nagavara murali

Tragedy Others


4  

nagavara murali

Tragedy Others


ದುರಾಸೆ

ದುರಾಸೆ

4 mins 190 4 mins 190

ಶಿವು ಮತ್ತು ಗೋಪಿ ಬಾಲ್ಯ ಸ್ನೇಹಿತರು. SSLC ವರೆಗೂ ಒಂದೇ ಶಾಲೆಯಲ್ಲಿ ಓದಿ ನಂತರ ಬೇರೇಬೇರೆ ಆದರೂ ವಿಧ್ಯಾಭಾಸದ ನಂತರ ಮತ್ತೆ ಒಂದಾಗಿದ್ದರು.ಇಬ್ಬರಿಗೂ ಒಳ್ಳೆಯ ನೌಕರಿ ದೊರೆತು PG ಯಲ್ಲಿದ್ದರು. ಕಂಡದ್ದು ಕೊಂಡು ಬೇಕಾದ್ದು ಉಂಡು ಬಂದ ಹಣವನ್ನಲ್ಲೇ ಖರ್ಚು ಮಾಡಿ ಮಜಾ ಮಾಡ್ತಿದ್ದರು. ಇಂದಿನ ದಿನ ನಮ್ಮ ದು ನಾಳೆ ಯಾರದೋ ಅನ್ನೋ ವೈರಾಗ್ಯದಮಾತನ್ನೇ ಪಾಲಿಸಿಕೊಂಡು ಬಂದಿದ್ದ ಇವರಿಗೆ ಕೆಟ್ಟ ಹವ್ಯಾಸಗಳು ತಾನಾಗಿಯೇ ಮೈಗೂಡಿತ್ತು.

ಕೆಲವು ವರ್ಷಗಳಾದಮೇಲೆ ಇಬ್ಬರಿಗೂ ಮದುವೆ ಆಯ್ತು . ಮಕ್ಕಳೂ ಆಯ್ತು. ಅವರಿಗೂ ಕೇಳಿದ್ದು ಕೊಡೋಸೋದು ಹೊರಗಡೆ ತಿನ್ನೋದು ಊ ರೂರು ಸುತ್ತೋದು ಮಾಡ್ಕೊಂಡಿದ್ರು. ಶಿವೂ ಗೆ ಹಣ ಬೇಕಾದ್ರೆ ಗೋಪಿ ಕೊಡ್ತಿದ್ದ ಗೋಪಿ ಗೆ ಬೇಕಿ ದ್ರೆ ಶಿವು ಕೊಡ್ತಿದ್ದ. ವಾಪಸ್ ಕೊಡ ಬೇಕಿರಲಿಲ್ಲ ಅಷ್ಟು ಅನ್ಯೋನ್ಯತೆ.

ಇಬ್ಬರೂ ಹಣದ ವ್ಯವ ಹಾರ ಮಾತ್ರ ಹೆಂಡತಿ ಮಕ್ಕಳಿಗೆ ತಿಳಿಯದ ಹಾಗೆ ಬಹಳ ದಿನ ನೋಡಿ ಕೊಂಡಿದ್ದರು.ಮಕ್ಕಳು ದೊಡ್ಡವರಾಗಿ ಮನೆಯ ಖರ್ಚುಗಳು ಹೆಚ್ಚಾಗಿ ಸಂಪಾದನೆ ಸಾಲದಾಯಿ ತು ಆದರೆ ಇವರ ಕ್ಲಬ್ಬು ಪಬ್ಬು ಇತರ ವೈಯ್ಯಕ್ತಿಕ ಖರ್ಚುಗಳನ್ನ ಕಡಿಮೆ ಮಾಡಲು ಇಬ್ಬರ ಮನ ಸ್ಸೂ ಒಪ್ಪಲಿಲ್ಲ.

