STORYMIRROR

Shridevi Patil

Romance Classics Inspirational

4  

Shridevi Patil

Romance Classics Inspirational

ಚಳಿಯಲಿ , ಜೊತೆಯಲಿ.

ಚಳಿಯಲಿ , ಜೊತೆಯಲಿ.

1 min
402

ನಾನ್ ಸ್ಟಾಪ್ ನವಂಬರ್ ಎಡಿಷನ್- ಆರಂಭಿಕ ಹಂತ.

ಚಳಿಗಾಲ.


ಚಳಿಗಾಲದ ಆ ಸಂಜೆ. ನಾನು ಸ್ಮಿತಾಳ ಜೊತೆಗೆ ಹೊರಗಡೆ ಐಸ್ ಕ್ರೀಮ್ ತಿನ್ನುವ ಸಲುವಾಗಿ ಹೋಗಿದ್ದೆ. ಇದೇನು ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದಾ ಎಂದುಕೊಳ್ಳುತ್ತಿದ್ದೀರಾ? 


ಹೌದು , ನಾನು ಸ್ಮಿತಾಳಿಗೆ ಕೊಟ್ಟ ಮಾತನ್ನು ತಪ್ಪಿದ್ದೆ. ಮದುವೆಗೆ ಮುಂಚೆ ಮತ್ತು ಮದುವೆ ಆದಮೇಲೆ ಅವಳೊಂದಿಗೆ ನಾನು ಅವಶ್ಯಕತೆಯಿರುವಾಗಲೆಲ್ಲ ಒಬ್ಬಂಟಿಯಾಗಿ ಬಿಟ್ಟು ಕೆಲಸದ ನಿಮಿತ್ಯ ಬೇರೆ ಊರಿಗೆ ಹೋಗಿ ತಪ್ಪು ಮೇಲೆ ತಪ್ಪು ಮಾಡಿದ್ದೆ. ಸ್ಮಿತಾಳ ನಿರೀಕ್ಷೆಗಳಿಗೆಲ್ಲ ನಾನು ನೀರು ಹಾಕಿದಂತಾಗಿತ್ತು. ಹೀಗಾಗಿ ನಾನು ಐಸ್ ತಿನ್ನಿಸಿ , ಸಮಾಧಾನ ಮಾಡಿಸಿ ಸುತ್ತಾಡಿಸಿಕೊಂಡು ಹೋದರೆ ಅವಳು ಸಮಾಧಾನ ಆಗಿ ನನ್ನನ್ನು ಕ್ಷಮಿಸುತ್ತಾಳೆ ಎಂದು ಭುವನ್ ತನ್ನಲ್ಲಿ ತಾನು ಅಂದುಕೊಳ್ಳುತ್ತಿದ್ದನು. 


ಆದರೆ , ಸ್ಮಿತಾ ಜಾಣೆ. ಈ ಚಳಿಯಲ್ಲಿ ಬೆಚ್ಚಗಿನ ನಿನ್ನ ಅಪ್ಪುಗೆ ಬೇಕು , ನಿನ್ನ ತೊಳಲ್ಲಿ ನಾನು ಬಂಧಿಯಾಗಿ ಈ ಲೋಕವನ್ನು ಮರಿಯಬೇಕು. ನಿನ್ನೊಂದಿಗೆ ಕೊರೆವ ಚಳಿಯಲ್ಲಿ ನಿನ್ನನ್ನು ಬಿಗಿದಪ್ಪಿ ನನ್ನ ಮನಸಲ್ಲಿ ಇರುವ ಬಯಕೆಯನ್ನು ಹೇಳುತ್ತಾ ನಿನ್ನ ಎದೆ ಮೇಲೆ ಮಲಗುವಾಸೆ ಎಂದು ಹೇಳಿ ಮತ್ತೆ ಕೋಪ ಮಾಡಿಕೊಂಡು ಬರಬರನೇ ಮನೆಗೆ ಹೊರಟಳು. 


ಭುವನ್ ಮತ್ತೆ ಆ ಚಳಿಯಲ್ಲಿ ಕೈ ಕೈ ಹಿಸುಕಿಕೊಳ್ಳುತ್ತ , ಸ್ಮಿತಾಳ ಹಿಂದಿಂದೆ ಓಡಿದನು.



Rate this content
Log in

Similar kannada story from Romance