ ಬಿಡುವಂತೆ ಹೇಳಿದರು ನಾನು ಏನು ಹೇಳಿದರು ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ ನಾನು ಐ ಆಮ್ ಇಂಡಿಯನ್ ಎಂದೇ ಕೂಡಲೇ ಅವ್ರು ಹೊಡೆಯುವುದನ್ನು ನಿಲ್ಲಿಸಿದರು.

ಕೂಡಲೇ ಇಂಡಿಯನ್ ಎಂಬೆಸ್ಸೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದರು. ಆದರೆ ಅಲ್ಲಿ ನನ್ನ ರೆಕಾರ್ಡ್ಸ್ ಇರಲಿಲ್ಲ , ಮತ್ತೆ ದೆಹಲಿಗೆ ಕರೆ ಮಾಡಿ ನನ್ನ ಬಗ್ಗೆ ಮಾಹಿತಿ ಪಡೆಯಲು ನೋಡಿದರು ಅಲ್ಲೂ ಕೂಡ ನನ್ನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನನ್ನ ಸ್ನೇಹಿತ ಶ್ಯಾಮ್ ಕೂಡ ಇರಲಿಲ್ಲ ಅದಾಗಲೇ ಅವನನ್ನು ಕೊಲೆ ಮಾಡಿ ಹುತಾಕಿದ್ದರು.

ನನ್ನ ಮೇಲೆ ಸುಳ್ಳು ಸುಳ್ಳು ಕೇಸ್ ಗಳು ದಾಖಲಾಗಿದ್ದವು .

ನನ್ನ ರಕ್ಷಣೆಗೆ ಯಾವುದೇ ದಾರಿ ಇರಲಿಲ್ಲ ಕೊನೆಗೆ ನನ್ನನ್ನೂ ಅಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ನನ್ನ ಮೇಲೆ ಕೊಲೆ ,ಸುಲಿಗೆ , ಬಾಂಬ್ ಬ್ಲಾಸ್ಟ್ ಆರೋಪಗಳ ಸುರಿಮಳೆ ಸುರಿಸಿದರು , ಹಾಗು ನನ್ನ ಮೇಲೆ ವಿಡಿಯೋಗಳು ಹರಿ ಬಿಟ್ಟರು ನ್ಯಾಯಾಧೀಶರು ತೀರ್ಪನ್ನು ಹೇಳುವುದಕ್ಕೆ ಸಿದ್ದರಾದರು.

ನ್ಯಾಯಾಧೀಶರು : ವಾದಗಳನ್ನು ಗಮನಿಸಿದಾಗ ಆರೋಪಿಯು ಮಾಡಿರುವ ಅಮಾನುಷ್ಯ ಕೃತ್ಯಗಳು ಸಾಬೀತಾಗಿರುವ ಕಾರಣ ಇವನಿಗೆ ಮರಣ ಎನ್ನುವ ಹೊತ್ತಿಗೆ ನ್ಯಾಯಾಧೀಶರ ಬಳಿ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಒಂದು ಫೈಲಾನ್ನು ನೀಡಿದರು ನ್ಯಾಯಾಧೀಶರು ನನ್ನ ಮುಖ ನೋಡಿ ಮತ್ತೆ ಆ ಫೈಲ್ಸ್ ಕೂಲಂಕುಷವಾಗಿ ಪರಿಶೀಲಿಸಿದರು.


ಅನಂತರ ತಮ್ಮ ತೀರ್ಪನ್ನು ನೀಡಲು ಮುಂದಾದರು ಆರೋಪಿಯನ್ನು ಈಗ ದಾಖಲೆಗಳ ಪರಿಶೀಲನೆಯ ನಂತರ ಮರಳಿ ಅವನ ದೇಶಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ತೀರ್ಪನ್ನು ನೀಡುತ್ತಾರೆ .

ಇದನ್ನು ಕೇಳಿದ ನನಗೆ ಆಚ್ಚರಿ ಮೂಡಿತು ಯಾರು ?ಯಾರು ? ಅವರು ಯಾರು ಎಂದು ಪ್ರಶ್ನೆ ನನ್ನ ಕಾಡತೊಡಗಿತು.


ದುಬೈ ನ್ಯಾಯಾಧೀಶರ ಆದೇಶದಂತೆ ಪೊಲೀಸರ ಭದ್ರತೆಯಂತೆ ನಾನು ವಿಮಾನದಲ್ಲಿ ಕುಳಿತೆ ನನ್ನ ಪಕ್ಕದಲಿ ಅವರು ಬಂದು ಕುಳಿತರು ನಾನು ಅವರನ್ನು ಕೇಳಿದೆ ನೀವು ಯಾರು? ಯಾರು? ನೀವು ಈ ದಿನ ನೀವು ಬರದೇ ಹೋಗಿದ್ದಾರೆ ನನ್ನ ಕಥೆ ಅಷ್ಟೇ ಈ ದಿನ ನನ್ನ ಜೀವ ಉಳಿಸಿದ ದೇವರು ನೀವು ನಿಮ್ಮ ಋಣವನ್ನು ನಾನು ಯಾಷ್ಟು ಜನ್ಮ ಎತ್ತಿಬಂದ್ರು ತೀರಿಸಲು ಸಾಧ್ಯವಿಲ್ಲ. ನಾನು ಎಷ್ಟು ಮಾತಾಡಿದರು ಅವರಿಂದ ಒಂದು ಉತ್ತರವೂ ಬರಲಿಲ್ಲ .


ಆಮೇಲೆ ವಿಮಾನ ಟೆಕ್ ಆಫ್ ಆಯಿತು ಅನಂತರ ಅವರು ಐ ಲವ್ ಯು ಎಂದು ಹೇಳಿದರು ನಾನು ಸೋರಿ ನೀವು ಏನ್ ಹೇಳ್ತಿದೀರಾ ಎಂದು ಮತ್ತೆ ಕೇಳಿದೆ ಮತ್ತೆ ಅವ್ರು ಕಿವಿಯಲ್ಲಿ ಹತ್ತಿರ ಬಂದು ಐ ಲವ್ ಯು ಎಂದರು ನೀವು ಯಾರು ನನಗೆ ಗೊತ್ತಿಲ್ಲ ಎಂದು ಹೇಳಿದೆ . ಆಗ ಅವರು ತನ್ನ ಕಪ್ಪು ಪಟ್ಟಿಯನ್ನು ತೆರೆದರು. ನನಗೆ ಅವರನ್ನು ನೋಡಿ ಒಮ್ಮೆ ಸ್ತಬ್ದನಾದೇ ನನ್ನ ಬಾಯಿಂದ ಮಾತೆ ಬರಲಿಲ್ಲ.

ಆಗ ಸ್ವಲ್ಪ ಸಮಯದ ನಂತರ ನನ್ನ ಬಾಯಿಂದ ಬಂದ ಪದ ಒಂದೇ ಐ ಲವ್ ಯು ರೂಪಾ .



Rate this content
Log in

Similar kannada story from Comedy