ಬಹಳ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ಅದೇನೆಂದರೆ ತಮಗಿರುವ ಅನುಭವ ದಿಂದ ಸ್ವಂತ ಉದ್ಯೋಗಮಾಡಿ ಸಂಪಾದಿಸೋ ದು. ಆದರೆ ಅದು ಬೇರೆ ಯಾವುದಾದರೂ ಊರಲ್ಲಿ .ಇದನ್ನ ಇಬ್ಬರೂ ಅವರ ಹೆಂಡತಿ ಮಕ್ಕಳಿಗೆ ತಿಳಿಸಿ ಎರಡು ವರ್ಷದಲ್ಲಿ ನಾವು ಹೆಚ್ಚು ಹಣ ಆಸ್ತಿ ಎಲ್ಲಾ ಸಂಪಾದನೆ ಮಾಡಿ ಬರ್ತೀವಿ ಆಮೇಲೆ ನೀವು ಇದಕ್ಕಿಂತಲೂ ಹೆಚ್ಚು ಸುಖ ಕಾಣಬಹುದು ಎಂದಾಗ ಇಬ್ಬರೂ ಸಂತೋಷದಿಂದ ಒಪ್ಪಿ ಅಷ್ಟೊಂದು ಹಣ ಎರ ಡು ವರ್ಷದಲ್ಲಿ ಸಂಪಾದನೆ ಮಾಡೋದಾದ್ರೆ ಈ ದಿನವೇ ಹೋಗಿ ಅಂತ ಕಳುಹಿಸಿ ಕೊಟ್ಟರು .

