Surabhi Latha

Abstract Inspirational Others

4  

Surabhi Latha

Abstract Inspirational Others

ಬರಹ

ಬರಹ

1 min
216


ಸಂಜೆ ಸಮಯ ಐದು ಘಂಟೆ.

ಸೂರ್ಯ ಆಗಲೇ ಮುಳುಗುವ ತಯಾರಿನಲ್ಲಿ ಇದ್ದ . 

ತಿಳಿಯಾದ ಬಿಸಿಲು ಬಾಲ್ಕಾನಿಯಲ್ಲಿ ನನ್ನ ಕರೆದಂತಾಯಿತು. 

ಅಲ್ಲೇ ಕುರ್ಚಿಯಲ್ಲಿ ಕುಳಿತೆ. 

ಚಳಿಗೆ ಆ ತಿಳಿ ಬಿಸಿಲು ಬೆಚ್ಚಗಿನ ಹಿತ ನೀಡಿತು. 


ಮನೆಯ ಸುತ್ತಲೂ ಎತ್ತರದ ಮನೆಗಳೇ ಕಾಣುತ್ತದೆ. 

ನಮ್ಮ ಮನೆಯ ಪಕ್ಕದಲ್ಲಿ ಬಿಟ್ಟರೆ ಮತ್ತೆ ಎಲ್ಲೂ ಹಸಿರು ಕಾಣಿಸುವುದಿಲ್ಲ ಎಂದೇ ಹೇಳಬಹುದು. 


ಬೆಂಗಳೂರಿನಲ್ಲಿ ಮನೆಕಟ್ಟಲು ಜಾಗ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಯಲ್ಲಿ ಗಿಡಗಳನ್ನು ನೆಡಲು ಜಾಗ ಸಿಗುವುದು ಕಷ್ಟವೇ ಸರಿ. 

ಅರ್ಧ ಸೈಟ್ ನಲ್ಲಿ ಮನೆ ಕಟ್ಟಿದರೆ , ಪಾಟ್ ಗಳನ್ನು ಮಹಡಿಯ ಮೇಲೆ ಇಟ್ಟು ಕೊಳ್ಳಬಹುದು. 

ಆದರೂ ನೆಲದಲ್ಲಿ ಹಾಕಿದಷ್ಟು ಚೆನ್ನಾಗಿ ಪಾಟ್ಗಳಲ್ಲಿ ಗಿಡ ಬರದು .. ಆಗಾಗ ಮಣ್ಣು ತೆಗೆದು ಹೊಸ ಮಣ್ಣು ಹಾಕಬೇಕಾಗುತ್ತದೆ . 

ನಮ್ಮ ಮನೆಯ ಪಕ್ಕದಲ್ಲಿ ಒಂದು ಅಡಿ ಜಾಗದಲ್ಲಿ ಕೆಂಪು ಮಣ್ಣು ತರಿಸಿ ಅಲ್ಲಿ ಹದ ಮಾಡಿ ನನಗಿಷ್ಟವಾದ ಹೂ ಗಿಡಗಳನ್ನು ಹಾಕಿದ್ದೇನೆ.

ಗುಲಾಬಿ, ಕಾಕಡ , ದಾಸವಾಳ ಕನಕಾಂಬರ ಹಾಗೂ ಸುಮಾರು ತುಳಸಿ ಗಿಡಗಳು ..ಹಾಗು ಸಂಪಿಗೆ ಮರ ಇದ್ದರೂ ಇನ್ನೂ ಹೂ ಬಿಟ್ಟಿಲ್ಲ . 

ನನ್ನ ಕೃಷ್ಣನ ಪೂಜೆಗೆ ಆಗುವಷ್ಟು ನನ್ನ ಕೈ ಯಾರ ಬೆಳೆಸಿದ ಹೂ ನನಗೆ ಸಿಗುತ್ತದೆ. 

ಇಂದು ಹೊರಗೆ ಕೂತವಳಿಗೆ ಹೂವಿನ ವಾಸನೆ ಬದಲಾಗಿ ಪೈಂಟ್ ವಾಸನೆ ಮೂಗಿಗೆ ಬಂತು. 

ಕ್ರಿಸ್ ಮಸ್ ಹಬ್ಬ ಬರುತ್ತಿದೆ ..ಹಾಗಾಗಿ ಎದುರು ಮನೆಯಲ್ಲಿ ಕ್ರೈಸ್ತ ರ ಮನೆಯಲ್ಲಿ ಪೈಂಟ್ ಹೊಡೆಯುತ್ತಿದ್ದರು . 

ಕ್ರೈಸ್ತ ಭಾಂದವರಿಗೆ ಅದು ದೊಡ್ಡ ಹಬ್ಬ . ಒಂದು ತಿಂಗಳು ಇರುವಾಗಲೇ ಅವರ ಹಬ್ಬದ ತಯಾರಿ ಶುರು ವಾಗಿರುತ್ತವೆ. 

ಹಬ್ಬಗಳು ಬಂದರೆ ಎಲ್ಲೆಲ್ಲೂ ಸಂತಸ , ಜೀವನದ ಜಂಜಾಟ ದಿನವೂ ಇರುವುದೇ .. ಹಬ್ಬಗಳು ಬಂದಾಗ ಎಲ್ಲರೂ ಆ busy life ನಿಂದ ಹೊರಬಂದು ಗೆಳೆಯರ ಜೊತೆಯಲ್ಲಿ, , ಬಂಧುಗಳ ಜೊತೆಯಲ್ಲಿ ಕಾಲ ಕಳೆಯುವ ಆ ಕ್ಷಣ ಮುಂದಿನ ವರ್ಷ ದವರೆಗೂ ನೆನಪಿನಲ್ಲಿ ಹಾಗೆಯೇ ನಿಲ್ಲುತ್ತದೆ. 


ಜಾತಿ ಬೇಧ ಮರೆತು ಎಲ್ಲರೂ ಆಚರಿಸುತ್ತಾರೆ. ಆ ದಿನಗಳು ನೆನೆದಾಗ .. ಪ್ರತೀ ಕ್ಷಣವೂ ಹೀಗೆ ಇರಬಾರದೇ ಎನ್ನಿಸುತ್ತದೆ. 


ಆಚರಿಸುವ ಹಬ್ಬ ಗಳ ಜೊತೆಯಲ್ಲಿ ಸ್ವಲ್ಪ ಪುಣ್ಯ ಕಾರ್ಯಗಳು ಅಂದರೆ ಕೈಲಾದಷ್ಟು ದಾನ ಧರ್ಮಗಳನ್ನು ..ಬಡವರಿಗೆ ಬಟ್ಟೆ ಊಟ ಕೊಡುವುದರ ಮೂಲಕ ನಮ್ಮ ಜನ್ಮ ವನ್ನೂ ಸಾರ್ಥಕ ಪಡಿಸಿಕೊಂಡರೆ ಅದಕ್ಕಿಂತ ಸಂತೋಷ ನಮಗೆ ಯಾವುದು ಇದೆ ಅಲ್ಲವೇ .



Rate this content
Log in

Similar kannada story from Abstract