ಮನೆ ಬಿಟ್ಟು ಬೇರೊಂದು ಊರಿಗೆ ಬಂದರು. ಏನು ಮಾಡೋದೋ ಅಂತ ಯೋಚನೆ ಮಾಡ್ತಾ ಒಂದು ವಾರ ಕಳೆದು ಹೋಯ್ತು. ತಂದಿದ್ದ ಹಣ ಖರ್ಚಾಗ್ತಾ ಬಂತು. ಶಿವು ಗೋಪಿಗಿಂತಲೂ ಸ್ವಲ್ಪ ಬುದ್ದಿವಂತ. ಶಿವು ಹೇಳ್ದ ಇದ್ದಿದ್ದ ಒಳ್ಳೆ ಕೆಲಸ ಬಿ ಟ್ಟು ಬಂದಿದ್ದೇವೆ ಮನೆಯಲ್ಲಿ ಹೆಂಡತಿ ಮಕ್ಕಳು ಬೇರೆ. ನಾವು ಇಬ್ಬರೂ ಸೇರಿ ಏನೂ ಮಾಡಕ್ಕೆ ಆಗ್ತಿಲ್ಲ..ಎರಡು ವರ್ಷ ಅನ್ನೋದು ಬೇಗ ಬಂದು ಬಿಡತ್ತೆ. ಒಂದು ಕೆಲಸ ಮಾಡೋಣ ಇಬ್ಬರೂ ಇಲ್ಲಿಂದ ಬೇರೆ ಬೇರೆ ಊರಿಗೆ ಹೋಗಿ ಸ್ವಲ್ಪ ವಿಭಿ ನ್ನ ರೀತಿಯೇ ಯೋಚನೆ ಮಾಡಿ ದುಡಿಯೋಣ. ಎರಡು ವರ್ಷಗಳ ನಂತರ ಮತ್ತೆ ಒಂದಾಗೋಣ ಅಂದಾಗ ಇದೂ ಒಳ್ಳೆಯ ಉಪಾಯ ಅಂತ ಅಲ್ಲಿಂದ ವಿರುದ್ಧ ದಿಕ್ಕಿನಲ್ಲಿಹೊರಟರು. ಕೈಲಿದ್ದ ಹಣವೂ ಖಾಲಿಯಾಗಿ ಈಗ ದುಡಿಯಲೇ ಬೇಕಾದ ಅನಿವಾರ್ಯತೆ. ಶಿವು ಮಾತಿನಲ್ಲಿ ನಿಸ್ಸೀ ಮ. ಕಲ್ಲು ಬಂಡೆಯನ್ನ ಬೇಕಾದರೂ ಮಾತನಾ ಡಿಸುವಷ್ಟು ಚಾಣಾಕ್ಷ. ಒಂದು ಖಾಸಗಿ ಕಂಪನಿ ಯ ಮುಖ್ಯಸ್ಥನ ಬಳಿ ಹೋಗಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಕಾರ್ಮಿಕರಿಗೆ ಮನವರಿಕೆ ಮಾಡಿಕೊಡ ಬಲ್ಲೆ  ಅವರನ್ನ ಒಂದು ತಿಂಗಳಲ್ಲಿ ಬದಲಾಯಿಸಬಲ್ಲೆ ಎಂದಾಗ ಮೂರು ತಿಂಗಳು ಮಾತ್ರ ಸಮಯ ಕೊಟ್ಟು ಅಷ್ಟರಲ್ಲಿ ಬದಲಾವಣೆ ಕಂಡರೆ ಮಾತ್ರ ಮುಂದುವರೆಸುವುದಾಗಿ ಹೇಳಿದ ರು. ಅದಕ್ಕೆ ಒಪ್ಪಿ ಆ ಕಂಪನಿಯ ಕಾರ್ಮಿಕರಿಗೆ ಹಗಲು ರಾತ್ರಿ ತರಗತಿಗಳನ್ನು ನಡೆಸಿ ಕಾರ್ಮಿಕ ಮತ್ತು ಮಾಲೀ ಕರ ಮಧ್ಯೆ ಒಂದು ಕೊಂಡಿಯಾ ದ. ಎರಡೂ ಕಡೆ ಇದ್ದ ಹಲವಾರು ತೊಂದರೆ ಅನಾನುಕೂಲತೆ ತೊಡಕುಗಳು ತಾನಾಗಿ ಪರಿ ಹಾರ ಪಡೆದು ವೈಮನಸ್ಸು ಇಲ್ಲದಾಯ್ತು.ಇದು ಇತರ ಕಂಪನಿ ಮಾಲೀಕರಿಗೂ ತಿಳಿದು ಇವನ ಸಹಾಯ ಪಡೆಯಲು ಆಸಕ್ತಿ ತೋರಿಸಿದರು . ಬಿಡುವಿಲ್ಲದೆ ದುಡಿಯುವ ಶಿವುಗೆ ನಷ್ಟದಲ್ಲಿದ್ದ ಒಂದು ದೊಡ್ಡ ಕಂಪನಿ ಯಿಂ ದ ಪಾರ್ಟ್ನರ್ ಆಗಲು ಕೋರಿಕೆ ಬಂತು .ಇವನ ಬುದ್ದಿವಂತಿಕೆ ಯಿಂದ ಆ ಕಂಪನಿ ಸಹಾ ಬೇಗ ಲಾಭ ಗಳಿಸುವಂತಾಯ್ತು. ಅಲ್ಲಿಂದ ಶಿವು ಮುಟ್ಟಿದ್ದೆಲ್ಲಾ ಚಿನ್ನ ಆಗ್ತಾ ಹೋಯ್ತು. ಎರಡು ವರ್ಷಗಳ ನಂತರ ಹೆಂಡತಿ ಮಕ್ಕಳನ್ನ ತಾನಿದ್ದ ಕಡೆ ಕರೆಸಿ ಕೊಂಡ. ಈಗ ಶಿವೂ ಗೆ ಮಾತ ನಾಡಲೂ ಸಮಯವಿಲ್ಲದಷ್ಟು ಕೈತುಂಬಾ ಕೆಲಸ. ಅವನ ಆತ್ಮೀಯ ಸ್ನೇಹಿತನ ಬಗ್ಗೆ ಯೋಚನೆ ಮಾಡುವು ದನ್ನು ಸಹಾ ಬಿಟ್ಟ. ಆದರೆ ಅವನ ಹೆಂಡತಿ ಮಾತ್ರ ಗೋಪಿಯ ಹೆಂಡತಿ ಮಕ್ಕಳ ಬಗ್ಗೆ ತಿಳಿದು ಕೊಳ್ಳಲು ಪ್ರಯತ್ನ ಮಾಡ್ತಾ ಇದ್ದಳಾದರೂ ಎಲ್ಲಿದ್ದಾರೆಂದೇ ತಿಳಿಯಲಿಲ್ಲ.

ಗೋಪಿ ಶಿವೂಗೆ ತದ್ವಿರುದ್ಧ . ಒಂದು ಹೊತ್ತು ಊ ಟಕ್ಕೂ ಪರದಾಟ. ಹಸಿವಿನ ಬೆಲೆ ಈಗ ಗೊತ್ತಾ ಯ್ತು. ಆಗ ನೀರಿನಂತೆ ಖರ್ಚು ಮಾಡಿದ ಹಣದ ನಿಜವಾದ ಬೆಲೆ ಈಗ ತಿಳಿದು ಕಣ್ಣೀರಿಟ್ಟ. ಹೆಂಡತಿ ಮಕ್ಕಳನ್ನು ನೆನೆದು ದುಃಖ ಪಟ್ಟ. ಇರಲು ನೆಲೆ ಇಲ್ಲ. ಕೂಲಿ ಮಾಡಲು ಶಕ್ತಿ ಇಲ್ಲ.ಉಳಿದ ಒಂದೇ ಮಾರ್ಗ ಭಿಕ್ಷೆ. ಒಂದು ದೇವಸ್ಥಾನದ ಮುಂದೆ ಕೂತ .ಬೇರೆ ಭಿಕ್ಷುಕರು ಓಡಿಸಿದರು. ಆ ಸಮ ಯಕ್ಕೆ ಕಾರಿನಲ್ಲಿ ಅಲ್ಲಿಗೆ ಬಂದ ಒಬ್ಬ ವಯಸ್ಸಾದ ವ್ಯಕ್ತಿ ಇವನನ್ನು ನೋಡಿ ಮಾತನಾಡಿಸಿದಾಗ ಎಲ್ಲ ವಿಷಯ ಹೇಳಿಕೊಂಡ. ಗೋಪಿಯನ್ನ ಮನೆ ಗೆ ಕರೆದು ಕೊಂಡು ಹೋದರು. ಹೊಟ್ಟೆ ತುಂಬಾ ಊಟ ಹಾಕಿ,ಮನೆಯಲ್ಲಿ ಎರಡು ಮೂರು ದಿನ ಇರುವಂತೆ ಹೇಳಿದರು. ಮೊದಲು ನನಗೆ ಒಂದು ಕೆಲಸ ಕೊಡಿಸಿ. ಹೀಗೆ ಸುಮ್ಮನೆ ಕೂಡಲು ನನಗೆ ಕಷ್ಟ ಅಂದಾಗ ನಿನ್ನ ಅನುಭವಕ್ಕೆ ತಕ್ಕ ಕೆಲಸ ಕೊ ಡಿಸುತ್ತೇನೆ.ಧೈರ್ಯವಾಗಿರು ಎಂದರು. ಮಾರನೆ ದಿನ ಅವರ ಕಾರ್ ನಲ್ಲಿ ಪಕ್ಕದ ಊರಿನ ಒಂದು ಕಂಪನಿಗೆ ಕರೆದು ಕೊಂಡು ಹೋದರು. .ಅಲ್ಲಿನ ಮ್ಯಾನೇಜರ್ ಗೆ ಇವನ ಬಗ್ಗೆ ಎಲ್ಲಾ ತಿಳಿಸಿದರು. ಇಂತಹ ವ್ಯಕ್ತಿ ನಮಗೂ ಅವಶ್ಯಕತೆ ಇದೆ ಅಂತ ಹೇಳಿ ಮಾರನೆ ದಿನದಿಂದ ಕೆಲಸಕ್ಕೆ ಬರಲು ಹೇ ಳಿದರು. ಹೊಸದಾಗಿ ಸೇರಿದವರು ಆ ಕಂಪನಿ ಡೈರೆಕ್ಟರ್ ಗಳನ್ನು ಕಾಣಬೇಕಿತ್ತು. ಗೋಪಿ ಸಹಾ ಅವರ ಚೇಂಬರ್ ಹೊರಗೆ ಕಾದಿದ್ದ. ಕಾರಿನಿಂದ ಇಳಿದು ನೇರವಾಗಿ ಚೇಂಬರ್ ಒಳಗೆ ಹೋದರು.

ಈ ವ್ಯಕ್ತಿಯನ್ನ ಎಲ್ಲೋ ನೋಡಿದ್ದೇನೆ ಆದರೆ ನೆನೆಪಿಲ್ಲ. ಪ್ರಪಂಚದಲ್ಲಿ ಒಬ್ಬರಂತೆ ಏಳು ಜನ ಇರ್ತಾರೆ ಅಂತ ಯಾರೋ ಹೇಳಿದ್ದು ನೆನಪಾಗಿ ಸುಮ್ಮನಾದ. ಅಷ್ಟರಲ್ಲ ಗೋಪಾಲ್ ಅಂತ ಒಳಗಡೆಯಿಂದ ಕೂಗಿದಾಗ ಒಳಗೆ ಹೋದ. ಇವನ ಫೈಲ್ ನೋಡ್ತಾ ತಲೆ ಬಗ್ಗಿಸಿಕೊಂಡೇ  ಎದುರಿಗಿದ್ದ ಕುರ್ಚಿಯ ಕಡೆ ಕೈ ತೋರಿಸಿದಾಗಿ ಕುಳಿತುಕೊಂಡ. ಕಳೆದ ಐದು ವರ್ಷಗಳು ಎಲ್ಲಿ ಕೆಲಸ ಮಾಡಿದ್ದೀರಿ ಅಂತ ತಲೆ ಎತ್ತದೆ ಕೇಳಿದಾಗ ಹಗಲು ಬಸ್ ಸ್ಟಾಂಡ್ ರೈಲ್ವೆ ಸ್ಟೇಷನ್ ರಾತ್ರಿ ದೇವಸ್ಥಾನ ಅಂದಾಗ. ಅವರು ಜೇಬಿನಿಂದ ಕರವಸ್ತ್ರ ತೆಗೆದು ಮುಖ ಮುಚ್ಚಿ ಕೊಂಡು ಅತ್ತಾಗ ಗೋಪಿಗೆ ಅರ್ಥವಾಗಿ ಹೋಯ್ತು. ಇಬ್ಬರೂ ಹತ್ತಿರ ಬಂದು ನಾವಿಬ್ಬರೂ ಹೀಗೆ ಒಂದಾಗ್ತೀವಿ ಅಂತ ಗೊತ್ತಿರಲಿಲ್ಲ. ನಿನಗಾಗಿ ನಾನೂ ಬಹಳ ಕಡೆ ಹುಡುಕಿ ಸುಮ್ಮನಾದೆ ನೀನು ಇಲ್ಲಿಗೆ ಬರಕ್ಕೆ ನಮ್ಮ ತಂದೆ ಕಾರಣ. ಮೂರು ದಿನದ ಹಿಂದೆಯೇ ನಿನ್ನ ವಿಷಯ ಅಪ್ಪ ತಿಳಿಸಿದರು ಅವರನ್ನ ನೀನು ನೋಡಿಲ್ಲ .ನೀನು ಹೇಳಿದ ನಿನ್ನ ಕಥೆಯಿಂದ ಅವರಿಗೆ ಅದು ನೀನೇ ಅಂತ ಗೊತ್ತಾಗಿದೆ ಅಂತ ಶಿವು ಹೇಳಿದ.ಐದು ವರ್ಷಗಳಲ್ಲಿ ಆದ ತನ್ನ ಬದಲಾವಣೆ ಕಥೆ ಹೇಳುವಾಗ ನಿನ್ನ ಹೆಂಡತಿ ಮಕ್ಕಳು ಎಲ್ಲಿದ್ದಾರೆ ಹೇಗಿದ್ದಾರೆ ಅಂದಾಗ ಅವರ ವಿಷಯ ಏನೂ ಗೊತ್ತಿಲ್ಲ ಅಂದ. ಇವನ ಕಾರಲ್ಲಿ ಮೊದಲು ಅವರು ವಾಸವಿದ್ದ ಮನೆಗೆ ಹೋದರು ಆದರೆ ಆ ಮನೆ ಬಿಟ್ಟು ತೌರು ಮನೆಗೆ ಹೋದರೆಂ ದು ತಿಳಿದು ಆ ಹಳ್ಳಿಗೂ ಹೋಗಿ ವಿಚಾರಿಸಿದರು.

ಆಗ ಅಲ್ಲಿ ಇದ್ದ ಒಬ್ಬ ವ್ಯಕ್ತಿ ಗೋಪಿಯನ್ನು ನೋ ಡಿ ನೀನು ನಮ್ಮ ಯಜಮಾನ್ ರಾಮಣ್ಣನ ಅಳಿಯ ಅಲ್ವೇ ಅಂದ. ಆಗ ಹೌದು ಎಲ್ಲಿದಾರೆ ಅವರೆಲ್ಲ ಆ ಮನೆಯಲ್ಲಿ ಇನ್ಯಾರೋ ಇದಾರಲ್ಲ ಅಂದ.ನೀನು ಮನುಷ್ಯ ಏನಪ್ಪಾ ಎರಡು ವರ್ಷ ದುಡಿದು ಬರ್ತೀನಿ ಅಂತ ಹೋದೋನು ಪತ್ತೇನೆ ಇಲ್ವಂತೆ. ಅವರಿಗೆ ಜೇವನಕ್ಕೆ ಏನಾದರೂ ವ್ಯವ ಸ್ಥೆ ಮಾಡಿ ಹೋಗ್ಬೇಕಂತ ಗೊತ್ತಾಗ್ಲಿಲ್ವ .ಪಾಪ ಆ ಹೆಂಗಸು ಇಲ್ಲಿಗೆ ಬಂದು ವಾರದಲ್ಲಿ ನಮ್ಮ ರಾಮಣ್ಣ ಅದೇ ಯೋಚನೆಗೆ ತೀರ್ಕೊಂಡ.

ಇನ್ನೇನು ಮಾಡ್ತಾಳೆ ಇಬ್ಬರು ಹೆಣ್ಣು ಮಕ್ಕಳನ್ನ ಇಟ್ಕೊಂಡು .ವರ್ಷ ಆಯಿತು ಮೂರು ಜನಾನೂ ಇದೇ ಭಾವೀಗೆ ಬಿದ್ದರು ಅಂತ ಹೇಳಿ ಆ ಭಾವಿ ಕಡೆ ಕೈ ತೋರಿಸಿದ. ಇಬ್ಬರೂ ಅಲ್ಲೇ ಅಳುತ್ತಾ ನಿಂತರು. ತಕ್ಷಣ ಏನಾಯ್ತೋ ಗೋಪಾಲ್ಓಡಿ ಹೋಗಿ ಅದೇ ಭಾವಿಗೆ ಹಾರಿ ಅವನೂ ಪ್ರಾಣ ಬಿಟ್ಟ. ಇದಕ್ಕೆಲ್ಲಾ ನಮ್ಮ ದುರಾಸೆ ಕಾರಣ ಅಂತ ಒಬ್ಬನೇಅಳುತ್ತಾ ವಾಪಸ್ ಬಂದ ಶಿವು.Rate this content
Log in

More kannada story from nagavara murali

Similar kannada story from Tragedy